POLICE BHAVAN KALABURAGI

POLICE BHAVAN KALABURAGI

13 May 2016

Kalaburagi District Reported Crimes

ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವರ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 12-05-2016 ರಂದು ಯಳಸಂಗಿ ಗ್ರಾಮದ ಎಸ್.ಆರ್.ಜಿ ಧಾಬಾದ ಹತ್ತಿರ ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಕಪೀಲ ದೇವ ಪಿ.ಐ ಡಿ.ಸಿ.ಬಿ ಘಟಕ ಕಲಬುರಗಿ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 01] ಪ್ರಕಾಶ ತಂದೆ ಸಿದ್ದಯ್ಯ ಗುತ್ತೇದಾರ 02] ರಾಜು ತಂದೆ ಪಂಡಿತ ದುಬಲೆ ಸಾ : ಇಬ್ಬರೂ ಯಳಸಂಗಿ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ  01] 90 ML 576 ORIGINAL CHOICE WHISKY ಪೌಚಗಳು ಅ.ಕಿ 14976/-,02] 180 ML 133 OLD TAVERN WHISKY ಪೌಚಗಳು ಅ.ಕಿ 9177/-, ಜಪ್ತಿಪಡಿಸಿಕೊಂಡು  ಸದರಿಯವರೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ದೇವಲಗಾಣಗಾಪೂರ ಠಾಣೆ : ದಿನಾಂಕ  12-05-2016 ರಂದು 7-45 ಎ.ಎಮ್.ಕ್ಕೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ ಚಾಲಕ ಮತ್ತು ಮಾಲೀಕನ ಮೇಲೆ ಕ್ರಮ ಕೈಕೊಳ್ಳುವಂತೆ ಜಪ್ತಿ ಪಂಚನಾಮೆ, ಸಮೇತ ವರದಿ ಹಾಜರಪಡಿಸಿದ್ದರ ಸಾರಾಂಶ ವೇನೆಂದರೆ, ದಿನಾಂಕ 12-05-2016 ರಂದು 6:00 ಎಎಂಕ್ಕೆ ಘೋಳನೂರ ಗ್ರಾಮದ ಭೀಮಾ ನದಿಯಿಂದ ಒಂದು ಟ್ರ್ಯಾಕ್ಟರ್  ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ ಪಿ.ಎಸ್.ಐ. ದೇವಲಗಾಣಗಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡು ಟ್ರ್ಯಾಕ್ಟರ ಚಾಲಕ ತನ್ನ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ ಮಾಡಲು ಟ್ರ್ಯಾಕ್ಟರ ನಂ 1) ಟ್ರ್ಯಾಕ್ಟರ ನಂ ಕೆಎ 32 ಟಿ-9223 ನೇದ್ದು ಇದ್ದು ಸದರಿ ಟ್ರ್ಯಾಕ್ಟರದಲ್ಲಿ ಮರಳು ತುಂಬಿದ್ದು ಸದರಿಯವನು ಅನದಿಕೃತವಾಗಿ ಕಳ್ಳತನದಿಂದ ಮರಳು ತುಂಬಿಕೊಂಡು ಸಾಗಿಸುತ್ತಿದ್ದ ಟ್ರ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ಸದರಿ ಟ್ರ್ಯಾಕ್ಟರದಲ್ಲಿನ ಮರಳಿನ ಅ.ಕಿ.3000/-ರೂ ಟ್ರ್ಯಾಕ್ಟರಿನ ಅ.ಕಿ 2,00.000/-ರೂಪಾಯಿ ನೇದ್ದನ್ನು ವಶಪಡಿಸಿಕೊಂಡು ದೇವಲಗಾಣಗಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.