ಅಪಘಾತ
ಪ್ರಕರಣ :
ಜೇವರಗಿ
ಠಾಣೆ : ದಿನಾಂಕ 10.04.2016 ರಂದು
ಮದ್ಯಾಹ್ನ 12:15 ಗಂಟೆಯ ಸುಮಾರಿಗೆ ಜೇವರಗಿ ಪದವಿ ಪೂರ್ವ ಕಾಲೇಜ ಹತ್ತಿರ ಜೇವರಗಿ- ಶಹಾಪೂರ
ರೋಡಿನ ಮೆಲೆ ಆನಂದ ಈತನು ತನ್ನ ಮೋಟಾರು ಸೈಕಲ್ ನಂ ಕೆಎ32ಇಎಪ್4283 ನೇದ್ದರ ಮೇಲೆ ನನಗೆ
ಕೂಡಿಸಿಕೊಂಡು ಶಹಾಪೂರ ಕಡೆಗೆ ಹೋಗುತ್ತಿದ್ದಾಗ ಅದೇ ವೇಳೆಗೆ ಮುಂದುಗಡೆ ಒಂದು ಕಾರ್ ಎಮ್.ಹೆಚ್-10-ಎವಿ-
5734 ನೇದ್ದರ ಚಾಲಕನು ತನ್ನ ಕಾರ್ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು
ಯಾವದೇ ಸೂಚನೆ ತೋರಿಸದೆ ಒಮ್ಮಲೇ ಬಲ ಸೈಡಿಗೆ ಹೊರಳಿಸಿ ನಮ್ಮ ಮೋಟಾರು ಸೈಕಲ್‌ಗೆ ಡಿಕ್ಕಿ ಪಡಿಸಿದ್ದರಿಂದ
ನನಗೆ ಮತ್ತು ಆನಂದ ಯಾತನೂರನಿಗೆ ಸಾದಾ ಮತ್ತು ಭಾರಿ ಗಾಯಗಳಾಗಿದ್ದು ಅಪಘಾತದ ನಂತರ ಸದರಿ
ಕಾರ್ ಚಾಲಕನು ತನ್ನ ಕಾರ್ ಅನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ
ಅಂತಾ ಶ್ರೀ ತೇಜು ತಂದೆ ಮಲ್ಲಿಕಾರ್ಜುನ ಹೊಸಮನಿ ಸಾಃ ರೇವನೂರ ತಾಃ
ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರಗಿ ಠಾಣೆ : ದಿನಾಂಕ
10.04.2016 ರಂದು ಮುಂಜಾನೆ 10:00 ಗಂಟೆಯ ಸುಮಾರಿಗೆ ಸರಕಾರಿ ಶಾಲೆಯ ಮುಂದಿನ ಸಾರ್ವಜನಿಕ ಬೋರ್‌ವೆಲ್ ನಲ್ಲಿ ನೀರು ತುಂಬುತ್ತಿದ್ದಾಗ 1. ರೆಹಮಾನ್
ತಂದೆ ರತನ್‌ಪಟೆಲ ಮಿರಾಗೌಡ 2. ಲಾಡ್ಲೆಪಟೇಲ ತಂದೆ ರಹೀಮಾನ್ ಪಟೆಲ್ ಮಿರಾಗೌಡ 3.
ಮಹೇಬೂಬ ಪಟೆಲ ದೆರಹೀಮಾನ್ ಪಟೇಲ್ ಮಿರಾಗೌಡ ಸಾ|| ಎಲ್ಲರು ಯಾಳವಾರ ಗ್ರಾಮ ಕೂಡಿಕೊಂಡು ಬಂದು ವಿನಾಃಕಾರಣ ನನ್ನೊಂದಿಗೆ ಜಗಳ ತೆಗೆದು
ನನ್ನ ಕೈ ಮತ್ತು ಸಿರೆ ಹಿಡಿದು ಜಗ್ಗಾಡಿ ಮಾನಭಂಗ ಮಾಡಿದ್ದು ಮತ್ತು ನನಗೆ ಕೈಯಿಂದ ಹೊಡೆಬಡೆ
ಮಾಡಿದ್ದು ಮತ್ತು ಪ್ಲಾಸ್ಟೀಕ್ ಬುಟ್ಟಿಯಿಂದ ಹೊಡೆದು, ಕಾಲಿನಿಂದ
ಒದ್ದಿರುತ್ತಾರೆ ಅಂತಾ ಶ್ರೀಮತಿ ಶರಣಮ್ಮ ಗಂಡ ಸಿದ್ದಣ್ಣ ಕಂದಗಲ್ ಸಾ : ಯಾಳವಾರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಿಗಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ವಾಡಿ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಥಾವರು ಚವ್ಹಾಣ ಸಾ: ಕಪಾನಿ
ಫನವೇಲ್ ಏರಿಯಾ ವಾಯಾ ಘರ ಮುಂಬೈ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ಹೇಳೀಕೆ ನೀಡಿದ್ದರ
ಸಾರಾಂಶವೇನೆಂದರೆ, ತನ್ನ ಮಗಳಾದ ಪೂಜಾ ವ:20 ವರ್ಷ ಇವಳಿಗೆ ಆರಾಮ ಇಲ್ದದ ಕಾರಣ ತಮ್ಮ ಅಕ್ಕಳಾದ ದೇವಿಬಾಯಿ ಇವಳು
ವಾಡಿಯಲ್ಲಿ ತನ್ನ ಮನೆಯಲ್ಲಿ ಕಳೆದ 6 ತಿಂಗಳ
ಹಿಂದೆ ಬಿಟ್ಟಿದ್ದು ಇರುತ್ತದೆ. ತನ್ನ ಮಗಳು ದಿನಾಂಕ:02/04/2016 ರಂದು 3.45 ಪಿಎಮ್ ಕ್ಕೆ
ನನ್ನ ಅಕ್ಕಳ ಮನೆಯಾದ ಹನುಮಾನ ನಗರ ತಾಂಡದಲ್ಲಿ ಬ್ರೇಡ ತರಲು ಹೊದವಳು ಮನೆಗೆ ಬಂದಿರುವದಿಲ್ಲಾ
ಅಂತಾ ನನ್ನ ಅಕ್ಕ ದೇವಿಬಾಯಿ ಇವಳು ತಿಳಿಸಿದ್ದರಿಂದ ನಾನು ಮತ್ತು ನನ್ನ ಅಕ್ಕ ನಮ್ಮ ಸಂಬಂದಿಕರ
ಮನೆಗಳಿಗೆ ತಿರುಗಾಡಿದರೂ ಸಹ ನನ್ನ ಮಗಳು ಸಿಕ್ಕಿರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿ
ಕಾಣೆಯಾದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶಿವಪ್ಪಾ ತಂದೆ ಚಂದಪ್ಪಾ ದೊಡ್ಡಮನಿ ಸಾಃ ಕೆ.ಇ.ಬಿ ಕ್ವಾಟರ್ಸ ಪಂಚಶೀಲ ನಗರ ಕಲಬುರಗಿ ಇವರು ಮಗ ಶರಣಬಸವ
ತಂದೆ ಶಿವಪ್ಪಾ ದೊಡ್ಡಮನಿ ವಯಃ 15 ವರ್ಷ ಈತನು ಸೆಂಟ ಮೇರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ 8 ನೇ
ತರಗತಿ ಓದುತ್ತಿದ್ದು ನಿನ್ನೆ ದಿನಾಂಕ 09/04/2016 ರಂದು 8 ನೇ ತರಗತಿಯ ಫಲಿತಾಂಶ ಇದ್ದರಿಂದ ನನ್ನ
ಮಗ ಮಧ್ಯಾಹ್ನ 12:30 ಪಿ.ಎಮ್ ಕ್ಕೆ ಶಾಲೆಗೆ ಫಲಿತಾಂಶ ನೋಡಿಕೊಂಡು ಬರಲು ಹೋಗುತ್ತೇನೆಂದು ಮನೆಯಲ್ಲಿ
ಹೇಳಿ ಹೋದವನು ರಾತ್ರಿಯಾದರು ಮರಳಿ ಮನೆಗೆ ಬಂದಿರುವುದಿಲ್ಲಾ. ನಾನು ಅಲ್ಲಲ್ಲಿ ಹುಡುಕಾಡಿದರು ಮತ್ತು
ಸಂಬಂಧಿಕರಲ್ಲಿ ವಿಚಾರಿಸಿದರು ಕೂಡಾ ನನ್ನ ಮಗ ಎಲ್ಲಿಯೂ ಸಿಕ್ಕಿರುವುದಿಲ್ಲಾ ನನ್ನ ಮಗ ಕಾಣೆಯಾಗಿದ್ದು
ಅವನನ್ನು ಹುಡುಕಿಕೊಡಲು ಮಾನ್ಯರವರಲ್ಲಿ ವಿನಂತಿ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ನಿಂದನೆ ಮಾಡಿದ
ಪ್ರಕರಣ :
ನರೋಣಾ ಠಾಣೆ : ಶ್ರೀ ಬಾಬು ತಂದೆ ಸಾಯಬಣ್ಣ ಹರಳಯ್ಯ, ಮು:ಗೋಳಾ ಬಿ, ತಾ:ಆಳಂದ ಇವರ ಗ್ರಾಮದ
ಸಿದ್ರಾಮ ತಂ ಮಹಾದೇವಪ್ಪಾ ಅಲ್ದೆನೂರ, ಇವರು ನಮ್ಮ ಜಾಗೆಯನ್ನು ಸುಮಾರು 2 ವರ್ಷಗಳಿಂದ 2000/- ರೂಪಾಯಿಗೆ
ಬಡ್ಡಿಯಂತೆ ತಿಪ್ಪೆ ಜಾಗೆಯನ್ನು ಬಡ್ಡಿಯಲ್ಲಿ ಜಾಗೆಯನ್ನು ಹಾಕಿಕೊಂಡಿದ್ದು ದಿನಾಂಕ:
07/04/20165 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಸಿದ್ರಾಮ ತಂದೆ ಮಹಾದೇವಪ್ಪಾ ಹಾಗೂ ಆತನ ಮಗನಾದ
ಜಗಪ್ಪ ತಂ ಸಿದ್ರಾಮ ಇಬ್ಬರು ಕೂಡಿ ತಿಪ್ಪೆ ಜಾಗೆಯಲ್ಲಿ ಕಟ್ಟಿಗೆ ಹಾಗೂ ಇನ್ನೀತರ ಸಾಮಾನು ಹಾಕಲು
ಬಂದಾಗ ನಾನು ಅವರಿಗೆ ಈ ಜಾಗವು ತಿಪ್ಪೆ ಜಾಗವಿದ್ದು ಇಲ್ಲಿ ಕಟ್ಟಿ ಹಾಗೂ ಇನ್ನೀತರ ಸಾಮಾನುಗಳನ್ನು
ಏಕೆ ಹಾಕುತ್ತಿದ್ದಿರಿ ಅಂತಾ ವಿಚಾರಿಸಿದಾಗ, ಸಿದ್ರಾಮ ತಂ ಮಹಾದೇವಪ್ಪಾ ಈತನು ಈ ಜಾಗವು ನಾವು ಬಡ್ಡಿಯಿಂದ
ಹಾಕಿಕೊಂಡಿದ್ದು ಇದನ್ನು ನೀನು ಯಾರು ಕೇಳುವನು ಎಂದು ಅಂತಾ ನಿಂದು ಸಮಗಾರ ಜಾತಿ ಬಹಳ ಸೊಕ್ಕು ಬಂದಿದೆ
ನಿಮ್ದು ಇತ್ತಿತ್ತಾಲಾಗಿ ಊರಾಗ ಬಹಳ ಒದರಾಡುತ್ತಿರಿ ಅನ್ನುತ್ತಾ, ಒಮ್ಮೇಲೆ ನನ್ನ ಮೈಮೇಲೆ ಬಂದವನು
ನನಗೆ ನೂಕಿಕೊಟ್ಟಿದ್ದು ನಾನು ಕೇಳಗೆ ಬಿದ್ದಿದ್ದು ಇದನ್ನು ನೋಡಿ ನನ್ನ ಹೆಂಡತಿಯಾದ ರತ್ನಬಾಯಿ ಇವಳು
ಬಂದು ನನಗೆ ಎಬ್ಬಿಸಿದ್ದು ನಂತರ ನಾನು ಸಿದ್ರಾಮ ಈತನಿಗೆ ಏಕೆ ಹೀಗೆ ಮಾಡುತ್ತಿದ್ದಿರಿ ಅಂತಾ ಕೇಳಿದಾಗ,
ಅಸ್ಟರಲ್ಲಿ ಆತನ ಮಕ್ಕಳಾದ ಜಗಪ್ಪ ತಂದೆ ಸಿದ್ರಾಮ ಹಾಗೂ ಮಹಾದೇವಪ್ಪ ತಂದೆ ಸಿದ್ರಾಮ ಇವರು ಬಂದು ಏಕೆ
ನಮ್ಮ ತಂದೆಗುಡ ಜಗಳ ಮಾಡುತ್ತಿದ್ದಿ ಅನ್ನುತ್ತಾ ನನಗೆ ಜಗಪ್ಪ ಈತನು ನನಗೆ ಎದೆ ಮೇಲೆ ಕೈ ಹಿಡಿದು
ಕೈಮುಷ್ಠಿಮಾಡಿ ಎದೆಯಮೇಲೆ ಮತ್ತು ಮುಖಕ್ಕೆ ಹೊಡೆದು ನೂಕಾಡಿ ಕಾಲಿನಿಂದ ಎದೆಯ ಮೇಲೆ ಒದ್ದು ಕೆಳಗೆ
ನೂಕಿದನು. ನಂತರ ಮಹಾದೇವಪ್ಪ ಈತನು ಅಲ್ಲೆ ಬಿದ್ದಿದ್ದ ಬಡಿಗೆಯಿಂದ ಹೊಡೆದಿದ್ದು ಇದಲ್ಲಾ ನೋಡಿ ನನ್ನ
ಹೆಂಡಿತಿಯಾದ ರತ್ನಬಾಯಿ ಇವಳು ಚಿರುತ್ತಿದ್ದಾಗ ಕಸ್ತೂರಿಬಾಯಿ ಗಂ ಮಹಾದೇವಪ್ಪಾ ಮತ್ತು ಸೊನಿ ಗಂ ಜಗಪ್ಪ
ಇವರು ಇಬ್ಬರು ಕೂಡಿ ನನ್ನ ಹೆಂಡಿತಿಗೆ ತಲೆಯ ಮೇಲಿನ ಕೂದಲು ಹಿಡಿದು ಜಗ್ಗಾಡಿ ಹೊಡೆಬಡಿ ಮಾಡಿದ್ದು
ಇರುತ್ತದೆ. ನಂತರ ಇವರೆಲ್ಲರು ಕೂಡಿ ನನಗೆ ಮತ್ತು ನನ್ನ ಹೆಂಡತಿಗೆ ನಿಮ್ಮ ಸಮಗಾರ ಜಾತಿ ಎಲ್ಲಿ ಇಡಬೇಕಾಗಿತ್ತಂದರ
ಚಪ್ಪಲಿ ತೆಳಗ ಇಟ್ಟರ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನಗೆ ಮತ್ತು ನನ್ನ ಹೆಂಡತಿಗೆ ಹೊಡೆಬಡಿ
ಮಾಡಿದ್ದು ಅಲ್ಲದೇ ನನ್ನ ಹೆಂಡತಿಗೆ ಜಗಪ್ಪ ಈತನು ಕಾಲಿನಿಂದ ಒದ್ದು ಜಗ್ಗಾಡಿದ್ದು ಇರುತ್ತದೆ. ಇದಲ್ಲಾ
ನೋಡಿ ಅಲ್ಲೆ ಇದ್ದ ನಮ್ಮ ಗ್ರಾಮದ ರಾಜಪ್ಪ ತಂ ಚಂದ್ರಾಮಪ್ಪ ಗಣಮುಖೆ ಹಾಗೂ ಕಲ್ಲಪ್ಪ ತಂ ಸಾತಲಿಂಗಪ್ಪ ಮತ್ತು ನನ್ನ ಮಗಳಾದ ಪುತಳಾಬಾಯಿ ಗಂ ಶ್ರೀಮಂತ
ಹರಳಯ್ಯ ಇವರೆಲ್ಲ ನೋಡಿ ಈ ಜಗಳವನ್ನು ಬಿಡಿಸಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.