POLICE BHAVAN KALABURAGI

POLICE BHAVAN KALABURAGI

04 May 2017

Kalaburagi District Reported Crimes

ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ಯಲ್ಲಾಲಿಂಗ ತಂದೆ ಗಿರಿಮಲ್ಲ ಡೊಣಗಾಂವ ಸಾ: ಗಡಂಚಿಯವರ ಮನೆಯಲ್ಲಿ ಬಾಡಿಗೆ ಮಕ್ತಂಪೂರ ಬಸವಣ್ಣ ಗುಡಿ ಹತ್ತಿರ ಕಲಬುರಗಿ ಇವರು ಮಗಳಾದ ಗಾಯಿತ್ರಿ 3 ವರ್ಷ ಇವಳು ದಿನಾಂಕ 02.05.2017 ರಂದು ನಾನು ಕೆಲಸಕ್ಕೆ ಹೋದಾಗ ಸುಮಾರು 4 ಗಂಟೆಯ ಸುಮಾರಿಗೆ ನನ್ನ ಹೆಂಡತಿಯಾದ ಗೀತಾ ಇವಳು ನಾನು ಕೆಲಸ ಮಾಡುವ ಟೇಲರ ಅಂಗಡಿಗೆ ಬಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ಮನೆಯ ಮುಂದೆ ಆಟವಾಡುತ್ತಿದ್ದ ಗಾಯಿತ್ರಿ ಕಾಣಿಸುತ್ತಿಲ್ಲ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲ ಅಂತಾ ತಿಳಿಸಿದಳು. ನಾನು ಕೂಡ ಅಲ್ಲಿಂದ ಇಲ್ಲಿಯವರೆಗೆ ನನ್ನ ಮಗಳು ಗಾಯಿತ್ರಿ ಇವಳಿಗೆ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲ ಕಾರಣ ಕಾಣೆಯಾದ ನನ್ನ ಮಗಳು ಗಾಯಿತ್ರಿ ಇವಳಿಗೆ ಪತ್ತೆ ಮಾಡಿಕೋಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮುಧೋಳ ಠಾಣೆ : ದಿನಾಂಕ 02-05-2017 ರಂದು ಮುಂಜಾನೆ ನನ್ನ ಹೆಂಡತಿ ಸುನೀತಾ ಇವಳು ಮದಿಕಂಟಿ ಗ್ರಾಮದಲ್ಲಿ ನಮ್ಮ ಸಂಬಂಧಿಕರು ದೇವರಿಗೆ ಮಾಡಿದ್ದರಿಂದ ಅಲ್ಲಿಗೆ ಹೋಗಿದ್ದಳು ನಾನು ಇಂದು ಸಾಯಕಾಂಲ 4-15 ಗಂಟೆ ಸುಮಾರಿಗೆ ಸೇಡಂದಲ್ಲಿ ಇದ್ದಾಗ ನನಗೆ ಪರಿಚಯವಿರುವ ಅನಂತಯ್ಯ ಕಲಾಲ ಸಾ|| ಆಡಕಿ ಇವರು ನನಗೆ ಪೋನ ಮಾಡಿ ಕೊಂತನಪಲ್ಲಿ ಗೇಟ್ ಹತ್ತಿರ ನಿನ್ನ ಹೆಂಡತಿ ಸುನೀತ ಇವಳಿಗೆ ಅಪಘಾತವಾಗಿದ್ದು ಇವಳು ಸತ್ತಿದ್ದಾಳೆ ಅಲ್ಲದೆ ನಿಮ್ಮ ತಂಗಿ ರಾಧಮ್ಮ ಹಾಗೂ ಮೊಟಾರ ಸೈಕಿಲ ಚಾಲಕ ಅಂಜಲಯ್ಯ ಇತನ ತಲೆಗೆ ಮುಖಕ್ಕೆ ಕೈಕಾಲುಗಳಿಗೆ ಗಾಯಗಳಗಿರುತ್ತವೆ ಅಂತಾ ತಿಳಿಸಿದ್ದು ತಕ್ಷಣ ನಾನು ಕೊಂತನಪಲ್ಲಿ ಗೇಟ್ ಹತ್ತಿರ ಹೋಗಿ ನೋಡಲಾಗಿ ನನ್ನ ಹೆಂಡತಿ ಸುನೀತ ಇವಳ ತಲೆಗೆ ಭಾರಿ ರಕ್ತ ಗಾಯವಾಗಿ ರಸ್ತೆಯಲ್ಲಿ ಸತ್ತು ಬಿದ್ದದ್ದು ಅಲ್ಲೆ ಹೆಂಡತಿ ಮೃತ ದೇಹದ ಹತ್ತಿರ ಒಂದು ಮೊಟರ ಸೈಕಲ ನಂ ಎಮ್ ಹೆಚ್ 05-ಎಎನ್-5187 ನೆದ್ದು ರಸ್ತೆಯಲ್ಲಿ ಬಿದ್ದಿದ್ದು ಈ ಬಗ್ಗೆ ಅಲ್ಲಿದ್ದ ನಮಗೆ ಪರಿಚಯವಿರುವ ಅನಂತಯ್ಯ ಹಾಗೂ ಇತರರಿಗೆ ವಿಚಾರಿಸಲು ಮುತ್ತೆಪ್ಪ ತಂದೆ ಸಾಯಪ್ಪ ಮಾಲಾ ಸಾ|| ಕೊಂತನಪಲ್ಲಿ ಗ್ರಾಮ ಇವರು ತಿಳಿಸಿದ್ದೆನೆಂದರೆ ನಾನು ಹಾಗೂ ನಮ್ಮೂರ ಲಾಲಅಹ್ಮದ ತಂದೆ ಯಾಕುಬಸಾಬ ಇಬ್ಬರೂ ಇಲ್ಲೆ ಕೋಂತನಪಲ್ಲಿ ಗೇಟ ಹತ್ತಿರ ಇದ್ದಾಗ ಈಗ ಸಾಯಕಾಂಲ 4-00 ಗಂಟೆ ಸುಮಾರಿಗೆ ಕೊಂತನಪಲ್ಲಿ ಕಡೆಯಿಂದ ಮೊಟರ ಸೈಕಲ ನಂ ಎಮ್ ಹೆಚ್ 05-ಎಎನ್-5187 ನೆದ್ದರ ಮೇಲೆ ಮೊಟರ ಸೈಕಲ ಚಾಲಕ ಹಾಗೂ ಹಿಂದುಗಡೆ ಇಬ್ಬರು ಹೆಣ್ಣು ಮಕ್ಕಳು ಕುಳಿತು ಸೇಡಂ ಕಡೆ ರಸ್ತೆ ಕ್ರಾಸ್ ದಾಟುತ್ತಿದ್ದಾಗ ಸೇಡಂ ಕಡೆಯಿಂದ ಒಂದು ಮೊಟರ ಸೈಕಲ ನಂ ಕೆ ಎ32-ಈಜಿ-4954 ನೆದ್ದರ ಚಾಲಕನು ತನ್ನ ಮೊಟರ ಸೈಕಲನ್ನು ಅತೀ ವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಸೇಡಂ ಕಡೆಗೆ ಹೋಗುತ್ತಿದ್ದ ಮೊಟರ ಸೈಕಲಗೆ ಡಿಕ್ಕಿ ಪಡಿಸಿ ಅಪಘಾತಮಾಡಿದ್ದು ಇದರಿಂದ ಕೊಂತನಪಲ್ಲಿ ಕಡೆಯಿಂದ ಬರುತ್ತಿದ್ದ ಮೊಟರ ಸೈಕಲ ಹಾಗೂ ಹಿಂದುಗಡೆ ಇಬ್ಬರು ಹೆಣ್ನು ಮಕ್ಕಳು ಕೆಳಗೆ ರಸ್ತೆಯಲ್ಲಿ ಬಿದ್ದಿದ್ದು ಆಗ ಕೊಡಂಗಲ ಕಡೆಯಿಂದ ಸೇಡಂ ಕಡೆಗೆ ಬರುತ್ತಿದ್ದ ಒಂದು ಕಾರಿನ ಚಾಲಕನು ತನ್ನ ಕಾರನ್ನು ಅತೀ ವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬಿದ್ದಿದ್ದ ಹೆಣ್ಣು ಮಗಳಾದ ಸುನೀತಾ ಇವಳ ತಲೆ ಮೇಲಿಂದ ಕಾರನ್ನು ನಡೆಸಿಕೊಂಡು ಹೋಗಿದ್ದರಿಂದ ಸದರಿ ಸುನೀತಾ ಇವಳ ತಲೆಗೆ ಭಾರಿ ಗಾಯ ಹೋಂದಿ  ಅಲ್ಲೆ ಸ್ಥಳದಲ್ಲಿ ಮೃತ ಪಟ್ಟಿದ್ದು ಸದರಿ ಕಾರು ಚಾಲಕ ಸ್ವಲ್ಪ ಮುಂದೆ ಹೋಗಿ ತನ್ನ ಕಾರನ್ನು ನಿಲ್ಲಿಸಿದ್ದು ಅದರ ನಂ ನೋಡಲಗಿ ಎಮ್ ಹೆಚ್ 12-ಎಪ್,ಝಡ್-9993  ಅಂತಾ ಇದ್ದು ಸದರಿ ಕಾರ ಚಾಲಕನ ಹೆಸರು ವಿಚಾರಿಸಲು ತನ್ನ ಹೆಸರು ರವಿ ತಂದೆ ವೆಂಕಟ ಜಾಧವ ಅಂತಾ ತಿಳಿಸಿದ್ದು ಇರುತ್ತದೆ ಸದರಿ ಅಫಘಾತ ಪಡಿಸಿದ ಮೊಟರ ಸೈಕಲ್ ನಂ ಕೆ ಎ32-ಈಜಿ-4954 ನೇದ್ದರ ಚಾಲಕನ ಹೆಸರು ಗಣೇಶ ತಂದೆ ಪಕೀರಯ್ಯ ಸಾ|| ಮದರನಾಸನಪಲ್ಲಿ ಅಂತಾ ತಿಳಿಸಿದ್ದು ಸದರಿಯವನಿಗೆ ಕೈಕಾಲುಗಳಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು ಇತನು ತನ್ನ ಮೊಟರ  ಸೈಕಲ್ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ನಂತರ ಮೊಟರ ಸೈಕಲ ನಂ ಎಮ್ ಹೆಚ್ 05-ಎಎನ್-5187 ನೆದ್ದರ ಚಾಲಕನಾದ ಅಂಜಯ್ಯ ತಂದೆ ವೆಂಕಟಯ್ಯ ಹಾಗೂ  ಮೊಟರ ಸೈಕಲ ಮೇಲೆ ಹಿಂದುಗಡೆ ಕುಳಿತಿದ್ದ ಹೆಣ್ಣು ಮಗಳಾದ  ರಾಧಮ್ಮ ಗಂಡ ರಮೇಶ ಸಾ|| ಮದರನಾಸನಪಲ್ಲಿ ಇವರಿಗೆ ತಲೆಗೆ ಹಾಗೂ ಮುಖಕ್ಕೆ ಹಾಗೂ ಕೈಕಾಲುಗಳಿಗೆ ಇತರ ಕಡೆಗೆ ರಕ್ತ ಗಾಯ ಗುಪ್ತ ಗಾಯಗಳಾಗಿದ್ದು ಇವರಿಗೆ ಇಬ್ಬರಿಗೆ ಜಿವಿಆರ್ ಅಂಬ್ಯುಲನ್ಸದಲ್ಲಿ ಹಾಕಿ ಉಪಚಾರ ಕುರಿತು ಸೇಡಂ ಸರ್ಕಾರಿ ದವಾಖಾನೆಗೆ ಕಳಿಸಿದ್ದು ಇರುತ್ತದೆ ಅಂತಾ ತಿಳಿಸಿರುತ್ತಾರೆ ಅಂತಾ ಶ್ರೀ ಮಹೀಪಾಲ ತಂದೆ ದೇವಪ್ಪ ಕಮರೆಡ್ಡಿ ಸಾ: ಮದರಾನಾಗಸನಪಲ್ಲಿ ತಾ: ಸೇಡಂ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 23/04/2017 ರಂದು ಬೆಳ್ಳಿಗೆ 10-15  ಗಂಟೆ ಸುಮಾರಿಗೆ ಕೆಬಿಎನ್ ದರ್ಗಾ ಹಿಂದುಗಡೆ ಇರುವ ಪಾಯನ್ ಗಲ್ಲಿ ಏರಿಯಾ ಮನೋಹರ ಬಾಯ್ ಕಿರಾಣಾ ಅಂಗಡಿ ಪಕ್ಕದ ರಸ್ತೆಯಿಂದ ಸ್ಮಶಾನ ಭೂಮಿ ಕಡೆಗೆ ಕಾಶಿಬಾಯಿ ಇವರು ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಯಾವುದೋ ಒಂದು ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು  ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಾಶಿಬಾಯಿ ಇವಳಿಗೆ ಡಿಕ್ಕಿ ಪಡಿಸಿ ಭಾರಿ ರಕ್ತ ಗಾಯಗೊಳಿಸಿದ್ದರಿಂದ ಕಾಶಿಬಾಯಿ ಇವಳು ದಿನಾಂಕ-23/04/2017 ರಂದು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆಯಾಗಿ ದಿನಾಂಕ - 23/04/2017 ರಿಂದ ಇಲ್ಲಿಯವರೆಗೆ ಉಪಚಾರ ಪಡೆದುಕೊಂಡು ರಸ್ತೆ ಅಪಘಾತದಲ್ಲಿ ಆದ ಗಾಯ ವಾಸಿಯಾಗದೆ ಇಂದು ದಿನಾಂಕ-02/05/2017 ರಂದು ಬೆಳಿಗ್ಗೆ  ಸರಕಾರಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಶ್ರೀ ಶಿವರಾಯ ತಂದೆ ರಾಮಚಂದ್ರ ಟಕ್ಕಳಕಿ  ಸಾ: ಶಹಾಬಾಜರ ನಾಕಾ ಹತ್ತಿರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    
ದರೋಡೆಗೆ ಹೊಂಚು ಹಾಕಿ ಕುಳಿತವರ ಬಂಧನ :
ಗ್ರಾಮೀಣ ಠಾಣೆ :   ದಿನಾಂಕ: 02/05/2017 ರಂದು ಬೆಳಗಿನ ಜಾವ  ಗ್ರಾಮಿಣ ಪೊಲೀಸ  ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಲಬುರಗಿಯಿಂದ-ಆಳಂದ ಮೇನ ರೋಡಿಗೆ ಇರುವ ಕೇರಿ ಭೋಸಗಾ ಕ್ರಾಸ ಹತ್ತಿರ ಬಸಸ್ಟಾಂಡ ಮರೆಯಲ್ಲಿ ಕೆಲವು ಜನರು ತಮ್ಮ ಮುಖಕ್ಕೆ  ಬಟ್ಟೆ ಕಟ್ಟಿಕೊಂಡು ನಿಂತುಕೊಂಡು ಸದರ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ  ಹಾಗೂ ಸಾರ್ವಜನಿಕರಿಗೆ ತಡೆದು ನಿಲ್ಲಿಸಿ ಅವರಿಗೆ ಮಾರಕಾಸ್ರ್ತಗಳನ್ನು ತೋರಿಸಿ ಬೆದರಿಕೆ ಹಾಕಿ  ದರೋಡೆ ಮಾಡಲು  ಹೊಂಚು ಹಾಕುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿ. ಪಿ..ಐ. ಗ್ರಾಮೀಣ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮತರಯಲ್ಲಿ ನಿಂತು ನೋಡಲಾಗಿ  08 ಜನರು ಮುಖಕ್ಕೆ ಬಟ್ಟೆಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಚಾಕು, ಬಡಿಗೆ, ಹಗ್ಗ್ಗ ಖಾರದ ಪುಡಿ ಹಿಡಿದುಕೊಂಡು ನಿಂತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಲು 1) ಈಶ್ವರ ತಂದೆ ಮಲಕಪ್ಪ ಕಾಳನೂರ ಸಾ:ಉಪಳಾಂವ ತಾ:ಜಿ:ಕಲಬುರಗಿ  2) ಶ್ರೀಕಾಂತ ತಂದೆ ಬಸವರಾಜ ತಿಳಗೋಳ ಸಾ:ಮಾಡ್ಯಾಳ ತಾ:ಆಳಂದ   3) ಹಣಮಂತ @ ಬಜರಂಗಿ ತಂದೆ ಅರ್ಜುನ ವಗ್ಗೆ ಸಾ:ಪಟ್ಟಣ ತಾ:ಜಿ:ಕಲಬುರಗಿ 4) ಖಲೀಲ ತಂದೆ ಖಾಜಾ ಪಟೇಲ್ ಸಾ: ಕಪನೂರ ರವರನ್ನು ಹಿಡಿದುಕೊಂಡಿದ್ದು ಇನ್ನು ನಾಲ್ಕು ಜನ ಓಡಿ ಹೋಗಿದ್ದು ಅವರ ಹೆಸರು ವಿಳಾಸ 5) ಹಣಮಂತ ತಂದೆ ಮಲಕಪ್ಪ ಕಾಳನೂರ ಸಾ:ಉಪಳಾಂವ  6) ಶಿವಪ್ಪ ತಂದೆ ಈರಣ್ಣಾ ಸಾ:ಮಾಡ್ಯಾಳ  7) ಗುಂಡಪ್ಪ ತಂದೆ ಮಲ್ಲಿಕಾಜರ್ುನ ಹಡಪಾದ ಸಾ:ಮಾಡ್ಯಾಳ  8) ಶಿವಲಿಂಗ ತಂದೆ ಶರಣಪ್ಪ ಪೂಜಾರಿ ಸಾ:ಮಾಡ್ಯಾಳ ತಾ:ಆಳಂದ  ಈ ರೀತಿ ಇದ್ದು, ಸಿಕ್ಕಿ ಬಿದ್ದ ಆರೋಪಿತರಿಂದ 1) 02 ಚಾಕು ಅ;ಕಿ:00 ರೂ. 2) 03 ಬಡಿಗೆ ಅ:ಕಿ:00 ರೂ. 3) 03 ಖಾರದ ಪುಡಿ 4) 20 ಫೀಟ ನೂಲಿನ ಹಗ್ಗ 5) 08 ಕಪ್ಪು ಬಣ್ಣದ ಬಟ್ಟೆಗಳು ಅ:ಕಿ:00 ರೂ. 6) ಒಂದು ಕಬ್ಬಿಣದ ರಾಡ ಅಕಿ-00=00 7) ಒಂದು ಕ್ರೋಜರ್ ಜೀಪ ನಂ ಕಎ-14 ಎ-7524 ಅಕಿ-4,00000/-ರೂ 8) ಒಂದು ಹೊಂಡಾ ಆಕ್ಟೀವ ಮೋಟಾರ ಸೈಕಲ್ ನಂ ಕೆಎ-32 ಇಜೆ-6139 ನೇದ್ದು ಅಕಿ 25000/-ರೂ  ಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಗ್ರಾಮೀಣ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹುಡುಗ ಕಾಣೆಯಾದ ಪ್ರಕರಣ :                  
ನರೋಣಾ ಠಾಣೆ : ಶ್ರೀ ನಾಗಣ್ಣಾ ತಂದೆ ಗುರುಲಿಂಗಪ್ಪ ಗೋಗಶೆಟ್ಟಿ, , ಸಾ||ಚಿಂಚನಸೂರ ಗ್ರಾಮ, ತಾ||ಆಳಂದ ಇವರ ಮಗನಾದ ರುದ್ರಶೆಟ್ಟಿ ವಯಾ: 19ವರ್ಷ 8ತಿಂಗಳು ಇತನು ದಿನಾಂಕ:28/04/2017 ರಂದು ಬೆಳಿಗ್ಗೆ 10-00 ಕುರಿಮೇಯಿಸಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋದವನು ವಾಪಸ್ಸು ಮನೆಗೆ ಬರದೆ ಕಾಣೆಯಾಗಿದ್ದು ಅವನನ್ನು ಪತ್ತೆ ಮಾಡಿಕೊಡಬೇಕೆಂದು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.