POLICE BHAVAN KALABURAGI

POLICE BHAVAN KALABURAGI

29 May 2014

Gulbarga District Reported Crimes

ಅನೈತಿಕ ಸಂಬಂಧ ಹಿನ್ನಲೆಯಲ್ಲಿ ವ್ಯಕ್ತಿ ಕೊಲೆ, ಇಬ್ಬರ ಬಂಧನ  :
ವಿಶ್ವವಿದ್ಯಾಲಯ ಠಾಣೆ : ದಿನಾಂಕ: 26-05-2014 ರಂದು ರಾತ್ರಿ ವೇಳೆಯಲ್ಲಿ ದುಳಪ್ಪಾ ಕುಂಬಾರ ಈತನಿಗೆ ತಮ್ಮ ಅನೈತಿಕ ಸಂಬಂಧ ಮುಚ್ಚಿ ಹಾಕುವ ಉದ್ದೇಶದಿಂದ ವಿಜಯಕುಮಾರ ಹಾಗು ಆತನ ಪ್ರೆಯಸಿ ಸೇರಿ ಇ.ಎಸ್.ಐ ಆಸ್ಪತ್ರೆ ಹಿಂದುಗಡೆ ರೋಡಿನ ಮೇಲೆ ಕರೆದುಕೊಂಡು ಹೋಗಿ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಗಂಭೀರತೆ ಮತ್ತು ಪತ್ತೆ ಮಾಡಲು ಮಾನ್ಯ ಶ್ರೀ ಅಮಿತ್ ಸಿಂಗ್.ಐ.ಪಿ.ಎಸ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾ ರಿಗಳು ಗುಲಬರ್ಗಾ, ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಗುಲಬರ್ಗಾ ಮತ್ತು ಶ್ರೀ ಸಂತೋಷ ಬಾಬು.ಐ.ಪಿ.ಎಸ್. ಸಹಾಯ ಪೊಲೀಸ್ ಅಧೀಕ್ಷಕರು ಗ್ರಾಮಾಂತ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀ ಬಸವರಾಜ ತೇಲಿ ಸಿ.ಪಿ.ಐ ಎಂ.ಬಿ ನಗರ ವೃತ್ತ, ಶ್ರೀ ಗಜಾನನ ಕೆ. ನಾಯ್ಕ ಪಿ.ಎಸ್.ಐ ಎಂ.ಬಿ ನಗರ ಠಾಣೆ, ಹಸೇನ ಬಾಷಾ ಪಿ.ಎಸ್.ಐ ವಿಶ್ವವಿದ್ಯಾಲಯ ಠಾಣೆ ಹಾಗು ಸಿಬ್ಬಂದಿಯವರಾದ ಶಂಕರ ಹೆಚ್.ಸಿ, ಅಜರ್ುನ ಎ.ಹೆಚ್.ಸಿ, ಮೊಯಿಜೂದ್ದಿನ ಸಿ.ಪಿ.ಸಿ, ಮಲ್ಲಿಕಾಜರ್ುನ ಸಿ.ಪಿ.ಸಿ, ಸಿದ್ರಾಮಯ್ಯ ಸಿ.ಪಿ.ಸಿ, ಅಶೋಕ ಮುಧೋಳ ಸಿ.ಪಿ.ಸಿ, ಅಶೋಕ ಹಳಿಗೋದಿ ಸಿ.ಪಿ.ಸಿ, ಚನ್ನಬಸಯ್ಯ ಸ್ವಾಮಿ ಸಿ.ಪಿ.ಸಿ, ಬಲರಾಮ ಸಿಪಿಸಿ, ಸುಧಾ ಮಪಿಸಿ ರವರೆಲ್ಲರೂ ಕೂಡಿಕೊಂಡು ಕಾರ್ಯಚರಣೆ ನಡೆಸಿದ್ದು, ಈ ಕೊಲೆ ಪ್ರಕರಣವನ್ನು ಭೇದಿಸಿ, ದಿನಾಂಕ 28-05-2014 ರಂದು ಈ ಕೆಳಕಂಡ ಆರೊಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
1. ವಿಜಯಕುಮಾರ ತಂದೆ ನಿಂಗಪ್ಪಾ ಕಾಳೆ  ಸಾ : ಹತ್ತಿಕುಣಿ ತಾ :ಜಿಲ್ಲಾ ಯಾದಗಿರಿ ಹಾಲಿ ವಸ್ತಿ ಇ.ಎಸ್.ಐ ಆಸ್ಪತ್ರೆ  ಹಿಂದುಗಡೆ ಶೇಡ್ಡಿನ ಕ್ವಾಟರ್ಸ ಸೇಡಂ ರೋಡ್ ಗುಲಬರ್ಗಾ 2. ಲಕ್ಷ್ಮಿಬಾಯಿ ಗಂಡ ಮಹಾದೇವ ಕುಂಬಾರ ಸಾ:  ಬೊಳೆವಾಡ ಹಾಲಿ ವಸ್ತಿ ಸಿದ್ದೇಶ್ವರ ಕಾಲೋನಿ ಗುಲಬರ್ಗಾ
ಈ ಕೊಲೆಗೆ ಕಾರಣ ಆರೋಪಿ ವಿಜಯಕುಮಾರ ಈತನು ಲಕ್ಷ್ಮಿಬಾಯಿ ಈತಳ ಸಂಗಡ ಕಳೆದ 4 ವರ್ಷಗಳಿಂದ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು ಸದರಿ ಅನೈತಿಕ ಸಂಬಂಧ ವಿಷಯ ಲಕ್ಷ್ಮಿಬಾಯಿ ಈತಳ ಭಾವನ ಮಗನಾದ ಧೂಳಪ್ಪ ತಂದೆ ಮಲ್ಲಣ್ಣ ಕುಂಬಾರ ಈತನಿಗೆ ಗೊತ್ತಾಗಿ ತನ್ನ ಮನೆಯವರಿಗೆ ತನ್ನ ಅನೈತಿಕ ಸಂಬಂಧ ಬಗ್ಗೆ ಹೇಳುತ್ತಾನೆ ಅಂತಾ ಅಂದುಕೊಂಡು ಆತನಿಗೆ ಕೊಲೆ ಮಾಡಿಸಿದರೆ ತಮ್ಮ ಅನೈತಿಕ ಸಂಬಂಧ ಬಗ್ಗೆ ಮನೆಯಲ್ಲಿ ಗೊತ್ತಾಗುವದಿಲ್ಲ ಅಂತಾ ಭಾವಿಸಿ ಲಕ್ಷ್ಮಿಬಾಯಿ ಈತಳು ವಿಜಯಕುಮಾರ ಈತನ ಮುಖಾಂತರ ತನ್ನ ಭಾವನ ಮಗನಾದ ಧೂಳಪ್ಪ ಕುಂಬಾರ ಈತನಿಗೆ ಸಂಚು ಮಾಡಿ ಸೆಂದಿ ಕುಡಿಯಲು ಹೋಗೋಣಾ ಬಾ ಅಂತಾ ವಿಜಯಕುಮಾರ ಈತನು ಮನೆಯಿಂದ ಕರೆದುಕೊಂಡು ಬಂದು ಇ.ಎಸ್.ಐ ಆಸ್ಪತ್ರೆ ಹಿಂದುಗಡೆ ಇರುವ  ವಿಶ್ವವಿದ್ಯಾಲಯ ಆವರಣದಲ್ಲಿರುವ ಕಾಮರ್ಸ ಡಿಪಾರ್ಟಮೆಂಟ ಕಡೆಗೆ ಹೋಗುವ ರೋಡಿನ ಹತ್ತಿರ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿರುತ್ತಾನೆ. ಸದರಿ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಿಗೂಢವಾಗಿದ್ದ ಈ ಕೊಲೆ ರಹಸ್ಯ ಮತ್ತು ಆರೊಪಿತರನ್ನು ಮೇಲ್ಕಂಡ ತನಿಖಾ ತಂಡವು ಬೇದಿಸುವಲ್ಲಿ ಮತ್ತು ಆರೊಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ತನಿಖಾ ತಂಡದ ಪತ್ತೆ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿರುತ್ತಾರೆ.
ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಪೀರೋಜಾಬಾದ ಗ್ರಾಮದ ಶಬ್ಬೀರ ಮತ್ತು ಹಸನ ಇವರು ದಿನಾಂಕ 25-05-2014 ರಂದು ರಾತ್ರಿ 1130 ಗಂಟೆಯ ಸುಮಾರಿಗೆ ನಾವಿಬ್ಬರು ದರ್ಗಾದಲ್ಲಿದ್ದಾಗ ದರ್ಗಾದ ಹತ್ತಿರ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ವಾಹನಗಳು ಡಿಕ್ಕಿಯಾದ ಸಪ್ಪಳ ಕೇಳಿ ನಾವು ಅಲ್ಲಿಗೆ ಹೋಗಿ ನೋಡಲಾಗಿ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಒಂದು ಟಿಪ್ಪರ ನಿಲ್ಲಿಸಿದ್ದು ಅದರ ನಂಬರ ಜಿಜೆ-07 ವ್ಹಿ ಡಬ್ಲೂ-4793 ಅಂತಾ ಇದ್ದು ಸದರ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ  ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಯಾವುದೇ  ಡಿಕೇಟರ ವೈಗೆರೆ ಹಾಕದೇ,ಅಲಕ್ಷತನ ಮತ್ತು ಬೇಜಾವಬ್ದಾರಿತನದಿಂದ ನಿಲ್ಲಿಸಿ ಹೋಗಿದರಿಂದ ಜೇವರ್ಗಿ ಕಡೆಗೆ ಹೊರಟ ಮೋಟಾರ ಸೈಕಲ ಸವಾರನು ಹೆದ್ದಾರಿ ಮೇಲೆ ಇಂಡಿಕೇಟರ ಹಾಕದೇ ನಿಲ್ಲಿಸಿದ ಟಿಪ್ಪರ ನಂ ಜಿಜೆ-07 ವ್ಹಿಡಬ್ಲೂ-4793 ನೆದ್ದಕ್ಕೆ ಹಿಂದೆ ಡಿಕ್ಕಿಪಡಿಸಿದರಿಂದ ಸದರಿಯವನ ತಲೆಗೆ,ಬಲಗೈ ಮತ್ತು ಬಲಗಾಲಿಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ಸದರಿಯವನ ಹೆಸರು ಹೀರು ತಂದೆ ರಾಮು ಚವ್ಹಾಣ ಸಾ||ಮುದ್ದವಾಳ  ತಾ|| ಜೇವರ್ಗಿ ಅಂತಾ ತಿಳಿಸಿದ್ದರ ಸಾರಾಂಶದ ಮೇರೆಗೆ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ: 29-05-2014 ರಂದು ಬೆಳಿಗ್ಗೆ  08-30 ಗಂಟೆಗೆ ಶ್ರೀ ಕೌಶಿಕ ತಂದೆ ದಿಲೀಪ ಕೌಲಗಿಕರ್  ಸಾ: ಸರಸ್ವತಿ ಗೋದಾಮ ಜಗತ ಪೊಸ್ಟ ಆಫೀಸ್ ಎದುರು  ಗುಲಬರ್ಗಾ ರವರು  ತನ್ನ ಕಾರ ನಂ: ಕೆಎ 32 ಎನ್ 3992 ನೆದ್ದನ್ನು ಕೇಂದ್ರ ಬಸ್ ನಿಲ್ದಾಣ ದಿಂದ ಆರ್.ಜಿ.ನಗರ ಕಡೆಗೆ  ಚಲಾಯಿಸಿಕೊಂಡು ಹೋಗುತ್ತಿದ್ದಾಗ ಮಹ್ಮದಿ ಚೌಕ ದಾಟಿ ರಿಹಾನ ತಾರಿ ಹೊಟೇಲ ಎದುರು ರೋಡ ಮೇಲೆ ಆರ್.ಜಿ.ನಗರ ಕಡೆಯಿಂದ ಸ್ಕಾರ್ಫಿಯೋ ಕಾರ ನಂ: ಕೆಎ 32 ಎನ್ 2866 ರ ಚಾಲಕನು ಅತಿವೇಗ ಮತ್ತು ಅಲಕ್ಷತನ ದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕಾರಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಕಾರ ಡ್ಯಾಮೇಜ ಮಾಡಿದ್ದು ಇರುತ್ತದೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ವಂದನಾ ಗಂಡ ಉಜ್ವಲ್ ಸಿಂಗ್ ಹಜಾರಿ ಸಾ: ಖಾದ್ರಿ ಚೌಕ ಗುಲಬರ್ಗಾ ಇವರನ್ನು  ದಿನಾಂಕ: 06.12.2007 ರಂದು ತಂದೆ ತಾಯಿಯವರು ಬೀದರದ ಉಜ್ವಲ್ ಸಿಂಗ್ ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ಮಾತನಾಡಿದ ಪ್ರಕಾರ  01 ಲಕ್ಷ  ವರದಕ್ಷಿಣೆ 10 ತೊಲೆ ಬಂಗಾರ ಕೊಡಬೇಕಾಗಿತ್ತು. ಆದರೆ ನಾವು ನಮ್ಮ ತಂದೆ ತಾಯಿಯವರು ಮದುವೆಯಲ್ಲಿ 75 ಸಾವಿರ ರೂ 8 ತೊಲೆ ಬಂಗಾರ ಕೊಟ್ಟಿರುತ್ತಾರೆ.  ಮದುವೆಯಾದ ಮೂರು ತಿಂಗಳು ಗಂಡ  ಹಾಗೂ ಗಂಡ ಮನೆಯವರು ನನ್ನೊಂದಿಗೆ ಚೆನ್ನಾಗಿದ್ದು ನಂತರ ದಿನಾಲೂ ಇನ್ನು ಉಳಿದ ವರದಕ್ಷಿಣೆ ಹಣ & ಬಂಗಾರ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲು ಪ್ರಾರಂಬಿಸಿದರು . ಅವರು ಕೊಡುವ ಹಿಂಸೆ ತಾಳಲಾರದೆ ಈಗ ಸುಮಾರು ಒಂದು ವರ್ಷದಿಂದ ಗುಲಬರ್ಗಾದ ಖಾದ್ರಿ ಚೌಕ ನಬಿ ಕಾಲೋನಿಯಲ್ಲಿ ನಮ್ಮ ತಾಯಿಯೊಂದಿಗೆ ವಾಸವಾಗಿರುತ್ತೇನೆ . ಆದರು ಕೂಡ ನನ್ನ ಗಂಡ ಉಜ್ವಲ್ ಸಿಂಗ ಇತನು ಫೋನ ಮುಖಾಂತರ ಅವಾಚ್ಯಶಬ್ದಗಳಿಂದ ಬೈಯುತ್ತಿದ್ದನು . ದಿನಾಂಕ: 29.05.2014 ರಂದು ಬೆಳಗ್ಗೆ 9.00 ಗಂಟೆಗೆ ನನ್ನ ಗಂಡ ಉಜ್ವಲ್ ಸಿಂಗ್ ಅತ್ತೆ, ಪುಷ್ಪಾಬಾಯಿ, ಮಾವ ಬಾಬುಸಿಂಗ್, ಮೈದುನ ಪ್ರಕಾಶ ,ನಾದಿನಿ ನೀತು ಸಿಂಗ್ , ಇವರೆಲ್ಲರೂ ಕೂಡಿಕೊಂಡು ನಮ್ಮ ತವರು ಮನೆಗೆ ಬಂದು ರಂಡಿ ವರದಕ್ಷಿಣೆ ಹಣ ಬಂಗಾರ ತೆಗೆದುಕೊಂಡು ಬಾ ಅಂದರೆ ತವರು ಮನೆಯಲ್ಲಿ ಕುಳಿತ್ತಿರುವಿಯಾ ನಿಮ್ಮ ತಾಯಿಗೆ ಖಲಾಸ ಮಾಡಿದರ ನಿನಗೆ ಯಾರು ನೊಡಿಕೊಳ್ಳಲು ಇರುವುದಿಲ್ಲಾ ಈಗ ನಿಮ್ಮ ತಾಯಿಯಿಂದ 50 ಸಾವಿರ ರೂ ಮತ್ತು 2 ತೊಲೆ ಬಂಗಾರ ತೆಗೆದುಕೊಂಡು ಬಂದರೆ ನಮ್ಮ ಮನೆಯಲ್ಲಿ ನಿನಗೆ ಜಾಗ ಕೊಡುತ್ತೇವೆ ಇಲ್ಲವಾದರೆ  ನಿನಗೆ ಖಲಾಸ ಮಾಡುತ್ತೇನೆ ಅಂತಾ ನನ್ನ ಗಂಡ ಉಜ್ವಲ್ ಸಿಂಗ ಇತನು ಕೈಯಿಂದ ಹೊಡೆದನು ನನ್ನ ನಾದಿನಿ ಕೈ ಹಿಡಿದು ಜಗ್ಗಾಡಿದಳು ಅತ್ತೆ, ಮಾವ, ಮೈದುನ ಎಲ್ಲರು ಕೂಡಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ಶ್ರೀಮತಿ. ಜಯಶ್ರೀ ಗಂಡ ವಿನಾಯಕ ಭೋಸಲೆ ಸಾ:ರವಿವಾರಪೇಟ, ಸೋಲಾಪೂರ ಇವರ ದಿನಾಂಕ:26-05-2014 ರಂದು ನಾವು ನಮ್ಮ ಕುಟುಂಬ ಸಮೇತ ತಿರುಪತಿ ದೇವರ ದರ್ಶನಕ್ಕೆಂದು ಕಾರ ನಂ-MH12-HN-2557 ನೇದ್ದರಲ್ಲಿ ಕುಳಿತು ಸೋಲಾಪೂರದಿಂದ ತಿರುಪತಿಗೆ ಹೋಗಿ ದೇವರ ದರ್ಶನ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಸೇಡಂ ಮಾರ್ಗವಾಗಿ ಬರುವಾಗ, ರಂಜೋಳ-ಕುರಕುಂಟಾ ಕ್ರಾಸ್ ಮಧ್ಯೆದಲ್ಲಿ, ರೋಡಿನ ಮಧ್ಯೆದಲ್ಲಿ ಸೇಡಂ ಕಡೆ ಮುಖಮಾಡಿ ಒಂದು ಲಾರಿ ನಂ-AP28-V-6502 ನೇದ್ದು ಯಾವುದೇ ಮುನ್ಸೂಚನೆ ಇಂಡಿಕೇಟರ್ ಅಥವಾ ಲಾರಿ ಸುತ್ತಲೂ ಸುಚನಾ ಕಲ್ಲುಗಳು ಇಡದೇ ನಿಷ್ಕಾಳಜಿ ತನದಿಂದ ರೋಡಿನ ಮೇಲೆ ನಿಲ್ಲಿಸಿದ್ದು, ಸದರಿ ವಾಹನಕ್ಕೆ ಮಗ್ಗಲಾಗಿ ಸೈಡ್ ತೆಗೆದುಕೊಂಡು ನಮ್ಮ ಕಾರ ಚಾಲಕನು ಹೋಗುತ್ತಿ ರುವಾಗ, ಎದುರುಗಡೆಯಿಂದ ಒಂದು ಲಾರಿ ಟ್ಯಾಂಕರ್ ನಂ-KA22-B-9739 ನೇದ್ದರ ಚಾಲಕನು ಯಾವುದೇ ಮುನ್ಸೂಚನೆ ನೀಡದೇ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಕಾರಿಗೆ ಡಿಕ್ಕಿ ಪಡಿಸಿದ್ದರಿಂದ ಅಪಘಾತದಲ್ಲಿ ನನಗೆ ಭಾರಿ ರಕ್ತಗಾಯಗಳಾದವು ನನ್ನ ಹಾಗೆಯೇ ನಮ್ಮ ತಂಗಿಯಾದ ರಾಜಶ್ರೀ, ಅಣ್ಣನಾದ ವಿನಾಯಕ, ತಾಯಿಯಾದ ಮಂಗಲಾಬಾಯಿ ಹಾಗೂ ನಮ್ಮ ಕಾರ ಚಾಲಕನಾದ ನಾಗೇಶ ಇವರುಗಳಿಗೆ ಸಾದಾ ಹಾಗೂ ಭಾರಿ ರಕ್ತಗಾಯಗಳಾದವು. ಹಾಗೂ ಈ ಘಟನೆಯಲ್ಲಿ ಭಾರಿ ರಕ್ತಗಾಯವಾಗಿ ನನ್ನ ಮಕ್ಕಳಾದ ಪ್ರೀತಿ,ಶ್ರುತಿ ಮತ್ತು ತಂದೆಯಾದ ಕೊಂಡಿಬಾ ಹಾಗೂ ನಮ್ಮ ಗುರುಗಳಾದ ವಿಷ್ಣು ತಂದೆ ದತ್ತು ಮಹರಾಜ ಇವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 28-05-2014 ರಂದು 8;00 ಪಿ.ಎಂ ಕ್ಕೆ ಶ್ರೀಮತಿ ಗಂಗಾಬಾಯಿ ಗಂಡ ಮಹಾದೇವ ಬಾಣಿ  ಸಾ|| ದೇವರನಾವುದಗಿ vÁ: ¹AzÀV ರವರ ತಂಗಿ ಗಂಡ ಚಂದ್ರಕಾಂತ ಇವರು ನಮಗೆ ಫೋನ ಮಾಡಿ ನಾನು ಮತ್ತು ನನ್ನ ಹೆಂಡತಿ ರೇಣುಕಾ ಹಾಗು ನನ್ನ ಮಗಳು ಮಾಯಾ ರವರೆಲ್ಲರು ಕೂಡಿಕೊಂಡು ದೇವರು ಕೇಳಲು ಸಿಂದಿಗಿ ತಾಲೂಕಿನ ತಾರಾಪೂರ ಗ್ರಾಮಕ್ಕೆ ನಮ್ಮೂರ ಶರಬುಕಾಂತ ಕುಮುಸಗಿ ರವರ ಮೋಟರ ಸೈಕಲ್ ನಂ ಕೆ.ಎ-32/ಇಇ-2392 ನೇದ್ದರ ಮೇಲೆ ಗೊಬ್ಬೂರದಿಂದ 6;00 ಪಿ.ಎಂ ಸುಮಾರಿಗೆ ಹೊರಟಿರುತ್ತೇವೆ, ನಂತರ ಅಂದಾಜು 7;30 ಪಿ.ಎಂ ಸುಮಾರಿಗೆ ನಾವು ಅಫಜಲಪೂರದ ಸಮೀಪ ನಿರಾವರಿ ಆಫಿಸನಿಂದ ಅರ್ದಾ ಕೀ.ಮಿ ದಾಟಿ ರಸ್ತೆಯ ಎಡಗಡೆಯಿಂದ ಹೋಗುತ್ತಿದ್ದಾಗ ಮಳೆ ಬಂದು ಅಲ್ಲಿ ಕೆಸರು ಜಾಸ್ತಿಯಾಗಿದ್ದರಿಂದ ನಮ್ಮ ಮೋಟರ ಸೈಕಲ್ ಒಮ್ಮೇಲೆ ಕಟ್ಟ ಮಾಡಲುಹೋಗಿ ಕೆಳಗೆ ಬಿದ್ದೆವು, ನನ್ನ ಹೆಂಡತಿಗೆ ಒಳಪೆಟ್ಟಾಗಿ ಬಿಕ್ಕುತ್ತಿದ್ದಳು ನನಗೆ ಸ್ವಲ್ಪ ತರಚಿದಗಾಯಗಳು ಆಗಿರುತ್ತವೆ ನನ್ನ ಮಗಳಿಗೆ ಯಾವುದೆ ಗಾಯಗಳು ಆಗಿರುವುದಿಲ್ಲ, ನಂತರ ನಾನು 108 ಅಂಬೂಲೆನ್ಸಗೆ ಫೋನ ಮಾಡಿ ವಿಷಯತಿಳಿಸಿ ಅಂಬೂಲೆನ್ಸ್ ಬಂದ ನಂತರ ನನ್ನ ಹೆಂಡತಿಯನ್ನು ಉಪಚಾರ ಕುರಿತು ಅಫಜಲಪೂರ ಸರಕಾರಿ ಆಸ್ಪತ್ರೆಗೆ ತೆಗದುಕೊಂಡು ಹೋದೆನು. ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಾಗ ಅಂದಾಜ ಸಮಯ 8;00 ಗಂಟೆಗೆ ನನ್ನ ಹೆಂಡತಿ ರೇಣುಕಾ ಇವಳು ಮೃತ ಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

28 May 2014

Gulbarga District Reported Crimes

ಕಳವು ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಗುಂಡೆರಾವ ತಂದೆ ಶರಣಪ್ಪ ಹಳಿಮನಿ ಸಾ|| ನಿಂಬರ್ಗಾ ಇವರು ದಿನಾಂಕ 27-05-2014 ರಂದು 0100 ಗಂಟೆಯಿಂದ 5 ಗಂಟೆಯ ಮಧ್ಯದ ಅವಧಿಯಲ್ಲಿ ತಮ್ಮ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿನ ಟೀಜೂರಿಯಲ್ಲಿ ಇಟ್ಟಂತಹ 2 ಬಂಗಾರದ ಸುತ್ತುಂಗರಗಳು ಅ.ಕಿ 14000/- ರೂಪಾಯಿ ಹಾಗೂ 5000/- ರೂಪಾಯಿ ನಗದು ಹಣ ಮತ್ತು ಫಿರ್ಯಾದಿಯ ಪ್ಯಾಂಟಿನ ಕಿಸೇಯಲ್ಲಿ ಇಟ್ಟಿರುವ 5000/- ರೂಪಾಯಿ ನಗದು ಹಣ ಹೀಗೆ ಒಟ್ಟು 2400/- ರೂಪಾಯಿ ಮೌಲ್ಯದ ಹಣ ಮತ್ತು ಬಂಗಾರದ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ರಾಚಣ್ಣಾ ತಂದೆ ಮಲ್ಲಿನಾಥ ಅಮಾಣಿ  ಸಾ|| ನಿಂಬರ್ಗಾ ಇವರು ದಿನಾಂಕ 26-05-2014 ರಂದು 11 ಗಂಟೆಯಿಂದ ದಿನಾಂಕ 27-05-2014 ರಂದು 6 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿಯ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿನ ಟೀಜೂರಿಯಲ್ಲಿ ಇಟ್ಟಂತಹ ಅರ್ಧ ತೊಲಿಯ ಎರಡು ಬಂಗಾರದ ಉಂಗುರ ಅ.ಕಿ 12000/-, ಬೆಳ್ಳಿ ಸಾಮಾನು ಚಮಚಾ, ವಾಟಿ ಅ.ಕಿ 2000/- ಮಗುವಿನ ಕಿವಿಯಲ್ಲಿಯ ಬಂಗಾರದ ರಿಂಗ 1500/-, ಮಗುವಿನ ಬಂಗಾರದ ಉಂಗುರ 1500/-, ನಗದು ಹಣ 6000/- ರೂಪಾಯಿ ಹೀಗೆ ಒಟ್ಟು 23000/- ರೂಪಾಯಿ ಮೌಲ್ಯದ ಹಣ ಮತ್ತು ಬಂಗಾರದ ಹಾಗೂ ಬೆಳ್ಳಿಯ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ಶ್ರೀ ಶಂಭುಲಿಂಗಯ್ಯಾ ತಂ ರಾಚಯ್ಯಾ ಮಠಪತಿ  ಸಾ|| ತೊಂಡಕಲ ತಾ||ಜಿ|| ಗುಲಬರ್ಗಾ  ದಿನಾಂಕ 26-05-2014  ರಂದು ತಾನು ಹೊಲಕ್ಕೆ ಹೋಗಿ ಸಾಯಂಕಾಲ ಮನೆಗೆ ಬಂದಿದ್ದು ತನ್ನ ಆಳು ಮನುಷ್ಯ ಕೂಡಾ ರಾತ್ರಿ 8.30 ಗಂಟೆಗೆ ಮನೆಗೆ ಬಂದು ಎತ್ತುಗಳು ಮತ್ತು ಎಮ್ಮೆ ಹೋಲದಲ್ಲಿ ಕಟ್ಟಿ ಮೇವು ಹಾಕಿ ಬಂದಿರುತ್ತೇನೆ ಅಂತಾ ತಿಳಿಸಿ ತನ್ನ ಮನೆಗೆ ಹೋದನು ಇಂದು ಬೆಳಗ್ಗಿನ ಜಾವ 6 ಗಂಟೆಗೆ ನಮ್ಮ ಆಳು ಮನುಷ್ಯ ಹೋಲಕ್ಕೆ ಹೋಗಿದ್ದು 6.15 ,ಎಮ್,ಕ್ಕೆ ವಾಪಸ ಮನೆಗೆ ಬಂದು ತಿಳಿಸಿದ್ದೆನಂದರೆ ಒಂದು ಎತ್ತು ಕಾಣುತ್ತಿಲ್ಲಾ ಅಂತಾ ಹೇಳಿದ್ದಾಗಿ ತಾನು ತನ್ನ ಮಕ್ಕಳೊಂದಿಗೆ ಹೋಲಕ್ಕೆ ಹೋಗಿ ನೊಡಲಾಗಿ ಒಂದು ಎಮ್ಮೆ ಮತ್ತು ಒಂದು ಎತ್ತು ಹೋಲದಲ್ಲಿದ್ದು ಇನ್ನೊಂದು ಬೀಳಿ ಬಣ್ಣದ ಸಹದೃಡ ಮೈಕಟ್ಟಿನ  2 ಕೋಡುಗಳು ನೇರವಾಗಿದ್ದ ಅಂದಾಜು 7-8 ವರ್ಷ ವಯಸ್ಸಿನ ಅ.ಕಿ. 45,000 ರೂ ಕಿಮ್ಮತ್ತಿ ನ ಎತ್ತು ಕಾಣಲಿಲ್ಲಾ ದಾವಣಿಯಲ್ಲಿ ನೋಡಿದ್ದಾಗ ನನ್ನ ಎತ್ತು ಹಗ್ಗದ ಸಮೇತಾ ಬಿಡಿಸಿಕೊಂಡು ಹೊಗಿದ್ದು ಕಂಡು ಬಂತ್ತು ನಂತರ ನಮ್ಮ ಆಳು ಮನುಷ್ಯ ನನ್ನ ಮಕ್ಕಳು ಹಾಗೂ ನಾನು ಅಡವಿಯಲ್ಲಿ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿಲ್ಲಾ ನಿನ್ನೆ ದಿನಾಂಕ 26-05-2014 ರಂದು  ರಾತ್ರಿ 9 ಪಿ,ಎಮ್,ದಿಂದ ಇಂದು 27-05-2014  ರ ಬೆಳಗ್ಗಿನ ಜಾವ 5.30 ,ಎಮ್,ದ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ತೋಟದಲ್ಲಿ ಕಟ್ಟಿದ ಒಂದು ಎತ್ತು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಸೋಮಶೇಖರ ತಂದೆ ರೇವಣಸಿದ್ದಪ್ಪಾ ಜನಕಟ್ಟಿ  ಸಾ:ಡೊಂಗರಗಾಂವ  ತಾ:ಜಿ: ಗುಲಬರ್ಗಾ ಇವರು ಲಾರಿ ನಂ ಎಮ್ ಹೆಚ್ 25 ಬಿ 9066 ನೆದ್ದರ ಮೇಲೆ ಚಾಲಕ ಅಂತಾ ಕೆಲಸ  ಮಾಡಿಕೊಂಡು ಉಪ ಜೀವನ ಸಾಗಿಸುತ್ತಿದ್ದೆನೆ . ನನ್ನಂತೆ ನನ್ನ ಮಗ ಪ್ರಭು ಸಹ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ 24-05-2014 ರಂದು 6 ಗಂಟೆಯ ಸುಮಾರಿಗೆ ನಮ್ಮ ಲಾರಿ ನಂ ಎಮ್ ಹೆಚ್ 25 ಬಿ 9066 ನೆದರಲ್ಲಿ ರಾಯಚೂರನ ವಿಜಯಲಕ್ಷ್ಮೀ ಕಮರ್ಸಿಯಲ ಕಂಪನಿಯಿಂದ ಅಕ್ಕಿಲೋಡ ಮಾಡಿಕೊಂಡು ಗುಲಬರ್ಗಾಕ್ಕೆ ಬರುತ್ತಿದ್ದೆನೆ ಅಂತಾ ನನ್ನ ಮಗ ಪ್ರಭು ಇವರು ನನಗೆ ಪೋನ ಮಾಡಿ ತಿಳಿಸಿರುತ್ತಾನೆ. ಹೀಗಿದ್ದು ದಿನಾಂಕ 25-05-2014 ರಂದು ರಾತ್ರಿ 12-15 ಗಂಟೆಯ ಸುಮಾರಿಗೆ  ನಾನು ನಮ್ಮೂರಿನಲ್ಲಿದ್ದಾಗ ನನ್ನ ಮಗ ಪ್ರಭು ಈತನು ಪೋನ ಮಾಡಿ ತಿಳಿಸಿದ್ದೆನೆಂದರೆ, ದಿನಾಂಕ 24-05-2014 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ ನಾನು ಅಕ್ಕಿಲೋಡ ಮಾಡಿದ ನಮ್ಮ ಲಾರಿ ನಂ ಎಮ್ ಹೆಚ್ 25 ಬಿ 9066 ನೆದ್ದನ್ನು ರಾಯಚೂರಿನಿಂದ ಗುಲಬರ್ಗಾ ಕಡೆಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಸರಡಗಿ(ಬಿ) ಖಣಿ ಹತ್ತಿರ ಬರುತ್ತಿರುವಾಗ ನನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಎಡಗಡೆಗೆ ಪಲ್ಟಿಗೊಳಿಸಿರುತ್ತೆನೆ.  ಇದರಿಂದ ನನಗೆ ಯಾವುದೇ ಗಾಯ ವೈಗೆರೆಯಾಗಿರುವುದಿಲ್ಲಾ ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನಮ್ಮ ಅಳಿಯ ಶಿವಕುಮಾರ ಬೀಮಳ್ಳಿ ಇಬ್ಬರೂ ಕೂಡಿ ಸದರ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮಗ ಪ್ರಭು ಇತನು ಅಕ್ಕಿ ಲೋಡ ಮಾಡಿದ ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಎಡಗಡೆಗೆ ಲಾರಿಯನ್ನು  ಪಲ್ಟಿಗೊಳಿಸಿ ಹಾನಿಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕಃ 26/05/2014 ರಂದು ರಾತ್ರಿ 10:30 ಪಿ.ಎಂ. ಸುಮಾರಿಗೆ ನನ್ನ ಮಗ ಫೈಸಲ ಇತನು ಜಾಗನೇಕಿ ರಾತ್ ಸಲುವಾಗಿ ಮನೆಯಿಂದ ಪಲ್ಸರ್ ಮೋಟಾರ ಸೈಕಲ ನಂ. KA 32 Y 2211 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ KNZ ಫಂಕ್ಷನ್ ಹಾಲ್ ಎದರುಗಡೆ ಇರುವ ರಿಂಗ್ ರೋಡದಲ್ಲಿ ಪಲ್ಸರ್ ಮೋಟಾರ ಸೈಕಲ ಸ್ಕಿಡ್ ಆಗಿ ಬಿದ್ದಿದ್ದರಿಂದ ಎಡಗೈ ಮೊಳಕೈ ಹತ್ತಿರ ಭಾರಿ ಗಾಯವಾಗಿ ಮುರಿದಂತಾಗಿದ್ದು, ಎಡಗಡೆ ತೊಡೆಯ ಹತ್ತಿರ ಭಾರಿ ಗಾಯ ಹಾಗು ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ. ಅಲ್ಲಿನ ಜನರು ನೋಡಿ ಅಂಬುಲೆನ್ಸ್ ದಲ್ಲಿ ಹಾಕಿ ಉಪಚಾರಕ್ಕಾಗಿ ಸತ್ಯ ಆಸ್ಪತ್ರೆಗೆ ಸೇರಿಸಿರುತ್ತಾರೆ. ಅಂತಾ  ಶ್ರೀ ಇಕ್ರಾಮೂದ್ದಿನ ತಂದೆ ಮೈನೂದ್ದಿನ ಖಲೀಫ್  ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ  ತಿಪ್ಪಣ್ಣಾ ತಂದೆ ಭಾಗಣ್ಣಾ ಹೊಸಮನಿ ಸಾ;ಜನಿವಾರ ಹಾವ; ಬಸವೇಶ್ವರ ಕಾಲನಿ ಎಂ.ಜಿ ರೋಡ ಕೆ.ಇ.ಬಿ ಆಪೀಸ ಎದುರುಗಡೆ ಗುಲಬರ್ಗಾ ಇವರ ಮಗಳಾದ ಸರಸ್ವತಿ ವ|| 17 ವರ್ಷ ಇವಳಿಗೆ ನಮ್ಮ ಗ್ರಾಮದವನೆಯಾದ ರಮೇಶ ತಂದೆ ಸಿದ್ದಪ್ಪಾ ಇತನು ದಿನಾಂಕ:20.05.2014  ರಂದು 3 ಪಿ ಎಮ್ ಕ್ಕೆ ನಾವು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನನ್ನ ಮಗಳಿಗೆ ಅಪಹರಣ  ಮಾಡಿಕೋಂಡು ಹೋಗಿರುತ್ತಾನೆ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.