POLICE BHAVAN KALABURAGI

POLICE BHAVAN KALABURAGI

24 September 2015

Kalaburagi District Reported Crimes

ಅತ್ಯಾಚಾರ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಕುಮಾರಿ ಇವರಿಗೆ ಸಂಬಂಧಿಕನಾದ ಪ್ರವೀಣ ತಂದೆ ಅಣ್ಣಪ್ಪಾ ರಾಜನಾಳ ಎಂಬುವನು ದಿನಾಂಕ 10-05-2010 ರಂದು ಸುಮಾರು ರಾತ್ರಿ 9-30 ಗಂಟೆಗೆ ಸಿ.ಐ.ಬಿ ಕಾಲೋನಿಯಲ್ಲಿರುವ ಅವರ ಮನೆಯಲ್ಲಿ ನನಗೆ ಬಲವಂತವಾಗಿ ಅತ್ಯಾಚಾರ ಮಾಡಿದನು. ಈ ವಿಷಯ ನಿಮ್ಮ ಮನೆಯಲ್ಲಿ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುತ್ತೇನೆ ಅಂತಾ ಹೆದರಿಸಿದ್ದಾನೆ. ಅಲ್ಲಿಂದ ಇಲ್ಲಿಯವರೆಗೆ ನನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಹೇಳಿ ನನಗೆ ಬಲವಂತವಾಗಿ ಅತ್ಯಾಚಾರ ಮಾಡುತ್ತಾ ಬಂದಿದ್ದಾನೆ. 2013  ರಲ್ಲಿ ಸತ್ಯದರ್ಶಿನಿ ಲಾಡ್ಜಗೆ ಕರೆದುಕೊಂಡು ಹೋಗಿ 8 ದಿವಸ  ಅತ್ಯಾಚಾರ ಮಾಡಿರುತ್ತಾನೆ.2014 ನೇ ಸಾಲಿನ ನವೆಂಬರ ತಿಂಗಳಲ್ಲಿ ಕಲಬುರಗಿ ಕಾಂತಾ ಕಾಲೋನಿಯಲ್ಲಿ ಮನೆ ಮಾಡಿ ಇಟ್ಟು  ಬಲವಂತವಾಗಿ ಸಂಭೋಗ ಮಾಡಿರುತ್ತಾನೆ ನಾನು ಗರ್ಭೀಣಿ ಇರುತ್ತೇನೆ. ಅಂತಾ ತಿಳಿಸಿದಾಗ ಯಾವುದೇ ಮಾತ್ರಗಳನ್ನು ಕೊಟ್ಟು ಗರ್ಭಪಾತ ಮಾಡಿಸಿರುತ್ತಾನೆ ಇದೇ ರೀತಿಯಾಗಿ 3-4 ಸಲ ಗರ್ಭಪಾತ ಮಾಡಿಸಿರುತ್ತಾನೆ ನಾನು ಮಾನಸಿಕವಾಗಿ ದೈಹಿಕವಾಗಿ ಕುಗ್ಗಿರುತ್ತೇನೆ ಇದೆ ವರ್ಷದ ಜನವರೆ,ಪೆಬ್ರುವರಿ ,ಮಾರ್ಚ ತಿಂಗಳಲ್ಲಿ ಕೂಡಾ ಸತ್ಯದರ್ಶಿನಿ ಲಾಡ್ಜನಲ್ಲಿ ರೂಮ ಮಾಡಿ ನನ್ನ ಇಚ್ಛೆ ವಿರುಧ್ದ ಬಲವಂತವಾಗಿ ಸಂಭೋಗ ಮಾಡಿರುತ್ತಾನೆ. 2010 ರಿಂದ ಇಲ್ಲಿಯವರೆಗೆ  ಸತತವಾಗಿ ದೈಹಿಕ ಸಂಬೋಗ ಮಾಡಿ  ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿ  ಗರ್ಭಪಾತ ಮಾಡಿಸಿದ  ಪ್ರವೀಣ ಇತನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ: 22/09/2015 ರಂದು  ನಾನು ನನ್ನ ಗಂಡ ಮಗು ಮತ್ತು ನನ್ನ ಅಜ್ಜಿಯೊಂದಿಗೆ ರಾಮತೀರ್ಥನಗರದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಿರುತ್ತೇನೆ. ನನ್ನ ಗಂಡ ಮಲ್ಲಿಕಾರ್ಜುನ ಇವರು ದುತ್ತರಗಾಂವ ಪ್ರೌಡಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದು ಅಂಗವಿಕಲರಾಗಿರುತ್ತಾರೆ. ಈಗ್ಗೆ ಒಂದು ವಾರದ ಹಿಂದೆ ನನ್ನ ಅಜ್ಜಿ ನನ್ನ ಬಾಣಂತನಕ್ಕೆಂದು ನಮ್ಮ ಮನೆಗೆ ಬಂದು ನಮ್ಮಲ್ಲಿಯೇ ಉಳಿದಿರುತ್ತಾರೆ. ಹೀಗಿದ್ದು ದಿನಾಂಕ: 22/09/2015 ರಂದು ನಮ್ಮ ಅಜ್ಜಿ ಮಹಾದೇವಿ ಇವರು ಸಂಡಾಸಕ್ಕೆಂದು ಬೆಳಿಗ್ಗೆ 4-20 ಗಂಟೆ ಸುಮಾರಿಗೆ ಎದ್ದು ಬಾಗಿಲು ತೆರೆದು ಸಂಡಾಸಕ್ಕೆ ಹೋದಾಗ ಯಾರೋ ಒಬ್ಬ ಅಪರಿಚಿ ಗಂಡಸು ಅಂದಾಜು 35 ರಿಂದ 42 ವರ್ಷದ ವ್ಯೆಕ್ತಿ ಬಾಗಿಲು ತೆರೆದ ನಮ್ಮ ಮನೆಯೊಳಗೆ ಬಂದವನೇ ನಾವು ಮಲಗಿದ್ದ ಅಲಮಾರಾದ ಬಾಗಿಲು ತೆಗೆದು ಅಲಮಾರಾದಲ್ಲಿಟ್ಟ ಬಂಗಾರ ಬೆಳ್ಳಿ ಹಣ ತೆಗೆದುಕೊಳ್ಲುತ್ತಿದ್ದಾಗ ನನಗೆ ಎಚ್ಚರಚಾವಾಗಿ ನಾನು ಅವನನ್ನು ತಡೆದು ಯಾರೆಂದು ಚಿರಾಡುತ್ತಾ ಅವನ ಕಾಲು ಹಿಡಿದು ಎಳೆದುಕೊಂಡಾಗ ಅವನು ನನ್ನ ಎಳೆಯುತ್ತಲೇ ಹೊಸ್ತಿಲವರೆಗೆ ತಂದು ನನ್ನಿಂದ ಬಿಡಿಸಿಕೊಂಡು ಓಡಿ ಹೋದನು. ನಾನು ಚಿರಾಡುತ್ತಿದ್ದನ್ನು ಕೇಳಿ ನನ್ನ ಗಂಡ ಅಜ್ಜಿ ಬಂದು ನೋಡಲು ಅವನು ಓಡಿಹೋದನು. ನಂತರ ಅಲಮಾರಾದಲ್ಲಿ ನೋಡಲು ಅಲಮಾರಾದಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು ಹಾಗು ನಗದು ಹಣ ಹೀಗೆ ಒಟ್ಟು 1,49,400/- ಕಿಮ್ಮತ್ತಿನದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ ಅಂತಾ ಶ್ರೀಮತಿ ಸುಖದೇವಿ ಗಂಡ ಮಲ್ಲಿಕಾರ್ಜುನ ಕೊರಳ್ಳಿ ಸಾ: ಗುಡುರ ತಾ: ಅಫಜಲಪೂರ ಹಾ:ವ: ರಾಮತೀರ್ಥನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಯಲ್ಲಾಲಿಂಗ ತಂದೆ ಶರಣಪ್ಪಾ ಗೌಡಪ್ಪಗೋಳ ಸಾ|| ದೇವಂತಗಿ, ಹಾ|| || ಕಡಗಂಚಿ ಗ್ರಾಮ ರವರು ಹಾಗೂ ಅವರ ಅಣ್ಣಂದಿರಾದ 01] ಬೀರಪ್ಪಾ ತಂದೆ ಶರಣಪ್ಪ ಗೌಡಪ್ಪಗೋಳ, 02] ತುಕಾರಾಮ ತಂದೆ ಶರಣಪ್ಪ ಗೌಡಪ್ಪಗೋಳ ಇವರ ಮಧ್ಯೆ ಹೊಲದ ಬಗ್ಗೆ ಬಹಳ ದಿನದಿಂದ ತಕರಾರು ಇರುತ್ತದೆ. ಫಿರ್ಯಾದಿಯು ದೇವಂತಗಿಯ ತನ್ನ ಹೊಲದಲ್ಲಿ ಬಿತ್ತನೆ ಮಾಡಲು ದಿನಾಂಕ 22/09/2015 ರಂದು ಬೆಳಿಗ್ಗೆ ಹೊಲಕ್ಕೆ ಹೋಗಿದ್ದು ಆಗ ಆರೋಪಿತರು ಗಳೆ ಹೊಡೆಯುತ್ತಿದ್ದರು ಅದನ್ನು ನೋಡಿ ಅವರಿಗೆ ನನ್ನ ಹೊಲದಲ್ಲಿ ಏಕೆ ಗಳೆ ಹೊಡೆಯುತ್ತಿರಿ ಅಂತ ಕೇಳಿದ್ದಕ್ಕೆ ಆರೋಪಿತರಿಬ್ಬರೂ ಏ ಸೂಳೆ ಮಗನೆ ನಿನ್ನದು ಎಲ್ಲಿ ಹೊಲ ಬರುತ್ತದೆ ಎಲ್ಲಾ ಹೊಲ ನಮ್ಮದು ಇರುತ್ತದೆ ಈ ಹೊಲದಲ್ಲಿ ಬಂದರೆ ನಿನಗೆ ಖಲಾಸ ಮಾಡುತ್ತೆವೆಂದು ಜೀವ ಭಯ ಹಾಕಿ ಕಲ್ಲು ಮತ್ತು ಬಡಿಗೆಗಳಿಂದ ಹೊಡೆ ಬಡೆ ಮಾಡಿ ಸಾದಾ, ಭಾರಿ & ಗುಪ್ತಗಾಯಗಳು ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 05-09-2015 ರಂದು ಶ್ರೀ ಈರಪ್ಪಾ ತಂದೆ ಜಂಪಣ್ಣಾ ಮಾಶಾಳ ಸಾ : ಚಿಂಚೋಳಿ ರವರು ಮತ್ತು ಹೆಂಡತಿ ಭಾಗ್ಯಶ್ರೀ ನನ್ನ ತಾಯಿ ಮಾಹಂತಪ್ಪ ನಮ್ಮ ಮಕ್ಕಳೊಂದಿಗೆ ನಮ್ಮ  ಮನೆಯಲ್ಲಿದ್ದಾಗ ನನ್ನ ಹೆಂಡತಿ ಭಾಗ್ಯಶ್ರೀ ಇವಳು ನಮ್ಮ ಗ್ರಾಮದ ನನ್ನ ಹೆಂಡತಿಯ ತವರು ಮನೆಗೆ ಹೋಗಿ ಬರುತ್ತೇವೆ  ಅಂತಾ ಹೇಳಿ ಮನೆಯಿಂದ ಹೋಗಿರುತ್ತಾಳೆ. ಎಷ್ಟೊತ್ತಾದರು ನನ್ನ ಹೆಂಡತಿ ಮರಳಿ ಮನೆಗೆ ಬರಲಿಲ್ಲದ ನಂತರ  ನಾನು ಮತ್ತು ನಮ್ಮ ತಾಯಿ ಕೂಡಿ ನಮ್ಮ ಬಿಗರ ಮನೆಗೆ ಹೋಗಿ ನನ್ನ ಹೆಂಡತಿಯ ತಾಯಿಯಾದ ಸುಸಲಾಬಾಯಿ ಇವಳಿಗೆ  ನನ್ನ ಹೆಂಡತಿ ಬಗ್ಗೆ ವಿಚಾರಿಸಿದಾಗ ನಮ್ಮ ಮನೆಗೆ ಬಂದಿರುವುದಿಲ್ಲ ಅಂತ ತಿಳಿಸಿದ್ದು ನಂತರ ನಾನು ಎಲ್ಲಾ ಕಡೆ ಹುಡುಕಿದರು ಸಹ ನನ್ನ ಹೆಂಡತಿ ಎಲ್ಲಿಯೂ ಸಿಕ್ಕಿರುವುದಿಲ್ಲ. ನಂತರ ನನ್ನ ಹೆಂಡತಿ ಕಾಣೆಯಾದ ಬಗ್ಗೆ ನಮ್ಮ ಸಂಭಂದಿಕರುಗಳಿಗೆ ಪೋನ ಮಾಡಿ ವಿಚಾರಿಸಿರುತ್ತೆನೆ. ಅವರು ಸಹ ಬಂದಿರುವುದಿಲ್ಲ ಅಂತಾ ತಿಳಿಸಿರುತ್ತಾರೆ. ಸದರಿ ನನ್ನ ಹೆಂಡತಿಯನ್ನು ಹುಡುಕಾಡಿ ಎಲ್ಲಿಯೂ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ನೀಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಮಾಹಾದೇವಿ ಗಂಡ ಶಿವಶರಣ ಕುಂಬಾರ ಸಾ : ಹಿಂಚಗೇರಾ ತಾ : ಅಫಜಲಪೂರ ರವರನ್ನು ಸುಮಾರು 18 ವರ್ಷದ ಹಿಂದೆ ಅಫಜಲಪೂರ ತಾಲೂಕಿನ ಹಿಂಚಗೇರಾ ಗ್ರಾಮದ ಶಿವಶರಣ ತಂದೆ ದೌಲಪ್ಪ ಕುಂಬಾರ ಇವರೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ನನಗೆ ಈಗ ಇಬ್ಬರು ಮಕ್ಕಳಿದ್ದು 1) ಮಲ್ಲಿಕಾರ್ಜುನ ವ|| 16 ವರ್ಷ 2) ಭಾಗ್ಯಶ್ರೀ ವ||14 ವರ್ಷ ಅಂತ ಮಕ್ಕಳಿರುತ್ತಾರೆ.ನಮ್ಮ ಊರಲ್ಲಿನ ಮನೆಯಲ್ಲಿ ನಮ್ಮ ಅತ್ತೆ ಮಾವ ಇರುತ್ತಾರೆ ನಾನು ನನ್ನ ಗಂಡ ಹಾಗೂ ನನ್ನ ಮಕ್ಕಳು ನಮ್ಮ ಹೊಲದಲ್ಲಿನ ಮನೆಯಲ್ಲಿ ಇರುತ್ತೇವೆಈಗ  ಒಂದು ವರ್ಷದಿಂದ  ನನಗೆ ನನ್ನ ಗಂಡ ನೀನು ಸರಿಯಾಗಿಲ್ಲ, ನೀನು ಸಿಗದಿದ್ದರೆ ನಾನು ಬೇರೆ ಮದುವೆ ಮಾಡಿಕೊಳ್ಳುತ್ತಿದ್ದೆ ನಿನಗೆ ಸರಿಯಾಗಿ ಅಡುಗೆ ಮಾಡಲು ಬರಲ್ಲಾ ರಂಡಿ ಅಂತಾ ವಿಕಾರಣ ನನಗೆ ಬೈಯುವುದು, ಹೊಡೆಯುವುದು ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಾ ಬಂದಿರುತ್ತಾನೆ.ನಾನು ಸದರಿ ವಿಷಯವನ್ನು ನನ್ನ ತವರುಮನೆಯಾದ ಕೆರಕನಹಳ್ಳಿಯ ನಮ್ಮ ತಂದೆ ತಾಯಿಯವರಿಗೆ  ತಿಳಿಸಿರುತ್ತೆನೆ.ನನ್ನ ತವರು ಮನೆಯಿಂದ ನಮ್ಮ ತಂದೆ ತಾಯಿ ಹಾಗೂ ಕೆರಕನಹಳ್ಳಿ ಗ್ರಾಮದ ಪ್ರಮುಖರಾದ ಹಣಮಂತ್ರಾಯ ಬಂದರವಾಡ, ಭೀರಣ್ಣ ಕಿರಸಾವಳಗಿ ಇವರೆಲ್ಲರು ನಮ್ಮ ಗ್ರಾಮಕ್ಕೆ ಬಂದು ನನ್ನ ಗಂಡನಿಗೆ ಸರಿಯಾಗಿ ಇರು ಮಕ್ಕಳು ದೊಡ್ಡವರಾಗಿದ್ದಾರೆ ಈ ರೀತಿ ಹೆಂಡತಿಗೆ ಕಿರುಕುಳ ಕೊಡುವದು ಸರಿ ಅಲ್ಲ ಅಂತ ಬುದ್ದಿಮಾತು ಹೇಳಿ ಹೋಗಿದ್ದು ದಿನಾಂಕ 14-09-2015 ನಾನು ನನ್ನ ಮಕ್ಕಳಾದ ಮಲ್ಲಿಕಾರ್ಜುನ, ಭಾಗ್ಯಶ್ರೀ ಇಬ್ಬರು ನಮ್ಮ ಹೊಲದಲ್ಲಿನ ಮನೆಯಲಿದ್ದಾಗ ನನ್ನ ಗಂಡನಾದ ಶಿವಶರಣ ಇವರು ಬಂದು ನನಗೆ ಏ ರಂಡಿ ನೀನು ಸರಿ ಇಲ್ಲಾ ನಿನಗ ಅಡುಗೆ ಮಾಡಲು ಬರಲ್ಲಾ ಅಂತ ಬೈಯುತಿದ್ದಾಗ ನಾನು ನನ್ನ ಗಂಡನಿಗೆ ಯಾಕ್ರಿ ಮಕ್ಕಳು ದೊಡ್ಡು ಆಗ್ಯಾವ ಈ ರೀತಿ ಮನೆಯಲ್ಲಿ ಜಗಳ ತಗೆದು ಸುಮ್ನೆ ಬೈಯುವದು ಸರಿ ಅಲ್ಲಾ ಅಂತ ಅನ್ನುತಿದ್ದಾಗ ನನ್ನ ಗಂಡ ರಂಡಿ ಬೋಸಡಿ ನನಗೆ ಬುದ್ದಿ ಹೇಳ್ತಿ ಅಂತ ಏರು ಧ್ವನಿಯಲ್ಲಿ ಬೈಯುತಿದ್ದಾಗ ನನ್ನ ಗಂಡ ಬೈಯುವದನ್ನು ಕೇಳಿ ನಮ್ಮ ಬಾಜು ಹೊಲವರಾದ ಕಾಂತಪ್ಪ ಮಾಂಗ ಹಾಗೂ ಅವರ ಹೆಂಡತಿಯಾದ ಶೋಭಾ ಇವರು ಬಂದು ನನ್ನ ಗಂಡನಿಗೆ ಯಾಕ್ರಿ ದಿನಾ ಮನ್ಯಾಗ ಹೆಂಡ್ತಿ ಜೋತಿ ಕಿರಿಕಿರಿ ಮಾಡ್ತಿರಿ ಅಂತ ಬುದ್ದಿ ಮಾತು ಹೇಳುತಿದ್ದಾಗ ನನ್ನ ಗಂಡ ಈ ರಂಡಿಗಿ ಇವತ್ತ ಬಿಡಲ್ಲಾ ಅಂತ ಅಂದು ತನ್ನ ಕೈಯಿಂದ ನನ್ನ ಬೆನ್ನ ಮೇಲೆ ಹೊಟ್ಟೆಗೆ ಹೋಡೆಯುತಿದ್ದಾಗ ನನ್ನ ಮಕ್ಕಳಾದ ಮಲ್ಲಿಕಾರ್ಜುನ, ಭಾಗ್ಯಶ್ರೀ ಹಾಗೂ ಕಾಂತಪ್ಪ ಮಾಂಗ, ಶೋಭಾ ಮಾಂಗ ಇವರು ನನಗೆ ಹೊಡೆಯುವದನ್ನು ಬಿಡಿಸುತಿದ್ದಾಗ ನನ್ನ ಗಂಡ ಬಿಡದೆ ನನಗೆ ತನ್ನ ಕಾಲಿನಿಂದ ನನ್ನ ಹೊಟ್ಟೆಗೆ ತಲೆಗೆ ಒದೆಯುತಿದ್ದಾಗ ಕಾಂತಪ್ಪ ಮಾಂಗ ಹಾಗೂ ನನ್ನ ಮಗ ಮಲ್ಲಿಕಾರ್ಜುನ ಇಬ್ಬರು ನನ್ನ ಗಂಡನಿಗೆ ಹಿಡಿದು ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ ನನ್ನ ಗಂಡ ನನಗೆ ರಂಡಿ ಇವತ್ತ ಇವ್ರು ಬಿಡಶಾರ ಅಂತ ಉಳಿದಿ ನಿನಗ ಇಷ್ಟಕೆ ಬಿಡಲ್ಲಾ ನಿನ್ನ ಜೇವಾ ಹೊಡಿತಿನಿ ಅಂತಾ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.