POLICE BHAVAN KALABURAGI

POLICE BHAVAN KALABURAGI

03 February 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ರೋಜಾ ಪೊಲೀಸ್ ಠಾಣೆ:
ಶ್ರೀ ಮಹ್ಮದ ಹನೀಫ್ ಖಾನ್ ತಂದೆ ಮಹ್ಮದ ಗುಲಾಮ ರಸೂಲ್ ಖಾನ ಸಾ: ಜಲೀಲ ಕಂಪೌಂಡ ರೋಜಾ ಗುಲ್ಬರ್ಗಾರವರು ನಾನು ದಿನಾಂಕ:27-01-2012 ರಂದು ಮಧ್ಯಾಹ್ನ 3-00 ಗಂಟೆಯಿಂದ 4-00 ಗಂಟೆಯ ಅವಧಿಯಲ್ಲಿ ಒಬ್ಬ ಅಪರಿಚಿತ ಹೆಣ್ಣು ಮಗಳು ಮತ್ತು 14 ವರ್ಷ ಹುಡುಗಿ ಹೀಗೆ ಇಬ್ಬರೂ ಕೂಡಿಕೊಂಡು ಮನೆಯ ಹಿಂದುಗಡೆ ಇರುವ ಚಾನೆಲ ಗೇಟಿನಿಂದ ಮನೆಯಲ್ಲಿ ಬಂದು ಆಲಮಾರದಲ್ಲಿದ್ದ ಒಂದು 45 ಗ್ರಾಮದ ಬಂಗಾರದ ಮಂಗಳ ಸೂತ್ರ ಅ.ಕಿ 1,17,000./- ರೂ, ಒಂದು 15 ಗ್ರಾಮ ಬಂಗಾರದ ಮಂಗಳ ಸೂತ್ರ ಅ.ಕಿ 39,000./- ಹೀಗೆ ಒಟ್ಟು 1,56,000/- ರೂಪಾಯಿ ಬೆಲೆ ಬಾಳುವುದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ರೋಜಾ ಠಾಣಾ ಗುನ್ನೆ ನಂ:10/2012 ಕಲಂ: 380 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ :
ಶ್ರೀಮತಿ ಅಂಜನಾದೇವಿ ಗಂಡ ಮಹೇಶ ದತ್ತ ಸಾ|| ಗಂಗಾ ನಗರ ಬ್ರಹ್ಮಪೂರ ಗುಲಬರ್ಗಾ ರವರು ನಾನು ಹಾಗು ನನ್ನ ಸಂಬಂಧಿಕರಾದ ನಡುವೆ ಆಸ್ತಿ ವಿಷಯದಲ್ಲಿ ವೈಶಮ್ಯವಿದ್ದು, ಅದೇ ವೈಶಮ್ಯದಿಂದ ಭೀಮಶಾ ತಂದೆ ಶರಣಪ್ಪ ವಠಾರ, ಕಾಶಿ ವಿಶ್ವನಾಥ, ಜಗದೀಶ ಚಂದ್ರ, ವೈಶಾಲಿ ಗಂಡ ಕಾಶಿ ವಿಶ್ವನಾಥ ಇವರುಗಳೆಲ್ಲಾ ಒಟ್ಟಿಗೆ ಸೇರಿಕೊಂಡು ರಾತ್ರಿ 1 ಗಂಟೆಯ ಸುಮಾರಿಗೆ ನಮ್ಮ ಮನೆಗೆ ಬಂದು, ಚೀರಾಡುತ್ತಾ, ಕೂಗಾಡುತ್ತಾ ಮನೆಯ ಬಾಗಿಲು ಬಾರಿಸ ಹತ್ತಿದರು, ನಾನು ಬಾಗಿಲು ತೆರೆದಾಗ ಎಲ್ಲರೂ ಮನೆಯೊಳಗೆ ಬಂದು ಮಲಗಿದ ನನ್ನ ಗಂಡನನ್ನು ಬಡಿಗೆಯಿಂದ ಹೊಡೆಯ ಹತ್ತಿದರು, ಆಗ ನಾನು ಪೊಲೀಸ್ ಕಂಟ್ರೋಲ್ ರೂಮ್ ಕ್ಕೆ ಫೋನ್ ಮಾಡಿದ್ದು, ಆ ಫೋನನ್ನು ವೈಶಾಲಿ ಇವಳು ಕಸಿದುಕೊಂಡು ಅವಾಚ್ಯದಿಂದ ಬೈದು ಹೊಡೆದಳು. ಆಗ ಅಕ್ಕಪಕ್ಕದ ಜನ ಎದ್ದಾಗ ಎಲ್ಲರೂ ಓಡಿ ಹೋಗಿರುತ್ತಾರೆ. ಕಾರಣ ನನಗೆ ಹಾಗು ನನ್ನ ಗಂಡನಿಗೆ ಹೊಡೆಬಡೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:7/2012 ಕಲಂ 323, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ
:ಶ್ರೀಮತಿ ಡಾ|| ಜಗದೀಶಚಂದ್ರ ತಂದೆ ಭೀಮಶ್ಯಾ ವಠಾರ ಸಾ|| ಗಂಗಾ ನಗರ ಬ್ರಹ್ಮಪೂರ ಗುಲಬರ್ಗಾ ರವರು ನಾನು ಹಾಗು ಸಂಬಂಧಿಕರ ನಡುವೆ ಆಸ್ತಿ ವಿಷಯದಲ್ಲಿ ವೈಶಮ್ಯವಿದ್ದು, ಅದೇ ವೈಶಮ್ಯದಿಂದ ಮಹೇಶ ತಂದೆ ಭೀಮಶ್ಯಾ ವಠಾರ ಈತನು ತನ್ನ ಹೆಂಡತಿ ಅಂಜನಾದೇವಿ ಮತ್ತು ಇನ್ನೊಬ್ಬ ಹೆಣ್ಣುಮಗಳೊಂದಿಗೆ ಒಟ್ಟಿಗೆ ಸೇರಿಕೊಂಡು ಬಂದವರೇ, ರಾತ್ರಿ 2 ಗಂಟೆಯ ಸುಮಾರಿಗೆ ನಮ್ಮ ಮನೆಗೆ ಬಂದು, ಚೀರಾಡುತ್ತಾ, ಕೂಗಾಡುತ್ತಾ ಮನೆಯ ಬಾಗಿಲು ಬಾರಿಸ ಹತ್ತಿದರು, ಆಗ ನಾನು ಬಾಗಿಲು ತೆರೆದಾಗ ಮಹೇಶ ಈತನು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಕೈಯಿಂದ ಹೊಡೆ ಬಡೆ ಮಾಡಿ ಕಿಡಿಕಿಯ ಗ್ಲಾಸಗಳು ಒಡೆದು ಲುಕ್ಸಾನ್ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 08/12 ಕಲಂ 341, 323, 504,427,506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮಹಾಗಾಂವ ಪೊಲೀಸ್ ಠಾಣೆ:
ಶ್ರೀ ನಂದು @ ನಂದಕುಮಾರ ತಂ, ಶರಥ ಹರಸೂರಕರ್, ಸಾ||ಮಹಾಗಾಂವ ಕ್ರಾಸ ತಾ||ಜಿ||ಗುಲಬರ್ಗಾ ರವರು ನಾನು ದಿ:02/02/12 ರಂದು ರಾತ್ರಿ 11:45 ಪಿ.ಎಮ ಕ್ಕೆ ಮಹಾಗಾಂವ ಕ್ರಾಸದಿಂದ ಕಮಲಾಪೂರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಮೇಲೆ ಮಹಾಗಾಂವ ಕ್ರಾಸ ಹತ್ತಿರ ಜಾವೀದ ತಂದೆ ಅಬ್ದುಲ್ ರಹೇಮಾನ್ ಖುರೇಶಿ ಇವರ ಮಾಂಸ ಮಾರಾಟ ಮಾಡುವ ಅಂಗಡಿಯ ಮುಂದೆ ಯಾವನೋ ಒಬ್ಬ ಅಪರಿಚಿತ ವ್ಯಕ್ತಿಯು ಮಹಾಗಾಂವ ಕ್ರಾಸದಿಂದ ಕಮಲಾಪೂರ ಕಡೆಗೆ ರೋಡಿನ ಮೇಲೆ ನಡೆದುಕೊಂಡು ಹೋಗುವಾಗ ಆತನ ಹಿಂದಿನಿಂದ ಗುಲಬರ್ಗಾ ಕಡೆಯಿಂದ ಯಾವುದೋ ಒಬ್ಬ ಅಪರಿಚಿತ ವಾಹನ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಬಂದು ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದರಿಂದ ಆತನ ತಲೆಗೆ ಹಾಗೂ ಇತರೆ ಭಾಗದಲ್ಲಿ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಸದರಿ ವ್ಯಕ್ತಿಯು ಅಂದಾಜು 45-50 ವರ್ಷದ ವ್ಯಕ್ತಿ ಇದ್ದು ಅಪಘಾತ ಪಡಿಸಿದ ನಂತರ ವಾಹನ ಚಾಲಕನು ತನ್ನ ವಾಹನದೊಂದಿಗೆ ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 09/12 ಕಲಂ: 279, 304(ಎ) ಐ.ಪಿ.ಸಿ ಸಂ, 187 ಐ.ಎಮ್.ವಿ ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ.


ಅಪಘಾತ ಪ್ರಕರಣ:
ಆಳಂದ ಠಾಣೆ:
ಶ್ರೀ ಮಹೇಶ ತಂದೆ ಮಲ್ಹಾರಾವ ಕುಲಕರ್ಣಿ ಮು|| ಧಂಗಾಫುರ ತಾ; ಆಳಂದ ಹಾ.ವ ಗುಲ್ಬರ್ಗಾ ರವರು ನಮ್ಮ ಸೋದರ ಮಾವ ಲಕ್ಷ್ಮಣರಾವ ಕುಲಕರ್ಣಿ ಇವರು ಉಳ್ಳಾಗಡ್ಡಿ ಮಾರಾಟ ಮಾಡಲು ಹೈದ್ರಾಬಾದಿಗೆ ಹೋಗಿ ಉಳ್ಳಗಡ್ಡಿ ಮಾರಾಟ ಮಾಡಿಕೊಂಡು ಈಚರ ವಾಹನ ನಂಬರ ಕೆ.ಎ 32 ಎ 8091 ನೇದ್ದರಲ್ಲಿ ಇತರರೊಂದಿಗೆ ಕುಳಿತುಕೊಂಡು ಹೈದ್ರಾಬಾದದಿಂದ ಸ್ವಂತ ಗ್ರಾಮಕ್ಕೆ ಬರುತ್ತಿದಾಗ ಅವರು ಕುಳಿತ್ತಿದ್ದ ಈಚರ ವಾಹನದ ಚಾಲಕ ರಾಮ ತಂದೆ ಗಂಗಾರಾಮ ಸಿಂದೆ ಮು|| ಸಕ್ಕರಗಾ ಇತನು ತನ್ನ ವಾಹನವನ್ನು ಆಳಂದ ಪಟ್ಟಣದ ಆರ್.ಟಿ.ಓ ಚೇಕ್ಕ ಪೋಸ್ಟ ಹತ್ತಿರ ರೋಡಿನಲ್ಲಿ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಆಳಂದ ಹಿರೋಳ್ಳಿ ರೋಡಿನ ಶಖಾಪುರ ರೋಡಿನ ಹೊಡ್ಡಿನ ಹತ್ತಿರ ರೋಡಿನ ಎಡಗಡೆ ಕೆಟ್ಟು ನಿಂತ್ತಿದ ಟಿಪ್ಪರ ವಾಹನ ನಂ ಕೆ.ಎ 04 ಸಿ 6187 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿದ್ದರಿಂದ ನಮ್ಮ ತಂದೆಯವರು ಸ್ಥಳದಲಿಯೇ ಮೃತಪಟ್ಟಿರುತ್ತಾರೆ ಮತ್ತು ವಾಹನದಲ್ಲಿ ಇದ್ದ ಇತರರಿಗೂ ಸಹ ಗಾಯವಾಗಿರುತ್ತವೆ. ಹಾಗು ಚಾಲಕನಿಗು ಗಾಯವಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 24/2012 ಕಲಂ 279, 337, 338, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES


ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ :
ಶ್ರೀ ಶೇಖ ನಜಿಮುದ್ದಿನ ತಂದೆ ಶೇಖ ಅಬ್ದುಲ್ ಹಮೀದ ಸಾಃ ಅಬುಬಕರ ಕಾಲೋನಿ ರೆಹಮತ್ ನಗರ ಗುಲಬರ್ಗಾರವರು ನಾನು ದಿನಾಂಕ 29-01-2012 ರಂದು ರಾತ್ರಿ 8-45 ಪಿ.ಎಮ್ ಕ್ಕೆ ಸುಮಾರಿಗೆ ನನ್ನ ಅಳಿಯನಾದ ಮೌಸಿನ್ ಈತನ ಮೋಟಾರ ಸೈಕಲ್ ನಂ ಕೆಎ 25 ಕ್ಯೂ 8525 ನೇದ್ದರ ಮೇಲೆ ಹಿಂದುಗಡೆ ಕುಳಿತು ಜನತಾ ಬಜಾರ ಕ್ರಾಸ್ ದಿಂದ ಚೌಕ್ ಸರ್ಕಲ್ ಕಡೆಗೆ ಹೋಗುವಾಗ ಎದುರುಗಡೆಯಿಂದ ಒಂದು ಅಟೋರಿಕ್ಷಾ ಚಾಲಕನು ತನ್ನ ಅಟೋ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ತನ್ನ ಅಟೋದಲ್ಲಿಯೇ ಜಿಲ್ಲಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿ ಅಲ್ಲಿಂದ ಹೇಳದೆ ಕೇಳದೆ ಅಟೋ ಸಮೇತ ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 06/2012 ಕಲಂ 279, 338 ಐ.ಪಿ.ಸಿ. ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಠಾಣೆ:
ಶ್ರೀ ಅರ್ಜುನ ತಂದೆ ರಾಣಪ್ಪ ಹತಗುಂದಿ ಸಾ: ದತ್ತ ನಗರ ಗುಲಬರ್ಗಾ ರವರು ನನ್ನ ಮನೆ ದತ್ತ ನಗರದಲ್ಲಿದ್ದು ದಿನಾಂಕ 18/09/2011 ರಂದು ನಾನು ನನ್ನ ಹೆಂಡತಿ ಕೆರಳಾಕ್ಕೆ ಹೋದಾಗ ಸುಶಿಲಾಭಾಯಿ ಯಂಕಂಚಿ ಎಂಬುವವಳು ತನ್ನ ಸಂಗಡಿಗರೊಂದಿಗೆ ಬಂದು ಮುಖ್ಯ ಗೇಟಿನ ಹತ್ತಿರದ ಹೆಸರಿನ ಪ್ಲೇಟನ ಕಲ್ಲು ಒಡೆದು ಹಾನಿ ಮಾಡಿದಲ್ಲದೇ ಮನೆಯ ನೆಲ ಮಾಳಿಗೆ ಮೂದಲನೇಯ ಮಾಡಿಯಲ್ಲಿ ಬಾಗಿಲಗಳ ಕೀಲಿ ಮುರಿದು ಮನೆಯಲ್ಲಿಟ್ಟ ಗೌತಮ ಸಂಸ್ಥೆಯ ಕಾಗದ ಪತ್ರ, ಸ್ಟ್ಯಾಂಪ್ ಮತ್ತು ಲಾಕರದಲ್ಲಿಟ್ಟ 1,57,000/- ರೂ ನಗದು ಹಣ, 25 ತೊಲೆ ಬಂಗಾರದ ಆಭರಣ ಇತ್ಯಾಧಿ ಒಟ್ಟು 7,57,000/- ರೂ ಮಾಲು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರುದಾರರು ಉಚ್ಚ ನ್ಯಾಯಾಲಯದ ಆದೇಶದ ಮೋರೆ ಹೋಗಿ ಮಾನ್ಯ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ದಿನಾಂಕ 02/02/2012 ರಂದು ಕಳುವಾದ ಬಗ್ಗೆ ದೂರಿನ ಮೇರೆಗೆ ಠಾಣೆಯ ಗುನ್ನೆ ನಂ. 11/2012 ಕಲಂ. 454, 380, 427, ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.