POLICE BHAVAN KALABURAGI

POLICE BHAVAN KALABURAGI

15 July 2015

Kalaburgi District Press Note

ಪೊಲೀಸ ಪ್ರಕಟಣೆ
ಈ ಮೂಲಕ ಕಲಬುರಗಿ ಜಿಲ್ಲೆಯ ಎಲ್ಲಾ ನಾಗರಿಕ ಬಾಂಧವರಲ್ಲಿ ಈ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಯ ಪಡಿಸುವುದೇನಂದರೆ, ರಾಜ್ಯದಲ್ಲಿ ಇತ್ತಿಚಿಗೆ ರೈತರ ಆತ್ಮಹತ್ಯೆ ಪ್ರಕರಣಗಳು ಘಟಿಸುತ್ತಿದ್ದು ಈ ವಿಷಯದ ಬಗ್ಗೆ ಕಲಬುರಗಿ ಜಿಲ್ಲಾ ವ್ಯಾಪ್ತಿಯಲ್ಲಿ ಪರವಾನಿಗಿ ಪಡೆದ ಅಥವಾ ಪರವಾನಿಗಿ ಪಡೆಯದೇ ಸಾಲ ಕೊಡುವವರು, ಹೆಚ್ಚಿನ ಬಡ್ಡಿಗೆ ಅಲ್ಲದೆ ಚಕ್ರಬಡ್ಡಿಗೆ ಹಾಗೂ ಮೀಟರ ಬಡ್ಡಿಗೆ ಸಾಲ ಕೊಡುವ ಯಾವುದೇ ವ್ಯಕ್ತಿಗಳು ರೈತರಿಗೆ ನೀಡಿದ ಸಾಲವನ್ನು ಹೆಚ್ಚಿನ ಬಡ್ಡಿಯೊಂದಿಗೆ ಮರುಪಾವತಿಸುವಂತೆ ತೊಂದರೆ ಕೊಡುತ್ತಿದ್ದಲ್ಲಿ ಮತ್ತು ಹೆಚ್ಚಿನ ಬಡ್ಡಿಗಾಗಿ, ಚಕ್ರ ಬಡ್ಡಿಗಾಗಿ ಹಾಗೂ ಮೀಟರ ಬಡ್ಡಿಗಾಗಿ  ಸಾಲ ಕೊಡುವವರ  ಮಾಹಿತಿಯನ್ನು ಪೊಲೀಸ ಸಹಾಯವಾಣಿ ಕೇಂದ್ರಕ್ಕೆ ಅಂದರೆ ಜಿಲ್ಲಾ ಪೊಲೀಸ್ ನಿಸ್ತಂತು ಕೋಣೆ ಸಹಾಯವಾಣಿ ಫೋನ ನಂಬರಗಳಾದ 01) 08472-263677, 2) 9480803500 ಮತ್ತು 3) 100 ಕ್ಕೆ ಕರೆ ಮಾಡಿ ಮಾಹಿತಿ ತಿಳಿಸಲು ಸಾರ್ವಜನಿಕರಲ್ಲಿ ಕೊರಲಾಗಿದೆಈ ಸಹಾಯವಾಣಿಯು ದಿನದ 24 ಘಂಟೆಯೂ ಕಾರ್ಯ ನಿರ್ವಹಿಸುತ್ತದೆ.

Kalaburagi District Reported Crimes

ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮೋಹನ ಕುಮಾರ ತಂದೆ ಬಸವರಾಜ ಕೋಟಗಿ ಸಾಃ ಮನೆ ನಂ. 2-909, ಜಿ.ಡಿ.ಎ 03 ನೇ ಹಂತ ವಿರೇಂದ್ರ ಪಾಟೀಲ್ ಬಡಾವಣೆ ಕಲಬುರಗಿ ರವರು ಬೆಂಗಳೂರು ನಲ್ಲಿ ಖಾಸಗಿ ಕೆಲಸ ಮಾಡಿಕೊಂಡಿದ್ದು ವಿರೇಂದ್ರ ಪಾಟೀಲ್ ಬಡಾವಣೆ, ಜಿ.ಡಿ.ಎ ಕಾಲೋನಿಯಲ್ಲಿರುವ ತಮ್ಮ ಮನೆಗೆ ದಿನಾಂಕಃ 05/07/2015 ರಂದು 06:00 ಪಿ.ಎಂ.ಕ್ಕೆ ಕೀಲಿ ಹಾಕಿಕೊಂಡು ಹೋಗಿದ್ದು ಬೆಂಗಳೂರು ನಿಂದ ಮರಳಿ ದಿನಾಂಕಃ 14/07/2015 ರಂದು 05:00 ಪಿ.ಎಂ. ಕ್ಕೆ ಬಂದು ನೋಡಲಾಗಿ ಯಾರೋ ಕಳ್ಳರು ಮನೆಗೆ ಹಾಕಿದ ಬೀಗ ಮುರಿದು ಮನೆಯ ಅಲೆಮಾರಿಯಲ್ಲಿಟ್ಟ ಬಂಗಾರದ ಆಭರಣಗಳು  ಒಟ್ಟು 65,000/- ರೂ. ಬೆಲೆ ಬಾಳುವ ಬಂಗಾರ ಮತ್ತು ಸೀರೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೀಟರ ಬಡ್ಡಿ ಕೊಡದಿದ್ದಕ್ಕೆ ಜೀವದ ಬೇದರಿಕೆ ಹಾಕಿದ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಸೈದಪ್ಪ ತಂದೆ ಹಣಮಂತ ಮಾತಾರಿ ಸಾ: ಮಾಡಿಯಾಳ ರವರ ತಾಯಿಯಾದ ಶ್ರೀಮತಿ ಗೌರಾಬಾಯಿ ಇವರ ಹೆಸರಿಗೆ 2-ಎಕರೆ, 36- ಗುಂಟೆ ಜಮೀನಿದ್ದು  ನನ್ನ  ತಂದೆ ತಾಯಿಗೆ ಒಟ್ಟು 5 ಜನ ಗಂಡು ಮಕ್ಕಳಿದ್ದು ಅದರಲ್ಲಿ ನಾನೊಬ್ಬನೆ ಒಕ್ಕಲುತನ ಮಾಡಿತ್ತಿದ್ದು ಉಳಿದವರೆಲ್ಲರೂ ಇನ್ನುವಿಧ್ಯಾಬ್ಯಾಸ ಮಾಡುತ್ತಿದ್ದಾರೆ ಇಡಿ ಕುಟುಂಬದ ಜವಾಬ್ದಾರಿ ನನ್ನ ಒಬ್ಬನ ಮೇಲೆ ಇದ್ದು ಸುಮಾರು ಒಂದು ವರ್ಷದ ಹಿಂದೆ ಹೊಲದ ಲಾಗೋಡಿಗಾಗಿ ನಾನು ನಮ್ಮೂರಿನ  ಜಗನ್ನಾಥ ತಂದೆ  ನಾಗಪ್ಪ ಧುತ್ತರಗಿ ಇವರಿಂದ 10,000=00 ರೂಪಾಯಿಗಳನ್ನು 5% ರಂತೆ ಪ್ರತಿ ತಿಂಗಳಿಗೆ ಕರಾರು ಮಾಡಿ ಪಡೆದುಕೊಂಡಿರುತ್ತೇನೆ. ಯುಗಾದಿ ಸಮಯದಲ್ಲಿ ನಮ್ಮ ಜೋಳದ ಪಟ್ಟಿ ಬಂದ ಬಳಿಕ ಒಟ್ಟು 10,000=00 ಗಂಟು ಮತ್ತು 4000=00 ರೂಪಾಯಿ ಬಡ್ಡಿ ಸೇರಿಸಿ ಒಟ್ಟು ನಾನು ಮತ್ತು ನನ್ನ ತಾಯಿ ಇಬ್ಬರು ಸೇರಿ ಖುದ್ದಾಗಿ ಜಗನ್ನಾಥನ ಮನೆಗೆ ಹೋಗಿ ಕೊಟ್ಟು ಬಂದಿರುತ್ತೇವೆ. ಇದಾದ ಬಳಿಕ ಜಗನ್ನಾಥನು ಆಗಾಗ  ನಾನು ನಮ್ಮೂರಿನಲ್ಲಿ  ಸಿಕ್ಕಾಗಲೇಲ್ಲ ನೀವು ಇನ್ನು ಹೆಚ್ಚಿಗೆ ಹಣ ಕೊಡಬೇಕು ಬಡ್ಡಿಗೆ ಬಡ್ಡಿ ಹಚ್ಚಿನಿ ಒಟ್ಟು 17, 880=00 ರೂಪಾಯಿ ಆಗುತ್ತದೆ ನಿನ್ನ ಮನಿ ದೇವರಿಗೂ ನಾನು ಬಿಡಂಗಿಲ್ಲ ಅಂತಾ ಭಯ ಪಡಿಸುತ್ತಾ ಬಂದಿರುತ್ತಾನೆ ದಿನಾಂಕ 13-07-2015  ರಂದು ಅಂದಾಜು ಸಾಯಂಕಾಲ 06:00 ಗಂಟೆಗೆ ನಾನು ಮತ್ತು  ನನ್ನ ತಾಯಿ ನಮ್ಮ ಮನೆಯ ಮುಂದೆ ಕುಳಿತಾಗ ಜಗನ್ನಾಥನು ನಮ್ಮ ಮನೆಗೆ ಬಂದು ನನಗೆ  ನಾನು ಕೊಟ್ಟ ಸಾಲಕ್ಕೆ ಬಡ್ಡಿಗೆ ಬಡ್ಡಿ ಸೇರಿಸಿ ಮೀಟರ ಬಡ್ಡಿ ಹಚ್ಚಿದ್ದು ಅದರ ಒಟ್ಟು ಲೆಕ್ಕ  17, 880=00 ರೂಪಾಯಿ ಆಗುತ್ತದೆ ನೀನು ಒಟ್ಟು 14,000=00 ರೂಪಾಯಿ ಹಣ ಮಾತ್ರ ಕೊಟ್ಟಿದಿ  ಇನ್ನು 3880=00 ರೂಪಾಯಿ ಕೊಡಬೇಕು ಅಂತಾ ಪೀಡುಸುತ್ತಿದ್ದಾಗ  ನಾನು ನಮಗೆ ಸುಮ್ಮನೆ ತೊಂದರೆ ಕೊಡಬೇಡ ನೀನು ಕೊಟ್ಟ ಹಣಕ್ಕೆ ನಾವು ಕರಾರು ಮಾಡಿದ ಬಡ್ಡಿ ಹಾಕಿ ನಿನಗೆ ಕೊಟ್ಟಿದ್ದೇವೆ ಅಂತಾ ಅಂದಿದಕ್ಕೆ ರಂಡಿ ಮಗನೇ  ಸಾಲ ತಗೆದುಕೊಳ್ಳುವಾಗ ಒಂದು ಮಾತುಕೊಡುವಾಗ ಒಂದು ಮಾತು ಆಡತಿರಿಸುಳಿ ಮಕ್ಕಳ್ಯಾ ಅಂತಾ ಬೈದು  ಎರಡು   ದಿನದಲ್ಲಿ  ಮೀಟರ ಬಡ್ಡಿ ಹಣ 3880=00 ರೂಪಾಯಿ ಕೊಡಲಿಲ್ಲ ಅಂದರ ಊರಾಗ ಹ್ಯಾಂಗ ಸಂಸಾರ ಮಾಡತೀರಿ ಅಂತಾ ಧಮಕಿ ಹಾಕಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ. ಸುರೇಶ ತಂದೆ ಗೋಪಿಚಂದ ರಾಠೋಡ ಮು: ಮಮದಾಪೂರ ತಾಂಡಾ ತಾ:ಆಳಂದ ಇವರ ತಂದೆಗೆ 5 ಜನ ಅಣ್ಣತಮ್ಮಂದಿರು ಇದ್ದು ನಮ್ಮ ತಂದೆ-ತಾಯಿಗೆ ವಯಸ್ಸಾಗಿದ್ದು .ಆಳಂದ ಸಿಮಾಂತರದಲ್ಲಿ ಸರ್ವೆ ನಂ 115 ರಲ್ಲಿ 3 ಎಕರೆ ಹೋಲಾ ಇದ್ದು ಮತ್ತು ನನ್ನ ಅಣ್ಣ ಕೀಶನ ತಂದೆ ಗೋಪಿಚಂದ ರಾಠೋಡ ಇಬ್ಬರು ಕೂಡಿ ಕೊಂಡು ಆಳಂದದ ಶ್ರೀ ಸಿದ್ದಾರೋಡ ಕಂಠೆ ಇವರ ಹೊಲವನ್ನು ಪಾಲುಗಾರಿಯಿಂದ ಮಾಡಿದ್ದು ಮಾಡುವ ಸಂದರ್ಭದಲ್ಲಿ ನಮಗೆ ಪರಿಚಯದ ನಮ್ಮ ಜನಾಂಗದ ಹನುಮಾನ ನಗರ ತಾಂಡಾದ ವಿಜಯ ತಂದೆ ಶಂಕರ ರಾಠೋರ ಇತನ ಹತ್ತಿರ ಒಂದು ವರ್ಷದ ಹಿಂದೆ 25,000 ರೂಪಾಯಿ ಗೆ 5% ರಂತೆ ಬಡ್ಡಿ ತೆಗೆದುಕೊಂಡು ಆ ಹಣವನ್ನು ನಮ್ಮ ಸ್ವಂತ ಹೊಲದ ಬೀಜ ಮತ್ತು ಗೊಬ್ಬರಕ್ಕೆ ಹಾಗು ಪಾಲಿಗಾರಿಕೆಯಿಂದ ಮಾಡಿದ  ಹೊಲದ ವ್ಯವಸಾಯಕ್ಕೆ  ಹಾಕಿದ್ದು ಇರುತ್ತದೆ.          ನಂತರ 3 ತಿಂಗಳ ಹಿಂದೆ ವಿಜಯಕುಮಾರನು ಹಣ ಕೊಡು ಬಡ್ಡಿ ಬಹಳ ಆಗುತ್ತಿದೆ ಅಂತಾ ಅನ್ನುತ್ತಿದ್ದು ಅದಕ್ಕೆ ನಾನು ಮತ್ತು ನಮ್ಮ ಅಣ್ಣ ಕೂಡಿಕೊಂಡು ಬಡ್ಡಿ ಗಂಟು ಸೇರಿಸಿ ಅವನಿಗೆ 50,000 ರೂಪಾಯಿ ಕೊಟ್ಟಿದ್ದು ಇರುತ್ತದೆ .ಆದರೆ ಸದರಿ ವಿಜಯಕುಮಾರ ಬಡ್ಡಿಗೆ ಚಕ್ರಬಡ್ಡಿ ಹಚ್ಚಿ ಈಗ 90,000 ಆಗುತ್ತದೆ ಕೊಡಬೇಕು ಅಂತಾ ನಮಗೆ ಪಿಡಿಸುತ್ತಾ ಬಂದಿರುತ್ತಾನೆ. ದಿನಾಂಕ 28/05/2015 ರಂದು ನಾನು ಮತ್ತು ನನ್ನ ಅಣ್ಣ ಕೀಶನ ಪಾಲುಗಾರಿಗೆ ಮಾಡಿದ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ವಿಜಯ ರಾಠೋಡ ಇತನು ಬಂದು ಏ ರಂಡಿ ಮಕ್ಕಳೇ ನೀವು ತೆಗೆದುಕೊಂಡ ಹಣ ಇನ್ನು ಮುಟ್ಟಿರುವುದಿಲ್ಲಾ ನಾನು ಕೊಟ್ಟ ಹಣಕ್ಕೆ ನೀವು ಕೇವಲ 5% ರಂತೆ ಬಡ್ಡಿ ಮಾತ್ರ ಕೊಟ್ಟಿದಿರಿ 10% ರಂತೆ ನಾನು ಬಡ್ಡಿಗೆ ಚಕ್ರ ಬಡ್ಡಿ ಮಾಡಿ ಲೆಕ್ಕಾಮಾಡಿದ್ದು ಈಗ ನೀವು ನನಗೆ ಇನ್ನು 90,000 ರೂಪಾಯಿ ಕೊಡಬೇಕು ಅಂತಾ ಬಂದು ನಮಗೆ ಜೀವದ ಭಯ ಹಾಕಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೌಕ ಠಾಣೆ : ಶ್ರೀ ಪಂಡರಿ ಚವ್ಹಾಣ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹಾಗೂ ಲೇವಾದೇವಿ ಸಹಾಯಕ ನಿಬಂಧಕರು ಕಲಬುರಗಿ ರವರು ಮಾನ್ಯ ಉಪನಿಬಂಧಕರು ಸಹಕಾರ ಸಂಘಗಳು ಕಲಬುರಗಿ ಹಾಗು ಲೇವಾದೇವಿ ಉಪ ನಿಬಂಧಕರು ಕಲಬುರಗಿ ರವರ ಆದೇಶದ ಪ್ರಕಾರ ದಿನಾಂಕ 18/03/2015 ರಂದು ಅಂಗಡಿ ಸಂಖ್ಯೆ 9/588/1/15 ಒಂದನೇಯ ಮಹಡಿ ಮಾರುತಿ ಗ್ಯಾರೇಜ ಹತ್ತಿರ ಖಾದರಿ ಚೌಕ ಶಿವನಗರ ಆಳಂದ ರಸ್ತೆ ಕಲಬುರಗಿಯಲ್ಲಿ ಶ್ರೀ ವಿಜಯಕುಮಾರ ತಂದೆ ಸಿದ್ರಾಮಪ್ಪ ಸಲಗರ ಸಾ: ಗೋಳಾ(ಬಿ) ತಾ: ಆಳಂದ ಇವರು ಕರ್ನಾಟಕ ಲೇವಾದೇವಿ ಕಾಯ್ದೆ 1961 ಮತ್ತು ನಿಯಮ 1965 ಲೇವಾದೇವಿ ಕಾಯ್ದೆ ಕಲಂ. 5 ರ ಪ್ರಕಾರ ಲೇವಾದೇವಿ ಪರವಾನಿಗೆ ಪಡೆಯದೇ ಅನಧೀಕೃತವಾಗಿ ಹಣಕಾಸು ವ್ಯವಹಾರ ಮಾಡುತ್ತಿರುವುದು ಅನಿರೀಕ್ಷಿತ ಬೆಟ್ಟಿಯ ಸಮಯದಲ್ಲಿ ಕಂಡು ಬಂದ ಪ್ರಯುಕ್ತ  ದಾಳಿ ಮಾಡಿ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.