POLICE BHAVAN KALABURAGI

POLICE BHAVAN KALABURAGI

10 June 2013

GULBARGA DISTRICT REPORTED CRIME

ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಬಗ್ಗೆ:

ಸ್ಟೇಶನ ಬಜಾರ ಪೊಲೀಸ್ ಠಾಣೆ:ಶ್ರೀ ಬಲಬೀರ ಸಿಂಗ ತಂದೆ ಹರಿಸಿಂಗ ವಯ-25ವರ್ಷ ಉ-ಆರ್.ಪಿ.ಎಫ್. ಕಾನ್ಸಟೇಬಲ್ ನಂ:1000762 ಗುಲಬರ್ಗಾ ರವರು ನಾನು ದಿನಾಂಕ:08-06-2013  ರಂದು ಮಧ್ಯರಾತ್ರಿ 12-00 ಗಂಟೆಯಿಂದ ಮುಂಜಾನೆ 8-00 ಗಂಟೆಯವರೆಗೆ ಗುಲಬರ್ಗಾ ಆರ್.ಪಿ.ಎಫ್. ಠಾಣಾ ಪಹರೆ ಕರ್ತವ್ಯದಲ್ಲಿ ಇದ್ದಾಗ ಮಧ್ಯರಾತ್ರಿ 00-30 ಗಂಟೆಗೆ ಸೈಯದ ಮತ್ತು ಆತನ ಸಂಗಡ ಇನ್ನೊಬ್ಬ ವ್ಯಕ್ತಿ ಬಂದು ನಾನು ಆತಂಕವಾದಿ ಇದ್ದೇನೆ. ನಿನ್ನನ್ನು ಟಪಕಾಯಿಸಿ ಜೀವ ಸಹಿತ ಹೊಡೆದು ಹಾಕುತ್ತೇನೆ ಅಂತಾ ಜೀವದ ಬೆದರಿಕೆ ಹಾಕುತ್ತಾ ನನ್ನ ಸಮವಸ್ತ್ರವನ್ನು ಹಿಡಿದು ಜಗ್ಗಾಡುವಾಗ ನಮ್ಮ ಆರ್.ಪಿ.ಎಫ್. ಠಾಣಾ ಸಬ್ ಇನ್ಸಪೆಕ್ಟರಾದ ಶ್ರೀ ಎಮ್. ಶ್ರೀನಿವಾಸ ಹಾಗೂ ಗುಲಬರ್ಗಾ ರೈಲ್ವೇ ಫ್ಲಾಟ್ ಫಾರ್ಮ್‌ ಕರ್ತವ್ಯದಲ್ಲಿದ್ದ ವಿಕಾಸ ವರ್ಮಾ ಕಾನ್ಸಟೇಬಲ್ ಇವರಿಬ್ಬರೂ ಬಂದು ವಿಚಾರಿಸುವಷ್ಟರಲ್ಲಿ ಅವರಿಬ್ಬರೂ ಅಲ್ಲಿಂದ ತಪ್ಪಿಸಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಶಂದ ಮೇಲಿಂದ ಠಾಣೆ ಗುನ್ನೆ ನಂ: 151/2013 ಕಲಂ, 353, 506, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.