POLICE BHAVAN KALABURAGI

POLICE BHAVAN KALABURAGI

27 May 2014

Gulbarga District Reported Crimes

ಕೊಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಶಮಶದ ಆಲಂ ತಂದೆ ಅಕ್ಬರ ಹುಸೆನ್‌ ಸಿದ್ದಿಕಿ ಸಾ:ಫಿರೋಜಾಬಾದ ಇವರಿಗೆ ಮೂರು ಜನ ಮಕ್ಕಳಿದ್ದು ನಾನು ಬಿಹಾರದ ನೂರಪೂರ ಬೆಗೂ ಸರಾಯಿತ ತಾ:ಜಿ:ದವನಿದ್ದು ಕಳೆದ 14 ವರ್ಷದಿಂದ ನಾವು ಫಿರೊಜಾಬಾದ ಗ್ರಾಮದಲ್ಲಿ ವಾಸವಾಗಿರುತ್ತೆವೆ. ದಿನಾಂಕ: 21/05/2014 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ನಾನು ಮಸೂತಿಯಲ್ಲಿದ್ದಾಗ ನನ್ನಹೆಂಡತಿಯಾದ ತರುನೂ ಆರಾ ಇವಳು ನನಗೆ ಫೊನ್‌ಮಾಡಿ ಈಗ 4:30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಮಗಳು ಸಾದಿಯ ಆಯಾತ ಇವಳು ಆಟವಾಡುತ್ತಿದ್ದಾಗ ಮನೆಯ ಮುಂದಿನ ಗಲ್ಲಿ ರಸ್ತೆಯ ಮೇಲಿಂದ ಈಗ 4:40 ಗಂಟೆಯ ಸುಮಾರಿಗೆ ಕಾಣದೆ ಇರುತ್ತಾಳೆ. ಅಂತಾ ತಿಳಿಸಿದ ಕೂಡಲೆ ನಾನು ಮನೆಗೆ ಹೋಗಿ ಇಬ್ಬ್ರೂ ಕೂಡಿಕೊಂಡು ಮನೆಯ ಆಜುಬಾಜು ಹುಡಕಾಡಿ, ಊರಿನ ಪ್ರಮೂಖ ರಸ್ತೆ ಹಾಗೂ ಗಲ್ಲಿಯ ರಸ್ತೆಸುತ್ತಲೂ ಹುಡಕಾಡಿದ್ರು ನನ್ನ ಮಗಳು ಸಿಕ್ಕಿರುವದಿಲ್ಲ. ಮರು ದಿವಸ  ನಾನು ಮತ್ತು ಲತೀಫ ಜಾಗಿರದಾರ ಹಾಗೂ ಇತರರು ಕೂಡಿಕೊಂಡು ನಮ್ಮೂರಿನ ಸುತ್ತ-ಮುತ್ತಲು ಹುಡಕಾಡಿದರೂ ನಮ್ಮ ಮಗಳು ಸಿಗದೆಯಿದ್ದರಿಂದ ದಿನಾಂಕ:22/೦5/2014 ರಂದು ಫರಹತಾಬಾದ ಪೊಲೀಸ್‌ ಠಾಣೆಗೆ ಹೋಗಿ ನನ್ನ ಮಗಳು ಕಾಣೆಯಾದ ಬಗ್ಗೆ ಪ್ರಕ್ರಣ ದಾಖಲಿಸಿ ಬಂದಿರುತ್ತೆನೆ. ದಿನಾಂಕ:26/05/2014 ರಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ನಮ್ಮೂರಿನ ಅಗಸಿ ಹತ್ತಿರ ನಿಂತಿದ್ದಾಗ ನಮ್ಮೂರಿನ ಇಸ್ಮಾಯಿಲ್‌ ಮುಜಾವರ, ಶಕೀಲ್‌ ಷಾ, ಮತ್ತು ಮೈನೊದ್ದಿನ ಗ್ವಾಡಿಕರ ಇವರು ಬಂದು ನನಗೆ ತಿಳಿಸಿದ್ದೆನಂದರೆ ನಾವು ಸುಬಾಶ್ಚಂದ್ರ ಮಾಮನಿ ಇವರ ಮನೆಯಲ್ಲಿ ಕಾರ್ಯಕ್ರಮ ಇದ್ದ ಪ್ರಯುಕ್ತ ಟೆಂಟ್‌ ಹೊಡೆಯುತ್ತಿರುವಾಗ ಬಸಯ್ಯ ಸ್ವಾಮಿ ಇವರ ಹಾಳುಬಿದ್ದ ಖುಲ್ಲಾ ಜಾಗೆಯಲ್ಲಿ ವಾಸನೆ ಬರುತ್ತಿದ್ದಾಗ ಅಲ್ಲಿ ನಾವು ಹೋಗಿ ನೋಡಿದಾಗ ಒಂದು ಹುಡಗಿಯ ಮೃತ ದೇಹದ ಬಿದ್ದಿರುತ್ತದೆ, ಅದು ನಿಮ್ಮ ಮಗಳ ಮೃತ ದೇಹ ಇರಬಹುದು ಅಂತಾ ತಿಳಿಸಿದ ಕೂಡಲೆ ನಾನು ಮತ್ತು ಅವರೆಲ್ಲರೂ ಕೂಡಿಕೊಂಡು ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಮೃತ ದೇಹದ ಮೇಲೆ ಅಂಗಿ( ಫ್ರಾಕ್‌) ಮತ್ತು ಅದ್ರ ಪಕ್ಕದಲ್ಲಿ ಬಿದ್ದಿದ್ದ ಅಂಡ್ರವೇರ ನೋಡಿ ಗುರುತಿಸಿದ್ದು, ಅದು ನನ್ನ ಮಗಳ  ಮೈಮೇಲೆ ಇದ್ದ ಬಟ್ಟೆಗಳಗಿದ್ದು ಸದರಿ ಮೃತ ದೇಹವು ನನ್ನ ಮಗಳಾದ ಸಾದಿಯಾ ಆಯಾತ ಇವಳದೆ ಇದ್ದಿರುತ್ತದೆ. ಸದ ರಿ ಮೃತ ದೇಹದ ತಲೆಯ ಭಾಗ ಪೂರ್ತಿಯಾಗಿ ಒಡೆದು ಬೇರೆಬೇರೆಯಾಗಿಬಿದ್ದಿರುತ್ತದೆ. ಮುಖದ ಭಾಗ ಇದ್ದಿರುವದಿಲ್ಲ ಬಲಗೈ ಮತ್ತು ಬಲಗಾಲು ಪೂರ್ತಿಯಾಗಿ ಇದ್ದಿರುವದಿಲ್ಲ, ಎಡಗಾಲು ಮತ್ತು ಎಡಗೈ ಇದ್ದು ಎಡಗಾಲು ಮೊಳಕಾಲಿನಿಂದ ಬೆರ್ಪಟ್ಟು ಬಿದ್ದಿರುತ್ತದೆ.ಬಾಯಿಯಲ್ಲಿನ ಒಸಡು ಬಿದ್ದಿದ್ದು  ಕೆಲವು ಹಲ್ಲುಗಳು ಇದ್ದಿರುವದಿಲ್ಲ.ಸದರಿ ಮೃತ ದೇಹದ ಮೈಮೇಲಿನ ಚರ್ಮ ಪೂರ್ತಿಯಾಗಿ ಸುಲಿದಿದ್ದು ಹುಳಗಳು ಕಂಡುಬಂದಿರುತ್ತವೆ ದಿನಾಂಕ:22/05/2014 ರಂದು 4:40 ಪಿಎಮ್‌ ದಿಂದ ಇಲ್ಲಿಯವರೆಗೆ ಸದ್ರಿ ನನ್ನ ಮಗಳಾದ ಸಾದಿಯಾ ಆಯಾತ ಇವಳನ್ನು ಯಾರೋ ಅಪರಿಚೀತರು ಯಾವುದೋ ದುರುದ್ದೇಶದಿಂದ ಕೊಲೆ ಮಾಡಿ ಗುರುತು ಸಿಗಂದಂತೆ ಮೂಖದ ಭಾಗ ಹಾಗೂ ದೇಹದ ಭಾಗದ ಮೇಲಿನ ಚರ್ಮ ಸುಲಿದು ನುಜ್ಜಗುಜ್ಜಾಗಿ ಮಾಡಿ ಬಿಸಾಡಿ ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.