POLICE BHAVAN KALABURAGI

POLICE BHAVAN KALABURAGI

02 May 2015

Kalaburagi Disrtict Reported Crimes

ಪತ್ರಿಕಾ ಪ್ರಕಟಣೆ

 ಮನೆಗಳ್ಳತನ ಮಾಡುವ ಅಂಬರೀಶ @ ಅಂಬ್ರಾ ತಂದೆ ನಾಗಪ್ಪ ಬೋವಿ ಆರೋಪಿಗೆ 3 ವರ್ಷ ಶಿಕ್ಷೆ
      ದಿನಾಂಕ 03-08-12 ರಂದು ಕಲಬುರಗಿ  ನಗರದ ವಡ್ಡರಗಲ್ಲಿಯಲ್ಲಿರುವ ಶಿವುಕುಮಾರ ಲಸ್ಕರ ಎನ್ನುವವರ ಮನೆಯಲ್ಲಿದ್ದ ಒಟ್ಟು 60,000/- ರೂ ಮೌಲ್ಯದ ಚಿನ್ನಾಭರಣ ಮೊಬಾಯಲ್ ಕಳ್ಳತನ ಆಗಿರುವ  ಬಗ್ಗೆ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ 64/12 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಈ ಪ್ರಕರಣದ ತನಿಖೆ ಕೈಕೊಂಡ ಅಂದಿನ ಎ.ಎಸ್.ಪಿ  ಭೂಷಣ ಬೋರ್ಸೆ, ಪಿಐ ಟಿ.ಹೆಚ್. ಕರಿಕಲ್ ರವರ ನೇತ್ರತ್ವದಲ್ಲಿ ಸಿಬ್ಬಂದಿ ಸುರೇಶ, ಶಿವಪ್ರಕಾಶ, ರಪೀಕ ರವರು ಮನೆ ಕಳ್ಳತನ ಪ್ರಕರಣವನ್ನು ಬೇದಿಸಿ ಆರೋಪಿ ಅಂಬರೀಶ @ ಅಂಬ್ರಾ ತಂದೆ ನಾಗಪ್ಪಾ ಭೋವಿ ಸಾ: ಭೋವಿಗಲ್ಲಿ ಸರಾಫ ಬಜಾರ ಕಲಬುರಗಿ  ಇತನಿಗೆ ದಸ್ತಗಿರಿ ಮಾಡಿ ಕಳುವಾದ ಮಾಲನ್ನು ವಶಪಡಿಸಿಕೊಂಡು ಎಲ್ಲಾ ಹಂತದ ತನಿಖೆ ಪೂರ್ಣಗೊಳಿಸಿ ಆರೋಪಿತನ ವಿರುದ್ದ ದಿ: 20-01-13 ರಂದು ದೊಷಾರೊಪಣೆ ಪತ್ರ ಸಲ್ಲಿಸಿದ್ದು.  ಮಾನ್ಯ 5 ನೇ ಅಪರ ಜೆ.ಎಂ.ಎಪ್.ಸಿ ನ್ಯಾಯಾಲಯ ಕಲಬುರಗಿ ದಲ್ಲಿ ನ್ಯಾಯಾಲಯದ ವಿಚಾರಣೆ ನಡೆದಿದ್ದು.  ಸರಕಾರದ ಪರವಾಗಿ ಸರಕಾರಿ ಅಬಿಯೋಜಕರಾದ ಶರಣೇಗೌಡರವರು ವಾದಮಂಡಿಸಿದ್ದು.  ದಿನಾಂಕ 27-04-15 ರಂದು 5 ನೇ ಜೆ.ಎಂ.ಎಪ್.ಸಿ ನ್ಯಾಯಾಲಯದ ನ್ಯಾಯಾಧಿಶರಾದ ಕು|| ಸೌಭಾಗ್ಯ ರವರು ಆರೋಪಿ ಅಂಬರೀಶ @ ಅಂಬ್ರಾ ಇತನಿಗೆ 3 ವರ್ಷ ಕಠೀಣ ಶಿಕ್ಷೆ ಮತ್ತು 2000/- ರೂ ದಂಡವನ್ನು ವಿಧಿಸಿರುತ್ತಾರೆ. 
                                                         
    ಕಲಬುರಗಿ  ಬಸ್ಸ ಸ್ಟಾಂಡದಲ್ಲಿ ಹುಸಿ ಬಾಂಬ್ ಸ್ಫೋಟದ ಬೆದರಿಕೆ ಪತ್ರ ಬರೆದ ಆರೋಪಿಗೆ ಶಿಕ್ಷೆ
    ದಿನಾಂಕ 6-05-2012 ರಂದು ಕಲಬುರಗಿ  ಕೇಂದ್ರ ಬಸ್ಸ ನಿಲ್ದಾಣದಲ್ಲಿ ಅನಾಮದೇಯ ಬಾಂಬ್ ಸ್ಪೋಟದ ಬೆದರಿಕೆ ಪತ್ರ ಸಿಕ್ಕಿದ್ದು ಅದರಲ್ಲಿ ಕಲಬುರಗಿ  ಹೈದ್ರಾಬಾದ ಬೆಂಗಳೂರು ನಗರದ ಬಸ್ಸ ಸ್ಟಾಂಡ ರೇಲ್ವೆ ನಿಲ್ದಾಣಗಳಲ್ಲಿ ಬಾಂಬ್ ಸ್ಪೋಟಗೊಳ್ಳಿಲಿದೆ ಎಂದು ಅನಾಮದೇಯ ಬೆದರಿಕೆ ಪತ್ರ ಸಿಕ್ಕಿದ್ದು.  ಈ ಬಗ್ಗೆ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ 39/2012 ಕಲಂ 507 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು.   ಈ ಬಗ್ಗೆ ಅಂದಿನ ಎ.ಎಸ್.ಪಿ  ಭೂಷಣ ಬೋರ್ಸೆ, ಪಿಐ ಟಿ.ಹೆಚ್. ಕರಿಕಲ್ ರವರ ನೇತ್ರತ್ವದಲ್ಲಿ ಸಿಬ್ಬಂದಿ ಸುರೇಶ ರವರು ಪ್ರಕರಣದ ಗಂಬೀರತೆಯಿಂದ ಪರಿಗಣಿಸಿ ಪೊಲೀಸ ತಂತ್ರಂಶಾದ ಮುಖಾಂತರ ಬಾಂಬ್ ಸ್ಪೋಟ ಬೆದರಿಕೆ ಪತ್ರ ಇಟ್ಟಿದ್ದ ಆರೋಪಿ ಶ್ರವಣಕುಮಾರ ತಂದೆ ಪಂಡಿತ ಸಾ: ಗೌಸ ನಗರ ತಾರಪೈಲ ಇತನಿಗೆ ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ. ಆರೋಪಿತನ ವಿರುದ್ದ 12-03-2013 ರಂದು ಮಾನ್ಯ ನ್ಯಾಯಾಲಯಕ್ಕೆ ದೋಷಾರೊಪಣೆ ಪತ್ರ ಸಲ್ಲಿಸಿದ್ದು.  ಈ ಪ್ರಕರಣವು ಮಾನ್ಯ 5 ನೇ ಅಪರ ಜೆ.ಎಂ.ಎಪ.ಸಿ ನ್ಯಾಯಾಲಯ ಕಲಬುರಗಿದಲ್ಲಿ ವಿಚಾರಣೆ ನಡೆದು ಸರಕಾರಿ ವಕೀಲರಾದ ಶರಣೇಗೌಡರು ಸರಕಾರದ ಪರವಾಗಿ ವಾದಮಂಡಿಸಿದ್ದು, ದಿನಾಂಕ 28-04-2015 ರಂದು  5 ನೇ ಜೆ.ಎಂ.ಎಪ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕು|| ಸೌಭಾಗ್ಯ ರವರು ಆರೋಪಿ ಶ್ರವಣಕುಮಾರ ತಂದೆ ಪಂಡಿತ ಇತನಿಗೆ 2 ವರ್ಷ ಕಠಿಣ ಶಿಕ್ಷೆ ವಿದಿಸಿರುತ್ತಾರೆ
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ: ದಿನಾಂಕ 01-05-2015 ರಂದು ಕುಮಾರಿ. ನಾಗೇಶ್ವರಿ ತಂದೆ ರತ್ನಾಕರ್ ಕದಮ ಸಾ: ಆನಂದ ನಗರ ಕಲಬುರಗಿ ರವರು ತಮ್ಮ ನೂವಾ ಮೋಟಾರ ಸೈಕಲ ನಂಬರ ಕೆಎ-32 ಎಲ್-9478 ನೇದ್ದರ ಮೇಲೆ ಲಾಹೋಟಿ ಕ್ರಾಸ ಮುಖಾಂತರ ಹೋಗುವಾಗ ಐವಾನ ಈ ಷಾಯಿ ಹತ್ತಿರ ಮೋ/ಸೈಕಲ ನಂಬರ ಕೆಎ-32 ಇಇ-2765 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನನ್ನ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿದರಿಂದ ನನ್ನ  ಬಲಗಾಲು ಪಾದಕ್ಕೆ ರಕ್ತಗಾಯ, ಬಲಗಾಲು ಮೊಳಕಾಲಿಗೆ ತರಚಿದ ಗಾಯ ಹಾಗು ಗುಪ್ತಪೆಟ್ಟುಗೊಳಿಸಿ ತನ್ನ ಮೋ/ಸೈಕಲ ಅಲ್ಲೆ ಬಿಟ್ಟು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ  ತನಿಖೆ ಕೈಕೊಳ್ಳಲಾಗಿದೆ.
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ :ದಿನಾಂಕ 01-05-2015 ರಂದು ಶ್ರೀ ಗುರುನಾಥರಾವ ತಂದೆ ಭಿಮಸೇನರಾವ ಪಟವಾರಿ ಇವರು ಠಾಣೆಗೆ ಹಾಜರಾಗಿ ದಿನಾಂಕ ತಾನು ಜಿಲ್ಲಾ ನ್ಯಾಯಾಲಯದಿಂದ ಎಸ್.ವಿ.ಪಿ. ಸರ್ಕಲ ಹತ್ತಿರವಿರುವ ಕೋಮಲ ಹೋಟಲದಲ್ಲಿ ಚಹಾ ಕುಡಿಯುವ ಸಂಬಂದ ನಡೆದುಕೊಂಡು ಹೋಗುತ್ತಿರುವಾಗ ಎಸ್.ವಿ.ಪಿ. ಸರ್ಕಲ ಹತ್ತಿರ ಕೇಂದ್ರ ಬಸ್ ನಿಲ್ದಾಣ ಕಡೆಯಿಂದ ಅಟೋರಿಕ್ಷಾ ನಂಬರ ಕೆಎ-32 7348 ರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಅಪಘಾತ ಮಾಡಿ ತನ್ನ ಅಟೋರಿಕ್ಷಾ ವಾಹನವನ್ನು ನಿಲ್ಲಿಸಿದೆ ಓಡಿ ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ  ತನಿಖೆ ಕೈಕೊಳ್ಳಲಾಗಿದೆ.