POLICE BHAVAN KALABURAGI

POLICE BHAVAN KALABURAGI

21 August 2018

KALABURAGI DISTRICT REPORTED CRIMES

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 20-08-2018 ರಂದು  ಶಿವೂರ ಗ್ರಾಮದ ಹತ್ತಿರ ಇರುವ ಭೀಮಾನದಿಯಿಂದ ಟ್ರ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಿ ಪಿ ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಶಿವೂರ ಗ್ರಾಮದ ಭೀಮಾನದಿಯ ಹತ್ತಿರ ಹೋಗಿ ಸ್ವಲ್ಪ ದೂರು ಜೀಪ ನಿಲ್ಲಿಸಿ, ಮರೆಯಾಗಿ ನಿಂತು ನೊಡಲು, ಭೀಮಾನದಿಯಿಂದ ಮೂರು ಟ್ರ್ಯಾಕ್ಟರಗಳು ಮರಳು ತುಂಬಿಕೊಂಡು ಬರುತ್ತಿದ್ದವು. ಸದರಿ ಟ್ರ್ಯಾಕ್ಟರ ಚಾಲಕರು ಟ್ರ್ಟಾಕ್ಟರ ತಗೆದುಕೊಂಡು ನದಿಯ ದಡದ ಹತ್ತಿರ ಬರುತ್ತಿದ್ದಂತೆ ನಮ್ಮ ಇಲಾಖಾ ಜೀಪನ್ನು ನೋಡಿ ಟ್ರ್ಯಾಕ್ಟರಗಳನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೊದರು. ಆಗ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರಗಳನ್ನು ಚೆಕ್ ಮಾಡಲಾಗಿ ಟ್ರ್ಯಾಕ್ಟರಗಳಲ್ಲಿ ಮರಳು ತುಂಬಿದ್ದು ಇದ್ದು ಅವುಗಳ ನಂಬರ 1) SWARAJ 744FE NO KA-32 TB-2558 ಅಕಿ 5,00,000/-ರೂ . ಸದರಿ ಟ್ರ್ಯಾಕ್ಟರ ಟ್ರೈಲಿಯಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. 2) SONALIKA ENGINE NO 3105ELU83C71472F20 ಅಕಿ 5,00,000/-ರೂ . ಸದರಿ ಟ್ರ್ಯಾಕ್ಟರ ಟ್ರೈಲಿಯಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು  3) ARJUN MAHINDRA NO KA 32 TA 4606 ಅಕಿ 5,00,000/-ರೂ . ಸದರಿ ಟ್ರ್ಯಾಕ್ಟರ ಟ್ರೈಲಿಯಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ  ಆಗಬಹುದು  ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ರಾಜೇಶ್ವಿರ ಗಂಡ ಜಟ್ಟೆಪ್ಪ ಖ್ಯಾಡಗಿ ಸಾ|| ಬಡದಾಳ ಇವರು ರವರ ಗಂಡನನಾದ ಜಟ್ಟೆಪ್ಪ ಇತನು ನಮ್ಮ ಮನೆಯ ಸಂಸಾರದ ಅಡಚಣೆಗಾಗಿ ಮತ್ತು ಒಕ್ಕಲುತನ ಕೆಲಸಕ್ಕಾಗಿ ಖಾಸಗಿಯಾಗಿ 3 ಲಕ್ಷ ರೂಪಾಯಿ ಹಾಗೂ ನನ್ನ ಗಂಡನ ಹೆಸರಿನಲ್ಲಿದ್ದ 5 ಎಕರೆ 32 ಗುಂಟೆಯ ಹೊಲದ ಮೇಲೆ  ಎಸ್ಬಿಐ  ಬ್ಯಾಂಕದಲ್ಲಿ 2,50,000/- ರೂಪಾಯಿ ಸಾಲ ಮಾಡಿದ್ದು, ಈ ಸಾಲ ಹೇಗೆ ತೀರಸ ಬೇಕು ಈ ವರ್ಷ ಮಳೆ ಸರಿಯಾಗಿ ಬಂದಿರುವುದಿಲ್ಲಾ ಏನು ಮಾಡುವುದು ಅಂತಾ ನನ್ನ ಗಂಡ ನನಗೆ ಆಗಾಗ ಹೇಳುತ್ತಾ ಬಂದಿರುತ್ತಾನೆ ನಾನು ನನ್ನ ಗಂಡನಿಗೆ ಏನು ಮಾಡುವುದು ಮಳೆ ಮುಂದೆ ಸರಿಯಾಗಿ ಬಂದು ಸರಿಯಾಗೆ ಬೆಳೆ ಬೆಳೆದು ನಮ್ಮ ಸಾಲ ಮುಟ್ಟುತ್ತದೆ ನೀನು ಚಿಂತೆ ಮಾಡಬೇಡಾ ಅಂತಾ ಹೇಳುತ್ತಾ ಬಂದಿರುತ್ತೇನೆ.  ದಿನಾಂಕ 20-08-2018 ರಂದು ರಾತ್ರಿ 10.30 ಗಂಟೆಯ ಸುಮಾರಿಗೆ ನನ್ನ ಗಂಡ ಊಟ ಮಾಡುವಾಗ ನನ್ನೊಂದಿಗೆ ಸಾಲದ ವಿಚಾರವಾಗಿ ಮಾತನಾಡಿ ಊಟ ಮಾಡಿ ನಾನು ಹೊರಗಡೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿರುತ್ತಾನೆ, ನನ್ನ ಗಂಡ ರಾತ್ರಿ ಮನೆಗೆ ಬರದೆಯಿದ್ದರಿಂದ ಇಂದು ದಿನಾಂಕ:21-08-2018 ರಂದು ಬೆಳಿಗ್ಗೆ ಬಡದಾಳ ಗ್ರಾಮದಲ್ಲಿ ಎಲ್ಲಾ ಕಡೆ ಹುಡುಕಾಡಿದರು ನನ್ನ ಗಂಡ ಸಿಗಲಿಲ್ಲ ನಂತರ ನನ್ನ ಸಂಬಧಿಕರಾದ 1) ಚನ್ನಮಲ್ಲಪ್ಪ ತಂದೆ ಶರಣಪ್ಪ ಮಳಗೆ 2) ಶಿವಾನಂದ ತಂದೆ ಕಾಮಣ್ಣಾ ಪುಕಾಲೆ 3) ಮಂಜುನಾಥ ತಂದೆ ವಿಠಲ ಆನೂರ  ಎಲ್ಲರೂ ಕೂಡಿಕೊಂಡು ಹುಡುಕಾಡುತ್ತಾ ಬಡದಾಳ ಸೀಮಾಂತರದ ನಮ್ಮ ಹೊಲಕ್ಕೆ ಹೋದಾಗ ನನ್ನ ಗಂಡನು ನಮ್ಮ ಹೊಲದ ಬಂದಾರಿಗೆ ಇರುವ ಬೇವಿನ ಮರಕ್ಕೆ ನೇಣು ಹಾಕಿಕೊಂಡ ಸ್ಥತಿಯಲ್ಲಿದ್ದು ನಾವು ಗಾಭರಿಯಾಗಿ ಹತ್ತಿರ ಹೋಗಿ ನೋಡಲು ನನ್ನ ಗಂಡನು ಸದರಿ ಬೇವಿನ ಮರಕ್ಕೆ ಟವಾಲದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶಾಮರಾಯ ತಂದೆ ಬಸಣ್ಣ ಹಿಂದಿನಮನಿ ಸಾ||ಅಳ್ಳಗಿ(ಬಿ) ತಾ||ಅಫಜಲಪೂರ ರವರ ತಮ್ಮನಾದ ಕಾಶಿನಾಥ ಈತನು ದಿನಾಂಕ 19/08/2018 ರಂದು ಬೆಳಿಗ್ಗೆ ನಮಗೆ ತಿಳಿಸಿದ್ದೆನೆಂದರೆ ನಾನು ನಮ್ಮ ಮೋಟಾರ್ ಸೈಕಲ್ ನಂ ಕೆಎ-32 ಇಬಿ-6237 ನೇದ್ದರ ಮೇಲೆ ಇಂಡಿ ತಾಲೂಕಿನ ತಂಗಿ ಮನೆಯಾಗ ಬತಗುಣಗಿ ಗ್ರಾಮಕ್ಕೆ  ಹೋಗಿ ನಾಗರ ಪಂಚಮಿ ಕೋಬರಿ ಕುಬಸ ಕೊಟ್ಟು ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾನೆ  ದಿನಾಂಕ 19-08-2018 ರಂದು ಸಾಯಂಕಾಲ ನಾನು ನಮ್ಮ ಮನೆಯಲಿದ್ದಾಗ ನಮ್ಮ ಗ್ರಾಮದ ಶಿವಶರಣಪ್ಪ ತಂದೆ ಮಹಾಂತಪ್ಪ ಕುಮಸಗಿ ರವರು ನನ್ನ ಮೋಬೈಲಗೆ ಪೊನ್ ಮಾಡಿ ತಿಳಿಸಿದ್ದೆನೆಂದರೆ  ಈಗ ಸ್ವಲ್ಪ ಸಮಯದ ಹಿಂದೆ ಅಂದರೆ ಸಾಯಂಕಾಲ 5.30 ಗಂಟೆ ಸುಮಾರಿಗೆ ಭೋಸಗಾ ಕ್ರಾಸಗೆ ನಾನು ಹಾಗು ಮಲ್ಲಿಕಾರ್ಜುನ ತಂದೆ ಚಂದ್ರಶ್ಯಾ ಬುಜರಿ ಇಬ್ಬರು ನಮ್ಮ ಗ್ರಾಮಕ್ಕೆ ಬರುವ ಸಲುವಾಗಿ ನಿಂತಾಗ ಭೋಸಗಾ ಕ್ರಾಸ ಹತ್ತಿರ ಕರಜಗಿ ಕಡೆಯಿಂದ ನಿಮ್ಮ ತಮ್ಮನಾದ ಕಾಶಿನಾಥ ಈತನು ತನ್ನ ಮೋಟಾರ್ ಸೈಕಲ್ ಅತಿವೇಗ ಹಾಗು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಕ್ರಾಸ ದಾಟಿ ಅಫಜಲಪೂರ ಕಡೆ ಹೋಗುವ ರೋಡಿನ ಬಲಭಾಗದಲ್ಲಿ ಇರುವ ಸಂಚಾರ ಸುವ್ಯವಸ್ಥೆ ಸಲುವಾಗಿ ಹಾಕಿದ ಸಿಮೆಂಟಿನ ಕಲ್ಲಿಗೆ ಡಿಕ್ಕಿ ಹೊಡೆದು ಕಾಶಿನಾಥನು ರೋಡಿನ ಮೇಲೆ ಬಿದ್ದಿದ್ದು ಮೋಟಾರ್ ಸೈಕಲ ರೋಡಿನ ಪಕ್ಕ ಇರುವ ತಗ್ಗಿನಲ್ಲಿ ಬಿದ್ದಿರುತ್ತದೆ ಕಾಶಿನಾಥನ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ  ನೀವು ಬನ್ನಿ ಅಂತ ತಿಳಿಸಿದ ಬಳಿಕ ನಾನು ಹಾಗು ನಮ್ಮ ಗ್ರಾಮದ ಸಿದ್ದು ತಂದೆ ಆನಂದರಾಯ ಜವಳಿ, ಶರಣಗೌಡ ತಂದೆ ಹಣಮಂತರಾಯ ಜವಳಿ, ಕಲ್ಯಾಣಿ ತಂದೆ ಗುರಪ್ಪ ತಾವರಖೇಡ ಮತ್ತಿತರರು ಘಟನೆಯ ಸ್ಥಳಕ್ಕೆ ಬಂದು ನೋಡಿದ್ದು ನಮ್ಮ ತಮ್ಮನಾದ ಕಾಶೀನಾಥನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಬೆಳೆ ನಾಶಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಗುರುಶಾಂತಯ್ಯಾ ತಂದೆ ಗುರುಲಿಂಗಯ್ಯಾ ಹೀರೇಮಠ ಸಾ|| ಅಕ್ಕಮಹಾದೇವಿ ನಗರ ಅಫಜಲಪೂರ ತಾ||ಅಫಜಲಪೂರ ರವರದು ಗೌರ (ಬಿ) ಸಿಮಾಂತರದ ಹೊಲ ಸರ್ವೆ ನಂ. 13 ನೇದ್ದರ 14 ಎಕರೆ 20 ಗುಂಟೆ ಹೊಲವಿದ್ದು ಅದರಲ್ಲಿ ನನ್ನ ಹೆಸರಿನಲ್ಲಿ 7 ಎಕರೆ 13 ಗುಂಟೆ ನನ್ನ ತಾಯಿಯಾದ ಧಾನಮ್ಮ ಗಂಡ ಗುರುಲಿಂಗಯ್ಯಾ ಹೀರೇಮಠ ಇವರ ಹೆಸರಿನಲ್ಲಿ 2 ಎಕರೆ 25 ಗುಂಟೆ   ನನ್ನ ಹೆಂಡತಿಯಾದ ಸುಮಂಗಲಾ ಇವರ ಹೆಸರಿನಲ್ಲಿ 4 ಎಕರೆ 20 ಗುಂಟೆ ಹೊಲವಿರುತ್ತದೆ. ಸದರ ಹೊಲಕ್ಕೆ ಹೊಂದಿಕೊಂಡ ಅದೆ ಸರ್ವೆ ನಂಬರಿನ 1 ಎಕರೆ 33 ಗುಂಟೆ ಗೌರ ಗ್ರಾಮದ ಬಸವರಾಜ ತಂದೆ ಭೀಮಣ್ಣಾ ಬಿರಾದಾರ ರವರ ಹೊಲವನ್ನು ನಾನು 2011 ನೇ ಸಾಲಿನಲ್ಲಿ ಖರೀದಿ ಮಾಡಿರುತ್ತೇನೆ. ಸದ್ಯ ಸದರಿ ಹೊಲಕ್ಕೆ ಸಂಬಂಧಿಸಿದ ದಾಖಲಾತಿಗಳು ನನ್ನ ಹೆಸರಿನಲ್ಲಿರುತ್ತೇವೆ. ಈಗ 2 ವರ್ಷದಿಂದ ಬಸವರಾಜ ಇತನು ನಾನು ಖರಿದಿ ಮಾಡಿದ 1 ಎಕರೆ 33 ಗುಂಟೆ ಹೊಲವನ್ನು ಬಿಟ್ಟುಕೊಡು ಅಂತಾ ನನ್ನೊಂದಿಗೆ ತಕರಾರು ಮಾಡುತ್ತಾ ಬಂದಿರುತ್ತಾನೆ. ಈ ವಿಷಯದ ಸಂಬಂಧ ಗೌರ (ಬಿ) ಗ್ರಾಮದ ಪ್ರಮುಖರು ನ್ಯಾಯ ಪಂಚಾಯತಿ ಮಾಡಿರುತ್ತಾರೆ. ಬಸವರಾಜ ಇತನು ಕೇಳದೆ ಹಾಗೆ ತಕರಾರು ಮಾಡುತ್ತಾ ಬಂದಿರುತ್ತಾನೆ. ನಮ್ಮ ಹೊಲವನ್ನು ನಾನು ಹಾಗೂ ನಮ್ಮ ಹೊಲ ಸಮ ಪಾಲಿನಿಂದ ಮಾಡಿದ ಭೀಮಶಾ ತಂದೆ ಮಲ್ಲಪ್ಪ ಡಾಂಗೆ ಸಾ|| ಅಫಜಲಪೂರ ಇಬ್ಬರೂ  ಬಿತ್ತನೆ ಮಾಡುವ ಸಮಯದಲ್ಲಿ ಬಸವರಾಜ ತಂದೆ ಭೀಮಣ್ಣಾ ಬಿರದಾರ ಹಾಗೂ ಕೃಷ್ಣಪ್ಪ ತಂದೆ ಷಣ್ಮುಕಪ್ಪ ನಿಂಬರ್ಗಿ ಸಾ|| ಇಬ್ಬರೂ ಗೌರ (ಬಿ) ನಮ್ಮೊಂದಿಗೆ ತಕರಾರು ಮಾಡಿ ನೀವು ಹೇಗೆ ಬಿತ್ತನೆ ಮಾಡುತ್ತಿರಿ ಮಾಡಿರಿ ಮುಂದೆ ಬೆಳೆ ನಾಶ ಹೇಗೆ ಮಾಡಬೇಕೆಂದು ನಮಗೆ ಗೊತ್ತಿರುತ್ತದೆ ಅಂತಾ ಹೇಳಿ ಹೋಗಿರುತ್ತಾರೆ. ಸದ್ಯ ಹೊಲದಲ್ಲಿ ತೊಗರಿ ಬೆಳೆಯು ಸುಮಾರು ಒಂದು ಪೀಟ್ಎತ್ತರಕ್ಕೆ ಬೆಳೆದಿರುತ್ತದೆ. ದಿನಾಂಕ: 18-08-2018 ರಂದು ಬೆಳಿಗ್ಗೆ 6.00 ಗಂಟೆಯ ಸುಮಾರಿಗೆ ನಮ್ಮ ಹೊಲ ಪಾಲಿನಿಂದ ಮಾಡಿದ ಭೀಮಶ್ಯಾ ಡಾಂಗೆ ಮತ್ತು ನಾನು ಇಬ್ಬರೂ ಕೂಡಿಕೊಂಡು ನನ್ನ ಮೋಟಾರ ಸೈಕಲ ಮೇಲೆ ನಮ್ಮ ಹೊಲಕ್ಕೆ ಹೋದಾಗ ನಮ್ಮ ಹೊಲದಲ್ಲಿ 1) ಬಸವರಾಜ ತಂದೆ ಭೀಮಣ್ಣಾ ಬಿರದಾರ 2) ಕೃಷ್ಣಪ್ಪ ತಂದೆ ಷಣ್ಮುಕಪ್ಪ ನಿಂಬರ್ಗಿ 3) ಯಲ್ಲಪ್ಪ ತಂದೆ ಕೃಷ್ಣಪ್ಪ ನಿಂಬರ್ಗಿ ಸಾ|| ಎಲ್ಲರೂ ಗೌರ (ಬಿ) ಹಾಗೂ ಬಸವರಾಜನ ಸಂಬಂಧಿಕನಾದ 4) ಮಲ್ಲಪ್ಪ ತಂದೆ ರಾಮಚಂದ್ರ ಸಾ|| ಜಳಕಿ ಇವರು ಕೂಡಿಕೊಂಡು ಅತೀಕ್ರಮ ಪ್ರವೇಶ ಮಾಡಿ ಹೊಲದಲ್ಲಿನ ತೊಗರಿ ಬೆಳೆಗೆ ಪೆಟ್ರೋಲ ಪಂಪನಿಂದ ಔಷಧಿ ಸಿಂಪರಣೆ ಮಾಡುತ್ತಿದ್ದರು, ನಾನು ಬಸವರಾಜ ಹಾಗೂ ಕೃಷ್ಣಪ್ಪ ರವರಿಗೆ ನೀವು ಏನು ಮಾಡುತ್ತಿದ್ದಿರಿ ಅಂತಾ ಕೇಳಿದಾಗ ನನಗೆ ಬಸವರಾಜ ಇತನು ಬೋಸಡಿ ಮಗನೆ ನನ್ನ ಹೊಲ ನನಗೆ ಕೋಡು ಅಂತಾ ಹೇಳಿದರು ಬಿಟ್ಟು ಕೊಡಲ್ಲಾ ನೀನು ಹೇಗೆ ಬೆಳೆ ಬೆಳಿತಿ ನಾವು ಬೆಳೆ ನಾಶ ಮಾಡುವ ಔಷಧಿ ಸಿಂಪರಣೆ ಮಾಡಿರುತ್ತೇವೆ ಅಂತಾ ಅನ್ನುತ್ತಿದ್ದಾಗ ಕೃಷ್ಣಪ್ಪಾ ಹಾಗೂ ಅವನ ಮಗನಾದ ಯಲ್ಲಪ್ಪ ಇಬ್ಬರೂ ನನಗೆ ರಂಡಿ ಮಗನೆ ನಿನಗೆ ಇಷ್ಟಕ್ಕೆ ಬಿಡಲ್ಲಾ ನಿನಗೆ ಖಲ್ಲಾಸ ಮಾಡುತ್ತೇವೆ ಅಂತಾ ಅಂದು ಅಲ್ಲಿಂದ ಹೋಗಿರುತ್ತಾರೆ. ದಿನಾಂಕ: 20-08-2018 ರಂದು ಬೆಳಿಗ್ಗೆ 8.00 ಗಂಟೆಗೆ ನಮ್ಮ ಹೊಲಕ್ಕೆ ಹೋಗಿ ಹೊಲದಲ್ಲಿನ ಬೆಳೆ ನೋಡಲಾಗಿ ಸದರಿಯವರು ಸಿಂಪರಣೆ ಮಾಡಿದ ಔಷದಿಯಿಂದ ಸುಮಾರು 8 ಎಕರೆದಷ್ಟು ತೊಗರಿ ಬೆಳೆ ಸಂಪೂರ್ಣವಾಗಿ ಒಣಗಿರುತ್ತದೆ ಹಾಗೂ ಉಳಿದ 8  ಎಕರೆ 13 ಗುಂಟೆ ಜಮೀನನಲ್ಲಿನ ಬೆಳೆ ಅಲ್ಲಲ್ಲಿ ಒಣಗಿ ನಾಶವಾಗಿರುತ್ತದೆ.  1) ಬಸವರಾಜ ತಂದೆ ಭೀಮಣ್ಣಾ ಬಿರದಾರ 2) ಕೃಷ್ಣಪ್ಪ ತಂದೆ ಷಣ್ಮುಕಪ್ಪ ನಿಂಬರ್ಗಿ 3) ಯಲ್ಲಪ್ಪ ತಂದೆ ಕೃಷ್ಣಪ್ಪ ನಿಂಬರ್ಗಿ ಸಾ|| ಎಲ್ಲರೂ ಗೌರ (ಬಿ) ಹಾಗೂ ಬಸವರಾಜನ ಸಂಬಂಧಿಕನಾದ 4) ಮಲ್ಲಪ್ಪ ತಂದೆ ರಾಮಚಂದ್ರ ಸಾ|| ಜಳಕಿ ಇವರು ಕೂಡಿಕೊಂಡು ಅತೀಕ್ರಮ ಪ್ರವೇಶ ಮಾಡಿ ಹೊಲದಲ್ಲಿನ ತೊಗರಿ ಬೆಳೆಗೆ ಪೆಟ್ರೋಲ ಪಂಪನಿಂದ ಔಷಧಿ ಸಿಂಪರಣೆ ಮಾಡಿ ಅಂದಾಜು ನಾಲ್ಕರಿಂದ ಐದು ಲಕ್ಷ ಬೆಲೆಯುಳ್ಳ  ತೊಗರಿ ಬೆಳೆ ನಾಶ ಮಾಡಿ ನನಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.