POLICE BHAVAN KALABURAGI

POLICE BHAVAN KALABURAGI

22 June 2011

GULBARGA DISTRICT REPORTED CRIMES

ರಸ್ತೆ ಅಪಘಾತ ಪ್ರಕರಣ :

ಮಹಾಗಾಂವ ಠಾಣೆ : ಶ್ರೀ ಆನಂದ ತಂದೆ ಖೂಬು ಚವ್ಹಾಣ ಸಾ|| ಹರಸೂರ ತಾಂಡಾ ತಾ|| ಜಿ|| ಗುಲಬರ್ಗಾ
ರವರು ನನ್ನ ಮಗನಾದ ಸಾಗರ ಇತನು ದಿನಾಂಕ: 22/6/2011 ರಂದು ಬೆಳ್ಳಿಗ್ಗೆ 9 ಗಂಟೆಗೆ ಊಟ ಮಾಡಿಕೊಂಡು ಶಾಲೆಗೆ ಹೋಗುವ ಸಂಬಂಧ ಹರಸೂರದಿಂದ ತಾವರಗೇರಾ ಕ್ರಾಸಿಗೆ ಹೋಗುವ ರೋಡನ್ನು ದಾಟುತ್ತಿರುವಾಗ ಹರಸೂರ ತಾಂಡಾದ ಬಸ್ಸನಿಲ್ದಾಣದ ಹತ್ತಿರ ರೋಡ ದಾಟುತ್ತಿರುವಾಗ ಹರಸೂರ ಕಡೆಯಿಂದ ಜೀಪ ನಂ ಕೆಎ 32 ಎಮ್‌ 1267 ನೇದ್ದರ ಚಾಲಕ ಮಲ್ಲಿನಾಥ ತಂದೆ ಚನ್ನಪ್ಪಾ ಮುದ್ದಾ ಇತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಸಾಗರ ಇತನಿಗೆ ಡಿಕ್ಕಿ ಪಡೆಸಿದ್ದಿಂದ ಆತನಿಗೆ ಮುಖದ ಮೇಲೆ ಎಡಗಲ್ಲಕ್ಕೆ ಹೊಟ್ಟೇಯ ಮೇಲೆ, ತರಚಿದ ರಕ್ತಗಾಯಗಳಾಗಿ ಎದೆಯ ಮೇಲೆ ತರಚಿದ ಗಾಯವಾಗಿ ಬಾರಿ ಒಳಪೆಟ್ಟಾಗಿ ಎಡಗೈ ಮುರಿದಂತೆ ಆಗಿದ್ದು ಆತನಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ತೆಗೆ ಕರೆ ತರುವಾಗ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಬ್ರಹ್ಮಪೂರ ಠಾಣೆ :ಶ್ರೀ ಕೇದಾರನಾಥ ತಂದೆ ಕೀಶನ ಸೋಮಾಣಿ ಸಾ|| ಮಕ್ತಂಪೂರ ಗುಲಬರ್ಗಾ ರವರು ನಾನು ದಿನಾಂಕ: 02-04-2011 ರಂದು ಸಾಯಂಕಾಲ ಸುಮಾರಿಗೆ ನನ್ನ ಹಿರೋ ಹೊಂಡಾ ಮೊಟಾರ ಸೈಕಲ್ ನಂ: ಕೆಎ 32 ಕೆ 3785 ಅ||ಕಿ|| 25,000-00 ನೇದ್ದು ಕಾಮತ ಹೊಟೇಲ್ ಹತ್ತಿರ ಎದುರುಗಡೆ ನಿಲ್ಲಿಸಿದಾಗ ಯಾರೋ ಕಳ್ಳರು ನನ್ನ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ:

ಫರತಾಬಾದ ಠಾಣೆ :
ಶ್ರೀಮತಿ ಜಯಶ್ರೀ ಗಂಡ ರವಿ ಹಾರೋಳಿ ಅಂಗನವಾಡಿ ಶಿಕ್ಷಕಿ ಸಾ|| ಕೊಳ್ಳೂರ ರವರು ನಾನು ಕೊಳ್ಳೂರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಸಹಾಯಕಿ ಅಂತಾ ಕೆಲಸ ನಿರ್ವಹಿಸುತ್ತಿದ್ದು, ದಿನಾಂಕ 20-6-11 ರಂದು ಮದ್ಯಾಹ್ನ ಮಕ್ಕಳು ಶಾಲೆಯಿಂದ ಹೋದ ನಂತರ ಬಾಗಿಲಿಗೆ ಬೀಗ ಹಾಕಿಕೊಂಡು ಗುಲಬರ್ಗಾಕ್ಕೆ ಬಂದಿರುತ್ತೆನೆ. ದಿನಾಂಕ 21-6-11 ರಂದು ಮುಂಜಾನೆ 8-30 ಗಂಟೆ ಸುಮಾರಿಗೆ ನನ್ನ ತಮ್ಮ ಶರಣಬಸಪ್ಪಾ ಇತನು ಕೊಳ್ಳೂರದಿಂದ ಫೋನ ಮಾಡಿ ನಿಮ್ಮ ಅಂಗನವಾಡಿ ಕೇಂದ್ರ ಕಳುವಾಗಿದೆ ಅಂತಾ ತಿಳಿಸಿದ ಕೂಡಲೆ ನಾನು ಕೊಳ್ಳೂರಕ್ಕೆ ಬಂದು ನೋಡಲಾಗಿ ಬಾಗಿಲಿಗೆ ಹಾಕಿದ ಕೀಲಿ ಇರಲಿಲ್ಲ. ಒಳಗಡೆ ಹೋಗಿ ನೋಡಲಾಗಿ ಮಕ್ಕಳ ಊಟಕ್ಕೆ ಇಟ್ಟಿರುವ ಪದಾರ್ಥಗಳು ಮತ್ತು ಮೆಡಿಸಿನ ಕಿಟ್, ಒಟ್ಟು ರೂ 1396 /- ಬೆಲೆ ಬಾಳುವದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: