POLICE BHAVAN KALABURAGI

POLICE BHAVAN KALABURAGI

05 June 2017

Kalaburagi District Reported Crimes

ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ:04/06/2017 ರಂದು ಕಲಬುರಗಿಯಲ್ಲಿ ಇರುವ ನಮ್ಮ ಅಣ್ಣ ರಫೀಯೂದ್ದಿನ ಇವರು ಮದೀನಾ ಕಾಲೋನಿಯ ಅವುಲಿಯಾ ಮಜೀದ ಹತ್ತಿರ ರಂಜಾನ ಹಬ್ಬದ ಪ್ರಯುಕ್ತ ಇಫ್ತಿಯಾರ ಕೂಟ ಇಟ್ಟಿಕೊಂಡಿದ್ದು ಬರಲು ತಿಳಿಸಿದ್ದರಿಂದ ನಾನು ಸಾಯಂಕಾಲ ಕಲಬುರಗಿಗೆ ಬಂದಿರುತ್ತೇನೆ. ಸಾಯಂಕಾಲ 7.30 ಪಿ.ಎಂಕ್ಕೆ ಅವುಲಿಯಾ ಮಜೀದ ಹತ್ತಿರ ಇಫ್ತಿಯಾರ ಕೂಟದಲ್ಲಿ ಭಾಗವಹಿಸಿದೆನು. ಅಡಿಗೆ ಮಾಡುವ ಸ್ಥಳದಲ್ಲಿ ನಾನು ನನ್ನ ಅಣ್ಣನ ಮಗನಾದ ಸಮೀರ ಹಾಗೂ ತನ್ವೀರ ಮತ್ತು ನಮ್ಮ ಅಣ್ಣ ರಫೀಯೂದ್ದಿನ ಕೂಡಿ ನಿಂತಿದ್ದೆವು ಜನರು ಮಜೀದ ಮೇಲ್ಗಡೆ ಊಟದ ವ್ಯವಸ್ಥೆ ಮಾಡಿದ್ದರು ಅಡುಗೆ ಮಾಡುವ ಸ್ಥಳಕ್ಕೆ ಮದೀನಾ ಕಾಲೋನಿಯ ಇರ್ಫಾನ, ಜಬ್ಬಾರ, ಸದ್ದಾಂ, ರಶೀದ ಎಂಬುವರು ಬಂದು ಊಟಕ್ಕೆ ಪ್ಲೇಟ ಕೇಳಿದರು ನಾನು ಊಟದ ವ್ಯವಸ್ಥೆ ಮಜೀದ ಮೇಲ್ಗಡೆ ಮಾಡಿರುತ್ತದೆ ಊಟಕ್ಕೆ ಮೇಲ್ಗಡೆ ಹೋಗಿ ಅಂತಾ ಹೇಳಿದಾಗ ಸಾಲೆ ಖಾನಾ ದೇವೋ ಬೇಲೊತೋ ಉಪ್ಪರ ಜಾವ ಬೋಲತೆ ಮಾಕೆ ಲವಡೆ ಮಾದರ ಚೋದ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಇರ್ಫಾನ ಎಂಬುವನು ಅಡುಗೆ ಮಾಡುವ ಸ್ಥಳದಲ್ಲಿದ್ದ ಕಬ್ಬಣದ ಕಡಚಿ ತೆಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ನನಗೆ ಹೊಡೆಯುವದನ್ನು ಬಿಡಿಸಲು ಬಂದ ನನ್ನ ಅಣ್ಣನ ಮಗನಾದ ಸಮೀರ ಇವನಿಗೆ ಜಬ್ಬಾರ ಈತನು ಕಟ್ಟಿಗೆಯಿಂದ ಸಮೀರನ ತಲೆಯ ಮುಂಬಾಗ ಹೊಡೆದು ರಕ್ತಗಾಯ ಮಾಡಿದನು. ಸದ್ದಾಂ & ರಶೀದ ಇವರು ಖಲಾಸ ಕರೋ ಸಾಲೇಕೊ ಎಂದು ಜೀವದ ಭಯ ಹಾಕಿ ಹೊಡೆಬಡೆ ಮಾಡಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ 03/06/2017 ರಂದು ಸೈಕಲ್ ಮೇಲೆ ಬಜಾರಕ್ಕೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೋದಾಗ 8 ಪಿ ಎಮ್ ಕ್ಕೆ ಅನೀಲ್ ಕಿರಣಗಿ ಇವರು ತಿಳಿಸಿದ್ದೇ ನೆಂದರೆ ನಿಮ್ಮ ತಂದೆಗೆ ಈಗೆ ಅಲ್ಟಾಮ್ ಕಂಪನಿಯ ಗೇಟ್ ಎದುರುಗಡೆ ರಸ್ತೆಯಲ್ಲಿ ಕ್ರೂಸರ್ ಚಾಲಕ ಡಿಕ್ಕಿಪಡಿಸಿ ಅಪಘಾತ ಪಡಿಸಿರುತ್ತಾನೆ ಅಂತಾ ತಿಳಿಸಿದ್ದರಿಂದ ನಾನು ಹಾಗೂ ಇತರರು ಸ್ಥಳಕ್ಕೆ ಹೋಗಿ ಭಗವಾನ ಈತನಿಗೆ ನೋಡಲಾಗಿ ಎಡಗಾಲಿನ ತೊಡೆಗೆ ಮತ್ತು ಪಾದಕ್ಕೆ ಗುಪ್ತ ಪೆಟ್ಟಾಗಿ ಎಡಗೈ ಮೊಳಕೈಗೆ ತರಚಿದ ರಕ್ತಗಾಯವಾಗಿದ್ದು ಅಲ್ಲಿಯೇ ಇದ್ದ ಅನೀಲ್ ಈತನಿಗೆವಿಚಾರಿಸಲಾಗಿ ಕಲಬುರಗಿ ಕಡೆಯಿಂದ ವಾಡಿ ಕ್ರಾಸ್ ಕಡೆಗೆ ಕ್ರೂಸರ್ ಜೀಪ್ ನಂಬರ್ ಎಮ್ ಹೆಚ್ 26 ವಿ 5490 ನೇದ್ದರ ಚಾಲಕ ಅತೀ ವೇಗ ಮತ್ತು ಅಲಕ್ಷತನಿದಿಂದ ನಡೆಸುತ್ತಾ ಬಂದು ಡಿಕ್ಕಿಪಡಿಸಿ ವಾಹನದೊಂದಿಗೆ ಓಡಿ ಹೋಗಿದ್ದು ನಂತರ ಗಾಯ ಪೆಟ್ಟು ಹೊಂದಿದ ನಮ್ಮ ತಂದೆಗೆ ಅಲ್ಸ್ಟಾಮ ಕಂಪನಿಯ ಆಂಬುಲೆನ್ಸ್ ಹಾಕಿಕೊಂಡು ಉಪಚಾರ ಕುರಿತು ಕಾಮರೆಡ್ಡಿ ಆಸ್ಪತ್ರೆ ಕಲಬುರಗಿ ಸೇರಿಕೆ ಮಾಡಿರುತ್ತಾರೆ ಅಂತಾ  ತಿಳಿಸಿದ್ದರ ಮೇರೆಗೆ ಶ್ರೀ ಪಾಂಡುರಂಗ ತಂದೆ ಭಗವಾನ ಇಂಗಳೆ ಸಾ:ಅಲಸ್ಟಮ ಕಾಲೋನಿ ಶಹಾಬಾದ.ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.