POLICE BHAVAN KALABURAGI

POLICE BHAVAN KALABURAGI

17 April 2012

GULBARGA DIST REPORTED CRIMES

ಹುಡಗ ಕಾಣೆಯಾದ ಪ್ರಕರಣ:

ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀಮತಿ ಜಗದೇವಿ ಗಂಡ ನಾಗಪ್ಪಾ ಗಂಗ್ಲೂರು ಸಾ || ಜೆ.ಆರ್. ನಗರ ಗುಲಬರ್ಗಾ ರವರು ನನ್ನ ಮಗನಾದ ಸಚಿನ ದಿನಾಂಕ 11-03-2012 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನೋಟ್ ಬುಕ್ ತರಲು ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವದಿಲ್ಲಾ, ಕಾಣೆಯಾದ ತನ್ನ ಮಗನಿಗೆ ಎಲ್ಲಾ ಕಡೆಗು ಹುಡುಕಾಡಿದರೂ ಸಿಗದೇ ಇರುವದರಿಂದ, ಹುಡಗನ ತಾಯಿಯಾದ ಜಗದೇವಿ ಯವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 26/12 ಕಲಂ ಹುಡುಗ ಕಾಣೆ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅನಧಿಕೃತವಾಗಿ ಮಧ್ಯ ಮಾರಾಟ ಮತ್ತು ಸಾಗಾಣೆ ಮಾಡುತ್ತಿದ್ದ ವ್ಯಕ್ತಿಯ ಬಂದನ:

ಮಾಡಬೂಳ ಪೊಲೀಸ್ ಠಾಣೆ:ದಿನಾಂಕ; 17-04-2012 ರಂದು ಮುಂಜಾನೆ ಮಾಡಬೂಳ ಠಾಣೆ ವಾಪ್ತಿಯ ಪೇರಶಿರೂರ ಗ್ರಾಮದಲ್ಲಿ ಅನಧಿಕೃತವಾಗಿ ಮಧ್ಯ ಮಾರಾಟ, ಆಕ್ರಮವಾಗಿ ಮಧ್ಯ ಸಾಗಾಣೆ ನಡೆಯತ್ತಿದ್ದೆ ಅಂತಾ ಖಚಿತ ಭಾತ್ಮಿ ಮೇರೆಗೆ ಶ್ರೀ ಪ್ರವೀಣ ಮಧುಕರ ಪವಾರ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರ ಮಾರ್ಗದರ್ಶನ ಮತ್ತು ನಿರ್ದೇಶನದ ಮೇರೆಗೆ ಶ್ರೀ ಅಸ್ಲಾಂ ಭಾಶಾ ಪೊಲೀಸ್ ಇನ್ಸಪೇಕ್ಟರ ಜಿಲ್ಲಾ ವಿಶೇಷ ಶಾಖೆ ಗುಲಬರ್ಗಾ ರವರಿಗೆ ಸೂಚಿಸಿದ ಮೇರೆಗೆ ಪೊಲೀಸ್ ಇನ್ಸಪೇಕ್ಟರ ಅಸ್ಲಾಂ ಬಾಶ ರವರು ಮತ್ತು ಶಿವಪ್ಪಾ ಮುಖ್ಯ ಪೇದೆ ಹಾಗು ವಾಹನ ಚಾಲಕನಾದ ಮಹಮದ ಸಲೀಂ ರವರು ಪಂಚರಾದ ಅಣ್ಣಾರಾವ, ಹಣಮಂತ ರೊಂದಿಗೆ ಪೇಠಶಿರೂರ ಗ್ರಾಮದ ಸಾಬಯ್ಯ ಗುತ್ತೆದಾರ ರವರ ಮನೆಯ ಮುಂದೆ ಹೋಗಿ ಮಾರ್ಶಲ್ ಜೀಪ ನಂ: ಕೆಎ 36 ಎಮ-1315 ನೇದ್ದರಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡಿದ್ದು ಆತನ ಹೆಸರು ವಿಚಾರಿಸಲಾಗಿ ಸುರೇಶ ತಂದೆ ಸಾಬಯ್ಯ ಗುತ್ತೆದಾರ ವ|| 28 ವರ್ಷ ಜ|| ಇಳಿಗೇರ ಸಾ|| ಪೇಠಶಿರೂರ ಗ್ರಾಮ ಹಾ||ವ|| ಮಾಡಬೂಳ ಕ್ರಾಸ ಅಂತಾ ತಿಳಿಸಿದ್ದು, ಜೀಪನ್ನು ಪರಿಶೀಲಿಸಲು ನಾಕೌಟ 10 ಬಾಕ್ಸ, 330 ಎಮಎಲ್ ಪ್ರತಿಯೊಂದು ಬಾಕ್ಸನಲ್ಲಿ 24 ಬಾಟಲಗಳು ಒಟ್ಟು 240 ಬಾಟಲಗಳು ಅಕಿ||10,710/- , ನಾಕೌಟ 650 ಎಮಎಲ್ ನ 2 ಬಾಕ್ಸ ಒಂದರಲ್ಲಿ 12 ಬಾಟಲಗಳು, ಒಟ್ಡು 24 ಬಾಟಲಗಳು, ಅಕಿ|| 1870/-, ಓಟಿ ವಿಸ್ಕಿ 180 ಎಮಎಲ್ ಒಟ್ಟು 5 ಬಾಕ್ಸ ಒಂದರಲ್ಲಿ 48 ಪ್ಲಾಸ್ಟಿಕ್ ಬಾಟಲು ಒಟ್ಟು 240 ಪ್ಲಾಸ್ಟಿಕ ಬಾಟಲಗಳು ಅಕಿ|| 11900/-, ಯು.ಎಸ ವಿಸ್ಕಿ ಒಟ್ಟು 551 ಬಾಟಲಗಳು ಅಕಿ|| 21560/-, ನೇದ್ದವುಗಳು ಅನಧಿಕೃತವಾಗಿ ಸಾಗಾಣೆ ಮತ್ತು ಮಾರಾಟ ಮಾಡುತ್ತಿದ್ದವುಗಳನ್ನು (ಜೀಪ ಸಮೇತ) ಜಪ್ತಿ ಮಾಡಿಕೊಂಡು ಸದರಿ ವ್ಯಕ್ತಿಯನ್ನು ಪರಿಶೀಲಿಸಲು ಮಧ್ಯಕ್ಕೆ ಸಂಬಂಧಿಸಿದ ನಗದು ಹಣ 4000/- ಹೀಗೆ ಒಟ್ಟು 2,00040/- ಗಳು ಜಪ್ತಿ ಮಾಡಿಕೊಂಡಿದ್ದರಿಂದ ಪಿಐ ಡಿಎಸಬಿ ಅಸ್ಲಾಂ ಬಾಶ ರವರು ವರದಿ ಸಲ್ಲಿಸಿದ ಸಾರಂಶದ ಮೇರೆಗೆ ಠಾಣೆ ಗುನ್ನೆ ನಂ: 31/2012 ಕಲಂ 32, 34 ಕೆ.ಇ.ಆಕ್ಟ ಪ್ರಕಾರ ಪ್ರಕರಣ ದಾಖಲಾಗಿದೆ.