POLICE BHAVAN KALABURAGI

POLICE BHAVAN KALABURAGI

14 June 2017

Kalaburagi District Reported Crimes

ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ 12/06/2017 ರಂದು ಮದ್ಯಾಹ್ನ ಶ್ರೀ ರಾಮಚಂದ್ರ ತಂದೆ ಲುಂಬು ಜಾಧವ ಸಾ: ಸಂತೋಷ ಕಾಲೋನಿ ಕಲಬುರಗಿ ರವರು ತನ್ನ ಮೋಟಾರ ಸೈಕಲ ನಂಬರ ಕೆ.ಎ. 32 ಇ ಎನ್. 1107 ನೇದ್ದರ ಮೇಲೆ ತನ್ನ ಹೆಂಡತಿ ಸರೋಜಾಬಾಯಿ ಮತ್ತು ಮಗನಾದ ಧೀರಜಕುಮಾರ ವಯಾ: 11 ವರ್ಷ ಇತನಿಗೆ ಕೂಡಿಸಿಕೊಂಡು ಕಲಬುರಗಿಯಿಂದ ನಾಲವಾರ ಹತ್ತಿರ ಇರುವ ಮೂರಾರ್ಜಿ ದೇಸಾಯಿ ವಸತಿ ಶಾಲೆಗೆ ಶಹಾಬಾದ ಮಾರ್ಗವಾಗಿ ಹೋಗುತ್ತಿದ್ದಾಗ ದಿನಾಂಕ: 12/06/2017 ರಂದು ಮದ್ಯಾಹ್ನ ಮಾಲಗತ್ತಿ ಗ್ರಾಮದ ಕ್ರಾಸ ಹತ್ತಿರ ರೋಡಿನಲ್ಲಿ  ಶಹಾಬಾದ ಕಡೆಯಿಂದ ಒಬ್ಬ ಕಾರ ನಂಬರ ಕೆ.ಎ 44 7329 ನೇದ್ದರ ಚಾಲಕ ತನ್ನ ಕಾರ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿದ್ದರಿಂದ ನನಗೆ ಮತ್ತು ನನ್ನ ಹೆಂಡತಿಗೆ ಮತ್ತು ಮಗನಿಗೆ ರಕ್ತಗಾಯಾ ಮತ್ತು ಗುಪ್ತಗಾಯಾಗಳಾಗಿರುತ್ತದೆ. ಸದರಿ ಕಾರ ಚಾಲಕ ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ. ನಾವು ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಕಲಬುರಗಿಯ ಕಾಮರಡ್ಡಿ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆಯಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.