POLICE BHAVAN KALABURAGI

POLICE BHAVAN KALABURAGI

05 February 2015

Kalaburagi District Reported Crimes

ಕಾಳ ಸಂತೆಯಲ್ಲಿ ಮಾರಾಟ ಮಾಡಲು ಶೇಖರಣೆ ಮಾಡಿದ ಪಡಿತರ ಅಕ್ಕಿ ಜಪ್ತಿ :
ಶಾಹಾಬಾದ ನಗರ ಠಾಣೆ : ಶಹಾಬಾದ ಸಣ್ಣೂರ ರಸ್ತೆಗೆ ಇರುವ ಗಣೇಶ ಗುಡಿಯ ಹತ್ತಿರ ಸಾಹೇಬ ಗೌಡ ತಂದೆ ಶಂಕರಗೌಡ ಸಾ|| ಭಂಕೂರ ಇವರ ಗೋದಾಮದಲ್ಲಿ ಸಾರ್ವಜನಿಕ ಪಡಿತರದಾರರಿಗೆ ಹಂಚುವ ಅಕ್ಕಿಯನ್ನು 1) ಅಮೀತ ತಂದೆ ರಾಮ ಪ್ರಸದ  ಸಾ|| ಕಲಬುರಗಿ,  2) ನಿಸಾರ ಅಹ್ಮೆದ ತಂದೆ ಮೊಹಮ್ಮದ ಎಕ್ಬಾಲ ಸಾ|| ಶಹಾಬಾದ 3)  ಸಾಹೇಬಗೌಡ ತಂದೆ ಶಂಕರ ಗೌಡ ಸಾ|| ಭಂಕೂರ ಇವರು ಆಹಾದ ಧಾನ್ಯವನ್ನು ಅನಧಿಕೃತವಾಗಿ ಶಖೆರಣೆ ಮಾಡಿ ಇಟ್ಟಿದ್ದಾರೆ ಅಂತಾ ಖಚಿತ ಭಾತ್ಮಿ  ಬಂದಿದ್ದು ಹೋಗಿ ದಾಳಿ ಮಾಡೋಣ ಅಂತಾ ಮಾಹಿತಿ ತಿಳಿಸಿದ ಮೇರೆಗೆ ಸಹಾಯಕ ಆಯುಕ್ತರು ಸೇಡಂ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯವರು ಮತ್ತು ಠಾಣೆಯ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಿ ನೋಡಲಾಗಿ  1 ಪ್ಲಾಸ್ಟಿಕ ಚೀಲದ ಮೇಲೆ  ಟೈಗರ ಬ್ರಾಂಡಿನ 25 ಕೆಜಿಯ  150 ಬ್ಯಾಗನಲ್ಲಿ  ಒಟ್ಟು  37 ಕ್ವಿಂಟಲ  ಅಕ್ಕಿ ಇದ್ದು  ಅ.ಕಿ. 22,200/-ರೂ , 2) 50 ಕೆಜಿಯ  ಅಲ್ಪ ಸ್ವಲ್ಪ  ಹರಿದಿದ್ದು ಗೋಣಿ ಚೀಲ ಹಾಗೂ ಪ್ಲಾಸ್ಟಿಕ ಚೀಲಗಳಲ್ಲಿ  ಅಕ್ಕಿ ತುಂಬಿದ್ದು  250 ಬ್ಯಾಗಗಳು  ಒಟ್ಟು  120 ಕ್ವಿಂಟಾಲ ಚೀಲಗಳಿರುತ್ತವೆ ಅ.ಕಿ.  72,000/-ರೂ, 3) ಒಂದು ತೂಕ ಮಾಡುಯ ಯಂತ್ರ  ಅ.ಕಿ.  4000/-ರೂ , 4) ಒಂದು ಚೀಲ ಹೊಲೆಯುವ ಮಶೀನ ಅ.ಕಿ.  2000/-ರೂ ಹಾಗೂ  5)  ಖಾಲಿ ಇರುವ ಗೋಣಿ ಚೀಲಗಳ ಒಂದು  ಬಂಡಲ ಅ.ಕಿ.  500/- ರೂ 6) ಟೈಗರ ಮತ್ತು ತುಳಸಿ ಬ್ರಾಂಡಿನ ಖಾಲಿ ಪ್ಲಾಸ್ಟೀಕ ಚೀಲಗಳ 2 ಬಂಡಲಗಳು ಅ.ಕಿ.  6000/-ರೂ  ಹೀಗೆ ಒಟ್ಟು  157 ಕ್ವಿಂಟಾಲ ಅಕ್ಕಿ 94,200/-  ರೂ ಹೀಗೆ  ಒಟ್ಟು  1,06,700/-ರೂ ಕಿಮ್ಮತ್ತಿನ ಸಾರ್ವಜನಿಕರ ಪಡಿತರ  ಆಹಾರ ಧಾನ್ಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ  ಕಳ್ಳಸಾಗಾಣಿಕೆ  ಮಾಡುವ ಉದ್ದೇಶದಿಂದ ಶೇಖರಿಸಿಟ್ಟಿದ್ದು ಸದರಿ ಅಕ್ಕಿಚೀಲಗಳನ್ನು ಜಪ್ತಿ ಮಾಡಿಕೊಂಡು ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅನಧಿಕೃತವಾಗಿ ಮಧ್ಯ ಸಾಗಿಸುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 04-02-2015 ರಂದು ಗೌರ ಕ್ರಾಸ ಹತ್ತಿರ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಸಾಗಿಸುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಗೌರ ಕ್ರಾಸದಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲು ಗೌರ ಕ್ರಾಸ ಹತ್ತಿರ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವೇಕ್ತಿ ತನ್ನ ಹತ್ತಿರ ಒಂದು ರಟ್ಟಿನ ಬಾಕ್ಸ ಇಟ್ಟುಕೊಂಡು ನಿಂತಿದನು. ನೋಡಿ ದಾಳಿ ಮಾಡಲು ಅವನು ಓಡುತ್ತಿದ್ದನು, ಅವನನ್ನು ನಾವೆಲ್ಲರು ಬೆನ್ನಟ್ಟಿ ಹಿಡಿದು ಅವನ ಹತ್ತಿರ ಇದ್ದ ರಟ್ಟಿನ ಬಾಕ್ಸನ್ನು ಚೆಕ್ ಮಾಡಲಾಗಿ, ಸದರಿ ಬಾಕ್ಸನಲ್ಲಿ ಓರಜಿನಲ್ ಚಾಯಿಸ್ ಕಂಪನಿಯ 180 ಎಮ್ ಎಲ್ ಅಳತೆಯ ಮದ್ಯ ತುಂಬಿದ ಒಟ್ಟು 32 ರಟ್ಟಿನ ಪೌಚಗಳು ಇದ್ದವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ಸದರಿ ವ್ಯೆಕ್ತಿಯ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ನಜೀರ ತಂದೆ ಇಸಾಕ ಪಟೇಲ ಸಾ|| ಬಜಾರ ಗಲ್ಲಿ ಅಫಜಲಪೂರ ಎಂದು ತಿಳಿಸಿದನು. ಸದರಿಯವನಿಂದ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ. ಶೇಖ ನಜೀರ ತಂದೆ ಶೇಖ ಬಸಿರ ಅಹೇಮದ ಸಾ; ಸುಣ್ಣದ ಭಟ್ಟಿ ಹತ್ತಿರ ಅಬುಬಕರ ಕಾಲೂನಿ ರಿಂಗರೋಡ ಕಲಬುರಗಿ. ರವರು ದಿನಾಂಕ.4-2-2015 ರಂದು ರಾತ್ರಿ. ಫಿರ್ಯಾದಿ ಮತ್ತು ಶೇಖ ಇರ್ಷಾಧ ಸೌಧಗರ ತಂದೆ ಶೇಖ ಮಹಿಬೂಬ ಸಾಬ ಸೌಧಗರ ಮತ್ತು ಮಹಮ್ಮದ ಮೊಯಿನೊದ್ದಿನ ತಂದೆ ಫರೀದ ಅಹೇಮದ ಸಾ; ಬುಲಂದ ಪರ್ವೆಜ ಕಾಲೂನಿ ಕಲಬುರಗಿ  ಇವರು ಮಹಮ್ಮದ ರಫೀಕ ಚೌಕ ಹತ್ತಿರ  ಹೊಟೆಲದಲ್ಲಿ ಚಹಾ ಕುಡಿದು ಬರುವಾಗ  ಮಹಮ್ಮದ ರಫೀಕ ಚೌಕ ಹತ್ತಿರ  ರಿಂಗರೋಡ ಮೇಲೆ ನಿಂತಿರುವ  ಒಂದು ಹೀರೋ ಹೊಂಡಾ ಸ್ಪ್ಲೆಂಡರ ಮೋಟಾರ ಸೈಕಲನಂ.ಕೆ.ಎ.39 ಜೆ. 9183 ನೆದ್ದನ್ನು  ಶೇಖ ಇರ್ಷಾಧ ಸೌಧಗರ ತಂದೆ ಶೇಖ ಮಹಿಬೂಬ ಸಾಬ ಸೌಧಗರ  ಮತ್ತು ಮಹಮ್ಮದ ಮೊಯಿನೊದ್ದಿನ ತಂದೆ ಫರೀದ ಅಹೇಮದ ಇಬ್ಬರು ಕೂಡಿಕೊಂಡು ತೆಗೆಯುತ್ತಿರುವಾಗ ಅದೇ ವೇಳಗೆ ಸೇಡಂ ರಿಂಗರೋಡ ಕಡೆಯಿಂದ ಒಂದು  ಕೆ.ಎಸ್.ಆರ್.ಟಿ.ಸಿ. ಬಸ್ಸ ನಂ.ಕೆ.ಎ.32 ಎಫ್ಲ. 1798 ನೆದ್ದರ ಚಾಲಕನು ಬಸ್ಸನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡಿ ಬಂದು  ಶೇಖ ಇರ್ಷಾದ ಸೌಧಗರ ಮತ್ತು ಮಹಮ್ಮದ ಮೊಹಿನೊದ್ದಿನ ಇಬ್ಬರಿಗೆ ಡಿಕ್ಕಿ ಹೊಡೆದಿದ್ದರಿಂದ   ಶೇಖ ಇರ್ಷಾದ ಸೌಧಗರ ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮೃತ ಪಟ್ಟಿದ್ದು ಮತ್ತು ಮಹಮ್ಮದ ಮೊಯಿನೊದ್ದಿನ ತಂದೆ ಫರೀದ ಅಹೇಮದನಿಗೆ ಬಲಗಾಲಿಗೆ , ತಲೆಗೆ ಭಾರಿ ರಕ್ತಗಾಯವಾಗಿದ್ದು . ಸದರಿ ಬಸ್ಸ ಚಾಲಕ ತನ್ನ ಬಸ್ಸನ್ನು ಅಲ್ಲಿ ನಿಲ್ಲಿಸಿ ಬಸ್ಸ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಾಂತಕುಮಾರ ತಂದೆ ಬಸವರಾಜ ಉಳಾಗಡ್ಡಿ ಸಾ: ರಾಮ ತಿರ್ಥ ನಗರ ಕಲಬುರಗಿ ರವರು  ದಿನಾಂಕ 04-02-2015 ರಂದು ಸಾಯಂಕಾಲ ಖಾದ್ರಿ ಚೌಕ ಹತ್ತಿರ ಟಿವಿಷನ ಕ್ಲಾಸ ಮುಗಿಸಿಕೊಂಡು ಖಾದ್ರಿ ಚೌಕ ಮುಖಾಂತರ ನಡೆದುಕೊಂಡು ಮನೆಗೆ ಹೋಗುತ್ತಿರುವಾಗ ದೇವಿ ನಗರ ಕಮಾನ ಹತ್ತಿರವಿರುವ ಎ.ಟಿ.ಎಮ್ ಎದುರಿನ ರೋಡ ಮೇಲೆ ಹಿಂದಿನಿಂದ ಮೋ/ಸೈಕಲ ನಂಬರ ಕೆಎ-32 ಆರ್‌-8467 ನೇದ್ದರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ನನಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಎಡಗಾಲು ಮೊಳಕಾಲ ಕೆಳಗೆ ಭಾರಿಪೆಟ್ಟುಗೊಳಿಸಿ ಮೋ/ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಸಂಚಾರಿ ಠಾಣೆ : ದಿನಾಂಕ 31.01.2014 ರಂದು ಶ್ರೀಮತಿ ರಾಚಮ್ಮ ಗಂಡ ವಿರುಪಾಕ್ಷಪ್ಪಾ ಅಂಬಲಗಿ ಸಾ. ನೇತಾಗಿ ಚೌಕ ಕಲಬುರಗಿ ರವರು ಊದಿನಬತ್ತಿ ತರುತ್ತೆನೆಂದು ಹೇಳಿ ಜಿ.ಡಿ.ಎ. ಕಾಲೊನಿಯಲ್ಲಿರುವ ಅಗರಬತ್ತಿ ಕಾರ್ಖಾನೆಗೆ ನಡೆದುಕೊಂಡು ಹೋಗುತಿದ್ದಾಗ ಲಂಗೋಟಿ ಫೀರ ದರ್ಗಾ ರೋಡಿಗೆ ಇರುವ ಜಗನ್ನಾಥ ಡಿಂಪಲ ಇವರ ಮನೆಯಮುಂದೆ ರೋಡಿನಮೇಲೆ ನಡೆದುಕೊಂಡು ಹೋಗುತಿದ್ದಾಗ ಆರೋಪಿ ವೀನೋದ ಕುಮಾರ ತಂದೆ ಸುರೇಂದ್ರ ಜಗತಾಪ ಈತನು ತನ್ನ ಮೋಟಾರ ನಂ ಕೆ ಎ 32.ಇಎಚ್ 4036 ನೇದ್ದರ ಮೇಲೆ ಹಿಂದೆ ತನ್ನ ಅಣ್ಣನಾದ ಗಣೇಶ ಈತನನ್ನು ಕೊಡಿಸಿಕೊಂಡು ತನ್ನ ಮೋಟಾರ ಸೈಕಲನ್ನು ಹುಮನಾಬದ ಬೇಸ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಡೆದುಕೊಂಡು ಹೋಗುತಿದ್ದ ಫರ್ಯಾದಿ ತಾಯಿಯಾದ ಶ್ರೀ ರಾಚಮ್ಮ ಇವಳಿಗೆ ತಲೆಗೆ ಭಾರಿ ಪೆಟ್ಟಾಗಿ ಬಲಗಣ್ಣಿನ ಮೇಲ್ಬಾಗದಲ್ಲಿ ಬಾಯಿಗೆ ರಕ್ತಗಾಯವಾಗಿದ್ದು  ಮೋಟಾರ ಸೈಕಲ ಮೇಲೆ ಹಿಂದೆ ಕುಳಿತ ಗಣೇಶ ತಂದೆ ಸುರೇಂದ್ರ ಜಗತಾಪ ಈತನಿಗೆ ಈತನಿಗೂ ಕುತ್ತಿಗೆ ಹಿಂದಿನ ಭಾಗಕ್ಕೆ ಮತ್ತು ತಲೆಗೆ ಪೆಟ್ಟಾಗ್ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಡಾ|| ಮಲ್ಲಿಕಾರ್ಜುನ ಎಮ್ ಸಾವರಕರ ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜು ಕರಜಗಿ ರವರು  ಸುಮಾರು 6 ವರ್ಷಗಳಿಂದ ಕಾಲೇಜಿನ ಪ್ರಾಂಶುಪಾಲ ಅಂತಾ ಕೆಲಸ ಮಾಡಿಕೊಂಡಿರುತ್ತೆನೆ. ನಮ್ಮ ಕಾಲೇಜಿಗೆ ಸರಕಾರದಿಂದ  ಒಂದು ಜರಾಕ್ಸ ಮಶೀನ್ ಹಾಗೂ ಒಂದು ಯು.ಪಿ.ಎಸ್ ಮಂಜೂರಾಗಿರುತ್ತವೆ, ಈ ಸಾಮಗ್ರಿಗಳನ್ನು ನಮ್ಮ ಕಾಲೇಜಿನ ಪ್ರಾಂಶುಪಾಲರ ವಿಶ್ರಾಂತಿ ಕೊಣೆಯಲ್ಲಿಟ್ಟಿರುತ್ತೆವೆ, ದಿನಾಂಕ 02-02-2015 ರಂದು ಸಾಯಂಕಾಲ 5:00 ಗಂಟೆ ಸಮಯಕ್ಕೆ ನಾನು ಮತ್ತು ನನ್ನ ಸಹಪಾಟಿ ಶಿಕ್ಷಕರೆಲ್ಲರು ಕಾಲೇಜಿನ ಎಲ್ಲಾ ಕೋಣೆಗಳಿಗೆ ಕೀಲಿ ಹಾಕಿ ಹೊಗಿರುತ್ತೆವೆ, ದಿನಾಂಕ 03-02-2015 ರಂದು 9:45   ಎ ಎಮ್ ಕ್ಕೆ ದಿನಂಪ್ರತಿಯಂತೆ ನಾನು ಮತ್ತು ನನ್ನ ಸಹೊದ್ಯೋಗಿಗಳಾದ ಶ್ರೀನಾಥ, ಪರಮೇಶ್ವರ, ದಯಾನಂದ, ಮಾಹಾಂತೇಶ, ರಾಜಕುಮಾರ ಹಿರೆಮಠ, ಹೀರೂ ರಾಠೋಡ, ಶರಣಪ್ಪ ಭೋವಿ ಎಲ್ಲರೂ ಕೂಡಿ ಕಾಲೇಜಿಗೆ ಬಂದು ನೋಡಲು ನಮ್ಮ ಕಾಲೇಜಿನಲ್ಲಿದ್ದ ಪ್ರಾಂಶುಪಾಲರ ವಿಶ್ರಾಂತಿ ಕೊಣೆಯ ಬಾಗಿಲು ಚಾವಿ ಮುರಿದಿತ್ತು, ನಂತರ ನಾವೆಲ್ಲರೂ ಕೋಣೆಯ ಒಳಗೆ ಹೋಗಿ ನೊಡಲು, ಕೋಣೆಯಲ್ಲಿದ್ದ ಜರಾಕ್ಸ ಮಶೀನ್ ಒಂದು ಯು.ಪಿ.ಎಸ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು, ಕಳ್ಳತನವಾದ ವಸ್ತುಗಳು ಒಟ್ಟು ಅಂದಾಜು 75,000/- ರೂ ಕಿಮ್ಮತ್ತಿನವು ಇರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಜೇವರ್ಗಿ (ಬಿ) ಹೊಲ ಸರ್ವೆ ನಂ 136/2 ವಿಸ್ತೀರ್ಣ 8 ಎಕರೆ 29 ಗುಂಟೆ ಜಮೀನು ಇರುತ್ತದೆ. ನಾವೆಲ್ಲರು ಒಟ್ಟಿಗೆ ಇದ್ದಾಗ ನಮ್ಮ ಭಾವ ಚಂದ್ರಶೇಖರ ಪಾಸೋಡಿ ರವರ ಹೆಸರಿಗೆ ಮಾಡಿರುತ್ತಾರೆ. ಸದ್ಯ 4 ವರ್ಷದ ಹಿಂದೆ ನಮ್ಮ ಭಾವ ಚಂದ್ರಶೇಖರ ರವರು ತೀರಿಕೊಂಡಿರುತ್ತಾರೆ. ಇಲ್ಲಿಯವರೆಗೆ ಸದರಿ ಜಮೀನು ನಮ್ಮ ಭಾವ ಚಂದ್ರಶೇಕರ ರವರ ಹೆಸರನಲ್ಲೇ ಇರುತ್ತದೆ. ಸದರಿ ಹೊಲದಲ್ಲಿ ನಾವೇ ಸಾಗುವಳಿ ಮಾಡುತ್ತಾ ಬಂದಿದ್ದು, ಅದರಲ್ಲಿ ಬಂದ ಲಾಭದಲ್ಲಿ ಎಲ್ಲರು ಸಮನಾಗಿ ಹಂಚಿಕೊಳ್ಳುತ್ತಾ ಬಂದಿರುತ್ತೇವೆ. ಈಗ ಸುಮಾರು ತಿಂಗಳಿಂದ ನಮ್ಮ ಭಾವ ಚಂದ್ರಶೇಕರ ರವರ ಹೆಂಡತಿ ಮಹಾದೇವಿ ಮತ್ತು ಅವರ ಮಕ್ಕಳಾದ ವಿಜಯಲಕ್ಷ್ಮೀ ಹಾಗು ರಾಜಶೇಖರ ರವರು ಸದರಿ ಹೊಲ ನಮ್ಮ ತಂದೆ ಹೆರಸರಿಗೆ ಇದೆ ಅದು ನಮಗೆ ಸೇರಿದ್ದು, ಅದರಲ್ಲಿ ಸಾಗುವಳಿ ಮಾಡಬೇಡಿ ಅಂತಾ ನಮ್ಮೋಂದಿಗೆ ತಕರಾರು ಮಾಡಿಕೊಳುತ್ತಾ ಬಂದಿರುತ್ತಾರೆ. ಈ ಬಗ್ಗೆ ಕೋರ್ಟನಲ್ಲಿ ದಾವೆ ಹೋಡಿದ್ದು ಇರುತ್ತದೆ. ಸದ್ಯ ಸದರಿ ಹೊಲದಲ್ಲಿ ನಾವು ಕಡ್ಲಿ ಬೆಳೆ ಬೆಳೆದಿರುತ್ತೇವೆ. ನಿನ್ನೆ ದಿನಾಂಕ 03-02-2015 ರಂದು ಬೆಳಿಗ್ಗೆ 09-00 ಗಂಟೆಗೆ ನಾನು ಮತ್ತು ನಮ್ಮ ಭಾವನ ಹೆಂಡತಿಯಾದ ಸಿದ್ದಮ್ಮ ಗಂಡ ಸಂಗಣ್ಣ ಪಾಸೋಡಿ, ಅಂಬುಬಾಯಿ ಗಂಡ ಶಾಂತಪ್ಪ ಪಾಸೋಡಿ ರವರೊಂದಿಗೆ ಸದರಿ ಹೊಲಕ್ಕೆ ಹೋದಾಗ ಮೇಲ್ಕಂಡ ಸದರಿ ಮಹಾದೇವಿ ಗಂಡ ಚಂದ್ರಶೇಖರ ಪಾಸೋಡಿ ಮತ್ತು ಅವರ ಮಕ್ಕಳಾದ ವಿಜಯಲಕ್ಷ್ಮೀ ಹಾಗು ರಾಜಶೇಖರ ಮತ್ತು ಮಹಾದೇವಿಯವರ ತಮ್ಮ ಹಣಮಂತ ತಂದೆ ಸಾತಲಿಂಗಪ್ಪಾ ಪಾವಲೆ ಸಾ|| ದುದ್ದನಿ ಇವರೆಲ್ಲರು ಸೇರಿಕೊಂಡು ನಮ್ಮ ಹೊಲದಲ್ಲಿ ನಾವು ಬೆಳೆದ ಕಡ್ಲಿ ಬೆಳೆಯ ರಾಶಿ ಮಾಡಲು ರಾಶಿ ಮಶೀನ ತೆಗದುಕೊಂಡು ಬಂದಿದ್ದರು. ಆಗ ನಾವು ಅವರಿಗೆ ವಿಚಾರಿಸಿದಾಗ ಮಹಾದೇವಿ ಇವರು ಈ ಹೊಲ ನನ್ನ ಗಂಡನ ಹೆಸರಿಗೆ ಇದೆ ಇದರಲ್ಲಿ ನಿಮದು ಯಾವುದೇ ಅಧಿಕಾರ ಇರುವುದಿಲ್ಲಾ ಅಂತಾ ಅಂದರು, ಆಗ ನಾವು ವಿರೋಧ ವ್ಯಕ್ತ ಪಡಿಸಿದ್ದಕ್ಕೆ ಮಹಾದೇವಿ ಮತ್ತು ಅವರ ಮಗಳು ವಿಜಯಲಕ್ಷ್ಮೀ ರವರು ನಮಗೆ ಹೋಗದಂತೆ ತಡೆದು ನಿಲ್ಲಿಸಿ ವಿಜಯಲಕ್ಷ್ಮೀ ಇವರು ನನಗೆ ಕೈಯಿಂದ ಎಳೆದು ಮೈಕೈಗೆ ಹೊಡೆದಿರುತ್ತಾರೆ. ರಾಜಶೇಖರ ಮತ್ತು ಹಣಮಂತ ಪಾವಲೆ ಇವರು ಈ ಸೂಳಿ ಮಕ್ಕಳದು ಬಹಳ ಸೊಕ್ಕಿದೆ ಇವತ್ತ ಜೀವ ಸಹಿತ ಬಿಡಬೇಡಿ ಹೊಡೆದು ಖಲಾಸ ಮಾಡರಿ ಅಂತಾ ಅನ್ನುತ್ತಿದ್ದರು. ಅಂತಾ ಶ್ರೀಮತಿ ನಿರ್ಮಲಾ ಗಂಡ ಸಾತಲಿಂಗಪ್ಪ ಪಾಸೋಡಿ  ಸಾ|| ಜೇವರ್ಗಿ (ಬಿ) ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.