POLICE BHAVAN KALABURAGI

POLICE BHAVAN KALABURAGI

25 August 2015

Kalaburagi District Reported Crimes.

ಅಫಜಲಪೂರ ಠಾಣೆ: ದಿನಾಂಕ 23/08/2015 ರಂದು ನಾನು ನಮ್ಮ ಹೊಲಕ್ಕೆ ಬಂದು ನಮ್ಮ ಹೊಲದ ಮನೆಯಲ್ಲಿಯೇ ಇದ್ದು ಇಂದು 24/08/2015 ರಂದು ಬೆಳಿಗ್ಗೆ ನಾನು ನಮ್ಮ ಹೊಲದಲ್ಲಿ  ತಿರುಗಾಡಿ ನೋಡುತಿದ್ದಾಗ ನಮ್ಮ ಹೊಲದಲ್ಲಿ ಏನೋ ಕಟ್ಟಡ ಅಕ್ರಮವಾಗಿ ಕಟ್ಟೊ ಉದ್ದೇಶದಿಂದ ಕಲ್ಲುಗಳು ಹಾಕಿದ್ದು ಇರುತ್ತದೆ  ನಂತರ 10 ಎಎಮ್ ದ ಸುಮಾರಿಗೆ ನಾನು  ನಮ್ಮ ಹೊಲದಲ್ಲಿ ಅಕ್ರಮವಾಗಿ ಯಾರು ಕಲ್ಲು ಹಾಕಿರುತ್ತಾರೆ  ಅಂತ ತಾಂಡಾದಲ್ಲಿ ವಿಚಾರಿಸಲು ಹೊಗುತಿದ್ದಾಗ ನಮ್ಮ ತಮ್ಮನಾದ ಛತ್ರು ತಂದೆ ಹೀರೂ ರಾಠೋಡ ಇತನು ತನ್ನ ಸಂಗಡ  ನಮ್ಮ ಇನ್ನೋಬ್ಬ ತಮ್ಮನಾದ ಸೋಮಲು ರಾಠೋಡ  ಇತನ ಮಕ್ಕಳಾದ ಸುನಿಲ ತಂದೆ ಸೋಮಲು ರಾಠೋಡ , ಅನಿಲ ತಂದೆ ಸೊಮಲು ರಾಠೋಡ ಮತ್ತು ರೋಹಿದಾಸ ತಂದೆ ಕೊಟು ರಾಠೋಡ ಇವರೊಂದಿಗೆ ನಮ್ಮ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ನನಗೆ ಛತ್ರು ಹಾಗೂ ಸುನಿಲ ಇಬ್ಬರು ತಡೆದು ನಿಲ್ಲಿಸಿ ರಂಡಿ ಮಗನೆ ನಮಗೆ ಈ ಹೊಲ ಮನೆಯಲ್ಲಿ ಪಾಲ ಬರುತ್ತೆ ಇನ್ನೊಮ್ಮೆ ಹಂಚಿಕೆ ಮಾಡು ಈಗ ನಿನ್ನ ಹೊಲದಲ್ಲಿ ನಾವು ಹನುಮಾನ ಗುಡಿ ಕಟ್ಟಲು ಕಲ್ಲು ಹಾಕಿರುತ್ತೇವೆ ಅಂತ ಬೈಯುತಿದ್ದಾಗ ನಾನು ಸದರಿಯವರಿಗೆ ಸರಿಯಾಗಿ ಪಾಲಾ ಆಗಿದೆ ಇಲ್ಲಿ ಯಾಕೆ ಗುಡಿ ಕಟ್ತಿರಿ ಅಂತ ಅನ್ನುತಿದ್ದಾಗ ಅದೇ ಸಮಯಕ್ಕೆ ಅಲಿಂದ ಹೊಗುತಿದ್ದ ನಮ್ಮ ತಾಂಡಾ ಬಸು ತಂದೆ ಭಿಮು ರಾಠೋಡ ಹಾಗೂ ಗೋಕು ತಂದೆ ಭಿಮು ರಾಠೋಡ ಇವರು ಬಂದು ಸದರಿಯವರಿಗೆ ಯಾಕೆ ಜಗಳ ಮಾಡ್ತಿರಿ ಸುಮ್ನೆ ಅಂತ ಅನ್ನುತಿದ್ದಾಗ  ಛತ್ರು ಇತನು ನನಗೆ ಈ ರಂಡಿಮಗನಿಗೆ ಇವತ್ತ ಖಲಾಸ ಮಾಡ್ತವಿ ಅದಕ್ಕೆ ಬಂದಿವಿ ಇವತ್ತ ಬಿಡಲ್ಲಾ ಅಂತ ಅನ್ನುತಿದ್ದಾಗ ಸುನಿಲ, ಅನಿಲ, ರೋಹಿದಾಸ ಎಲ್ಲರು ಕೂಡಿ ನನಗೆ ಹೊಡೆಯಲು ಬಂದಂತೆ ಮಾಡುತಿದ್ದಾಗ ಬಸು ರಾಠೋಡ ಹಾಗೂ ಗೋಕು ರಾಠೊಡ ಇಬ್ಬರು ಕೂಡಿ ಸದರಿಯವರಿಗೆ ತಿಳುವಳಿಕೆ ಹೇಳಿ ಕಳಿಸಿರುತ್ತಾರೆ. ನಾನು ಸದರಿ ಘಟನೆ ಬಗ್ಗೆ ನನ್ನ ಹೆಂಡತಿಯೊಂದಿಗೆ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದಿರುತ್ತೆನೆ   ಕಾರಣ ನಮ್ಮ ತಮ್ಮ ಛತ್ರು ಹಾಗೂ ಇನ್ನೋಬ್ಬ ತಮ್ಮ ಸೊಮಲುನ ಮಕ್ಕಳಾದ ಸುನಿಲ, ಅನಿಲ ಹಾಗೂ ರೋಹಿದಾಸ ತಂದೆ ಕೊಟು ಇವರು ಹೊಲ ಮನೆಯಲ್ಲಿ ಸರಿಯಾದ ಪಾಲಾ ಆಗಿಲ್ಲಾ ಅಂತ ವಿನಾ ಕಾರಣ ನನ್ನ ಜೋತೆ ಅವಾಗ ಅವಾಗ ಜಗಳ ಮಾಡಿ ನಮ್ಮ ಹೊಲದಲ್ಲಿ ಅಕ್ರಮವಾಗಿ ಹನುಮಾನ ಗುಡಿ ಕಟ್ಟಲು ಕಲ್ಲು ಹಾಕಿ ಇಂದು ನಮ್ಮ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ನನಗೆ ತಡೆದು ನಿಲ್ಲಿಸಿ  ಅವಾಚ್ಯ ಶಬ್ದಗಳಿಂದ ಬೈದು ಜೀವ ಬೇದರಿಕೆ ಹಾಕಿರುತ್ತಾರೆ. ಸದರಿಯವರ ಮೇಲೆ ಕಾನೂನು ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಗ್ರಾಮೀಣ  ಠಾಣೆ : ದಿನಾಂಕ|| 23/08/2015 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ ಮೃತ ಮಂಜುನಾತ ಈತನು ತನ್ನ ಮಾವನ ಮಹೇಂದ್ರ ಸೆಂಟರ್ ಮೋ.ಸೈ ನಂ. ಕೆಎ 32 ಇಜಿ 6115 ನೇದ್ದರ ಮೇಲೆ ಕಲಬುರಗಿಯಿಂದ ಕಡಗಂಚಿಗೆ ಕೆಲಸಕ್ಕೆ ಹೋಗುವಾಗ ಕಲಬುರಗಿ ಆಳಂದ ರೋಡಿನ ಸಾವಳಗಿ ಕ್ರಾಸ್ ಹತ್ತಿರ ಎದುರಿನಿಂದ ಯಾವುದೋ ವಾಹನ ಚಾಲಕನು ಅತಿವೇಗ & ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೋ.ಸೈ ಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಮಂಜುನಾಥ ಈತನ ತಲೆಗೆ ಭಾರಿ ರಕ್ತಗಾವಾಗಿ , ತಲೆಯಿಂದ ಮಾಂಸಖಂಡಗಳು ಹೊರಗೆ ಬಂದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ವಗೈರೆ ಫಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಮೇಲಿನಂತೆ ಕಾನೂನು ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಮಾದನ ಹಿಪ್ಪರಗಾ ಠಾಣೆ : ದಿನಾಂಕ 24-08-2015 ರಂದು ಶ್ರೀ ಸೈಬಣ್ಣಾ ತಂದೆ ಚೌಡಪ್ಪಾ ಜಮಾದಾರ ವಯಾ;60 ಜಾ:ಕಬ್ಬಲಿಗ ಉ:ಒಕ್ಕಲುತನ ಸಾ:ಇಕ್ಕಳಕಿ ತಾ:ಆಳಂದ ಇವರು ಮುಂಜಾನೆ 12;00 ಗಂಟೆಗೆ ಠಾಣೆಗೆ ಹಾಜರಾಗಿ ಒಂದು ಲಿಖಿತ ಅರ್ಜಿ ಸಾರಾಂಶವೇಂದರೆ . ಈ ಮೂಲಕ ತಮ್ಮಲ್ಲಿ ಅರೆಕೆ ಮಾಡಿಕೋಲುವದೆಂದರೆ ನನ್ನಗೆ ನಾಲ್ಹು ಜನ ಗಂಡು ಮಕ್ಕಳು ಮಕ್ಕುಳು ಐದು ಹೆಣ್ಣು ಮಕ್ಕಳಿದ್ದು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದು ಅವರು ತಮ್ಮ ತಮ್ಮ ಗಂಡನ ಮನೆಯಲ್ಲಿರುತ್ತಾರೆ. ಗಂಡು ಮಕ್ಕಳಲ್ಲಿ 3 ನೇಯ ಮಗನಾದ ಸೈಬಣ್ಣಾ ಈತನು ಒಕ್ಕಲುತನ ಕೆಲಸ ಮಾಡಿಕೊಂಡಿದ್ದು ಹೊಲದಲ್ಲಿಯೆ ಇರುತಿದ್ದನು. ಹೀಗಿದ್ದು ನಿನ್ನೆ ದಿನಾಂಕ:23/08/2015 ರಂದು ರಾತ್ರಿ ಮನೆಯಲ್ಲಿ ಊಟ ಮಾಡಿ 09.00 ಗಂಟೆ ಸುಮಾರಿಗೆ ಹೊಲದಲ್ಲಿ ನೀರು ಬಿಡುವದಿದೆ ಅಂತಾ ಹಣಮಂತನು ನಮಗೆ ಹೇಳಿ ಹೊಗಿದ್ದು ಇಂದು ದಿನಾಂಕ;24/08/2015 ರಂದು ಬೆಳಗ್ಗಿನ 10.00 ಗಂಟೆ ಸುಮಾರಿಗೆ  ನಾನು ಮನೆಯಲ್ಲಿದ್ದಾಗ ನಮ್ಮ ತಮ್ಮನ ಮಗನಾದ ಶಿವಲಿಂಗಪ್ಪಾ ಜಮಾದಾರ ಇವನು ನನಗೆ ಫೊನ ಮಾಡಿ ಹೊಲದಲ್ಲಿ ಹಣಮಂತ ಈತನು ಬೆಳೆಗೆ ನೀರು ಬಿಡುವ ಸಲುವಾಗಿ ಮೊಟಾರ ಚಾಲು ಮಾಡಲು ಹೊದಾಗ ಸ್ಟಾಟರ ಡೆಬ್ಬಿ ತೆರೆದಾಗ ಅದಕ್ಕೆ ಕರೆಂಟ ಇಳಿದಿದ್ದು ಕರೆಂಟ ಹಣಮಂತರಾಯನಿಗೆ ಹತ್ತಿ ಕರೆಂಟ ವಾಯರ ಹೊಟ್ಟೆಗೆ ಹತ್ತಿ ಡಬ್ಬಿಯ ಹತ್ತಿರ ಕೆಳಗೆ ಬಿದ್ದು ಮೃತ ಪಟ್ಟಿದ್ದಾನೆ ನೀವೂ ಎಲ್ಲಾರು ಜಲ್ದಿ ಹೊಲಕ್ಕೆ ಬನ್ರಿ ಅಂತಾ ಹೇಳಿದ್ದಕ್ಕೆ ನಮ್ಮ ಮನೇಯವರೆಲ್ಲರು ನಮ್ಮ ಹೊಲಕ್ಕೆ ಬಂದು ನಮ್ಮ ಬಾವಿಯ ಹತ್ತಿರ ನೊಡಲಾಗಿ ನಮ್ಮ ಮಗ ಮೃತ ಪಟ್ಟಿದ್ದು ನಮ್ಮ ಮಗನಿಗೆ ಆಕಸ್ಮಿಕವಾಗಿ ಸ್ಟಾಟರ ಡೆಬ್ಬಿಗೆ ಕರೆಂಟ ಇಳಿದು ನನ್ನ ಮಗ ಮೊಟಾರ ಚಾಲು ಮಾಡಲು ಹೊದಾಗ ಡಬ್ಬಿಯ ಕರೆಂಟ ನನ್ನ ಮಗನಿಗೆ ಹತ್ತಿ ಅಲ್ಲದೆ ಕರೆಂಟ ವಾಯರ ನನ್ನ ಮಗನ ಎಡ ಹೊಟ್ಟೆಗೆ ಹತ್ತಿ ಸ್ವಲ್ಪ ಬನಿಯನ್ ಮತ್ತು ಸ್ವಲ್ಪ ಹೊಟ್ಟೆ ಸುಟ್ಟಿದ್ದು ಇತ್ತು, ಕಾರಣ ನನ್ನ ಮಗ ಹಣಮಂತ ಈತನು ಒಕ್ಕಲುತನ ಮಾಡುವವನಾಗಿದ್ದು ಇಂದು ಬೆಳಗ್ಗೆ ನೀರು ಬಿಡುವ ಸಲುವಗಿ ಹೊಲದಲ್ಲಿಯೆ ಮಲಗಿದ್ದು ಇಂದು ದಿನಾಂಕ24/08/2015 ರಂದು ಮುಂಜಾನೆ 08.00 ಗಂಟೆಯಿಂದ 09.00 ಗಂಟೆ ಮದ್ಯದ ಅವದಿಯಲ್ಲಿ ನನ್ನ ಮಗ ಸುಮಾರಿಗೆ ಮೃತ ಪಟ್ಟಿರುತ್ತಾನೆ ನನಗೆ ಯಾರ ಮೇಲು ಯಾವದೆ ರೀತಿಯ ಸಂಶಯ ವಗೈರೆ ಇರುವದಿಲ್ಲಾ ಮುಂದಿನ ಕ್ರಮಕ್ಕಾಗಿ ಕೊರಿಕೆ ಅಂತಾ ಕೊಟ್ಟ ಫಿರ್ಯಾದಿ ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಪೊಲೀಸ ಠಾಣೆ ಯು,ಡಿ,ಆರ್ ನಂ 06/2015 ಕಲಂ 174 ಸಿ,ಆರ್,ಪಿ,ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.