POLICE BHAVAN KALABURAGI

POLICE BHAVAN KALABURAGI

14 December 2014

KALABURAGI DIST REPORTED CRIME

ಮಟಕಾ ಜೂಜುಕೋರನ ಬಂಧನ:
ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 13/12/2014 ರಂದು ಶ್ರೀ ಸಂತೋಷ ಎಸ್. ರಾಠೋಡ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ರವರು ಶ್ರೀ ಕಲ್ಲಪ್ಪ ಸಿಪಿಸಿ 265 ರವರೊಂದಿಗೆ ಠಾಣೆಯ ಜೀಪ್ ನಂ ಕೆ.ಎ 32, ಎಮ 1563 ನೇದ್ದರಲ್ಲಿ ಜವಳಿ (ಡಿ) ಗ್ರಾಮದಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಶರಣ ನಗರದಲ್ಲಿ ಬಸ ನಿಲ್ದಾಣದ ಹತ್ತಿರ ಡಾಂಬರ್ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮೇಲೆ ಮಟಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಬಾತ್ಮಿ ಪಡೆದು ಪಂಚರಾದ ಶ್ರೀ ಬಸವರಾಜ ತಂದೆ ನಾಗಪ್ಪಾ ಸಾ|| ನಿಂಬರ್ಗಾ, ಶ್ರೀ ಈರಯ್ಯ ತಂದೆ ಶರಣಯ್ಯ ಹಿರೇಮಠ ಸಾ|| ನಿಂಬರ್ಗಾ ಇವರೊಂದಿಗೆ ಜವಳಿ (ಡಿ) ಗ್ರಾಮದ ಶರಣ ನಗರದಲ್ಲಿ ಬಸ ನಿಲ್ದಾಣದ ಹತ್ತಿರ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಯಶವಂತರಾಯ ತಂದೆ ಚನ್ನಮಲ್ಲಪ್ಪ ಬಂದರವಾಡ ಸಾ|| ಜವಳಿ (ಡಿ) ಗ್ರಾಮ ಈತನನ್ನು ದಸ್ತಗೀರ ಮಾಡಿ ಆತನಿಂದ ಮಟಕಾ ಜೂಜಾಟಕ್ಕೆ ಬಳಿಸಿರುವ  ನಗದು ಹಣ 4050/-, ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, ಒಂದು ಬಾಲ ಪೆನ್ನ, ಒಂದು ಬಿಳಿ ಬಣ್ಣದ ಮೋಬೈಲ ಅ.ಕಿ 500/-,  ಒಂದು ಡಿಸ್ಕವರ ಮೊಟಾರ ಸೈಕಲ ನಂ. ಕೆ.ಎ 37, ಎಸ್ 6374 ಅ.ಕಿ 15000/- ನೇದ್ದವುಗಳನ್ನು ವಶಪಡಿಸಿಕೊಂಡು ಆತನ ವಿರುದ್ದ ನಿಂಬರ್ಗಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ಕಳವು ಪ್ರಕರಣ:
ವಿಶ್ವವಿದ್ಯಾಲಯ ಪೊಲೀಸ ಠಾಣೆ:ದಿನಾಂಕ: 13.12.2014 ಶ್ರೀ. ಜಿ.ಎಮ್ ಕೈಲಾಸಪತಿ ತಂದೆ ಜಿ.ಎಮ್ ಚನ್ನಬಸಪ್ಪ, ಸಾ|| ಸಜ್ಜನ ಲೇಔಟ ಕೋಟನೂರ (ಡಿ) ಕಲಬುರಗಿ ರವರು ಠಾಣೆಗೆ ಹಾಜರಾಗಿ ತಾನು ದಿನಾಂಕ: 09/12/2014 ರಂದು ರಾತ್ರಿ 10:00 ಗಂಟೆಗೆ ಮನೆಗೆ ಕೀಲಿ ಹಾಕಿಕೊಂಡು ಕರ್ನೂಲದಲ್ಲಿ ನಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ದಿನಾಂಕ: 11/12/2014 ರಂದು ಬೆಳಗಿನ ಜಾವ 0200 ಗಂಟೆಯ ಸುಮಾರಿಗೆ ಕಲಬುರಗಿಯ ನಮ್ಮ ಮನೆಗೆ ಬಂದು ನೋಡಲಾಗಿ ನಮ್ಮ ಮನೆಯ ಮುಖ್ಯ ದ್ವಾರದ ಕೀಲಿ ಮುರಿದ ಹಾಗೆ ಕಾಣಿಸಿದ್ದು ನಾನು ಒಳಗಡೆ ಹೋಗಿ ನೋಡಲಾಗಿ ಮನೆಯಲ್ಲಿ ಸಾಮಾನುಗಳು ಚಲ್ಲಾಪಿಲ್ಲಿಯಾಗಿದ್ದು ಕಂಡು ಮನೆಯಲ್ಲಿ ಹುಡುಕಾಡಲಾಗಿ ದೇವರ ಮನೆಯಲ್ಲಿ ಇಟ್ಟಿದ್ದ ಒಟ್ಟು ಒಟ್ಟು ಬೆಳ್ಳಿ ಬಂಗಾರ ನಗದು ಹಣ ಸೇರಿ 45,500/- ಬೆಲೆಬಾಳುವ ಸಾಮಾನುಗಳನ್ನು ಯಾರೋ ಕಳ್ಳರು ದಿ: 09/12/2014 ರಂದು ರಾತ್ರಿ 10:00 ಗಂಟೆಯಿಂದ ದಿ: 11/12/2014 ರ ಬೆಳಿಗ್ಗೆ 0200 ಗಂಟೆಯ ಮದ್ಯದ ಅವಧಿಯಲ್ಲಿ ಮನೆಯ ಬಾಗಿಲು ಮುರಿದು ಒಳಗೆ ಪ್ರವೇಶ ಮಾಡಿ ಈ ಮೇಲಿನ ಬೆಳ್ಳಿ, ಬಂಗಾರ ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವ ವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ದಿನಾಂಕ:13-12-2014 ರಂದು ಶ್ರೀ. ಹಣಮಂತ ತಂದೆ ಲಾಡಪ್ಪ ಹಳಿಗೋಡೆ ಸಾ: ದರ್ಗಾ ಶಿರೂರುರವರು ಠಾಣೆಗೆ ಹಾಜರಾಗಿ ದಿನಾಂಕ 13-12-2014 ರಂದು 01;30 ಪಿ.ಎಂ ಗಂಟೆ ಸುಮಾರಿಗೆ ಮಾದನ ಹಿಪ್ಪರಗಾ ಗ್ರಾಮದ ಶ್ರೀ ಶಿವಲಿಂಗೇಶ್ವರ ಮಠದಲ್ಲಿ ಉಚಿತ ಸಾಮೂಹಿಕ ವಿವಾಹದ ಕಾರ್ಯಕ್ರಮದಲ್ಲಿ ಪಾಲುಗೊಳ್ಳಲು ನಾನು ಮತ್ತು ನಮ್ಮೂರಿ ಪಂಡಿತ ತಂದೆ ಹಣಮಂತ ಹಳಿಗೋಡೆ ರವರೊಂದಿಗೆ  ಶ್ರೀ ಶಿವಲಿಂಗೇಶ್ವರ ಮಠದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಮುಗಿಸಿಕೊಂಡು ಊಟ ತಗೆದುಕೊಳ್ಳುತ್ತಿರುವಾಗ ನನ್ನ ಹಿಂದಿನಿಂದ ಒಬ್ಬ ವ್ಯಕ್ತಿ ಬಂದು ನನ್ನ ಪ್ಯಾಂಟಿನ ಹಿಂದಿನ ಜೇಬಿನಲ್ಲಿ ಕೈ ಹಾಕಿ ನನ್ನ ಪಾಕೀಟ ತಗೆದುಕೊಂಡು ಹೊಗುತ್ತಿರುವಾಗ ನಾನು ಕಳ್ಳ ಕಳ್ಳ ಅಂತಾ ಕೂಗಿದಾಗ ಅಲ್ಲಿನ ಸಾರ್ವಜನಿಕರು ಹಿಡಿದು ಪೊಲೀಸ್ ರಿಗೆ ಒಪ್ಪಿಸಿದ್ದು ಆತನಿಗೆ ವಿಚಾರಿಸಿಲಾಗಿ ತನ್ನ ಹೆಸರು ಮೋಹ್ಮದ ರಫೀಕ್ ತಂದೆ ಮೊಹ್ಮದ ಇಸ್ಮಾಯಿಲ್ ಸಾ:ಆಶ್ರಯ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದು ಅವನನ್ನು ಚೆಕ್ಕ ಮಾಡಲಾಗಿ ನನ್ನ ಹಿಂದಿನ ಜೇಬಿನೀಂದ ಕಳವು ಮಾಡಿದ 5000/- ಸಾವಿರ ರೂಪಾಯಿಯಲ್ಲಿ ಕೇವಲ 2000/- ಸಾವಿರ ರೂಪಾಯಿ ಮಾತ್ರ ಇದ್ದು ಉಳಿದ ಹಣ ಯಾರಿಗೆ ಕೊಟ್ಟಿದ್ದಾನೋ, ಎಲ್ಲಿ ಬಿಸಾಕಿದ್ದನೋ ಗೊತ್ತಿರುವುದಿಲ್ಲ ನನ್ನ ಜೇಬಿನಲ್ಲಿನ ಹಣ ಕಳುವು ಮಾಡಿದವನ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.