POLICE BHAVAN KALABURAGI

POLICE BHAVAN KALABURAGI

14 July 2018

KALABURAGI DISTRICT REPORTeD CRIMES

ಅಪಘಾತ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಜಾನಿ ತಂದೆ ಮೊದ್ದಿನಸಾಬ ಬಾರುದವಾಲೆ ಸಾ:ಸೋನಿಯಾ ಗಾಂಧಿ ಕಾಲೋನಿ ಮಾಲಗತ್ತಿ ಕ್ರಾಸ ಕಲಬುರಗಿ ರವರ ತಮ್ಮನಾದ ಮುನಿರೋದ್ದಿನ ತಂದೆ ಮೊದ್ದಿನಸಾಬ ಟಾಂಗಾವಾಲೆ ಇತನು ಕಲಬುರಗಿ ನಗರದ ಎಸ್‌‌.ಟಿ.ಬಿ.ಟಿ ಕ್ರಾಸ ಹತ್ತಿರ ವಾಸವಿರುವ ರವಿಚಂದ್ರ ತಂದೆ ಲಕ್ಷ್ಮಣರಾವ ಕಟಕೆ ಇವರ ಬಗ್ಗಿ (ರಥ) ದ ಮೇಲೆ ಕ್ಲೀನರ ಅಂತಾ ಕೆಲಸ ಮಾಡಿಕೊಂಡು ಬಂದಿರುತ್ತಾನೆ.  ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಎಂ.ಎಸ್‌.ಕೆ.ಮೀಲ್‌ ಮಹ್ಮದಿ ಮಜೀದ ದಲ್ಲಿರುವ ಹಜರತ್‌ ಶಹಾ ಜಿಲಾನಿ ದರ್ಗಾ ಕಾರ್ಯಕ್ರಮದ ಉರಸ ದಿನಾಂಕ:11/07/2018 ರಂದು ಸಂದಲ ಕಾರ್ಯಕ್ರಮ ಹಾಗೂ ದಿನಾಂಕ:12/07/2018 ರಂದು ಚಿರಾಗ (ದೀಪ) ಕಾರ್ಯಕ್ರಮ ಇದ್ದು ಉರಸ ಕಾರ್ಯಕ್ರಮ ಅಂಗವಾಗಿ ಮಹ್ಮದಿ ಮಜೀದನಿಂದ ಶಹಾಜಿಲಾನಿ ದರ್ಗಾಕ್ಕೆ ಗಿಲಾಫ ತೆಗೆದುಕೊಂಡು ಹೋಗುವ ಕಾರ್ಯಕ್ರಮ ಇದ್ದು ಗಿಲಾಫ ತೆಗೆದುಕೊಂಡು ಹೋಗಲು ರವಿಚಂದ್ರ ಕಟಕಿ ಇತನ ರಥ ತರೆಸಿಕೊಂಡಿದ್ದು ಅದರ ಮೇಲೆ ನನ್ನ ತಮ್ಮ ಮುನಿರೋದ್ದಿನ ಕ್ಲೀನರ್‌ ಕೆಲಸ ಮಾಡಿಕೊಂಡು ರಥದೊಂದಿಗೆ ಬಂದಿದ್ದು ಇರುತ್ತದೆ. ದಿನಾಂಕ:12/07/2018 ರಂದು ರಾತ್ರಿ 10.00 ಗಂಟೆಗೆ ಗಿಲಾಫನ್ನು ರವಿಚಂದ್ರ ತಂದ ರಥದಲ್ಲಿ ಇಟ್ಟು ಮೆರವಣಿಗೆ ಪ್ರಾರಂಭಿಸಿದ್ದು ನನ್ನ ತಮ್ಮ ಹಾಗೂ ಇತರರು ರಥದ ಮೇಲೆ ಗಿಲಾಫ ಹಿಡಿದುಕೊಂಡು ನಿಂತಿದ್ದು ಮೇರವಣಿಗೆ ಮಹ್ಮದಿ ಮಜೀದ 2ನೇ ಕ್ರಾಸ ಹತ್ತಿರ ಹೋರಟಾಗ ರಾತ್ರಿ 10.30 ಗಂಟೆ ಸುಮಾರಿಗೆ ಫರಿದಮೀಯ್ಯಾ ಇವರ ಮನೆಯ ಮುಂದೆ ಮಗ್ಗಲಿಗೆ ಬರುತ್ತಿದ್ದಂತೆ ರಸ್ತೆ ಪಕ್ಕದಲ್ಲಿ ವಿದ್ಯುತ ಕಂಬದ ಮೇಲೆ ಟಿ.ಸಿ (ವಿದ್ಯುತ ವಿತರಕ) ಅಳವಡಿಸಿದ್ದು ಈ ಟಿ.ಸಿ ರಸ್ತೆಯ ಅಂದರೆ ರಸ್ತೆಯ ಉತ್ತರ ಅಂಚಿನಿಂದ 8 ರಿಂದ 10 ಅಡಿ ರೋಡಿಗೆ ಇರುತ್ತದೆ. ಗಿಲಾಫ ಮೆರವಣಿಗೆ ಬಗ್ಗಿ ಆ ಟಿ.ಸಿ ಹತ್ತಿರ ಬಂದಾಗ ರಭಸದಿಂದ ಬೀಸಿದ ಗಾಳಿಗೆ ಗಿಲಾಫನ ಒಂದು ಅಂಚು (ಭಾಗ) ಟಿ.ಸಿ ಡಿವೆಲಗೆ ತಗುಲಿದ್ದು ಅದೇ ವೇಳೆಗೆ ಮಳೆ ಸಹಬರುತ್ತಿದ್ದು ಗಿಲಾಫ ಮತ್ತು ಬಗ್ಗಿಯಲ್ಲಿ ಕರೆಂಟ ಪ್ರಸಾರಗೊಂಡು ನನ್ನ ತಮ್ಮನಾದ ಮುನಿರೋದ್ದಿನ ಇತನಿಗೆ ಕರೆಂಟಶಾಕ ಹತ್ತಿ ಗಂಭೀರ ಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲಾನಾಬಾದ ನಿವಾಸಿಗಳಾದ 1) ಜಿಲಾನ 2)ಮೈನೊದ್ದಿನ 3)ಅಮೀರ ಅಲಿ ಹಾಗೂ ಇತರರಿಗೆ ಕರೆಂಟಶಾಕ ಹತ್ತಿ ಗಾಯಗಳಾಗಿದ್ದು ಇರುತ್ತದೆ. ಸದರಿ ಘಟನೆಯನ್ನು ನೋಡಿ ನನ್ನ ತಮ್ಮನ ಮಗ ಮಹ್ಮದ, ಹಾಷಂ ಮತ್ತು ಅವನ ಅಳಿಯ ಶೇಖ ವಸೀಂ ಕೂಡಿಕೊಂಡು ಆಟೋದಲ್ಲಿ ಹಾಕಿಕೊಂಡು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದು ವೈದ್ಯಾಧಿಕಾರಿಗಳು ನನ್ನ ತಮ್ಮ ಮೃತ ಪಟ್ಟಿದ್ದು ದೃಢಪಡಿಸಿದ್ದು ಇರುತ್ತದೆ. ಮಹ್ಮದಿ ಕ್ರಾಸನಲ್ಲಿರುವ ಫರಿದಮೀಯ್ಯಾ ಇವರ ಮನೆಯ ಮೂಲಿಗೆ ರಸ್ತೆಯ ತಿರುವಿನಲ್ಲಿ ಜೆಸ್ಕಾಂ ಇಲಾಖೆ ಅಧಿಕಾರಿಗಳು ಅತಾಂತ್ರಿಕವಾಗಿ ವಿದ್ಯುತ ಕಂಬ ಹಾಕಿ ಅದಕ್ಕೆ ಟಿ.ಸಿ ಅಳವಡಿಸಿದ್ದು ಟಿ.ಸಿ ಅಳವಡಿಸಿದ್ದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು ಮತ್ತು ಅಪಾಯಕಾರಿಯಾದ ರೀತಿಯಲ್ಲಿ ಟಿ.ಸಿ ಅಳವಡಿಸಿದ್ದರಿಂದ ಅಪಘಾತವಾಗುವ ಸಾಧ್ಯತೆ ಇದ್ದು ಸದರಿ ಟಿ.ಸಿ ತೆರವು ಮಾಡಲು ಸ್ಥಳಿಯರು ಹಲವಾರು ಭಾರಿ ಜೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿದರು ಕೂಡಾ ಜೆಸ್ಕಾಂ ಅಧಿಕಾರಿಗಳು ನಿಷ್ಕಾಳಜಿ ತೊರಿಸಿದ್ದು ಇರುತ್ತದೆ. ನಿನ್ನೆ ದಿನಾಂಕ:12/07/2018 ರಂದು ಗಿಲಾಫ ಮೇರವಣಿಗೆ ಕಾಲಕ್ಕೆ ಗಿಲಾಫನ ಒಂದು ಅಂಚು ಟಿ.ಸಿ ಡ್ಯೂವೆಲಕ್ಕೆ ತಗುಲಿ ನನ್ನ ತಮ್ಮ ವಿದ್ಯುತ ಪ್ರಸಾರವಾಗಿ ಮೃತ ಪಟ್ಟಿದ್ದು ಇರುತ್ತದೆ. ಜೆಸ್ಕಾಂ ಇಲಾಖೆ ಅಧಿಕಾರಿಗಳಾದ ಕಾರ್ಯನಿರ್ವಾಹಕ ಅಭಿಯಂತರರು ಮಠಪತಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ವೀರಭದ್ರಪ್ಪ ಮತ್ತು ಶಾಖಾಧಿಕಾರಿ ರಾಘವೇಂದ್ರ ಇವರುಗಳ ಬೇಜವಾಬ್ದಾರಿತನದಿಂದ ಮತ್ತು ನಿಷ್ಕಾಳಜಿತನದಿಂದ ಟಿ.ಸಿ ತೆಗೆಯದೆ ಇರುವದರಿಂದ ಸದರಿ ಘಟನೆ ಜರುಗಿದ್ದು ಸದರಿ ಘಟನೆಗೆ ಕಾರಣಿ ಕರ್ತರಾದ ಜೇಸ್ಕಾಂ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ 13.07.2018 ರಂದು ಬೇಳಿಗ್ಗೆ ನನ್ನ ಮಕ್ಕಳಾದ ದೇವಪ್ಪ ಮತ್ತು ರಾಜಕುಮಾರ ಇಬ್ಬರೂ ನಮ್ಮ ಕುರಿಗಳು ಮೇಯಿಸಲು ಹೊಲಕ್ಕೆ ಹೊಡೆದುಕೊಂಡು ಹೋಗಿದ್ದರು. ಮದ್ಯಾಹ್ನ 2.35 ಗಂಟೆಯ ಸುಮಾರಿಗೆ  ನಮ್ಮೂರ ಬಸವರಾಜ ಸಗರ ಇವನು ನಮಗೆ ಪೊನ ಮಾಡಿ ಮೈಹಿಬೂಬ ಪಟೇಲ ಇವರ ಹೊಲದ ತಂತಿ ಬೇಲಿಗೆ ಕರೇಂಟ್ ಹತ್ತಿರ ನಿಮ್ಮ ಮಕ್ಕಳಾದ ದೇವಪ್ಪ ಮತ್ತು ರಾಜಕುಮಾರ ಇವರಿಗಲ್ಲದೆ ಮೂರು ಕುರಿಗಳಿಗೆ  ಕರೇಂಟ್ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಎಂದು ಹೇಳಿದನು. ಆಗ ನಾನು ಮತ್ತು ನನ್ನ ಹೆಂಡತಿ ನಾಗಮ್ಮ ಇತರರು ಕೂಡಿ ಮಹಿಬೂಬ ಇವರ ಹೊಲಕ್ಕೆ  ಹೊಗಿ  ನೋಡಿರುತ್ತೇವೆ. ನನ್ನ ಮಕ್ಕಳಾದ ದೇವಪ್ಪ ಮತ್ತು  ರಾಜಕುಮಾರ ಇವರು ತಂತಿ ಬೇಲಿ ಮೇಲೆ ಬಿದ್ದು  ಮೃತಪಟ್ಟಿದ್ದರು. ದೇವಪ್ಪನ ಕುತ್ತಿಗೆಗೆ, ರಾಜಕುಮಾರನ ಹೊಟ್ಟೆಗೆ ಕರೇಂಟ್ ಹತ್ತಿ ಗಾಯಗಳಾಗಿದ್ದವು. ನಮ್ಮ ಮೂರು ಕುರಿಗಳು ( ಹೊತುಗಳು) ಬೇಲಿಯಲ್ಲಿ ಬಿದ್ದು ಕರೇಂಟ್ ಹತ್ತಿ ಸತ್ತಿದ್ದವು. ಮೂರು ಕುರಿಗಳ ಬೆಲೆ 30,000/- ಆಗುತ್ತದೆ. ಬಸವರಾಜನಿಗೆ  ಕೇಳಲು ಮದ್ಯಾಹ್ನ 2.30 ಗಂಟೆಯ ಸುಮಾರಿಗೆ ನೀಮ್ಮ ಹುಡುಗರು ಕುರಿ ಮೇಯಿಸುವಾಗ ಮೂರು ಕುರಿಗಳು ತಂತಿ ಬೇಲಿಯಲ್ಲಿ ಸಿಕ್ಕು ಒದ್ದಾಡುತ್ತಿದ್ದಾಗ ಹುಡುಗರು ಅವುಗಳನ್ನು ತೆಗೆಯಲು ತಂತಿ ಬೇಲಿ ಹತ್ತಿರ ಹೋಗಿದ್ದರಿಂಧ ಅವರಿಗೂ ಕೂಡಾ  ತಂತಿ ಬೇಲಿನ ಕರೇಂಟ್ ಹೊಡೆದು ಮೃತಪಟ್ಟಿರುತ್ತಾರೆಂದು ಹೇಳಿರುತ್ತಾರೆ. ನಮ್ಮೂರ ಶೇಷಪ್ಪ ಬಡಿಗೇರ ಇತನು ತನ್ನ ಹೊಲದಲ್ಲಿನ ಬೊರವೇಲ್ಲಿಗೆ ನಮ್ಮೂರ ಮೈಹಿಬೂಬ ಪಟೇಲ ಹಂಗರಗಿ ಇವರ ಹೊಲದಲ್ಲಿನ ಕಂಬದಿಂದ ಅನಧೀಕೃತವಾಗಿ ಸರ್ವಿಸ್ ವಾಯರ್ ದಿಂದ ಕರೇಂಟ್ ತೆಗೆದುಕೊಂಡಿದ್ದು ಆ ವಾಯರ್ ಕಟ್ಟಾಗಿ ಮೈಹಿಬೂಬ ಪಟೇಲ ಇವರ  ಹೊಲದ ತಂತಿ ಬೇಲಿನ ಮೇಲೆ ಬಿದ್ದಿರುವುದರಿಂದ ತಂತಿಯ ಬೇಲಿಗೆ ಎಲ್ಲಾ ವಿದ್ಯೂತ ಹರಿದು ಅದನ್ನು ನೋಡದೆ ಶೇಷಪ್ಪ ನಿರ್ಲಕ್ಷ ಮಾಡಿದ್ದು ಅಲ್ಲದೆ ಈ ಏರಿಯಾಕ್ಕೆ ಸಂಭಂಧಪಟ್ಟ ಜೇಸ್ಕಂ ಆದಿಕಾರಿಗಳು ಶೇಷಪ್ಪನು ಅನಧೀಕೃತವಾಗಿ ತನ್ನ ಹೊಲಕ್ಕೆ ಕರೇಂಟ್ ತೆಗೆದುಕೊಂಡಿರುವುದನ್ನು  ನೋಡಿ ವಿದ್ಯೂತ ಸಂಪರ್ಕ ಕಡಿತಗೊಳಿಸದೆ ನಿರ್ಲಕ್ಷತನದ ತೊರಿಸಿದರಿಂಧ  ಘಟನೆ ಸಂಭವಿಸಿರುತ್ತದೆ. ಕಾರಣ ನನ್ನ ಮಕ್ಕಳ ಹಾಗೂ ನಮ್ಮ ಮೂರು ಕುರಿಗಳ ಸಾವಿಗೆ ಕಾರಣರಾದ ನಮ್ಮೂರ ಶೇಷಪ್ಪ  ಬಡಿಗೇರ & ಜೇಸ್ಕಂ  ಇಲಾಖೆಯ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಕೊಳಬೇಕು ಅಂತಾ ಶ್ರೀ ಸೊಮಲಿಂಗಪ್ಪ ತಂದೆ ಈರಪ್ಪ ಹಂಗರಗಿ  ಸಾಃ ಇಜೇರಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮನುಷ್ಯ ಕಾಣೆಯಾದ ಪ್ರಕರಣ :
ಪರತಾಬಾದ ಠಾಣೆ : ಶ್ರೀಮತಿ ಮಾಯಶ್ರೀ ಗಂಡ ರಮೇಶ ಗುಡೂರ ಸಾಃ ಫರಹತಾಬಾದ ಗ್ರಾಮ ರವರ  ಗಂಡನಾದ ರಮೇಶ ತಂದೆ ರೇವಣಸಿದ್ದ ಗುಡೂರ ಈತನು ಈಗ ಸುಮಾರು ಒಂದು ವರ್ಷದ ಹಿಂದೆ ಮನೆಯಲ್ಲಿದ್ದ ಹಣ ತೆಗೆದುಕೊಂಡು ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೊಗಿರುತ್ತಾನೆ ಎಲ್ಲಾ ಕಡೆ  ಹುಡುಕಾಡಿದರೂ ಸಿಕ್ಕಿರುವುದಿಲ್ಲ ಪತ್ತೆ ಮಾಡಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.