POLICE BHAVAN KALABURAGI

POLICE BHAVAN KALABURAGI

20 May 2016

Kalaburagi District Reported Crimes

ಕೊಲೆ ಮಾಡಿ ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ  ಕಾಂತಮ್ಮ ಗಂಡ ದಿ:ಹಣಮಂತ ರೆಡ್ಡಿ ಸಾ: ಅಣವೀರಪ್ಪಾ ಗುಡಿ ಹತ್ತಿರ  ಸುಲೇಪೇಠ   ತಾ:ಚಿಂಚೋಳಿ  ಇವರ ಮಗಳಾದ  ಮಹಾನಂದ ಇವಳು ಗೊಬ್ಬುರ(ಬಿ )ಗ್ರಾಮದ ಪ್ರಭುಲಿಂಗ ಇತನಿಗೆ ಪ್ರೀತಿಸುತ್ತಿದ್ದೆನೆ ಅಂತಾ ತಿಳಿಸಿದ್ದರಿಂದ ಸುಮಾರು 5 ವರ್ಷಗಳ ಹಿಂದೆ ಮಗಳು ಮಹಾನಂದ ಇವಳಿಗೆ ಪ್ರಭುಲಿಂಗ ಇತನ್ನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿ ಕೊಟ್ಟಿರುತ್ತೇವೆ, ಅಳಿಯ ಪ್ರಭುಲಿಂಗ ಇತನು ಎಲೆಕ್ಟ್ರೀಷಿಯನ ಕೆಲಸ ಮಾಡುತ್ತಾನೆ.  ಮಹಾನಂದಾ ಇವಳು  ಡಾ: ಗುರುರಾಜ ಕುಲಕರ್ಣಿ ಇವರ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಳು ಅವರಿಗೆ 3 ವರ್ಷದ ಚೇತನ ಅಂತಾ ಗಂಡು ಮಗನು ಕೂಡಾ ಇರುತ್ತಾನೆ.  ಈಗ ಸುಮಾರು 2 ತಿಂಗಳಿಂದ ಗಂಡ ಹೆಂಡತಿಯ ಮಧ್ಯ ಶೀಲದ ಮೇಲೆ ಸಂಶಯ ಮಾಡಿಕೊಂಡು ಆಗಾಗ ಇಬ್ಬರು ಜಗಳ ಮಾಡುತ್ತಿದ್ದರೂ ಅಳಿಯ ಪ್ರಭುಲಿಂಗ ಇತನು  ಅದೇ ವಿಷಯದಲ್ಲಿ  ಆಗಾಗ ಮಗಳೊಂದಿಗೆ ಜಗಳ ತೆಗೆದು ಹೊಡೆಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದನು. ಮಹಾನಂದಾ ಇವಳ ಮಗನಾದ ಚೇತನ ಇವನು 2 ದಿವಸದ ಹಿಂದೆ ನನ್ನ 3 ನೇ ಮಗಳಾದ ಭಾರತಿ ಇವಳು ನಮ್ಮ ಮನೆಗೆ ತಂದು ಬಿಟ್ಟಿರುವುದರಿಂದ ಅವನು ನಮ್ಮ ಗ್ರಾಮದಲ್ಲಿಯೇ ಇರುತ್ತಾನೆ  ದಿನಾಂಕ 19-5-2016 ರಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ನನ್ನ ಮಗಳಾದ ಭಾರತಿ ಇವಳು ನನಗೆ ಪೋನ ಮಾಡಿ ಮಹಾನಂದ ಇವಳಿಗೆ ಅವಳ ಗಂಡನಾದ ಪ್ರಭುಲಿಂಗ ಇತನು ಕೊಲೆ ಮಾಡಿ ಅವನು ಕೂಡಾ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಅಂತಾ ತಿಳಿಸಿದ್ದಳು ನಾನು ಸರಕಾರಿ ಆಸ್ಪತ್ರೆ ಶವಗಾರ ಕೋಣೆಗೆ  ಹೋಗಿ  ಮಗಳಿಗೆ ನೋಡಲಾಗಿ  ಮಹಾನಂದ ಇವಳು ಮೃತಪಟ್ಟಿದ್ದು ಇರುತ್ತದೆ. ಸದರಿ ಘಟನೆ  ದಿನಾಂಕ 18.19/5/16 ರಂದು ಮಧ್ಯರಾತ್ರಿ ನಡೆದಿರುತ್ತದೆ.  ಕಾರಣ ಮಗಳು ಮಹಾನಂದಾ ಇವಳ ಶೀಲದ ಮೇಲೆ ಸಂಶಯಪಟ್ಟು ಜಗಳ ತೆಗೆದು ಮಾನಸಿಕ ಮತ್ತು ದೈಹಿಕ ಹಿಂಸೆಕೊಟ್ಟು ಯಾವುದೇ ವಸ್ತುವಿನಿಂದ ತಲೆಗೆ ಹೊಡೆದು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡ ಪ್ರಭುಲಿಂಗ ಇತನ ಮೇಲೆ  ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಗುರುರಾಜ ತಂದೆ ಭೀಮರಾಯ ನಾಯ್ಕೋಡಿ ಸಾ: ಸೊನ್ನ ತಾ: ಜೇವರಗಿ ಇವರ ತಂಗಿಯಾದ ಕರಬಸಮ್ಮ @ ರೇಣುಕಾ ಇವಳಿಗೆ ಬಾಣೆತನ ಸಲುವಾಗಿ ಅವಳ ಗಂಡನ ಮನೆಯಿಂದ ನಮ್ಮೂರಿಗೆ ಕರೆದುಕೊಂಡು ಬಂದಿದ್ದು ದಿನಾಂಕ 19.05.2016 ರಂದು ಮುಂಜಾನೆ ಸಮಯದಲ್ಲಿ ನಮ್ಮ ತಂಗಿ ಕರಬಸಮ್ಮ @ ರೇಣುಕಾ ಇವಳಿಗೆ ಬಾಣೆತನ ನೋವು ಬಂದಿದಕ್ಕೆ ನಮ್ಮ ತಾಯಿ ನನಗೆ, ತಂಗಿಗೆ ನೀನು ಯಾವದಾದರೊಂದು ಗಾಡಿ ತೆಗೆದುಕೊಂಡು ಬಾ ಅಂತಾ ಹೇಳಿದಾಗ ನಾನು ನಮ್ಮೂರ ಸಂತೋಷ ತಂದೆ ಬಸಣ್ಣ ನಾಯ್ಕೋಡಿ ಈತನು ನಡೆಸುವ ಟಂಟಂ ನಂ ಕೆಎ 32-ಸಿ-1501 ನೇದ್ದು ತಗೆದುಕೊಂಡು ಬಂದೆನು. ನಂತರ ನಾನು ಮತ್ತು ನಮ್ಮ ತಾಯಿ ದೇವಕ್ಕಿ ಇಬ್ಬರು ಕೂಡಿ ತಂಗಿಗೆ ಸದರಿ ಟಂಟಂನಲ್ಲಿ ಕೂಡಿಸಿಕೊಂಡು ಜೇವರಗಿ ಸರಕಾರಿ ಆಸ್ಪತ್ರೆಗೆ ಬರುತ್ತಿದ್ದಾಗ ಮುಂಜಾನೆ 7-30 ಗಂಟೆ ಸುಮಾರಿಗೆ ಜೇವರಗಿ-ಸಿಂದಗಿ ಮೇನ್ ರೋಡ ಕೂಡಿ ಕ್ರಾಸ ಸಮೀಪ ರೋಡಿನಲ್ಲಿ ಬರುತ್ತಿದ್ದಾಗ ನಮ್ಮ ಟಂಟಂ ಚಾಲಕ ಸಂತೋಷನ  ವಾಹನ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಒಮ್ಮಲೇ ಕಟ್ ಹೊಡೆದುದಕ್ಕೆ ಟಂ ಟಂ ರೋಡಿನ ಎಡಗಡೆ ಪಲ್ಟಿಯಾಗಿ ಬಿದ್ದಿತು.  ನಾನು ಸಾವಕಾಶವಾಗಿ ಎದ್ದು ನೋಡಲಾಗಿ ನನ್ನ ಎಡಗೈಗೆ ತರಚಿದ ಗಾಯವಾಗಿದ್ದವು.  ನನ್ನ ತಾಯಿಗೆ ಬಲಬಾಗದ ಮೆಲಕಿನಿಂದ ತಲೆಯ ಮದ್ಯದ ಭಾಗದ ವರಗೆ ಭಾರಿ ರಕ್ತಗಾಯವಾಗಿ ಮಾಂಸಖಂಡ ಹೊರ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು. ನನ್ನ ತಂಗಿಗೆ  ಅಲಲ್ಲಿ ಗುಪ್ತ ಸಣ್ಣ ಪುಟ್ಟ ಗಾಯಗಳಾದ್ದವು. ನಂತರ ಮಾಹಿತಿ ತಿಳಿದು ಸ್ಥಳಕ್ಕೆ 108 ಅಂಬುಲೇನ್ಸ ಬಂದಾಗ ನಾನು ಮೊದಲು ನಮ್ಮ ತಂಗಿ ಕರಬಸಮ್ಮ @ ರೇಣುಕಾ ಇವಳಿಗೆ ಅದರಲ್ಲಿ ಹಾಕಿ ಉಪಚಾರ ಕುರಿತು ಜೇವರಗಿ ಸರಕಾರಿ ದವಾಖಾನೆಗೆ ಕಳುಹಿಸಿಕೊಟ್ಟು ಆ ನಂತರ ನಾನು ಆ ಕಡೆಯಿಂದ ಬರುತ್ತಿದ್ದ ಒಂದು ಖಾಸಗಿ ವಾಹನದಲ್ಲಿ ನನ್ನ ತಾಯಿಯ ಹೆಣ ಹಾಕಿಕೊಂಡು ಜೇವರಗಿಗೆ ತಂದು ಸರಕಾರಿ ದವಾಖಾನೆಯಲ್ಲಿ ಹಾಕಿರುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.