POLICE BHAVAN KALABURAGI

POLICE BHAVAN KALABURAGI

04 July 2015

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ವಶ :
ಅಫಜಲಪೂರ ಠಾಣೆ : ದಿನಾಂಕ 03-07-2015 ರಂದು ಗುಡ್ಡೇವಾಡಿ ಗ್ರಾಮದ ಕಡೆಯಿಂದ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಕಳ್ಳತನದಿಂದ ಟಿಪ್ಪರಗಳಲ್ಲಿ ಮರಳು ತುಂಬಿಕೊಂಡು ಹೊಗುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೋಳ್ಳುರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಎರಡು ಟಿಪ್ಪರಗಳು ಬರುತ್ತಿದ್ದು ನೋಡಿ ನಾವು ಸದರಿ ಟಿಪ್ಪರಗಳನ್ನು ನಿಲ್ಲಿಸಿ  ಚಾಲಕರ ಹೆಸರು ವಿಳಾಸ ವಿಚಾರಿಸಲಾಗಿ ತಮ್ಮ ಹೆಸರು 1) ಸಂತೋಷ ತಂದೆ ಸುಬಾಷಶ್ಚಂದ್ರ ಹದನೂರ ಸಾ: ಖೈನೂರ ತಾ: ಸಿಂದಗಿ 2) ಸಂತೋಷ ತಂದೆ ಭೀಮರಾಯ ಯಂಕಂಚಿ ಸಾ: ಯರಗಲ (ಕೆ.ಡಿ)  ತಾ: ಸಿಂದಗಿ ಅಂತಾ ತಿಳಿಸಿದರು. ಟಿಪ್ಪರಗಳನ್ನು ಚಕ್ಕ ಮಾಡಲು, 1) ಟಾಟಾ ಕಂಪನಿಯ ಟಿಪ್ಪರ ಇದ್ದು ಅದರ ನಂ ಕೆಎ-28 ಎ-3055 ನೇದ್ದು ಇದ್ದು, ಸದರಿ ಟಿಪ್ಪರನಲ್ಲಿ ಮರಳು ತುಂಬಿದ್ದು ಇದ್ದಿತ್ತು, 2) ಮಹೆಂದ್ರಾ ಕಂಪನಿಯ ಟಿಪ್ಪರ ಇದ್ದು ಅದರ ನಂ ಕೆಎ-28 ಬಿ-7977 ಇದ್ದು, ಸದರಿ ಟಿಪ್ಪರದಲ್ಲಿ ಸಹ ಮರಳು ತುಂಬಿದ್ದು ಇದ್ದಿತ್ತು. ನಂತರ ಸದರಿ ಟಿಪ್ಪರ ಚಾಲಕರಿಗೆ ಮರಳು ಸಾಗಾಣಿಕೆ ಮಾಡಲು ಸಂಬಂಧಪಟ್ಟ ಅಧೀಕಾರಿಯವರಿಂದ ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು, ಸದರಿಯವರು ನಾವು ಈಗಾಗಲೆ ಒಂದು ಟ್ರಿಪ್ ಮರಳನ್ನು ಸಾಗಾಣಿಕೆ ಮಾಡಿರುತ್ತೆವೆ, ಈಗ ಎರಡನೆ ಟ್ರೀಪ್ಪ ತುಂಬಿಕೊಂಡು ಹೋಗುತ್ತಿದ್ದೆವೆ ಅಂತಾ ಹೇಳಿ ಅವರು ತಮ್ಮ ಹತ್ತಿರ ಇದ್ದ ರಾಯಲ್ಟಿಗಳನ್ನು ತೋರಿಸಿದರು, ಸದರಿ ರಾಯಲ್ಟಿಗಳನ್ನು ಪರಿಶಿಲಿಸಿ ನೋಡಲು 1 ನೇ ರಾಯಲ್ಟಿ ಮೇಲೆ ಟಿಪ್ಪರ ನಂ ಕೆಎ-28 ಎ-3055 ನೇದ್ದರಲ್ಲಿ ದಿನಾಂಕ 03-07-2015 ರಂದು ದಿನಾಂಕ 03-07-2015 ರಂದು ಸಾಯಂಕಾಲ 6:00 ಗಂಟೆಯ ಒಳಗೆ ಕಲ್ಲೂರ ಸ್ಟಾಕ ಯಾರ್ಡ-2 ನಿಂದ ಮಳ್ಳಿ ಡಿ.ವಾಯ್. ಉಪ್ಪಾರ ಗೇ ಸಾಗಾಟ ಮಾಡಬೇಕು ಅಂತಾ ನಮೂದಿಸಿದ್ದು ಇತ್ತು, ಹಾಗೂ ಇನ್ನೊಂದು ರಾಯಲ್ಟಿಯಲ್ಲಿ ಟಿಪ್ಪಿರ ನಂ ಕೆಎ-28 ಬಿ-7977 ನೇದ್ದರಲ್ಲಿ ದಿನಾಂಕ 03-07-2015 ರಂದು ಬೆಳಿಗ್ಗೆ 10:56 ಗಂಟೆಯಿಂದ ದಿನಾಂಕ 03-07-2015 ರಂದು ಸಾಯಂಕಾಲ 6:00 ಗಂಟೆಯ ಒಳಗೆ ಕಲ್ಲೂರ ಸ್ಟಾಕ ಯಾರ್ಡ-2 ನಿಂದ ಮಳ್ಳಿ ಡಿ.ವಾಯ್.ಉಪ್ಪಾರ ಗೇ ಸಾಗಾಟ ಮಾಡಬೇಕು ಅಂತಾ ನಮೂದಿಸಿದ್ದು ಇತ್ತು, ಸದರಿ ಟಿಪ್ಪರ ಚಾಲಕರು ರಾಯಲ್ಟಿ ಯನ್ನು ಒಂದು ಬಾರಿ ಉಪಯೋಗಿಸಿ, ರಾಯಲ್ಟಿಯ ಅವದಿ ಮುಗಿದ ನಂತರವು, ಸದರಿ ರಾಯಲ್ಟಿಯನ್ನು ಉಪಯೋಗಿಸಿ ಅನದಿಕೃತವಾಗಿ ಟಿಪ್ಪರಗಳಲ್ಲಿ ಮರಳು ಸಾಗಾಣಿಕೆ ಮಾಡುತ್ತಿದ್ದರಿಂದ, ಸದರಿ ಎರಡು ಟಿಪ್ಪರಿನ ಅವದಿ ಮುಗಿದ ರಾಯಲ್ಟಿಗಳನ್ನು ಹಾಗೂ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಿಣಿಕೆ ಮಾಡುತ್ತಿದ್ದ ಎರಡು ಮರಳು ತುಂಬಿದ ಟಿಪ್ಪರಗಳನ್ನು  ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ನಂತರ ಸದರಿ ಮರಳು ತುಂಬಿದ ಎರಡು ಟಿಪ್ಪರಗಳನ್ನು ಮತ್ತು ಆರೋಪಿತರೊಂದಿಗೆ ಅಫಜಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಗಾಯ ಗೋಳಿಸಿ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ವಿಜಯ ಕುಮಾರ ತಂದೆ ಹಣಮಂತ ಪೂಜಾರಿ ಬಸ್ ಡ್ರೈವರ ನಂ.7143  4ನೇ ಬಸ್ ಡಿಪೋ ಎನ.ಇ.ಕೆ.ಆರ.ಟಿ.ಸಿ ಕಲಬುರಗಿ ರವರು  ದಿನಾಂಕ 03/07/2015 ರಂದು ಮದ್ಯಾನ 1:00 ಗಂಟೆಗೆ ರೂಟ ನಂ.02/202 ಸೂಪರ ಮಾರ್ಕೆಟದಿಂದ ಅಂಬೇಡ್ಕರ ನಗರ (ಶರಣ ಸಿರಸಗಿ ಮಡ್ಡಿ ) ರೋಡಿನಲ್ಲಿ ನೃಪತುಂಗ ನಗರ ಸಾರಿಗೆ ಬಸ ನಂ. ಕೆ.ಎ 32 ಎಫ.1781 ನೇದ್ದರಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಅಂಬೇಡ್ಕರ ನಗರದಿಂದ ಎನ,ಜಿ,ಒ ಕಾಲೋನಿ ಮಾರ್ಗವಾಗಿ ಬರುತ್ತಿರುವಾಗ ಬೇಂದ್ರೆ ನಗರ ಬ್ರಿಜ್ ಹತ್ತಿರದ ಕೋಹಿನೂರ ಬಿಲ್ಡಿಂಗ ಮುಂದುಗಡೆ 1:20 ಪಿ.ಎಮ್ ಕ್ಕೆ ಒಂದು ಟಾಟಾ ಎಸಿ ವಾಹನ ಚಾಲಕನು ಬಸ್ಸಿಗೆ ಸೈಡ್ ಹೊಡೆದು ಮುಂದೆ ಹೋಗಿ ವಾಹನ ಅಡ್ಡಗಟ್ಟಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು  ಅವನ ಜೊತೆಗೆ ಇನ್ನೂ ಎರಡು ಟಂಟಂ ದಲ್ಲಿದ್ದವರು ಟಂಟಂ ದಲ್ಲಿನ ಡ್ರೈವರ ಜನರು ಬಂದು ಈ ಸಿಟಿ ಬಸ್ ನರವರು ಬಹಳ ಆಗಿದೆ ಎಂದು ಹೇಳಿ ಅವರ ವಾಹನಗಳಿಂದ ರಾಡ ಮತ್ತು ಬಡಿಗೆ ತೆಗೆದುಕೊಂಡು ಬಂದು ಸ್ಟೇರಿಂಗ ಮೇಲಿಂದ ನನ್ನ ಸಮವಸ್ತ್ರ ಹಿಡಿದು ಕೆಳಗಡೆ ಇಳಿಸಿ ಅದರಲ್ಲಿ ಒಬ್ಬನು ಕಬ್ಬೀಣದ ರಾಡಿನಿಂದ ತಲೆಯ ಮೇಲೆ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿರುತ್ತಾನೆ. ಮತ್ತು ಇನ್ನೂಳಿದವರು ಕೈಯಿಂದ ಸಮವಸ್ತ್ರ ಹಿಡಿದು ಮೈ ಕೈ ಮೇಲೆ ಹೊಡೆದು ಒಳಪೆಟ್ಟು ಗೊಳಿಸಿರುತ್ತಾರೆ ನಾನು ರಕ್ತಗಾಯಗೊಂಡು ನನ್ನ ಮೇಲೆ ಹಲ್ಲೆಮಾಡಿದ ಒಬ್ಬನನ್ನು ಹಿಡಿದು ನಮ್ಮ ಬಸ್ ಕಂಡೆಕ್ಟರ್ ಅಶೋಕ ರಾಠೋಡ ರವರಿಗೆ ಕೊಟ್ಟು ಭಾರಿ ರಕ್ತಸ್ರಾವ ಆಗುತ್ತಿದ್ದರಿಂದ ಬಸ್ಸಿನಲ್ಲಿ ಇದ್ದ ಇಬ್ಬರು ಪ್ರಯಾಣಿಕರು ಹಾಗೂ ಬಸ್ ಕಂಡೆಕ್ಟರ್ ಅಶೋಕ ರಾಠೋಡ ರವರೊಂದಿಗೆ ಚಿಕಿತ್ಸೆಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಹಲ್ಲೆ ಮಾಡಿ ಅಪಹರಣ ಮಾಡಿದ ಪ್ರಕರಣ :

ಮಾಡಬೂಳ ಠಾಣೆ : ಶ್ರೀ ಸಣ್ಣ ಹಣಮಂತ ತಂದೆ ನಾಗಪ್ಪ ಬಳಿಚಕ್ರ ಸಾ: ಖಾನಳ್ಳಿ ತಾ:ಜಿ: ಯಾದಗಿರಿ ಇವರ ಊರು ಖಾನಳ್ಳಿ ಅರಿಕೇರಾ[ಬಿ] ಗ್ರಾಮ ಪಂಚಾಯತಿಗೆ ಒಳಪಡುತ್ತಿರುವುದರಿಂದ ನಮ್ಮ ಊರಿಗೆ 1] ಎಸ್.ಸಿ-1 2] ಎಸ್.ಟಿ-1 3] ಸಾಮಾನ್ಯ-1 ಹೀಗೆ 3 ಸದಸ್ಯರ ಆಯ್ಕೆಗಾಗಿ ಇರುವಾಗ ಸಾಮಾನ್ಯ ಖೊಟದಲ್ಲಿ ನಮ್ಮ ಅಣ್ಣನ ಹೆಂಡತ್ತಿಯಾದ ಹೊನ್ನಮ್ಮ ಗಂಡ ದೊ.ಹಣಮಂತ ಈಕೆಯನ್ನು ಊರಿನ ಜನರು ಆಯ್ಕೆ ಮಾಡಿದರು ಹೀಗೆ ಅರಕೇರಾ ಗ್ರಾಮ ಪಂಚಾಯತ ಸದಸ್ಯರು ಒಟ್ಟು 22 ಸದಸ್ಯರು ಇದ್ದು ದಿನಾಂಕ-12/06/2015 ರಂದು ಸದರಿ ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಿಸಲಾತಿ ಎಂದು ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಪರಶಿಷ್ಟ ಜಾತಿ ಎಂದು ಬಹಿರಂಗ ಆದೇಶವಾಗಿದರಿಂದ ನಮ್ಮ ಅಣ್ಣನ ಹೆಂಡತ್ತಿ ಸಾಮಾನ್ಯ ಸ್ಥಾನದಿಂದ ಆಯ್ಕೆಯಾಗಿದರಂದ ಆಕೆಗೆ ಅಧ್ಯಕ್ಷ ಮಾಡಬೇಕು ಅಂತಾ ಆಕಾಂಕ್ಷಿಯಾಗಿದ್ದೆವು ಹೀಗಿರುವಾಗ ಅರಕೇರಾ [ಬಿ] ಗ್ರಾಮದ 1] ಫ್ರಭು ಗೌಡ ತಂದೆ ಮಾಲಕ ರಡ್ಡಿ ಗ್ರಾಮ ಪಂಚಾಯತ ಸದಸ್ಯ 2] ಪರವತ ರಡ್ಡಿ ತಂದೆ ಶರಣಗೌಡ ಮಾಲಿ ಪಾಟೀಲ 3] ಮಾಲಕರಡ್ಡಿ ತಂದೆ ಸಾಹೇಬಗೌಡ ಪೋಸ್ಟ್ ಮಾಸ್ಟರ 4] ಬೊದಣ್ಣಗೌಡ ತಂದೆ ಸಾಹೇಬಗೌಡ ಎಮ್.ಆರ್.ಮಡಿಕಲ್ ಕಾಲೇಜ ಕಲಬುರಗಿ 5] ಶರಣಗೌಡ ತಂದೆ ಪರವತ ರಡ್ಡಿ ಮಾಲಿ ಪಾಟೀಲ 6] ಸಿದ್ರಾಮ ರಡ್ಡಿ ವಡ್ನಳ್ಳಿ ಇವರೆಲ್ಲರೂ ಎಲ್ಲಾ ಸದಸ್ಯರನ್ನು ಪಂಚಾಯತ ಆಫೀಸಗೆ ಕರೆಯಿಸಿ ಈ ಸಲ ಅಧ್ಯಕ್ಷ ಸ್ಥಾನ ಸಾಮಾನ್ಯ ಸದಸ್ಯರಿಗೆ ಬಂದಿದೆ ಅದಕ್ಕೆ ಫ್ರಭುಗೌಡ ತಂದೆ ಮಾಲಕರಡ್ಡಿ ಇವರನ್ನು ಅಧ್ಯಕ್ಷರನ್ನಾಗಿ ಅವಿರೊಧವಾಗಿ ಆಯ್ಕೆ ಮಾಡೋಣಾ ಅಂತಾ ಹೇಳಿದರು ಆಗ ಉಳಿದ 13 ಸದಸ್ಯರು ಸೇರಿ ಖಾನಳ್ಳಿ ಗ್ರಾಮದ ನಮ್ಮ ಅಣ್ಣನ ಹೆಂಡತ್ತಿಯಾದ ಹೊನ್ನಮ್ಮ ಕೂಡ ಸಾಮಾನ್ಯ ಸ್ಥಾನದಿಂದ ಆಯ್ಕೆಯಾಗಿದ್ದಾಳೆ ಅದಕ್ಕೂ ಮುಂಚೆ ಮೊದಲಿನಿಂದ ಸಾಮಾನ್ಯ ಸ್ಥಾನವಾದಾಗ ನೀವೆ ಗೌಡರು ಆಗುತ್ತಾ ಬಂದಿದ್ದಿರಿ ಈ ಸಲ ಹಿಂದುಳಿದವರ ನಾವು ಸಾಮಾನ್ಯ ಸ್ಥಾನದಿಂದ ಆಯ್ಕೆಯಾಗಿದಾರೆ ಅದಕ್ಕೆ ಆಕೆಗೆ ಅಧ್ಯಕ್ಷರಾಗಿ ಮಾಡೋಣಾ ಅಂತಾ ಅಂದಿದಕ್ಕೆ ನಮ್ಮ ನಡುವೆ ಮತ್ತು ಅವರ ನಡುವೆ ಮಾತಿನ ಚಕಿಮಕಿಯಾಗಿ 22 ಸದಸ್ಯರಲ್ಲಿ 13 ಜನ ನಮ್ಮ ಅಣ್ಣನ ಹೆಂಡತ್ತಿ ಹೊನ್ನಮ್ಮಳಿಗೆ ಅಧ್ಯಕ್ಷರಾಗಲು ಬೆಂಬಲಕ್ಕೆ ನಿಂತಾಗಾ ದಿನಾಂಕ-01/07/2015 ರಂದು ಅಧಕ್ಷರ ಆಯ್ಕೆ ಚುನಾವಣೆ ಇರುವುದರಿಂದ ನಮ್ಮ ಅತ್ತಿಗೆ ಸೇರಿ 13 ಸದಸ್ಯರಾದ ಅಂದರೆ 1] ಹೊನ್ನಮ್ಮ ಗಂಡ ಹಣಮಂತ ಸಾ: ಖಾನಳ್ಳಿ 2] ಪ್ರೇಮಕುಮಾರ ತಂದೆ ಚತಸಿಂಗ್ ಸಾ: ಅರಕೇರಾ[ಬಿ] ತಾಂಡಾ 3] ನೆಹರು ತಂದೆ ಹೀರು ಸಾ: ಸಿದ್ದಾರ್ಥನಗರ 4] ರಾಜು ತಂದೆ ಶಂಕರ ಸಾ: ಬಾಲಾಜಿ ನಗರ 5] ಭೀಮಬಾಯಿ ಗಂಡ ನಾಮದೇವ ಸಾ: ಬಾಲಾಜಿನಗರ 6] ಶರಣಮ್ಮ ಗಂಡ ಶಿವಶರಣಪ್ಪ ಸಾ: ಬಸವಂತಪೂರ 7] ಗೋವಿಂದಪ್ಪ ತಂದೆ ಮುಖಣ್ಣ ಸಾ: ಬಸವಂತಪೂರ 8] ಮೋತಿಬಾಯಿ ಗಂಡ ಹಣಮಂತ ಸಾ: ಖಾನಳ್ಳಿ 9] ದೊಡ್ಡತಾಯಮ್ಮ ಗಂಡ ಮಲ್ಲಣ್ಣಾ ಸಾ: ಅಚ್ಚೋಲಾ 10] ಮಲ್ಲಪ್ಪ ತಂದೆ ಮಹಾದೇವಪ್ಪ ಸಾ: ಅರಕೇರಾ[ಬಿ] 11] ಲಕ್ಷ್ಮಿ ಗಂಡ ಹೊನ್ನಪ್ಪ ಸಾ: ಅರಕೇರಾ [ಬಿ] 12] ಶಾಂತಿಬಾಯಿ ಗಂಡ ವಾಲು ಸಾ: ಸಿದ್ದಾರ್ಥನಗರ 13] ಈರಮ್ಮ ಗಂಡ ಚಂದ್ರಾಮಪ್ಪ ಸಾ: ವಡ್ನಳ್ಳಿ. ಈ ಎಲ್ಲರೂ ಕೂಡಿ ನಾಳೆ ಚುನಾವಣೆ ಇದೆ ಎಂದು ದಿನಾಂಕ-30/06/2015 ರಂದು ಎಲ್ಲರೂ ಸೇರಿ ನಾವು ದೂರ ದೂರ ಇದ್ದರೆ ನಮ್ಮ ನಮ್ಮಲ್ಲೇ ವೈಮನಸ್ಸು ಮಾಡಿಸಿ ಅಥವಾ ಹಣದ ಆಸೆ ತೂರಿಸಿ ಅಥವಾ ಹೆದರಿಸಿ ತಮ್ಮ ಕಡೆ ಮಾಡಿಕೊಳ್ಳುವ ಸಂಭವ ಇರುವುದರಿಂದ 13 ಜನ ಸದಸ್ಯರು ಮಾತನಾಡಿಕೊಂಡು ನಾವು ಒಟ್ಟಾಗಿ ಚುನಾವಣೆ ಮಾಡೋಣಾ ಅಂತಾ ತಿರ್ಮಾನಿಸಿ 13 ಜನ ಸದಸ್ಯರು ಹಾಗೂ ಅವರ ಸಂಭಂದಿಕರಾದ 1] ಮಲ್ಲಣ್ಣಾ ತಂದೆ ಸಾಬಣ್ಣಾ 2] ವಾಲು ಸಿದ್ದಾರ್ಥನಗರ 3] ಚಂದ್ರಾಮ ಹಂಪ್ಪಿನ ವಡ್ನಳ್ಳಿ 4] ವಿಕ್ರಮ ಬಾಲಾಜಿನಗರ 5] ಮಲ್ಲಕಾಜರ್ುನ ತಂದೆ ಸಾಬಣ್ಣಾ 6] ಹಣಮಂತ ತಂದೆ ನಾಗಪ್ಪಾ ಖಾನಳ್ಳಿ 7] ಭೀಮು ತಂದೆ ತುಳುಜಾರಾಮ 8] ಹಣಮಂತ ತಂದೆ ನಾಗಪ್ಪಾ ಅಚ್ಚೋಲಾ 9] ಗೋಪಾಲ ಬಾಲಾಜಿನಗರ 10] ರವಿ ತಂದೆ ಹಣಮಂತ ಖಾನಳ್ಳಿ ಎಲ್ಲಾ ಜನರು ಸೇರಿ ಜೀಪ ನಂ ಕೆಎ-33 ಎ-1853 ಮತ್ತು ಕೆಎ-33 ಎಮ್-3638 ರಲ್ಲಿ ದಿನಾಂಕ-30/06/2015 ರಂದು ಅರಕೇರಾ [ಬಿ] ದಿಂದ ಬಿಟ್ಟು ಕಲಬುರಗಿಗೆ ಹೋಗಿ ಶರಣಬಸವೇಶ್ವರ ದರ್ಶನ ಮಾಡಿ ರಾತ್ರಿ ಅಲ್ಲೆ ಒಂದು ಕಡೆ ಉಳಿದು ದಿನಾಂಕ-01/07/2015 ರಂದು ಮುಂಜಾನೆ ನೇರವಾಗಿ ಅರಕೇರಾ [ಬಿ] ಗ್ರಾಮ ಪಂಚಾಯತ ಬಂದು ಮತ ಹಾಕೋಣಾ ನಮಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡೋಣಾ ಅಂತಾ ನಿರ್ಧರಿಸಿ ಕಲಬುರಗಿಯಿಂದ 8 ಎ.ಎಮ್ ಸುಮಾರಿಗೆ ನಾವು ತೆಗೆದುಕೊಂಡ ಹೋದ ವಾಹನಗಳಲ್ಲಿ ಕುಳಿತು ಕಲಬುರಗಿಯಿಂದ ವಾಯಾ ಚಿತ್ತಾಪೂರ ಮೂಲಕ ಹೋಗೋಣಾ ಅಂತಾ ದಂಡೋತಿ ಶಾಲೆಯ ಹತ್ತಿರ ರೊಡಿನ ಮೇಲೆ ಹೋಗುತ್ತಿರುವಾಗ ನಮ್ಮ ಹಿಂದಿನಿಂದ 2 ಟವೇರಾ ವಾಹನಗಳು ಬಂದು ನಮಗೆ ಸೈಡ ಹೊಡೆದು ನಮ್ಮ ವಾಹನಗಳ ಮುಂದೆ ಬಂದು ನಿಲ್ಲಿಸಿ ಆ ಎರಡು ವಾಹನದಿಂದ ಅರಕೇರಾ [ಬಿ] ಗ್ರಾಮದ ಶಿವಾನಂದ ತಂದೆ ಭೂದಣ್ಣ ಗೌಡ ಈತ ಹಾಗೂ ಅವನ ಹಿಂದೆ ಕೆಲವು ಜನರು ಕೈಯಲ್ಲಿ ತಲವಾರ, ಲಾಂಗ, ಕ್ರಿಕೇಟ ಬ್ಯಾಟ್, ಹಿಡಿದುಕೊಂಡು ಬಂದವರೆ ನಮ್ಮ ಜೀಪಿನಲ್ಲಿ ಕುಳಿತ್ತಿದ್ದವರಿಗೆ ಕೇಳಗೆ ಇಳಿಯದಂತೆ ತಡೆದು ನಮಗೆ ಶಿವಾನಂದ ಈತನು ಲೇ ಬ್ಯಾಡ ಹಣಮ್ಯಾ ಕೆಳಗೆ ಇಳಿ ಅಂತಾ ನನ್ನ ಕುತ್ತಿಗೆಗೆ ಲಾಂಗ ಹಿಡಿದು ನನನ್ನು ಹೊರೆಗೆ ಎಳೆದ. ಅದೆ ರೀತಿ ರವಿ ಖಾನಳ್ಳಿ ತಾಂಡಾ ಈತನಿಗೆ ಲೇ ಲಂಬಾಣಿ ಸೋಳ್ಳೆ ಮಗನೇ ನೀನು ಯಾರಿಗೆ ಓಟು ಹಾಕಲು ಹೊರಟ್ಟಿದೆಇ ಕೇಳಗೆ ಇಳಿ ಅಂತಾ ಬೈದು ಅವನ ಸಂಗಡ ಇದ್ದ ವ್ಯಕ್ತಿ ರವಿ ಕುತ್ತಿಗೆಗೆ ತಲಾವಾರ ಹಚ್ಚಿ ಕೆಳಗೆ ಇಳಿಸಿದಾ. ಅದೇ ರೀತಿ ಮಲ್ಲಪ್ಪ ತಂದೆ ಮಹಾದೇವಪ್ಪಾ ಬೆಡಗೇರ ಈತನಿಗೆ ಲೇ ಕಬ್ಬಲಿಗ ಸೋಳ್ಳೆ ಮಗನೇ ನೀನು ನಮ್ಮೋರಿನವನಾಗಿದ್ದು ನಮ್ಮ ದೊಡ್ಡಪ್ಪನ ಮಗ ಫ್ರಭು ಗೌಡನಿಗೆ ಓಟು ಹಾಕಲ್ಲಾ ಅಂತಿಯಾ ಅಂತಾ ಬೈದು ಕೆಳಗೆ ಇಳಿಸಿದನು. ಅದೆ ರೀತಿ ಮಲ್ಲಿಕಾರ್ಜುನ ಪೂಜಾರಿಗೂ ಸಹ ಲೇ ಕುರುಬ ನೀನು ಊರ ಕುರುಬನಾಗಿದ್ದು ಊರ ಗೌಡರಿಗೆ ಎದುರು ಹಾಕುತ್ತಿ ಅಂತಾ ಬೈದು ಅವನ ಅಂಗಿ ಹಿಡಿದು ಜೀಪಿನಿಂದ ಕೆಳಗೆ ಇಳಿಸಿ ನಮ್ಮ 4 ಜನರನ್ನು ಶಿವಾನಂದ ಈತನು ತಾನು ತಂದ ಟವೇರಾ ವಾಹನದಲ್ಲಿ ಹಾಕಿಕೊಂಡು ನಮಗೆ ಅಪಹರಿಸಿಕೊಂಡು ಹೋಗಿ ಮಹಾಗಾಂವ್ ಕ್ರಾಸ್ ಹತ್ತಿರ ಇರುವ ದೋಸ್ತಿ ಲಾಡ್ಜ ರೋವಿನಲ್ಲಿ ಕೂಡಿಹಾಕಿ ನಾವು ಚಿರಾಡುತ್ತಿದ್ದಾಗ ನಮಗೆ ಕೈಯಿಂದ ಹೊಡೆ ಬಡೆ ಮಾಡಿದ್ದು ನಂತರ 2-45 ಪಿ.ಎಮ್ ಸುಮಾರಿಗೆ ನಮಗೆ ಅಲ್ಲಿಂದ ಬಿಡುಗಡೆ ಮಾಡಿದ್ದು ಈ ಬಗ್ಗೆ ನೀವು ಏನಾದರೂ ಪೊಲೀಸ್ ಠಾಣೆಗೆ ಹೋಗಿ ಕೇಸ್ ಮಾಡಿದರೆ ನಿಮ್ಮ 4 ಜನರಿಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.