ಹಲ್ಲೆ
ಪ್ರೆಕರಣ :
ಅಫಜಲಪೂರ ಠಾಣೆ : ದಿನಾಂಕ 17-10-2014 ರಂದು ಸಾಯಂಕಾಲ ಶ್ರೀಕಾಂತ ತಂದೆ
ಶಿವಾನಂದ ಜಮಾದಾರ ಸಾ : ಮಲ್ಲಾಬಾದ ಇವರು ಮಲ್ಲಾಬಾದ ಬಸ್ ನಿಲ್ದಾಣದ ಹತ್ತಿರ ಇದ್ದಾಗ ಆರೋಪಿ ಗಣಪತಿ ಈತನು ತನ್ನ ಮೊಟಾರ ಸೈಕಲನ್ನು ಒಮ್ಮೆಲೆ ಫಿರ್ಯಾದಿ ಮೈಮೇಲೆ ತೆಗೆದುಕೊಂಡು ಹೋಗಿದ್ದರಿಂದ ಈ ವಿಷಯಕ್ಕೆ ಫಿರ್ಯಾದಿ ಮತ್ತು ಆರೋಪಿತನ ಮದ್ಯ ಬಾಯಿ ತಕರಾರು ಆಗಿದ್ದು ಇಂದು ಬೆಳಿಗ್ಗೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಆರೋಪಿತರನ್ನು ಕರೆಯಿಸಿ ಬುದ್ದಿವಾದ ಹೇಳಿಸಿದ್ದು ನಂತರ ರಾತ್ರಿ 8:30 ಗಂಟೆಗೆ ಫಿರ್ಯಾದಿ ಚೌಡಿ ಕಟ್ಟಿಹತ್ತಿರ ಇದ್ದಾಗ ಆರೋಪಿತರು ತಮ್ಮ ಕೈಯಲ್ಲಿ ಕೊಡಲಿ ಹಿಡಿದುಕೊಂಡು ಬಂದು ಫಿರ್ಯಾದಿಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕೊಡಲಿನಿಯಿಂದ ತಲೆಯಮೇಲೆ ಹೊಡೆದು ಬಾರಿ ರಕ್ತಗಾಯ ಪಡಿಸಿ ಹಲ್ಲಿನಿಂದ ಎಡಗೈ ತೊರು ಬೆರಳಿಗೆ ಕಚ್ಚಿ ಬಾರಿ ರಕ್ತಗಾಯ ಪಡಿಸಿ ಹಾಗೂ ಮೈ ಕೈಗೆ ರಕ್ತಗಾಯ ಪಡಿಸಿ ಜೀವ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ
:
ಸಂಚಾರಿ ಠಾಣೆ : ಶ್ರೀ ಸಿದ್ದಯ್ಯಾ ತಂದೆ ಚನ್ನಬಸಯ್ಯಾ ಚಿಕ್ಕನಳ್ಳಿ, ಸಾಃ ರೇವಗ್ಗಿ, ತಾಃ
ಚಿತ್ತಾಪೂರ ರವರು ದಿನಾಂಕ 19-10-2014 ರಂದು 5-30 ಪಿ.ಎಮ್ ಕ್ಕೆ ಲಾಲಗೇರಿ ಕ್ರಾಸ್ ರೋಡಿಗೆ ಇರುವ ಖಿಲಾ ಪಕ್ಕದ
ರೋಡಿನಲ್ಲಿ ಅಟೋರಿಕ್ಷಾ ನಂ. ಕೆ.ಎ 32 ಎ 5422 ನೇದ್ದರಲ್ಲಿ ಕುಳಿತು ಸುಪರ ಮಾರ್ಕೆಟ ಕಡೆ ಹೋಗುತ್ತಿದ್ದಾಗ
ಅಟೋರಿಕ್ಷಾ ಚಾಲಕ ಮಲ್ಲಿಕಾರ್ಜುನ ತಂದೆ ಚಂದ್ರಕಾಂತ ಯಂಕಂಚಿ ಈತನು ತನ್ನ ಅಟೋರಿಕ್ಷಾವನ್ನು
ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಒಂದು ಕಾರಿಗೆ
ಎಡಗಡೆಯಿಂದ ಕಟ್ ಹೊಡೆದು ರೋಡಿನ ಪಕ್ಕಕ್ಕೆ ಇರುವ ಆರ್.ಸಿ.ಸಿ ವಿದ್ಯುತ ಕಂಬಕ್ಕೆ ಡಿಕ್ಕಿ
ಹೊಡೆದು ಅಪಘಾತ ಮಾಡಿದ್ದರಿಂದ ಫಿರ್ಯಾದಿ ಮತ್ತು ಆರೋಪಿ ಇಬ್ಬರು ಗಾಯಗೊಂಡಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.