POLICE BHAVAN KALABURAGI

POLICE BHAVAN KALABURAGI

14 October 2018

KALABURAGI DISTRICT REPORTED CRIMES

ದನ ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಆಕಾಶ ತಂದೆ ಸಿದ್ದರಾಮ ಭಾಸಗಿ ಸಾ||ಶಿವೂರ ತಾ||ಅಫಜಲಪೂರ ರವರ  ಹೊಲ ಸರ್ವೇ ನಂ 122 ಶಿವೂರ ಸಿಮಾಂತರದಲ್ಲಿ ಇರುತ್ತದೆ ನಮ್ಮ ಹೊಲದಲ್ಲಿ ಮೆಟಗಿ ಇದ್ದು ದಿನಾಲು ನಮ್ಮ ಧನ ಕರುಗಳು ಮೇಯಿಸಿ ರಾತ್ರಿ ನಮ್ಮ ಹೊಲದಲ್ಲಿನ ಮೇಟಗಿ ಮುಂದೆ ಕಟ್ಟಿ ಮನೆಗೆ ಬರುತ್ತೇವೆ. ದಿನಾಂಕ 09/10/2018 ರಂದು ರಾತ್ರಿ 7..00 ಗಂಟೆ ಸುಮಾರಿಗೆ ಎಂದಿನಂತೆ ನಮ್ಮ ನಾಲ್ಕು ಎಮ್ಮೆಗಳು ಒಂದು ಎಮ್ಮೆ ಕರು ನಮ್ಮ ಹೊಲದಲ್ಲಿನ ಮೆಟಗಿ ಮುಂದೆ ಕಟ್ಟಿ ನಾನು ನಮ್ಮ ತಂದೆ ಮನೆಗೆ ಹೋಗಿರುತ್ತೇವೆ ಮರು ದಿನ ಅಂದರೆ ದಿನಾಂಕ 10/10/2018 ರಂದು ಬೇಳಿಗ್ಗೆ 6.00 ಗಂಟೆ ಸುಮಾರಿಗೆ ನಾನು ನಮ್ಮ ಹೊಲಕ್ಕೆ ಹೋಗಿ ಧನ ಕರುಗಳ ಹೆಂಡೆಕಸ ಮಾಡುತಿದ್ದಾಗ ನಮ್ಮ ನಾಲ್ಕು ಎಮ್ಮೆಗಳಲ್ಲಿ ಎರಡು ಎಮ್ಮೆ ನಾವು ಕಟ್ಟಿದ ಜಾಗದಲ್ಲಿ ಇರಲಿಲ್ಲ ನಂತರ ನಾನು ನಮ್ಮ ಹೊಲದಲ್ಲಿ ಹಾಗು ಆಜು-ಬಾಜು ರವರ ಹೊಲದಲ್ಲಿ ಹುಡುಕಾಡಿ ನಮ್ಮ ಬಾಜು ಹೊಲದವರಾದ ಮಹಾದೇವಪ್ಪ ದಿಂಡೂರ, ವಿಠ್ಠಲ ಪಟ್ನೆ ರವರಿಗೆ ವಿಚಾರಿಸಿ ನಂತರ ಮೂರು ಜನರು ಕೂಡಿ ಎಲ್ಲಾ ಕಡೆ ಹುಡುಕಾಡಿದರು ನಮ್ಮ ಎರಡು ಎಮ್ಮೆ ಎಲ್ಲಿ ಸಿಗಲಿಲ್ಲಾ ನಂತರ ನಾನು ಸದರಿ ವಿಷಯ ನಮ್ಮ ತಂದೆಗೆ ತಿಳಿಸಿ ನಾನು ನಮ್ಮ ತಂದೆ ಎಲ್ಲಾ ಕಡೆ ಹುಡುಕಾಡಿದರು ಎಲ್ಲಿ ಸಿಕ್ಕಿರುವುದಿಲ್ಲಾ ದಿನಾಂಕ 09/10/2018 ರಂದು ರಾತ್ರಿ 8.00 ಗಂಟೆಯಿಂದ ದಿನಾಂಕ 10/10/2018 ರ ಬೇಳಿಗ್ಗೆ 6.00 ಗಂಟೆ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ನಮ್ಮ ಹೊಲದಲ್ಲಿನ ಮೆಟಗಿ ಮುಂದೆ ಕಟ್ಟಿದ ಅಂದಾಜು 48,000 ರೂಪಾಯಿ ಕಿಮ್ಮತ್ತಿನ ಎರಡು ಎಮ್ಮೆ ಕಳ್ಳತನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಇಸ್ಪೀಟ ಜೂಝಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 12.10.2018 ರಂದು ಸಾಯಂಕಾಲ ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಬ್ರಹ್ಮಪೂರ ಬಡಾವಣೆಯ ಮಾಲ್ದಾರ ಮಜ್ಜಿದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದಿದ್ದು ಬಾತ್ಮಿ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಮಾಲ್ದಾರ ಮಜ್ಜಿದ ಹತ್ತಿರ ಹೋಗಿ ರಸ್ತೆಯ ಮೇಲೆ ಜೀಪನ್ನು ನಿಲ್ಲಿಸಿ ನಂತರ ಎಲ್ಲರು ಕೂಡಿಕೊಂಡು ನಡೆದುಕೊಂಡು ಮಾಲ್ದಾರ ಮಜ್ಜಿದ ಹಿಂದೆ ಹೋಗಿ ನೋಡಲು ಮಜ್ಜಿದ ಹಿಂದಿನ ಸಾರ್ವಜನಿಕ ಸ್ಥಳಲ್ಲಿ 6 ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜೂಜಾಟ ನಿರತರನ್ನು ವಶಕ್ಕೆ ಪಡೆದುಕೊಂಡು ನಂತರ ಸದರಿಯವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1. ಅಶೋಕಕುಮಾರ ತಂದೆ ಅಣ್ಣರಾವ ಪಾಟೀಲ ಸಾ: ಓಕಳಿ ಕ್ಯಾಂಪ ಸೇಡಂ ರೋಡ ಕಲಬುರಗಿ 2. ಸುರೇಶ ತಂದೆ ರೇವಣಸಿದ್ದಪ್ಪ ಹೂಗಾರ ಸಾ: ಕ್ರೀಷ್ಠಲ್ ಪ್ಯಾಲೇಶ ಹೋಟೆಲ ಹಿಂದುಗಡೆ ಕಲಬುರಗಿ ಸಿದ್ದಾರೋಡ ಕಾಲೋನಿ ಕಲಬುರಗಿ 3. ದಶರಥ ತಂದೆ ಅಂಬಾಜಿ ವಾಡಿ ಸಾ: ಶಹಾಬಾದ ರೋಡ ನೃಪತುಂಗ ಕಾಲೋನಿ ಕಲಬುರಗಿ 4. ಶಿವಶರಣಪ್ಪ ತಂದೆ ಸಂಗಣ್ಣ ಅಂಬಾಡಿ ಸಾ: ರಾಜಾಪೂರ ಕಾಲೋನಿ ಕಲಬುರಗಿ 5. ಚಂದ್ರಯ್ಯ ತಂದೆ ವೀರಪಾಕ್ಷಯ್ಯ ಮಠಪತಿ ಸಾ : ರಾಜಾಪೂರ ಕಾಲೋನಿ ಕಲಬುರಗಿ. 6. ವಿಶ್ವನಾಥ ತಂದೆ ಶಂಕರ ಸೋಮಾ ಸಾ: ಕುಂಬಾರಗಲ್ಲಿ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಲ್ಲೆ ಬಳಸಿದ  ನಗದು ಹಣ 4050/- ರೂಪಾಯಿ ಮತ್ತು 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.