POLICE BHAVAN KALABURAGI

POLICE BHAVAN KALABURAGI

14 October 2014

Gulbarga District Reported Crimes

ಸುಲಿಗೆ ಪ್ರಕರಣ :
ಮುಧೋಳ ಠಾಣೆ : ಶ್ರೀ ಚಂದ್ರಕಾಂತ @ ಚಂದು ತಂದೆ ಶಂಕರರಾವ ಗನಾತೆ  ಸಾ|| ಹಳೆಯ ಬೊಯಿಂಗ ಏರೀಯಾ ಹೈದ್ರಾಬಾದ ರವರು  ತನ್ನ ಕಾರ ನಂಬರ. ಎಪಿ-10 ಟಿವಿ-2524 ನೇದ್ದನ್ನು ಟ್ಯಾಕ್ಸಿ ಹೊಡೆಯುವುದಕ್ಕಾಗಿ ದಿನಾಂಕ: 13-10-14 ರಂದು ರಾತ್ರಿ 9:30 ಗಂಟೆ ಸುಮಾರಿಗೆ ಹೈದ್ರಾಬಾದ ಶಮಶಾಬಾದ ಏರಿಯಾದಲ್ಲಿ ಬರುವ ಏರ್ ಪೊರ್ಟದಲ್ಲಿ ಟ್ಯಾಕ್ಸಿ ಸ್ಟ್ಯಾಂಡದಲ್ಲಿ ನಿಲ್ಲಿಸಿದಾಗ ಆಗ ಮೂರು ಜನರು ಕೂಡಿ ನನ್ನ ಬಳಿ ಬಂದು ನಾವು ಹೈದ್ರಾಬಾದ ದಿಂದ ಸೇಡಂಕ್ಕೆ ಹೊಗುವದು ಇದೆ ನಿನ್ನ ಕಾರನ್ನು ಬಾಡಿಗೆಯಿಂದ ತೆಗೆದುಕೊಂಡು ನಡೆ ಅಂತಾ ಹೇಳಿದಾಗ ನಾನು 4,500/- ರೂ ಬಾಡಿಗೆ ಮಾತನಾಡಿ ಮೂರು ಜನರಿಗೆ ನನ್ನ ಕಾರನಲ್ಲಿ ಕೂಡಿಸಿಕೊಂಡು ಹೈದ್ರಾಬಾದದಿಂದ ಸೇಡಂ ಕಡೆಗೆ ಹೊರಟೇವು ಹೈದ್ರಾಬಾದ ದಾಟಿ ಸ್ವಲ್ಪ ಮುಂದೆ ಬಂದಾಗ ನಾನು ಕಾರ ನಿಲ್ಲಿಸಿ ಅವರಿಂದ  2,000/- ರೂ ತೆಗೆದುಕೊಂಡು ನನ್ನ ಕಾರಿಗೆ ಎಣ್ಣೆ ಹಾಕಿಸಿ ಸೇಡಂ ಕಡೆಗೆ ಹೊರಟೇವು. ದಿನಾಂಕ: 14-10-14 ರಂದು ರಾತ್ರಿ 1 ಗಂಟೆ ಸುಮಾರಿಗೆ ಕೊಂತನಪಲ್ಲಿ ಟೋಲ್ ಗೇಟ ಸಮೀಪ ಬರುತ್ತಿದ್ದಾಗ ಟೋಲ್ ಗೇಟದಿಂದ ಮುಂಚೆ ಇರುವ ಬರುವ ಕೊಂತನಪಲ್ಲಿ ಗ್ರಾಮದ ಕಡೆಗೆ ಹೋಗುವ ರಸ್ತೆಗೆ ನನ್ನ ಕಾರನ್ನು ತಿರುಗಿಸಿ ತೆಗೆದುಕೊಂಡು ನಡೆ ಅಂತಾ ಮೂರು ಜನರು ಹೇಳಿದರು ಆಗ ನಾನು ಮೇನ್ ರೋಡ ಅಂದಾಜು 1 ಕಿ ಮಿ ಅಂತರದಲ್ಲಿ ಹೋಗುವ ರಸ್ತೆಯಲ್ಲಿ ಹೊರಟಾಗ ಮೂರು ಜನರು ನನಗೆ ಕಾರು ನಿಲ್ಲಿಸಲು ಹೇಳಿದರು ಮತ್ತು ನನಗೆ ಒಮ್ಮೆಲೆ ಮೂರು ಜನರು ಕೂಡಿ ಹಿಡಿದು ಕೈಗಳಿಂದ ಮುಖಕ್ಕೆ ಹೊಡೆದರು ಮತ್ತು ಅವರಲ್ಲಿದ್ದ ಒಬ್ಬನು ಚಾಕುವಿನಿಂದ ಕುತ್ತಿಗೆಗೆ ಹೊಡೆದು ರಕ್ತಗಾಯ ಪಡಿಸಿದನು ಮತ್ತು ನನ್ನ ಬಳಿ ಇದ್ದ ನಗದು ಹಣ 3,000/- ರೂ ಹಾಗೂ ಒಂದು ನೊಕೀಯಾ ಕಂಪನಿಯ ಮೊಬೈಲ್ ಪೊನ್ ಅ ಕಿ 2,000/- ರೂ ಕಸೀದುಕೊಂಡರು ಹಾಗೂ ನನಗೆ ಕಾರಿನಿಂದ ಕೆಳಗೆ ತಬ್ಬಿಸಿಕೊಟ್ಟು ನಾನು ರಸ್ತೆಯಲ್ಲಿ ಬಿದ್ದಾಗ ಮೂರು ಜನರು ಕೂಡಿ ನನ್ನ ಕಾರನ್ನು ಚಾಲು ಮಾಡಿಕೊಂಡು ನನ್ನ ಅ ಕಿ 4,00,000/- ರೂ ಕಿಮ್ಮತ್ತಿನ ಕಾರನ್ನು ತೆಗೆದುಕೊಂಡು ಪರಾರಿಯಾರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.