POLICE BHAVAN KALABURAGI

POLICE BHAVAN KALABURAGI

02 June 2013

GULBARGA DISTRICT REPORTED CRIMES

ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ದಿನಾಂಕ:31/05/2013 ರಂದು ಸಾಯಂಕಾಲ 4:30 ಗಂಟೆಯ ಸುಮಾರಿಗೆ ಮನೆಯಲ್ಲಿದ್ದಾಗ ನನ್ನ ಮನೆಯ ಎದುರು ಮನೆಯವರಾದ  ಶರಣಪ್ಪ ತಂದೆ ಖತಲಪ್ಪ ನಾಗಲೇಗಾಂವ,ಶಶಿಕಾಂತ ತಂದೆ ಶರಣಪ್ಪ ನಾಗಲೇಗಾಂವ, ರವಿಕಾಂತ ತಂದೆ ಶರಣಪ್ಪ ನಾಗಲೇಗಾಂವ  ರವರು ಹಳೆ ವೈಷಮ್ಯದಿಂದ  ಅವಾಚ್ಯ ಶಬ್ಬಗಳಿಂದ ಬೈದು ಕೈಯಿಂದ, ಬಡಿಗೆಯಿಂದ ಹೊಡೆದು ಮತ್ತು ಕಾಲಿನಿಂದ ಒದ್ದಿರುತ್ತಾರೆ. ಹೊಡೆಯುದನ್ನು ಬಿಡಿಸಲು ಬಂದ ನನ್ನ ಹೆಂಡತಿಯಾದ ಲಕ್ಷ್ಮೀಬಾಯಿ ಇವಳಿಗೆ ಅವಮಾನ ಮಾಡಿ ಕೈಯಿಂದ ಹೊಡೆ-ಬಡೆ ಮಾಡಿ ಬೇದರಿಕೆ ಹಾಕಿರುತ್ತಾರೆ ಅಂತಾ ಶ್ರೀ.ಶಿವಶರಣ ತಂದೆ ಲಕ್ಕಪ್ಪ ಮರಬೆ   ಸಾ:ಝಳಕಿ(ಬಿ)   ತಾ:ಆಳಂದ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ  ಗುನ್ನೆ.ನಂ:47/2013 ಕಲಂ 323,324,341,354,504,506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:

ಶಹಾಬಾದ ಪೊಲೀಸ್ ಠಾಣೆ:ಶ್ರೀಮತಿ ಶೈಲಜಾ ಗಂಡ ಸಂತೋಷ ಮಾನವಿಕರ ಸಾ:ಬಸವೇಶ್ವರ ಕಾಲೋನಿ ಶಹಾಬಾದ ರವರು ನನಗೆ ದಿನಾಂಕ:30/05/2013 ರಂದು ಬೆಳಿಗ್ಗೆ 9.00 ಗಂಟೆ ಸುಮಾರಿಗೆ ನನ್ನ ಗಂಡ ಸಂತೋಷ ಮತ್ತು  ಅತ್ತೆಯಾದ ಶರಣಮ್ಮಾ ಇವರು ನಿನಗೆ ಅಡಿಗೆ ಮಾಡಲು ಬರುವದಿಲ್ಲಾ,  ಅತ್ತೆಯನ್ನು ಚೆನ್ನಾಗಿ ನೋಡಿಕೊಳ್ಳಲು ಬರುವದಿಲ್ಲಾ ಅಂತಾ ದೈಹಿಕವಾಗಿ & ಮಾನಸಿಕವಾಗಿ ಕಿರುಕುಳ ಕೊಟ್ಟು ಮತ್ತು ಮನೆ ಕಟ್ಟುವ ಸಲುವಾಗಿ ನಿನ್ನ ತವರು ಮನೆಯಿಂದ 2 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ರೂಮಿನಲ್ಲಿ ಕೂಡಿಹಾಕಿ ಕೈಯಿಂದ ಮತ್ತು ಚಪ್ಪಲಿಯಿಂದ ಹೊಡೆದು ಬೆದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 117/2013  ಕಲಂ:498(ಎ),323,342,355,504,506 ಸಂ:34 ಐಪಿಸಿ &3&4 ಡಿಪಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.