POLICE BHAVAN KALABURAGI

POLICE BHAVAN KALABURAGI

10 April 2017

Kalaburagi District Reported Crimes

ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ :
ನರೋಣಾ ಠಾಣೆ : ಶ್ರೀ.ಸಿದ್ರಾಮಪ್ಪ ತಂದೆ ಗಂಟೆಪ್ಪ ಕಂತಿ, ಸಾ:ಚಿಂಚನಸೂರ ಗ್ರಾಮ ಇವರ ಮಗಳಾದ ಕುಮಾರಿ ಇವಳು. ಇವಳು 10ನೇ ತರಗತಿ ವರೆಗೆ ನಮ್ಮ ಊರಿನ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆಯಲ್ಲಿ ನಮ್ಮ ಗ್ರಾಮದ ಕಾರ್ತಿಕ ತಂದೆ ಅಶೋಕ ರಂಬಾ ಎಂಬುವನು ನನ್ನ ಮಗಳನ್ನು ಪುಸಲಾಯಿಸಿ ದಿನಾಂಕ:19/10/2016 ರಂದು ರಾತ್ರಿ ಸಮಯದಲ್ಲಿ ಅವಳನ್ನು ನಮ್ಮ ಮನೆಯಿಂದ ಅಪಹರಿಸಿಕೊಂಡು ಹೋಗಿದ್ದು ಬಗ್ಗೆ ನಾನು ದಿನಾಂಕ:24/10/2016 ರಂದು ನರೋಣಾ ಠಾಣೆಯಲ್ಲಿ ಕಾರ್ತಿಕ ರಂಬಾನ ಮೇಲೆ ದೂರು ನೀಡಿದ ಮೇರೆಗೆ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನಂತರ ನನ್ನ ಮಗಳಾದ ನಂದಿನಿಗೆ ಕೆಲವೆ ದಿವಸಗಳಲ್ಲಿ ಪತ್ತೆ ಮಾಡಿಕೊಟ್ಟಿದ್ದು ಕಾರ್ತಿಕನು ನನ್ನ ಮಗಳಿಗೆ ಅಪಹರಿಸಿ ಸಮಯದಲ್ಲಿ ಅವಳಿಗೆ ಅತ್ಯಾಚಾರ ಮಾಡಿದ್ದರಿಂದ ಕಾರ್ತಿಕನಿಗೆ ಜೈಲಿಗೆ ಕಳಿಸಿದ್ದು ಇರುತ್ತದೆ. ಕಾರ್ತಿಕನು ನನ್ನ ಮಗಳಿಗೆ ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿದ ವಿಷಯವಾಗಿ ನನ್ನ ಮಗಳು ತುಂಬ ನೊಂದುಕೊಂಡು ದುಖಃಪಡುತ್ತಾ ನಾನು ಸಮಾಜದಲ್ಲಿ ತಲೆಯತ್ತಿ ತಿರುಗಾಡದ ಹಾಗೆ ಚಿಕ್ಕ ವಯಸ್ಸಿನಲ್ಲಿ ನನ್ನ ಜೀವನ ಹಾಳು ಮಾಡಿರುತ್ತಾನೆ. ಹೀಗಾಗಿ ನಾನು ಸಮಾಜದಲ್ಲಿ ಬದುಕುವುದು ಕಷ್ಟವಾಗಿರುತ್ತದೆ ಎಂದು ನನ್ನ ಹಾಗು ನಮ್ಮ ಮನೆಯವರ ಮುಂದೆ ನನ್ನ ಆಗಾಗ ಹೇಳುತ್ತಿದ್ದರಿಂದ ನಾವುಗಳು ಅವಳಿಗೆ ಧೈರ್ಯ ಹೇಳುತ್ತಿದ್ದೆವು ಆದರು ಸಹ ನನ್ನ ಮಗಳು ಅದೇ ಕೊರಗಿನಲ್ಲಿ ಯಾರ ಜೊತೆ ಸರಿಯಾಗಿ ಮಾತನಾಡದೆ. ಬೆರೆಯದೆ ಜಾಸ್ತಿ ಒಂಟಿಯಾಗಿ ಮನೆಯಲ್ಲಿ ಇರುತ್ತಿದ್ದಳು. ಈಗ ಕೆಲವು ದಿವಸಗಳ ಹಿಂದೆ ಕಾರ್ತಿಕನು ಜೈಲಿನಿಂದ ಬಿಡುಗಡೆಯಾಗಿ ಊರಿಗೆ ಬಂದಿದ್ದು ವಿಷಯ ನನ್ನ ಮಗಳಿಗೆ ಗೊತ್ತಾಗಿದ್ದು ಅವಾಗಿನಿಂದ ನನ್ನ ಮಗಳು ಕಾರ್ತಿಕನು ಮತ್ತೆ ನನಗೆ ಅಪಹರಿಸಿಕೊಂಡು ಹೋಗಬಹುದೆಂದು ಭಯಬೀತಳಾಗಿದ್ದಳು ಅಲ್ಲದೇ, ಕಾರ್ತಿಕನು ಜೈಲಿನಿಂದ ಬಂದ ನಂತರ ಕೆಲವು ಬಾರಿ ನಮ್ಮ ಸುತ್ತಮುತ್ತಲು ತಿರುಗಾಡುವುದು ಹಾಗು ಓಣಿಯಲ್ಲಿ ನನ್ನ ಮಗಳ ಬಗ್ಗೆ ವಿಚಾರಿಸುವುದು ಮಾಡುತ್ತಿದ್ದನು. ದಿನಾಂಕ:09/04/2017 ರಂದು ಮುಂಜಾನೆ ಕಮಲಾನಗರ ಸಂತೆಯಲ್ಲಿ ಬಟ್ಟೆ ವ್ಯಾಪಾರ ಮಾಡಲು ನಾನು ಹೋಗಿದ್ದು ಮತ್ತು ನನ್ನ ಹೆಂಡತಿಯಾದ ಶಾಂತಬಾಯಿ ಇವಳು ಅಣ್ಣನ ಮಗಳ ಕುಪ್ಪಸ ಕಾರ್ಯಕ್ರಮ ಮಾಡಲು ಕಲಬುರಗಿಗೆ ಅವಳ ತಮ್ಮನಾದ ಮಲ್ಲಿಕಾರ್ಜುನನೊಂದಿಗೆ ಹೋಗಿರುತ್ತಾಳೆ. ನನ್ನ ಮಗಳು ಹಾಗೂ ಕಿರಿಯ ಮಗ ಕಿರಣಕುಮಾರ ಇವರು ನಮ್ಮ ಅತ್ತಿಗೆಯವರೊಂದಿಗೆ ಮನೆಯಲ್ಲಿದ್ದರು. ಸಾಯಂಕಾಲ 4-00 ಗಂಟೆ ಸುಮಾರಿಗೆ ನಾನು ಕಮಲಾನಗರ ಸಂತೆಯಲ್ಲಿದ್ದಾಗ ನನ್ನ ತಮ್ಮನ ಹೆಂಡತಿಯಾದ ಮಹಾದೇವಿ ಇವಳು ನನಗೆ ಫೋನಮಾಡಿ ತಿಳಿಸಿದ್ದು ಏನಂದರೆ, ನನ್ನ ಮಗಳು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ನಮ್ಮ ಮನೆಯ ಬಾಗಿಲ ಒಳಕೊಂಡಿ ಹಾಕಿಕೊಂಡು ಹೇರಿಕೆ ಮನೆಯ ಜಂತಿಗೆ ಇರುವ ಕಬ್ಬಿಣದ ಕೊಂಡಿಗೆ ಹಗ್ಗದಿಂದ ಕುತ್ತಿಗೆಗೆ ನೇಣುಹಾಕಿಕೊಂಡು ಮೃತಪಟ್ಟಿರುತ್ತಾಳೆ. ಅಂತಾ ತಿಳಿಸಿದ್ದು ನಾನು ಮನೆಗೆ ಬಂದು ನೋಡಲಾಗಿ ನನ್ನ ಮಗಳ ಶವವು ಜೋತಾಡುತ್ತಿರುವುದನ್ನು ನಾನು ಸಹ ಬಾಗಿಲು ಸಂದಿನಿಂದಲೆ ನೋಡಿ ಖಚಿತ ಪಡಿಸಿಕೊಂಡೇನು. ಹಿಂದೆ ಕಾರ್ತಿಕನು ನನ್ನ ಮಗಳಿಗೆ ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿದ್ದರಿಂದ ಇದೆ ವಿಷಯವಾಗಿ ನನ್ನ ಮಗಳು ನಾನು ಚಿಕ್ಕವಯಸ್ಸಿನಲ್ಲಿಯೇ ಅತ್ಯಾಚಾರಕ್ಕೆ ಒಳಾಗಾದೇ ಎಂದು ನೊಂದುಕೊಂಡು ಭಯಭೀತಳಾಗಿ ನಮ್ಮ ಮನೆಯಲ್ಲಿ ಜಂತಿಯ ಕೊಂಡೆಗೆ ಹಗ್ಗದಿಂದ ಕುತ್ತಿಗೆಗೆ ನೇಣುಹಾಕಿಕೊಂಡು ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶಿವಣ್ಣ ತಂದೆ ಚಂದ್ರಾಮಪ್ಪ ಸೀತನೂರ  ಸಂಗಡ ಇನ್ನು 5 ಜನರು ಸಾ : ಎಲ್ಲರೂ ಫರಹತಬಾದ ಅಕ್ರಮ ಕೂಟ ಕಟ್ಟಿಕೊಂಡು ದಿನಾಂಕ  02/04/2017 ರಂದು ಸಾಯಂಕಾಲ ಶ್ರೀ ಭೀಮಾಶಂಕರ ತಂದೆ ಶೇಖಪ್ಪಾ ಪೂಜಾರಿ   ಸಾ: ಫರಹತಾಬಾದ ರವರು ತಮ್ಮ ಹೊಲದಿಂದ ಮನೆಗೆ ಬರುತ್ತೀರುವಾಗ ದಾರಿ ಮದ್ಯದಲ್ಲಿ  ತಡೆದು ನಿಲ್ಲಿಸಿ ಹೊಲದ ದಾರಿಯ ವಿಷಯದಲ್ಲಿ ಜಗಳ ತೆಗೆದು ಕೈಯಿಂದ  ಹೊಡೆ.ಬಡೆ ಮಾಡಿ   ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.