POLICE BHAVAN KALABURAGI

POLICE BHAVAN KALABURAGI

22 June 2011

GULBARGA DISTRICT REPORTED CRIME






ಕೊಲೆ ಆರೋಪಿ ಬಂದನ :




ಶಹಾಬಾದ ನಗರ ಠಾಣೆ : ಶ್ರೀ ವಿರೇಶ ತಂದೆ ಗುರಲಿಂಗಪ್ಪಾ ಗುಳೇದ ದಳಪತಿ ಸಾ: ತೊನಸಳ್ಳಿ [ಎಸ್] ರವರು ದಿನಾಂಕ:20/06/2011 ರಂದು ತೊನಸಳ್ಳಿ [ಎಸ್] ಗ್ರಾಮದ ಮಲ್ಲಣ್ಣಾ ಮುತ್ತಾ ಗುಡಿಯ ಪಕ್ಕದಲ್ಲಿ ಮುಸ್ಲಿಂ ಅಪರಿಚಿತ ಹೆಣ್ಣು ಮಗಳನ್ನು ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ ಕಲ್ಲಿನಿಂದ ತಲೆಗೆ, ಹಣೆಗೆ , ಬಲಕಪಾಳಕ್ಕೆ, ಬಲಕಣ್ಣಿನ ಮೇಲೆ ಹೊಡೆದು ಬಾರಿ ರಕ್ತಗಾಯ ಪಡಿಸಿ ಕೊಲೆಮಾಡಿ ಮುಖದ ಮೇಲೆ , ತಲೆಯ ಮೇಲೆ ಮಣ್ಣು ಹಾಕಿ ಹೊಟ್ಟೆಯ ಮೇಲೆ ಕಲ್ಲು ಇಟ್ಟು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಸದ ಮೇಲಿಂದ ತನಿಖೆ ಕೈಕೊಂಡು ಇರುತ್ತದೆ.




ಮೃತಳ ಶವವನ್ನು ಶ್ರೀ ಲಾಲ ಅಹ್ಮದ ತಂದೆ ಮಹೇಬೂಬ ಸಾಬ ಶಿರಸಗಿ ಸಾ:ಮದರಿ ತಾ:ಜೇವರ್ಗಿ ಇತನು ಗುರುತಿಸಿ ಮೃತಳು ನನ್ನ ತಂಗಿ ಬಾಬನಬಿ ಗಂಡ ಅಲ್ಲಾ ಪಟೇಲ ಸಾ:ಭೋಸಗಾ ಹಾ:ವ:ಮದರಿ ಅಂತಾ ಹೇಳಿ ಮೃತ ಬಾಬನಬಿ ಇವಳಿಗೆ 3 ವರ್ಷದೊಳಗೆ 2 ಮದುವೆ ಮಾಡಿದರೂ ಕೂಡಾ ತೌವರು ಮನಗೆ ಬಂದು ತೌವರು ಮನೆಯಲ್ಲಿಯೂ ಯಾರಿಗೂ ಹೇಳದೇ ಕೇಳದೆ ಮನೆಯಿಂದ ಹೋಗುತ್ತಿದ್ದರಿಂದ ತಂದೆಯಾದ ಮಹಿಬೂಬಸಾಬ ಇತನು ನಮ್ಮ ಮನೆತನದ ಮರ್ಯಾದೆ ಕಳೆಯುತ್ತಿದ್ದಾಳೆ ಇವಳಿಗೆ ಮುಗಿಸಿಯೇ ಬಿಡಬೇಕು. ಅಂತಾ ನಿರ್ಧಾರ ಮಾಡಿಕೊಂಡು ಹೈದ್ರಾಬಾದಕ್ಕೆ ಮಗನ ಹತ್ತಿರ ಒಯ್ದು ಬಿಡುತ್ತೇನೆ ಅಂತಾ ಕರೆದುಕೊಂಡು ಹೋಗಿ ತೊನಸಳ್ಳಿ [ಎಸ್] ಗ್ರಾಮದ ಮಲ್ಲಣ್ಣಾ ಮುತ್ಯಾ ಗುಡಿಯ ಹತ್ತಿರ ದಿನಾಂಕ:19-20/06/2011 ರಂದು ರಾತ್ರಿ ಕಲ್ಲಿನಿಂದ ತಲೆಗೆ ಮುಖಕ್ಕೆ ಹೊಡೆದು ಬಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿ ಮುಖವು ಗುರ್ತಿಸಲಾರದಂತೆ ಮುಖದ ಮೇಲೆ ಮಣ್ಣು ಹಾಕಿ ಹೊಟ್ಟೆಯ ಮೇಲೆ ಕಲ್ಲು ಇಟ್ಟು ಮುಖಕ್ಕೆ ಗುರ್ತಿಸಲಾರದಂತೆ ಹೋಗಿದ್ದ ಮಹಿಬೂಬಸಾಬ ಇತನನ್ನು ಇಂದು ದಿನಾಂಕ: 22-06-2011 ರಂದು ಶಹಾಬಾದ ನಗರ ಠಾಣೆಯ ಪೊಲೀಸ್ ಇನ್ಸಪೇಕ್ಟರ ಮತ್ತು ಠಾಣೆಯ ಸಿಬ್ಬಂದಿಯವರು ಕಟ್ಟಿ ಸಂಗಾಯಿಯ ಭೀಮಾ ಬ್ರಿಡ್ಜ್ ಹತ್ತಿರ ದಸ್ತಗಿರಿ ಮಾಡಿಕೊಂಡು ನ್ಯಾಯಾಂಗ ಬಂದನಕ್ಕೆ ಕಳುಹಿಸಿ ಕೊಡಲಾಗಿದೆ.

GULBARGA DISTRICT REPORTED CRIMES

ರಸ್ತೆ ಅಪಘಾತ ಪ್ರಕರಣ :

ಮಹಾಗಾಂವ ಠಾಣೆ : ಶ್ರೀ ಆನಂದ ತಂದೆ ಖೂಬು ಚವ್ಹಾಣ ಸಾ|| ಹರಸೂರ ತಾಂಡಾ ತಾ|| ಜಿ|| ಗುಲಬರ್ಗಾ
ರವರು ನನ್ನ ಮಗನಾದ ಸಾಗರ ಇತನು ದಿನಾಂಕ: 22/6/2011 ರಂದು ಬೆಳ್ಳಿಗ್ಗೆ 9 ಗಂಟೆಗೆ ಊಟ ಮಾಡಿಕೊಂಡು ಶಾಲೆಗೆ ಹೋಗುವ ಸಂಬಂಧ ಹರಸೂರದಿಂದ ತಾವರಗೇರಾ ಕ್ರಾಸಿಗೆ ಹೋಗುವ ರೋಡನ್ನು ದಾಟುತ್ತಿರುವಾಗ ಹರಸೂರ ತಾಂಡಾದ ಬಸ್ಸನಿಲ್ದಾಣದ ಹತ್ತಿರ ರೋಡ ದಾಟುತ್ತಿರುವಾಗ ಹರಸೂರ ಕಡೆಯಿಂದ ಜೀಪ ನಂ ಕೆಎ 32 ಎಮ್‌ 1267 ನೇದ್ದರ ಚಾಲಕ ಮಲ್ಲಿನಾಥ ತಂದೆ ಚನ್ನಪ್ಪಾ ಮುದ್ದಾ ಇತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಸಾಗರ ಇತನಿಗೆ ಡಿಕ್ಕಿ ಪಡೆಸಿದ್ದಿಂದ ಆತನಿಗೆ ಮುಖದ ಮೇಲೆ ಎಡಗಲ್ಲಕ್ಕೆ ಹೊಟ್ಟೇಯ ಮೇಲೆ, ತರಚಿದ ರಕ್ತಗಾಯಗಳಾಗಿ ಎದೆಯ ಮೇಲೆ ತರಚಿದ ಗಾಯವಾಗಿ ಬಾರಿ ಒಳಪೆಟ್ಟಾಗಿ ಎಡಗೈ ಮುರಿದಂತೆ ಆಗಿದ್ದು ಆತನಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ತೆಗೆ ಕರೆ ತರುವಾಗ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಬ್ರಹ್ಮಪೂರ ಠಾಣೆ :ಶ್ರೀ ಕೇದಾರನಾಥ ತಂದೆ ಕೀಶನ ಸೋಮಾಣಿ ಸಾ|| ಮಕ್ತಂಪೂರ ಗುಲಬರ್ಗಾ ರವರು ನಾನು ದಿನಾಂಕ: 02-04-2011 ರಂದು ಸಾಯಂಕಾಲ ಸುಮಾರಿಗೆ ನನ್ನ ಹಿರೋ ಹೊಂಡಾ ಮೊಟಾರ ಸೈಕಲ್ ನಂ: ಕೆಎ 32 ಕೆ 3785 ಅ||ಕಿ|| 25,000-00 ನೇದ್ದು ಕಾಮತ ಹೊಟೇಲ್ ಹತ್ತಿರ ಎದುರುಗಡೆ ನಿಲ್ಲಿಸಿದಾಗ ಯಾರೋ ಕಳ್ಳರು ನನ್ನ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ:

ಫರತಾಬಾದ ಠಾಣೆ :
ಶ್ರೀಮತಿ ಜಯಶ್ರೀ ಗಂಡ ರವಿ ಹಾರೋಳಿ ಅಂಗನವಾಡಿ ಶಿಕ್ಷಕಿ ಸಾ|| ಕೊಳ್ಳೂರ ರವರು ನಾನು ಕೊಳ್ಳೂರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಸಹಾಯಕಿ ಅಂತಾ ಕೆಲಸ ನಿರ್ವಹಿಸುತ್ತಿದ್ದು, ದಿನಾಂಕ 20-6-11 ರಂದು ಮದ್ಯಾಹ್ನ ಮಕ್ಕಳು ಶಾಲೆಯಿಂದ ಹೋದ ನಂತರ ಬಾಗಿಲಿಗೆ ಬೀಗ ಹಾಕಿಕೊಂಡು ಗುಲಬರ್ಗಾಕ್ಕೆ ಬಂದಿರುತ್ತೆನೆ. ದಿನಾಂಕ 21-6-11 ರಂದು ಮುಂಜಾನೆ 8-30 ಗಂಟೆ ಸುಮಾರಿಗೆ ನನ್ನ ತಮ್ಮ ಶರಣಬಸಪ್ಪಾ ಇತನು ಕೊಳ್ಳೂರದಿಂದ ಫೋನ ಮಾಡಿ ನಿಮ್ಮ ಅಂಗನವಾಡಿ ಕೇಂದ್ರ ಕಳುವಾಗಿದೆ ಅಂತಾ ತಿಳಿಸಿದ ಕೂಡಲೆ ನಾನು ಕೊಳ್ಳೂರಕ್ಕೆ ಬಂದು ನೋಡಲಾಗಿ ಬಾಗಿಲಿಗೆ ಹಾಕಿದ ಕೀಲಿ ಇರಲಿಲ್ಲ. ಒಳಗಡೆ ಹೋಗಿ ನೋಡಲಾಗಿ ಮಕ್ಕಳ ಊಟಕ್ಕೆ ಇಟ್ಟಿರುವ ಪದಾರ್ಥಗಳು ಮತ್ತು ಮೆಡಿಸಿನ ಕಿಟ್, ಒಟ್ಟು ರೂ 1396 /- ಬೆಲೆ ಬಾಳುವದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIME

ಅಪಘಾತ ಪ್ರಕರಣ :

ಯಡ್ರಾಮಿ ಠಾಣೆ : ಭಿಮರಾಯ ತಂದೆ ರಾವುತಪ್ಪಾ ದಿಡ್ಡಿಮನಿ ಸಾ|| ಯಡ್ರಾಮಿ ರವರು ನಾನು ಮತ್ತು ನಮ್ಮ ಓಣಿಯ ನಿಂಗಪ್ಪಾ ಮತ್ತು ಇತರರು ಕೂಡಿಕೊಂಡು ತಿಪ್ಪೆಯಲ್ಲಿನ ಗೊಬ್ಬರ ಟ್ರಾಕ್ಟರ ತುಂಬಿಕೊಂಡು ಹೊಲದಲ್ಲಿ ಹಾಕಿ ಬರುವಂತೆ ಹೇಳಿದ್ದರಿಂದ ಟ್ರಾಕ್ಟರ ನಂ: ಕೆಎ 32 ಟಿ- 4452-53 ನೇದ್ದರ ಚಾಲಕ ತನ್ನ ವಾಹನವನ್ನು ಅತೀವೆಗವಾಗಿ ಮತ್ತು ಆಲಕ್ಷತನದಿಂದ ಚಲಾಯಿಸಿ ರೋಡಿನ ಮೇಲೆ ಬರುತ್ತಿದ್ದ ನನ್ನ ಮಗನಾದ ರಾವುತಪ್ಪಾ ಇತನಿಗೆ ಡಿಕ್ಕಿ ಪಡಿಸಿ ಓಡಿ ಹೋಗಿರುತ್ತಾನೆ ಮಗ ರಾವುತಪ್ಪಾ ಇತನ್ನು ಭಾರಿ ರಕ್ತಗಾಯ ಹೊಂದ್ದಿದರಿಂದ ದವಾಖಾನೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.