POLICE BHAVAN KALABURAGI

POLICE BHAVAN KALABURAGI

11 September 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀಮತಿ  ನಿಲಮ್ಮಾ   ಗಂಡ ಲಕ್ಕಪ್ಪ  ಉ: ಅಡಿಗೆ ಕೆಲಸ ಸಾ: ಹನುಮಾನ ದೇವಸ್ಥಾನದ ಹತ್ತಿರ ಸುಂದರ ನಗರ ಗುಲಬರ್ಗಾರವರು ನಾನು ದಿನಾಂಕ:11-09-2012  ರಂದು 9-30 ಗಂಟೆ ಸುಮಾರಿಗೆ  ಆರ.ಟಿ.ಓ.ಕ್ರಾಸ್ ದಿಂದ  ಜಿ.ಜಿ.ಹೆಚ್. ಸರ್ಕಲ್ ಮೇನ ರೋಡಿನ ಜಿಲ್ಲಾ ಸರಕಾರಿ ಆಸ್ಪತ್ರೆಯ ಎದುರಿನ ಮೇನ ಗೇಟ ಎದುರು ನಡೆದುಕೊಂಡು ಹೋಗುತ್ತಿದ್ದಾಗ ಜಿ.ಜಿ.ಹೆಚ್.ಸರ್ಕಲ್ ಕಡೆಯಿಂದ ಅಟೋರೀಕ್ಷಾ ನಂ: ಕೆಎ 32 ಎ 8612 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ  ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ  ಗಾಯಗೊಳಿಸಿ ಅಟೋರೀಕ್ಷಾ ಸ್ಥಳದಲಿ ಬಿಟ್ಟು ಅಟೋಚಾಲಕ  ಓಡಿ ಹೋಗಿರುತ್ತಾನೆ  ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 89/2012 ಕಲಂ, 279, 337 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಂಗಳ ಸೂತ್ರ ದರೋಡೆ ಮಾಡಿದ ಬಗ್ಗೆ:
ಸ್ಟೇಷನ ಬಜಾರ ಪೊಲೀಸ ಠಾಣೆ:ಶ್ರೀಮತಿ. ಶೋಭಾದೇವಿ ಗಂಡ ಕೃಷ್ಣ ನಿರಾಳೆ ಸಾ|| ನಂದಗೊಕುಲ ನಿವಾಸ ಲಕ್ಷ್ಮಿನಾರಾಯಣ ನಿವಾಸ ಗುಲಬರ್ಗಾರವರು ದಿನಾಂಕ.11.09.2012 ರಂದು ಮದ್ಯಾಹ್ನ 12.15 ಗಂಟೆಗೆ ಮನೆಯ ಕಂಪೌಂಡಿನಲ್ಲಿರುವಾಗ ಸೈಕಲ ಮೊಟಾರ ಮೇಲೆ ಇಬ್ಬರು ಅಪರಿಚಿತ ವ್ಯೆಕ್ತಿಗಳು ಬಂದು ಮನೆಯ ಮುಂದೆ ನಿಲ್ಲಿಸಿ, ಅದರಲ್ಲಿ ಒಬ್ಬನು ಸೈಕಲ್ ಮೋಟಾರನಿಂದ ಇಳಿದು ಗೇಟ್ ಹತ್ತಿರ ಬಂದು ಶೀಲಾ ಮೌಸಿ ಮನೆ ಎಲ್ಲಿದೆ ಎಂದು ಕೇಳಿದಾಗ ನಾನು ಗೇಟ ತಗೆದು ಹೋರಗೆ ಬಂದು ವಿಚಾರಿಸುತ್ತಿರುವಾಗ ನನ್ನ ಕೊರಳಿಗೆ ಕೈಹಾಕಿ ಮಂಗಳ ಸೂತ್ರ ಕಿತ್ತಿಕೊಳ್ಳುವಾಗ ನಾನು ನನ್ನ ಕೈಯಿಂದ ಮಂಗಳ ಸೂತ್ರ ಹಿಡಿದುಕೊಂಡಿದ್ದು ಅರ್ದ ಮಂಗಳ ಸೂತ್ರ ಕಿತ್ತಿಕೊಂಡು ಸೈಕಲ್ ಮೊಟಾರ್ ಮೇಲೆ ಕುಳಿತು ಓಡಿ ಹೋದರು, ನಾನು ಕೂಗಾಡುವದನ್ನು ಕೇಳಿಸಿಕೊಂಡ ಅವರ ಸೊಸೆ ಶ್ವೇತಾ ಒಡಿ ಬಂದು ಸದರಿಯವರಿಗೆ ಬೆನ್ನು ಹತ್ತಿದರು ಅವರು ಪರಾರಿಯಾಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.115/2012 ಕಲಂ.392 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಸೈಯದ ತುರಬ ಅಲಿ ತಂದೆ ಸೈಯದ ಉಸ್ಮಾನ ಅಲಿ ನಾಗೂರೆ ಸಾ:ಎಬಿಎಲ್‌ ಹೌಸಿಂಗ ಸೊಸೈಟಿ ಶಾಂತನಗರ ಭಂಕೂರ ರವರು ನನ್ನ ತಮ್ಮನಾದ ಸೈಯದ ಯುನೂಸ ಅಲಿ ಇತನು ದಿನಾಂಕ:10-09-2012 ರಂದು ಸಾಯಂಕಾಲ 6-15  ಗಂಟೆಗೆ  ತನ್ನ ಮೋಟಾರ ಸೈಕಲ  ನಂ: ಕೆ.ಎ-32 ಕ್ಯೂ-1130 ನೇದ್ದರ ಮೇಲೆ ಶಹಾಬಾದ ದಿಂದ ಬಂಕೂರದ  ಶಾಂತನಗರಕ್ಕೆ ಹೋಗುತ್ತಿರುವಾಗ ಎ.ಬಿ.ಎಲ್. ಗೇಸ್ಟ್ ಹೌಸ ಹತ್ತಿರ ರೋಡಿನ ಮೇಲೆ ಚಿತ್ತಾಪೂರ ಕ್ರಾಸ ಕಡೆಯ ಎದರುಗಡೆಯಿಂದ ಲಾರಿ ನಂ: ಎಮ್.ಎ.ಚ್.  10 ಜೆಡ್ 948  ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಡಿಕ್ಕಿ ಪಡಿಸಿದ್ದರಿಂದ ಲಾರಿಯ ಬಲಗಡೆ ಹಿಂದಿನ ಗಾಲಿಯಲ್ಲಿ ಸಿಕ್ಕು ಹೊಟ್ಟೆಗೆ ಮತ್ತು ಕಾಲುಗಳಿಗೆ ಬಾರಿ ಗಾಯವಾಗಿದ್ದು ಆತನ ಸಂಗಡ ಲಾಲ ಅಹ್ಮದ ಮತ್ತು ಹರಿಶ್ಚಂದ್ರ ರವರು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಗುಲ್ಬರ್ಗಾದ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಉಪಚಾರ ಹೊಂದುತ್ತಾ ಮೃತ ಪಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:119/2012 ಕಲಂ, 279, 338, 304 (ಎ) ಐಪಿಸಿ ಸಂಗಡ 187 ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀಮತಿ ಪ್ಯಾರಿ ಬೇಗಂ ಗಂಡ ಮಹ್ಮದ ಹನೀಫ ಸಾ:ರಾಮಾ ಮೋಹಲ್ಲಾ  ಶಹಾಬಾದ ರವರು ಇಂದು ದಿನಾಂಕ:10/09/2012 ರಂದು ಬೆಳಿಗ್ಗೆ 11.00 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಮಕ್ಕಳಾದ ಹೀನಾ ಪರ್ಮಮ ಹಾಗೂ ತಸ್ಲೀಮಾಬಾನು  ಮನೆಯಲ್ಲಿದ್ದಾಗ ನನ್ನ ಗಂಡ ಮಹ್ಮದ ಹನೀಪ ಇತನು ಬಂದು ನನಗೆ ಅವಾಚ್ಯವಾಗಿ ಬೈದು ಕಿರುಕುಳ ಕೊಡುತ್ತಿದ್ದಾಗ ಸಮ್ಮನೆ ಏಕೆ ಬೈಯುತ್ತಿ ಅಂತಾ ಕೇಳಿದಕ್ಕೆ ನನಗೆ ಎದುರು ಮಾತನಾಡುತ್ತಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಅಲ್ಲೆ ಬಿದ್ದ ಕಟ್ಟಿಗೆಯಿಂದ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ : 118/2012 ಕಲಂ: 498(ಎ),323,324,504,506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.