POLICE BHAVAN KALABURAGI

POLICE BHAVAN KALABURAGI

20 May 2015

Kalaburagi District Reported Crimes.

ಜೇವರ್ಗಿ ಪೊಲೀಸ್ ಠಾಣೆ: ಇಂದು ದಿನಾಂಕ 09.05.2015 ರಂದು 08:30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರು ಪಡಿಸಿದ್ದು ಸಾರಂಶವೇನೆಂದರೆ ನನ್ನ ತಂದೆಯಾದ  ಮಾನಪ್ಪ ತಂದೆ ಹಣಮಂತ ನಾಯಕೋಡಿ ವಯಾ|| 45 ವರ್ಷ ಸಾ|| ಯಾಳವಾರ ಈತನು ವ್ಯವಸಾಯದ ಉದ್ದೆಶಕ್ಕಾಗಿ ಕೆ.ಜಿ.ಬಿ ಇಜೇರಿ ಮತ್ತು ವಿ.ಎಸ್.ಎಸ್.ಎನ್ ಯಾಳವಾರ ಬ್ಯಾಂಕ್‌ಗಳಲ್ಲಿ ಮಾಡಿದ ಸಾಲವನ್ನು ತಿರಿಸಲು ಆಗದ ಕಾರಣ ತನ್ನ ಮನಸ್ಸಿನ ಮೇಲೆ ದುಸ್ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ಸಾಲದ ಬಾಧೇಯಿಂದ ಇಂದು ದಿನಾಂಕ 09.05.2015 ರಂದು ಬೆಳಗ್ಗೆ 05:30 ಗಂಟೆಯ ಸುಮಾರಿಗೆ ನಮ್ಮ ಮನೆಯ ಕಣಕಿ ಕೋಣೆಯ ಜಂತಿಗೆ ಹಗ್ಗದಿಂದ ಕುತ್ತಿಗೆಗೆ ಊರಲು ಹಾಕಿಕೊಂಡು ಸತ್ತಿದ್ದು ನನ್ನ ತಂದೆಯ ಮರಣದಲ್ಲಿ ಯಾರ ಮೇಲು ಯಾವುದೆ ಸಂಶಯ ವೈಗೈರೆ ಇರುವದಿಲ್ಲ. ಮುಂದಿನ ಕಾನೂನು ಕ್ರಮ ಕೈಕೊಳ್ಳಬೇಕುಅಂತ ಅರ್ಜಿ ಸಾರಾಂಶದ ಮೇಲಿಂದ ಠಾಣೆಯ ಯು.ಡಿ.ಆರ್ ನಂ 12/2015 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಜೇವರ್ಗಿ ಪೊಲೀಸ್ ಠಾಣೆ: ಇಂದು ದಿನಾಂಕ 19.05.2015 ರಂದು 11:45 ಗಂಟೆಗೆ ಜಿಜಿಹೆಚ್ ಜೇವರಿಗಿಯಿಂದ ಎಮ್.ಎಲ್.ಸಿ ವಸೂಲಾಗಿದ್ದು ಅದರ ವಿಚಾರಣೆ ಕುರಿತು ಸದರಿ ಆಸ್ಪತ್ರೆಗೆ ಭೆಟಿ ನಿಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳುಗಳಿಗೆ ವಿಚಾರಿಸಿದ್ದು ಅವರಲ್ಲಿ ಫಿರ್ಯಾದಿ ಸುಭಾಸ್ ತಂದೆ ಸಿದ್ರಾಮ ಕಟಬರ್ ಸಾ|| ಹಿಪ್ಪರಗಾ  ಎಸ್.ಎನ್ ಈತನಿಂದ ಫಿರ್ಯಾದಿ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ 19.05.2015 ರಂದು ಮುಂಜಾನೆ 10:45 ಗಂಟೆಗೆ ನಾನು ಮತ್ತು ಕ್ರೀಷ್ಣಾ ತಂದೆ ನರಸಪ್ಪ ಕಟಬರ್ ಇಬ್ಬರು ಅವನ ಮೋಟಾರು ಸೈಕಲ್ ನಂ ಕೆ.ಎ32ಇ.ಹೆಚ್2847 ನೇದ್ದರ ಮೇಲೆ ಕುಳಿತುಕೊಂಡು ಕಟ್ಟಿ ಸಂಗಾವಿ ಮದರಿ ರೋಡ ಮೇಲೆ ಮದರಿ ಸಿಮಾಂತರ 2 ಕಿ.ಮಿ ಅಂತರದಲ್ಲಿ ಹೋಗುತ್ತಿದ್ದಾಗ ಕೃಷ್ಣಾ ಈತನು ತನ್ನ ಮೋಟಾರು ಸೈಕಲ್‌ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಮತ್ತು ಅದೇ ವೇಳೆಗೆ ಮದರಿ ಕಡೆಯಿಂದ ಮೋಟಾರು ಸೈಕಲ್ ನಂ ಕೆ.ಎ32ಇಜೆ0826 ನೇದ್ದರ ಮೇಲೆ ಕುಳಿತು ಬರುತ್ತಿದ್ದ ಇಬ್ರಾಹಿಂ ತಂದೆ ಅಬ್ದುಲ್ ಹಮೀದ್ ಅಂಬರಕರ್ ಸಾ|| ಮದರಿ ಈತನು ತನ್ನ ಮೋಟಾರು ಸೈಕಲ್ ಹಿಂದುಗಡೆ ರವಿ ತಂದೆ ಲಕ್ಷ್ಮಣ ಕೆಲ್ಲೂರ ಸಾ|| ತೊನಸಳ್ಳಿ ಈತನಿಗೆ ಕೂಡಿಸಿಕೊಂಡು ತನ್ನ ಮೋಟಾರು ಸೈಕಲ್‌ಕೂಡ ಅತಿ ವೇಗ ಮತ್ತು ಅಲಕ್ಷ್ಯತನಿಂದ ನಡೆಸಿಕೊಂಡು ಬಂದು ಒಬ್ಬರಿಗೊಬ್ಬರು ಸೈಡು ಕೊಡದೆ ಮುಖಾಮುಖಿಯಾಗಿ ಡಿಕ್ಕಿಪಡಿಸಿ ನಮಗೆ ಭಾರಿ ಮತ್ತು ಸಣ್ಣ ಪುಟ್ಟ ಗಾಯಪಡಿಸಿದ್ದು ಆ ಎರಡು ಮೋಟಾರು ಸೈಕಲ್‌ ಚಾಲಕರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕುಅಂತ ವಗೈರೆ ಫಿರ್ಯಾದಿ ಸಾರಾಂಶದ ವನ್ನು ಪಡೆದುಕೊಂಡು ಮರಳಿ ಠಾಣೆಗೆ 12:45 ಗಂಟೆಗೆ ಬಂದು ಸದರಿ ಫಿರ್ಯಾದಿ ಸಾರಾಂಶದ ಮೇಲಿಂದ  ಠಾಣೆಯ ಗುನ್ನೆ ನಂ 129/2015 ಕಲಂ 279. 337 338 ಐ.ಪಿ.ಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಾಗಿರುತ್ತದೆ
ನಿಂಬರ್ಗಾ ಪೊಲೀಸ ಠಾಣೆ: ಇಂದು ದಿನಾಂಕ 19/05/2015 ರಂದು 1530 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಹಣಮಂತ ತಂದೆ ಸಾತಪ್ಪ ತಳವಾರ ವ|| 22 ವರ್ಷ, ಜಾ|| ಕಬ್ಬಲಿಗ,|| ಚಾಲಕ ಕೆಲಸ, ಸಾ|| ಭೂಸನೂರ ಗ್ರಾಮ ಇವರು ಠಾಣೆಗೆ ಬಂದು ಒಂದು ಹೇಳಿಕೆ ಫಿರ್ಯಾದಿ ನೀಡಿದ್ದು ಅದರ ಸಂಕ್ಷಿಪ್ತ ಸಾರಾಂಶವೇನೆಂದರೆ - ದಿನಾಂಕ 16/05/2015 ರಂದು ನಾನು ಮತ್ತು ನಮ್ಮೂರಿನ ಮಂಜೂನಾಥ ತಂದೆ ಶಿವರಾಯ ಯಲಶೇಟ್ಟಿ, ಅಸ್ಲಂ ತಂದೆ ಬಾಷಾ ಪಾಗದ ಎಲ್ಲರೂ ಸೇರಿ ಬಟ್ಟೆ ಖರೀದಿಗಾಗಿ ನಮ್ಮೂರಿನಿಂದ ಭೂಸನೂರ ಫ್ಯಾಕ್ಟರಿ ಕ್ರಾಸಿಗೆ ಹೋಗಿ ಬಸ್ಸಿನಿಂದ ಆಳಂದಕ್ಕೆ ಹೋಗಬೇಕು ಅನ್ನುವಷ್ಟರಲ್ಲಿ ಅಂದಾಜ 0200 ಪಿ.ಎಮ ಸುಮಾರಿಗೆ ಸಂದೀಪ ವೈನ ಶಾಪ ಎದುರು ನಮ್ಮೂರಿನ ಚಂದ್ರಕಾಂತ ತಂದೆ ಗುಂಡಪ್ಪ ಬೀರಾದಾರ, ಮಲ್ಲಪ್ಪ ತಂದೆ ಶಿವಶರಣಪ್ಪ ಮದಗುಣಕಿ ಹಾಗೂ ವೈನ ಶಾಪ ಮ್ಯಾನೇಜರ ರವರಾದ ಶಿವಾನಂದ ತಂದೆ ಸಿದ್ದಪ್ಪ ಬೀರಾದಾರ ಎಲ್ಲರೂ ತಮ್ಮ ತಮ್ಮಲ್ಲೆ ಜಗಳವಾಡುತ್ತಿದ್ದುದ್ದನ್ನು ನೋಡಿ ಬಿಡಿಸಲು ಹೋದಾಗ ನನಗೆ ಶಿವಾನಂದ ತಂದೆ ಸಿದ್ದಪ್ಪ ಬೀರಾದಾರ ಇತನು ಏ ರಂಡಿ ಮಕ್ಕಳ್ಯಾ ನಾವು ನಾವು ಜಗಳಾಡಿದರ ನಿಮಗೇನು ಕುಂಡಿ ಕಡಿತಾದ ಅಂತ ಅವಾಚ್ಯವಾಗಿ ಬೈದು ತನ್ನ ಕೈಯಲ್ಲಿದ್ದ ಚಾಕುವಿನಿಂದ ನನ್ನ ಮುಖಕ್ಕೆ ಎರಡು ಬಾರಿ ಹೊಡೆದಿರುತ್ತಾನೆ, ಇದನ್ನು ನೋಡಿ ಬಿಡಿಸಲು ಬಂದ ಮಂಜೂನಾಥನಿಗೆ ಚಂದ್ರಕಾಂತನು ನಿನಗೆ ಖಲಾಸ ಮಾಡುತ್ತೇನೆ ಅಂತ ಅಂದು ತನ್ನ ಕೈಯಲ್ಲಿದ್ದ ಬಾಟಲಿಯಿಂದ ಹಣೆಗೆ ಹೊಡೆದು ರಕ್ತಗಾಯಗೊಳಿಸಿದನು, ಅಸ್ಲಂಮನಿಗೆ ಮಲ್ಲಣ್ಣನು ಕಾಲಿನಿಂದ ಬೆನ್ನಮೇಲೆ ಒದ್ದನು ಇದನ್ನು ನೋಡಿ ನಮ್ಮ ಗ್ರಾಮದ ಕಾಂತಪ್ಪ ತಂದೆ ಪಂಡಿತ ಪ್ಯಾಟೆ ಮತ್ತು ಗುರುಲಿಂಗಪ್ಪ ತಂದೆ ಸಿದ್ದಣ್ಣ ಆಳಂದ ಇಬ್ಬರೂ ಜಗಳ ನೋಡಿ ನಮಗೆ ಮತ್ತು ಮಂಜೂನಾಥನಿಗೆ ಆಳಂದಕ್ಕೆ ಕರೆದುಕೊಂಡು ಹೋಗಿ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರ ಕೊಡಿಸಿರುತ್ತಾರೆ, ನನಗೂ ಮತ್ತು ಮಂಜೂನಾಥನಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ನಮ್ಮಿಬ್ಬರಿಗೆ ಉಪಚಾರ ಕುರಿತು ದವಾಖಾನೆಗೆ ಕಳಿಸಿ ನಮಗೆ ಹೊಡೆ ಬಡೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ ಠಾಣೆ ಗುನ್ನೆ ನಂ. 67/2015 ಕಲಂ 323, 324, 504, 506 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಸ್ಟೇಷನ್ ಬಜಾರ ಪೊಲೀಸ್ ಠಾಣೆ: ದಿನಾಂಕ: 19/05/2015 ರಂದು 6:00 ಪಿಎಮ್ ಕ್ಕೆ ಡಾ// ಬಿ.ಆರ್ ಜಾಹಾಗಿರದಾರ ಸಾ:ಪ್ಲಾಟ ನಂ. 14 ತಬಕೆ ಲೇಔಟ ನೀಲಾಂಬಿಕಾ ಕಲ್ಯಾಣ ಮಂಟಪ ಹತ್ತಿರ ಗಣೇಶ ನಗರ ಕಲಬುರಗಿ ರವರು ಠಾಣೆಗೆ ಹಾಜರಾಗಿ ಲಿಖಿತ ಫೀರ್ಯಾದಿ ಅರ್ಜಿ ಸಲ್ಲಿಸಿದ್ದು ಸಾರಾಂಶ ಏನೆಂದರೆ ದಿನಾಂಕ: 15/05/2015 ರಂದು ಮನೆ ಕೀಲಿ ಹಾಕಿಕೊಂಡು ಹೈದ್ರಾಬಾದಕ್ಕೆ ಹೋಗಿದ್ದು ದಿನಾಂಕ: 19/05/2015 ರಂದು ಬೆಳಿಗ್ಗೆ 7:45 ಗಂಟೆಗೆ ನಮ್ಮ ಮನೆಯ ಪಸ್ಟ ಫ್ಲೋರದಲ್ಲಿ ವಾಸವಾಗಿರುವ ಶ್ರೀಮತಿ ಶ್ರದ್ದಾ ಕುಲಕರ್ಣಿ ರವರು ಫೊನ ಮಾಡಿ ದಿನಾಂಕ: 18/05/2015 ರಂದು ರಾತ್ರಿ ವೇಳೆ ಮನೆ ಕಳ್ಳತನವಾಗಿದೆ ಎಂದು ತಿಳಿಸಿದ ಮೇರೆಗೆ ನಾವು ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿಯ 1) 6 ಬಂಗಾರದ ಬಳೆಗಳು ಅ.ತೂ 8 ತೊಲೆ 2) ಬಂಗಾರದ ಸರ ಅ.ತೂ. ½ ತೊಲೆ 3) 7 ಜೊಡಿ ಬಂಗಾರದ ಕಿವಿ ದೊಡ್ಡ ಬೆಂಡೋಲಿಗಳು ಅ.ತೂ 28 ಗ್ರಾಂ. 4) 2 ಜೊಡಿ ಬಂಗಾರದ ಮಗುವಿನ ಚಿಕ್ಕ ಕಿವಿ ಬೆಂಡೊಲಿಗಳು ಅ.ತೂ. 4 ಗ್ರಾಂ 5) ನಗದು ಹಣ 5000/- ರೂ. ಹೀಗೆ ಒಟ್ಟು 11 ತೊಲೆ 7 ಗ್ರಾಂ ಬಂಗಾರದ ಆಭರಣ ಮತ್ತು ನಗದು ಹಣ 5000/-  ಹೀಗೆ ಒಟ್ಟು ಅ.ಕಿ. 3,00,000/- ರೂ ಕಿಮ್ಮತ್ತಿನವು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಕೊಟ್ಟ ಫೀರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:96/2015  ಕಲಂ:457, 380 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.
ಜೇವರ್ಗಿ ಪೊಲೀಸ್ ಠಾಣೆ: ಇಂದು ದಿನಾಂಕ 19.05.2015 ರಂದುಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಂಶವೆನೆಂದರೆ  ”ಇಂದು ದಿನಾಂಕ: 19.05.2015 ರಂದು ಮುಂಜಾನೆ ಸಮಯದಲ್ಲಿ ಶರಣಪ್ಪ ತಂದೆ ಬಸವರಾಜ ಶೆಟ್ಟಿ ಇತನು ಬೆಂಗಳೂರಿನಿಂದ ತನ್ನ ಖಾಸಗಿ ಕೆಲಸದ ನಿಮಿತ್ಯ ಊರಿಗೆ ಬಂದು ತನ್ನ ಮೊಟಾರ ಸೈಕಲ ನಂಬರ ಕೆಎ-03 ಹೆಚ್.ಎಸ್-7324 ನೇದ್ದರ ಮೇಲೆ ತನ್ನ ಹೆಂಡತಿ ವಿಜಯ ಲಕ್ಷ್ಮಿ ಮತ್ತು ಮಗಳಿಗೆ ಮಾತಾಡಿಸಿ ಬರುತ್ತೇನೆ ಅಂತ ಹೇಳಿ ಊರಿನಿಂದ ಹೋಗಿರುತ್ತಾನೆ. ಇಂದು ಮದ್ಯಾಹ್ನ ಸಮಯದಲ್ಲಿ ನಾನು ಮನೆಯಲ್ಲಿದ್ದಾಗ ಮದ್ಯಾಹ್ನ 2.00 ಗಂಟೆಯ ಸುಮಾರಿಗೆ ಯಾರೋ ಒಬ್ಬ ವ್ಯಕ್ತಿ ಫೋನ ಮುಖಾಂತರ ಈಗೆ ಮದ್ಯಾಹ್ನ 1.45 ಗಂಟೆ ಸುಮಾರಿಗೆ ಶರಣಪ್ಪ ಶೆಟ್ಟಿ ಇತನು ಐಡಿ ಕಾರ್ಡ ಮತ್ತು ಫೋನ್ ನಂಬರ ನೋಡಿ ನಮಗೆ ಫೋನ ಮಾಡಿ ಶರಣಪ್ಪ ಶೆಟ್ಟಿ ಇತನು ಜೇವರಗಿ ತಾಲೂಕಿನ ಮುದಬಾಳ (ಕೆ) ಗ್ರಾಮದ ಜೇವರಗಿ-ಶಹಾಪೂರ ರೋಡಿನಲ್ಲಿರುವ ಬ್ರಿಡ್ಜಗೆ ತನ್ನ ಮೊಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಸದರ ಬ್ರಿಡ್ಜಿಗೆ ಡಿಕ್ಕಿ ಹೊಡೆದುದಕ್ಕೆ ಅವನು ಭಾರಿ ಗಾಯಹೊಂದಿ ಸ್ಥಳದಲ್ಲಿಯೇ ಸತ್ತಿರುತ್ತಾನೆ ಅಂತ ಹೇಳಿದ ಕೂಡಲೇ ನಾನು ಮತ್ತು ನಮ್ಮ ಮಾವ ಬನ್ನಪ್ಪಗೌಡ ತಂದೆ ಬಸಣ್ಣ ಶಟ್ಟಿ ವಿರೇಶ ತಂದೆ ಮಹಾದೇವಪ್ಪ ಶೆಟ್ಟಿ ಎಲ್ಲರೂ ಕೂಡಿ ಘಟನೆ ಸ್ಥಳಕ್ಕೆ ಬಂದು ನೋಡಲು ನಮ್ಮ ಕಾಕನ ಮಗ ರೋಡಿನ ಬ್ರಿಡ್ಜ ಪಕ್ಕದಲ್ಲಿ ಬಿದಿದ್ದನು. ನೋಡಲು ಅವನ ಎಡ ತಲೆಯ ಹತ್ತಿರ, ಎಡ ಮೇಲ್ಕಿನ ಹತ್ತಿರ ಭಾರಿ ರಕ್ತಗಾಯ, ಎಡಗಣ್ಣಿನ ಹತ್ತಿರ ರಕ್ತಗಾಯವಾಗಿ ಕಿವಿಯಿಂದ ರಕ್ತ ಹೊರ ಬಂದಿರುತ್ತದೆ. ಬಲ ಮುಂಗೈ ಹತ್ತಿರ ತರಚಿದ ಗಾಯ, ಎದೆಗೆ ಗುಪ್ತ ಪೆಟ್ಟಾಗಿತ್ತು. ಎಡ ಮಗ್ಗಲಿಗೆ ಗುಪ್ತ ಪೆಟ್ಟಾಗಿ ಎಡ ಮೊಳಕಾಲಿಗೆ ಬಲಕಾಲ ಹೆಬ್ಬರಳಿಗೆ ರಕ್ತ ಗಾಯವಾಗಿ ಸತ್ತಿದ್ದನು. ಮೊಟಾರ ಸೈಕಲ ನಂಬರ ನೋಡಲು ಅದು ಕೆಎ-03 ಹೆಚ್.ಎಸ್-7324 ಇತ್ತು. ಅದು ಮುಂಬಾಗದಲ್ಲಿ ಪೂರ್ತಿ ಜಜ್ಜಿತ್ತು. ನೋಡಿದರೆ ಶರಣಪ್ಪ ತಂದೆ ಬಸವರಾಜ ಶೆಟ್ಟಿ ಇತನು ತನ್ನ ಮೊಟಾರ ಸೈಕಲದ ಮೇಲೆ ತನ್ನ ಹೆಂಡತಿಗೆ ಮಾತಾಡಿಸಿ ನಮ್ಮೂರಿಗೆ ಬರುತ್ತಿದ್ದಾಗ ಶರಣಪ್ಪನು ತನ್ನ ಮೊಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಬ್ರಿಡ್ಜದ ಗೋಡೆಗೆ ಜೋರಾಗಿ ಡಿಕ್ಕಿ ಹೊಡೆದುದ್ದಕ್ಕೆ ಅವನಿಗೆ ಭಾರಿ ಗಾಯಗಳಾಗಿ ಸ್ಥಳದಲ್ಲಿ ಸತ್ತಿದ್ದು ಕಂಡು ಬರುತ್ತದೆ. ನಂತರ ಶರಣಪ್ಪನ ಹೆಣವು ಖಾಸಗಿ ವಾಹನದಲ್ಲಿ ಹಾಕಿಕೊಂಡು ಜೇವರಗಿ ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ತಂದು ಹಾಕಿದ್ದು ಇರುತ್ತದೆ ಕಾರಣ ಮೇಲೆ ನಮೂದಿಸಿದ ಶರಣಪ್ಪ ಶೆಟ್ಟಿ ಇತನು ಮದ್ಯಾಹ್ನ 1.45 ಗಂಟೆಗೆ ಜೇವರಗಿ-ಶಹಾಪೂರ ಮೇನ್ ರೋಡ್ ಮುದಬಾಳ(ಕೆ) ಬ್ರಿಡ್ಜ ಹತ್ತಿರ ತನ್ನ ಮೊಟಾರ ಸೈಕಲ ನಂ ಕೆಎ-03-ಹೆಚ್.ಎಸ್-7324 ನೇದ್ದು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಬ್ರಿಡ್ಜದ ಗೊಡೆಗೆ ಡಿಕ್ಕಿ ಹೊಡೆದುದ್ದಕ್ಕೆ ಅವನಿಗೆ ಭಾರಿ ಗಾಯವಾಗಿ ಸ್ಥಳಲ್ಲಿ ಸತ್ತಿದ್ದು ಅವನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕುಅಂತ ಸಾರಾಂಶದ ಮೇಲಿಂದ  ಠಾಣೆಯ ಗುನ್ನೆ ನಂ 131/2015 ಕಲಂ 279. 304 (ಎ) ಐ.ಪಿ.ಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಾಗಿರುತ್ತದೆ .
ಜೇವರ್ಗಿ ಪೊಲೀಸ್ ಠಾಣೆ: ಇಂದು ದಿನಾಂಕ 19.05.2015 ರಂದು 14:15 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿ 19.05.2015 ರಂದು ಮುಂಜಾನೆ 11-30 ಗಂಟೆಯ ಸುಮಾರಿಗೆ ಜೇವರಗಿಯಲ್ಲಿದ್ದಾಗ, ಜೇವರಗಿ ತಾಲೂಕಿನ ರದ್ದೆವಾಡಗಿ ಗ್ರಾಮ ಸೀಮಾಂತರದಲ್ಲಿ ಬೀಮಾ ನದಿಯ ದಂಡೆಯಿಂದ ಟ್ರಾಕ್ಟರಳಲ್ಲಿ ಸಂಬಂಧಪಟ್ಟ ಇಲಾಖೆಯ ಪರವಾನಿಗೆ ಪತ್ರ ಇಲ್ಲದೇ ( ರಾಯಲ್ಟಿ ) ಮರಳು (ಉಸಕು) ಆಕ್ರಮವಾಗಿ ಕಳ್ಳತನದಿಂದ  ಟ್ರಾಕ್ಟರಗಳಲ್ಲಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಪ್ರಯುಕ್ತ ನಾನು ಕೂಡಲೇ ಜೇವರಗಿ ಪೊಲೀಸ್ ಠಾಣೆಗೆ ಬಂದು, ಶ್ರೀ ಪಂಡಿತ ವಿ ಸಗರ ಪಿಎಸ್ಐ ಜೇವರಗಿ   ರವರಿಗೆ ಬಾತ್ಮೀ ವಿಷಯ ತಿಳಿಸಿ ದಾಳಿ ಕಾಲಕ್ಕೆ ಹಾಜರಿದ್ದು ಸಹಕರಿಸಲು ಕೋರಿಕೊಂಡು ಮೇರೆಗೆ ಇಬ್ಬರೂ ಪಂಚ ಜನರಿಗೆ ಬರಮಾಡಿಕೊಂಡು ಅವರಿಗೂ ಮತ್ತು ಠಾಣೆಯ ಸಿಬ್ಬಂದಿಯವರಾದ ಶ್ರೀ ಅಣ್ಣಾರಾವ ಹೆಚ್.ಸಿ-439, ಶ್ರೀ ಶಿವಪ್ಪ ಹೆಚ್.ಸಿ-226, ಶ್ರೀ ಮಲ್ಲಿಕಾರ್ಜುನ್ ಬಾಸಗಿ ಸಿಪಿಸಿ 1260, ಶ್ರೀ ಬೀರಣ್ಣಾ ಸಿಪಿಸಿ 1187 ಇವರಿಗೂ ದಾಳಿ ಮಾಡುವ ವಿಷಯ ತಿಳಿಸಿ ನಾವೆಲ್ಲರೂ ಒಂದು ಖಾಸಗಿ ಜೀಪನಲ್ಲಿ ಕುಳಿತು ಎಲ್ಲರೂ ಜೇವರಗಿ ಪೊಲೀಸ್ ಠಾಣೆಯಿಂದ ಮದ್ಯಾಹ್ನ 12.05 ಗಂಟೆಗೆ ಹೊರಟು ಮದ್ಯಾಹ್ನ 12.30 ಗಂಟೆಗೆ ರದ್ದೆವಾಡಗಿ-ಕೊಳಕೂರ ರೋಡಿನ ರದ್ದೆವಾಡಗಿ ಕ್ರಾಸ್ ಹತ್ತಿರ ರೋಡಿನಲ್ಲಿ ಹೊಗುತ್ತಿದ್ದಾಗ ಕೋಳಕೂರ ರೋಡಿನ ಕಡೆಯಿಂದ ಮರಳು [ಉಸುಕು] ತುಂಬಿಕೊಂಡು ಬರುತ್ತಿದ್ದ ಟ್ರಾಕ್ಟರಗಳಿಗೆ ನೋಡಿ ನಾವು ಜೀಪನ್ನು ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ರಸ್ತೆ ಪಕ್ಕದಲ್ಲಿ ನಿಂತು ಅವುಗಳಿಗೆ ಕೈ ಮಾಡಿ ನಿಲ್ಲಿಸಲು ಸದರಿ ಮರಳು ತುಂಬಿ ಟ್ರಾಕ್ಟರಗಳ ಚಾಲಕರು ಟ್ರಾಕ್ಟರಗಳನ್ನು ನಿಲ್ಲಿಸದೆ ಸ್ವಲ್ಪ ಮುಂದೆ ನಡೆಸಿಕೊಂಡು ಹೋಗಿ ನಿಲ್ಲಿಸಿದರು. ಹಾಗೇ ಅವಸರದಲ್ಲಿ ಸದರಿ ಟ್ರಾಕ್ಟರಗಳ ಚಾಲಕರು ತಮ್ಮ ತಮ್ಮ ಟ್ರಾಕ್ಟರಗಳು ಬಿಟ್ಟು ಓಡಿ ಹೋಗುತ್ತಿದ್ದಾಗ ನಾನು ಮತ್ತು ಪೊಲೀಸರು ಕೂಡಿಕೊಂಡು ಅವರ ಹಿಂದೆ ಓಡುತ್ತಾ ಬೇನ್ನು ಹತ್ತಿದೇವು. ಆದರೆ ಅವರು ಜಾಲಿ ಕಂಟಿಯಲ್ಲಿ ಓಡಿ ಹೋದರು. ಅವರಿಗೆ ಮುಂದೆ ನೋಡಿದಲ್ಲಿ ಗುರುತ್ತಿಸುತ್ತೇನೆ ನಂತರ ಟ್ರಾಕ್ಟರ ನಿಂತ ಸ್ಥಳಕ್ಕೆ ಬಂದು ಅಲ್ಲಿದ್ದ ಮರಳು ತುಂಬಿದ ಟಿಪ್ಪರಗಳು ನೊಡಲಾಗಿ 1] ಟ್ರ್ಯಾಕ್ಟರ್ ನಂ ಕೆ. 32-ಟಿಎ-5785 ನೇದ್ದರಲ್ಲಿ ಅಂದಾಜು 1 ಬ್ರಾಸ್ ಮರಳು .ಕಿ 500/-ರೂ, ಮತ್ತು ಟ್ರ್ಯಾಕ್ಟರ .ಕಿ 1,00,000/-ರೂ 2] ಟ್ರಾಕ್ಟರ ನಂ ಕೆಎ 32-ಟಿ- 5317 ನೇದ್ದರಲ್ಲಿ 1 ಬ್ರಾಸ್..ಕಿ 500/- ರೂ ಮತ್ತು ಟ್ರಾಕ್ಟರ .ಕಿ. 1,00,000/- ರೂ ಸದರಿ ಟ್ರಾಕ್ಟರಗಳಲ್ಲಿ ಭೀಮಾ ನದಿಯಿಂದ ಮರಳು [ಉಸುಕು] ತುಂಬಿಕೊಂಡು ಸಾಗಾಣಿಕೆ ಮಾಡಲು ಅವರ ಹತ್ತಿರ ಸಂಬಂದ ಪಟ್ಟ ಇಲಾಖೆಯಿಂದ ಪರವಾನಿಗೆ ಪತ್ರ ರಾಯಲ್ಟಿ ವಗೈರೆ ಯಾವದೇ ಇಲ್ಲದೇ ಭೀಮಾ ನದಿಯ ದಂಡೆಯಲ್ಲಿನ ಮರಳು ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿರುವದು ಕಂಡುಬಂದಿದ್ದರಿಂದ ಎರಡು ಟ್ರಾಕ್ಟರಗಳಲ್ಲಿನ ಒಂದೋಂದು ಬ್ರಾಸ್ ಮರಳು ಒಟ್ಟು .ಕಿ 1000/-ರೂ ಕಿಮ್ಮತ್ತಿನದ್ದು ಮತ್ತು ಎರಡು ಟ್ರಾಕ್ಟರ ಸಮೇತ ಸ್ಥಳದಲ್ಲಿಯೇ ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 12-45 ಗಂಟೆಯಿಂದ 13-45 ಗಂಟೆಯವರಗೆ ಜಪ್ತಿ ಪಂಚನಾಮೆ ಬರೆದುಕೊಂಡು ನಂತರ ಪೊಲೀಸ್ ಸಿಬ್ಬಂದಿಯವರ ಸಹಾಯದಿಂದ ಮೇಲೆ ನಮೂದಿಸಿದ ಟ್ರ್ಯಾಕ್ಟರಗಳನ್ನು ತಗೆದುಕೊಂಡು ಮರಳಿ ಪೊಲೀಸ್ ಠಾಣೆಗೆ ಮದ್ಯಾಹ್ನ 14.15 ಗಂಟೆಗೆ ಬಂದು ಮೇಲೆ ನಮೂದಿಸಿದ ಟ್ರಾಕ್ಟರಗಳ ಚಾಲಕರ ವಿರುದ್ದ ಕಾನೂನು ಕ್ರಮ ಕೈಕೊಳಲು ವಿನಂತಿಅಂತ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 130/2015 ಕಲಂ 379 ಐಪಿಸಿ ಮತ್ತು 21 (1) ಎಮ್.ಎಮ್.ಆರ್.ಡಿ ಆಕ್ಟ್ 1957 ನೇದ್ದರಲ್ಲಿ ಪ್ರಕರಣ ದಾಖಲಾಗಿರುತ್ತದೆ.
ರಾಘವೇಂದ್ರ ನಗರ ಪೊಲೀಸ್ ಠಾಣೆ: ಇಂದು ದಿನಾಂಕ:19/05/2015 ರಂದು ಸಾಯಂಕಾಲ 4.00 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀ ಅಸ್ಲಂ ಪಟೇಲ ತಂದೆ ಬಾಷಾಪಟೇಲ ವ:20 ವರ್ಷ ಸಾ:ಮೀಜಬಾ ನಗರ ಕಲಬುರಗಿ ಈತನ ಹೇಳಿಕೆ ಪಡೆದುಕೊಂಡಿದ್ದು ಹೇಳಿಕೆ ಸಾರಾಂಶವೆನೆಂದರೆ, ನಾನು ನಮ್ಮ ಟಿಪ್ಪರಗಳ (ಲಾರಿ) ಮೆಂಟೆನೆನ್ಸ್‌ ಮಾಡುತ್ತಾ ಉಪಜೀವನ ಸಾಗಿಸುತ್ತೇನೆ. ಇಂದು ದಿನಾಂಕ:19/05/2015ನ ರಂದು ಮದೀನಾ ಕಾಲೋನಿಯ ನನ್ನ ಗೆಳೆಯನಾದ ಝೀಬ್ರಾನ್‌ ಇವನು ನಮ್ಮ ಮನೆಗೆ ಬಂದಿದ್ದು ಆಗ ನಾನು ಮತ್ತು ಝೀಬ್ರಾನ್‌ ಇಬ್ಬರೂ ಕೂಡಿಕೊಂಡು ಝೀಬ್ರಾನ ಇತನ ಮೋಟಾರ ಸೈಕಲ್‌ ಮೇಲೆ ಹೋಗುತ್ತಿರುವಾಗ ಮಧ್ಯಾನ 1.00 ಗಂಟೆಗೆ ಮದೀನಾ ಕಾಲೋನಿಯ ಪೆಟ್ರೋಲ ಪಂಪ ಹತ್ತಿರ ತಾಹೀರ ಮತ್ತು ಕರೀಮಲಾಲ ಹಾಗೂ ಇತರರು 3-4 ಜನರು ಬಂದು ನಮಗೆ ತಡೆದು ತಾಹೇರ ಇತನು ಏ ರಾಂಡ ಕೆ ಭೇಟೆ ಕಲ ತು ಮೇರೆ ಭಾಯಿ ಇಲಿಯಾಸ್‌ ಹುಸೇನ ಸೇ ಕೀವು ಜಗಡಾ ಕರೆ ಅಂತಾ ತನ್ನ ಕೈಯಲ್ಲಿದ್ದ ಒಂದು ಕಲ್ಲಿನಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ, ಕರೀಮಲಾಲ ಇತನು ಒಂದು ಬಡಿಗೆಯಿಂದ ಎಡಗೈ ರಟ್ಟೆಯ ಮೇಲೆ ಹಾಗೂ ಬಲಗಡೆ ಟೊಂಕದ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ ಇನ್ನೂಳಿದ 3-4 ಜನರು ನನಗೆ ಕೈಯಿಂದ ಬೆನ್ನ ಮೇಲೆ ಹೊಡೆಬಡೆ ಮಾಡಿ ಏ ರಾಂಡ ಕೆ ಭೇಟೆ ಏ ಏರಿಯಾ ಮೇ ತೇರಾ ಬಹೂತ ದಾದಾಗೀರಿ ಚಲರಹಾಹೇ ಅಂತಾ ಬೈಯುತ್ತಾ ಕೈಯಿಂದ ಬೆನ್ನಿನ ಮೇಲೆ ಹೊಡೆಬಡೆ ಮಾಡುತ್ತಿರುವಾಗ ಅಲ್ಲೇ ಪಕ್ಕದಲ್ಲಿ ರಸ್ತೆಗೆ ನಡೆದುಕೊಂಡು ಹೋಗುತ್ತಿರುವ ಸಾಬೀರ ಪಟೇಲ ಮತ್ತು ಇರ್ಫಾನ ಹಾಗೂ ಸದ್ದಾಂ ಇವರು ಬಂದು ಜಗಳ ಬಿಡಿಸಿರುತ್ತಾರೆ. 3-4 ಜನರ ಹೆಸರು ನನಗೆ ಗೊತ್ತಿರುವದಿಲ್ಲಾ ನೋಡಿದರೆ ಅವರಿಗೆ ಗುರುತಿಸುತ್ತೇನೆ ನನಗೆ ರಕ್ತಗಾಯ ಹಾಗೂ ಗುಪ್ತಗಾಯ ಆಗಿರುವದರಿಂದ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ ಕಾರಣ ಅವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕು ಅಂತಾ ಪಿರ್ಯಾದಿ ಇತ್ಯಾದಿ ಹೇಳಿಕೆ ಪಡೆದುಕೊಂಡು ಮರಳಿ ಸಾಯಂಕಾಲ 5.30 ಗಂಟೆಗೆ ಠಾಣೆಗೆ ಬಂದು ಪಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ ಠಾಣೆ ಗುನ್ನೆ.ನಂ.68/15 ಕಲಂ:143, 147, 148, 323, 324, 504 ಸಂ:149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಾಗಿರುತ್ತದೆ .
ರಾಘವೇಂದ್ರ ನಗರ ಪೊಲೀಸ್ ಠಾಣೆ: ಇಂದು ದಿನಾಂಕ:20/05/2015 ರಂದು ಬೆಳಗಿನ ಜಾವ 5.30 ಗಂಟೆಗೆ ರಾಘವೇಂದ್ರ ನಗರ ಪೊಲೀಸ ಠಾಣೆಯ ಪಿಎಸ್‌ಐ ಶ್ರೀ ವಾಹೀದ ಹುಸೇನ್‌ ಕೊತ್ವಾಲ್‌ ಸಾಹೇಬರು ಠಾಣೆಗೆ ಬಂದು 6 ಜನ ಆರೋಪಿ ಹಾಗೂ ಜಪ್ತಿ ಮಾಡಿದ ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆ ಹಾಜರ ಪಡಿಸಿ ಸರ್ಕಾರಿ ತರ್ಫೇಯಾಗಿ ವರದಿ ಸಲ್ಲಿಸಿದ್ದು ಸಾರಾಂಶವೆನೆಂದರೆ, ರಾಘವೇಂದ್ರ ನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಮಾಣಿಕೇಶ್ವರಿ ಗುಡಿಯ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಇಂದು ದಿನಾಂಕ:20/05/2015 ರಂದು ರಾತ್ರಿ 3.40 ಗಂಟೆಗೆ ಇಸ್ಪೀಟ್‌ ಜೂಜಾಟ ಆಡುತ್ತಿದ್ದ 6 ಜನ ಆರೋಪಿತರಾದ 1) ಶಿವಲಿಂಗ ತಂದೆ ದೇವಿಂದ್ರಪ್ಪಾ ಪೂಜಾರಿ ವ:23 ಉ:ಎಸ್‌.ಬಿ.ಆರ್‌‌ ವಾಹನ ಚಾಲಕ ಸಾ:ಬ್ರಹ್ಮಪೂರ ಗಂಗಾನಗರ ಕಲಬುರಗಿ ಇತನ ಹತ್ತಿರ ನಗದು ಹಣ 1200/-ರೂ 2) ಅನೀಲ ತಂದೆ ರಾಯಪ್ಪಾ ಮಸ್ಕಿ ವ:20 ಉ:ಕೂಲಿಕೆಲಸ ಸಾ:ಗಂಗಾನಗರ ಕಲಬುರಗಿ ಇತನ ಹತ್ತಿರ ನಗದು ಹಣ 920/-ರೂ 3) ಶೇಖರ ತಂದೆ ಹಣಮಂತರಾವ ನಾಟಿಕಾರ ವ:24 ಉ:ಮೇಕ್ಯಾನಿಕ ಸಾ:ಗಂಗಾನಗರ ಕಲಬುರಗಿ ಇತನ ಹತ್ತಿರ ನಗದು ಹಣ 1540/-ರೂ 4) ಸಾಯಿಬಣ್ಣಾ ತಂದೆ ನಾಗಣ್ಣಾ ಸೀತನೂರ ವ:25 ಉ:ಹೊಟೇಲ ಕೆಲಸ ಸಾ:ಗಂಗಾನಗರ ಇತನ ಹತ್ತಿರ ನಗದು ಹಣ 1520/-ರೂ 5) ಶಿವುಕುಮಾರ ತಂದೆ ನಾಗಣ್ಣಾ ಬಬಲಾದ ವ:30 ಉ:ಆಟೋ ಚಾಲಕ ಸಾ:ಕೊಂಡೆದಗಲ್ಲಿ ಕಲಬುರಗಿ ಇತನ ಹತ್ತಿರ ನಗದು ಹಣ 1330/-ರೂ 6) ವೈಜನಾಥ ತಂದೆ ಬಸವರಾಜ ಕದ್ದರ್ಗಿ ವ:26 ಉ:ಪಾನಶಾಪ ಸಾ:ಗಂಗಾನಗರ ಕಲಬುರಗಿ ಇತನ ಹತ್ತಿರ ನಗದು ಹಣ 1240/-ರೂ ದೊರೆತವು ಮತ್ತು ಸ್ಥಳದಲ್ಲಿ 2370/-ರೂ ಹಾಗೂ 52 ಇಸ್ಪೀಟ್‌ ಎಲೆಗಳು ಹೀಗೆ ಒಟ್ಟು ಇಸ್ಪೀಟ್‌ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 10120/-ರೂ ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಕುರಿತು ಠಾಣೆಗೆ ತಂದು ಒಪ್ಪಿಸುತ್ತಿದ್ದು ಸದರಿ ಆರೋಪಿತರ ಮೇಲೆ ಕ್ರಮ ಜರುಗಿಸಬೇಕು ಅಂತಾ ವರದಿ ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ ಠಾಣೆ ಗುನ್ನೆ.ನಂ.69/15 ಕಲಂ:87 ಕೆ.ಪಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಸ್ಟೇಷನ್ ಬಜಾರ ಪೊಲೀಸ್ ಠಾಣೆ: ಇಂದು ದಿನಾಂಕ 19/05/2015 ರಂದು 22:45 ಗಂಟೆಗೆ ರಾಜಶೇಖರ ಪಿ.ಐ ಸ್ಟೇಷನ್ ಬಜಾರ ಪೊಲೀಸ್ ಠಾಣೆ ಕಲಬುರಗಿ ಇವರು ಠಾಣೆಗೆ ಜಪ್ತಿ ಪಂಚನಾಮೆ ಆರೋಪಿ, ಮುದ್ದೆ ಮಾಲು ಸಮೇತ ಹಾಜರಾಗಿ ಒಂದು ಜ್ಞಾಪನ ಪತ್ರ ಹಾಜರುಪಡಿಸಿದ್ದು ಸಾರಾಂಶವೆನೆಂದರೆ, ನಾನು ರಾಜಶೇಖರ ಪಿ.ಐ ಸ್ಟೇಷನ್ ಬಜಾರ ಪೊಲೀಸ್ ಠಾಣೆ ಕಲಬುರಗಿ ಇಂದು ದಿನಾಂಕ 19/05/2015 ರಂದು 2105 ಗಂಟೆ ಸುಮಾರಿಗೆ ಠಾಣೆಯಲ್ಲಿದ್ದಾಗ ಕೊರ್ಟ ರಸ್ತೆಯಲ್ಲಿರುವ ಘಂಟೋಜಿ ಬಿಲ್ಡಿಂಗ ಎದುರುಗಡೆ ಇರುವ ದ್ವಾರಕಾ ಬೇಕರಿಯ ಎದುರುಗಡೆ ಕೆಲವು ಜನರು ಕ್ರಿಕೇಟ ಆಟದ ಬೆಟ್ಟಿಂಗ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಂಚರಾದ 1) ಕೃಷ್ಣಾ ತಂದೆ ಶ್ರೀನಿವಾಸ ಪಾಟೀಲ ವಯ|| 46ವರ್ಷ ಜಾ|| ಬ್ರಾಹ್ಮಣ ಉ|| ಪೈನಾನ್ಸ್ ಕೆಲಸ ಸಾ|| ಮಕ್ತಂಪೂರ ಕಲಬುರಗಿ, 2) ಮಲ್ಲಿಕಾರ್ಜುನ ತಂದೆ ಲಕ್ಷ್ಮಣರಾವ ಉದನೂರ ವಯಃ 34 ವರ್ಷ ಜಾತಿಃ ಯಾದವ ಉಃ ಸಮಾಜ ಸೇವೆ ಸಾಃ ಶಾಸ್ತ್ರಿ ನಗರ ಕಲಬುರಗಿ ರವರನ್ನು ಬರಮಾಡಿಕೊಂಡು ಮತ್ತು ಸಿಬ್ಬಂದಿಯವರಾದ ಅಖಂಡಪ್ಪಾ ಎ.ಎಸ್.ಐ, 1) ಶಿವಾನಂದ ಪಿಸಿ 1240, 2) ರಾಜ ಕುಮಾರ ಪಿಸಿ 1100, 3) ಚನ್ನಮಲ್ಲಪ್ಪಾ ಸಿಪಿಸಿ-241, 4) ಹಮೀದೊದ್ದಿನ ಪಿಸಿ-369, 5) ಪ್ರವೀಣ ಪಿಸಿ-907 ರವರನ್ನು ಕರೆದುಕೊಂಡು ಜೀಪ ನಂ. ಕೆಎ 32 ಜಿ 0668 ನೇದ್ದರಲ್ಲಿ ಕುಳಿತು ಠಾಣೆಯಿಂದ 2115 ಗಂಟೆಗೆ ಹೊರಟು ಘಂಟೋಜಿ ಬಿಲ್ಡಿಂಗ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ದ್ವಾರಕ ಬೇಕರಿ ಎದುರುಗಡೆ ಮೂರು ಜನರು ಐಪಿಎಲ ಕ್ರಿಕೇಟ ಆಟದ ಪಂದ್ಯಕ್ಕೆ ಪಣಕ್ಕೆ ಹಣ ಹಚ್ಚಿ ಮುಂಬೈ ಟೀಮ ಗೆದ್ದರೆ 1,000=00 ರೂಪಾಯಿಗೆ 1,500/-ರೂ ಕೊಡುತ್ತೇನೆ ಅಂತಾ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಕ್ರಿಕೇಟ ಬೆಟ್ಟಿಂಗ ಆಡುತ್ತಿದ್ದು ಖಚಿತಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ಇಂದು 2130 ಗಂಟೆಗೆ ದಾಳಿ ಮಾಡಿ ಹಿಡಿದು ಅವರನ್ನು ವಿಚಾರಿಸಲು ತಮ್ಮ ಹೆಸರು 1) ದೂಳಪ್ಪಾ ತಂದೆ ಮಲ್ಲಿನಾಥ ಕುನ್ನುರ ವಯ|| 28 ವರ್ಷ ಜಾ|| ಲಿಂಗಾಯತ ಉ|| ಬೇಕರಿಯಲ್ಲಿ ಕೆಲಸ ಸಾ|| ಸಿರನೂರ ತಾ&ಜಿ|| ಕಲಬುರಗಿ ಅಂತಾ ಹೇಳಿದನು ಇವನಿಂದ 21,000/- ರೂ ಮತ್ತು ಐದು ಸ್ಯಾಮಸಂಗ ಕಂಪನಿಯ ಮೊಬೈಲ ಫೋನಗಳು ಅ.ಕಿ|| 8,000/-ರೂ ಹಾಗೂ ಒಂದು ಐಪಿಎಲ ಕ್ರಿಕೇಟ ಪಂದ್ಯದ ಬಗ್ಗೆ ಬರೇದ ಒಂದು ಚೀಟಿ ದೊರೆತವು. 2) ಶರಣು ತಂದೆ ಶಂಕರಗೌಡ ಹರನೂರ್ ವಯ|| 39ವರ್ಷ ಜಾ|| ಲಿಂಗಾಯತ ಉ|| ಬೇಕರಿ ಕೆಲಸ ಸಾ|| ಕೊಟ್ನೂರ (ಡಿ) ಕಲಬುರಗಿ ಅಂತಾ ಹೇಳಿದನು ಇವನಿಂದ 20,500/- ರೂ ಮತ್ತು ಒಂದು ಸ್ಯಾಮಸಂಗ್ ಮೊಬೈಲ ಫೋನ ಅ.ಕಿ|| 3,000/-ರೂ ದೊರೆತವು ಮತ್ತು ಇನ್ನೊಬ್ಬ ಓಡಿ ಹೋದನು ಅವನ ಹೆಸರು ವಿಚಾರಿಸಲು ಶರಣು ಪುಲಾರಿ ಸಾ|| ಯಂಕಮ್ಮನ ಮಾರ್ಕೆಟ ಹತ್ತಿರ ಬ್ರಹ್ಮಪೂರ ಕಲಬುರಗಿ ಅಂತಾ ಗೊತ್ತಾಯಿತು. ಸದರಿಯವರಿಬ್ಬರಿಂದ ಒಟ್ಟು 41,500/- ರೂ ಮತ್ತು ಆರು ಮೊಬೈಲ ಫೋನಗಳು ಅ.ಕಿ|| 11,000/- ರೂ ಹಾಗೂ ಒಂದು ಐಪಿಎಲ ಕ್ರಿಕೇಟ ಪಂದ್ಯದ ಬಗ್ಗೆ ಬರೇದ ಒಂದು ಚೀಟಿ ಅ.ಕಿ|| 00.00 ನೆದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಆರೋಪಿ ಮತ್ತು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಸಮೇತ ಠಾಣೆಗೆ ಕರೆದುಕೊಂಡು ಬಂದು ಸದರಿಯವರ ಮೇಲೆ ಕಾಯ್ದೆಸರಿ ಕ್ರಮ ಕೈಗೊಳ್ಳಲು ಈ ಮೂಲಕ ಸೂಚಿಸಲಾಗಿದೆ ಅಂತಾ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 97/2015 ಕಲಂ. 78 (1)(6)ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಾಗಿರುತ್ತದೆ. 
C¥sÀd®¥ÀÆgÀ oÁuÉ : ನಾನು ಸುರೇಶ ಬೆಂಡೆಗುಂಬಳ ಪಿ.ಎಸ್.ಐ ಅಫಜಲಪೂರ ಠಾಣೆ ಈ ಮೂಲಕ ವರದಿಯನ್ನು ಗಣಕಿಕರಿಸಿ ಕೊಡುವುದೇನೆಂದರೆ. ಇಂದು ದಿನಾಂಕ 20-05-2015 ರಂದು 05:00 ಎ. ಎಮ್ ಕ್ಕೆ ಪಿಸಿ-1207 ಸಿದ್ರಾಮ, ಪಿಸಿ- 816 ನಾಗರಾಜ, ರವರೊಂದಿಗೆ ಪಟ್ಟಣದಲ್ಲಿ ಪೆಟ್ರೋಲಿಂಗ ಕರ್ತವ್ಯ ಮಾಡುತ್ತಾ ಬಸವೇಶ್ವರ ಚೌಕ ಹತ್ತಿರ ಇದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ, ದಿಕ್ಸಂಗಾ (ಕೆ) ಗ್ರಾಮದಲ್ಲಿ, ಗ್ರಾಮದ ಬಸ್ ನಿಲ್ದಾಣದ ಹತ್ತಿರ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಸಾಗಿಸುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಚಂದಪ್ಪ ತಂದೆ ರಮೇಶ ಕೋಳಗೇರಿ 2) ಹುಚ್ಚಪ್ಪ ತಂದೆ ಶರಣಪ್ಪ ಕೊಳಗೇರಿ ಸಾ|| ಇಬ್ಬರು ಅಫಜಲಪೂರ ಇವರನ್ನು ಹಾಜರು ಪಡಿಸಿಕೊಂಡು ವಿಷಯವನ್ನು ತಿಳಿಸಿ, ಪಂಚರಾಗಲು ಒಪ್ಪಿಕೊಂಡ ನಂತರ ಪಂಚರೊಂದಿಗೆ ಮತ್ತು ಸಿಬ್ಬಂದಿಯವರೊಂದಿಗೆ ಠಾಣೆಯ ಜೀಪದಲ್ಲಿ 05:30 ಎ.ಎಮ್ ಕ್ಕೆ ಹೊರಟು, 06:00 ಎ.ಎಮ್ ಕ್ಕೆ ದಿಕ್ಸಂಗಾ (ಕೆ) ಗ್ರಾಮದ ಬಸ್ ನಿಲ್ದಾಣದಿಂದ ಸ್ವಲ್ಪ ದೂರು ನಮ್ಮ ವಾಹನ ನಿಲ್ಲಿಸಿ, ನಡೆದುಕೊಂಡು ಹೋಗಿ ಮರೆಯಾಗಿ ನಿಂತುಕೊಂಡು ನೋಡಲಾಗಿ, ಗ್ರಾಮದ ಬಸ್ ನಿಲ್ದಾಣದ ಹತ್ತಿರ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವೇಕ್ತಿ ತನ್ನ ಹತ್ತಿರ ಒಂದು ರಟ್ಟಿನ ಬಾಕ್ಸ ಇಟ್ಟುಕೊಂಡು ನಿಂತಿದನು. ನಂತರ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ಸದರಿ ವ್ಯೆಕ್ತಿಯ ಮೇಲೆ ದಾಳಿ ಮಾಡಲು ಹೋದಾಗ ನಮ್ಮನ್ನು ನೋಡಿ ಓಡುತ್ತಿದ್ದನು, ಅವನನ್ನು ನಾವೆಲ್ಲರು ಬೆನ್ನಟ್ಟಿ ಹಿಡಿದು ಅವನ ಹತ್ತಿರ ಇದ್ದ ರಟ್ಟಿನ ಬಾಕ್ಸನ್ನು ಚೆಕ್ ಮಾಡಲಾಗಿ, ಸದರಿ ಬಾಕ್ಸನಲ್ಲಿ ಓರಜಿನಲ್ ಚಾಯಿಸ್ ಕಂಪನಿಯ 90 ಎಮ್ ಎಲ್ ಅಳತೆಯ ಮದ್ಯ ತುಂಬಿದ ಒಟ್ಟು 64 ರಟ್ಟಿನ ಪೌಚಗಳು ಇದ್ದವು. ಸದರಿಯವನಿಗೆ ಮದ್ಯ ಸಾಗಾಟ ಅಥವಾ ಮಾರಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ಸದರಿ ವ್ಯೆಕ್ತಿಯ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ನಾಗಪ್ಪ ತಂದೆ ಯಲ್ಲಪ್ಪ ಪ್ಯಾಟಿ ವ: 30 ವರ್ಷ ಜಾ: ಕಬ್ಬಲಿಗ ಉ: ಕೂಲಿ ಸಾ: ದಿಕ್ಸಂಗಾ (ಕೆ) ತಾ: ಅಫಜಲಪೂರ ಎಂದು ತಿಳಿಸಿದನು. ಸದರಿಯವನ ವಶದಿಂದ 64 ಓರಜಿನಲ್ ಚಾಯಿಸ್ ಕಂಪನಿಯ ಮದ್ಯ ತುಂಬಿದ ರಟ್ಟಿನ ಪೌಚಗಳಲ್ಲಿ 2 ಪೌಚಗಳಿಗೆ ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಶಾಂಪಲ ಕುರಿತು ವಶಕ್ಕೆ ಪಡೆದುಕೊಂಡೆನು, ಉಳಿದ ಪೌಚಗಳನ್ನು ಪಂಚರ ಸಮಕ್ಷಮ 06:10 ಎ. ಎಮ್ ದಿಂದ 07:10 ಎ ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡೆನು. ಮದ್ಯ ತುಂಬಿದ ಪೌಚಗಳು ಒಟ್ಟು ಅಂದಾಜು  1625/- ರೂ ಆಗುತ್ತದೆ. ಸದರಿ ಜಪ್ತ ಮಾಡಿಕೊಂಡ ಮುದ್ದೆ ಮಾಲು ಮತ್ತು  ಆರೋಪಿತನೊಂದಿಗೆ ಮರಳಿ ಠಾಣೆಗೆ 07:45 ಎ ಎಮ್ ಕ್ಕೆ ಬಂದು ಸದರಿ ಆರೋಪಿತನ ವಿರುದ್ದ ಮುಂದಿನ ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನಿಡಿದ್ದು ಅದೆ. 
ಜೇವರ್ಗಿ ಪೊಲೀಸ್ ಠಾಣೆ: ಇಂದು ದಿನಾಂಕ 19.05.2015 ರಂದು 23.00   ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಲಿಖಿತ  ದೂರು ಅರ್ಜಿ ಹಾಜರುಪಡಿಸಿದ್ದು ಸಾರಂಶವೆನೆಂದರೆ  ”ಇಂದು ದಿನಾಂಕ: 19.05.2015 ರಂದು ಸಾಯಂಕಾಲ 19.30 ಗಂಟೆಯ ಸುಮಾರಿಗೆ ನಾನು ಸಿದ್ದಪ್ಪ ಕುದರಿ ಇತನ ಮೆನಯ ಎದುರು ಹೊಗಿ ನಮ್ಮ ಓಣಿಯಲ್ಲಿ  ನಳದ ನೀರು ಯಾಕೆ? ಬಿಟ್ಟಿಲ್ಲಾ ಅಂತಾ ಕೇಳಿದಾಗ ಅವನು ನನಗೆ ಏ ಬೊಸಡಿ ಮಗನೆ ನಮ್ಮಮನೆಯತನಕ್ ಬಂದು ಕೇಳುತ್ತಿ ರಂಡಿ ಮಗನೆ ಅಂತಾ ಅವಾಚ್ಯವಾಗಿ ಬೈಯ್ದು ಮುಂದಕ್ಕೆ ಹೊಗದಂತೆ ತಡೆದು ನಿಲ್ಲಿಸಿರುತ್ತಾನೆ. ದ್ಯಾವಪ್ಪ ಇತನು ಬಂದು ಕೈಯಿಂದ ಎದೆಯ ಮೇಲಿನ ಅಂಗ್ಗಿ ಹಿಡಿದು ಕಪಾಳದ ಮೇಲೆ ಹೊಡೆದಿರುತ್ತಾನೆ ಮತ್ತು ರಂಗಪ್ಪ ಇತನು ಕಾಲಿನಿಂದ ಒದ್ದಿರುತ್ತಾನೆ ಮತ್ತು ಆ ಮೂರು ಜನರು ನಳದ ನೀರಿನ ವಿಷಯದಲ್ಲಿ ಕೇಳಲು ಬಂದರೆ ನೀನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ನನಗೆ  ಜೀವದ ಬೇದರಿಕೆ ಹಾಕಿರುತ್ತಾರೆ ಅವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕುಅಂತ ಕೊಟ್ಟ ವಗೈರೆ ಅರ್ಜಿ  ಸಾರಾಂಶದ ಮೇಲಿಂದ  ಠಾಣೆಯ ಗುನ್ನೆ ನಂ 13೨/2015 ಕಲಂ 323, 341, 504, 506  ಸಂಗಡ ೩೪ ಐ.ಪಿ.ಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಾಗಿರುತ್ತದೆ.