POLICE BHAVAN KALABURAGI

POLICE BHAVAN KALABURAGI

23 October 2015

Kalaburagi District Reported Crimes

ಅತ್ಯಾಚಾರ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 19.10.2015 ರಂದು ರಾತ್ರಿ 07:15 ಗಂಟೆಗೆ ಕುಮಾರಿ ರವರು ತನ್ನ ಗೆಳತಿಗೆ ನೋಟ್‌ ಬುಕ್‌ ಕೊಡುವ ಸಲುವಾಗಿ ನಮ್ಮೂರ ಸೈಯದ್ ಸಾಭ್ ಮಡಕಿ  ಇವರ ಮನೆಯ ಹಿಂದೆ ನಡೆದುಕೊಂಡು ಹೋಗುತ್ತಿದ್ದಾಗ ಅದೇ ವೇಳೆಗೆ ನಮ್ಮೂರ ರಫೀಕ್ ತಂದೆ ಸೈಯದಸಾಬ್ ಸೌದಾಗರ್ ಸಾ : ಇಜೇರಿ  ಈತನು ನನಗೆ ಜಬರದಸ್ತಿಯಿಂದ ಅಪಹರಿಸಿಕೊಂಡು ಹೋಗಿ ಸಾಥಖೇಡ ಗ್ರಾಮದ ಸಮೀಪ ಇರುವ ಒಂದು ಹೋಲದಲ್ಲಿ ಕರೆದುಕೊಂಡು ಹೋಗಿ ಅದೇ ದಿವಸ ರಾತ್ರಿ ನನಗೆ ಜಬರದಸ್ತಿಯಿಂದ ಸಂಭೋಗಾ ಮಾಡಿರುತ್ತಾನೆ. ಈ ವಿಷಯವನ್ನು ಯಾರಿಗಾದರು ಹೇಳಿದರೆ ನಿನಗೆ ಮತ್ತು ನಿಮ್ಮ ತಂದೆ-ತಾಯಿಯವರಿಗೆ ಖಲಾಸ್ ಮಾಡುತ್ತೆನೆ ಅಂತಾ ಅಂಜಿಸಿದ್ದರಿಂದ ಅವನ ಹೇಳಿದಂತೆ ಕೇಳುತ್ತಾ ಇದ್ದು ದಿನಾಂಕ 21.10.2015 ರಂದು ನಾನು ಅಲ್ಲಿಂದ  ತಪ್ಪಿಸಿಕೊಂಡು ಬಂದಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ 21/10/2015 ರಂದು ಮದ್ಯಾಹ್ನ 1 ಗಂಟೆಗೆ ನನ್ನ ಅಣ್ಣ ಆನಂದ ತಂದೆ ಸಿದ್ದಣ್ಣಾ ಕಟ್ಟಿ ಇವನು ಜೇವರ್ಗಿಗೆ ಖಾಸಗಿ ಕೆಲಸವಿದ್ದು ನಾನು ಹೋಗಿ ಬರುತ್ತೆನೆ ಅಂತಾ ಹೇಳಿ ತನ್ನ ಮೋ ಸೈ: ನಂ ಕೆಎ-32 ಇ ಜೆ -5162 ನೆದರ ಮೇಲೆ ಹೋಗಿರುತ್ತಾನೆ. ರಾತ್ರಿ 10 ಗಂಟೆಯ ಸುಮಾರಿಗೆ ಫರಹತಾಬಾದ ಪೊಲೀಸರು ನನಗೆ ಫೊನ ಮಾಡಿ ರಾಷ್ಟ್ರೀಯ ಹೆದ್ದಾರಿ 218 ನದೀಸಿನ್ನೂರ ಕ್ರಾಸ ಬ್ರೀಜ್ ಹತ್ತಿರ ರಸ್ತೆಯ ಅಪಘಾತದಲ್ಲಿ ಮೃತ ಹೊಂದಿರುತ್ತಾನೆ ಅಂತಾ ತಿಳಿಸಿದ್ದರಿಂದ ನಾನು ಹಾಗೂ ಇತರರು ಕೂಡಿಕೊಂಡು ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಅಣ್ಣ ಆನಂದ ತಂದೆ ಸಿದ್ದಣ್ಣಾ ಕಟ್ಟಿ ಇವನು ಜೇವರ್ಗಿಯಿಂದ ಕಲಬುರಗಿ ಕಡೆಗೆ ಬರುವಾಗ ಎದರುನಿಂದ ಕ್ರೂಜರ ಜೀಪ ನಂ ಕೆಎ-25 ಪಿ-7717 ನೇದ್ದರ  ಜೀಪ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಎದರುನಿಂದ ಡಿಕ್ಕಿಪಡಿಸಿದರಿಂದ ತಲೆಗೆ ಬಾರಿ ರಕ್ತಗಾಯ,ಬಲಗಾಲು ಮುರಿದ್ದಿದ್ದು ಮತ್ತು ಬಲಗಾಲಿನ ಭುಜ ಮತ್ತುಬಲಗೈ ಮಣ್ಣಿಕಟ್ಟು ಮುರಿದ್ದಿದ್ದು ಸ್ಥಳದಲ್ಲಿಯೆ ಮೃತ ಹೊಂದಿರುತ್ತಾನೆ . ಸದರಿ ಕ್ರೂಜರ ಜೀಪ ಚಾಲಕನು ಮೊಟಾರ ಸೈಕಲಿಗೆ ಡಿಕ್ಕಿಪಡೆಯಿಸಿ ತನ್ನ ಕ್ರೂಜರ ಜೀಪನ್ನು ಬ್ರೀಡ್ಜನ ಕೆಳಗೆ ಪಲ್ಟಿಗೊಳಿಸಿ ಓಢಿ ಹೋಗಿರುತ್ತಾರೆ. ಅಂತಾ ಶ್ರೀ ಅರವಿಂದ ತಂದೆ ಸಿದ್ದಣ್ಣಾ ಕಟ್ಟಿ ಸಾ: ಮನೆ ನಂ 412 ಇಎಸ್ಏ ಆಸ್ಪತ್ರೆ ಹತ್ತಿರ ಸಿಐಬಿ ಕಾಲೋನಿ ಕಲಬುರಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 17.10.2015 ರಂದು ರಾತ್ರಿ 07:30 ಗಂಟೆಗ ಮುದಬಾಳ ಕೆ ಕ್ರಾಸ್ ಹತ್ತಿರ ಜೇವರಗಿ ಶಹಾಪುರ ರಸ್ತೆಯ ಮೇಲೆ ನನ್ನ ಗಂಡನು ತನ್ನ ಮೋಟಾರು ಸೈಕಲ್ ನಂ ಟಿ.ಎಸ್10ಇಎ1452 ನೇದ್ದನ್ನು ಚಲಾಯಿಸುಕೊಂಡು ಜೇವರಗಿ ಕಡೆಗೆ  ಹೋಗುತ್ತಿದ್ದಾಗ ಅದೇ ಸಮಯಕ್ಕೆ ಲಾರಿ ನಂ ಕೆ-32 -3586 ನೇದ್ದರ ಚಾಲಕನು ತನ್ನ ಲಾರಿಯನ್ನು ಜೇವರಗಿ ಕಡೆಯಿಂದ ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನ್ನ ಗಂಡನ ಮೋಟಾರು ಸೈಕಲ್‌ ಗೆ ಎದುರಿನಿಂದ ಡಿಕ್ಕಿ ಪಡಿಸಿ ನನ್ನ ಗಂಡನಿಗೆ ಭಾರಿ ಗಾಯಪಡಿಸಿ ತನ್ನ ಲಾರಿಯೊಂದಿಗೆ ಓಡಿ ಹೋಗಿರುತ್ತಾನೆ ಅಂತಾ ಶ್ರೀಮತಿ ಲಾಲ್ ಬಿ ಗಂಡ ರಾಜೆಸಾ ದೊಡ್ಡಮನಿ ಸಾ: ಅರಳ ಹಳ್ಳಿ ತಾ :  ಶಹಾಪುರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 22.10.2015 ರಂದು ಬೇಳಗ್ಗೆ 04:30 ಗಂಟೆಗೆ ಮಿಕ್ಸ ಸಿಮೆಂಟ್ ಕಂಪನಿಯ ಹತ್ತಿರ ಜೇವರಗಿ ಕಲಬುರಗಿ ರೋಡಿನ ಮೇಲೆ ಶಬ್ಬೀರ್ ತಂದೆ ಪಾಶಾಮಿಯಾ ಮಚಕೋರಿ ಸಾ : ಬೀದರ್ ಈತನು ತನ್ನ ಟ್ಯಾಂಕರ್ ಲಾರಿ ನಂ ಕೆ.ಎ38ಎ6555 ನೇದ್ದನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರೋಡಿನ ಬಲ ಮಗ್ಗಲಿನಲ್ಲಿ ಪಲ್ಟಿ ಮಾಡಿದ್ದರಿಂದ ವಿಜಯಕುಮಾರ ಈತನಿಗೆ ಸಣ್ಣ-ಪುಟ್ಟ ಗಾಯವಾಗಿರುತ್ತವೆ ಅಂತಾ ಶ್ರೀ ಸುಮಿತ್ ತಂದೆ ಬಸವರಾಜ್ ಸಿಂದೋಲ ಸಾ : ಬೀದರ್ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,