POLICE BHAVAN KALABURAGI

POLICE BHAVAN KALABURAGI

07 April 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 06.04.2019 ರಂದು ಮಧ್ಯಾನ ರ್ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಲಾಲಗೇರಿ ಕ್ರಾಸ ಹತ್ತಿರ ನ್ಯೂ ರಾಘವೇಂದರ ಕಾಲೋನಿ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಇಬ್ಬರು ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಅರುಣ ಮುರಗುಂಡಿ ಪಿಐ ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಲಾಲಗೇರಿಕ್ರಾಸ ಹತ್ತಿರ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಲಾಲಗೇರಿ ಕ್ರಾಸ ದಿಂದ ನ್ಯೂ ರಾಘವೇಂದ್ರ ಕಾಲೋನಿ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1. ಶಿವಾನಂದ ತಂದೆ ಶಿವಗುಂಡಪ್ಪ ಸಾಸಟ್ಟಿ ಸಾ: ಮಹಾಲಕ್ಷ್ಮಿ ಲೇಔಟ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 910 ರೂ.  1 ಮಟಕಾ ಬರೇದ ಚೀಟಿ ಅ:ಕಿ: 00 ಮತ್ತು ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು 2. ಸಿದ್ದು ತಂದೆ ದತ್ತು ಹೊನಳ್ಳಿ ವಯ: ಸಾ: ಗಂಗಾನಗರ ಕಲಬುರಗಿ ಇತನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ ನಗದು ಹಣ 630 ರೂ. 1 ಮಟಕಾ ಬರೇದ ಚೀಟಿ ಅ:ಕಿ: 00 ಮತ್ತು ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಹೀಗೆ ಒಟ್ಟು 1540/- ರೂ ನಗದು ಹಣ, 2 ಮಟಕಾ ಚೀಟಿ, 2 ಬಾಲ ಪೇನ್ ದೊರೆತಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ರಾಘವೇಂದ್ರ ನಗರ ಠಾಣೆ : ದಿನಾಂಕ 06.04.2019 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಎಮ್ ಎಸ್ ಕೆ ಮಿಲ್ ಏರಿಯಾದ ಸಿಟಿ ಬಸ್ಸ ನಿಲ್ದಾಣದ ಹತ್ತಿರ ಇಬ್ಬರು ವ್ಯಕ್ತಿಗಳು ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಶ್ರೀ ಸುರೇಶ ಎ.ಎಸ್‌‌.ಐ  ರಾಘೌಏಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಎಮ್ ಎಸ್ ಕೆ ಮಿಲ್ ಸಿಟಿ ಬಸ್ಸ ನಿಲ್ದಾಣ ಹತ್ತಿರ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಇಬ್ಬರು ವ್ಯಕ್ತಿಗಳು ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ 1) ಇಸಾಮೋದ್ದಿನ ತಂದೆ ಆದಿಲಸಾಬ ಸಾ|| ಖಣಿ ಏರಿಯಾ ಕಲಬುರಗಿ ಅಂತ ತಿಳಿಸಿದ್ದು ನಂತರ  ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 750 ರೂ  2) 2 ಮಟಕಾ ಬರೇದ ಚೀಟಿಗಳು ಅ:ಕಿ: 00 ಮತ್ತು 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಹಾಗು 2) ಮಹಿಬೂಬ ಅಲಿ ತಂದೆ ಮಸ್ತಾನ ಸಾಬ ಸಾ|| ಝಂಡೇಗಲ್ಲಿ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 740 ರೂ  2) 2 ಮಟಕಾ ಬರೇದ ಚೀಟಿಗಳು ಅ:ಕಿ: 00 ಮತ್ತು 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಹೀಗೆ ಒಟ್ಟು 1) ನಗದು ಹಣ 1490 ರೂ, 2) ನಾಲ್ಕು ಮಟ್ಕಾ ಬರೇದ ಚಿಟಿಗಳು ಅ||ಕಿ|| 00 3) ಎರಡು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ:04/04/2019 ರಂದು ಬೆಳಿಗ್ಗೆ 9-30 ಸುಮಾರಿಗೆ ನನ್ನ ಮಗ ಸಿದ್ದಯ್ಯನು ಹವಳಗಾ ಗ್ರಾಮದಲ್ಲಿ ತನ್ನ ಗೇಳೆಯನ ಮದುವೆ  ಇರುತ್ತದೆ. ನಾನು ಮದುವೆಗೆ ಹೋಗಿ ಬರುತ್ತೆನೆ ಅಂತ ನಮ್ಮ ಗ್ರಾಮದ ಮಂಜುನಾಥ ತಂದೆ ಕುಪೆಂದ್ರ ಹೆರೂರ ರವರ ಮೋ ಸೈಕಲ ನಂ:ಕೆ-32 ಈಜಿ-8259 ನೇದ್ದನ್ನು ತಗೆದುಕೊಂಡು ನಮ್ಮ ಗ್ರಾಮದ ಗೌಡು @ ಜಯಕುಮಾರ ತಂದೆ ಬಾಬು ಹೆರೂರ ಈತನಿಗೆ ತನ್ನ ಜೋತೆ ಸದರಿ ಮೋಟಾರ ಸೈಕಲ ಮೇಲೆ ಕರೆದುಕೊಂಡು ಹೋಗಿರುತ್ತಾನೆ.ನಂತರ 4-30 ಪಿ,ಎಮ್.ಸುಮಾರಿಗೆ ಅಫಜಲಪೂರ ಪಟ್ಟಣದ ನಮ್ಮ ಸಂಭದಿಕರಾದ ಚಿದಾನಂದ ತಂದೆ ಮಲ್ಲಯ್ಯ ಹಿರೇಮಠ ರವರು ನನ್ನ ಮೋಬೈಲ ನಂಬರಕ್ಕೆ ಪೋನ ಮಾಡಿ ತಿಳಿಸಿದ್ದೆನಂದರೆ ನಾನು ದೇವಣಗಾಂವದಿಂದ ಅಫಜಲಪೂರಕ್ಕೆ ನನ್ನ ಮೋಟಾರ ಸೈಕಲ ಮೇಲೆ  ಬರುತ್ತಿದ್ದಾಗ 3-30 ಪಿ,ಎಮ್.ಸುಮಾರಿಗೆ ಸೋನ್ನ ಕ್ರಾಸ ಹತ್ತೀರ ನನ್ನಿಂದ ಸ್ವಲ ಮುಂದೆ ಮೋಟಾರ ಸೈಕಲ ಮೇಲೆ ಅಫಜಲಪೂರದ ಕಡೆ ಬರುತ್ತಿದ್ದ ನಿಮ್ಮ ಮಗನ ಮೋಟಾರ ಸೈಕಲಿಗೆ ಟಿಪ್ಪರ ನಂ:ಕೆಎ-28 ಸಿ-9038 ನೇದ್ದರ ಚಾಲಕನು ಟಿಪ್ಪರನ್ನು ಅತಿ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ನಿಮ್ಮ ಮಗನ ಮೋಟರ ಸೈಕಲಿಗೆ ಹಿಂದಿನಿಂದ ಅಪಘಾತ ಪಡಿಸಿ ತನ್ನ ಟಿಪ್ಪರ ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಸದ್ಯ ನಿನ್ನ ಮಗನಿಗೆ ಮತ್ತು ನಿನ್ನ ಮಗನ ಮೋಟಾರ ಸೈಕಲ ಮೇಲೆ ಹಿಂದೆ ಕುಳಿತಿದ್ದ ಹುಡುಗನಿಗೆ 108 ವಾಹನದಲ್ಲಿ ಹಾಕಿ ಕಲಬುರಗಿಯ ಆಸ್ಪತ್ರೇಗೆ ಕಳೂಹಿಸಿರುತ್ತೇನೆ ಅಂತ ತಿಳಿಸಿದ ಮೇಲೆ ನಾನು ಕಲಬುರಗಿಯ ಯುನೈಟೆಡ ಆಸ್ಪತ್ರೇಗೆ ಹೋಗಿ ನೋಡಲಾಗಿ ನನ್ನ ಮಗನಿಗೆ ಸದರಿ ಅಪಘಾತದಿಂದ ಎಡಗಡೆ ಮೇಲಕಿಗೆ,ಗದ್ದಕ್ಕೆ ಭಾರಿ ಗಾಯ ಮತ್ತು ಚಪ್ಪಿಗೆ ತರಚಿದ ಗಾಯಗಳಾಗಿರುವದು ಕಂಡು ಬಂತು ಮತ್ತು ನನ್ನ ಮಗನ ಜೋತೆ ಮೋಟಾರ ಸೈಕಲ ಮೇಲೆ ಹೋಗಿದ್ದ ಗೌಡಪ್ಪ @ ಜಯಕುಮಾರ ಹೆರೂರ ಈತನಿಗೆ ತಲೆಗೆ ಭಾರಿ ರಕ್ತಗಾಯಗಳಾಗಿರುವದು ಕಂಡು ಬಂತು ಮತ್ತು ಇಬ್ಬರು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ ಅಂತಾ ಶ್ರೀ ಸಿದ್ರಾಮಯ್ಯ ಹಿರೇಮಠ ಸಾ: ಹಳ್ಯಾಲ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಕುಮಾರಿ ಪ್ರೀಯಾಂಕ ತಂದೆ ಬಸವರಾಜ ಚಿಂಚನಸೂರ ಸಾ: ಚಿಂಚೋಳಿ ರವರು ವಿಧ್ಯಾಬ್ಯಾಸ ಮಾಡಿಕೊಂಡು ಉಪಜೀವನ ಸಾಗಿಸಿಕೊಂಡಿರುತ್ತೇನೆ ಹೀಗಿದ್ದು ನಾನು ಈಗ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಅಭ್ಯಾಸ ಮಾಡಿಕೊಂಡು ಅದರ ಜೋತೆ ಟ್ಯೂಟರಿಯಲ್ ಕಾಲ್ಸನಲ್ಲಿ ಕೆಲಸ ಮಾಡಿಕೊಂಡು ಇರುತ್ತೇನೆ. ನಾನು ಯುಗಾಧಿ ಹಬ್ಬದ ಸಲುವಾಗಿ ಬೆಂಗಳೂರಿನಿಂದ ನಮ್ಮ ಊರಿಗೆ ಬರಲೇಂದು ನಿನ್ನೆ ರಾತ್ರಿ ಬೆಂಗಳೂರಿನಿಂದ ಬಿಟ್ಟು ಇಂದು ಬೆಳಿಗ್ಗೆ ಕಲಬುರಗಿಗೆ ಬಂದು ಇಳಿದಿರುತ್ತೇನೆ. ಕಲಬುರಗಿ ಬಸ್ ನಿಲ್ದಾಣದಲ್ಲಿ ಹುಮನಾಬಾದ-ಮೀರಜ್ ಅಂತಾ ನಾಮ ಪಲಕ ಹಾಕಿದ್ದ ಬಸ್ ನಂ ಕೆಎ-38-ಎಫ್-1058 ನೇದ್ದು ಪ್ಲಾಟ್ ಫಾರಂ ನಲ್ಲಿ ನಿಂತಿದ್ದರಿಂದ ನಾನು ಸದರಿ ಬಸ ನಲ್ಲಿ ಹತ್ತಿ ಕುಳಿತುಕೊಂಡಿರುತ್ತೇನೆ ಸದರಿ ಬಸ್ ಮಲ್ಲಾಬಾದ ಗ್ರಾಮಕ್ಕೆ ನಿಲ್ಲಿಸುವುದಿಲ್ಲಾ ಅಂತಾ ನನಗೆ ಗೊತ್ತಾದ ಮೇಲೆ ನಾನು ಕಲಬುರಗಿಯಿಂದ ಅಫಜಲಪೂರ ವರೆಗೆ ಟಿಕೇಟ್ ತಗೆದುಕೊಂಡು ಮಲ್ಲಾಬಾದ ವರೆಗೆ ಪ್ರಾಯಾಣಿಸುತ್ತೇನೆ ಮಲ್ಲಾಬಾದ ಗ್ರಾಮ ಬಂದ ನಂತರ ನಾನು ಚಾಲಕ ಹಾಗೂ ನಿರ್ವಾಹಕರಿಗೆ ವಿನಂತಿ ಮಾಡಿಕೊಂಡು ಬಸ್ ನಿಲ್ಲಿಸುವಂತೆ ಕೇಳಿದಾಗ ಸದರಿ ಬಸ್ ಮಲ್ಲಾಬಾದ ಗ್ರಾಮದ ಬಸ್ ನಿಲ್ದಾಣ (ಕನಕದಾಸ ಚೌಕ) ಹತ್ತಿರ ನಿಲ್ಲಿಸಿದಾಗ ನಾನು ನನ್ನ ಲಗೇಜ ತಗೆದುಕೊಂಡು ಇಳಿಯುತ್ತಿರುವಾಗ ಸದರಿ ಬಸ್ ಚಾಲಕನು ಬಸ್ಸನ್ನು ನಿರ್ಲಕ್ಷತನದಿಂದ ವೇಗವಾಗಿ ಮುಂದಕ್ಕೆ ಚಲಾಯಿಸಿದ್ದರಿಂದ ನಾನು ಬಸ್ ನಿಂದ ಕೇಳಗೆ ಬಿದ್ದಿರುತ್ತೇನೆ. ಇದರಿಂದ ನನಗೆ ಸ್ವಂಟಕ್ಕೆ ಬಡೆದು ತರಚಿದ ಗಾಯ ಮತ್ತು ಭಾರಿ ಒಳ ಪೆಟ್ಟು ಆಗಿರುತ್ತದೆ ಮತ್ತು ನನ್ನ ಬಲಗೈಗೆ ರಕ್ತಗಾಯವಾಗಿರುತ್ತದೆ. ಸದರಿ ಘಟನೆಯು 9:30 .ಎಮ್ ಸುಮಾರಿಗೆ ಜರುಗಿರುತ್ತದೆ. ಘಟನೆ ನಂತರ ಬಸ್ ಚಾಲಕನು ಬಸ್ ನಿಲ್ಲಿಸಿದೇ ಹಾಗೆ ಚಲಾಯಿಸಿಕೊಂಡು ಹೋಗಿರುತ್ತಾನೆ. ನಂತರ ಅಲ್ಲಿದ್ದ ಸ್ಥಳಿಯರೊಬ್ಬರು 108 ವಾಹನಕ್ಕೆ ಕರೆ ಮಾಡಿ ನನಗೆ ಆಸ್ಪತ್ರೆ ಕಳುಹಿಸಿಕೊಟ್ಟಿರುತ್ತಾರೆ ಕಾರಣ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ-38-ಎಫ್-1058 ನೇದ್ದರ ಚಾಲಕ ಬಸ್ ಅನ್ನು ಅತೀವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಲು ಹೋಗಿ ನನಗೆ ಅಫಘಾತ ಪಡೆಸಿದ ಸದರಿ ಬಸ್ ಚಾಲಕನ ವಿರುದ್ದ ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.