POLICE BHAVAN KALABURAGI

POLICE BHAVAN KALABURAGI

28 June 2016

Kalaburagi District Reported Crimes.

ಅಪಘಾತ ಪ್ರಕರಣ :
ಅಫಜಪೂರ ಠಾಣೆ : ದಿನಾಂಕ 28-06-2016 ರಂದು ಬೆಳಿಗ್ಗೆ 11:30 ಗಂಟೆ ಸುಮಾರಿಗೆ ನನ್ನ ಗಂಡನು ಮನೆಯಿಂದ ಅಫಜಲಪೂರಕ್ಕೆ ಹೋಗಿ ವಡಾಪಾವ ವ್ಯಾಪಾರಕ್ಕೆ ಬೇಕಾದ ಬ್ರೇಡಗಳನ್ನು ತಗೆದುಕೊಂಡು ಬರುತ್ತೇನೆ ಅಂತಾ ಹೇಳಿ ನಮ್ಮ ಹೀರೊ ಹೊಂಡಾ ಸ್ಪೆಂಡರ ಮೋಟರ ಸೈಕಲ ನಂ ಎಮ್.ಹೆಚ್-13 ಎವಾಯ್-4171 ನೇದ್ದರ ಮೇಲೆ ಅಫಜಲಪೂರಕ್ಕೆ ಹೋಗಿರುತ್ತಾರೆ, ಮದ್ಯಾಹ್ನ 1:45 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರಿನ ಮಲ್ಲಿಕಾರ್ಜುನ ತಂದೆ ಹಣಮಂತ್ರಾಯ ಗೊಬ್ಬುರ ಇವರು ನನಗೆ ಪೋನ ಮಾಡಿ ನಿನ್ನ ಗಂಡನಿಗೆ ಅಫಜಲಪೂರ – ಕಲಬುರಗಿ ರಸ್ತೆಗೆ ಅಬ್ದುಲ ರಹೀಮ ಆಲಮೇಲ್ ರವರ ಹೊಲದ ಹತ್ತಿರ ರೋಡಿನ ಮೇಲೆ ಟ್ಯಾಕ್ಟರ ನಂ ಕೆಎ-32 ಟಿ-3512 ನೇದ್ದಕ್ಕೆ ಮದ್ಯಾಹ್ನ 1.30 ಗಂಟೆ ಸುಮಾರಿಗೆ ಅಫಘಾತ ಸಂಭವಿಸಿದ್ದು ಕಾಶೀನಾಥನಿಗೆ ಹಣೆಗೆ ಭಾರಿ ರಕ್ತ ಗಾಯವಾಗಿದ್ದರಿಂದ ಅವನನ್ನು ಅಫಜಲಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತಿದ್ದೇವೆ ಅಂತ ತಿಳಿಸಿದರು. ಕೂಡಲೇ ನಾನು ಮತ್ತು ನನ್ನ ನಾದಿನಿ ಸುನಿತಾ ಭೋಸ್ಲೆ ಹಾಗು  ಅವರ ಮಕ್ಕಳಾದ ಪ್ರಕಾಶ ಭೋಸ್ಲೆ, ಆಕಾಶ ಭೋಸ್ಲೆ ಅವರೇಲ್ಲರು ಅಫಜಲಪೂರ ಸರಕಾರಿ ಆಸ್ಪತ್ರೆಗೆ ಬಂದಿರುತ್ತೇವೆ. ವೈದ್ಯರು ನನ್ನ ಗಂಡನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ನಾವೇಲ್ಲರು ನನ್ನ ಗಂಡನನ್ನು 108 ವಾಹನದಲ್ಲಿ ಹಾಕಿಕೊಂಡು ಕಲಬುರಗಿಗೆ ಹೊರಡಿದಾಗ ಮದ್ಯಾಹ್ನ 2.15 ಗಂಟೆ ಸುಮಾರಿಗೆ ನೀರಾವರಿ ಆಫೀಸ್ ಹತ್ತಿರ ಮಾರ್ಗ ಮದ್ಯದಲ್ಲಿ ನನ್ನ ಗಂಡನು ಮೃತಪಟ್ಟಿರುತ್ತಾನೆ. ಅಂತಾ ಶ್ರೀಮತಿ ಸಂಗೀತಾ ಗಂಡ ಕಾಶಿನಾಥ  ಮೋರೆ ಸಾ : ಮಲ್ಲಾಬಾದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ: 26/06/2016 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಮೃತ ಶಂಕರ್‌ ಹಾಗೂ ಅವನ ಹೆಂಡತಿ ಶಿವಮ್ಮಾ ಇಬ್ಬರೂ ಕೂಡಿ ಮಾಹಾಗಾಂವ ಇಂದ ಅವರಾಧ ಗ್ರಾಮಕ್ಕೆ ಬಂದು ಮರಳಿ ಮಹಾಗಾಂವ ಗ್ರಾಮಕ್ಕೆ ಹೋಗುವ ಕುರಿತು ಅವರಾಧ (ಬಿ) ಗ್ರಾಮದ ಬಸ್‌ ಸ್ಟಾಂಡ್‌ ಹತ್ತಿರ ಬಸ್ಸಿಗಾಗಿ ಕಾಯುತ್ತಾ ನಿಂತಿರುವಾಗ ಅಧೇ ವೇಳೆಗೆ ಹುಮನಾಬಾಧ ರೋಡ ಕಡೆಯಿಂದ ಮೋಟರ್ ಸೈಕಲ್‌ ನಂ ಕೆಎ 32 ಇಜೆ 3195 ನೇದ್ದರ ಚಾಲಕನು ಅತೀವೆಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಮೊದಲು ಶಿವಮ್ಮಾ ಇವಳಿಗೆ ಅಪಘಾತಪಡಿಸಿ ಅದೇ ವೇಗದಲ್ಲಿ ಶಂಕರ್‌ ಈತನಿಗೂ ಅಪಘಾತಪಡಿಸಿದ್ದರಿಂದ ಶಂಕರ್‌ ಈತನಿಗೆ ಅಪಘಾತಪಡಿಸಿ ಮೋ.ಸೈ ಅಲ್ಲಿಯೇ ಬಿಟ್ಟು ಓಡಿಹೋಗಿದ್ದು ಇದರಿಂದ ಫಿರ್ಯದಿ ಶಂಕರ್‌ ಹಾಗೂ ಶಿವಮ್ಮಾ ಇಬ್ಬರಿಗೆ ಭಾರಿ ರಕ್ತಗಾಯಮತ್ತು ಗುಪ್ತಗಾಯಗಳಾಗಿದ್ದು ಅವರಿಬ್ಬರಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ಶಂಕರ್ ಈತನು ದಿನಾಂಕ: 26/06/2016 ರಿಂದ ದಿನಾಂಕ: 28/06/2016 ರವರೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ರಸ್ತೆ ಅಪಘಾತದಲ್ಲಿ ಆದ ಗಾಯಗಳ ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖವಾಗದೇ ಇಂದು ಬೆಳಿಗ್ಗೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಸಾಲೇಹಾಖೈರ್ ಗಂಡ ಮಹಮ್ಮದ ಅಸ್ಪಾಕರ್ ಪರವೇಜ್ ಸಾ:ಮನೆ ನಂ 5-993/78 ನ್ಯೂ ರೆಹಮಾನ ಕಾಲೋನಿ ಕಲಬುರಗಿ ರವರಿಗೆ 1 ವರ್ಷ 2 ತಿಂಗಳು ಹಿಂದೆ ಕಲಬುರಗಿಯ ಜಮ್ ಜಮ್ ಕಾಲೋನಿಯ ಅಬ್ದುಲ್ ರಹೀಮ್ ಎಂಬುವವರ ಮಗನಾದ ಮಹಮ್ಮದ ಅಸ್ಪಾಕ್ ಪರವೇಜ್ ಎಂಬುವವರೊಂದಿಗೆ ನಿಶ್ಚಿತಾರ್ಥ ಮಾಡಿ ನಿಶ್ಚಿತಾರ್ಥ ಕಾಲಕ್ಕೆ ವರ ಮತ್ತು ಆತನ ಸಂಬಂದಿಕರು ವರನಿಗೆ 2 ಲಕ್ಷ ರೂಪಾಯಿ ಮತ್ತು 4 ತೋಲಿ ಬಂಗಾರ ಕೋಡಬೇಕೆಂದು (ಡಿಮ್ಯಾಂಡ್) ಮಾಡಲಾಗಿತ್ತು ಅದರಂತೆ ನನ್ನ ತಂದೆ ತಾಯಿ ಮತ್ತು ನಮ್ಮ ಸಂಬಂಧಿಕರು ಮತ್ತು ನನ್ನ ಗಂಡ ಮತ್ತು ಆತನ ತಂದೆ ತಾಯಿಯವರನ್ನು ನಮ್ಮ ªÀÄನೆಗೆ ಕರೆದು ಮದುವೆಗೆ ಮುಂಚೆ 2 ಲಕ್ಷ ರೂಪಾಯಿ ಹಾಗು 4 ತೋಲಿ ಬಂಗಾರ ಕೋಡಲಾಗಿತ್ತು. ನಂತರ ಕಲಬುರಗಿ ಮೀಲನ್ ಪಂಕ್ಷನ್ ಹಾಲನಲ್ಲಿ ನಮ್ಮಿಬ್ಬರ ಮದುವೆಯಾಗಿದ್ದು ಮದುವೆ ದಿನಂದಂದು ಮನೆಯ (ಸುರಗಿ) ಮುಂಚ, ಗಾದಿ, ಅಲಮಾರಿ, ಹ್ಯಾಂಡ್ಯಾ ಬ್ಯಾಂಡ್ಯಾ ಗಳನ್ನು ನಮ್ಮ ಮದುವೆ ಸಂಪ್ರದಾಯದಂತೆ ಕೋಡಲಾಗಿತ್ತು. ಮದುವೆ ಹೋಸದಲ್ಲಿ ನಾನು ಗಂಡನ ಮನೆಗೆ ಹೋದೆ ನಂತರ ನನ್ನ ಗಂಡ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದನು. ಸುಮಾರು 6 ತಿಂಗಳ ಕಳೆದ ನಂತರ ನನ್ನ ಅತ್ತೆ ಜರೀನಾ ಬೇಗಂ ಮತ್ತು ನಾದಿನಿ ನಾಜಿಯಾಫಾತೀಮಾ ಇವರು ನನಗೆ ನೀನು ಸರಿಯಾಗಿ ಅಡಿಗೆ ಮಾಡುವುದಿಲ್ಲಾ ನೀನು ನಮ್ಮ ಮನೆಯವರಿಗೆ ಸರಿಯಾಗಿ ಹೊಂದಿಕೊಂಡಿರುವುದಿಲ್ಲಾ ಅಂತಾ ಬೈಯ್ಯುತ್ತಿದ್ದಾಗ ನಾನು ನನ್ನ ಗಂಡ ಮತ್ತು ಮಾವ ಅಬ್ದುಲ್ ರಹೀಮ್ ಇವರಿಗೆ ನನಗೆ ಅತ್ತೆ ಮತ್ತು ನಾದಿನಿ ತೊಂದರೆ ಕೊಡುತ್ತಿದ್ದ ಬಗ್ಗೆ ತಿಳಿಸಿದಾಗ ಅವರು ಸಹಾ ಅವರಿಗೆ ಹೊಂದಿಕೊಂಡು ಹೋಗು ನಿನಗೆ ಸರಿಯಾಗಿ ಕೆಲಸ ಮಾಡಲು ಬರುವುದಿಲ್ಲಾ ನೀನು ಸರಿಯಾಗಿ ಇರುವುದಿಲ್ಲಾ ಅಂತಾ ಬೈಯ್ಯಲು ಸುರು ಮಾಡಿದರು. ನಂತರ 5 ತಿಂಗಳ ಹಿಂದೆ ನನ್ನ ಗಂಡ ಮತ್ತು ಮಾವ ಹಾಗು ಅತ್ತೆ ನಾದಿನಿ ಕೂಡಿಕೊಂಡು ನೀನು ವರದಕ್ಷಣೆ ಕಡಿಮೆ ತಂದಿರುವಿ. ಈಗ ನಮಗೇ 1 ಲಕ್ಷ ರೂಪಾಯಿ ಹಣ ಅವಶ್ಯಕತೆ ಇದೆ ನೀನು ನಿನ್ನ ತವರು ಮನೆಯಿಂದ ತರಿಸಿಕೊಡುವಂತೆ ಹೇಳಿದಾಗ ನಾನು ಅವರಿಗೆ ನನಗೆ ಕೋಡಬೇಕಾದ 2 ಲಕ್ಷ ರೂಪಾಯಿ ಮತ್ತು 4 ತೋಲಿ ಬಂಗಾರ ಕೊಟ್ಟಿದ್ದು ಇರುತ್ತದೆ. ಸದ್ಯ ನನ್ನ ತವರು ಮನೆಯವರು ಹಣ ಕೊಡುವುದು ಆಗುವುದಿಲ್ಲಾ ಅಂತಾ ಅಂದಿದ್ದಕ್ಕೆ ನನ್ನ ಮಾವ ಅಬ್ದುಲ್ ರಹೀಮ್ ಇತನು ಮಾರೋ ಸಾಲಿಕೋ ಹಮಾರೆಕು ಉಲ್ಟಾ ಜವಾಬ್ ದೇತಿ ಅಂದಾಗ ನನ್ನ ಗಂಡ ಕೈಯಿಂದ ನನ್ನ ಎಡ ಕಪಾಳಕ್ಕೆ ಹೊಡೆದಾಗ ನನ್ನ ಅತ್ತೆ ಜರೀನಾಬೇಗಂ ಮತ್ತು ನಾದಿನಿ ನಾಜಿಯಾಫಾತಿಮಾ ಇವರು ನನ್ನ ಕೂದಲು ಹಿಡಿದು ಎಳೆದಾಡಿ ಬೆನ್ನಿನ ಮೇಲೆ ಹೊಡೆದು ದೈಹಿಕ ಮತ್ತು ಮಾನಸಿಕವಾಗಿ ತೊಂಡರೆ ಕೊಟ್ಟಾಗ ನಾನು ಈ ವಿಷಯವನ್ನು ನನ್ನ ಅತವರು ಮನೆಗೆ ಹೇಳಿ ಕಳುಹಿಸಿದಾಗ ನನ್ನ ತಾಯಿಯವರು ಅಬ್ದುಲ್ ರಹೀಮ್ ಶಿಕ್ಷಕರು ಪಾಯನಗಲ್ಲಿ ಮತ್ತು ಮಹ್ಮದ ಮುನೀರ ಅಹ್ಮದ ಸಾ: ಯಾದುಲ್ಲಾ ಕಾಲನಿ ಕಲಬುರಗಿ, ಮೋಶಿನ ತಂದೆ ಇಬ್ರಾಹಿಂಸಾಬ ಹಾಗು ತನವೀರ ತಂದೆ ಅಬ್ದುಲ್ ರಶೀದ ರವರನ್ನು ನನ್ನ ಗಂಡನ ಮನೆಗೆ ಕರೆದುಕೊಂಡು ಬಂದು ನನ್ನ ಗಂಡ ಮತ್ತು ಅವರ ಮನೆಯವರಿಗೆ ತಿಳುವಳಿಕೆ ನೀಡಿ ನನಗೆ ತೊಂದರೆ ಕೋಡಬೇಡಿರಿ ಅಂತಾ ತಿಳಿಸಿ ಹೊರಟು ಹೋದರು. ನಂತರ ನನ್ನ ಗಂಡ ಮತ್ತು ಅತ್ತೆ ಮಾವ, ನಾದಿನಿ ಎಲ್ಲರೂ ಕೂಡಿ ನನಗೆ ನೀನು ನಮ್ಮ ಮನೆಯ ವಿಷಯವನ್ನು ತವರು ಮನೆಗೆ ಹೇಳುತ್ತಿ ಅಂತಾ ನನಗೆ ಅಂದಿನಿಂದ ಮತಷ್ಟು ತೊಂದರೆ ಕೊಡುತ್ತಾ ಬಂದಿದ್ದು ಅಲ್ಲದೇ ದಿನಾಂಕ:-19/06/2016 ರಂದು ಮುಂಜಾನೆ 10:00 ಗಂಟೆಗೆ ಮೆನಯಲ್ಲಿ ನನ್ನ ಗಂಡ ಮಹಮ್ಮದ ಅಸ್ಪಾಕ್ ಪರವೇಜ್, ಮತ್ತು ಅತ್ತೆ ಜರೀನಾಬೇಗಂ, ಮಾವ ಅಬ್ದುಲ್ ರಹಿಮಾನ್ ಎಲ್ಲರೂ ಕೂಡಿಕೊಂಡು ನನಗೆ ತು 1 ಲಾಕ್ ರೂಪಾಯಿ ಲಾಕೇ ಮೇರಾ ಘರಕು ಆ ನಹಿತೋ ತುಮಕೋ ಜಾನಸೇ ಮಾರಕೆ ಪೆಕತು ಅಂತಾ ನನ್ನ ಗಂಡ ಮತ್ತು ಮಾವ ಕೈಯಿಂದ ಹೊಡೆದು ನನ್ನ ಅತ್ತೆ ಮತ್ತು ನಾದಿನಿ ಇವರು ಬೇಜದೋ ಸಾಲಿಕೋ ದುಸರಾ ಶಾದಿ ಕರಾಲೆಂಗೆ ಅಂತಾ ನನಗೆ ಕೂದಲು ಹಿಡಿದು ಎಳೆದು ಮನೆಯಿಂದ ಹೊರಗೆ ಹಾಕಿರುತ್ತಾರೆ . ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವರ ಬಂಧನ :
ರಾಘವೇಂದ್ರರ ನಗರ ಠಾಣೆ : ದಿನಾಂಕ 27-06-2016 :ರಂದು ಗಂಗಾನಗರ ಬಡಾವಣೆಯಲ್ಲಿರುವ ಸಾರ್ವಜನಿಕ ಶೌಚಾಲಯದ ಹಿಂದೆ ಖುಲ್ಲಾ ಜಾಗೆಯಲ್ಲಿ ಇಬ್ಬರೂ ಯುವಕರೂ  ಅನಧಿಕೃತವಾಗಿ ಮದ್ಯಾಪಾನ ಇಟ್ಟುಕೊಂಡು ಯಾವುದೆ ಪರವಾನಿಗೆ ಇಲ್ಲದೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಶ್ರೀ ಡಬ್ಲೂ.ಹೆಚ್‌‌.ಕೊತ್ವಾಲ್‌ ಪಿ.ಎಸ್‌‌.ಐ ರಾಘವೇಂದ್ರ ನಗರ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ದಾಳಿ ಮಾಡಿ ಹೀಡಿದು ಅವರ ಹೆಸರು ವಿಳಾಸ ವಿಚಾರಿಸಲು ಅವರು ತಮ್ಮ ತಮ್ಮ  ಹೆಸರು 1)ಬಾಬುರಾವ ತಂದೆ ಚಂದ್ರಶಾ ಡಿಗ್ಗಿ ಸಾ:ಚೌಡೇಶ್ವರ ಕಾಲೋನಿ ಕಲಬುರಗಿ 2) ಶರಣಪ್ಪಾ ತಂದೆ ಗುಂಡಪ್ಪಾ ಕೂಡಿ ಸಾ:ಗಂಗಾನಗರ ಕಲಬುರಗಿ ಅಂತಾ ತಿಳಿಸಿದನು. ಸದರಿಯವರಿಂದ ಒಟ್ಟು ಅ.ಕಿ.1284/-ರೂ ಬೆಲೆಬಾಳುವ ಮಧ್ಯದ ಪಾಕೇಟಗಳು ಹಾಗೂ ನಗದು ಹಣ 600/-ರೂ  ಗಳನ್ನು ಜಪ್ತ ಮಾಡಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. 

24 June 2016

Kalaburagi District Reported Crimes

ಕಳವು ಪ್ರಕರಣ :
ಫರತಾಬಾದ ಠಾಣೆ : ಶ್ರೀ ಜಗನ್ನಾಥ ತಂದೆ ಬಸವಣಪ್ಪಾ ಕೋಣಿನ ಸಾ: ಖಣದಾಳ ದಿನಾಂಕ 09/01/2011 ರಂದು ಬೆಳ್ಳಿಗ್ಗೆ ಹೊಲಕ್ಕೆ ಹೋಗಿ ಹೊಲದ ಕೆಲಸ ಮುಗಿಸಿಕೊಂಡು  ವಾಪಸ ಮನೆಗೆ ಬಂದು ರಾತ್ರಿ 9 ಗಂಟೆಯ ಸುಮಾರಿಗೆ  ನನ್ನ ಮನೆಯಲ್ಲಿ ಊಟ ಮಾಡಿಕೊಂಡು ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ಮನೆಯಲ್ಲಿ ಮಲಗಿಕೊಂಡಿರುತ್ತೇನೆ.  ನಾನು ಮಲಗಿಕೊಂಡ ಪಕ್ಕದ  ರೂಮಿನ ಕೀಲಿ ಮುರಿದು ಬಿದ್ದು ಬಾಗಿಲ ಖುಲ್ಲಾ ಆಗಿದ್ದನ್ನು  ಬೆಳ್ಳಿಗ್ಗೆ  7 ಗಂಟೆಯ ಸುಮಾರಿಗೆ ನೋಡಿ ನನ್ನ ಅಣ್ಣನಾದ ವಿಶ್ವನಾಥ  ದಳಪತಿ  ಶಿವಪುತ್ರ ಕೋಣಿನ ಹಣಮಂತ್ರಾಯ  ಕೋಣಿನ ಇವರನ್ನು  ಕರೆದು ನಮ್ಮ ಮನೆಯ ಬಾಗಿಲ ತೆರಿದಿದೆ ಬನ್ನಿರಿ ಅಂತಾ ಗಾಬರಿಗೊಂಡು ಒಳಗೆ ಹೋಗಿ ನೋಡಲಾಗಿ  ಮನೆಯಲ್ಲಿದ್ದ ಎರಡು ಪೆಟ್ಟಿಗೆಗಳು ಕಾಣಲಿಲ್ಲ ನಂತರ ಎಲ್ಲರೂ ಕೂಡಿ ಹುಡುಕಾಡಲಾಗಿ  ಸದರಿ ಪೆಟ್ಟಿಗೆಗಳು ಊರ ಹೊರಗೆ ಗುರಲಿಂಗಪ್ಪಾ ಪಾಟೀಲ ಇವರ ಹೊಲದಲ್ಲಿ  ಬಿಸಾಕಿದ್ದು ಸದರಿ ಪೆಟ್ಟಿಗೆಯಲ್ಲಿದ್ದ  ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಒಟ್ಟು 46,000/- ರೂ ಕಿಮ್ಮತ್ತಿನ ಆಭರಣಗಳನ್ನು ಯಾರೋ ಅಪರಿಚಿತ ಕಳ್ಳರು  ನಮ್ಮ ಮನೆಯ ಬಾಗಿಲದ ಕೀಲಿ ರಾತ್ರಿ ಹೊತ್ತಿನಲ್ಲಿ ಮುರಿದು ದಿನಾಂಕ 09-10/01/11 ರಂದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ .ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಕಲಾವತಿ ಗಂಡ ದಿಃ ಶ್ರೀಕಾಂತ ಮಿರಜಕರ ಸಾಃ ದೋಬಿಗಲ್ಲಿ ಶಹಾಬಜಾರ ಕಲಬುರಗಿ ಇವರ ಮಗಳಾದ ಉಮಾ ಇವಳಿಗೆ  ರಾಜು ಚೌರಶಿಯಾ (ಉತ್ತರಪ್ರದೇಶ) ಗೋರಕಪೂರ ಇತನೊಂದಿಗೆ ಸುಮಾರು 3 ವರ್ಷಗಳ ಹಿಂದೆಮದುವೆ ಮಾಡಿಕೊಟ್ಟಿದೇವು, ನನ್ನ ಮಗಳು ಹಾಗು ಅಳಿಯನು ಸೇರಿಕೊಂಡು ಶಹಾಬಜಾರದ ಕಟಗರಪೂರದ ಏರಿಯಾದ ಶುಕ್ಲಾ ಸಾಮಿಲ್ ಹತ್ತೀರ ಶುಕ್ಲಾ ಇವರ ಮನೆಯಲ್ಲಿ ಬಾಡಿಗೆಯಿಂದ ವಾಸವಾಗಿದ್ದರು. ಇವರ ಜೋತೆಯಲ್ಲಿ ರಾಜುವಿನ ಮೋದಲನೇ ಹೆಂಡತಿಯ 2 ಮಕ್ಕಳು ಕೂಡಾ ವಾಸವುರುತ್ತಾರೆ  ನನ್ನ ಮಗಳಾದ ಉಮಾ ಗಂಡ ರಾಜು ಇವಳಿಗೆ ಅವಳ ಗಂಡ ರಾಜು ಇತನು ಯಾವಾಗಲೂ ಸುಮಾರು ಸಲ ಅವಳ ಮೇಲೆ ಸಂಶಯ ಪಟ್ಟು ಸಿಕ್ಕಾಪಟ್ಟೆಯಾಗಿ ಹೊಡೆಬಡೆ ಮಾಡುತ್ತೀದ್ದನು, ಆದರೂ ಸಹ ನನ್ನ ಮಗಳು ಅವನೊಂದಿಗೆ ಸಂಬಾಳಿಸಿಕೊಂಡು ಇರುತ್ತಿದ್ದಳು, ಹೀಗಿದ್ದು ನಿನ್ನೆ ದಿನಾಂಕಃ 22.06.2016 ರಂದು ಸಾಯಂಕಾಲ 07.00 ಪಿ.ಎಮ್ ಸುಮಾರಿಗೆ ನನ್ನ ಮಗಳಾದ ಉಮಾ ಇವಳಿಗೆ ಅವಳ ಗಂಡ ರಾಜು ಚೌರಶಿಯಾ ಇವನು ಇವಳಿಗೆ ಸಂಶಯಪಟ್ಟು ಮನೆಯಲ್ಲೀಯೆ ಮತ್ತೆ ಹೊಡೆಬಡೆ ಮಾಡಿ ಕುತ್ತೀಗೆಗೆ ವೈರ್ ಹಾಕಿ ಎಳೆದು ಮತ್ತು ರಾಡಿನಿಂದಲೂ ಸಹ ಹೊಡೆದು ಕೊಲೆ ಮಾಡಿ ನಂತರ ಅವನ ಸಮೀಪದ ಬಂದುಗಳ ಕಾರ್ ನಂ ಕೆಎ 03 5005 ನೇದ್ದರಲ್ಲಿ ಮನೆಯ ಬಾಜು ಮನೆಯಲ್ಲಿ ವಾಸವಿರುವ ಒಬ್ಬ ಕಾರ್ ಚಾಲಕನಿಗೆ ಹೇಳಿ ಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ತೆಗೆದುಕೊಂಡು ಹೋಗಿರುವಾಗ ಅವಳ ಜೀವ ಆಗಲೇ ಹೋಗಿರುವುದು ಎಂದು ವೈಧ್ಯರು ತಿಳಿಸಿದಾಗ ಇದನ್ನು ಖಚಿತಪಡಿಸಿಕೊಂಡು ವೈಧ್ಯರು  ತಿಳಿದು ಅವನು ಕಾರ್ ಚಾಲಕನಿಗೆ ಅಲ್ಲೀಯೆ ಕಾರನ್ನು ಪಾರ್ಕಿಂಗ್ ಮಾಡು, ನಾನು ಹಣ ತೆಗೆದುಕೊಂಡು ಬರುತ್ತೇನೆ ಎಂದು ಅವನಿಗೆ ಹೇಳಿ ತನ್ನ ಮನೆಗೆ ಬಂದು ತನ್ನ ಮೋದಲನೆ ಹೆಂಡತಿಯ ಇಬ್ಬರೂ ಮಕ್ಕಳನ್ನು ಕರೆದುಕೊಂಡು ನಾಪತ್ತೆಯಾಗಿರುತ್ತಾನೆ  ಕಾರು ಮನೆಯ ಮುಂದೆಯೆ ಇರುವುದು ಅದರಲ್ಲಿ ನನ್ನ ಮಗಳ ಡೆಡ್ ಬಾಡಿ ಸಹ ಇರುವುದು, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಯಡ್ರಾಮಿ ಠಾಣೆ : ಶ್ರೀಮತಿ ಪಾರ್ವತಿ ಗಂಡ ಬಸವಂತಪ್ಪ ಅಂಕಲಗಿ ಸಾ|| ಕಾಚಾಪೂರ ತಾ|| ಜೇವರಗಿ ಇವರು  ದಿನಾಂಕ 23-06-2016 ರಂದು ಹಂಗರಗಾ(ಬಿ) ಗ್ರಾಮದಲ್ಲಿ ನಮ್ಮ ಸಂಬಂದಿಕರ ಮನೆಯಲ್ಲಿ ಕಾರ್ಯಕ್ರಮ ಇದ್ದಿದ್ದರಿಂದ ನಾನು ಮತ್ತು ನನ್ನ ಕೊನೆ ಮಗಳಾದ ದೊಡ್ಡಮ್ಮ ಮತ್ತು ನಮ್ಮ ಅಣ್ಣತಮ್ಮಕಿಯ ಅಕ್ಕ ತಾಯಮ್ಮ ಗಂಡ ಮಹಾಂತಪ್ಪ ಅಂಕಲಗಿ ರವರು ಕೂಡಿ ನ್ಮಮೂರಿನ ಮಲ್ಕಪ್ಪ ತಂದೆ ನಿಂಗಪ್ಪ ತಳವಾರ ರವರ ಟಂಟಂ ನಂ ಕೆ.-32/ಸಿ-3654 ನೇದ್ದರಲ್ಲಿ ನಾವೆಲ್ಲರು ಕುಳಿತುಕೊಂಡು ಸಾಯಂಕಾಲ ಹಂಗರಗಾ(ಬಿ) ಗ್ರಾಮಕ್ಕೆ ಹೋಗಿ ಅಲ್ಲಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಮರಳಿ ಅದೇ ಟಂಟಂ ನಲ್ಲಿ ನಾವೆಲ್ಲರು ಬರುತ್ತಿದ್ದಾಗ ಅಂದಾಜ 8;45 ಪಿ.ಎಂ ಸುಮಾರಿಗೆ ಸೈದಾಪೂರ ಕ್ರಾಸ್ ಹತ್ತಿರ ಬರುತ್ತಿದ್ದಂತೆ ಎದುರಿನಿಂದ ಟ್ರ್ಯಾಕ್ಟರ್ ಚಾಲಕನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಒಮ್ಮೇಲೆ ಕಟ್ ಹೊಡೆದಿದ್ದರಿಂದ ಟ್ರ್ಯಾಕ್ಟರ್ ಹಿಂದಿನ ಟ್ರಾಯಲಿಯ್ನನು ನಮ್ಮ ಟಂಟಂ ಬಲಗಡೆ ಕುಳತಿದ್ದ, ದೊಡ್ಡಮ್ಮ ಮತ್ತು ತಾಯಮ್ಮಳಿಗೆ ಬಡಿದ್ದಿದ್ದರಿಂದ ಅವರಿಬ್ಬರು ಟಂಟಂ ನಿಂದ ಕೆಳಗೆ ಬಿದ್ದರು, ನಂತರ ನಾವು ಟಂಟಂ ನಿಲ್ಲಿಸಿ ನೋಡಲಾಗಿ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರನ್ನು ನಿಲ್ಲಿಸದಂತೆ ಮಾಡಿ ಓಡಿಸಿಕೊಂಡು ಹೋದನು. ಸದರಿ ಟ್ರ್ಯಾಕ್ಟರ ಸ್ವರಾಜ ಕಂಪನಿದಿದ್ದು, ನೀಲಿ ಬಣ್ಣದ ಟ್ರಾಯಲಿ ಇರುತ್ತದೆ. ನಂತರ ನಾನು ನೋಡಲಾಗಿ ನನ್ನ ಮಗಳಾದ ದೊಡ್ಡಮ್ಮ ಇವಳಿಗೆ ತಲೆಯ ಮೇಲ್ಭಾಗದಲ್ಲಿ ಮತ್ತು ಬಲಗಾಲಿನ ತೊಡೆಗೆ, ಎರಡು ಚೆಪ್ಪೆಗಳಿಗೆ ಹಾಗು ಹೊಟ್ಟೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೇ ಮೃತ ಪಟ್ಟಿರುತ್ತಾಳೆ, ತಾಯಮ್ಮ ಇವಳಿಗೆ ನೋಡಲಾಗಿ ಅವಳ ಬಲಗಾಲಿಗೆ ಮತ್ತು ಬಲಗೈಗೆ ಭಾರಿ ರಕ್ತಗಾಯವಾಗಿ ರಕ್ತ ಸೋರುತ್ತಿತ್ತು. ನಂತರ ನನ್ನ ಮಗಳಿಗೆ ಮತ್ತು ತಾಯಮ್ಮಳನ್ನು ಅದೇ ಟಂಟಂನಲ್ಲಿ ಹಾಕಿಕೊಂಡು ಯಡ್ರಾಮಿ ಸರಕಾರಿ ಆಸ್ಪತ್ರೆಗೆ ತಂದಿದ್ದು, ನನ್ನ ಮಗಳ ಶವವನ್ನು ಯಡ್ರಾಮಿ ಶವಗಾರ ಕೋಣೆಯಲ್ಲಿಟ್ಟು, ನಂತರ ಅಂಬರೀಶ ತಂದೆ ಲಕ್ಷ್ಮಣ ಅಂಕಲಗಿ ರವರು ತಾಯಮ್ಮಳಿಗೆ ಹೆಚ್ಚಿನ ಉಪಚಾರಕುರಿತು 108 ಅಂಬೂಲೆನ್ಸನಲ್ಲಿ ಕಲಬುರಗಿಗೆ ತೆಗೆದುಕೊಂಡು ಹೋಗಿರುತ್ತಾರೆ. ನನಗೆ ಮತ್ತು ಮಲ್ಕಪ್ಪನಿಗೆ ಯಾವುದೆ ಗಾಯಗಳು ಆಗಿರುವುದಿಲ್ಲ. ನಾನು ಸದರಿ ಟ್ರ್ಯಾಕ್ಟರ್ ಚಾಲಕನಿಗೆ ನೋಡಿದಲ್ಲಿ ಗೊರುತಿಸುತ್ತೇನೆಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 23-06-2016 ರಂದು ಮದ್ಯಾಹ್ನ ಎಸ.ವಿ.ಪಿ. ಸರ್ಕಲ ಹತ್ತೀರ ಇರುವ ಮೇಡಿಪ್ಲಸ ಔಷಧ ಅಂಗಡಿಗೆ ಹೋಗುವ ಕುರಿತು ನನ್ನ ಗಂಡನಾದ ಅಬ್ದುಲ ಜಬ್ಬಾರ ಇವರು ಚಲಾಯಿಸುತ್ತಿರುವ ಮೋಟಾರ ಸೈಕಲ ನಂ ಎಮ್,ಹೆಚ್,-43ಟಿ-8396 ನೇದ್ದರ ಹಿಂದುಗಡೆ ನನಗೆ ಕೂಡಿಸಿಕೊಂಡು ಮನೆಯಿಂದ ಮೋಟಾರ ಸೈಕಲನ್ನು ಟೌನ ಹಾಲ ಕ್ರಾಸ ಮುಖಾಂತರವಾಗಿ ರೋಡ ಎಡಗಡೆಯಿಂದ ಎಸ.,ವಿ.ಪಿ, ಸರ್ಕಲ ಕಡೆಗೆ ಚಲಾಯಿಸಿಕೊಂಡು ಹೋಗುವಾಗ ದಾರಿ ಮದ್ಯ ಪರಿವಾರ ಹೊಟೇಲ ಎದುರು ರೋಡ ಮೇಲೆ ಟಂ ಟಂ ನಂ ಕೆಎ-56-2098 ನೇದ್ದರ ಚಾಲಕನಾದ ಖಾಜಾ ಇತನು ತನ್ನ ಟಂ ಟಂ ವಾಹನವನ್ನು ಜಗತ  ಸರ್ಕಲ ಕಡೆಯಿಂದ ಎಸ.ವಿ.ಪಿ. ಸರ್ಕಲ ಕಡೆಗೆ ಹೋಗುವ ಕುರಿತು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಎಡ ಹುಬ್ಬಿನ ಮೇಲೆ ತರಚಿದಗಾಯ ಮತ್ತು ಒಳಪೆಟ್ಟು ಎಡ ಕಣ್ಣಿನ ರೆಪ್ಪೆಗೆ ಪೆಟ್ಟು ಬಿದ್ದು ಬಾವು ಬಂದಿದ್ದು ಎಡ ಕಣ್ಣಿನ ಎಡಬಾಗದ ಹತ್ತಿರ ತರಚಿದಗಾಯ ಗದ್ದಕ್ಕೆ ಹರಿದ ರಕ್ತಗಾಯ ತೆಲೆಯ ಹಿಂಭಾಗಕ್ಕೆ ಗುಪ್ತಗಾಯ ಮತ್ತು ಎಡ ಮುಂಗೈಗೆ ಭಾರಿ ಗುಪ್ತಗಾಯವಾಗಿ ಮೈಯಲ್ಲಾ  ಒಳಪೆಟ್ಟಾಗೊಳಿಸಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ತೊಡಗಿದವರ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 23/06/2016 ರಂದು ಮಾನ್ಯ ಎಸ್.ಎಸ್ ಹುಲ್ಲೂರ ಡಿ.ಎಸ್.ಪಿ ಸಾಹೇಬ ಡಿ.ಸಿ.ಆರ್.ಬಿ ಘಟಕ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಮಾಡಿಯಾಳ ಗ್ರಾಮದ ಬಸ ನಿಲ್ದಾಣದ ಹತ್ತಿರ ಡಾಂಬರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಯುತ್ತಿದೆ ಅಂತ ಮಾಹಿತಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂಧಿಯವರಾದ 01] ಚಂದ್ರಕಾಂತ ಸಿಹೆಚ್.ಸಿ 287, 02] ಆನಂದ ಪ್ರಸಾದ ಸಿಹೆಚ್.ಸಿ 198 ,ರವರೊಂದಿಗೆ ನಿಂಬರ್ಗಾ ಪೊಲೀಸ ಠಾಣೆಗೆ ಬಂದು ಪಂಚರೊಂದಿಗೆ ಮಾಡಿಯಾಳ ಗ್ರಾಮಕ್ಕೆ ಹೋಗಿ ಎಲ್ಲರೂ ಸೇರಿ ಬಸ ನಿಲ್ದಾಣದ ಮರೆಯಲ್ಲಿ ನಿಂತು ನೋಡಲಾಗಿ ಬಸ  ನಿಲ್ದಾಣದ ಮುಂದೆ ಡಾಂಬರ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನಿಗೆ ವಿಚಾರಿಸಲು ಆತನು ತನ್ನ ಹೆಸರು ಪ್ರಭಾಕರ ತಂದೆ ಬಾಬು ಬೆಣ್ಣೆಶಿರೂರ ಸಾ|| ಮಾಡಿಯಾಳ ಅಂತ ತಿಳಿಸಿದ್ದು ಇತನನ್ನು ಚಕ್ ಮಾಡಲಾಗಿ ಇತನ ಹತ್ತಿರ ನಗದು ಹಣ 6620/- ರೂಪಾಯಿ ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನಿಂಬರ್ಗಾ ಠಾಣೆ : ಧುತ್ತರಗಾಂವ ಗ್ರಾಮದಲ್ಲಿ ಭೀಮಶಾ ರಾಜೋಳ ಇವರ ಹೊಟೇಲ ಮುಂದುಗಡೆ ಸಾರ್ವಜನಿಕ ರೋಡಿನ ಮೇಲೆ ಮಟಕಾ ಜೂಜಾಟ ನಡೆಯುತ್ತಿದೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀ ಮಲ್ಲಿಕಾರ್ಜುನ ಎ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಧತ್ತರಗಾಂವ ಗ್ರಾಮದ ಭೀಮಶಾ ರಾಜೋಳ ಇವರ ಹೊಟೇಲ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಹೊಟೇಲ ಮುಂದುಗಡೆ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನಿಗೆ ವಿಚಾರಿಸಲು ಆತನು ತನ್ನ ಹೆಸರು ಶಿವಲಿಂಗಪ್ಪಾ ತಂದೆ ಶರಣಪ್ಪ ಮಲಶೇಟ್ಟಿ ಸಾ|| ಧುತ್ತರಗಾಂವ ಅಂತ ತಿಳಿಸಿದ್ದು ಇತನನ್ನು ಚಕ್ ಮಾಡಲಾಗಿ ಇತನ ಹತ್ತಿರ ನಗದು ಹಣ 480/- ರೂಪಾಯಿ ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ ಜಪ್ತಿಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ದೇವಲಗಾಣಗಾಪೂರ ಠಾಣೆ : ದಿನಾಂಕ 23-06-2016 ರಂದು ದೇವಲಗಾಣಗಾಪೂರದ ಚಕ್ಲೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಶ್ರೀ ಶಕೀಲ ಐ ಅಂಗಡಿ ಪಿಎಸ್ಐ ದೇವಲಗಾಣಗಾಪುರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ಜೂಜಾಟದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಂಆಡಿ 5 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು  1] ಬಸಲಿಂಗಪ್ಪ ತಂದೆ ಶರಣು 2] ಹುಸೇನಿ ತಂದೆ ಮಹಿಬೂಬ ತಾಂಬೋಳಿ 3) ಭೀಮರಾಯ ತಂದೆ ಶ್ರೀಮಂತ ನರೋಟಿ 4) ಲಕ್ಷ್ಮೀಕಾಂತ ತಂದೆ ಲಕ್ಕಪ್ಪ ಪಟ್ಟೇದಾರ  5) ದತ್ತಪ್ಪ ತಂದೆ ಚಂದ್ರಕಾಂತ ಡಾಂಗೆ   ಸಾ|| ಎಲ್ಲರೂ ದೇವಲಗಾಣಗಾಫೂರ ಬಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 2116 ಹಾಗು 52 ಇಸ್ಪೀಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ದೇವಲಗಾಣಗಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

23 June 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 23.06.2016 ರಂದು ರಾತ್ರಿ 12-30 ಗಂಟೆ ಸುಮಾರಿಗೆ ಮೃತ ಅಮೀತ ಇತನು ತನ್ನ ಮೋಟಾರ ಸೈಕಲ ನಂ ಕೆಎ-32-ಇಕೆ-4018 ನೇದ್ದನ್ನು ಪಂಡಿತ ರಂಗ ಮಂದಿರ ಕಡೆಯಿಂದ ಆನಂದ ಹೊಟೇಲ ಕಡೆಗೆ ಹೋಗುವ ಕುರಿತು ಮೋಟಾರ ಸೈಕಲ ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ರೋಡ ಎಡ ಬಲ ಕಟ್ ಹೊಡೆಯುತ್ತಾ ಹೋಗಿ ದಾರಿ ಮದ್ಯ ಬರುವ ಪ್ರವಾಸೊದ್ಯಮ ಇಲಾಖೆಯ ಕಾರ್ಯಾಲಯದ ಎದುರು ರೋಡ ಮೇಲೆ ಒಮ್ಮಲೇ ಬ್ರೇಕ ಹಾಕಿ ಮೋಟಾರ ಸೈಕಲ ಸ್ಕಿಡ್ ಮಾಡಿ ಅಪಘಾತ ಹೊಂದಿ ಉಪಚಾರ ಕುರಿತು 108 ಅಂಬುಲೇನ್ಸ ವಾಹನದಲ್ಲಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮದ್ಯ ರಾತ್ರಿ 1-10 ಗಂಟೆಯ ಮುಂಚಿತವಾಗಿ ಮೃತಪಟ್ಟಿದ್ದು ಇರುತ್ತದೆ. ಅಂತಾ  ಶ್ರೀ ಕೇಶವರಾವ ತಂದೆ ಕಮಲಾಕರರಾವ ಕುಲಕರ್ಣಿ ಸಾ : ರಾಘವೇಂದ್ರ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜೇವರಗಿ ಠಾಣೆ : ಶ್ರೀ ರಫೀಕ್ ತಂದೆ ಬಾಬುಸಾಬ್‌ ಲೋಹಾರ್‌ ಸಾ : ಖಾಜಾ ಕಾಲೋನಿ ಜೇವರಗಿ  ರವರು ದಿನಾಂಕ 21.06.2016 ರಂದು ಸಂಜೆ ಗೋಗಿ ಪೆಟ್ರೋಲ್‌ ಪಂಪ್ ಹತ್ತಿರ ಆಟೋ ರಿಕ್ಷಾ ನಂ ಕೆ.ಎ32 ಸಿ 1721 ನೇದ್ದರ ಚಾಲಕ ಮಹೆಬೂಬ ಈತನ ಆಟೋದಲ್ಲಿ ನಾನು ಮತ್ತು ತರೋನಮ್ ಇಬ್ಬರು ಕುಳಿತುಕೊಂಡು ಜೇವರಗಿ ಕಡೆಗೆ ಬರುತ್ತಿದ್ದಾಗ ಅದೇ ವೇಳೆಗೆ ಎದುರುಗಡೆಯಿಂದ ಬುಲೇರೋ ವಾಹನ ನಂ ಕೆ.ಎ 33 5575 ನೇ5ದ್ದರ ಚಾಲಕನು ತನ್ನ ಜೀಪ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ನಾವು ಕುಳಿತು ಬರುತ್ತಿದ್ದ ಆಟೋಗೆ ಡಿಕ್ಕಿ ಪಡಿಸಿ ನಮಗೆ ಭಾರಿ ಹಾಗು ಸಾದಾ ಗಾಯಪಡಿಸಿ ಅಪಘಾತದ ನಂತರ ಜೀಪ್ ಅನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ತೋಡಗಿದವರ ಬಂಧನ :
ಜೇವರಗಿ ಠಾಣೆ : ದಿನಾಂಕ 22.06.2016 ರಂದು ಮದ್ಯಾಹ್ನ  ಜೇವರಗಿ ಪಟ್ಟಣದ ಅಖಂಡೇಶ್ವರ ಎ.ಪಿ.ಎಮ್.ಸಿ  ಯಾರ್ಡ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ  ಕೆಲವು ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಹಣ ಪಣಕ್ಕೆ ಇಟ್ಟು ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಠಾಣೆರವರು  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜೇವರಗಿ ಪಟ್ಟಣದ ಅಖಂಡೆಶ್ವರ್ ಎ.ಪಿ.ಎಮ್.ಸಿ. ಮಾರ್ಕೇಟ್  ಯಾರ್ಡ ಕಡೆಗೆ ಹೊರಟು ಬಾತ್ಮೀ ಸ್ಥಳ ಹೋಗಿ ಅಲ್ಲಿ ಅಡತ ಅಂಗಡಿಯ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಕೆಲವು ಜನರು ಅಂಖಡೇಶ್ವರ ಮಾರ್ಕೇಟ್ ಯಾರ್ಡ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಹಣ ಪಣಕ್ಕೆ ಇಟ್ಟು ಅಂದರ ಬಹಾರ ಇಸ್ಪೆಟ ಜುಜಾಟ ಆಡುತ್ತಿರುವದನ್ನು ನೋಡಿ ಖಚಿತಪಡಿಸಿಕೊಂಡ  ದಾಳಿ ಮಾಡಿ ಹಿಡಿದು ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ 1) ಬಸಂತ ತಂದೆ ಮಲ್ಲಯ್ಯ  ಗಾಜರೇ ಸಾಃ ಮುಸ್ಲಿಂ ಚೌಕ ಜೇವರಗಿ  2) ಶಿವಶಂಕರ ತಂದೆ ಕಲ್ಲಪ್ಪಗೌಡ ಪಾಟೀಲ ಸಾಃ ಬಾಗವಾನಗಲ್ಲಿ ಜೇವರಗಿ 3)  ಇಮಾಮಸಾಬ ತಂದೆ ಗೂಡುಸಾಬ ಮುಲ್ಲಾ  ಸಾಃ ಕನಕದಾಸ ಚೌಕ ಜೇವರಗಿ 4) ಗೊಲ್ಲಾಳಪ್ಪ ತಂದೆ ಶರಣಪ್ಪ ಸುಂಠ್ಯಾಣ ಸಾಃ ಮದರಿ  5. ಶರಣಗೌಡ ತಂದೆ ನಾಗರೆಡ್ಡಿ ಪಾಟೀಲ ಸಾಃ ಮೂದಬಾಳ [ಕೆ] 6) ದೇವಿಂದ್ರಪ್ಪ ಗೌಡ ತಂದೆ ಮಲ್ಲಣ್ಣಗೌಡ ಜೇವರಗಿ ಸಾಃ ಶಾಂತ ನಗರ ಜೇವರಗಿ 7) ಬಸವರಾಜ ತಂದೆ ತಿಪ್ಪಣ್ಣಾ ಅವಂಟಿ, ಸಾಃ ಮದರಿ ಅಂಥಾ ತಿಳಿಸಿದ್ದು  ಸದರಿಯವರಿಂದ ನಗದು ಹಣ ಹೀಗೆ 17350/-ರೂ, 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಪೊಲೀಸ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ಓಡಿ ಹೋದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಈಗ ಸುಮಾರು  2-3 ದಿನಗಳಿಂದ ಕಲಬುರಗಿ ನಗರದಲ್ಲಿ ಕಪ್ಪು ಬಣ್ಣದ ಪಲ್ಸರ ಮೋಟಾರ ಸೈಕಲ ಮೇಲೆ ಇಬ್ಬರೂ ಯುವಕರು ಸರಗಳ್ಳತನ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದ ನಿಮಿತ್ಯ, ಈಗ  ಎರಡು ದಿವಸಗಳಿಂದ ಸ್ವತ್ತಿನ ಪ್ರಕರಣಗಳು ತಡೆ ಗಟ್ಟುವ ನಿಮಿತ್ಯ ಠಾಣಾ ವ್ಯಾಪ್ತಿಯಲ್ಲಿ ಮೋಟಾರ ಸೈಕಲ ಮೇಲೆ ಪೆಟ್ರೋಲಿಂಗ ಕರ್ತವ್ಯ ಮಾಡುತ್ತಿದ್ದು, ಎಂದಿನಂತೆ ದಿನಾಂಕ 21/06/2016 ರಂದು ಸಾಯಂಕಾಲ 5.00 ಗಂಟೆಯಿಂದ ಮೋಟಾರ ಸೈಕಲ ಮೇಲೆ ನಾನು ಮತ್ತು ಠಾಣಾ ಸಿಬ್ಬಂದಿಯವರಾದ ಶ್ರೀ ಪ್ರಭಾಕರ ಸಿಪಿಸಿ-634 ಇಬ್ಬರೂ ಕೂಡಿಕೊಂಡು ಠಾಣಾ ವ್ಯಾಪ್ತಿಯಲ್ಲಿ ಪಟ್ರೋಲಿಂಗ ಕರ್ತವ್ಯ ಮಾಡುತ್ತಾ ಸಮಯ ರಾತ್ರಿ 9.20 ಪಿ.ಎಮದ ಸುಮಾರಿಗೆ ಜಾಗೃತಿ ಕಾಲೋನಿಯಲ್ಲಿರುವ ವೀರಶೈವ ಕಲ್ಯಾಣ ಮಂಟಪ ಹತ್ತಿರ ಬಂದಾಗ ವೀರಶೈವ ಕಲ್ಯಾಣ ಮಂಟಪ ಪಕ್ಕದಲ್ಲಿ ಕತ್ತಲ್ಲಿನಲ್ಲಿ ಒಂದು ನಂಬರ ಪ್ಲೇಟ ಇಲ್ಲದ ಕಪ್ಪು ಬಣ್ಣದ ಪಲ್ಸರ ಮೋಟಾರ ಸೈಕಲ ನಿಂತಿದ್ದು, ನಾವು ಸ್ವಲ್ಪ ದೂರದಲ್ಲಿ ನಿಂತು ಸದರಿ ಮೋಟಾರ ಸೈಕಲ ಯಾರು ತೆಗದುಕೊಂಡು ಹೊಗುತ್ತಾರೆ ನೋಡುವ ಕುರಿತು ಕಾಯುತ್ತಾ ನಿಂತುಕೊಂಡಿದ್ದು. ಅಷ್ಟರಲ್ಲಿ ನಮಗೆ ಪರಿಚಯದ ಓಂ ನಗರದ ಮೂರು ಜನ ಹುಡುಗರು ಬಂದು ನಮ್ಮೊಂದಿಗೆ ಮಾತಾಡುತ್ತಾ ನಿಂತಿದ್ದರು. ಸ್ವಲ್ಪ ಸಮಯದ ನಂತರ ಕತ್ತಲಲ್ಲಿ ನಿಂತಿದ ಮೋಟಾರ ಸೈಕಲ ಹತ್ತಿರ ಒಬ್ಬ ವ್ಯಕ್ತಿ ಬಂದಿದ್ದು, ನಾವು ಆತನಿಗೆ ನೋಡಿ ಅಲ್ಲಿಗೆ ಹೋಗಿ ಆತನಿಗೆ ನಾನು ಮೋಟಾರ ಸೈಕಲ ಯಾರದು? ಏಕೆ ನಂಬರ ಹಾಕಿಸಿರುವುದಿಲ್ಲ ಅಂತಾ ಕೇಳಿದಾಗ, ಆತನು ನಾನು ಸರ್ ಮೊದಲು ಠಾಣೆಯಲ್ಲಿ ದೂರು ಸಲ್ಲಿಸಿದೇನಲ್ಲಾ ಅಕ್ಬರ ಹುಸೇನ ಯಾದುಲ್ಲಾ ಕಾಲೋನಿ ನಿವಾಸಿ ಅಂತಾ ತನ್ನ ಪರಿಚಯ ಮಾಡಿಕೊಂಡು ನಂತರ ಮೋಟಾರ ಸೈಕಲಕ್ಕೆ ಹೊಸದಾಗಿ ಕಲರಿಂಗ್ ಮಾಡಿಸಿರುತ್ತೇನೆ ಅದಕ್ಕೆ ನಂಬರ ಇನ್ನೂ ಹಾಕಿಸಿರುವುದಿಲ್ಲ ಅಂತಾ ತಿಳಿಸಿದನು ಅದಕ್ಕೆ ನಾನು ಆಯಿತು ಮೋಟಾರ ಸೈಕಲಕ್ಕೆ ಸಂಬಂಧಿಸಿದಂತೆ ಕಾಗದ ಪತ್ರಗಳನ್ನು ತೋರಿಸು ಅಂತಾ ಅಂದಾಗ ತಡಬಡಿಸುತ್ತಾ ಮನೆಯಲ್ಲಿ ಇರುತ್ತವೆ ಸರ್ ಅಂತಾ ತಿಳಿಸಿದನು. ಸದರಿಯವನ ಮೇಲೆ ಹಾಗೂ ಮೋಟಾರ ಸೈಕಲ ಮೇಲೆ ಬಲವಾದ ಸಂಶಯ ಬಂದಿದ್ದು, ನಾನು ಆತನಿಗೆ ಮೊಟಾರ ಸೈಕಲ ಠಾಣೆಗೆ ತೆಗೆದುಕೊಂಡು ಹೊಗುತ್ತೇವೆ ನಂತರ ಕಾಗದ ಪತ್ರಗಳನ್ನು ತೋರಿಸಿ ಮೋಟಾರ ಸೈಕಲನ್ನು ತೆಗೆದುಕೊಂಡು ಹೊಗುವಂತೆ ತಿಳಿಸಿದಾಗ ಆತನು ನಾನೇ ಮೋಟಾರ ಸೈಕಲ ಠಾಣೆಗೆ ತೆಗೆದುಕೊಂಡು ಹೊಗುತ್ತೇನೆ ಬೀಡಿ ಸರ್ ಅಂತಾ ಅಂದಾಗ ನಾನು ನನ್ನ ಜೋತೆಯಲ್ಲಿದ್ದ ಸಿಬ್ಬಂದಿಯವರಾದ ಶ್ರೀ ಪ್ರಭಾಕರ ಸಿಪಿಸಿ-634 ರವರನ್ನು ಮೋಟಾರ ಸೈಕಲ ಪೊಲೀಸ ಠಾಣೆಗ ಹಚ್ಚಿ ಬನ್ನಿ ಅಂತಾ ಹೇಳಿ ಮೋಟಾರ ಸೈಕಲ ಹಿಂದೆ ಕುಳಿತುಕೊಳ್ಳಲು ತಿಳಿಸಿದ್ದುಆಗ ಅಕ್ಬರ ಹುಸೇನ ಈತನು ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುತ್ತಿದ್ದು, ಹಿಂದುಗಡೆ ನಮ್ಮ ಸಿಬ್ಬಂದಿಯವರು ಕುಳಿತ್ತಿದ್ದರು. ಮೋಟಾರ ಸೈಕಲ ಸ್ವಲ್ಪ ದೂರದಲ್ಲಿ ಮೇನ್ ರೋಡಿಗೆ ಹೋಗಿ ನಿಂತಿದ್ದು ನಾನು ದೂರದಲ್ಲಿಯೇ ನಿಂತು ನೋಡುತ್ತಿದ್ದಾಗ ಅಕ್ಬರ ಈತನು ನಮ್ಮ ಸಿಬ್ಬಂದಿಯಾದ ಪ್ರಭಾಕರ ಇವರಿಗೆ ಮೋಟಾರ ಸೈಕಲ ಮೇಲಿಂದ ಇಳಿಸಿದ್ದನ್ನು ಗಮನಿಸಿ ನಾನು ಮತ್ತು ನನ್ನ ಜೋತೆಯಲ್ಲಿದ್ದ ಓಂ ನಗರದ ಹುಡುಗರು ಕೂಡಿಕೊಂಡು ಅಲ್ಲಿಗೆ ನಡೆದುಕೊಂಡು ಹೋಗುವಷ್ಟರಲ್ಲಿ ಅಕ್ಬರ ಹುಸೇನ ಈತನು ಸಿಬ್ಬಂದಿಯಾದ ಪ್ರಭಾಕರ ಸಿಪಿಸಿ-634 ಈತನಿಗೆ ಕೈಯಿಂದ ಹೊಟ್ಟೆಯಲ್ಲಿ ಮುಷ್ಠಿಮಾಡಿ ಗುದ್ದಿ ನಂತರ ನೂಕಿಸಿಕೊಟ್ಟು ನಾವು ನೋಡು ನೋಡುತ್ತಿದಂತೆ ಪಲ್ಸರ ಮೋಟಾರ ಸೈಕಲ ತೆಗದುಕೊಂಡು ಹೊದನು. ನಾವು ಆತನಿಗೆ ಹಿಡಿಯಲು ಬೆನ್ನು ಹತ್ತಿದಾಗ ನಮಗೆ ಸಿಗದೆ ವೇಗವಾಗಿ ಸೇಡಂ ರಿಂಗ ಕಡೆಗೆ ಹೋದನು. ನಂತರ ಸಿಬ್ಬಂದಿಯವರಾದ ಪ್ರಭಾಕರ ಸಿಪಿಸಿ-634 ರವರಿಗೆ ಏನಾಯಿತ್ತು ಅಂತಾ ವಿಚಾರಿಸಿದಾಗ ಅವರು ಹೇಳಿದೆನೆಂದರೆ ಮೋಟಾರ ಸೈಕಲನ್ನು ಠಾಣೆಗೆ ತೆಗೆದುಕೊಂಡು ಹೊಗುವಾಗ ಸ್ವಲ್ಪ ದೂರು ಹೊಗುತ್ತಿದಂತೆ  ಅಕ್ಬರ ಹುಸೇನ ಈತನು ವಾಹನ ಚಾಲ್ತಿಯಲ್ಲಿಟ್ಟು ಮೋಟಾರ ಸೈಕಲ ಯಿಂದ ಏನೋ ಒಂದು ತರಹದ ಅವಾಜ್ ಬರುತ್ತಿದ್ದೆ ಸ್ವಲ್ಪ ಕೇಳಗೆ ಇಳಿರಿ ಅಂತಾ ಕೇಳಗೆ ಇಳಿಸಿದಾಗ ನನ್ನ ಗಮನ ವಾಹನದ ಕಡೆಯಿದ್ದಾಗ ಒಮ್ಮೆಲೆ ತನ್ನ ಕೈಯಿಂದ ನನ್ನ ಹೊಟ್ಟೆಗೆ ಹೊಡೆದು ನನಗೆ ನೂಕಿಸಿಕೊಟ್ಟು ನಾನು ಸುಧಾರಿಸಿಕೊಳ್ಳುವಷ್ಟರಲ್ಲಿ ವಾಹನದ ಮೇಲೆ ಪರಾರಿಯಾದನು. ನಂತರ ಸಿಬ್ಬಂದಿಯಾದ ಪ್ರಭಾಕರ ಇವರು ಚೇತರಿಸಿಕೊಂಡಿದ್ದು ಆಸ್ಪತ್ರೆಗೆ ಹೋಗುವ ಅವಶ್ಯಕತೆಯಿಲ್ಲವೆಂದು ತಿಳಿಸಿದರು. ಘಟನೆ ರಾತ್ರಿ 9.30 ಗಂಟೆ ಸುಮಾರಿಗೆ ನಡೆದಿರುತ್ತದೆ. ನಂತರ ನಾನು ಇತರೆ ಸಿಬ್ಬಂದಿಯೊಂದಿಗೆ ಆತನನ್ನು ಪತ್ತೆ ಮಾಡುವ ಕಾರ್ಯದಲ್ಲಿದ್ದಾಗ ಸುಮಾರು 10.00 ಪಿಎಂ ಕ್ಕೆ ಮೊಬೈಲ್ ನಂ. 9886563888 ನಂಬರದಿಂದ ನನ್ನ ಮೊಬೈಲ್ ನಂ. 9480803551 ನಂಬರಿಗೆ ಕರೆ ಮಾಡಿ ಅಕ್ಬರ್ ಈತನು ನನಗೆ ನೋಡಿಕೊಳ್ಳುವುದಾಗಿ ಬೆದರಿಕೆ ಹಾಕಿರುತ್ತಾನೆ. ಅಂತಾ ರಾಘವೇಂದ್ರ ಪಿ.ಎಸ್.ಐ (ಕಾಸೂ)  ಮಾಹಾತ್ಮಾ ಬಸವೇಶ್ವರ ನಗರ ಠಾಣೆ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಮಾಡಿ ಅತ್ಯಾಚಾರ ಮಾಡಿದ ಪ್ರಕರಣ :
ಆಳಂದ ಠಾಣೆ : ಕುಮಾರಿ ಇವರಿಗೆ ಅಭಿಲಾಶ ತಂದೆ ರಮೇಶ ಕಾಂಬಳೆ ಇವನು ದಿನಾಂಕ:06/06/2016 ರಂದು ನನಗೆ ಉಮರ್ಗಾಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಅದೇ ದಿವಸ ಸಾಯಂಕಾಲ ಜಬರದಸ್ತಿ ಮಾಡಿ ಪೂನಾಕ್ಕೆ ಕರೆದುಕೊಂಡು ಹೋಗಿ ಅವನ ಸ್ನೇಹಿತನ ರೂಮಿನಲ್ಲಿ ಇಟ್ಟು ದಿನಾಂಕ:07/06/2016 ರಂದು ರಾತ್ರಿ ಸಮಯದಲ್ಲಿ ಮಲಗಿಕೊಂಡಾಗ ನನಗೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿ ಜಬರಿ ಸಂಭೋಗ ಮಾಡಲು ಬಂದಾಗ ನಾನು ಮದುವೆಯಾದ ನಂತರ ಸಂಭೋಗ ಮಾಡುವಂತೆ ಹೇಳಿದರೂ ಜಬರದಸ್ತಿ ಮಾಡಿ ಜಬರಿ ಸಂಭೋಗ ಮಾಡಿರುತ್ತಾನೆ. ನಂತರ ದಿನಾಂಕ:10/06/2016 ರಂದು ಮರಳಿ ಆಳಂದಕ್ಕೆ ಕರೆದುಕೊಂಡು ಬಂದು ಆಳಂದ ಪಟ್ಟಣದ ಹಳೆಯ ವಾಟರ್ ಟ್ಯಾಂಕ ಹತ್ತಿರ ಇವರು ಅಭಿಲಾಷ ಅವರ ಮನೆಯಲ್ಲಿ ತಂದು ಇಟ್ಟು ದಿ:11/06/2016 ರಂದು ನಾಳೆ ರಜಿಸ್ಟರ್ ಮ್ಯಾರೇಜ ಮಾಡಿಕೊಳ್ಳೊಣ ಎಂದು ನನಗೆ ನಂಬಿಸಿ ಮೋಸ ಮಾಡಿ ಅಂದು ರಾತ್ರಿ ಜಬರಿ ಸಂಬೋಗ ಮಾಡಿರುತ್ತಾನೆ. ನಂತರ ದಿನಾಂಕ:12/06/2016 ರಂದು ಬೇಳಿಗ್ಗೆ ಅಭಿಲಾಷ  ಮತ್ತು ಅವಳ ತಾಯಿ ಪ್ರಭಾವತಿ ಇವರು ಟೀನ್ ಶೇಡಿನ ಬಾಗಿಲು ಮುಚ್ಚಿ ಹೊಡೆ-ಬಡೆ ಮಾಡಿ  ಅವಾಚ್ಯವಾಗಿ  ಬೈದು ನಿನ್ನ ತಾಯಿ ಹತ್ತಿರ ಹೋಗು ನಾನು ಮದುವೆ ಮಾಡಿಕೊಳ್ಳುವದಿಲ್ಲಾ. ನೀನು ಇಲ್ಲೆ ಇದ್ದರೆ ನಿನ್ನ ಜೀವ ಸಹಿತ ಉಳಿಸುವದಿಲ್ಲಾ ಅಂತಾ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.