POLICE BHAVAN KALABURAGI

POLICE BHAVAN KALABURAGI

16 May 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಮಿರಿಯಾಣ ಪೊಲೀಸ್ ಠಾಣೆ:ಶ್ರೀ ಶೇಖರ @ ಶೇಖು ತಂದೆ ಶಿವರಾಮ ಜಾದವ ಸಾ|| ಕೊರವಿ ಗಾಂಧಿ ನಗರ ತಾಂಡ ತಾ|| ಚಿಂಚೋಳಿ ರವರು ನಾನು ಮತ್ತು ಇತರರು ಕೂಡಿಕೊಂಡು ದಿನಾಂಕ : 15-05-2012 ರಂದು ಟ್ರಾಕ್ಟರ ನಂ ಕೆ.ಎ.32 ಟಿ 7060 61 ನೇದ್ದರಲ್ಲಿ ಕುಳಿತುಕೊಂಡು ಕೊರವಿ ತಾಂಡಾದಿಂದ ಕೊತ್ಲಾಪೂರಕ್ಕೆ ಹೋಗಿ ದೇವರ ಕಾರ್ಯಾಕ್ರಮ ಮುಗಿಸಿಕೊಂಡು ಮರಳಿ ತಾಂಡಾಕ್ಕೆ ಬರುತ್ತಿರುವಾಗ ಭಕ್ತಂಪಳ್ಳಿ ಗ್ರಾಮದ ಹತ್ತಿರ ಟ್ರಾಕ್ಟರ್ ಚಾಲಕ ಪ್ರಭಾಕರ ರೆಡ್ಡಿ ಈತನು ಟ್ರಾಕ್ಟರನ್ನು ಅತಿ ವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿ ರೋಡಿನ ಪಕ್ಕದಲ್ಲಿ ಪಲ್ಟಿ ಮಾಡಿದನು ಇದರಿಂದ ಟ್ರಾಕ್ಟರ ಟ್ರೈಲಿಯಲ್ಲಿ ಕುಳಿತ ನಾನು  ಹಾಗೂ ಇತರರು ಕೆಳಗೆ ಬಿದ್ದೆವು, ನನಗೆ ಸಾದಾ ಗಾಯಗಳಾಗಿದ್ದು ಶೇವು ತಂದೆ ಥಾವರು ರಾಠೋಡ ಈತನು ಟ್ರಾಕ್ಟರ ಅಡಿಯಲ್ಲಿ ಸಿಕ್ಕು ಬೆನ್ನಿಗೆ ಭಾರಿ ರಕ್ತಗಾಯವಾಗಿ ಸಗ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಟ್ರಾಕ್ಟರ ಚಾಲಕ ಓಡಿ ಹೋಗಿರುತ್ತಾನೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 18/2012 ಕಲಂ 279.337.338.304 (ಎ) ಐ.ಪಿ.ಸಿ ಸಂಗಡ 187 ಐ.ಎಮ್.ವಿ.ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಅರ್. ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ದುಂಡಪ್ಪಾ ತಂದೆ ರಾಜಾರಾಮ ಬಂದಪಟ್ಟಿ ಸಾ:ಅಪ್ಪರ ಮಡ್ಡಿ ನಂ.1  ಶಹಾಬಾದ ರವರು ನನ್ನ ಮಗಳಾದ ಕೀರ್ತಿ ಇವಳಿಗೆ ದಿನಾಂಕ: 14-05-2012 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಊಟ ಮಾಡಲು ಒತ್ತಾಯ ಮಾಡಿದ್ದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು ಸ್ಟೋವದಲ್ಲಿಯ ಎಣ್ಣೆಯು ಮೈಮೇಲೆ ಹಾಕಿಕೊಂಡು ಮೈಗೆ ಬೆಂಕಿ ಹಚ್ಚಿಕೊಂಡಿದ್ದಳು, ಅವಳನ್ನು ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಉಪಚಾರ ಹೊಂದುತ್ತಾ  ದಿನಾಂಕ:16/05/2012 ರಂದು 3.25 ಎಎಂಕ್ಕೆ ಸರ್ಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯು.ಡಿ.ಅರ್. ನಂ: 6/2012 ಕಲಂ 174 ಸಿಅರಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ. 

GULBARGA DIST REPORTED CRIMES


ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:15/5/12 ರಂದು ಮಧ್ಯಾಹ್ನ ಸುಮಾರಿಗೆ ಉದನೂರ ಸೀಮೆಯ  ಸಂಜು ಉದನೂರ  ಹೊಲದಲ್ಲಿ ಒಂದು ಬೇವಿನ ಗಿಡದ ಕೆಳಗಡೆ ಹಣ ಪಣಕ್ಕೆ ಜೂಜಾಟ ಆಡುತ್ತಿದ್ದಾರೆ ಅಂತಾ ಭಾತ್ಮಿ ಬಂದಿದ್ದರಿಂದ ಪಿ.ಎಸ.ಐ ಆನಂದರಾವ ರವರು ಮತ್ತು ಸಿಬ್ಬಂದಿಯವರು ಕುಡಿಕೊಂಡು ದಾಳಿ ಮಾಡಿ ವಿರೇಶ ತಂದೆ ಮಹಾರುದ್ರ ಬಡಿಗೇರ ಸಾ|| ಸಂತೋಷ ಕಾಲೋನಿ, ಭಿಮರಾಯ ತಂದೆ ಸಾಬಣ್ಣ ತಳವಾರ ಸಾ|| ಬಿದ್ದಪೂರ ಕಾಲೋನಿ , ಆದರ್ಶ ತಂದೆ ಮದನರಾವ ಪಾಟೀಲ ಸಾ|| ಸಂತೋಷ ಕಾಲೋನಿ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು  ಜೂಜಾಟಕ್ಕೆ ಬಳಸಿದ ನಗದು ಹಣ 4260 /- ರೂ, ಇಸ್ಪೇಟ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 152/2012 ಕಲಂ 87 ಕೆಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ ರಾಜು ತಂದೆ ಗೋಪಾಲ ಜಾಧವ ಸಾ: ಎಕಲೂರ ತಾಂಡಾ ಬಸವ ಕಲ್ಯಾಣ ಜಿ: ಬೀದರ ಹಾ:ವ: ಓಂ ನಗರ ಗುಲಬರ್ಗಾ ರವರು ನಮ್ಮ ತಂದೆಯವರಾದ ಗೋಪಾಲ ತಂದೆ ಲೋಕು ಜಾಧವ ಈತನು  ದೇವಿ ತಾಂಡಾದಲ್ಲಿ ತನ್ನ ಸಂಬಂಧಿಕರು ತೀರಿಕೊಂಡಿದ್ದರಿಂದ  ಅಂತಿಮ ಸಂಸ್ಕಾರಕ್ಕೆಂದು  ಟಿ.ವಿ.ಎಸ. ಸ್ಟಾರ ಸಿಟಿ  ನಂಬರ ಕೆಎ 33 ಜೆ  508  ಮೇಲೆ ಹೋಗಿ ಅಂತಿಮ ಸಂಸ್ಕಾರ ಮುಗಿಸಿಕೊಂಡು  ದೇವಿ ತಾಂಡಾದಿಂದ  ಮರಳಿ ಗುಲಬರ್ಗಾಕ್ಕೆ ಬರುತ್ತಿರುವಾಗ ದಿನಾಂಕ: 15-05-12 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ಅವರಾದ (ಬಿ) ಸೀಮೆಯ ಸ್ವಾಮಿ ಸಮರ್ಥ ಆಶ್ರಮ ಹತ್ತಿರ ಇಳುಕಲ್ಲನಲ್ಲಿ  ಹೊರಟಾಗ ಎದುರುನಿಂದ ಯಾವುದೋ ವಾಹನ ಬಂದಿದ್ದರಿಂದ ತನ್ನ ಮೋಟಾರ ಸೈಕಲ ಬದಿಗೆ ತೆಗೆದುಕೊಳ್ಳಲು ಹೋಗಿ ನಿಯಂತ್ರಣ ತಪ್ಪಿ  ರೋಡ ಬದಿಗೆ ಇರುವ ಗೂಟದ ಕಲ್ಲಿಗೆ  ಗುದ್ದಿದ್ದರಿಂದ ಮುಖಕ್ಕೆ, ಮೆಲಕಿಗೆ ಭಾರಿ ರಕ್ತ ಸ್ರಾವವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 153/2012 ಕಲಂ 279, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.