POLICE BHAVAN KALABURAGI

POLICE BHAVAN KALABURAGI

09 March 2013

GULBARGA DISTRICT REPORTED CRIMES


ದರೋಡೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ,ದಿಗಂಬರ ರಾವ ತಂದೆ ಶೇಷಗಿರಿರಾವ ಕುಲಕರ್ಣಿ ಸಾ:ಬ್ರಹ್ಮಪೂರ ಗುಲಬರ್ಗಾರವರು ನಾನು ದಿನಾಂಕ:08-03-2013 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಬಸ್ ನಿಲ್ದಾಣದ ಹತ್ತಿರವಿರುವ ಚೈತನ್ಯ ವೈನ್ ಶಾಪ್ ದಲ್ಲಿ ಸ್ವಲ್ಪ ಮಧ್ಯ ಸೇವಿಸಿಕೊಂಡು ಬಾರ ಎದುರುಗಡೆ ಹೋಗುತ್ತಿರುವಾಗ ಕೀಶನ ಮೇತಾರ ಸಾ|| ಹೀರಾಪೂರ ಇತನು ಜಬರ ದಸ್ತಿಯಿಂದ ನನ್ನ ಕಿಸೆಯಲ್ಲಿ ಕೈಹಾಕಿ 5000/- ರೂಪಾಯಿಗಳು  ಕಸಿದುಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 36/2013 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಫರತಬಾದ ಪೊಲೀಸ್  ಠಾಣೆ: ದಿನಾಂಕ:08-03-2013 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ ನದಿಸಿನ್ನೂರ ಗ್ರಾಮದ ಬಸವೇಶ್ವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪರಶುರಾಮ ಮನಗೊಳಿ ಪಿ.ಎಸ.ಐ ರವರು ಮತ್ತು ಠಾಣೆಯ ಸಿಬ್ಬಂದಿಯವರಾದ ದೇವಿಂದ್ರಪ್ಪಾ, ವಿಜಯಕುಮಾರ ರವರೊಂದಿಗೆ ನದಿಸಿನ್ನೂರ ಗ್ರಾಮಕ್ಕೆ ಹೋಗಿ ಬಸವೇಶ್ವರ ಗುಡಿಯ ಕಟ್ಟೆಯ ಮೇಲೆ ಕುಳಿತು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ಆತನ ಹೆಸರು ವಿಚಾರಿಸಲು ಶರಣಗೌಡ ತಂದೆ ಗುಂಡಗೌಡ ಮಾಲಿ ಬಿರೆದಾರ ಸಾ:ಮಂದರವಾಡ ತಾ: ಜೇವರ್ಗಿ ಅಂತಾ ತಿಳಿಸಿದನು. ಮಟಕಾ ಜೂಜಾಟಕ್ಕೆ ಸಂಬಂಧಿಸಿದ  ನಗದು ಹಣ, ಮಟಕಾ ಗಳು, ಮೊಬೈಲ್ ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ: 78 (3) ಕೆ.ಪಿ. ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಅಶ್ಲೀಲ್ ಎಸ್.ಎಮ್.ಎಸ್. ಕಳುಹಿಸುತ್ತಿರುವ ವ್ಯಕ್ತಿಗಳ ಮೇಲೆ ದೂರು :
ರಾಘವೇಂದ್ರ ನಗರ ಪೊಲೀಸ್ ಠಾಣೆ:ನನ್ನ ಚಿಕ್ಕಪ್ಪನ ಮಗಳು ಇಂಜನಿಯರಿಂಗ್ ವಿಧ್ಯಾರ್ಥಿನಿಯಾಗಿದ್ದು, ಅವಳ ಮೊಬೈಲ್ ನಂಬರಿಗೆ ದಿನಾಂಕ:28-02-2013 ರಿಂದ 4 ಮೊಬೈಲ್ ನಂಬರಗಳಿಂದ ಯಾರೋ ಕಿಡಿಗೇಡಿಗಳು ಅಶ್ಲಿಲ ಸಂದೇಶಗಳು ಹಾಗು ಫೋಟುಗಳು ಕಳುಹಿಸುತಿದ್ದು ಹಾಗೂ ಅವಳ Mail ID ಗೂ ಸಹ ಅಶ್ಲಿಲ ಸಂದೇಶಗಳು ಬರುತ್ತಿವೆ. ಅವಳು ಮರ್ಯಾದೆಗೆ ಅಂಜಿ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಳ್ಳುತ್ತಿದ್ದು, ಸದರಿ ಮೊಬೈಲ್ ನಂಬರ ವ್ಯಕ್ತಿಗಳ ಪತ್ತೆ ಮಾಡಿ ಅವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ವಿಧ್ಯಾರ್ಥಿನಿಯ ಅಣ್ಣ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಘವೇಂದ್ರ ಠಾಣೆ ಗುನ್ನೆ ನಂ:24/2013 ಕಲಂ 509 ಐಪಿಸಿ & 66  (A) Information Technology Act (IT Act) ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.