POLICE BHAVAN KALABURAGI

POLICE BHAVAN KALABURAGI

11 December 2013

Gulbarga District Reported Crimes

ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ : ದಿನಾಂಕ 10-12-2013 ರಂದು  6.45 ಪಿ,ಎಮ್,ಕ್ಕೆ ಮೃತ ಶಿವಲಾಲ ಹೋಸಮನಿ ಇತನು ಪ್ರತಿದಿವಸದಂತೆ ಇಂದು ಕೂಡಾ ಗುರುಶಾಸ್ತ್ರಿ ಇವರ ದನಗಳನ್ನು ಮೆಯಿಸಿಕೊಂಡು ವಾಪಸ ಮಹಾಗಾಂವ ಗ್ರಾಮದ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಪೀರಪ್ಪ ಪಲ್ಲಾ ರವರ ಹೋಲದ ಹತ್ತಿರ ರೋಡಿನ ಎಡಗಡೆ ಹೋಗುತ್ತಿದ್ದಾಗ ಟಂಟಂ ನಂ ಕೆ,ಎ, 32 ಬಿ 8482 ನೇದ್ದರ ಚಾಲಕನು ಆತನ ಹಿಂದಿನಿಂದ ಅಂದರೆ ಮಹಾಗಾಂವ ಕ್ರಾಸ ಕಡೆಯಿಂದ ತನ್ನ ವಶದಲ್ಲಿದ್ದ ಸದರ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಶಿವಲಾಲನಿಗೆ ಡಿಕ್ಕಿ ಹೋಡೆದು ಅಪಘಾತ ಪಡಿಸಿದ್ದರಿಂದ ಆತನಿಗೆ ಎದೆಗೆ ಹೊಟ್ಟೆಗೆ ಮತ್ತು ಸೊಂಟಕ್ಕೆ ತರಚೀದ ರಕ್ತಗಾಯ ಮತ್ತು ಭಾರಿ ಒಳಪೆಟ್ಟಾಗಿ ಎಡಗೈ ಮುರದಿದ್ದು ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ ಅಪಘಾತದ ನಂತರ ಟಂಟಂ ಚಾಲಕ ವಾಹನ ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ  ಶ್ರೀ ಉದಯಕುಮಾರ ತಂ ಪ್ರಭು ಹೋಸಮನಿ ಸಾ|| ಮಹಾಗಾಂವ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಅಬ್ದುಲ ಗಫಾರ ತಂದೆ ಅಬ್ದು ರಶೀದ,  ಸಾಃ ಆಲ್ ಖುರೇಷಿ ಪಂಕ್ಷನ್ ಹಾಲ್ ಹತ್ತಿರ ನಯಾ ಮೊಹಲ್ಲಾ ಮಿಜಗುರಿ ಗುಲಬರ್ಗಾ  ರವರು ದಿನಾಂಕ 10-12-2013 ರಂದು 1230 ಪಿ.ಎಮ್ ಕ್ಕೆ ಸಂತ್ರಾಸವಾಡಿ ಬಡಾ ಮಜೀದ ಎದುರುಗಡೆ ಸರಾಫ ಬಜಾರ ಕ್ರಾಸ್ ಹತ್ತಿರ ಮೇನ್ ರೋಡಿನ ಮೇಲೆ ಫಿರ್ಯಾದಿ ನಡೆದುಕೊಂಡು ಸಾತ ಗುಮ್ಮಜ ಕಡೆ ಹೋಗುತ್ತಿದ್ದಾಗ ಆರೋಪಿತನು ತನ್ನ ಗೂಡ್ಸ ಟಂ.ಟಂ ನಂ. ಕೆ.ಎ 32 ಬಿ 7356 ನೇದ್ದನ್ನು ಎಸ್.ಟಿ.ಬಿ.ಟಿ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತಿ ಮಾಡಿ ಭಾರಿ ಗಾಯಗೊಳಿಸಿ ತನ್ನ ವಾಹನ ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.