POLICE BHAVAN KALABURAGI

POLICE BHAVAN KALABURAGI

09 April 2016

Kalaburagi District Reported Crimes.

ನಿಂಬರ್ಗಾ ಪೊಲೀಸ ಠಾಣೆ : ದಿನಾಂಕ 08/04/2016 ರಂದು 1130 ಗಂಟೆಗೆ ಫಿರ್ಯಾದಿ ಶ್ರೀ ದೇವಿಂದ್ರಪ್ಪ ತಂದೆ ಖಂಡೇರಾವ ಐನಾಪೂರ ವ|| 60 ವರ್ಷ, ಜಾ|| ಮರಾಠಾ, || ಕೂಲಿಕೆಲಸ, ಸಾ|| ಧುತ್ತರಗಾಂವ ಇತನು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ಹಳೆಯ ವೈಷಮ್ಯ ಕಟ್ಟಿಕೊಂಡು ದಿನಾಂಕ 07/04/2016 ರಂದು 2100 ಗಂಟೆಗೆ ಆಪಾದಿತನು : ಶಿವಾಜಿ ತಂದೆ ಅಪ್ಪಾರಾವ ಐನಾಪೂರ ಸಾ|| ಧುತ್ತರಗಾಂ.  ತನ್ನ ಮನೆಯ ಮುಂದೆ ಫಿರ್ಯಾದಿಗೆ ತಡೆದು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿ ಜೀವಭಯಪಡಿಸಿರುತ್ತಾನೆ ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ಕೊಟ್ಟ  ಹೇಳಿಕೆ ಸಾರಾಂಶದ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ.
ನಿಂಬರ್ಗಾ ಪೊಲೀಸ ಠಾಣೆ : ದಿನಾಂಕ 08/04/2016 ರಂದು 1130 ಗಂಟೆಗೆ ಫಿರ್ಯಾದಿ ಶ್ರೀ ಶ್ರೀ ಶಿವಾಜಿ ತಂದೆ ಅಪ್ಪಾರಾವ ಐನಾಪೂರ ಸಾ|| ಧುತ್ತರಗಾಂವ ವ|| 41 ವರ್ಷ, ಜಾ|| ಮರಾಠಾ, || ಕೂಲಿಕೆಲಸ, ಸಾ|| ಧುತ್ತರಗಾಂವ ಇತನು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ಹಳೆಯ ವೈಷಮ್ಯ ಕಟ್ಟಿಕೊಂಡು ದಿನಾಂಕ 07/04/2016 ರಂದು 2100 ಗಂಟೆಗೆ ಫಿರ್ಯಾದಿಯು ತನ್ನ ಮನೆಯ ಮುಂದೆ ನಿಂತಾಗ 01] ಈರಣ್ಣಾ ತಂದೆ ಖಂಡೇರಾವ ಐನಾಪೂರ 02] ದೇವಿಂದ್ರಪ್ಪ ತಂದೆ ಖಂಡೇರಾವ ಐನಾಪೂರ ಸಾ|| ಇಬ್ಬರೂ ಧುತ್ತರಗಾಂವ. ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಚೂಪಾದ ವಸ್ತುವಿನಿಂದ ಎಡ ಕಿವಿಗೆ ಹೊಡೆದು ರಕ್ತಗಾಯಪಡಿಸಿ ಜೀವಭಯಪಡಿಸಿರುತ್ತಾರೆ, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ಕೊಟ್ಟ  ಹೇಳಿಕೆ ಸಾರಾಂಶದ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ.
ಜೇವರಗಿ ಪೊಲೀಸ್ ಠಾಣೆ : ದಿನಾಂಕ 07.04.2016 ರಂದು 21:೦೦ ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ 07.04.2016 ರಂದು ಸಾಯಂಕಾಲ 05:00 ಗಂಟೆಯ ಸುಮಾರಿಗೆ ನಮ್ಮೂರಿಗೆ ಹೋಗುವ ಕುರಿತು ನಾನು ಮತ್ತು ನಮ್ಮೂರಿನ ರಾಜು, ಉಮೇಶ, ಮಲ್ಲಣ್ಣಗೌಡ, ಸಮೀನಾಬೇಗಂ, ದಾವೂದ್, ಶಾಂತಮ್ಮ, ತಿಪ್ಪಣ್ಣ, ದೆವೆಕ್ಕೆಮ್ಮ, ಕಸ್ತೂರಿಬಾಯಿ ಎಲ್ಲರು ಕೂಡಿಕೊಂಡು ಟಂಟಂ ನಂ ಕೆಎ32ಬಿ4072 ನೇದ್ದರಲ್ಲಿ ಕುಳಿತುಕೊಂಡು ದೊಡ್ಡಪ್ಪಗೌಡ ಪಾಟೀಲ ಇವರ ಕಂಕರ್ ಮಷೀನ್ ಹತ್ತಿರ ಜೇವರಗಿ ಗುಡುರ ರಸ್ತೆಯ ಮೇಲೆ ಹೋಗುತ್ತಿದ್ದಾಗ ಸದರಿ ಟಂಟಂ ಚಾಲಕನು ತನ್ನ ಟಂಟಂ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಒಮ್ಮೇಲೆ ಕಟ್ ಹೋಡೆದು ಟಂಟಂ ಅನ್ನು ರೋಡಿನ ಸೈಡಿನಲ್ಲಿ ಪಲ್ಟಿ ಮಾಡಿ ನಮಗೆ ಸಾದಾ ಮತ್ತು ಭಾರಿ ಗಾಯಗೊಳಿಸಿದ್ದು ಕಾರಣ ಸದರಿ ಟಂಟಂ ಚಾಲಕನ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕುಅಂತ ಪ್ರಕರಣ ದಾಖಲಾಗಿರುತ್ತದೆ.