POLICE BHAVAN KALABURAGI

POLICE BHAVAN KALABURAGI

02 June 2012

GULBARGA DIST REPORTED CRIMES


ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ರೋಜಾ ಪೊಲೀಸ್ ಠಾಣೆ : ಶ್ರೀ ಸುನೀಲ ಕುಮಾರ ತಂದೆ ಲಕ್ಕಪ್ಪಾ ಗೋಳಾ ಉ:ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಅಕೌಂಟೆಂಟ ಕೆಲಸ ಜಾ:ಪರಿಶಿಷ್ಟ ಜಾತಿ ಸಾ: ಮನೆ ನಂ.2-506 ಜಗತ್ ಭೀಮ ನಗರ ಗುಲಬರ್ಗಾರವರು ನಮ್ಮ ಸಂಸ್ಥೇಯ ಅಧ್ಯಕ್ಷಕರು ಡಾ:ವಿಜಯಕುಮಾರ ಕಲಮಳಕರ್,ಉಪಾಧ್ಯಕ್ಷರು ಶ್ರೀ ಹೊನ್ನಶೆಟ್ಟೆಪ್ಪಾ ಶಿವಮೂರ್ತಿ ಅಂತಾ ಇರುತ್ತಾರೆ ನಮ್ಮ ಶಿಕ್ಷಣ ಸಂಸ್ಥೆಯು ಹೌಸಿಂಗ ಬೋರ್ಡ ಗಂಜ ಕಾಲೋನಿಯಲ್ಲಿ ಇದೆ, ದಿನಾಂಕ:02/06/2012 ರಂದು ಬೆಳಿಗ್ಗೆ ಆದರ್ಶ ಶಿಕ್ಷಣ ಸಂಸ್ಥೆ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಹೊನಶೆಟ್ಟೆಪ್ಪಾ ಶಿವಮೂರ್ತಿ ಉಪಾಧ್ಯಕ್ಷರು ಇವರು ನಮ್ಮ ಸಂಸ್ಥೆಯ ಅಧ್ಯಕ್ಷರ ಚೇಂಬರದಲ್ಲಿ ಕುಳಿತುಕೊಂಡು, ನನಗೆ ಅವರ ಚೆಂಬರಕ್ಕೆ ಕರೆದು ಅವಾಚ್ಯವಾಗಿ ನೀನು ಅಡ್ಮಿಶನ ಮಾಡಿದ ಲೆಕ್ಕ ಪತ್ರ ತೆಗೆದುಕೊಂಡು ಬಾರಲೇ ಅಂತಾ ನನಗೆ ಏಕವಚನದಲ್ಲಿ ಕರೆದಿದ್ದು, ನಾನು ಮರ್ಯಾದಿ ಪೂರ್ವಕವಾಗಿ ಮಾತನಾಡಿ ಸಾಹೇಬರೆ ನನ್ನ ಹತ್ತಿರ ಲೆಕ್ಕ ಪತ್ರ ಸರಿಯಾಗಿ ಬರೆದಿಲ್ಲಾ ಕಚ್ಚಾದಲ್ಲಿ ಬರೆದಿಟ್ಟಿರುತ್ತೇನೆ, ನಿಮಗೆ ಸರಿಯಾಗಿ ಲೆಕ್ಕಪತ್ರ ಬೇಕಾದರೆ ಮೇಡಂ ಹತ್ತಿರ ಇರುತ್ತದೆ ಅಂತಾ ಹೇಳಿದೆನು. ಅದಕ್ಕೆ ಅವರು ನನ್ನ ಮೇಲೆ ಕೋಪ ಮಾಡಿಕೊಂಡು  ಜಾತಿ ಎತ್ತಿ ಬೈದು  ಕೈಯಿಂದ ಕಪಾಳದ ಮೇಲೆ ಮತ್ತು ಎದೆಯ ಮೇಲೆ ಜೋರಾಗಿ ಹೊಡೆದಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ರೋಜಾ ಠಾಣಾ ಗುನ್ನೆ ನಂ:49/2012 ಕಲಂ: 323, 504  ಐ.ಪಿ,ಸಿ  ಮತ್ತು 3 [1], [10]  SC / ST [ PREVENTION OF ATROCITIES ]  ACT 1989 ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಕು:ಮಂದಿರಾ ತಂದೆ ದತ್ತು ಮಾಲೀಪಾಟೀಲ ಸಾ:ಪ್ಲಾಟ ನಂ 183  ಜನತಾ ಲೇಔಟ ಕರುಣೇಶ್ವರ ನಗರ ಗುಲಬರ್ಗಾರವರು ನಾನು ದಿನಾಂಕ 02-06-2012 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಆರ್.ಪಿ ಸರ್ಕಲ ಹತ್ತಿರ ಬರುವ ಡಾ: ವಿಜಯ ಮೋಹನ ಕ್ಲೀನಿಕ ಎದುರುಗಡೆ ರೋಡಿನ ಮೇಲೆ ಅಟೋರಿಕ್ಷಾ ನಂ ಕೆಎ-32 ಬಿ-3794 ನೇದ್ದರಲ್ಲಿ ಪ್ರಯಾಣಿಸುತ್ತಿದಾಗ ಅಟೋರಿಕ್ಷಾ ಚಾಲಕನು ತನ್ನ ಅಟೋರಿಕ್ಷಾವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಎದುರುಗಡೆಯಿಂದ ಬರುತ್ತಿರುವ ಮೋಟಾರ ಸೈಕಲ ನಂ ಕೆಎ-32 ವಾಯ್-2350 ನೇದ್ದರ ಸವಾರನಿಗೆ ಮುಖಾಮುಖಿ ಡಿಕ್ಕಿ ಪಡಿಸಿದರಿಂದ ನನಗೆ ಮತ್ತು ಇನ್ನೂ 2 ಜನ ಜನರಿಗೆ ಭಾರಿಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 61/2012  ಕಲಂ: 279, 338 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME


ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:ಶ್ರೀ ಯಶವಂತ ತಂದೆ ರಾಮಚಂದ್ರ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರರು ಈ.ಕ.ರ.ಸಾರಿಗೆ ಸಂಸ್ಥೆ ಕಾಮಗಾರಿ ವಿಭಾಗ ಗುಲಬರ್ಗಾರವರು ನಮ್ಮ ಕಛೇರಿಯಲ್ಲಿ ದಿನಾಂಕ 31-05-2012 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ: 01-06-12 ರಂದು ಬೆಳಿಗಿನ 5-00 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ಲೆಕ್ಕ ಶಾಖೆಯ ಕೊಠಡಿಯ ಕಿಟಕಿಯ ಸರಳು ಮುರಿದು ಒಳಗೆ ಪ್ರವೇಶ ಮಾಡಿ ಒಂದು ಯು.ಪಿ.ಎಸ್. ಅ.ಕಿ 20,000/- ರೂ  ಮೂರು ಎಕ್ಸೈಡ ಕಂಪನಿಯ ದೊಡ್ಡ ಬ್ಯಾಟರಿಗಳು ಅ.ಕಿ 22,5,00/- ರೂ ವೈರಿಂಗ ಸಲಕರಣೆಗಳು ಅ.ಕಿ 1,000/- ರೂ ಹೀಗೆ ಓಟ್ಟು 43,5,00/- ರೂ ಮೌಲ್ಯದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 79/12 ಕಲಂ 457 380 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.