POLICE BHAVAN KALABURAGI

POLICE BHAVAN KALABURAGI

07 June 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಜೇವರಗಿ ಠಾಣೆ : ದಿನಾಂಕ 06.06.2016 ರಂದು ಮುಂಜಾನೆ 11.15 ಗಂಟೆಗೆ ನಮ್ಮ ಠಾಣೆಯ ಸಿಪಿಸಿ 513 ರವರು ಕಲಬುರಗಿ ಗಂಗಾ ಆಸ್ಪ್ಪತ್ರೆಯಿಂದ ಮರಳಿ ಠಾಣೆಗೆ ಬಂದು, ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಠಾಣೆ ರವರು  ಸದರಿ ಗಂಗಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಶ್ರೀ ನಾಗೇಶ ತಂದೆ ಲಕ್ಷ್ಮಣ ಒಡೆಯರಾಜ ಇವರ ಮಗನ ಜಾವಳ ಕಾರ್ಯಕ್ರಮ ಸೊಂತ ಗ್ರಾಮದಲ್ಲಿ ಇರುವುದಿರಿಂದ ದಿನಾಂಕ 05.06.2016 ರಂದು ಬೆಂಗಳೂರಿನಿಂದ ನಾನು ಮತ್ತು ಗಣೇಶ ತಂದೆ ಕಚುರು ಪವಾರ, ಈಶ್ವರ ತಂದೆ ರಾಮಚಂದ್ರ ಒಡೆಯರ, ಅನೀಲ ತಂದೆ ನಾಗರಾಜ ಒಡೆಯರ ಎಲ್ಲರೂ ಕೂಡಿ ಕಾರ ನಂ ಕೆಎ-01-ಝಡ್-6255 ನೇದ್ದರಲ್ಲಿ ಕುಳಿತುಕೊಂಡು ಸೊಂತ ಗ್ರಾಮಕ್ಕೆ ಜಾವಳ ಕಾರ್ಯಕ್ರಮದ ನಿಮಿತ್ಯವಾಗಿ ಬರುತ್ತಿದ್ದೆವು. ಕಾರನ್ನು ಗಣೇಶ ಪವಾರ ನಡೆಸುತ್ತಿದ್ದನು. ಇಂದು ದಿ. 06.06.2016 ರಂದು ಬೆಳಗಿನ ಜಾವ 5.30 ಗಂಟೆಯ ಸುಮಾರಿಗೆ ಜೇವರಗಿ ಪಟ್ಟಣದ ಹೊರ ವಲಯದ ದಾರೂಲ್ ವೂಲುಮ ಮಹ್ಮದಿ ಉರ್ದು ಶಾಲೆಯ ಹತ್ತಿರ ಜೇವರಗಿ ಕಲಬುರಗಿ ಮುಖ್ಯ ರಸ್ತೆಯ ಮೇಲೆ ಬರುತ್ತಿದ್ದಾಗ ಅದೇ ವೇಳೆಗೆ ಎದುರಿನಿಂದ ಒಂದು ಕೆ.ಎಸ್.ಆರ್.ಟಿ. ಬಸ್ಸ ನಂ ಕೆ.ಎ36 ಎಫ್ 1035 ನೇದ್ದರ ಚಾಲಕನಾದ ಮಲ್ಲಪ್ಪ ಸುಂಕದ ಇತನು ಬಸ್ಸ ಅನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಕಾರಿಗೆ ಎದುರಾಗಿ ಡಿಕ್ಕಿಪಡಿಸಿ ಅಫಘಾತ ಮಾಡಿದನು. ಈ ಅಫಘಾತದಲ್ಲಿ ಕಾರಿನಲ್ಲಿದ್ದ ನನಗೆ ಮತ್ತು ಈಶ್ವರ ಒಡೆಯರ್, ಅನೀಲ ಒಡೆಯರ ಇವರಿಗೆ ಬಾರಿ ಮತ್ತು ಸಾದಾ ಗಾಯಗಳಾಗಿದ್ದು ಅಲ್ಲದೆ ಕಾರ ಚಾಲಕ ಗಣೇಶಯನ ತಲೆಗೆ, ಹಣೆಯ ಮೇಲೆ, ಬಲ ಕಣ್ಣಿನ ಹತ್ತಿರ, ಮೂಗಿನ ಹತ್ತಿರ ತುಟಿಯ ಹತ್ತಿರ, ಎಡಭುಜ ಕೇಳಗೆ ಬಾರಿ ಪೆಟ್ಟಾಗಿದ್ದು ಮುರಿದಿದ್ದುಅವನಿಗೆ ಉಪಚಾರ ಕುರಿತು ಕಲಬುರಗಿ ಗಂಗಾ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿದ್ದು. ಅವನಿಗೆ ಆಸ್ಪತ್ರೆಯಲ್ಲಿ ಉಪಚಾರ ಫಲಕಾರಿಯಾಗದೆ ಇಂದು ಮುಂಜಾನೆ 7.40 ಗಂಟೆಗೆ ಮೃತಪಟ್ಟಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ದಿನಾಂಕ-05/06/2016 ರಂದು ರಾತ್ರಿ 10 ಪಿ.ಎಮ್ ಕ್ಕೆ ನಾನು ಹಾಗೂ ನನ್ನ ಮಗಾ ಆಕಾಶ ಹಾಗೂ ಅಕ್ಕನ ಮಗ ರಾಕೇಶ ಮನೆಯಲ್ಲಿರುವಾಗ ನನ್ನ  ಮೋಬೈಲ್‌ಗೆ ನನ್ನ ಮಗಾ ಜಗದೀಶ ಕೆಲಸ ಮಾಡುವ ಟೆಲರಿಂಗ್ ಅಂಗಡಿಯ ಮಾಲಿಕನಾದ ಆನಂದ ಪೋನ್ ಮಾಡಿ ತಿಳಿಸಿದೆನೆಂದರೆ ನಾನು ಮತ್ತು ನಿಮ್ಮ ಮಗಾ ಜಗ್ಗದೀಶ ಹಾಗೂ ರಾಘವೇಂದ್ರ ಮೂವರು ಕೊಡಿಕೊಂಡು ನನ್ನ ಹತ್ತಿರ ಇರುವ ಮೋ.ಸೈಕಲ ನಂ ಕೆಎ-32 ಯು-8841 ನೇದ್ದರ ಮೇಲೆ ಕಲಬುರಗಿಗೆ ಹೋಗಿ ಮರಳಿ ಬರುತ್ತಿರುವಾಗ ರಾತ್ರಿ 9 ಪಿ.ಎಮ್ ಕ್ಕೆ ಗುಂಡಗುರ್ತಿ ಸರಕಾರಿ ಆಸ್ಪತ್ರೆಯ ಸಮೀಪ ನಿನ್ನ ಮಗ ಮೋಟಾರ ಸೈಕಲ ಹಿಂದುಗಡೆಯಿಂದ ಬಿದ್ದ ಪ್ರಯುಕ್ತ ತೆಲೆಯ ಹಿಮ್ಮದಿಯಲ್ಲಿ ಹಾಗೂ ಬಲಗಾಲಿನ ಮಂಡಿ ಹತ್ತಿರ ಭಾರಿ ಗುಪ್ತಗಾಯವಾಗಿ ಬೇಹೊಷಾ ಆಗಿರುದರಿಂದ ಆತನಿಗೆ ನಾವಿಬ್ಬರೂ ಅಂಬುಲೈಸ್ಸನಲ್ಲಿ ಹಾಕಿಕೊಂಡು ಕಲಬುರಗಿಯ ಯುನೈಟೇಡ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ ಅಂತಾ ತಿಳಿಸಿದ ಮೇರೆಗೆ ನಾನು ನನ್ನ ಮಗ ಹಾಗೂ ನನ್ನ ಅಕ್ಕನ ಮಗ ರಾಕೇಶ ಸೇರಿ ಕಲಬುರಗಿಯ ಯುನೈಟೇಡ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮಗಾ ಇತನ ತೆಲೆಯ ಹಿಮ್ಮದಿಯಲ್ಲಿ ಭಾರಿ ಗುಪ್ತಗಾಯ ಹಾಗೂ ಬಲಗಾಲಿನ ಮಂಡಿ ಹತ್ತಿರ ಗುಪ್ತಗಾಯ ಹಾಗೂ ತರಿಚಿದ ಗಾಯಗಳಾಗಿದ್ದು ಮಾತನಾಡುವ ಸ್ಥಿತಿಯಲ್ಲಿರಲ್ಲಿಲ್ಲಾ ಅಲ್ಲೆ ಹಾಜರಿದ್ದ ಆನಂದ ಇತನಿಗೆ ಘಟನೆ ಬಗ್ಗೆ ವಿಚಾರಿಸಲು ನಿನ್ನೆ ದಿನಾಂಕ-05/06/2016 ರಂದು 7 ಪಿ.ಎಮ್ ಕ್ಕೆ ನನ್ನ ಹತ್ತಿರುವ ಕೆಎ-32 ಯು-8841 ನೇದ್ದರ ನಾನು ಮತ್ತು ನಿಮ್ಮ ಮಗಾ ಜಗ್ಗದೀಶ ಹಾಗೂ ರಾಘವೇಂದ್ರ ಮೂವರು ಕೊಡಿಕೊಂಡು ಕಲಬುರಗಿಗೆ ಹೋಗಿ ಮರಳಿ ಬರುತ್ತಿರುವಾಗ ಮೋಟಾರ ಸೈಕಲ ರಾಘವೇಂದ್ರ ಈತನು ಚಲಾಯಿಸುತ್ತಿದ್ದು ನಾನು ಮದ್ಯದಲ್ಲಿ ಕುಳಿತ್ತಿದ್ದು ಹಿಂದುಗಡೆ ನಿಮ್ಮ ಮಗಾ ಜಗದೀಶ ಕುಳಿತ್ತಿದ್ದು ಗುಂಡಗುರ್ತಿ ಗ್ರಾಮದ ಸರಕಾರಿ ಆಸ್ಪತ್ರೆ ಸಮೀಪ ಹೋಗುತ್ತಿರುವಾಗ ರಾಘವೇದ್ರ ಇತನು ಅತಿ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸುತ್ತಿರುವಾಗ ಆತನಿಗೆ ನಿದಾನವಾಗಿ ಚಲಾಯಿಸು ಅಂತಾ ಹೇಳಲು ಆತನು ಹಾಗೆ ವೇಗವಾಗಿ ಚಲಾಯಿಸಿಕೊಂಡು ಹೋಗಿದರಿಂದ ನನ್ನ ಹಿಂದುಗಡೆ ಕುಳಿತ ಜಗ್ಗದೀಶ ಒಮ್ಮೆಲೆ ಮೋಟಾರ ಸೈಕಲ ಹಿಮ್ಮದ್ದಿಯಿಂದ ಆಯಾತಪ್ಪಿ ಬಿದ್ದ ಪ್ರಯುಕ್ತ ನಾವು ಮೋ.ಸೈಕಲ ನಿಲ್ಲಿಸಿ ಅವನ ಹತ್ತಿರ ಹೋಗಿ ನೋಡಲಾಗಿ ತೆಲೆಗೆ ಬಲಗಾಲಿನ ಮಂಡಿ ಹತ್ತಿರ ಭಾರಿ ಗುಪ್ತಗಾಯವಾಗಿ ಬೇಹೋಷಾಗಿ ಬಿದ್ದಿರುತ್ತಾನೆ ನಂತರ ಆತನಿಗೆ ಚಿಕಿತ್ಸೆ ಕುರಿತು ಅಂಬುಲೈನ್ಸನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ನಿಮಗೆ ವಿಷಯ ತಿಳಿಸಿರುದಾಗಿ ತಿಳಿಸಿದ್ದು. ಸದರಿ ಘಟನೆ ನಿನ್ನೆ ರಾತ್ರಿ9-30 ಗಂಟೆಗೆ ನಡೆಇರುತ್ತದೆ. ನನ್ನ ಮಗನಿಗೆ ಉಪಚಾರ ಫಲಕಾರಿಯಾಗದೆ ನಿನ್ನೆ ರಾತ್ರಿಯೇ ಅಂದರೆ ದಿನಾಂಕ-06/06/2016 ರಂದು 1-20 ಎ.ಎಮ್ ಕ್ಕೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.