POLICE BHAVAN KALABURAGI

POLICE BHAVAN KALABURAGI

27 August 2013

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ: 25/08/2013 ರಂದು ಬೆಳಿಗ್ಗೆ ಶ್ರೀಮತಿ ಸುವರ್ಣ ಗಂಡ ಈರಣ್ಣಗೌಡ ಸಾಃ ಕಡಿವಾಲ ಗ್ರಾಮ ತಾಃಕುಷ್ಟಗಿ ಜಿಃಕೊಪ್ಪಳ ತನ್ನ ಸಂಬಂಧಿಕರಾದ 1) ಸುವರ್ಣ ಗಂಡ ಈರಣ್ಣಗೌಡ 2), ಮಹಾದೇವಿ ಗಂಡ ಹಣಮಂತ ಹಾಗು ನಮ್ಮ ಪಕ್ಕದ ಮನೆಯವರಾದ 3) ಶಾಂತವ್ವ ಗಂಡ ಕಾಳಪ್ಪಾ 4) ಫಕೀರಮ್ಮಾ ಗಂಡ ಲಕ್ಷ್ಮಣ 5). ಅಡೆವ್ವಾ ಗಂಡ ಶರಣಪ್ಪಾ 6). ಭೀಮವ್ವ 7) ರೇಣುಕಾ ಗಂಡ ಕರಿಯಪ್ಪಾ 8) ಸಂಗವ್ವ ಗಂಡ ಹಣಮಂತ 9) ಯಮನೂರಪ್ಪಾ ತಂದೆ ಬಸಪ್ಪಾ 10) ಪರಸಪ್ಪಾ ತಂದೆ ಬಸೆಟ್ಟೆಪ್ಪಾ ಎಲ್ಲರೂ ಕೂಡಿಕೊಂಡು ಶ್ರಾವಣ ಮಾಸದ ಪ್ರಯುಕ್ತ ಕ್ರೊಜರ ಜೀಪ ನಂ. ಕೆಎ:37, ಎಂ:6205 ನೇದ್ದನ್ನು ತೆಗೆದುಕೊಂಡು ಬಸವಕಲ್ಯಾಣಕ್ಕೆ ಬಂದು ದೇವರ ದರ್ಶನ ಮಾಡಿಕೊಂಡು ಮರಳಿ ನಮ್ಮೂರಿಗೆ ಹುಮನಾಬಾದ ಗುಲಬರ್ಗಾ ಎನ್.ಹೆಚ್.218 ನೇದ್ದರ ಮುಖಾಂತರ ಹೋಗುತ್ತಿದ್ದಾಗ ಮುಂದೆ ಡೊಂಗರಗಾಂವ ಕ್ರಾಸ ದಾಟಿ ಜೀಪ ಚಾಲಕನಾದ ಮುತ್ತಣ್ಣಾ ತಂದೆ ಶಂಕ್ರಗೌಡ ಪಾಟೀಲ ಸಾಃ ಯಲಬುರ್ಗಾ ಕ್ರೊಜರ ಜೀಪ  ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸುತ್ತಿದ್ದಾಗ ರಾತ್ರಿ 9-00 ಗಂಟೆ ಸುಮಾರಿಗೆ ಮರಗುತ್ತಿ ಕ್ರಾಸ ಹತ್ತಿರ ಹೋಗುತ್ತಿದ್ದಂತೆ ಎದುರುನಿಂದ ಅಂದರೆ ಗುಲಬರ್ಗಾ ಕಡೆಯಿಂದ ಮಹೇಂದ್ರ ಪೀಕಪ್ ಕೆಎ: ಕೆಎ:36, ಎ:2882 ನೇದ್ದರ ಚಾಲಕ ಅಬ್ದುಲಸಾಬ ತಂದೆ ಮಹಿಬೂಬಸಾಬ ಸಾಃಗುರಗುಂಟಾ ತಾಃಲಿಂಗಸೂರ ಜಿಃರಾಯಚೂರ ಈತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಬ್ಬರಿಗೊಬ್ಬರು ಸೈಡ ಕೊಡದೇ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿದರು. ಈ ಅಪಘಾತದಲ್ಲಿ ನನಗೆ ಆಸ್ಪತ್ರೆಗೆ ತೋರಿಸುವಂತಹ ಗಾಯಗಳು ಆಗಿರುವುದಿಲ್ಲಾ. ನಮ್ಮ ಜೋತೆಯಲ್ಲಿದ್ದವರಿಗೆ ತರಚಿದ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆತ್ಮ ಹತ್ಯೆಗೆ ಪ್ರಚೋದನೆ ಮಾಡಿದ ಪ್ರಕರಣ :

ಮುಧೋಳ ಠಾಣೆ : ಶ್ರೀ ನೀಲ್ಯಾ ನಾಯಕ ತಂದೆ ಗೋಬ್ರಾ ನಾಯಕ ವ: 50, ಸಾ: ನಾಡೇಪಲ್ಲಿ ತಾಂಡಾ ತಾ: ಸೇಡಂ ಇವರು ತಂಗಿ ರಾಮಿ ಬಾಯಿ ಇವಳಿಗೆ 20 ವರ್ಷಗಳಹಿಂದೆ, ಮೇದಕ ತಾಂಡಾದ ಕೀಶಾನ ತಂದೆ ಅರ್ಜ್ಯಾ ನಾಯಕ ಚವಾಣ ಇವರೊಂದಿಗೆ ಮಧುವೆ ಮಾಡಿದ್ದು, ಇವಳು ಗಂಡನಿಗೆ 3 ನೇ ಹೆಂಡತಿ ಇರುತ್ತಾಳೆ, ನಮ್ಮ ತಂಗಿ ರಾಮಿ ಬಾಯಿಗೆ ಮೂರು ಜನ ಮಕ್ಕಳಿದ್ದು ಸದರಿ ನನ್ನ ತಂಗಿಯ ಗಂಡನಾದ ಕೀಶನ ಇತನು 2ನೇ ಹೆಂಡತಿ ಕಮಲಿಬಾಯಿ ಹಾಗು ಅವರ ಮಗ ರಡ್ಡ್ಯಾ ನಾಯಕ ಇವಳ ಜೋತೆಯಲ್ಲಿ ಒಂದು ಮನೆಯಲ್ಲಿ ವಾಸವಾಗಿದ್ದು, ನಮ್ಮ ತಂಗಿ ರಾಮಿಬಾಯಿ ಹಾಗು ಅವರ ಮಕ್ಕಳು ಒಂದು ಮನೆಯಲ್ಲಿ ಬೇರೆ-ಬೇರೆ ಇರುತ್ತಾರೆ. ಸದರಿ ಕೀಶನ ಇತನು, ನಮ್ಮ ತಂಗಿ ರಾಮಿಬಾಯಿ 8-10 ವರ್ಷಗಳಿಂದ ಅವಳ ನಡತೆ ಬಗ್ಗೆ ಶಂಕಿಸಿ ಹೊಡೆ ಬಡೆ ಮಾಡಿ ಕಿರುಕುಳ ಕೊಟ್ಟಿದ್ದನು, ನಾನು ಈಗ ಹಲವಾರು ಬಾರಿ ನಮ್ಮ ತಂಗಿ ಗಂಡನಾದ ಕಿಶನ ಹಾಗು ಅವರ 2ನೇ ಹೆಂಡತಿ ಕಮಲಿಬಾಯಿ ಇವರಿಗೆ ನಾನು ಹಾಗು ಮೇದಕ ತಾಮಡಾದ ಹಿರಿಯರಾದ ನಮ್ಮೂರಿನ ನಾಯಕರು ಇತರರು ಕೂಡಿ ತಾಂಡಾದಲ್ಲಿ ಪಂಚಾಯತಿ ಮಾಡಿ ನಮ್ಮ ತಂಗಿ ಹಾಗು ಅವರ ಮಕ್ಕಳಿಗೆ ತೊಂದರೆ ಕೊಡಬೇಡಿ, ಅಂತಾ ಹೇಳಿದರು, ಕೂಡ, ಸದರಿ ಕೀಶನ ಹಾಗು ಇತನ 2ನೇ ಹಂಡತಿ ಕಮಲಿಬಾಯಿ ಹಾಗು 2ನೇ ಹೆಂಡತಿಯ ಮಗನಾದ ರಡ್ಡ್ಯಾ ನಾಯಕ ಇವಳುಗಳು ನಮ್ಮ ತಂಗಿಗೆ ಜಗಳಾ ತೆಗೆದು, ಹೊಡೆ ಬಡೆ ಮಾಡಿ ತೊಂದರೆ ಕೊಡುತ್ತಿದ್ದರು, ನಮ್ಮ ತಂಗಿ ಕೂಲಿ ನಾಲಿ ಮಾಡಿ ಗಂಡನ ಹಾಗು 2ನೇ ಹೆಂಡತಿಯ ಹಾಗು ಅವಳ ಮಗನ ಕಿರುಕುಳ ಸಹಿಕೊಂಡು ಗಂಡನ ಮನೆಯಲ್ಲಿ ಇದ್ದು ನಿನ್ನೆ ದಿ: 24-08-2013 ರಂದು ಬೆಳಗ್ಗೆ 08-00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ, ನಮ್ಮ ತಂಗಿ ರಾಮಿಬಾಯಿ ಇವಳು ನನಗೆ ಫೋನ ಮಾಡಿ, ತಿಳಿಸಿದ್ದೇನೆಂದರೆ, ಈಗ ನನಗೆ ನನ್ನ ಗಂಡ ಕೀಶನ ಹಾಗು ಅವನ 2ನೇ ಹೆಂಡತಿ ಕಮಲಿಬಾಯಿ ಮತ್ತು ಅವಳ ಮಗ ರಡ್ಡ್ಯಾ ನಾಯಕ ಇವರು ರಂಡಿ ಬೋಸಡಿ ನೀನು ಕೂಲಿ ಮಾಡಿದ ಹಣ ನಮಗೆ ಕೊಡು, ನಿನ್ನ ನಡತೆ ಸರಿ ಇಲ್ಲಾ. ನೀನು ನಮ್ಮ ಮನೆಯಲ್ಲಿ ಇರಬೇಡಾ ಏಲ್ಲಿಯಾದರು ಬಿದ್ದು ಸಾಯಿ ಅಂತಾ ಹೊಡೆ ಬಡೆ ಮಾಡಿ ಕೀರುಕುಳ ನೀಡಿದ್ದಾರೆ, ಆದ್ದರಿಂದ ನಾನು ಈಗ ಮನೆಯಲ್ಲಿದ್ದ, ಹೆಸರಿಗೆ ಹೊಡೆಯುವ ಪೌಡರ ಕ್ರೀಮಿನಾಶಕ ಔಷದ ಕುಡಿದಿದ್ದೇನೆ, ನಾನು ಸಾಯುತ್ತೇನೆ, ಅಂತಾ ತಿಳಿಸಿದಳು, ಆಗಾ ನಾನು ನಮ್ಮ ತಂಗಿಯ ಮಗನಾದ ರಾಜು ಇತನಿಗೆ ಫೋನ ಮಾಡಿ ನಿಮ್ಮ ತಾಯಿಗೆ ಮುಧೋಳ ದವಾಖಾನೆಗೆ ತೆಗೆದುಕೊಂಡು ಬಾ ನಾನು ಅಲ್ಲಿಗೆ ಬರುತ್ತೇನೆ ಅಂತಾ ಹೇಳಿ ನಾನು ಮುಧೋಳಕ್ಕೆ ಬೆಳಗ್ಗೆ 1000 ಗಂಟೆ ಸುಮಾರಿಗೆ ಬಂದೇನು. ನಮ್ಮ ತಂಗಿ ಅವರ ಮಗ ರಾಜು ಹಾಗು ಅವರ ತಾಂಡಾ ಶ್ರೀನಿವಾಸ ತಂದೆ ಪಾಂಡು ರಾಠೋಡ ಮತ್ತು ಸುಶಿಲಾಬಾಯಿ ಗಂಡ ಧರಿಯಾ ನಾಯಕ ಇವರೇಲ್ಲರೂ, ಆಟೋದಲ್ಲಿ ಹಾಕಿಕೊಂಡು ಮುಧೋಳ ಸರಕಾರಿ ಆಸ್ಪತ್ರೆಗೆ ಬಂದಿದ್ದರು, ಅಲ್ಲಿ ಉಪಚಾರ ಮಾಡಿಸಿ ಅಲ್ಲಿಂದ ಅಂಬೂಲೇನ್ಸದಲ್ಲಿ ನಮ್ಮ ತಂಗಿಗೆ ಹೆಚ್ಚಿನ ಉಪಚಾರ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ನಮ್ಮ ತಂಗಿಗೆ ಸೇಡಮ ಆಸ್ಪತ್ರೆಯಲ್ಲಿ ಉಪಚರಿಸಿ ಇಂದು ದಿ: 25-08-2013 ರಂದು ಮಧ್ಯಾಹ್ನ 1200 ಗಂಟೆ ಸುಮಾರಿಗೆ ಆರಾಮ ಆಗದಿದ್ದರಿಂದ ಹೆಚ್ಚಿನ ಉಪಚಾರ ಕುರಿತು ಹೆಚ್ಚಿನ ಉಪಚಾರ ಕುರಿತು ಅಂಬುಲೇನ್ಸದಲ್ಲಿ ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಹೊಗುತ್ತಿದ್ದಾಗ, ಇಂದು ಮಧ್ಯಾಹ್ನ 1330 ಗಂಟೆ ಸುಮಾರಿಗೆ ಬಸವೇಶ್ವರ ಆಸ್ಪತ್ರೆ ಗುಲಬರ್ಗಾದಲ್ಲಿ ನಮ್ಮ ತಂಗಿ ರಾಮಿಬಾಯಿ ಮೃತ ಪಟ್ಟಳು, ಅಲ್ಲಿ ಡಾಕ್ಟರ್‌ಗೆ ತೋರಿಸಿದಾಗ ಡಾಕ್ಟರ್‌ರವರು ಪರಿಶೀಲಿಸಿ ನಮ್ಮ ತಂಗಿ ಮೃತ ಪಟ್ಟಿರುತ್ತಾಳೆ ಅಂತಾ ತಿಳಿಸಿದರು, ನಂತರ ನಮ್ಮ ತಂಗಿ ರಾಮಿಬಾಯ ಮೃತ ದೇಹ ಅದೆ ಅಂಬುಲೇನ್ಸದಲ್ಲಿ ಹಾಕಿಕೊಂಡು ಇಂದು 03-30 ಗಂಟೆಗೆ ಸರಕಾರಿ ಆಸ್ಪತ್ರೆ ಸೇಡಂದಲ್ಲಿ ತಂದು ಹಾಕಿರುತ್ತೇವೆ . ನಮ್ಮ ತಂಗಿ ರಾಮಿಬಾಯಿ ಗಂಡ ಕಿಶನ ಚವಾಣ ಇವಳಿಗೆ ಅವಳ ಗಂಡ ಕಿಶನ ಚಾವಣ ಹಾಗು 2ನೇ ಹೆಂಡತಿ ಕಮಲಿಬಾಯಿ ಮತ್ತು ಅವಳ ಮಗ ರಡ್ಡ್ಯಾ ನಾಯಕ ಇವರು ನಿನ್ನೆ ದಿ: 24-08-2013 ರಂದು ಬೆಳಗ್ಗೆ 0800 ಗಂಟೆ ಸುಮಾರಿಗೆ ಹೊಡೆ ಬಡೆ ಮಾಡಿದ್ದರಿಂದ ಅವರ ಕಿರುಕುಳ ತಾಳಲಾರದೆ ನಮ್ಮ ತಂಗಿ ಮನೆಯಲ್ಲಿ ಕ್ರೀಮಿನಶಾಕ ಔಷಧ ಕುಡಿದು ದಿ: 25-08-2013 ರಂದು ಮಧ್ಯಾಹ್ನ 01-30 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.