POLICE BHAVAN KALABURAGI

POLICE BHAVAN KALABURAGI

03 November 2012

GULBARGA DISTRICT REPORTED CRIMESಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ದಶರಥ ತಂದೆ ಶಿವಪುತ್ರಪ್ಪಾ ಭಾವಿಕಟ್ಟಿ  ಸಾ: ಬುಸಣಗಿ ತಾ: ಗುಲಬರ್ಗಾ ರವರು ನಾನು ದಿನಾಂಕ 02-11-2012 ರಂದು ರಾತ್ರಿ 10-45 ಗಂಟೆ ಸುಮಾರಿಗೆ ಪಂಚಶೀಲ ನಗರದಲ್ಲಿರುವ ನನ್ನ ಅಜ್ಜಿಯ ಮನೆಗೆ ಹೋಗಬೇಕೆಂದು ಕೇಂದ್ರ ಬಸ್ ನಿಲ್ದಾಣದ ಹತ್ತಿರ ರೋಡಿನ ಎಡ ಭಾಜು ನಿಂತಿರುವಾಗ ಎಮ್,ಎಸ್,ಕೆ ಮೀಲ ರೋಡ ಕಡೆಯಿಂದ ಟವೇರ ಜೀಪ ನಂ ಕೆಎ-36 ಎಮ್-3616 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ  ಭಾರಿ ಗಾಯಗೊಳಿಸಿ ತನ್ನ ವಾಹನ ಸಮೇತ ಹೋರಟು  ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:109/12  ಕಲಂ279,338 ಐಪಿಸಿsss ಸಂ 187 ಐ,ಎಮ್,ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ ನಾರಾಯಣ ತಂದೆ ಇರಪ್ಪ ಚೌವ್ಹಾಣ ಸಾ||ಖಣದಾಳ ತಾ||ಜಿ||ಗುಲಬರ್ಗಾ ರವರು ನಮ್ಮ ಲಾರಿ ಚಾಲಕ ರವಿ ಇತನು ಎಂದಿನಂತೆ  ದಿನಾಂಕ: 29/10/2012 ರಂದು ಸಾಯಂಕಾಲ ಸರ್ವಜ್ಞ ಕಾಲೇಜ ಎದುರಿಗೆ ಖುಲ್ಲಾ ಸ್ಥಳದಲ್ಲಿ ಟಿಪ್ಪ ನಂ: ಕೆಎ-32, ಬಿ-3498 ನಿಲ್ಲಿಸಿ ಕೀಲಿ ಹಾಕಿಕೊಂಡು ಹೋಗಿರುತ್ತಾನೆ. ದಿನಾಂಕ:30/10/2012 ಪ್ರತಿ ನಿತ್ಯದಂತೆ ಮುಂಜಾನೆ 7:00 ಗಂಟೆಗೆ ಊರಿನಿಂದ ಗುಲಬರ್ಗಾಕ್ಕೆ ಬಂದು, ಟಿಪ್ಪರ ನಿಲ್ಲಿಸಿದ ಸ್ಥಳದಲ್ಲಿ ನೋಡಲಾಗಿ ಟಿಪ್ಪರ ಇರಲಿಲ್ಲ. ಈ ಬಗ್ಗೆ ನಮ್ಮ ಡ್ರೈವರ ರವಿ ಇತನಿಗೆ ಫೋನ ಮಾಡಿ ಟಿಪ್ಪರ ಬಗ್ಗೆ ವಿಚಾರಿಸಲಾಗಿ ಟಿಪ್ಪರ ಅಲ್ಲಿಯೆ ಬಿಟ್ಟು ಬಂದಿರುವದಾಗಿ ತಿಳಿಸಿದ. ನಾನು, ಚಾಲಕ ರವಿ ಇಬ್ಬರು ಕೂಡಿ ಗುತ್ತೇದಾರ ಕೆಲಸ ಮಾಡುವ ಎಲ್ಲಾ ಗುತ್ತಿಗೆದಾರರ ಹತ್ತಿರ ಮತ್ತು ನಾನು ಸಾಲ ಪಡೆದ ಟಾಟಾ ಫೈನಾನ್ಸ್ ದಲ್ಲಿ ಸಹ ವಿಚಾರಿಸಿದ್ದು ಟಿಪ್ಪರ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಯಾರೋ ಕಳ್ಳರು ಟಿಪ್ಪ ಕ್ಯಾಬ ನಂ: ಕೆಎ-32, ಬಿ-3498, ಚೆಸ್ಸಿ ನಂMAT361325A1P39888, ಇಂಜಿನ ನಂ:697TC66PZY134839, ಮಾಡೆಲ್ 2010, ಹೆಚ್.ಜಿ.ವಿ (ಟಿಪ್ಪರ), ಕಲರ ಕ್ಯಾಬಿನ್ ಬಿಳಿ ಬಣ್ಣದ್ದು ಬಾಡಿ-ಆರೆಂಜ ಕಲರ ಅ.ಕಿ. 12,00,000=00 ರೂ (ಹನ್ನೆರಡು ಲಕ್ಷ ರೂ)  ಯಾರೋ ಕಳ್ಳರು ದಿನಾಂಕ:29/10/2012 ರಂದು ರಾತ್ರಿಯಿಂದ ದಿನಾಂಕ:30/10/2012 ರ ಬೆಳಗಿನ ಜಾವದ ಅವಧಿಯಲ್ಲಿ ಕಳುವು ಮಾಡಿಕೊಂಡು  ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:97/2012 ಕಲಂ.379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ
ಕಳ್ಳತನ ಪ್ರಕರಣ:
ರೋಜಾ ಪೊಲೀಸ್ ಠಾಣೆ:ಶ್ರೀ ಮಹ್ಮದ ಮಖಸೂದ ಅಹ್ಮದ ತಂದೆ ಮಹ್ಮದ ಇಸ್ಮಾಯಿಲ್ ಬಾಜೆ ಸಾ ಬುಲಂದ ಪರ್ವಾಜ ಕಾಲೋನಿ ಗುಲಬರ್ಗಾರವರು ನಾನು ನಾನು ರೋಜಾ ಮಾರ್ಕೆಟದ ಸಹಾರಾ ಕಾಂಪ್ಲೆಕ್ಸದಲ್ಲಿ ಎಮ.ಎಮ್ ಹೆಸರಿನ ಕಿರಾಣಿ ಅಂಗಡಿ ಇಟ್ಟುಕೊಂಡು ತಮ್ಮ ತಂದೆಯವರೊಂದಿಗೆ ವ್ಯಾಪಾರ ಮಾಡಿಕೊಂಡಿರುತ್ತೆನೆ. ದಿನಾಂಕ: 01/11/2012 ರಂದು ರಾತ್ರಿ 9:30 ಗಂಟೆಗೆ ನನ್ನ ಕಿರಾಣಿ ಅಂಗಡಿ ವ್ಯಾಪಾರ ಮುಗಿಸಿಕೊಂಡು ಅಂಗಡಿಗೆ ಕೀಲಿಗಳನ್ನು ಹಾಕಿ ಮನೆಗೆ ಹೋಗಿರುತ್ತೇನೆ.  ದಿನಾಂಕ:02/11/2012 ರಂದು ಬೆಳಿಗ್ಗೆ ನಾನು ಮತ್ತು ನನ್ನ ತಮ್ಮ ಮಹ್ಮದ ಮೋಹಿದ ಅಹ್ಮದ ಇಬ್ಬರೂ ಕೂಡಿಕೊಂಡು ವ್ಯಾಪಾರ ಮಾಡುವ ಕುರಿತು ನನ್ನ ಕಿರಾಣಿ ಅಂಗಡಿಯ ಹತ್ತಿರ ಬಂದು ಶೆಟ್ಟರ ನೋಡಿದಾಗ ಶೆಟ್ಟರಕ್ಕೆ ಹಾಕಿರುವ ಎರಡು ಲಾಕ್ ಗಳು ಇರಲಿಲ್ಲಾ ಗಾಬರಿಯಾಗಿ ಶಟ್ಟರ ಎತ್ತಿ ಒಳಗಡೆ ನೋಡಿದಾಗ ನನ್ನ ಅಂಗಡಿಯಲ್ಲಿ ಗಲ್ಲಾ ಇರಲಿಲ್ಲಾ ಮತ್ತು ರೀಚಾರ್ಜ ಮಾಡುವ ಕಾರ್ಡುಗಳು ಇರುವ ಪ್ಲಾಸ್ಟಿಕ್ ಡಬ್ಬಿ ಕೆಳಗಡೆ ಬಿಸಾಡಿದ್ದು ಅಲ್ಲಿ ಇಲ್ಲಿ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿರುವದು ಕಂಡು ಬಂದಿದ್ದು ಗಲ್ಲಾದಲ್ಲಿ ಇಟ್ಟಿರುವ ನಗದು ಹಣ 35000/-ರೂಪಾಯಿ ಇದದ್ದು ಪಕ್ಕದ ಅಂಗಡಿಯ ಮುಂದೆ ಹೋಗಿ ಒಡೆದು ಹಣ ತೆಗೆದುಕೊಂಡು ಬಿಸಾಕಿ ಹೋಗಿರುತ್ತಾರೆ. ಗಲ್ಲಾದಲ್ಲಿ ಇಟ್ಟ ನಗದು ಹಣ 35000/-ರೂಪಾಯಿ ಎಲ್ಲಾ ನಮೂನೆಯ ಮೋಬಾಯಿಲ್ ರಿಚಾರ್ಜ ಕಾರ್ಡುಗಳು ಹೀಗೆ ಒಟ್ಟು 79,236/-ರೂಪಾಯಿ ಬೆಲೆಯುಳ್ಳ ಸಾಮಾನುಗಳನ್ನು ನಮ್ಮ ಅಂಗಡಿಯಿಂದ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ . ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 83/2012 ಕಲಂ. 457,380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಮಹ್ಮದ ಅಬ್ದುಲ ಅಜೀಜ ತಂದೆ ಮಹಿಬೂಬಸಾಬ ವ: 63 ಉ: ನಿವೃತ್ತ ಸರಕಾರಿ ನೌಕರ ಸಾ: ಎಕಬಾಲ ಕಾಲನಿ ಜಿಲಾನಾಬಾದ ಎಮಎಸ್‌‌ಕೆಮಿಲ್‌ ಗುಲಬರ್ಗಾರವರು ನಾನು ದಿನಾಂಕ:-31/10/2012 ರಂದು ಸಾಯಂಕಾಲ 6:30 ಗಂಟೆಯ ಸುಮಾರಿಗೆ ನನ್ನ ಮೋಟಾರ ಸೈಕಲ ನಂ ಕೆಎ 32  ಕ್ಯೂ 1268 ನೇದ್ದರ ಮೇಲೆ ಹೀರಾಪೂರ  ಕ್ರಾಸ ಪೆಟ್ರೋಲ ಪಂಪ ದಿಂದ ಪೆಟ್ರೋಲ ಹಾಕಿಕೊಂಡು ಹುಸೇನ ಗಾರ್ಡನ ಹತ್ತಿರ ಮೋಟಾರ ಸೈಕಲಗೆ ಇಂಡಿಕೇಟರ ಹಾಕಿ ತಿರುಗಿಸಿಕೊಳ್ಳುತ್ತಿರುವಾಗ ಬುಲೇರೋ ಜೀಪ ನಂಬರ ಕೆಎ 33 ಎಮ್‌ ‌1147 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡೆಯಿಸಿ ತನ್ನ ವಾಹನವನ್ನು ನಿಲ್ಲಿಸಿದೆ ಹಾಗೆ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 351/2012 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ವಾಹಿದಮಿಯ್ಯ ತಂದೆ ಮಹಿಬೂಬಮಿಯ್ಯ ನಿಗೆವಾನ ಲಾರಿ ನಂ ಕೆಎ-39- 3783 ಮಾಲಿಕ  ಸಾ|| ಬಂಗೂರ ತಾ||ಜಿ||ಬೀದರ ರವರು ನನ್ನ ಲಾರಿಯಲ್ಲಿ  ದಿನಾಂಕ:31/10/2012 ರಂದು ಹೈದ್ರಾಬಾದ ಬಾಲಾಜಿ ಟ್ರಾನ್ಸ್‌‌ಪೋರ್ಟ ಮೂಖಾಂತರ ಗುಲ್ಬರ್ಗಾಕ್ಕೆ ಏಶಿಯನ್‌ ಪೆಂಟ ಬಾಕ್ಸ್ ಗಳ ಲೋಡ ಮಾಡಿಕೊಂಡು ಅಲ್ಲಿಂದ ರಾತ್ರಿ 10:30 ಗಂಟೆಗೆ ಹೊರಟು ದಿನಾಂಕ:1/11/2012 ರಂದು ಬೆಳಗಿನ ಜಾವ ಬಂದು ಆಳಂದ ರಸ್ತೆ ವಿಶ್ವರಾದ್ಯ ಗುಡಿಯ  ಹತ್ತಿರ ಲಾರಿಯನ್ನು ನಿಲ್ಲಿಸಿ ಲಾರಿಯ ಒಳಗೆ ಚಾಲಕ & ಕ್ಲೀನರ ಇಬ್ಬರು ಕ್ಯಾಬಿನಲ್ಲಿ ಮಲಗಿದ್ದು ಮುಂಜಾನೆ 6 ಗಂಟೆಗೆ ಎದ್ದುನೋಡಲು ಲಾರಿ ಲೋಡ ಮೇಲೆ ಹಾಕಿರುವ ತಾಡಪತ್ರಿಯನ್ನು ಕಟ್ ಮಾಡಿ ಅದರ ಒಳಗಿಂದ 28-30 ಎಶಿಯನ್‌ ಪೆಂಟ ಬಾಕ್ಸ್‌‌‌‌ ಗಳು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು. ಒಂದು ಬಾಕ್ಸ್‌ ಒಳಗೆ 6 ಡಬ್ಬಿ ಇದ್ದು ಒಂದು ಬಾಕ್ಸ್‌‌ ಗೆ 1632/- ರೂ ಕಿಮತ್ತು ಹೀಗೆ ಒಟ್ಟು 28 ರಿಂದ 30 ಬಾಕ್ಸ್‌‌‌ ಗಳ ಅಂದಾಜು ಕಿಮ್ಮತ್ತು 48,960/- ರೂಗಳು ಕಿಮತ್ತಿನದ್ದನ್ನು ಯಾರು ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:352/2012 ಕಲಂ 379 ಐಪಿಸಿ ಪ್ರಕಾರ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.