POLICE BHAVAN KALABURAGI

POLICE BHAVAN KALABURAGI

20 November 2011

GULBARGA DIST CRIME

ಅಪಘಾತ ಪ್ರಕರಣ :
ರಟಕಲ್ ಪೊಲೀಸ್ ಠಾಣೆ :
ಶ್ರೀ ಖಾಜಾಸಾಬ ತಂದೆ ಯೂಸೂಪಖಾನ ರಿಕ್ಷವಾಲೆ ಸಾ ಸಂತ್ರಸವಾಡಿ ರವರು ಬಜಾಜ ಮೋಟಾರ ಸೈಕಲ್ ನಂ: ಕೆಎ 32 ಕ್ಯೂ9360 ನೇದ್ದರ ಮೇಲೆ ಗೌಸ ಗುಡುಭಾಯಿ ಮತ್ತು ಮಹಮದ ಆಶ್ರಪ ಮೂರು ಜನ ಕೂಡಿಕೊಂಡು ದಿನಾಂಕ: 11-11-2011 ರಂದು ಚಿಂಚೋಳಿಯಿಂದ ಗುಲಬರ್ಗಾ ಕಡೆಗೆ ಬರುತ್ತಿರುವಾಗ ಕಂಚನಾಳ ಕ್ರಾಸ ಸಮಿಪ ಹಿಂದೆ ಕುಳಿತ ಗೌಸಿತನು ಜಂಪಿನಲ್ಲಿ ಕೆಳಗೆ ಬಿದ್ದು ಭಾರಿ ರಕ್ತಗಾಯವಾಗಿದ್ದರಿಂದ ಗುಲಬರ್ಗಾದ ಆಸ್ಪತ್ರೆಗೆ ಉಪಚಾರ ಮಾಡಿಸಲು ಸೇರಿಕೆ ಮಾಡಿದ್ದು ಹೆಚ್ಚಿನ ಚಿಕಿತ್ಸೆ ಕುರಿತು ಸೋಲಾಪೂರ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಉಪಚಾರ ಫಲಕಾರಿಯಾಗದೇ ಮೃತ ಪಟ್ಟಿರುತ್ತಾನೆ ಅಂತಾ ಮೃತನ ತಂದೆಯಾದ ಸೈಯದ ಖಾಜಾ ತಂದೆ ಸೈಯದ ಅಹಮದ ಅಲಿ ಗುಂಡುಭಾಯಿ ಸಾ ಸಂತ್ರಸವಾಡಿ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 62/2011 ಕಲಂ 279,337,338, 304 (ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದರಿಂದ ತನಿಖೆ ಕೈಕೊಂಡಿರುತ್ತಾರೆ

Gulbarga Dist Reported Crimes

ಜಾತಿ ಹೆಸರಿನಲ್ಲಿ ವಂಚನೆ :
ಅಶೋಕ ನಗರ ಠಾಣೆ :
ಶ್ರೀ. ವಿಜಯ ಅಂಚಿ ಪೊಲೀಸ ಇನ್ಸಪೇಕ್ಟರ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಗುಲಬರ್ಗಾ ರವರು ವರದಿ ಸಾರಾಂಶವೆನೆಂದರೆ, ಶ್ರೀ. ಡಿ.ಅಶೋಕ ರೆಡ್ಡಿ ತಂದೆ ಮಲ್ಲಿಕಾರ್ಜುನ ರೆಡ್ಡಿ ಆದಾಯ ತೆರಿಗೆ ಅಧಿಕಾರಿ ಗುಲಬರ್ಗಾ ಇವರು ರೆಡ್ಡಿ ಜನಾಂಗಕ್ಕೆ ಸೇರಿದರು ಸಹ ಪರಿಶಿಷ್ಟ ಪಂಗಡದ "ಮನೆರವರಲು" ಜಾತಿಗೆ ಸೇರಿರುವದಾಗಿ ಸುಳ್ಳು ಮಾಹಿತಿ ನೀಡಿ ತಹಸೀಲ್ದಾರ ಸೊಲ್ಲಾಪೂರ (ಉತ್ತರ) ಇವರಿಂದ ದಿನಾಂಕ 15/05/1980 ರಂದು "ಮನೆರವರಲು" ಎಸ್‌.ಟಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಆದಾಯ ತೆರಿಗೆ ಇಲಾಖೆಯಲ್ಲಿ ಎಲ್‌.ಡಿ.ಸಿ ಹುದ್ದೆಗೆ ಸೇರಿ ನಿಜವಾದ ಎಸ್‌.ಟಿ ಜನಾಂಗಕ್ಕೆ ವಂಚಿಸಿದರ ದೂರಿನ ಬಗ್ಗೆ ಸದರಿಯವರ ಜಾತಿ ವಿಚಾರಣೆ ನಡೆಸಿದ್ದು, ಜಾತಿ ವಿಚಾರಣೆ ಕಾಲಕ್ಕೆ ಶ್ರೀ. ಡಿ.ಅಶೋಕ ರೆಡ್ಡಿ ತಂದೆ ಮಲ್ಲಿಕಾರ್ಜುನ ರೆಡ್ಡಿ ಆದಾಯ ತೆರಿಗೆ ಅಧಿಕಾರಿಗಳು ಗುಲಬರ್ಗಾ ಇವರ ಮತ್ತು ಇವರ ತಮ್ಮ ತಂಗಿಯರ ಶಾಲಾ ಕಾಲೇಜು ದಾಲಾತಿಗಳ ಆಧಾರ ಮೇಲಿಂದ ಮತ್ತು ಸ್ಥಳೀಯ ಸಾಕ್ಷಿ ಜನರ ಹೇಳಿಕೆಗಳ ಮೇಲಿಂದ ಇವರು ಮೂಲತ: ರೆಡ್ಡಿ ಜಾತಿಗೆ ಸೇರಿದವರಾಗಿರುತ್ತಾರೆ. ಆದರೆ ಪರಿಶಿಷ್ಟ ಪಂಗಡದ "ಮನೆರವರಲು" ಜಾತಿಗೆ ಸೇರಿರುವುದಿಲ್ಲಾ ಅಂತಾ ತಿಳಿದು ಬಂದಿರುತ್ತದೆ. ಇವರು ಪರಿಶಿಷ್ಟ ಪಂಗಡದ "ಮನೆರವರಲು" ಜಾತಿಗೆ ಸೇರಿರುವದಾಗಿ ಸುಳ್ಳು ದಾಖಲೆಗಳು ಸ್ರಷ್ಟಿಸಿ ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯಲ್ಲಿ ಎಲ್‌.ಡಿ.ಸಿ ಹುದ್ದೆಗೆ ಸೇರಿ ನಿಜವಾದ ಪರಿಶಿಷ್ಟ ಪಂಗಡದ ಜನಾಂಗದವರಿಗೆ ಅನ್ಯಾ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 124/2011 ಕಲಂ. 415, 416, 417, 463, 464, 465, 468, 471 ಐಪಿಸಿ ಮತ್ತು ಕಲಂ. 3(1)(9) ಎಸ್‌ಸಿ/ಎಸ್‌ಟಿ ಪಿ.ಎ ಎಕ್ಟ 1989 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಗಾಗಿ ಕಡತವನ್ನು ಪಿ.ಐ ನಾಗರೀಕ ಹಕ್ಕು ಜಾರಿ ನಿರ್ದೆಶನಾಲಯ ಗುಲಬರ್ಗಾ ರವರಿಗೆ ನೀಡಲಾಗಿದೆ.
ಮೋಸ ಪ್ರಕರಣ:
ಶಹಾಬಾದ ನಗರ ಠಾಣೆ:
ಶ್ರೀ ಹಾಜಪ್ಪಾ ತಂದೆ ಸಂಗಪ್ಪಾ ಬಂದೂಕ ಇತನು ಭಾಗ್ಯಲಕ್ಷ್ಮಿ ಮಹಿಳಾ ಸಂಘ ಚುನ್ನಬಟ್ಟಿ ಶಹಾಬಾದ ಇದರಲ್ಲಿ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಇದ್ದು ಇತನು ಸರ್ಕಾರದ ವತಿಯಿಂದ ಲೋನ ಮಾಡಿಕೊಡುತ್ತೇನೆ. ಅಂತಾ ನನ್ನ ಹತ್ತಿರ ರೂ.1000/- ಹಣವನ್ನು ಪಡೆದುಕೊಂಡುರುತ್ತಾನೆ. ಹಾಗೂ ಡಾ:: ಬಿ.ಆರ್.ಅಂಬೇಡ್ಕರ್ ಯೋಜನೆಯಲ್ಲಿ ಒಟ್ಟು 11,00,000 ಲಕ್ಷ್ ಸಾಲ ಮತ್ತು ನಗರ ಸಭೆ ಶಹಾಬಾದ ವತಿಯಿಂದ [ಎಸ್.ಜೆ.ಆರ್.ವಾಯ್.ಎಸ್.] ಯೊಜನೆ ಅಡಿಯಲ್ಲಿ ಡೌಕ್ವಾ ಗುಂಡಿನ ಸಲುವಾಗಿ 11,25,000 ಲಕ್ಷ ರೂ. ಮತ್ತು ಕೆನರಬ್ಯಾಂಕ, ಎಸ.ಬಿ.ಹೆಚ್. ಬ್ಯಾಂಕ, ಸೀಂಡಿಕೇಟ ಬ್ಯಾಂಕ, ಮುಖಾಂತರ ಸಾಲ ಪಡೆದಿರುತ್ತಾರೆ . ಈ ರೀತಿಯಾಗಿ ಮೋಸ ಮಾಡಿರುತ್ಥಾರೆ ಅಂತಾ ಶ್ರೀಮತಿ ಯಲ್ಲಮ್ಮಾ ಗಂಡ ಹಣಮಂತ ಸಾ: ಶಹಾಬಾದ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.