POLICE BHAVAN KALABURAGI

POLICE BHAVAN KALABURAGI

31 December 2016

Kalaburagi District Reported Crimes

ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : 1) ಶಿವಪ್ಪ ತಂದೆ ಭಿಮರಾಯ ಬಿರಾಳ 2) ಭಿಮರಾಯ ಹಾಜಪ್ಪ ಕಾಂಬಳೆ ಹಾಗು ಇತರರು ನಾವು ಮಾರಡಗಿ ಎಸ್.ಎ ಗ್ರಮಾಮದ ನಿವಾಸಿಗಳಾಗಿದ್ದು 1) ದೇವಿಂದ್ರಪ್ಪ ತಂದೆ ನಾಗಣ್ಣ ದಂಡಿನ್ 2) ಸಂಗಣ್ಣ ನಾಗಣ್ಣ ದಂಡಿನ  ಇವರ ಹೊಲದಿಂದ ನಮ್ಮ ಹೊಲಗಳಿಗೆ ಕ್ಯಾನಲ್ ಮುಖಾಂತರ ನೀರು ಹರಿದು ಬರುವ ಕಾಲುವೆ ಇದ್ದು ಈ ಕಾಲುವೆಗಳಿಗೆ ದೇವಿಂದ್ರಪ್ಪ ಸಂಗಣ್ಣ ದಂಡಿನ್ ಇವರಿಬ್ಬರು ನಮ್ಮ ಹೊಲಗಳಿಗೆ ಅಂದರೆ  ಇವರ ಹೊಲದಿಂದ ಮುಂದಿನ ಹೊಲಗಳಿಗೆ ನೀರು ಹೋಗದಂತೆ ಕ್ಯಾನಲ್ ಕಾಲುವೆಗೆ 7/8 ದಿನಗಳವರೆಗೆ ಅಂದರೆ ಗೇಟ್ ಹಾಕುವವರೆಗು ಇವರ ಹೊಲದಲ್ಲಿರುವ ಕ್ಯಾನಲ್‌ಗೆ ತಾಡಪತ್ರಿಯಿಂದ ಅಡ್ಡ ಗಟ್ಟಿ ನೀರು ತೆಗತೆದುಕೊಳ್ಳುತ್ತಾರೆ ಮತ್ತು ಇವರ ಹೊಲದಿಂದ ಹಿಂದಕ್ಕೆ ಸಸರೆದು ನೀರು ನಿಲ್ಲುವ ಹಾಗೆ ಕಟ್ಟುತ್ತಾರೆ ಹಾಗು ಅಕ್ರಮವಾಗಿ ಕ್ಯಾನಲ್ ಮತ್ತು ರಸ್ತೆ ವಡೆದು ಅಂದರೆ ಸರಕಾರಿ ಮೇನ್ ರೋಡ್ ವಡೆದು ತಮ್ಮ ಹೊಲಗಳಿಗೆ 4-5 ಕಡೆ ನೀರು ಕಟ್ಟುತ್ತಾರೆ ನೀರು ಬಂದಾಗಿನಿಂದ ನೀರು ಹೋಗುವವರೆಗೆ ನಮಗೆ ಒಂದುಹನಿ ನೀರು ಬಿಡುವದಿಲ್ಲ ಹಗಲು ರಾತ್ರಿ ತಾವೆ ತೆಗೆದುಕೊಳ್ಳುತ್ತಾರೆ ಈ ರೀತಿ ನೀರು ಕಟ್ಟುತ್ತಾರೆ ನೀರು ಬಂದಾಗಿನಿಂದ ನೀರು ಹೋಗುವವರೆಗೆ ನಮಗೆ ಒಂದು ಹನಿ ನೀರು ಬಿಡುವದಿಲ್ಲ ಹಗಲು ರಾತ್ರಿ ತಾವೆ ತೆಗೆದುಕೊಳ್ಳುತ್ತಾರೆ ಈ ರೀತಿ ತೆಗೆದುಕೊಳ್ಳುವದರಿಂದ ನಮ್ಮ ಹೊಲಗಳಿಗೆ ನೀರು ಸಿಗದ ಕಾರಣ ನಮ್ಮ ಬೆಳೆಗಳು ಹಾಳಾಗಿರುತ್ತವೆ. ನಾವು ಬಂದು ನಮ್ಮ ಹೊಲಗಳಿಗೆ ನೀರು ಬಿಡಿರಿ ಕ್ಯಾನಲ್ಗೆ ಅಡ್ಡ ಕಟ್ಟಿರುವದನ್ನು ತೆಗೆಯಿರಿ ಎಂದು ಕೇಳಿದರೆ ಎಲೆ ಸೂಳೆ ಮಕ್ಕಳೆ ಎಲೇ ಸೂಳಿ ಮಕ್ಕಳೆ ನಿಮಗೆ ನೀರು ಕೊಡುವದಿಲ್ಲ ನಿಮ್ಮ ಬೇಳೆ ವನಗಲಿ ಹಾಳಾಗಲಿ ನಾ ಎನ್ಮಾಡ್ಲಿ ಒಂದು ವೇಳೆ ನಾವು ಅಡ್ಡಗಟ್ಟಿರುವದನ್ನು ತೆಗೆದರೆ ನಾವು ನಿಮ್ಮ ಜೀವ ಸಹಿತ ಉಳಿಸುವದಿಲ್ಲ ಹಿಗೆಂದು ನಮ್ಮೆಲ್ಲರಿಗೆ ಪ್ರಾಣ ಬೆದರಿಕೆ ಕೊಡುತ್ತಾರೆ ನಾವು ಬಡವರು ಇಂತಹ ಗುಂಡಗಳ ವಿರುದ್ಧ ಏನು ಮಾಡಲಿಕ್ಕೆ ಆಗುವದಿಲ್ಲ ಆದ್ದರಿಂದ ಈ ವರ್ಷ ನಮ್ಮ ಬೆಳೆಗಳು ನೀರು ಸಿಗಲಾರದೆ ಒಣಗಿ ಹಾಳಾಗಿವೆ ಆದ್ದರಿಂದ ನೀವುಗಳು ದೇವಿಂದ್ರಪ್ಪ ದಂಡಿನ್ ಸಂಗಣ್ಣ ದಂಡಿನ್ ಸಾ|| ಮಾರಡಗಿ ಇವರ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿಕೊಂಡು ನಮ್ಮ ಹೊಲಗಳಿಗೆ ಸರಿಯಾಗಿ ನೀರು ಸಿಗದಂತೆ ಮತ್ತು ಹಾನಿಯಾದ ಬೆಳೆಗಳ ಪರಿಹಾರ ಒದಗಿಸಿ ಕೊಡಬೇಕು ಮತ್ತು ಕಾನೂನಿಂದ ನ್ಯಾಯ ಸಿಗುವಂತೆ ಮಾಡಬೇಕು ಅಂತಾ ಶಿವಪ್ಪ ತಂದೆ ಭಿಮರಾಯ ಬಿರಾಳ  ಸಾ: ಮಾರಡಗಿ ಎಸ್.ಎ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

30 December 2016

Kalaburagi District Reported Crimes.

ಫರಹತಾಬಾದ ಠಾಣೆ : ದಿನಾಂಕ 29/12/2016 ರಂದು ಬೆಳಿಗ್ಗೆ 8-30 ಗಂಟೆಯ ಸುಮಾರಿಗೆ ಸೀತನೂರ ಗ್ರಾಮದಲ್ಲಿ ಆರೋಪಿತರು ಫಿರ್ಯಾದಿಯೊಂದಿಗೆ ನಿನ್ನೆ ದಿನಾಂಕ 28/12/2016 ರಂದು ನಿನ್ನ ತಾಯಿ ನಮ್ಮ ಮನೆಯ ಹತ್ತೀರ ಬಟ್ಟೆ ತೊಳೆಯಲು ಬೆರಬೆಡ ಅಂತಾಅಂದ್ರೂ ಬಟ್ಟೆತೋಲೆಯಲು  ಬ್ರುತ್ತಿದ್ದಾಳೆ ಅಂತಾಅವಾಚ್ಯ ಶಬ್ದಗಳಿಂದ ಬೈದು ತಲೆಗೆ  ಕಲ್ಲಿನಿಂದ ಹೋಡೆದು ರಕ್ತಗಾಯ  ಮಾಡಿ ಜೀವದಬೆದರಿಕೆ  ಹಾಕಿರುತ್ತಾರೆ ಅಂತಾ ಇತ್ಯಾದಿ ಸಾರಾಂಸವಿರುತ್ತದೆ ಆರೋಪಿತರು ಅರುಣಕುಮಾರ ತಂದೆ ಶರಣಗೌಡ ಪೊಲೀಸ್ ಪಾಟೀಲ ಸಂಗಡ ಇನ್ನು ಒಬ್ಬ ಸಾ// ಇಬ್ಬರೂ ಸೀತನೂರ ಸದರಿ ರವರ ವಿರುದ್ದ ಪ್ರಕರಣ ವರಿದಯಾದ ಬಗ್ಗೆ .
ಜೇವರ್ಗಿ ಠಾಣೆ : ದಿನಾಂಕ 29.12.2016 ರಂದು 14:30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ದೂರು ಅರ್ಜಿ ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ಮಾನ್ಯರವರಲ್ಲಿ ನಾನು ಮುನ್ನಾ ತಂದೆ ಮಹ್ಮದ್ ರಫೀ ವಯಾಃ 22 ವರ್ಷ, ಜಾತಿಃ ಮುಸ್ಲಿಂ ಉಃ ಗ್ಯಾರೇಜ ಕೆಲಸ ಸಾಃ ಬಿ.ಡಿ. ಕ್ವಾರ್ಟಸ್ ಮಂಡ್ಯ ಇದ್ದು ಈ ಅರ್ಜಿ ಮೂಲಕ ತಮ್ಮಲ್ಲಿ ವಿನಂತಿಸಿಕೊಳುವುದೆನೆಂದರೆ ನನಗೆ ಪರಿಚಯದ ಅಬ್ದುಲ್ ಖಾದರ ಇತನು ತನ್ನ ಲಾರಿ ನಂ ಕೆಎ-45-3807 ನೇದ್ದರಲ್ಲಿ ಎಳೆನೀರು ತೆಂಗಿನ ಕಾಯಿ ತುಂಬಿಕೊಂಡು ಮಂಡ್ಯದಿಂದ ಕಲಬುರಗಿಗೆ ಹೋಗಿ ಬಂದು ಮಾಡುತ್ತಾನೆ. ನಾನು ಕಲಬುರಗಿ ಬಂದೇ ನವಾಜ ದರ್ಗಾಕ್ಕೆ ಹೋಗಿ ನೊಡಿಕೊಂಡು ಬರುವ ಸಲುವಾಗಿ ಮೇಲೆ ನಮೂದಿಸಿದ ಎಳೆ ನೀರು ತೆಂಗಿನ ಕಾಯಿ  ತುಂಬಿದ ಲಾರಿಯಲ್ಲಿ ಕುಳಿತುಕೊಂಡು ದಿನಾಂಕ 26.12.2016 ರಂದು ರಾತ್ರಿ ಮಂಡ್ಯದಿಂದ ಕಲಬುರಗಿಗೆ ಬರುತ್ತಿದ್ದೆನುಲಾರಿಯಲ್ಲಿ ಅದರ ಕ್ಲೀನರ್ ಯಾಸೀನ ಸಹ ಇದ್ದನು, ಲಾರಿಯನ್ನು ಅಬ್ದುಲ್ ಖಾದರ ತಂದೆ ಕೆ.ಬಿ. ಮೊಹ್ಮದ್ ಈತನು ನಡೆಯಿಸುತ್ತಿದ್ದನು. ದಿ. 27.12.2016 ರಂದು ಶಹಾಪೂರ ಜೇವರಗಿ ಮಾರ್ಗವಾಗಿ ಕಲಬುರಗಿ ಕಡೆಗೆ ಬರುತ್ತಿದ್ದಾಗ ಜೇವರಗಿ-ಶಹಾಪೂರ ಮೇನ್ ರೋಡ ಚಿಗರಳ್ಳಿ ಕ್ರಾಸ್ ಪೆಟ್ರೊಲ್ ಪಂಪ ಹತ್ತಿರ ರೋಡಿನಲ್ಲಿ ರಾತ್ರಿ 11.15 ಗಂಟೆಯ ಸುಮಾರಿಗೆ ನಾನು ಕುಳಿತು ಬರುತ್ತಿದ್ದ ಲಾರಿ ಚಾಲಕ ಅಬ್ದುಲ್ ಖಾದರ್ ಈತನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಮುಂದೆ ರೋಡಿನಲ್ಲಿ ಬರುತ್ತಿದ್ದ ಒಂದು ವಾಹನಕ್ಕೆ ಸೈಡ ಕೊಡಲು ಒಮ್ಮೇಲೆ ಕಟ್ ಹೊಡೆದಾಗ ಲಾರಿ ರೋಡಿನ ಸೈಡಿನಲ್ಲಿ ಪಲ್ಟಿಯಾಗಿ ಬಿದ್ದಿರುತ್ತದೆ. ಆಗ ನನಗೆ ಎಡ ಕೈ ಮಣಿ ಕಟ್ ಹತ್ತಿರ ಮತ್ತು ಎಡ ಗಲ್ಲದ ಮೇಲೆ ಗಾಯವಾಗಿರುತ್ತದೆ. ಲಾರಿ ಮುಂದಿನ ಬಾಗ ಜಖಂಗೊಂಡಿರುತ್ತದೆ. ನಂತರ ಲಾರಿ ಕ್ಲೀನರ್ನು 108 ಅಂಬುಲೇನ್ಸ್ ವಾಹನಕ್ಕೆ ಕರೆ ಮಾಡಿದನು. ಸ್ಥಳಕ್ಕೆ ಬಂದ 108 ಅಂಬ್ಯುಲೆನ್ಸ್ ವಾಹನದಲ್ಲಿ ನಾನು ಜೇವರಗಿ ಸರಕಾರಿ ಆಸ್ಪತ್ರೆಗೆ ಬಂದು  ಉಪಚಾರ ಪಡೆದುಕೊಂಡು ನಂತರ ಹೆಚ್ಚಿನ ಉಪಚಾರ ಕುರಿತು ಅದೇ ಅಂಬ್ಯುಲೆನ್ಸ್ ವಾಹನದಲ್ಲಿ ಕಲಬುರಗಿ ಯುನೈಟೇಡ್ ಆಸ್ಪತ್ರೆಗೆ ಹೋಗಿ ಉಪಚಾರ ಪಡೆದುಕೊಂಡು ಮನೆಯಲ್ಲಿ ವಿಚಾರ ಮಾಡಿ ತಡಮಾಡಿ ಠಾಣೆಗೆ ಬಂದು ದೂರು ಅರ್ಜಿ ಸಲ್ಲಿಸಿರುತ್ತೇನೆ ಮತ್ತು ಲಾರಿ ಕ್ಲೀನರನಿಗೆ ಯಾವುದೇ ಗಾಯವಾಗಿರುವುದಿಲ್ಲಾ. ಮೇಲೆ ನಮೂದಿಸಿದ ಲಾರಿ ನಂ ಕೆಎ-45-3807 ನೇದ್ದರ ಚಾಲಕ ಅಬ್ದುಲ್ ಖಾದರ ಇತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಒಮ್ಮೇಲೆ ಕಟ್ ಹೊಡೆದರಿಂದ ಲಾರಿ ಪಲ್ಟಿಯಾಗಿರುತ್ತದೆ ಅದರಿಂದ ನನಗೆ ಗಾಯವಾಗಿದ್ದು ಕಾರಣ ಸದರಿ ಲಾರಿ ಚಾಲಕನ ವಿರುದ್ದ ಪ್ರಕರಣ ವರದಿಯಾದ ಬಗ್ಗೆ. 

29 December 2016

Kalaburagi District Reported Crimes.

ಚೌಕ ಪೊಲೀಸ್‌  ಠಾಣೆ : ದಿನಾಂಕ 28.12.2016 ರಂದು ನಸುಕಿನ ಜಾವ 2.00 ಗಂಟೆಯ ಸುಮಾರಿಗೆ ಚೌಕ ಪೋಲೀಸ ಠಾಣೆ ವ್ಯಾಪ್ತಿಯ ಹುಮನಾಬಾದ ರಿಂಗ್ ರೋಡ ಹತ್ತಿರ ಇರುವ ಮಹಾತ್ಮ ಗಾಂದಿ ಲಾರಿ ತಂಗುದಾಣದ ಹತ್ತಿರ ಪಕ್ಕದ ರಸ್ತೆಯ ಮೇಲೆ 7-8 ಜನರು ದರೋಡೆ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಡಕಾಯಿತಿದಾರರು, ಗುಂಪು ಕಟ್ಟಿಕೊಂಡು ಕೈಯಲ್ಲಿ ತಲವಾರ, ಮಚ್ಚು, ಲಾಂಗ, ಜಂಬ್ಯಾವನ್ನು ಹಿಡಿದುಕೊಂಡು ಮೋಟಾರ ಸೈಕಲಗಳು ಇಟ್ಟುಕೊಂಡು ದರೋಡ ಮಾಡುವ ಕುರಿತು ಹೊಂಚು ರೂಪಿಸಿಸುತ್ತಿದ್ದಾರೆಂದು ಖಚಿತವಾದ ಭಾತ್ಮಿ ಬಂದ ಮೇರೆಗೆ ನಾನು ಕೂಡಲೇ ನಮ್ಮ ಠಾಣೆಯ ಶ್ರೀ ಜಾಫರ ಅಲಿ ಎಎಸ್ಐ, ವಿಶ್ವನಾಥ ಪಿಸಿ 686, ಮೀರಯಾಸಿನ್ ಪಿಸಿ 948, ಬಂದೇನವಾಜ ಪಿಸಿ 429, ರಮೇಶ ಪಿಸಿ 1239,  ಪ್ರೇಮಸಿಂಗ್‌ ಪಿಸಿ 972, ಕನಯ್ಯಾಲಾಲ ಪಿಇಸ 438, ನರೇಂದ್ರ ಹೆಚ್‌ಜಿ 30 ರವರಿಗೆ ಠಾಣೆಗೆ ಬರಮಾಡಿಕೊಂಡು ಮತ್ತು ಇಬ್ಬರು ಪಂಚಜನರಾದ 1) ಶ್ರೀ ಮಹ್ಮದ ಜಾವೀದ @ ಪಪ್ಪು ತಂದೆ ಮಹ್ಮದ ಜಿಲಾನಿ ಶೇಕ ವಯಃ 23 ವರ್ಷ ಜಾಃ ಮುಸ್ಲಿಂ ಉಃ ಸೆಂಟರಿಂಗ್‌ ಕೆಲಸ ಸಾಃ ಫಿಲ್ಟರ್‌ ಬೆಡ್‌ ಆಶ್ರಯ ಕಾಲೋನಿ ಕಲಬುರಗಿ 2) ಶ್ರೀ ಅಂಬರೇಶ ತಂದೆ ಭಗವಾನರಾವ ಪುರಮಕರ ವ: 32 ಜಾತಿ: ಭೋವಿ ಉ: ವ್ಯಾಪಾರ ಸಾ: ಬಂಬು ಬಜಾರ ಕಲಬುರಗಿ ರವರಿಗೆ ಠಾಣೆಗೆ ಬರಮಾಡಿಕೊಂಡು ಅವರಿಗೂ ಸಹ ಮೇಲಿನ ವಿಷಯ ತಿಳಿಸಿ ಪಂಚರಾಗಲು ವಿನಂತಿಸಿಕೊಂಡಿದ್ದು ಅವರು ಒಪ್ಪಿಕೊಂಡ ನಂತರ ಈ ಮೇಲಿನ ಎಲ್ಲಾ ವಿಷಯವನ್ನು ನಮ್ಮ ಮೇಲಾಧಿಕಾರಿಗಳಾದ ಮಾನ್ಯ ಎಸ್.ಪಿ. ಸಾಹೇಬರು ಕಲಬುರಗಿ, ಮಾನ್ಯ ಅಪರ ಎಸ್.ಪಿ. ಸಾಹೇಬರು ಕಲಬುರಗಿ, ಮಾನ್ಯ ಡಿ.ಎಸ್.ಪಿ. ಸಾಹೇಬರು, ಬಿ ಉಪವಿಭಾಗ ಕಲಬುರಗಿ ರವರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ, ನಮ್ಮ ಠಾಣೆಯ ಸರಕಾರಿ ಜೀಪಿ ನಂ ಕೆಎ-32 ಜಿ-668 ನೇದ್ದರಲ್ಲಿ ಕುಳಿತುಕೊಂಡು ಠಾಣೆಯಿಂದ 2.30 ಎಎಮ್ ಕ್ಕೆ  ಹೋರಟು, ಬಾತ್ಮೀ ಬಂದ ಸ್ಥಳದ ಸಮೀಪದಲ್ಲಿ 2.45 ಗಂಟೆಗೆ ತಲುಪಿ ಮಹಾತ್ಮ ಗಾಂದಿ ಲಾರಿ ತಂಗುದಾಣದ ಹತ್ತಿರ ಪಕ್ಕದ ರಸ್ತೆಯ  ಪಕ್ಕದಲ್ಲಿ ಮರೆಯಾಗಿ ಹೊಗಿ ಜಾಡು ಹಿಡಿದು ನೋಡಲು ಹುಮನಾಬಾದ ರಿಂಗ ರೋಡ ಪಕ್ಕದಲ್ಲಿರುವ ಲಾರಿ ತಂಗುದಾಣದ ತಗ್ಗಿನಲ್ಲಿ ದರೋಡೆಖೊರರು ಗುಜುಗುಜು ಮಾತಾಡುವ ಶಬ್ದ ಕೆಳಿಸಿತು ಆಗ ನಾವೆಲ್ಲರು ಬರುವದನ್ನು ಗಮನಿಸಿ ಓಡರೋ ಓಡರೋ ಭಾಗೋ ಭಾಗೋ ಅನ್ನುತ್ತಾ ಒಂದೇ ಸವನೆ ಓಡ ತೊಡಗಿದರು. ಕೂಡಲೆ ನಾವೆಲ್ಲರು  ಒಮ್ಮಲೆ ಎಲ್ಲರೂ ಎಲ್ಲಾ ಕಡೆಗಳಿಂದ ಸುತ್ತುವರಿದು ಧಾಳಿ ಮಾಡಿ ಹಿಡಿಯುವಷ್ಟರಲ್ಲಿ ನಾಲ್ಕು ಜನರಿಗೆ ಹಿಡಿದುಕೊಂಡಿದ್ದು, ನಾಲ್ಕು ಜನರು ಕತ್ತಲಲ್ಲಿ ಮುಳ್ಳು ಕಟ್ಟೆಯಲ್ಲಿ ಓಡಿಹೋಗಿ ತಪ್ಪಿಸಿಕೊಂಡಿದ್ದು ಸದರಿ 4 ಜನರನ್ನು ರಿಂಗ ರೋಡಿನ  ಮೇಲೆ ಕರೆದುಕೊಂಡು ಬಂದು ಅವರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ, ಒಬ್ಬನು  ತನ್ನ ಹೆಸರು 1) ಕುಮಾರ ಜಾಧವ ತಂದೆ ಶರತಚಂದ ಜಾಧವ ವಯಃ 19 ವರ್ಷ ಜಾಃ ಲಂಬಾಣಿ ಉಃ ಅಟೋ ಚಾಲಕ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ, 2) ಓಂಕಾರ @ ವಕೀಲ ತಂದೆ ಸೋಮಸಿಂಗ್‌ ರಾಠೋಡ ವಯಃ 19 ವರ್ಷ ಜಾಃ ಲಂಬಾಣಿ ಉಃ ಇಟಂಗಿ ಭಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ, 3) ಬೀರಪ್ಪ ತಂದೆ ಪ್ರಕಾಶ ಐನಾಪೂರ ವಯಃ 19 ವರ್ಷ ಜಾಃ ಪೂಜಾರಿ ಉಃ ಇಟಂಗಿ ಭಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ, 4) ಪಿಂಟಪ್ಪ ತಂದೆ ಗಂಗಾರಾಮ ರಾಠೋಡ ವಯಃ 19 ವರ್ಷ ಜಾಃ ಲಂಬಾಣಿ ಉಃ ಭಟ್ಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ  ಅಂತಾ ತಿಳಿಸಿದ್ದು, ಓಡಿ ಹೋದ ಆರೋಪಿತರ ಬಗ್ಗೆ ಕುಮಾರ ಜಾಧವ ಇತನಿಗೆ ವಿಚಾರಿಸಲು  1] ಕಿರಣ 2) ಜಾಫರ 3) ಆಕಾಶ 4) ಹೀರಾ  ಅಂತಾ  ಕುಮಾರ ಇತನು ತಿಳಿಸಿದ್ದು ಇರುತ್ತದೆ. ನಂತರ ಇಬ್ಬರು ಪಂಚರ ಸಮಕ್ಷಮ ಕಚೇರಿಗೆ ಒದಗಿಸಿದ ಪವರ ರ್ಫುಲ್ ಸರ್ಚಲೈಟ  ಬೆಳಕಿನಲ್ಲಿ ಮತ್ತು ನಮ್ಮ ಪೊಲೀಸ್ ವಾಹನದ ಲೈಟಿನ ಬೆಳಕಿನಲ್ಲಿ ನಾವೆಲ್ಲರು ಹಿಡಿದ 4 ಜನ ದರೊಡೆ ಮಾಡಲು ಸಂಚು ರೂಪಿಸಿ ಪ್ರಯತ್ನಿಸಿದವರನ್ನು ಅಂಗ ಶೋದನೆಯನ್ನು ಪ್ರತ್ಯೇಕವಾಗಿ ಪಂಚರ ಸಮಕ್ಷಮ ಮಾಡಲಾಗಿ 1]  ಕುಮಾರ ಜಾಧವ ತಂದೆ ಶರತಚಂದ ಜಾಧವ ವಯಃ 19 ವರ್ಷ ಜಾಃ ಲಂಬಾಣಿ ಉಃ ಅಟೋ ಚಾಲಕ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ  ಅಂತಾ ಎಂಬುವವನ ಹತ್ತಿರ ಒಂದು ತಲವಾರ ಅಃಕಿಃ 20 ರೂ ಮತ್ತು ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಣ್ಣದ ಬಟ್ಟೆ ಅಃಕಿಃ 00 ಹಾಗೂ ಒಂದು ಹೀರೋ ಹೊಂಡಾ ಹಿರೋ ಕೆಎ-32 ಇಜೆ-1746 ಅಃಕಿಃ 30,000/- ನೇದ್ದು, 2) ಓಂಕಾರ @ ವಕೀಲ ತಂದೆ ಸೋಮಸಿಂಗ್‌ ರಾಠೋಡ ವಯಃ 19 ವರ್ಷ ಜಾಃ ಲಂಬಾಣಿ ಉಃ ಇಟಂಗಿ ಭಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ,  ಎಂಬುವವನ ಹತ್ತಿರ ಒಂದು ತಲವಾರ ಅಃಕಿಃ 25 ರೂ  ಮತ್ತು ಜೇಬಿನಲ್ಲಿ ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಣ್ಣದ ಬಟ್ಟೆ ಅಃಕಿಃ 00,  ಒಂದು ಹೀರೋ ಹೊಂಡಾ ಹಿರೋ ಕೆಎ-32 ಇಬಿ-4736 ಅಃಕಿಃ 30,000/-, 3) ಬೀರಪ್ಪ ತಂದೆ ಪ್ರಕಾಶ ಐನಾಪೂರ ವಯಃ 19 ವರ್ಷ ಜಾಃ ಪೂಜಾರಿ ಉಃ ಇಟಂಗಿ ಭಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ ಎಂಬುವವನ ಹತ್ತಿರ ಒಂದು ಲಾಂಗ ಅಃಕಿಃ 20 ರೂ ಮತ್ತು ಜೇಬಿನಲ್ಲಿ ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಣ್ಣದ ಬಟ್ಟೆ ಅಃಕಿಃ 00,  ಹಾಗು ಖಾರದ ಪುಡಿ ಪ್ಯಾಕೇಟ ಅಃಕಿಃ 00 4)  ಪಿಂಟಪ್ಪ ತಂದೆ ಗಂಗಾರಾಮ ರಾಠೋಡ ವಯಃ 19 ವರ್ಷ ಜಾಃ ಲಂಬಾಣಿ ಉಃ ಭಟ್ಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ  ಎಂಬುವವನ ಹತ್ತಿರ ಕಾಗದದಲ್ಲಿ ಕಟ್ಟಿದ ಖಾರದ ಎರಡು ಪುಡಿಗಳು ಅಃಕಿಃ 00 ಹಾಗು ಜೇಬಿನಲ್ಲಿ ಮುಖಕ್ಕೆ ಕಟ್ಟಿಕೊಳ್ಳುವ ಮುಖವಾಡ ಕರಿ ಬಣ್ಣದ ಬಟ್ಟೆ ಅಃಕಿಃ 00,  ಒಂದು ಹಗ್ಗ ಅಃಕಿಃ 00, ದೊರೆತಿದ್ದು ಮತ್ತು ಅಲ್ಲೇ ಇದ್ದ ಎರಡು ಮೋಟಾರ ಸೈಕಿಲ್‌ಗಳ ಬಗ್ಗೆ ಸದರಿ ಆರೋಪಿತರಿಗೆ ವಿಚಾರಿಸಿದ್ದಾಗ ಸದರಿ ಮೋಟಾರ ಸೈಕಿಲ್‌ಗಳಲ್ಲಿ ಈ ಹೀರೋ ಹೊಂಡಾ ಹಿರೋ ಕೆಎ-32 ಇಎಪ್‌-6725 ನೇದ್ದು ಕಿರಣ ಇತನು ಉಪಯೋಗಿಸಿದ್ದು  ಹಾಗೂ ಮತ್ತು ಈ  ಹೊಂಡಾ ಸೈನ್‌ ಕೆಎ-32 ಯು-1513 ನೇದ್ದು  ಜಾಫರ  ಇತನು ಉಪಯೋಗಿಸಿದ್ದು ಇರುತ್ತವೆ ಅಂತಾ ತಿಳಿಸಿದ್ದು ಇರುತ್ತದೆ.   ಸ್ಥಳದಲ್ಲಿಯೆ ಬಿದ್ದಿರುವ ಹೀರೋ ಹೊಂಡಾ ಹಿರೋ ಕೆಎ-32 ಇಎಪ್‌-6725 ಅಃಕಿಃ 30,000/- ಹಾಗೂ ಹೊಂಡಾ ಸೈನ್‌ ಕೆಎ-32 ಯು-1513  ಅಃಕಿಃ 40,000/-  ರೂ  ಹೀಗೆ ದರೊಡೆ ಮಾಡಲು ಸಂಚು ರೂಪಿಸಿ ಸಿದ್ದತೆ ಮಾಡಕೊಂಡಿರುವವರಿಂದ ಒಟ್ಟು ಅಂದಾಜು 1,30,065/- ರೂ ಬೆಲೆ ಬಾಳುವದನ್ನು  ಪಂಚರ ಸಮಕ್ಷಮ ಇಂದು ದಿನಾಂಕ 28.12.2016 ರಂದು ಬೆಳಗಿನ ಜಾವ 03-00 ಗಂಟೆಯಿಂದ 04.30 ಗಂಟೆಯವರೆಗೆ ಜಪ್ತ ಮಾಡಿಕೊಂಡು ಸ್ಥಳದಲ್ಲೇ ಪಂಚನಾಮೆ ಜರಗಿಸಿ ನಂತರ ಸದರಿ ವಸ್ತಗಳನ್ನು ಪ್ರತ್ಯೇಕವಾಗಿ ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ತಾಬಾಕ್ಕೆ ತೆಗೆದುಕೊಂಡಿದ್ದು ಇರುತ್ತದೆ, ಈ  ಮೇಲೆ ನಮೂದ ಮಾಡಿದ 8  ಜನ ಆರೋಪಿತರಲ್ಲಿ ಓಡಿಹೋದವ 4 ಜನರ ಆರೋಪಿತರನ್ನು ಬಿಟ್ಟು ನಾಲ್ಕು ಜನರನ್ನು ಸಿಬ್ಬಂದಿಯವರ ಬೆಂಗಾವಲಿನಲ್ಲಿ ದಿನಾಂಕ: 28.12.2016 ರಂದು ಬೆಳಗಿನ ಜಾವ 05.15 ಗಂಟೆಗೆ ಠಾಣೆಗೆ ತಂದು ಈ ವರದಿಯೊಂದಿಗೆ ಜಪ್ತಿ ಪಂಚನಾಮೆ ಮತ್ತು ಜಪ್ತಿ ಮಾಡಲಾದ ಮುದ್ದೆ ಮಾಲನ್ನು ಠಾಣಾಧಿಕಾರಿ ಚೌಕ ಪೊಲೀಸ ಠಾಣೆ ರವರಿಗೆ ಒಪ್ಪಿಸಿದ್ದು ಅಲ್ಲದೆ ಇವರೆಲ್ಲರು ಈ ಮೊದಲಿನಿಂದಲೂ ಇಂತಹ ಕೃತ್ಯವನ್ನು ಮಾಡುವ ಅಪರಾಧ ಹಿನ್ನಲೆ ವುಳ್ಳವರಾಗಿರುವದ್ದಾರೆಂದು ವಿಚಾರಣೆಯಿಂದ ತಿಳಿದು ಬಂದಿದ್ದು  ಸದರಿ 8 ಜನರ  ವಿರುದ್ಧ ಕಾನೂನು ಪ್ರಕಾರ ಗುನ್ನೆ ವರದಿಯಾದ ಬಗ್ಗೆ ಮಾಹಿತಿ.
ರಾಘವೇಂದ್ರ ನಗರ ಪೊಲೀಸ್ ಠಾಣೆ : ದಿನಾಂಕ:28/12/2016 ರಂದು ಮದ್ಯಾನ 3.30 ಗಂಟೆಗೆ ಠಾಣಾ ವ್ಯಾಪ್ತಿಯಲ್ಲಿ ಬರುವ ಗ್ರೀನ್‌ ಸಕಲ್‌‌ ಹತ್ತಿರ ಒಬ್ಬ ವ್ಯಕ್ತಿ  ರಸ್ತೆಯ ಪಕ್ಕದಲ್ಲಿ  ನಿಂತು ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹೀತಿ ಬಂದಿದ್ದು ಆತನ ಮೇಲೆ ದಾಳಿ ಮಾಡುವುದು ಗೋಸ್ಕರ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಜೊತೆಯಲ್ಲಿ ಸಿಬ್ಬಂದಿ ಜನರಾದ 1)ಕಿಶೋರ ಪಿಸಿ.1010 2) ಗಂಗಾಧರ ಪಿ,ಸಿ, 642  ಮತ್ತು ಜೀಪ ಚಾಲಕ 3)ಶಿವಲಿಂಗಪ್ಪ ಪಿ,ಸಿ, 1241 ರವರನ್ನು ಜೊತೆಯಲ್ಲಿ ಕರೆದುಕೊಂಡು  ಜೀಪಿನಲ್ಲಿ ಕುಳಿತು ಮದ್ಯಾನ 3.45 ಗಂಟೆಗೆ ಠಾಣೆಯಿಂದ ಹೋರಟು ಮದೀನಾ ಕಾಲೋನಿ ಗ್ರೀನ್‌ ಸರ್ಕಲ್‌‌  ಸ್ವಲ ಮುಂದೆ ಇದ್ದಂತೆ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಸ್ವಲ್ಪ ಮುಂದೆ ಹೋಗಿ ಅಲ್ಲಿ ಒಂದು ಮನೆಯ ಮರೆಯಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು ರೂ ಗೆ 90 ರೂ ಕೊಡುತ್ತೇನೆ ಅಂತಾ ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆಯುತ್ತಾ ಒಂದು ಚೀಟಿ ತನ್ನ ಹತ್ತಿ ಇಟ್ಟುಕೊಂಡು ಇನ್ನೊಂದು ಚೀಟಿ ಸಾರ್ವಜನಿಕರಿಗೆ ಕೊಡುತ್ತಿದ್ದನು ಇದನ್ನು ನೋಡಿ ಖಚಿತ ಪಡಿಸಿಕೊಂಡು ಸಾಯಂಕಾಲ 4.15 ಗಂಟೆಗೆ ದಾಳಿ ಮಾಡಿ ಹಿಡಿದು ಆತನ  ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ತಜಮಲ್‌‌‌ ತಂದೆ ಫಕ್ರುದ್ದಿನ ಕಮಲಾಪುರವಾಲೆ  ||36 || ಆಟೋ ಚಾಲಕ ಸಾ|| ಇಲಾಹಿ ಮಜೀದ ಹತ್ತಿರ ಜಿಲಾನಾಬಾದ ಎಮ್,ಎಸ್,ಕೆ ಮಿಲ್ಲ್ ಕಲಬುರಗಿ ಅಂತಾ ತಿಳಿಸಿದನು  ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ 780=00 ರೂ ಮತ್ತು 6 ಮಟಕಾ ನಂಬರ ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ದೊರೆತಿದ್ದು  ಮುಂದಿನ ಪುರಾವೆ ಕುರಿತು ವಶಕ್ಕೆ ತೆಗೆದುಕೊಂಡಿದ್ದು ಒಪ್ಪಿಸಿದ್ದು ಸದರಿಯವನ ಮೇಲೆ ಕಲಂ 78(3) ಕೆ.ಪಿ ಆಕ್ಟ್‌ ಪ್ರಕಾರ ಗುನ್ನೆ ವರದಿಯಾದ ಬಗ್ಗೆ ಮಾಹಿತಿ. 

28 December 2016

Kalaburagi District Reported Crimes.

ಆಳಂದ ಪೊಲೀಸ್ ಠಾಣೆ : ದಿನಾಂಕ:27/12/2016 ರಂದು 08:30 ಪಿ.ಎಂ.ಕ್ಕೆ ಪಿರ್ಯಾದಿ ಶ್ರೀ.ರಾಜಾಬಾಹು ತಂದೆ ಶ್ರೀರಂಗ ಕಾಂಬಳೆ ವಯ: 51 ವರ್ಷ ಜಾ: ಬುದ್ದಿಷ್ಟ್‌ ಉ: ಟ್ರಾನ್ಸಪೋರ್ಟ ವ್ಯಾಪಾರ ಸಾ: ವೈಶಾಲಿ ಬುದ್ದ ವಿಹಾರ ಬೌದ್ದನಗರ ತಾ;ಜಿ ಲಾತೂರ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಅರ್ಜಿ ತಂದು ಹಾಜರಪಡಿಸಿದರ ಸಾರಾಂಶವೆನೆಂದರೆ ನಾನು ಮಾನ್ಯರಲ್ಲಿ ದೂರು ಸಲ್ಲಿಸುವದೇನೆಂದರೆ ನನ್ನದೊಂದು ಸೌತ್‌ ಇಂಡಿಯಾ ಟ್ರಾನ್ಸಪೋರ್ಟ ಸೈಲಾನಿ ಬಾಬಾ ದರ್ಗಾ ಎದರುಗಡೆ ಹೌಸಾ ರೋಡ  ಖೋಪೆಗಾಂವ ಲಾತೂರ ದಲ್ಲಿ ನನ್ನದೊಂದು ಟ್ರಾನ್ಸಪೋರ್ಟ ಇದ್ದು ಲಾರಿಯಲ್ಲಿ ಮಾಲು ತುಂಬಿ ಕಳುಹಿಸುತ್ತಾ ಬಂದಿರುತ್ತೇನೆ. ದಿನಾಂಕ: 22/12/2016 ರಂದು ರಾತ್ರಿ  11-30 ಗಂಟೆಯ ಸುಮಾರಿಗೆ ನಾನು ಲಾರಿ ನಂ:ಟಿ.ಎನ್‌ 88-ವಾಯ್‌-4199 ನೇದ್ದರಲ್ಲಿ ಲಾತೂರದಿಂದ ಸದರ ಲಾರಿಯ ಒಳಗಡೆ 70 ಕ್ವಿಂಟಲ್‌ ಹೆಸರು, ಮತ್ತು 30 ಕ್ವಿಂಟಲ್‌ ಉದ್ದು ಹಾಗು 110 ಕ್ವಿಂಟಲ್‌ ತೊಗರೆ ಹೀಗೆ ಒಟ್ಟು 21 ಟನ್‌ ದಾನ್ಯಗಳು ಅಕಿ: 12,80,000/- ರೂ ಕಿಮ್ಮತ್ತಿನ ಮಾಲು ತುಂಬಿರುತ್ತೇನೆ. ಸದರ ಲಾರಿಯ ಮೇಲೆ ಚಾಲಕ ಎಂದು ಸತೀಶಕುಮಾರ ತಂದೆ ಕಾರ್ತಿಯನ್‌ ವಯ: 36 ವರ್ಷ ಜಾ: ಮುತ್ತುರಾಜ ಉ: ಲಾರಿ ಚಾಲಕ ಸಾ: ಮೀನಾಕ್ಷಿಪುರಂ ಪೋಷ್ಟ್‌ ಕರಟಾಮಡ್ಡಿ ತಾ: ಮುಸರಿ ಜಿ: ತ್ರಿಚಿರಾಪಲ್ಲಿ ತಮಿಳುನಾಡು ಈತನಿರುತ್ತಾನೆ, ಈತನು ವಿಶ್ರಾತಿ ಮಾಢಿ ಬೆಳಗ್ಗೆ ಹೋಗುತ್ತೇನೆ ಎಂದು ಹೇಳಿದ್ದರಿಂದ 23/12/2016 ರಂದು ಬೆಳಗ್ಗೆ 10-00 ಎಎಮ್ ವೇಳೆಗೆ ಲಾತೂರದಿಂದ ತೂತ್ತುಕುಡಿ( ತುತ್ತುಕೋರಿನ್‌) ದಲ್ಲಿ ಧಾನ್ಯಗಳು ಮಾಲು ಕೊಟ್ಟು ಬರಲು ಹೇಳಿ ಕಳುಹಿಸಿರುತ್ತೇನೆ. ನಂತರ ದಿನಾಂಕ: 24/12/2016 ರಂದು ಮದ್ಯಾಹ್ನ 1-00 ಗಂಟೆಯ ಸುಮಾರಗೆ ಯಾರೋ ಮೋಬೈಲ್‌ ನಂ: 9960524408 ನೇದ್ದರಿಂದ ನನಗೆ ಮೊಬೈಲ್ ನಂ: 9156588555 ನೇದ್ದಕ್ಕೆ ಫೊನ್‌ ಮಾಡಿ ವಿಷಯ ತಿಳಿಸಿದ್ದೇನೆಂದರೆ; ನಿಮ್ಮ ಲಾರಿ ನಂ: ಟಿ.ಎನ್‌ 88-ವಾಯ್‌-4199 ನೇದ್ದು  ಹಂಗರಗಾ ನಳ್‌ ನಂದಗಾಂವ ರೋಡ ಹತ್ತಿರ ನಿಂತಿದ್ದು ನಿಮ್ಮ ಲಾರಿ ಚಾಲಕನಿಗೆ ಯಾರೋ ಬಹಳಷ್ಟು ಹೊಡೆದಿದ್ದಾರೆ ಆತನಿಗೆ ಮಾತಾಡಲು ಬರುತ್ತಿಲ್ಲ ಕೂಡಲೆ ಬರಲು ತಿಳಿಸಿದ್ದರಿಂದ ನಾನು ಮತ್ತು ನನ್ನ ಪಾರ್ಟನರ್‌ ಇಕ್ರಾಮ್‌ ಸೈಯದ್‌, ತಂದೆ ಸಮ್‌ದಾನಿ ಸೈಯದ್‌ ಹಾಗು ಸತೀಶ ಸಾಟೆ (ಮಾಸ್ತರ್‌), ಸೇಂದಿಲ್‌ ತಂದೆ ಚಂದ್ರಶೇಖರ್ ನಾಡರ ಇವರು ಕೂಡಿ ಸ್ಥಳಕ್ಕೆ ಹೋಗಿ ನೋಡಲು ನಮ್ಮ ಚಾಲಕನಿಗೆ ಎಡ ಕೈ ಮೆಲೆ ರಕ್ತಗಾಯವಾಗಿದ್ದು ಹೆಡಕಿಗೆ ಹೊಡೆದಿದ್ದರಿಂದ ಮಾತಾಡಲು ಸರಿಯಾಗಿ ಬರುತ್ತಿರಲಲ್ಲ ನಂತರ ನಮ್ಮ ಲಾರಿ ಚಾಲಕ ಸತೀಶಕುಮಾರ ಈತನಿಗೆ ವಿಚಾರಿಸಲು ವಿಷಯ ತಿಳಿಸಿದ್ದೇನೆಂದರೆ; ದಿನಾಂಕ: 23/12/2016 ರಂದು ಸಾಯಂಕಾಲ 630 ಗಂಟೆಯ ಸುಮಾರಿಗೆ ಆಳಂದ ಆರ್‌ಟಿಓ ಚೆಕ್‌ಪೋಷ್ಟ ದಾಟಿ ಮುಂದೆ ಸ್ವಲ್ಪ ದೂರದಲ್ಲಿ  ಹೋದಾಗ ಯಾರೋ ಇಬ್ಬರು ಜನರು ಮೋಟಾರ್ ಸೈಕಲ್ ಮೇಲೆ ಬಂದು ನಮ್ಮ ಲಾರಿಯ ಎದುರಿಗೆ  ಅಡ್ಡ ಹಾಕಿ ಲಾರಿ ನಿಲ್ಲಿಸಿ ಲಾರಿಯಲ್ಲಿ ಹತ್ತಿ ಭೋಸಡಿ ಮಗನೆ ಸೂಳೆ ಮಗನೆ ನೀನು ಲಾರಿ ಸೀದಾ ನಡೆಸಲು ಬರುವದಿಲ್ಲ ಎಂದು ಬೈದು ನನಗೆ ಕೈಯಿಂದ ಹೊಡೆದರು. ಮತ್ತು ಇನ್ನು 4 ಜನರು ಬಂದು ನನಗೆ ಬಾಯಿ ಒತ್ತಿ ಹಿಡಿದು ಚಾಕು ತೋರಿಸಿ ಆವಾಜ ಮಾಡಿದಿ  ಎಂದರೆ ನನಿಗೆ ಖಲಾಸ್‌ ಮಾಡುತ್ತೇವೆ ಎಂದು ಹೆದರಿಸಿ ನನ್ನ ಎರಡು ಕೈಗಳು ಹಿಂದೆ ಕಟ್ಟಿ ನನ್ನ ಲುಂಗಿಯಿಂದ ಎರಡು ಕಣ್ಣುಗಳು ಕಟ್ಟಿ ನನಗೆ ಕೆಳಗೆ ಹಾಕಿ ಇಬ್ಬರು ನನ್ನ ಮೇಲೆ ಕುಳಿತು ಒಬ್ಬನು ಲಾರಿಯನ್ನು ಚಲಾಯಸಿಕೊಂಡು ಹೋಗಿ ಎಲ್ಲಿಯೋ ಒಂದು ಕಡೆ ಲಾರಿ ನಿಲ್ಲಿಸಿ ಲಾರಿಯಲ್ಲಿದ್ದ 21 ಟನ್‌ ಧಾನ್ಯಗಳು ಖಾಲಿ ಮಾಡಿ ನಂತರ ನನಗೆ ನಳದುರ್ಗದ ಹತ್ತಿರ ಇರುವ ಹಂಗರಗಾ-ನಳ್ ಗ್ರಾಮ ನಂದಗಾಂವ ರೋಡ ಹತ್ತಿರ ನನಗೆ ಹೊಡದು ಇಲ್ಲಿಯೆ ಲಾರಿಯಲ್ಲಿ ಬಿಟ್ಟು ಹೋಗಿರುತ್ತಾರೆ ನಾನು ಲಾರಿಯಲ್ಲಿ ಟೂಲ್‌ ಭಾಕ್ಸದಲ್ಲಿಟ್ಟಿದ್ದ 20,000/- ನಗದು ಹಣ ಮತ್ತು 30,680/-ರೂ ಬೆಲೆ ಬಾಳುವ ಚೆಕ್‌ ಹಣ ಮತ್ತು ಓರಿಜನಲ್‌ ಲೈಸನ್ಸ ಹಾಗು 03 ತಾಡಪತ್ರೆಗಳು ಅಕಿ: 12000/- ರೂ ಇರಲಿಲ್ಲ ಎಲ್ಲ ತೆಗೆದುಕೊಂಡು ಹೋಗಿರುತ್ತಾರೆ. ಎಂದು ತಿಳಿಸಿದನು. ನಂತರ ನಾವು ಲಾರಿ ಚೆಕ್‌ ಮಾಡಲಾಗಿ ಲಾರಿಯಲ್ಲಿ ಯಾವುದೆ ಧಾನ್ಯಗಳು ಮತ್ತು ಹಣವಾಗಲಿ ಚೆಕ್ಕಾಗಲಿ ಇರಲಿಲ್ಲ. ನಂತರ ನಾವು ನಳದುರ್ಗ ಪೊಲೀಸ್ ಠಾಣೆಗೆ ಹೋಗಿ ವಿಷಯ ತಿಳಿಸಿದಾಗ ಅವರು ಆಳಂದಕ್ಕೆ ಹೋಗಿ ದೂರು ಕೊಡಲು ತಿಳಿಸಿದ್ದರಿಂದ ನಾವು ಮಾಲಿನವರೊಂದಿಗೆ ವಿಚಾರಿಸಿಕೊಂಡು ಬಂದು ದೂರು ನೀಡಲು ತಡವಾಗಿರುತ್ತದೆ. ಕಾರಣ ಯಾರೋ 6 ಜನರು ಕೂಡಿ ಆಳಂದ ಚೆಕ್‌ ಪೋಷ್ಟ ದಾಟಿ ಸ್ವಲ್ಪ ಮುಂದೆ ಹೋದಾಗ ಅಡ್ಡಗಟ್ಟಿ ಲಾರಿ ನಿಲ್ಲಿಸಿ ನಮ್ಮ ಲಾರಿ ನಂ; ಟಿ.ಎನ್‌ 88-ವಾಯ್‌-4199 ನೇದ್ದರ ಚಾಲಕನಿಗೆ ಹೊಡೆದು ಲಾರಿಯ ಒಳಗಡೆ ಇದ್ದ 70 ಕ್ವಿಂಟಲ್‌ ಹೆಸರು ಮತ್ತು 30 ಕ್ವಿಂಟಲ್‌ ಉದ್ದು ಹಾಗು 110 ಕ್ವಿಂಟಲ್‌ ತೊಗರೆ ಹೀಗೆ ಒಟ್ಟು 21 ಟನ್‌ ಧಾನ್ಯಗಳು ಅಕಿ: 12,80,000/- ರೂ ಮತ್ತು ಲಾರಿಯಲ್ಲಿ ಟೂಲ್‌ ಭಾಕ್ಸದಲ್ಲಿಟ್ಟಿದ್ದ 20,000/- ನಗದು ಹಣ ಮತ್ತು 30,680/- ರೂ ಬೆಲೆ ಬಾಳುವ ಚೆಕ್‌ ಹಣ ಹಾಗು 03 ತಾಡಪತ್ರೆಗಳು ಅಕಿ: 12000/- ರೂ ಬೆಲೆ ಬಾಳುವ ಮಾಲು ದರೋಡೆ  ಮಾಡಿಕೊಂಡು ಹೋಗಿರುತ್ತಾರೆ. ಸದರ ದರೋಡೆಕೋರರನ್ನು ಪತ್ತೆ ಮಾಡಿ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಿಲಾದ ಬಗ್ಗೆ ವರದಿ.           
ಅಫಜಲಪೊರ ಪೊಲೀಸ್ ಠಾಣೆ : ದಿನಾಂಕ 27-12-2016 ರಂದು 07:00 ಪಿ.ಎಮ್ ಕ್ಕೆ ಶ್ರೀ ಲಕ್ಷ್ಮಿಕಾಂತ ವಿತ್ರಾ ಸಹಾಯಕ ಕಾರ್ಯನಿರ್ವಾಹ ಅಭಿಯಂತರರು ಲೋಕಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಉಪ-ವಿಭಾಗ ಅಫಜಲಪೂರ ರವರ ಠಾಣೆಗೆ ಹಾಜರಾಗಿ ಟೈಪ ಮಾಡಿದ ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿಯ ಸಾರಾಂಶವೇನೆಂದರೆ ಶೀವಪೂರ ಸೀಮಾಂತರದ ಹೊಲ ಸರ್ವೇ ನಂ 5, 2/2/4 ರಲ್ಲಿ  330.00 ಘನ ಮೀಟರ ಮರಳು  ಅಂದಾಜು ಕಿಮ್ಮತ್ತು 2,14,500/- ನೇದ್ದು ಅಕ್ರಮ ಮರಳಿನ ಗುಡ್ಡೆಗಳನ್ನು ಸಂಗ್ರಹಿಸಿದ್ದು ಸದರಿ ಭೂ ಮಾಲಿಕರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಕೊರಿಕೊಂಡ ಮೇರೆಗೆ ಪ್ರಕಾರ ಪ್ರಕರಣ ದಾಖಿಲಾದ ಬಗ್ಗೆ ವರದಿ.
ಸ್ಟೇಷನ್ ಬಜಾರ ಪೊಲೀಸ್ ಠಾಣೆ :ದಿನಾಂಕ. 27/12/2016 ರಂದು 11-30 ಪಿ.ಎಮ್ ಕ್ಕೆ ಪಿರ್ಯಾಧಿ ರಾಜಕುಮಾರ ತಂದೆ ಧರ್ಮಪಾಲ ಕಿವುಡೆ ವ: 52 ಉ: ಖಾಸಗಿ ಕೆಲಸ ಜಾತಿ: ಜೈನ್ ಸಾ: ಮನೆ ನಂ. 8-589 ಭಗವಾನ ಮಾಹಾವೀರ ಮಾರ್ಗ ಆಸೀಪ್ ಗಂಜ ಮೇನ್ ರೋಡ ಕಲಬುರಗಿ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ಅರ್ಜಿ ಸಲ್ಲಿಸಿದ ಸಾರಾಂಶವೆನೆಂದರೆ ದಿನಾಂಕ. 15/10/2016  ರಂದು 9.00 ಪಿ.ಎಂ ಸುಮಾರಿಗೆ ನಾನು ನನ್ನ ಹೊಂಡಾ ಶೈನ್ ಮೋಟಾರ ಸೈಕಲ್ ನಂ. KA-32 VB-8442  ಚೆಸ್ಸಿನಂ. ME4JC365H98082675, .ನಂ. JC36E0172217 ,ಕಿ|| 25,000/- ರೂ ನೇದ್ದು ರೇಲ್ವೆ ಸ್ಟೇಷನ ಹತ್ತಿರ ಇರುವ ಮಾಹಾರಾಜ ಹೊಟೇಲ ಮುಂದುಗಡೆ ನಿಲ್ಲಿಸಿ ಹೊಟೇಲದಲ್ಲಿ ಚಹಾ ಕುಡಿದು ಮರಳಿ 9:20 ಪಿಎಮ್ ಸುಮಾರಿಗೆ ಬಂದು ನೋಡಲಾಗಿ ನನ್ನ ಹೊಂಡಾ ಶೈನ್ ಮೋಟರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಕಾರಣ ಸದರಿ ಹೊಂಡಾ ಶೈನ್ ಮೋಟಾರ ಸೈಕಲ್  ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಗೈರೆ ಪಿರ್ಯಾಧಿಯ ಪ್ರಕಾರ ದಾಖಿಲಾದ ಬಗ್ಗೆ ವರದಿ.

27 December 2016

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಪೊಲೀಸ್ ಠಾಣೆ.: ದಿನಾಂಕ: 17.09.2016 ರಂದು ಸಾಯಂಕಾಲ 5.00 ಗಂಟೆ ಶ್ರೀ ದೇವಿಂದ್ರಪ್ಪ ತಂದೆ ಮಹಾಂತಪ್ಪ ಮುದ್ದಾ ಸಾ: ಕಡಕೋಳ ಇವರು ದಿನಾಂಕ: 16.09.16 ರಂದು ಸಾಯಂಕಾಲ ನ್ನ  ತಾಯಿ ಶಂಕರೆಮ್ಮ ಮತ್ತು ನಮ್ಮೂರ ಪಾರ್ವತಿ ಗಂಡ ಹಣಮಂತರಾಯ ದೋರಿ ಇಬ್ಬರು ಕೂಡಿ ಜೇವರಗಿ ಪಟ್ಟಣದ ಅಂಬೇಡ್ಕರ ಸರ್ಕಲ ಹತ್ತಿರ ರೋಡಿನಲ್ಲಿ ಬರುತ್ತಿದ್ದಾಗ ಆ ಸಮಯಕ್ಕೆ ಮಿನಿ ವಿಧಾನ ಸೌದ ರೋಡಿನ ಕಡೆಯಿಂದ ನಂಬರ ಇಲ್ಲದ ಆಟೋ ರೀಕ್ಷಾ ಚಾಲಕ ಸುರೇಶ ತಂದೆ ಸಿದ್ದಪ್ಪ ಹಳ್ಳಿ ಸಾ: ಜೇವರಗಿ ಇತನು ತನ್ನ ಆಟೋ ರೀಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ತಾಯಿ ಶಂಕರಮ್ಮ ಮತ್ತು ಪಾರ್ವತಿ ದೋರಿ ಇವರಿಗೆ ಜೋರಾಗಿ ಡಿಕ್ಕಿ  ಪಡಿಸಿ ಬಾರಿ ಗಾಯಗೊಳಿಸಿ ತನ್ನ ಆಟೋ ರೀಕ್ಷಾದೊಂದಿಗೆ ಓಡಿ ಹೋಗಿದ್ದು ಶ್ರೀಮತಿ ಶಂಕರೆಮ್ಮ ಗಂಡ ಮಹಾಂತಪ್ಪ ಮುದ್ದಾ ಸಾ: ಕಡಕೊಳ ತಾ: ಜೇವರಗಿ, ಇವರಿಗೆ ಹಚ್ಚಿನ ಉಪಚಾರ ಕುರಿತು ವಾನಲೆಸ್ ಆಸ್ಪತ್ರೆ ಮಿರಜ್ ದಲ್ಲಿ ಸೇರಿಕೆಯಾಗಿದ್ದು, ಅವಳಿಗೆ ಉಪಚಾರ ಫಲಕಾರಿಯಾಗದೆ ದಿನಾಂಕ: 22.10.16 ರಂದು ಬೆಳಗಿನ ಜಾವ 05.45 ಗಂಟೆಗೆ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

26 December 2016

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಗಂಗಾರಾಮ ಮತ್ತು ತಿಮ್ಮಯ್ಯಾ ಇಬ್ಬರು ಕೂಡಿ ಹೊಂಡಾ ಶೈನ್ ಮೋಟಾರ ಸೈಕಲ್ ನಂ ಕೆಎ-01 ಇಎಮ್-0016 ನೇದ್ದರ ಮೇಲೆ ಕುಳಿತುಕೊಂಡು ಮಹಾಗಾಂವದಿಂದ ಕೆಲಸದ ಕುರಿತು ಕಲಬುರಗಿಗೆ ಬಂದು ಕೆಲಸ ಮುಗಿಸಿಕೊಂಡು ಮರಳಿ ಮಹಾಗಾಂವ ಹುಮನಾಬಾದ ರೋಡ ಇರುವ ಸಫಾರಿ ದಾಬಾ ಎದುರಗಡೆ  ಹೊರಟಿದ್ದು ಅದೇ ವೇಳೆಗೆ ಹಿಂದಿನಿಂದ ಅಂದರೇ ಕಲಬುರಗಿ ಕಡೆಯಿಂದ ಒಬ್ಬ ಕ್ರೋಜರ್ ಜೀಪ ನಂ ಕೆಎ-32 ಎಂ-7005 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಕ್ರೋಜರನ್ನು ಯಾವುದೇ ಹಾರ್ನ ವಗೈರೇ ಹಾಕದೇ ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದವನೇ ಸದರಿಯವರಿಬ್ಬರು ಕುಳಿತುಕೊಂಡು ಹೋಗುತ್ತಿದ್ದ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದು ಇದರಿಂದ ಫಿರ್ಯಾದಿ ಗಂಗಾರಾಮ ಮತ್ತು ತಿಮ್ಮಯ್ಯಾ ಇಬ್ಬರಿಗೆ ಭಾರಿ ಸ್ವರೂಪದ ಗಂಭೀರ ರಕ್ತಗಾಯ ಮತ್ತು ಗುಪ್ತಗಾಯಳಾಗಿದ್ದು ಅದರ ಉಪಚಾರ ಕುರಿತು ಕಲಬುರಗಿ ನಗರದ ಎ.ಎಸ್.ಎಂ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಸದರ ಪ್ರಕರಣದಲ್ಲಿ ಗಾಯಾಳುದಾರನಾದ ಶ್ರೀ ತಿಮ್ಮಯ್ಯಾ ತಂದೆ ಶರಣಪ್ಪ ಒಡ್ಡರ ಸಾ:ಸೂಗುರ ತಾ:ಚಿತ್ತಾಪುರ ಇತನು  ಗುಣ ಮುಖ ಹೊಂದದೇ ದಿನಾಂಕ 25-12-2016 ರಂದು ಸಾಯಂಕಾಲ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ರತ್ನಮ್ಮಾ ಗಂಡ ತಿಪ್ಪಯ್ಯಾ ಒಡ್ಡರ ಸಾ ಸೂಗುರ ತಾ : ಚಿತ್ತಾಪೂರ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಕಳವು ಪ್ರಕರಣ :
ಜೇವರಗಿ ಠಾಣೆ : ಜೇವರಗಿ ಠಾಣೆ : ದಿನಾಂಕ 24/12/16 ರಂದು ಬೆಳಗಿನ ಜಾವ 1-00 ಯಿಂದ 3-00 ಗಂಟೆಯ ಅವಧಿಯ ಮಧ್ಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ 6 ಚೀಲ ಹತ್ತಿ ಅಂ.ಕಿ. 21,000/- ರೂ ಕಿಮ್ಮತ್ತಿನದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಶ್ರೀ ರುದ್ರಮುನಿ ತಂದೆ ಅಮರಯ್ಯ ಹಿರೆಮಠ ಸಾ: ಆಂದೋಲಾ ಇವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

25 December 2016

Kalaburagi District Reported Crimes

ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ಅಣ್ಣರಾವ ತಂದೆ ಭೀಮಶ್ಯಾ ಪೊಲೀಸ್ ಪಾಟಿಲ್‌ ಸಾ: ಬಂಗರಗಾ ತಾ: ಆಳಂದ ಜಿ: ಕಲಬುರಗಿರವರ ಮಗ  ಭೀಮಾ @ ಭೀಮಶ್ಯಾ ತಂದೆ ಅಣ್ಣರಾವ 5 ದಿವಸ ಶಾಲೆಗಳು ರಜೆ ಇರುವದರಿಂದ ಮದ್ಯಾಹ್ನ ನನ್ನೊಂದಿಗೆ ಪೋನಿನಲ್ಲಿ ಮಾತಾಡಿ ಊರಿಗೆ ಬರುತ್ತೇನೆ ಎಂದು ಹೇಳಿ ಊರಿಗೆ ಹೊರಟಿದ್ದು ದಿನಾಂಕ: 24/12/2016 ರಂದು ಸಾಯಂಕಾಲ 06-30 ಗಂಟೆಗೆ ನಮ್ಮ ಸಂಬಂದಿಯಾದ ಬಸವರಾಜ ತಂದೆ ಗುಂಡಪ್ಪ ನಗದೆ ಸಾ: ಕೊಡಲ ಹಂಗರಗಾ ಇವರು ಪೋನ್‌ ಮಾಡಿ ವಿಷಯ ತಿಳಿಸಿದೆನೆಂದರೆ ಸಾಯಂಕಾಲ 05-45 ಗಂಟೆಯ ಸುಮಾರಿಗೆ ನಿಮ್ಮ ಮಗ ಭೀಮಾ @ ಭೀಮಶ್ಯಾ ಈತನು ಆಳಂದ ಪಟ್ಟಣದಲ್ಲಿ ರೇವಣಸಿದ್ದೇಶ್ವರ ಕ್ರಾಸ್‌ ಹತ್ತಿರ ರಜವಿ ರೋಡಿನ ಮೇಲೆ ಬಸ್‌ ನಿಲ್ದಾಣದ ಕಡೆಗೆ ಬರಲು ರೋಹನ್‌ ಮೆಡಿಕಲ್‌ ಎದುರಿಗೆ ನಡೆದುಕೊಂಡು ಬರುವಾಗ ಅವನ ಹಿಂದಿನಿಂದ ಅಂದರೆ ಉಮರ್ಗಾ ಕಡೆಯಿಂದ ಒಬ್ಬ ಲಾರಿ ನಂ: MH-16 AY-3639 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಓಡಿಸುತ್ತಾ ಬಂದು ಡಿಕ್ಕಿ ಪಡಿಸಿದ್ದರಿಂದ ಅವನು ಕೆಳಗಡೆ ಬಿದ್ದಾಗ ಅವನ ತಲೆ ಮೇಲೆ ಲಾರಿ ಹಾದು ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮುಖ ಎಲ್ಲಾ ಜೆಜ್ಜಿದಂತೆ ಆಗಿರುತ್ತದೆ. ಸದ್ಯ ಶವ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ. ನಿಮ್ಮ ಮಗನಿಗೆ ಡಿಕ್ಕಿ ಪಡಿಸಿದ ಚಾಲಕನ ಹೆಸರು ವಿಚಾರಿಸಲು ತನ್ನ ಹೆಸರು ಬಾಳಾಸಾಬ ತಂದೆ ಕುಂಡಲಿಕ್ ವೀರ  ಸಾ: ಆನಪಟವಾಡಿ ತಾ: ಪಾಟೋದಾ ಜಿ: ಬೀಡ ಎಂದು ಗೊತ್ತಾಗಿರುತ್ತದೆ. ಸದರ ಘಟನೆಯನ್ನು ರೋಡಿನ ಮೇಲೆ ಹೋಗುವ ಜನರು ಮತ್ತು ಅಕ್ಕ ಪಕ್ಕದವರು ನೋಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೆಡ್ಡಿಗೆ ಬೆಂಕಿ ಹಚ್ಚಿದ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 23/12/16 ರಂದು ಮದ್ಯಾಹ್ನ 2:30 ಗಂಟೆಯ ಸುಮಾರಿಗೆ ಶ್ರೀ ಶಿವರಾಯ  ತಂದೆ ಹಣಮಂತ ರಾಯ ಮಾಲಿ ಪಾಟೀಲ ಸಾ: ಸೀತನೂರ  ತಾ: ಕಲಬುರಗಿ ರವರಿಗೆ ಸಂಬಂದ ಪಟ್ಟ ಗ್ರಾಮದ ಮುಂದೆ ಇರುವ ಹೊಲದಲ್ಲಿರುವ ಪತ್ರಾಸ ಶೆಡ್ಡಿಗೆ ಶರಣಪ್ಪ ತಂದೆ ಬಸಣ್ಣ ಇನ್ನೂ 7 ಜನರು ಸಾ: ಎಲ್ಲರೂ ಸೀತನೂರ ಗ್ರಾನ ರವರು ಬೆಂಕಿ ಹಚ್ಚಿ ಅದರಲ್ಲಿದ್ದ ಒಕ್ಕಲುತನಕ್ಕೆ ಸಂಬಂದಿಸಿದ್ದ ವಸ್ತುಗಳು ಹಾಗೂ ಫರಸಿ, ಫತ್ರಾಸ ಇತರೆ ಸಾಮಾನುಗಳು ಹೀಗೆ ಒಟ್ಟು 70,000/- ರೂಪಾಯಿಗಳು ಕಿಮ್ಮತ್ತಿನ ವುಗಳನ್ನು ಸುಟ್ಟಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

23 December 2016

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ 22.12.2016 ರಂದು ಸಾಯಂಕಾಲ ಜೇವರಗಿ ಪಟ್ಟಣದ ಹೊರ ವಲಯದ ಸೊಮಣ್ಣಾ ಕಲ್ಲಾ ಇವರ ಹೊಲದ ಭಂಡಿ ದಾರಿ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಕೆಲವು ಜನರು ಹಣ ಪಣಕ್ಕೆ ಇಟ್ಟು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಜೂಜಾಟ ಆಡುತ್ತಿದ್ದಾರೆ ಅಂತ  ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಪ್ರದೀಪ ಎಸ್.ಭಿಸೆ ಪಿ.ಎಸ್.ಐ . ಜೇವರಗಿ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶ್ರೀ ಹೆಚ್.ಎಮ್. ಇಂಗಳೇಶ್ವರ ಸಿಪಿಐ ಜೇವರಗಿ ವೃತ್ತ ರವ ಮಾರ್ಗದರ್ಶನದಲ್ಲಿ  ಬಾತ್ಮೀ ಇದ್ದ ಸ್ಥಳದ ಸಮೀಪ ಹೋಗಿ ಬಂಡಿ ರಸ್ತೆ  ಪಕ್ಕದ ಗಿಡಕಂಠಿಗಳ ಮರೆಯಲ್ಲಿ  ನಿಂತು ನೋಡಲು  ಸದರಿ ರಸ್ತೆಯ  ಪಕ್ಕದಲ್ಲಿ ಖುಲ್ಲಾ ಸಾರ್ವಜನಿಕ  ಜಾಗೆಯಲ್ಲಿ ಕೆಲವು ಜನರು ಹಣ ಪಣಕ್ಕೆ ಹಚ್ಚಿ  ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ಕ್ಕೆ ದಾಳಿ ಮಾಡಿ ಅವರಿಗೆ ಹಿಡಿದುಕೊಳಲು ಹೋದಾಗ ಅವರಲ್ಲಿ ಒಬ್ಬನು ಓಡಿ ಹೋದನು ಸಿಕ್ಕವರಿಗೆ  ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ  1) ಖಾಲೀದ ತಂದೆ ಅಬ್ದುಲ್ ಸತ್ತಾರ  ಗುತ್ತೆದಾರ  ಸಾಃ ಟಿಪ್ಪುಸುಲ್ತಾನ ಚೌಕ ಜೇವರಗಿ 2) ಗುಂಡಪ್ಪ ತಂದೆ ಮರೆಪ್ಪ ಕುನ್ನೂರ  ಸಾ: ಕನಕದಾಸಚೌಕ ಜೇವರಗಿ . 3) ದೇವಿಂದ್ರಪ್ಪ ತಂದೆ ಶರಣಪ್ಪ ಗಂವ್ಹಾರ   ಸಾ: ಲಕ್ಮೀಚೌಕ ಜೇವರಗಿ  ಓಡಿ ಹೋದವನ ಹೆಸರು ಕೇಳಲಾಗಿ ಹೋಡಿ ಹೋದವನು ಶಿವಶಂಕರ ತಂದೆ ಮಲ್ಲಪ್ಪ ನಾಟೀಕಾರ ಸಾಃ ತಳವಾರ ಓಣಿ ಜೇವರಗಿ ಅಂತಾ ತಿಳಿಸಿದ್ದು ಜೂಜಾಟಕ್ಕೆ ಬಳಸಿದ ನಗದು ಹಣ 1150=00 ರೂ, 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ.22-12-2016 ರಂದು  ಮದ್ಯಾನ 1-00 ಗಂಟೆಯ ಸುಮಾರಿಗೆ ರಾಮತೀರ್ಥ ಗುಡಿಯ ಕಡೆಗೆ ಹೋಗುತ್ತಿರುವಾಗ ರೋಡಿನ ಪಕ್ಕದಲ್ಲಿ ಜಾಲಿ ಗಿಡದ ಕೆಳಗೆ ಒಬ್ಬ ವ್ಯಕ್ತಿ ಮಲಗಿದ್ದು ಮೃತ ಪಟ್ಟಿರುವ ಬಗ್ಗೆ ಜನರು ನೋಡುತಿದ್ದರು ಆಗ ನಾನು ಕೂಡಾ ಹೋಗಿ ನೋಡಲಾಗಿ ಒಬ್ಬ ಭೀಕ್ಷುಕನಂತೆ ಇರುವ  ಅಪರಿಚಿತ ವ್ಯಕ್ತಿ ಮಲಗಿದಲ್ಲಿಯೇ ಮೃತ ಪಟ್ಟಿದ್ದು, ಸದರಿ ಅಪರಿಚಿತ ವ್ಯಕ್ತಿಯ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ ವಯಸ್ಸು ಅಂದಾಜು 60-65 ವರ್ಷದವನಿದ್ದು   ಬಡಕಲು ಶರೀರ ಹೊಂದಿದ್ದು ,ಎತ್ತರ 5 ಫೀಟ, 2 ಇಂಚು ಇದ್ದು, ಸಾಧಗಪ್ಪು ಮೈಬಣ್ಣ ಹೊಂದಿದ್ದು ,ಮೈ ಮೇಲೆ  ಚಾಕಲೇಟ ಕಲರ ಅಂಗಿ ಮತ್ತು ಒಂದು ಮಾಸಿದ ಬನಿಯಾನ ಮಾತ್ರ ಇದ್ದು, ಸದರಿಯವನು ಅಶಕ್ತನಾಗಿದ್ದು,  ಯಾವುದೋ ಕಾಯಿಲೆಯಿಂದ, ಮಲಗಿದ ಸ್ಥಳದಲ್ಲಿಯೇ ಮೃತ ಪಟ್ಟಂತೆ ಕಂಡು ಬಂದಿರುತ್ತದೆ. ಅಂತಾ ಶ್ರೀ ಬ್ರಹ್ಮಮಾನಂದ ತಂದೆ ವಿಷ್ಣ ಕೋತುಳೆ ಸಾ;ರಾಮತೀರ್ಥ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 20-12-2016 ರಂದು ನಾನು ನನ್ನ ಹೆಂಡತಿಯಾದ ಲಲೀತಾ ಇಬ್ಬರು ಕೂಡಿಕೊಂಡು ನನ್ನ ಹೆಂಡತಿಯ ಅಕ್ಕನ ಮಗಳಾದ ಜ್ಯೋತಿ ಇವರಿಗೆ ವರ ನೊಡಿಕೊಂಡು ಬರಲು ಹೋಗೊಣ ಅಂತಾ ನನ್ನ ಹೆಂಡತಿಯ ಅಕ್ಕನವರು ಹೇಳಿದ್ದರಿಂದ ಸಾಯಂಕಾಲ 6 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಮನೆ ಮತ್ತು ಅಂಗಡಿಗಳಿಗೆ ಕೀಲಿ ಹಾಕಿಕೊಂಡು ಸಿಂದಗಿಗೆ ಹೋಗಿ ಅಲ್ಲಿಂದ ಒಂದು ಖಾಸಗಿ ವಾಹನ ತೆಗೆದುಕೊಂಡು ಸಿಂದಗಿಯಿಂದ ಬೆಂಗಳೂರಿಗೆ ದಿನಾಂಕ 21-12-2016 ರಂದು ಬೇಳಿಗ್ಗೆ ಹೊದೆವು ಅಲ್ಲಿ ಹೋಗುತ್ತಿದ್ದಂತೆ ನಮ್ಮೂರಿನ ಭೀಮಣ್ಣಗೌಡ ಇವರು ನನಗೆ ಫೋನ್ ಮಾಡಿ ಹೇಳಿದ್ದೆನೆಂದರೆ ನಿಮ್ಮ ಮನೆಯ ಎಲ್ಲಾ ಬಾಗಿಲಗಳು ತೆರದಂತಾಗಿವೆ  ಮನೆಯು ಕಳವು ಆದಂತೆ ಕಂಡುಬರುತ್ತದೆ ಅಂತಾ ಹೇಳಿದ ಕೂಡಲೆ ನಾವು ಬೆಂಗಳೂರಿನಿಂದ ಅದೆ ವಾಹನದಲ್ಲಿ ಕುಳಿತು ದಿನಾಂಕ 22-12-2016 ರಂದು ಬೆಳಿಗ್ಗೆ ಬಂದು ಮನೆಗೆ ಹೋಗಿ ನೊಡಲಾಗಿ ಮನೆಯ ಎಲ್ಲಾ ಬಾಗಲಿಗೆ ಹಾಕಿದ ಕೀಲಿಗಳು ಇರಲಿಲ್ಲ. ಬೆಡ್ ರೂಮ ಪಕ್ಕದ ರೂಮಿನಲ್ಲಿದ್ದ ಅಲಮಾರ ಕೆಳಗೆ ಹಾಕಿ ಅಲಮಾರದ ಬಾಗಿಲು ಕಿತ್ತಿ ಅಲಮಾರದಲ್ಲಿಟ್ಟ 1) 4 ತೊಲೆ ಬಂಗಾರದ ಪಾಟಲಿ (ಎರಡು ಬಂಗಾರದ ಬಳೆಗಳು.ಕಿ. 72,000/- ರೂ. 2)  3. ½  ತೊಲೆಯ ಬಂಗಾರದ ತಾಳಿಸರ ಅ.ಕಿ. 63,000/- ರೂ. 3) ಒಂದು ತೊಲೆಯ ಬಂಗಾರದ ಲಾಕಿಟು ಅ.ಕಿ. 20,000/- ರೂ. 4) 1. ½ ತೊಲೆಯ ಬಂಗಾರದ ನೆಕ್ಲೆಸ್ ಅ.ಕಿ. 30,000/- ರೂ ಆಗಿನ ಬೆಲೆಬಾಳುವ ವಸ್ತುಗಳು.   5) ಟ್ರಜರಿಯಲ್ಲಿದ್ದ ನಗದು ಹಣ 52,500/- ರೂ. ಗಳು ಹೀಗೆ ಒಟ್ಟು 2,37,500/- ರೂ ಗಳ ಮೌಲ್ಯದ ಬಂಗಾರ ಮತ್ತು ನಗದು ಹಣ ದಿನಾಂಕ 20-12-2016 ರಂದು ರಾತ್ರಿ 11-30 ರಿಂದ ದಿನಾಂಕ 21-12-2016 ರ ಬೆಳಿಗಿನ ಜಾವ 4 ಗಂಟೆಯ ಅವದಿಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಶ್ರೀ ಈರಯ್ಯ ತಂದೆ ಸಿದ್ದಯ್ಯ ಹಿರೇಮಠ ಸಾ|| ಅಲ್ಲಾಪೂರ ತಾ|| ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಅಂಬ್ರೀಶ ತಂದೆ ಶಿವಶರಣಪ್ಪಾ ದಂಡರಗೋಳ ಸಾ: ಸರಡಗಿ (ಬಿ) ತಾ: ಕಲಬುರಗಿ ರವರು ದಿನಾಂಕ 21-12-2016 ರಂದು ರಾತ್ರಿ ತಮ್ಮೂರಾದ ಸರಡಗಿ (ಬಿ) ಗ್ರಾಮ್ಕಕೆ ಹೋಗವ ಕುರಿತು ರಸ್ತೆಯ ಬಂದಿಯಲ್ಲಿ ಸುರಬೀ ಧಾಬಾದ ಮುಂದೆ ನಿಂತಾಗ ಕಲಬುರಗಿ ಕಡೆಯಿಂದ ಮೋಟಾರ ಸೈಕಲ ನಂಬರ ಕೆಎ 32 ಇಹೆಚ್ 4945 ನೇದ್ದರ ಸವಾರ ತನ್ನ ಮೋಟಾರ ಸೈಕಲ ಅತೀವೇಗ ಅಲಕ್ಷತ ನದಿಂದ ಚಲಾಯಿಸಿಕೊಂಡು ಬಂದು ಅಪಘಾತ ಪಡಿಸಿ ಗಾಯಗೊಳಿಸಿ  ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ. ಮರೇಪ್ಪ ತಂದೆ ಮಲ್ಲಪ್ಪ ಚಲವಾದಿ ಸಾ|| ಕೀರ್ತಿ ಕಾಲೇಜ ಹತ್ತಿರ ಪ್ರಶಾಂತ ನಗರ ರಾಜಾಪೂರ ರೋಡ ಕಲಬುರಗಿ ಇವರು ದಿನಾಂಕ: 20-12-2016 ರಂದು ರಾತ್ರಿ ತನ್ನ ಗೆಳೆಯನಾದ ಸಂಜುಕುಮಾರ ಯಳವಂತಗಿ ಇವರ ಮನೆಗೆ ಬಿಡಲು ನನ್ನ ಬೈಕ್ ಮೇಲೆ ಆಳಂದ ರೋಡ ದೇವಿನಗರ ಬಡಾವಣೆಗೆ ಹೋಗಿ ಗೆಳೆಯನನ್ನು ಮನೆಗೆ ಬಿಟ್ಟು ವಾಪಸ ಗೋವಾ ಹೋಟೆಲ ಮುಖಾಂತರ ಮನೆಗೆ ಹೊರಟ್ಟಿದೆ ರಾತ್ರಿ 11:30 ಗಂಟೆಗೆ ಟ್ಯಾಂಕ್ ಬಂಡ ರೋಡ ವಿಜ್ಞಾನ ಕೇಂದ್ರದ ಹತ್ತಿರ ಇಬ್ಬರು ಅಪರಿಚಿತರು ಪಲ್ಸರ್ ಗಾಡಿಯ ಮೇಲೆ ನನ್ನ ಹಿಂದೆ ಬಂದಿದ್ದು ಇನ್ನೋಬ್ಬ ಗಾರ್ಡನ ಓಳಗಡೆಯಿಂದ ಬಂದಿದ್ದು, ಬೈಕ್ ಮೇಲೆ ಇದ್ದವನು ನನ್ನ ಹತ್ತಿರ ಬಂದು ನನ್ನನ್ನು ಹಿಡಿದುಕೊಂಡು ನನಗೆ ಏ ಮಗನೆ ಸಿದಾ ಹೋಗು ಅಂತಾ ಅಂದವನೆ ಎಲ್ಲಾ 3 ಜನ ಕೂಡಿ ನನಗೆ ಕೈಗಳಿಂದ ಹೊಟ್ಟೆ, ಎದೆ, ಮುಖದ ಮೇಲೆ ಹೊಡೆದು ಗುದ್ದುತ್ತಾ ಓಳಪೆಟ್ಟು ಮಾಡಿ ನೆಲಕ್ಕೆ ಹಾಕಿದ್ದು, ಹಣೆಯ ಬಲಭಾಗ ರಕ್ತಗಾಯ ಆಗಿದ್ದು ಬಲವಂತವಾಗಿ ನನ್ನಲ್ಲಿದ್ದ 1)ಬಂಗಾರದ ಉಂಗುರ ತೂಕ 8 ಗ್ರಾಂ ಅ.ಕಿ:15000/- , 2) ನಗದು ಹಣ 11000/- ರೂ (2000 ನೋಟು-4 , 500-ನೋಟು 3, 100 ನೋಟು-15) 3)ಸ್ಯಾಮಸಂಗ್ ಜೆ-2 ಮೊಬೈಲ್ ಅದರಲ್ಲಿ ಸಿಮ್ ನಂ: 9845629564 ಮತ್ತು 8660505968 ಇದ್ದದ್ದು ಅ.ಕಿ:8500/- 4) ಸಿಟಿಜನ್ ಕೈ ಗಡಿಯಾರ ಅ.ಕಿ-1800/-  ಈ ಪ್ರಕಾರ ನನ್ನಲ್ಲಿದ್ದ ಬೆಲೆಬಾಳುವ ವಸ್ತುಗಳು ಹೆದರಿಸಿ ನನ್ನ ಮೇಲೆ ಹಲ್ಲೆ ಮಾಡಿ ಬಲವಂತವಾಗಿ ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಜೇವರಗಿ ಠಾಣೆ : ದಿನಾಂಕ: 23.12.2016 ರಂದು ಕಟ್ಟಿಸಂಗಾವಿ ಗ್ರಾಮದ ಭೀಮಾದನದಿಯಲ್ಲಿ ಮರಳು ಟ್ರ್ಯಾಕ್ಟರ್ಗಳಲ್ಲಿ ಕಳ್ಳತನದಿಂದ  ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಪ್ರದೀಪ. ಎಸ್. ಭಿಸೆ ಪಿ.ಎಸ್.ಐ  ಜೇವರ್ಗಿ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಿಪಿಐ ಜೇವರಗಿ ವೃತ್ತ ರವಮಾರ್ಗದರ್ಶನದಲ್ಲಿ ಕಟ್ಟಿಸಂಗಾವವಿ ಕಡೆಗೆ ಹೊರಟು ಕಟ್ಟಿ ಸಂಗಾವಿ ಗ್ರಾಮದ ಸಮೀಪ ಬ್ರೀಡ್ಜ ಹತ್ತಿರ ರೋಡಿನ ಪಕ್ಕದಲ್ಲಿ ನಿಂತು ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಬರುವದನ್ನು ಕಾಯುತ್ತ ನಿಂತು ನೋಡಲಾಗಿ, ಕಟ್ಟಿಸಂಗಾವಿ ಗ್ರಾಮದ ಕಡೆಯಿಂದ  ಜೇವರಗಿ ಕಡೆಗೆ ಮರಳು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರನ್ನು ನೋಡಿ ಕೈ ಮಾಡಿ ನಿಲ್ಲಿಸಲು ಹೋದಾಗ  ಸದರಿ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರ್ ನ್ನು ಸ್ಥಳದಲ್ಲಿಯೇ ಬಿಟ್ಟು ಕತ್ತಲಲ್ಲಿ ಓಡಿ ಹೋದನು ನಾವು ಬೆನ್ನು ಹತ್ತಿ ಹಿಡಯಲು ಪ್ರಯತ್ನ ಮಾಡಿದರೂ ಸಿಕ್ಕಿರುವುದಿಲ್ಲಾ  ನಂತರ ಸ್ಥಳದಲ್ಲಿದ್ದ ಟ್ಯಾಕ್ಟರನ್ನು  ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು 1) ಸ್ವರಾಜ ಕಂಪನಿ ಕಂಪನಿಯ ಟ್ರ್ಯಾಕ್ಟರ ಇದ್ದು ಅದರ ಮೇಲೆ ನಂಬರ ಇರುವುದಿಲ್ಲಾ ಅದರ ಇಂಜೀನ ನಂ 433008/SWL19321, ಚೆಸ್ಸಿ ನಂ WYCL43906152077 ನೇದ್ದು ಅದರ ಟ್ಯಾಲಿ ನಂ ಕೆಎ-32-ಟಿಎ- 5828 ಇದ್ದು ಅದರಲ್ಲಿ ಒಂದು ಬ್ರಾಸ್ ಮರಳು ಅ.ಕಿ. 1000/- ರೂ ಮತ್ತು ಟ್ರ್ಯಾಕ್ಟರ್ ಅ.ಕಿ. 3,00,000/- ರೂ ಆಗಬಹುದದು ಸದರಿ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕ ಸರಕಾದಿಂದ ಅಥವಾ ಸಂಭಂದ ಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಸರಕಾರಕ್ಕೆ ರಾಜ ದನ ಭರಿಸದೇ ಮಾಡಿ ಕಳ್ಳತನದಿಂದ ಕಟ್ಟಿ ಸಂಗಾವಿ ಭೀಮಾ ನದಿಯಿಂದ ಮರಳು ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿರುವದು ಕಂಡು ಬಂದಿದ್ದರಿಂದ ಸದರಿ ಟ್ರ್ಯಾಕ್ಟರ್ ನ್ನು ಮರಳು ಸಮೇತ ವಶಕ್ಕೆ ತೆಗೆದುಕೊಂಡು ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

22 December 2016

KALABURAGI DISTRICT REPORTED CRIME

ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ್ ಠಾಣೆ:  ದಿನಾಂಕ: 21/12/2016 ರಂದು ಶ್ರೀ ಮಹೇಶ ಶಾಖಾಧಿಕಾರಿ ಜೆ.ಎಸ್ ಕಂ ಶಹಾಬಾದ ಇವರು ಠಾಣೆಗೆ ಹಾಜರಾಗಿ ದಿನಾಂಕ: 19/12/2016 ರಂದು ಶಹಾಬಾದ ಏರಿಯಾದಲ್ಲಿ ಕೆ.ಇ.ಬಿ ಕಂಬ ಪರಿಶೀಲನೆ ಮಾಡುತ್ತಾ ಹೋದಾಗ ಶಹಾಬಾದ ವಾಡಿ ರಸ್ತೆಯ ಗುರುನಾಥ ಪೆಟ್ರೊಲ ಪಂಪ ಹತ್ತಿರ ರಸ್ತೆಯಲ್ಲಿ ಕೆ.ಇ.ಬಿ ಕಂಬಕ್ಕೆ ಯಾವುದೋ ವಾಹನ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಕೆ.ಇ ಬಿ ಕಂಬಕ್ಕೆ ಡಿಕ್ಕಿ ಪಡಿಸಿದ್ದರಿಂದ ಕೆ.ಇ.ಬಿ ಯ ಕಂಬ ಮತ್ತು ವೈರ ಒಟ್ಟು ಅ.ಕಿ 40,000-00 ರೂ ಕಿಮ್ಮತಿನ ಮಾಲು ಜೆ.ಎಸ್ ಕಂ ಇಲಾಖೆಗೆ ನಷ್ಟವಾಗಿರುತ್ತದೆ ಸದರಿ ವಾಹನದ ಚಾಲಕನು ಡಿಕ್ಕಿ ಪಡಿಸಿ ಓಡಿ ಹೋಗಿದ್ದರಿಂದ ಸದರಿ ವಾಹನ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ರೈತ ಆತ್ಮ ಹತ್ಯೆ ಪ್ರಕರಣ:

ನರೋಣಾ ಪೊಲೀಸ್ ಠಾಣೆ: ಶ್ರೀಮತಿ.ಸುಗಲಾಬಾಯಿ ಗಂಡ ಹಣಮಂತರಾಯ ಹತ್ತರಕಿ ಸಾ: ವ್ಹಿ ಕೆ ಸಲಗರ ರವರು ಫಿಯಾದಿ ಸಲ್ಲಿಸಿದ್ದೇನೆಂಧರೆ ತನ್ನ ಪತಿ ಹಣಮಂತರಾಯ ಇವರಿಗೆ ಒಟ್ಟು 17 ಎಕರೆ ಜಮೀನು ಇದ್ದು ಸದರಿ ಜಮೀನಿನ ಮೇಲೆ ಒಂದು ಲಕ್ಷ ರೂಪಾಯಿ ಕೆ.ಜಿ.ಬಿ ಬ್ಯಾಂಕಿನಿಂದ ಬೆಳೆಸಾಲ ಹಾಗೂ ಸಂಬಂಧಿಕರಲ್ಲಿ ಒಂದು ಲಕ್ಷ ಐವತ್ತು ಸಾವಿರ ರೂಪಾಯಿ ಕೈಗಡ ತಂದು ವ್ಯವಸಾಯಕ್ಕಾಗಿ ಖರ್ಚು ಮಾಡಿದ್ದು ಹೋದ ವರ್ಷ ಮಳೆ ಬಾರದಿದ್ದರಿಂದ ಬೆಳೆ ವಿಫಲವಾಗಿದ್ದು ಈ ವರ್ಷ ಹೆಚ್ಚಿನ ಪ್ರಮಾಣದ ಮಳೆ ಬಂದು ಹೊಲದಲ್ಲಿ ನೀರು ನಿಂತು ತೋಗರಿ ಸಜ್ಜೆ ಹಾಗೂ ಉದ್ದಿನ ಬೆಳೆ ಹಾನಿಯಾಗಿದ್ದು ಸಾಲ ತೀರಿಸಲು ಕೃಷಿಯೇ ಆಧಾರವಾಗಿದ್ದರಿಂದ ಈ ಎಲ್ಲಾ ಸಾಲವನ್ನು ಹೇಗೆ ತೀರಿಸಬೇಕೆಂದು ನನ್ನ ಪತಿ ಹಣಮಂತರಾಯನು ದಿಕ್ಕು ತೋಚದೆ ಮನನೊಂದುಕೊಂಡು ಹೊಲದಲ್ಲಿ ಕ್ರಿಮಿನಾಷಕ ಔಷದಿ ಸೇವನೆಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಲ್ಲಿಸಿದ ದೂರು ಶಋಆಂಶದ ಮೇಲಿಂದ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.