POLICE BHAVAN KALABURAGI

POLICE BHAVAN KALABURAGI

30 October 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಹರೀಶಕುಮಾರ ತಂದೆ ರಾಮು ಸಾ:ಹೆಚ್‌ಎಮ್‌‌ಪಿ ಕಾಲೋನಿ ಶಹಾಬಾದ ರವರು  ನಾನು ದಿನಾಂಕ:28/10/2012 ರಂದು 6.00 ಪಿಎಂ ಸುಮಾರಿಗೆ ನಮ್ಮ  ಕಾಲೋನಿಯ ಟೇನಿಸನ್‌ ರವರ ಸಿಟಿ-100 ಮೋಟಾರ ಸೈ ನಂ.ಕೆಎ-32 ಆರ್‌-1540 ನೇದ್ದನ್ನು ತೆಗೆದುಕೊಂಡು ನನ್ನ ಗೆಳೆಯ ರಮೇಶನೊಂದಿಗೆ, ರಮೇಶನ ಹೊಲಕ್ಕೆ ಹೋಗಿ ಮರಳಿ ಶಹಾಬಾಕ್ಕೆ ಬರುವಾಗ ಮೊಟಾರ ಸೈಕಲ ರಮೇಶ ಇತನು ಚಲಾಯಿಸುತ್ತಿದ್ದನು. ನಾನು ಹಿಂದುಗಡೆ ಕುಳಿತಿದ್ದೆ.  ಅಂದಾಜು 7.30 ಪಿಎಂ ಸುಮಾರಿಗೆ ನಾವು ಕಾಗಿಣಾ ಬ್ರೀಜ ದಾಟಿ ವೇಟ ಬ್ರೀಜ ಹತ್ತಿರ ಮೋಟಾರ ಸಿಲ್ಲಿಸಿ ಮೋಟಾರ ಸೈಕಲದಿಂದ ಇಳಿಯುತ್ತಿರುವಾಗ ಹಿಂದುಗಡೆಯಿಂದ ಒಬ್ಬ ಟಂಟಂ ಚಾಲಕನು ತನ್ನ ಟಂಟಂ ಅನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಬಲಗಾಲಿಗೆ ಡಿಕ್ಕಿ ಪಡಿಸಿ ಭಾರಿ ಅಪಘಾತ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:136/2012 ಕಲಂ:279,337,338 ಐಪಿಸಿ ಸಂ:187 ಐಎಮ್‌ವಿ ಆಕ್ಟ್‌‌   ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ: ಶ್ರೀ ಮಾರುತಿ ತಂದೆ ಮಾಣಿಕರಾವ ಪಿಂಪಲೆ ಸಾಃ ಎಂ.ಬಿ ನಗರ ಹೊಸ ಬಡಾವಣೆ ಗುಲಬರ್ಗಾ ರವರು ದಿನಾಂಕ:28/10/2012 ರಂದು ರಾತ್ರಿ 11:00 ಪಿ.ಎಮ. ಕ್ಕೆ ಎಂ.ಬಿ ನಗರ ಹೊಸ ಬಡಾವಣೆಯಲ್ಲಿರುವ ಖಾನ್ ಕಾಂಪ್ಲೆಕ್ಸ ನಲ್ಲಿರುವ ಅಲ್ಟ್ರಾಟೆಕ್ ಸಿಸ್ಟಮ್ ಗೋದಾಮಿನ ಬೀಗವನ್ನು ಹಾಕಿಕೊಂಡು ಮನೆಗೆ ಹೋಗಿದ್ದು ದಿನಾಂಕಃ29/10/2012 ರಂದು 10:00 ಎ.ಎಂ ಕ್ಕೆ ಗೋದಾಮಿಗೆ ಬಂದು ನೋಡಲು ಗೋದಾಮ ಬಾಗಿಲಿನ ಕೀಲಿ ಮುರಿದು ಯಾರೋ ಕಳ್ಳರು ಗೋದಾಮಿನಲ್ಲಿರುವ ಹಾವೆಲ್ಸ್ ಕಂಪನೀಯ  ಕಾಪರ್ ವೈರ್ ಗಳು ಅ||ಕಿ|| 2,95,060/- ನೇದ್ದವುಗಳು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ:114/2012 ಕಲಂ 457, 454, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ: ಧರ್ಮಿಂದ್ರಕುಮಾರ ತಂದೆ ರಾಮಲಾಲ ಠಾಕೂರ ಸಾ|| ಠಾಕೂರ ಗೌರಿ (ಯುಪಿ) ಹಾ.ವ|| ಕೋಡ್ಲಾ ಕ್ರಾಸ ವಿ.ಎಸ್.ಎಫ್. ಸೇಡಂ ರವರು ನಾನು ದಿನಾಂಕ:29-10-2012 ರಂದು ಮುಂಜಾನೆ 8-00 ಗಂಟೆಯ ಸುಮಾರಿಗೆ ಪ್ರತಿ ದಿವಸದಂತೆ ಲೈನ್ ಒನ್ನ ಇ,ಎಸ್,ಪಿ ವಿ,ಸಿ ಎಫ್, ಸೇಡಂದಲ್ಲಿ ಕೆಲಸ ಮಾಡಲು ಹೋದೆನು ನನ್ನ ಹಾಗೆಯ ನಬಬುಲ್ ತಂದೆ ಶೀರಾಜೊದ್ದಿನ್, ಬಿಂದ ಯಾದವ್, ಫತ್ರು ಚವ್ಹಾಣ ಕೂಡಿಕೊಂಡು ಪ್ಯಾನೇಲ್ ಡಿಸ ಮೇಂಟಲಿಂಗ ಕಟಿಂಗ ಕೆಲಸ ಮಾಡುತ್ತಿದ್ದೆವು, ಮದ್ಯಾಹ್ನ 14-10 ಗಂಟೆ ಸುಮಾರಿಗೆ ನಾನು ಕೆಲಸ ಮಾಡುವಾಗ ನಬಬುಲ್ ಇತನು ಸೇಪಟಿ ವಸ್ತುಗಳನ್ನು ಹಾಕಿಕೊಳ್ಳದೆ ಇದ್ದುದ್ದರಿಂದ ಕೆಲಸ ಮಾಡುವಾಗ ಆತನ ಕಾಲು ಜಾರಿ ಮೇಲಿಂದ ಕೆಳಗೆ ಮುಖಮಾಡಿ ಬಿದ್ದನು ಆಗಾ ಆತನೊಂದಿಗೆ ಕೆಸಲ ಮಾಡುತ್ತಿರುವ ನಾವೆಲ್ಲರು ಕೆಳಗೆ ಬಂದು ನೋಡಲು ಆತನ ಹಾಣೆಯ ಬಲಬಾಗಕ್ಕೆ ಹಾಗೂ ಬಲಗೈ ಮಣ ಕೈಕೆಳಗೆ ಭಾರಿ ರಕ್ತಗಾಯಾಗಳಾಗಿದ್ದವು. ಉಪಚಾರ ಕುರಿತು ಹೈದ್ರಾಬಾದ ಗ್ಲೋಬಲ್  ಆಸ್ಪತ್ರೆಗೆ ಸೇರಿಕೆ ಮಾಡಿದ್ದು,  ಉಪಚಾರ ಫಲಕಾರಿಯಾಗದೆ ಸಾಯಂಕಾಲ ಮೃತ್ತ ಪಟ್ಟಿರುತ್ತಾನೆ, ನಬಬುಲ್ ಇತನು ಕೆಲಸ ಮಾಡುವಾಗ ಆತನಿಗೆ ಸೇಫ್ಟಿ ಸಲುವಾಗಿ ಗುತ್ತೇದಾರನಾದ ಸಂದೀಪ ನಾಯರ ಎಂ.ಡಿ ಹಾಗೂ ಸೈಟ್ ಇಂಜನೀಯರ ಖತೀರ ವೇಲ್ ತಂದೆ ಶೇಲ್ವಂ ಹಾಗೂ ಪ್ಯಾಕ್ಟರಿಯ ಜನರಲ್ ಮ್ಯಾನೇಜರ ಆರ್,ಎಸ್,ಪಾಟೀಲ ರವರ ಅತೀವ ನೀಷ್ಕಾಳಜಿತದಿಂದ ಈ ಘಟನೆ ಜರಗಿರುತ್ತದೆ, ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:222/2012 ಕಲಂ 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES


ಮಂಗಳ ಸೂತ್ರ ಸುಲಿಗೆಗೆ ಪ್ರಯತ್ನ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ ಜಟಾ ಶಂಕರ ತಂದೆ ಕೆ.ಪಿ. ಶುಕ್ಲಾ ವ: 40 ಉ: ಅಸಿಸ್ಟೆಂಟ ಸ್ಟೇಶನ ಮಾಸ್ಟರ ಹುಣಸಿಲ ಹಡಗಿಲ್ ಸಾ:ಸುಲ್ತಾನಪೂರ ಉತ್ತರ ಪ್ರದೇಶ ರಾಜ್ಯ ಹಾ.ವ ಚೆನ್ನಾರೆಡ್ಡಿ ರವರ ಮನೆಯಲ್ಲಿ ಬಾಡಿಗೆ ಮಾಹಾವೀರ ನಗರ ಕೋಠಾರಿ ಭವನ ಹಿಂದೆ ಗುಲಬರ್ಗಾ ರವರು ನಾನು ಮತ್ತು ನನ್ನ ಹೆಂಡತಿ ಮೀನು ಶುಕ್ಲಾ  ನಮ್ಮ ಮಕ್ಕಳ ಹೋಮ್ ವರ್ಕ ಪ್ರೋಜೇಕ್ಟ ಸಲುವಾಗಿ ಗೋದುತಾಯಿ ನಗರದ ಮದರ ತೇರಿಸಾ ಶಾಲೆ ಹತ್ತಿರ ಇರುವ ಬುಕ ಸ್ಟಾಲ ಅಂಗಡಿಗೆ ದಿನಾಂಕ:28-10-2012 ರಂದು ಸಾಯಂಕಾಲ 6-45 ಗಂಟೆ ಸುಮಾರಿಗೆ ಹೋಗಿದ್ದಾಗ ಸ್ಪೇಶನರಿ ವಸ್ತುಗಳನ್ನು ಖರೀದಿಸಿಕೊಂಡು ಹೋಗುತ್ತಿರುವಾಗ ಯಾವನೋಬ್ಬ ಸಾದಾಗಪ್ಪು ಬಣ್ಣದ ಹುಡಗನು ಎದುರುಗಡೆಯಿಂದ ಬಂದವನೇ ನನ್ನ ಹೆಂಡತಿ ಮೀನು ಶುಕ್ಲಾ ಇವಳ ಕೋರಳಲಿ ಕೈ ಹಾಕಿ ಸರ್ ಕಿತ್ತುಕೊಳ್ಳಲು ಪ್ರಯತ್ನಿಸಿದನು. ಆಗ ನನ್ನ ಹೆಂಡತಿ ಒಮ್ಮೇಲೆ ಚೀರಾಡಲಿಕ್ಕೆ ಹತ್ತಿದಾಗ ರೇಲ್ವೆ ಪಟರಿ ದಾಟಿ ಎನ್.ಜಿ.ಓ ಕಾಲೋನಿ ಕಡೆಗೆ ಓಡಿ ಹೋಗುತ್ತಿರುವಾಗ ಆತನಿಗೆ ನಾನು ಎನ್.ಜಿ.ಓ ಕಾಲೋನಿಯವರೆಗೆ ಬೆನ್ನು ಹತ್ತಿ ಹೋಗಿದ್ದು ಅಲ್ಲಿಯ ಕೆಲವು ಸಾರ್ವಜನಿಕರು  ಹಿಡಿಯಲು ಪ್ರಯತ್ನ ಮಾಡಿದ್ದು ಅವರಿಂದಲೂ ಸಹ ತಪ್ಪಿಸಿಕೊಂಡು ಹೋಗಿರುತ್ತಾನೆ. ಆಗ ಅಲ್ಲಿದ್ದ ಜನರು ಆ ವ್ಯಕ್ತಿಯ ಹೆಸರು ಆಶ್ಪಾಕ ಅಹ್ಮದ ರಹೆಮತ ನಗರ ಪಿ.ಎನ್.ಟಿ ಕಾಲೋನಿ ಗುಲಬರ್ಗಾ ಅಂತಾ ಮಾತನಾಡುತ್ತಿರುವುದನ್ನು ಕೇಳಿರುತ್ತೆನೆ.ಕಾರಣ ಸದರಿ ಅಶ್ಪಾಕ ಅಹ್ಮದ ಸಾ: ರಹೆಮತ ನಗರ ಪಿ.ಎನ್.ಟಿ ಕಾಲೋನಿ ಗುಲಬರ್ಗಾ ಇತನು ನನ್ನ ಹೆಂಡತಿಯ ಕೊರಳಲಿಯ ಬಂಗಾರದ ಮಂಗಳಸೂತ್ರ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದು ಸದರಿಯವನಿಗೆ ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಠಾಣೆ ಗುನ್ನೆ ನಂ:96/2012 ಕಲಂ, 393 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಾನಸಿಕ ಹಿಂಸೆ ಕೊಟ್ಟಿದ್ದರಿಂದ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ವಿಜಯಲಕ್ಷ್ಮಿ ಗಂಡ ರಾಜಶೇಖರ ಸೇಡಂ ಸಾ|| ರೇವಣಸಿದ್ದೇಶ್ವರ ಕಾಲೋನಿ  ನನ್ನ ಮಗನಾದ ಲಕ್ಷ್ಮೀಕಾಂತನಿಗೆ  ಅಗಸ್ಟ ತಿಂಗಳಲ್ಲಿ ನಮ್ಮ ಮನೆಯ ಪಕ್ಕದವರಾದಕಲ್ಯಾಣಯ್ಯ ಸ್ವಾಮಿ ಸಾ: ಜಯ ನಗರ ಗುಲಬರ್ಗಾ ರವರು ಒಂದು ಕನ್ಯ ತೋರಿಸಿದ್ದರು, ಹುಡುಗಿ ಮೆಳ್ಳಗಣ್ಣು ಇದ್ದುದರಿಂದ ನಾವು ಒಪ್ಪಿಗೆ ಬಾರದ ಕಾರಣ ಆ ಕನ್ಯ ನಮಗೆ ಇಷ್ಟ ವಿಲ್ಲವೆಂದು ಸದರಿ ಕಲ್ಯಾಣಯ ಸ್ವಾಮಿಗೆ ತಿಳಿಸಿದ್ದು.  ಅದಕ್ಕೆ ಕಲ್ಯಾಣಯ ಸ್ವಾಮಿ ನನ್ನ ಗಂಡನಿಗೆ ತಾನು ತೋರಿಸಿದ ಕನ್ನೆಯ  ಲಗ್ನ ಮಾಡಿರಿ ಎಂದು ಪದೇ ಪದೇ ಫೋನ ಮುಖಾಂತರ ನನ್ನ ಗಂಡನಿಗೆ ಒತ್ತಾಯಿಸಿದ್ದು ನಾವು  ಒಪ್ಪದ್ದೇ ಇದುದ್ದಕ್ಕೆ ಕಲ್ಯಾಣಯ್ಯ ಸ್ವಾಮಿ ಇತನು ನನ್ನ ಮಾತಿಗೆ ಒಪ್ಪದೆ ಇದ್ದರೆ ಜೇವರ್ಗಿ ಪ್ಲಾಟಗಳ ಕೇಸನಲ್ಲಿ ನಾನೆ ಸಾಕ್ಷಿ ಇದ್ದು. ನಿಮ್ಮ ಕೇಸ ಬಗ್ಗೆ ಸಾಕ್ಷಿ ಹೇಳುವದಿಲ್ಲ ಅಂತಾ ಮಾನಸಿಕ ಹಿಂಸೆ ಕೊಟ್ಟಿದ್ದರಿಂದ ನನ್ನ ಗಂಡನಾದ ರಾಜಶೇಖರ ಇತನು  ದಿನಾಂಕ: 29-10-2012 ರಂದು ಸಾಯಂಕಾಲ 4 ಗಂಟೆಯಿಂದ 5 ಗಂಟೆ ಮಧ್ಯದ ಅವಧಿಯಲ್ಲಿ ತನ್ನ ಮನಸೊಂದು ತನ್ನ ಮನೆಯಲ್ಲಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಮೈಯಿಗೆ ಬೆಂಕಿ ಹಚ್ಚಿಕೊಂಡಿದ್ದರಿಂದ ತಲೆಯಿಂದ ಎರಡು ಮೊಳಕಾಲವರೆಗೆ ಪೂರ್ತಿ ಸುಟ್ಟಿದ್ದು ಇರುತ್ತದೆ. ಈ ಘಟನೆ ಕಲ್ಯಾಣಯ ಸ್ವಾಮಿಯವರೇ ಕಾರಣಿಭೂತನಾಗಿರುತ್ತಾನೆ. ಸದರಿಯವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:343/2012 ಕಲಂ 506,306, 511 ಐಪಿಸಿ ಪ್ರಕಾರ . ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.