POLICE BHAVAN KALABURAGI

POLICE BHAVAN KALABURAGI

14 February 2019

KALABURAGI DISTRICT REPORTED CRIMES

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಅರುಣಾಬಾಯಿ ಗಂಡ ಗೋವಿಂದ ರಾಠೋಡ ಸಾ: ಹರ್ಜಿ ನಾಯಕ ತಾಂಡಾ ಸೊಂತ ತಾ.ಜಿ ಕಲಬುರಗಿ ರವರು ಈಗ 15 ದಿವಸಗಳ ಹಿಂದೆ ನನ್ನ ಮೈದುನರಾದ ಜಯಚಂದ್ರ ಮತ್ತು ಸುನೀಲ ಇವರ ಲಗ್ನವು ನಮ್ಮ ಮನೆಯ ಎದುರಗಡೆಯಾಗಿರುತ್ತದೆ. ಈ ಮದುವೆಗೋಸ್ಕರ ನಮ್ಮ ಪರಿಚಯದ ಅಡಕಿ ಮೋಕ ತಾಂಡಾದವರ ಡಿ,ಜೆ ತೆಗೆದುಕೊಂಡು ಬಂದು ಮೆರವಣಿಗೆ ಮಾಡಿರುತ್ತೇವೆ ನಮ್ಮ ತಾಂಡಾಕೆ ಹೆಚ್ಚಾಗಿ ಸೊಂತ ಗ್ರಾಮದ ಪ್ರಕಾಶ ಮಲ್ದಿ ಟೆಂಟ ಮತ್ತು ಡಿ.ಜೆ ಯನ್ನು ಜನರು ತರಿಸಿರುತ್ತಾರೆ ನಾವು ಬೇರೆ ಡಿ.ಜೆಯನ್ನು ತರಿಸುವದ್ದರಿಂದ ಪ್ರಕಾಶ ಮಲ್ದಿ ಮತ್ತು ಮೋಶಿನ ಇವರು ನನ್ನ ಮೈದುನರಿಗೆ ಸಿಕ್ಕಾಗ ಏ ಮಕ್ಕಳೆ ನೀವು ನಮ್ಮ ಡಿ.ಜೆ ತರಿಸಿಕೊಂಡಿರುವದಿಲ್ಲಾ ನಿಮ್ಮಗೆ ಬಹಳ ಸೊಕ್ಕು ಇದೆ. ನಿಮ್ಮಗೆ ನೋಡಿಕೊಳ್ಳುತ್ತೇವೆ ಅಂತಾ ಅನ್ನುತ್ತಿರುವ ವಿಷಯವನ್ನು ಮೈದುನರ ಮನೆಯಲ್ಲಿ ನನಗೆ ನನ್ನ ಅತ್ತೆ ಮಾವರಿಗೆ ಹೇಳಿದ್ದು , ನಮ್ಮ ಅತ್ತೆ ಮಾವನವರು ಮೈದುನರಿಗೆ ಸಮಧಾನದಿಂದ ಇರಿ ಅಂತಾ ಹೇಳುತ್ತಾ ಬಂದಿದ್ದರು. ಕಳೆದ 4 ದಿವಸಗಳ ಹಿಂದೆ ನಾನು ನನ್ನ ಮೈದುನನ ಹೆಂಡತಿ ರೇಸ್ಮಾಬಾಯಿ, ಸುಧಾರಾಣಿ, ನಾವು ಮೂರು ಜನರು ನಮ್ಮ ಪಾಲಿನಿಂದ ಮಾಡಿದ ಸೊಂತ ಗ್ರಾಮದ ಮಲ್ಲಣ್ಣ ಪಸ್ಸಾರ ಇವರಿಗೆ ಸಂಭಂದಪಟ್ಟ ರೋಡಿಗೆ ಹೊಂದಿಕೊಂಡಿರುವ ಸಮಗಾರ ಹೋಲದಲ್ಲಿ , ತೊಗರಿ ಕೊಯ್ಲಿ ಆಯುತ್ತಿರುವಾಗ ರೋಡಿನ ಮೇಲೆ ಸೊಂತ ಗ್ರಾಮದ ಟೆಂಟ ಹೌಸನಲ್ಲಿ ಕೆಲಸ ಮಾಡುವ ಮೋಷಿನ ಈತನು  ರೋಡಿನ ಹತ್ತಿರ ಹೋಗಿ ಬರುವಾಗ ಈ ಲಂಬಾಣಿ ಹೆಣ್ಣು ಮಕ್ಕಳು ರಂಡೆರು ಇರುತ್ತಾರೆ ಜಯನ ಹೆಂಡತಿ ರಂಡಿ ಕೂಡಾ ಇದ್ದಾಳೆ ಅಂತಾ ಬೈಯುತ್ತಾ ಹೋಗಿದ್ದು ಮತ್ತೆ ಎರಡು ದಿವಸ ಇದೆ ರೀತಿಯಿಂದ ಬೈಯುತ್ತಾ ಬಂದಿದ್ದು ಈ ವಿಷಯವನ್ನು ನಾವು ಮನೆಯಲ್ಲಿ ನಿನ್ನೆ ದಿನಾಂಕ 12-02-2019 ರಂದು ನಾನು ಮತ್ತು ನನ್ನ ಮೈದುನರ ಹೆಂಡತಿಯರು ಸಾಯಂಕಾಲ 4 ಗಂಟೆ ಕಾಲಕ್ಕೆ ಹೋಲದಲ್ಲಿ ಕೊಯ್ಲಿ ಆಯುವಾಗ ಮತ್ತೆ ಬಂದು ಮೋಟಾರ ಸೈಕಲ ಮೇಲೆ ಮೋಶಿನ ಈತನು ಇನ್ನು ಇಬ್ಬರು ಜನರೊಂದಿಗೆ ರೋಡಿನ ಹತ್ತಿರ ಬಂದು ಸಬ್ ಲಂಬಾಣಿ ಹಲ್ಕಟ್ ರಾಂಡ ಇದರಿಚ್ ಹೈ ಎಂದು ಬೈಯುತ್ತಿದ್ದಾಗ ನಾವು ತಾಂಡಾಕೆ ಬರುವಾಗ ಈ ವಿಷಯವನ್ನು ನನ್ನ ಸಣ್ಣ ಮೈದುನ ಸುನೀಲ ಈತನು ಮೋಷಿನ ಈತನಿಗೆ ಯಾಕೆ ನಮ್ಮ ಹೆಣ್ಣು ಮಕ್ಕಳಿಗೆ ಬೈಯುತ್ತಿ ಅಂತಾ ಕೇಳಿದ್ದಕೆ ಮೋಷಿನ ಮತ್ತು ಇತರೆ 10 ರಿಂದ 15 ಜನರು ತಾಂಡಾದ ಮನೆಯ ಮುಂದೆ ಬಂದವರೆ ಏ ರಂಡಿ ಮಕ್ಕಳೆ ಲಂಬಾಣಿ ಸೂಳೆ ಮಕ್ಕಳೆ ಸೊಕ್ಕು ಇದರೆ ಹೋರಗೆ ಬನ್ನಿ ಎನ್ನುತ್ತಾ ಇದ್ದಾಗ ನನ್ನ ಮಾವ, ಮೈದುನರಾದ ಜಯಚಂದ್ರ ಮತ್ತು ಸುನೀಲ ಬಂದಾಗ ಓಮ್ಮಲೆ ಎಲ್ಲರೂ ರಂಡಿ ಮಕ್ಕಳೆ ನಮ್ಮ ಟೆಂಟ ಬಿಟ್ಟು ಬೇರೆ ಊರಿನ ಟೆಂಟ ತರುತ್ತಿರಿ ಎನ್ನುತ್ತಾ ಕೈಯಿಗಳಿಂದ ಹೋಡೆಯುತ್ತಾ ಮತ್ತು ಅಲ್ಲೆ ಇರುವ ಬಡಿಗೆಯಿಂದ ಹೊಡೆಯುತ್ತಿದ್ದಾಗ ನಾನು ಭಯಗೊಂಡು ನಡುವೆ ಬೀಡಿಸಲು ಹೋದಾಗ ನಾಲ್ಕು ತಿಂಗಳ ಹೊಟ್ಟೆಯ ಮೇಲೆ ಮೋಶಿನ ಒದ್ದಿದ್ದು ಪ್ರಕಾಶನು ಕೂಡ ಬೆನ್ನಿಗೆ ಅಲಲ್ಲಿ ಹೊಡೆದಿದ್ದು ಇದನ್ನು ಕಂಡು ನಮ್ಮ ತಾಂಡಾದ ಕೇಸು, ಮಾನಸಿಂಗ, ಖೇಮು, ಲಲಿತಾಬಾಯಿ, ಯಮನಾಬಾಯಿ ಇವರು ಬಿಡಿಸಿಕೊಂಡಿರುತ್ತಾರೆ.  ನೀವು ಈ ಬಗ್ಗೆ ಕೇಸು ಮಾಡಿದ್ದರೆ ನಿಮ್ಮಗೆ ಮುಗಿಸಿ ಬಿಡುತ್ತೇವೆ ಅನ್ನುತ್ತಾ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ವಿಜಯಕುಮಾರ ತಂದೆ ವಿಠ್ಠಲ ಮುಲಗೆ ಸಾಃ ಕಿಣ್ಣಿಸುಲ್ತಾನ ತಾಃ ಆಳಂದ ರವರು ದಿನಾಂಕ 13-02-2019 ರಂದು ಸಾಯಂಕಾಲ ನಾನು ಮತ್ತು ನಮ್ಮೂರಿ ನಾಗರಾಜ ತಂದೆ ಹಣಮಂತ್ರಾಯ ಪರತಾಪೂರೆ ರವರಿಬ್ಬರೂ ಕೂಡಿಕೊಂಡು ನಾಗರಾಜ ಇತನ ಸ್ನೇಹಿತನಿಗೆ ಮಾತನಾಡಿಸಿ ಬರಲು ನಮ್ಮ ರಾಯಲ್ ಎನ್ಪೀಲ್ಡ್ ಮೋಟಾರ ಸೈಕಲ್ ನಂ, ಕೆಎ 32, ಇಜಿ-0886 ನೇದ್ದರ ಮೇಲೆ ನಾನು ಹಿಂದೆ ಕುಳಿತು ಹೊರಟು ನಾಗರಾಜ ಇತನು ಸದರಿ ಮೋಟಾರ ಸೈಕಲ್ ನ್ನು ಚಲಾಯಿಸಿಕೊಂಡು ನಮ್ಮೂರಿನಿಂದ ಬಂಗರಗಾ ಮಾರ್ಗವಾಗಿ ಉಮರ್ಗಾ ಕಡೆಗೆ ಹೊಗುತ್ತಿರುವಾಗ ಖಜೂರಿ ಗ್ರಾಮದ ಸೀಮಾಂತರದ ನಾಗಣ್ಣಾ ಮಡುವಳ್ಳೇ ರವರ ಹೋಲದ ಮೇಟಗಿ ಹತ್ತೀರ ರೋಡಿನ ತೀರುವಿನಲ್ಲಿ ನಾಗರಾಜ ಇತನು ತನ್ನ ಮೋಟಾರ ಸೈಕಲ್ ನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ನಾನು ನಿಧಾನವಾಗಿ ಚಲಾಯಿಸುವಂತೆ ಹೇಳಿದರು ಕೂಡಾ ನಾಗರಾಜ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲ್ ನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ರೋಡಿನ ತೀರುವಿನಲ್ಲಿ ಒಮ್ಮಿಲೇ ಕಟ್ಟ ಆಗದೇ ರೋಡಿನ ಕೇಳಗೆ ಹೋಗಿ ಬಿದ್ದಿದ್ದರಿಂದ ನನ್ನ ತಲೆಗೆ ಭಾರಿ ರಕ್ತಗಾಯ, ಎಡಗಾಲಿನ ಹಿಮ್ಮಡಿಗೆ ಮೇಲೆ, ಮುಖಕ್ಕೆ ಮೇಲೆ ಅಲ್ಲಲ್ಲಿ ತರಚೀದ ರಕ್ತಗಾಯವಾಗಿದ್ದು, ಮೋಟಾರ ಸೈಕಲ್ ಚಲಾಯಿಸುತ್ತಿದ್ದ ನಾಗರಾಜ ನನ್ನ ಪಕ್ಕದಲ್ಲಿ ಬಿದ್ದಿದ್ದು ಆತನಿಗೆ ನೊಡಲಾಗಿ ಆತನ ತಲೆಯ ಮೇಲೆ, ಮತ್ತು  ಹಣೆಯ ಮೇಲೆ ಭಾರಿ ರಕ್ತಗಾಯವಾಗಿ ರಕ್ತಸ್ರಾವಾಗಿ ನರಳಾಡುತ್ತಾ ಬಿದ್ದದ್ದು, ಆಗ ನಾನು ಗಾಬರಿಯಾಗಿ ನಮ್ಮೂರಿನ ಮಲ್ಲಿಕಾರ್ಜುನ ತಂದೆ ಶರಣಪ್ಪ ಮುಲಗೆ ರವರಿಗೆ ಪೋನ ಮಾಡಿ ವಿಷಯ ತಿಳಿಸಿದ್ದರಿಂದ ಮಲ್ಲಿಕಾರ್ಜುನ ಮುಲಗೆ & ದೀಲಿಪ ತಂದೆ ಶ್ರೀಮಂತ ಪುಲಾರೆ ರವರುಗಳು ಬಂದು ನಮಗೆ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಆಳಂದ ಕ್ಕೆ ತಂದು ಸೇರಿಕೆ ಮಾಡಿದ್ದು, ನಂತರ ನಾಗರಾಜ ಇತನಿಗೆ ಮಾನ್ಯ ವೈದ್ಯಾಧೀಕಾರಿಗಳು ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಕಳುಹಿಸಿಕೊಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.