POLICE BHAVAN KALABURAGI

POLICE BHAVAN KALABURAGI

02 November 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:-01/11/2012 ರಂದು ಮುಂಜಾನೆ 8:00 ಗಂಟೆಗೆ ಶಿವಲಿಂಗಪ್ಪಾ @ ಸಂತೋಷ ಇತನು ತನ್ನ ಮೋಟಾರ ಸೈಕಲ ನಂ ಕೆಎ-32 ಎಲ್-2350 ನೇದ್ದರ ಮೇಲೆ ಹೈಕೊರ್ಟ ಕಡೆಗೆ ಹೊರಟಿದ್ದ ಅವನ ಮುಂದುಗಡೆ ಲಾರಿ ನಂ ಹೆಚ್.ಆರ್-37 ಎ-4687 ನೇದ್ದು ಹೋಗುತ್ತಿದ್ದು ಹೈಕೊರ್ಟ ಹತ್ತಿರ ಲಾರಿ ಚಾಲಕನು ತನ್ನ ಲಾರಿಯನ್ನು ಅಲಕ್ಷತನದಿಂದ ಯಾವುದೇ ಮುನ್ಸೂಚನೇ ನೀಡದೇ ಒಮ್ಮಲೇ ಬ್ರೇಕ ಹಾಕಿದ್ದರಿಂದ ಶಿವಲಿಂಗಪ್ಪಾ ಇತನು ಲಾರಿಯ ಎಡ ಬಾಗದ ಹಿಂದುಗಡೆ ಭಾಗಕ್ಕೆ ಗುದ್ದಿ ಕೆಳಗಡೆ ಬಿದಿದ್ದರಿಂದ ಆತನಿಗೆ ತಲೆಗೆ ಮತ್ತು ಎಡ ಕಣ್ಣಿನ ಹತ್ತಿರ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು ಲಾರಿ ಚಾಲಕನು ಈ ಅಪಘಾತ ನೋಡಿ ಓಡಿ ಹೋಗಿರುತ್ತಾನೆ ಅಂತಾ ಶ್ರೀ ಸುಭಾಶ ತಂದೆ ಸಿದ್ರಾಮಪ್ಪಾ  ನಿಂಬರ್ಗಿಕರ ಗೊಬ್ಬುರ (ಬಿ) ತಾ|\ ಅಫಜಲಪೂರ ಹಾವ|| ಸಮತಾ ಕಾಲೋನಿ ವಿಜಯನಗರ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 346/2012 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ ಮಹ್ಮದ ಆರೀಫ್ ತಂದೆ ಮಹ್ಮದ ಯಾಕೂಬ್ ಸಾ:ಅಪ್ಪರ ಲೈನ ಸಂತ್ರಸವಾಡಿ ಗುಲಬರ್ಗಾ ರವರು ನಾನು ಮತ್ತು ನನ್ನ ಗೆಳೆಯರಾದ ನಾಸೀರಖಾನ,ಮಹ್ಮದ ಅಬ್ದುಲ್ಲಾ, ಮಹ್ಮದ ಅಮಜದ ಅಲಿ,ಮಹ್ಮದ ಫೆರೋಜ ಮಹ್ಮದ ಅಕ್ಬರ,ಮಹ್ಮದ ಜಮೀಲ,ಮಹ್ಮದ ಹಾಸಮ್,ಅಬ್ದುಲ ಜಬ್ಬಾರ, ಅಬ್ದುಲ ಕರೀಮ @ ರಹೇಮಾನ  ಎಲ್ಲರೂ ಕೂಡಿಕೊಂಡು ನಮ್ಮ ಗೆಳೆಯ ಶಕೀಲ ಇವರ ಹೊಲದಲ್ಲಿ ಊಟ ಮಾಡಲು ಮೋಟಾರ ಸೈಕಲ ಮೇಲೆ ಶಕೀಲ ರವರ ಹೊಲಕ್ಕೆ ಸಂಜೆ 6-30 ಗಂಟೆ ಸುಮಾರಿಗೆ ಹೋಗಿ ಶೆಡ್ಡನಲ್ಲಿ ಊಟ ಮಾಡಿ ಕುಳಿತಾಗ, ದಿನಾಂಕ 28-10-12 ರಂದು ರಾತ್ರಿ 9-00 ಗಂಟೆ ಸುಮಾರಿಗೆ  25 ರಿಂದ 35 ವರ್ಷ ವಯಸ್ಸಿನ  8 ರಿಂದ 10 ಜನರು  ತಮ್ಮ ತಮ್ಮ ಕೈಯಲ್ಲಿ  ತಲವಾರ ಹಿಡಿದುಕೊಂಡು  ನಾನು ಮತ್ತು ನನ್ನ ಗೆಳೆಯರು ಕುಳಿತ ಶೆಡ್ಡನಲ್ಲಿ ಬಂದು ಈ ಹೊಲ ಯಾರದು ಅಂತಾ ಕೇಳಲು, ನಮ್ಮದು ಹೊಲ ಇರುತ್ತದೆ ಎಂದು ಹೇಳಿದಾಗ  ಅವರಲ್ಲಿ ಇಬ್ಬರು  ಅವಾಚ್ಯವಾಗಿ ಬೈದು  ಇಬ್ಬರು ತಮ್ಮ ಕೈಯಲ್ಲಿದ್ದ ತಲವಾರ ನನ್ ಕುತ್ತಿಗೆ ಹಚ್ಚಿ ನಮ್ಮಲ್ಲರಿಗೆ ಮುಖ ಕೆಳೆಗೆ ಮಾಡಿರಿ  ನಿಮ್ಮ ಹತ್ತಿರವಿದ್ದ ಹಣ ಮತ್ತು ಮೋಬಾಯಿಲ್  ತೆಗೆಯಿರಿ ಎಂದು ತಲವಾರ, ಮಚ್ಚು, ರಾಡು,  ತೋರಿಸಿ ಜೀವ ಬೆದರಿಕೆ ಹಾಕಿ ನನಗೆ ಮತ್ತು ನ್ನ ಗೆಳೆಯರ  ಕಿಸೆಯಲ್ಲಿ ಜಬರ ದಸ್ತಿಯಿಂದ ಕೈ ಹಾಕಿ ಹಣ ಮತ್ತು ಮೋಬಾಯಿಲ ಪರ್ಸ ಹೀಗೆ ಒಟ್ಟು ನಗದು ಹಣ 46,200/-ರೂ.ಮತ್ತು ಮತ್ತು 5 ಮೋಬಾಯಿಲ ಕಿಮ್ಮತ್ತು 10,600/- ರೂ. ಹೀಗೆ ಒಟ್ಟು 56,800/- ರೂ. ದರೋಡೆ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 348/2012 ಕಲಂ 395 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ ಮಲ್ಲಿಕಾರ್ಜುನ ತಂದೆ ಅಮೃತರಾವ ಪೊಲೀಸ ಪಾಟೀಲ ಸಾ:ಅವರಾದ ಬಿ ತಾ:ಜಿ:ಗುಲಬರ್ಗಾರವರು ನಾನು ದಿನಾಂಕ:01/10/2012 ರಂದು ಸಾಯಾಂಕಾಲ 4:30 ಗಂಟೆ ಸುಮಾರಿಗೆ ಗುಲಬರ್ಗಾಕ್ಕೆ ಬರುವ ಕುರಿತು ಬಸ್ಸ ಸ್ಟಾಂಡ ಹತ್ತಿರ ನಿಂತುಕೊಂಡಾಗ ಅಬ್ದುಲ ತಂದೆ ಚಾಂದಸಾಬ ಕಣಜಿ ಇತನು ಕೂಸ್ರರ ನಂ ಕೆ.ಎ 32 ಬಿ-7259 ನೇದ್ದರಲ್ಲಿ ಕುಳಿತುಕೊಂಡು ಕೈಯಲ್ಲಿ ರಾಡ ಬಡಿಗೆಗಳನ್ನು ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಬಂದು ನನಗೆ ಮತ್ತು ನಮ್ಮ ತಾಯಿ ಜೊತೆಗೆ ನಾವು ಇಲ್ಲದ ಸಮಯದಲ್ಲಿ ಯಾಕೇ ಜಗಳ ತೆಗೆದಿದ್ದಿರಿ ಅಂತಾ ಜಗಳ ತೆಗೆದು ರಾಡದಿಂದ ಬಡಿಗೆಯಿಂದ ಕೈಯಿಂದ ಹೊಡೇ ಬಡೇ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 349/2012 ಕಲಂ, 143, 147, 148, 323, 324, 504, 506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.