POLICE BHAVAN KALABURAGI

POLICE BHAVAN KALABURAGI

31 July 2015

Kalaburgi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಜೇವರ್ಗಿ ಠಾಣೆ : ದಿನಾಂಕ 30.07.2015 ರಂದು ಕೆಲ್ಲೂರ ಗ್ರಾಮದ ಚರಬಸವೇಶ್ವರ ಗುಡಿಯ ಕಟ್ಟಿ ಹತ್ತಿರ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೇಟ ಎಲೆಗಳ ಸಹಾಯದಿಂದ ಅಂದಾರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ ಜೇವರಗಿ ಪೊಲಿಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಿಪಿಐ ಸಾಹೇಬರ ಮಾರ್ಗದರ್ಶನದಲ್ಲಿ ಕೆಲ್ಲರೂ ಗ್ರಾಮದ ಚರಬಸವೇಶ್ವರ ಗುಡಿಯ ಕಟ್ಟಿ ಹತ್ತಿರ ಖುಲ್ಲಾ ರೋಡಿನಲ್ಲಿ ಜೀಪ ನಿಲ್ಲಿಸಿ ನಡೆದುಕೊಂಡು ಹೋಗಿ ಸದರಿ ಗೋಡೆ ಮರೆಯಾಗಿ ನಿಂತು ನೋಡಲು ಗುಡಿಯ ಕಟ್ಟೆಯ ಹತ್ತಿರ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವರಿಗೆ ಅಂಗ ಶೋಧನೆ ಮಾಡಿ ಅವರ ಹೆಸರು ವಿಳಾಸ ವಿಚಾರಿಸಲು ಅವರು ತಮ್ಮ ಹೆಸರು 1. ಭೀಮಾಶಂಕರ್ ತಂದೆ ಚಂದಪ್ಪ ಟಣಕೇದಾರ 2. ಮಹ್ಮದ ಯುಸುಫ್ ತಂದೆ ಲಾಡ್ಲೇಸಾಬ 3. ನಾಗಣ್ಣ ತಂದೆ ಪ್ಯಾಟೆಪ್ಪ ದೇಸಾಯಿ 4. ಇಮಾಮಸಾಬ ತಂದೆ ಸೈಪಾನ್ಸಾಬ ಬಳಗಾರ 5. ರಾಜಾಸಾಬ ತಂದೆ ಇಮಾಮಸಾಬ ಶೇಖ ಸಿಂಧಿ 6. ಮಲ್ಲಿಕಾರ್ಜುನ್ ತಂದೆ ಚಂದ್ರಶೇಖರ್ ಸುಂಟ್ಯಾಣ 7. ಗೋಪಾಲ ತಂದೆ ಸೈಬಣ್ಣ ಟಣಕೇದಾರ ಸಾ : ಎಲ್ಲರು ಕಲ್ಲೂರ ಇವರುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ನಗದು ಹಣ 1665/ ರೂ ಮತ್ತು 52 ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ಬಸವರಾಜ ತಂದೆ ಈರಯ್ಯ ಇಂಜಳ್ಳಿ  ಸಾಃ ಲಕ್ಷ್ಮಿ ನಾರಾಯಣ ಮಂದಿರ ರೋಡ ಸೇಡಂ ತಾಃ ಸೇಡಂ. ರವರು ಅಶೋಕ ಲೈಲ್ಯಾಂಡ ಲಾರಿ ಇದ್ದು ಅದರ ನಂ ಕೆ.ಎ.25.3024 ನೇದ್ದು ಇರುತ್ತದೆ. ಅದನ್ನು ದಿನಾಲು ನಾನು ಸರಕು ಸಾಗಾಟ  ಮಾಡಿ ರಾತ್ರಿ ಲಾರಿ ಚಾಲಾಯಿಸಿಕೊಂಡು ಬಂದು ಸೇಡಂ ಪಟ್ಟಣದ  ಎ.ಪಿ.ಎಮ್.ಸಿ.ಯಲ್ಲಿ ನಿಲ್ಲಿಸುತ್ತೇನೆ. ಎಂದಿನಂತೆ ದಿನಾಂಕ 29-07-2015 ರಂದು ರಾತ್ರಿ 8-30 ಗಂಟೆಗೆ ನನ್ನ ಲಾರಿ ಎ.ಪಿ.ಎಮ್.ಸಿ.ಯಲ್ಲಿ ನಿಲ್ಲಿಸಿ ಮನೆಗೆ ಹೋಗಿರುತ್ತೇನೆ. ದಿನಾಂಕ:30-07-2015 ರಂದು ಎ.ಪಿ.ಎಮ್.ಸಿ ಹತ್ತಿರ ಹೋಗಿ ನನ್ನ ಲಾರಿ ನೋಡಲಾಗಿ ನಾನು ನಿಲ್ಲಿಸಿದ ಸ್ಥಳದಲ್ಲಿ ಲಾರಿ ಇರಲಿಲ್ಲ ಆದರಿಂದ ಗಾಬರಿಯಾಗಿ ನನ್ನ ಲಾರಿ ಎಲ್ಲಾ ಕಡೆಗೆಗೆ ಹುಡುಕಾಡಿದರು ಸಿಗಲಿಲ್ಲ .ಈ ವಿಷಯದ ಬಗ್ಗೆ ನನಗೆ ಪರಿಚಯವಿರುವ ಲಾರಿ ಮಾಲಿಕರಿಗೆ ಹಾಗೂ ಲಾರಿ ಡ್ರೈವರಗಳಿಗೆ ಪೋನ ಮಾಡಿ ತಿಳಿಸದರು ಸಿಗಲಿಲ್ಲ. ನಂತರ ನನಗೆ ಪರಿಚಯವಿರುವ ರವಿ ಡ್ರೈವರ ಸಾಃ ತರನಳ್ಳಿ ಕ್ರಾಸ ಸೇಡಂ ಇತನು ನನಗೆ ಪೋನ ಮಾಡಿ ತಿಳಿಸಿದೆನೆಂದರೆ, ನಿಮ್ಮ  ಲಾರಿಯನ್ನು ಸೇಡಂ ಪುರಸಭೆಯ ಕಸ ವಿಲೆವಾರಿ ಮಾಡುವ ಸ್ಥಳದಲ್ಲಿ ಇರುತ್ತದೆ ಅಂತ ತಿಳಿಸಿದಾಗ ಆಗ ನಾನು ಮತ್ತು ನಜೀರ ತಂದೆ ಚಾಂದ ಚುನ್ನಾ ಹಾಗೂ ಮಾಶಪ್ಪ ತಂದೆ ಖಂಡೆಪ್ಪ ಯಾದಗಿರಿ ಜಬ್ಬರ ತಂದೆ ಸಮಾದ ಎಲ್ಲರೂ ಕೂಡಿ ಅಲ್ಲಿಗೆ ಹೋಗಿ ನೋಡಲಾಗಿ  ರವಿ ಡ್ರೈವರ ಇತನು ಪೋನ ಮಾಡಿ ತಿಳಿಸಿದ ವಿಷಯ ನಿಜವಿತ್ತು. ಯಾರೋ ಕಳ್ಳರು ಟೈರು ಕಳವು ಮಾಡುವ ಉದ್ದೇಶದಿಂದ ನಮ್ಮ ಲಾರಿಯನ್ನು ಸೇಡಂ ಎ.ಪಿ.ಎಮ್.ಸಿಯಿಂದ ಚಲಾಯಿಸಿಕೊಂಡು ಹೋಗಿ ಸೇಡಂ ಪುರಸಭೆ ಕಸ ವಿಲೆವಾರಿ ಮಾಡುವ  ಸ್ಥಳದಲ್ಲಿ ಬಿಟ್ಟು ಲಾರಿಯ ಡಿಕ್ಸ ಸಮೇತ  ಆರು ಟೈಯರಗಳನ್ನು ಬಿಚ್ಚಿಕೊಂಡು ಕಳವು  ಮಾಡಿಕೊಂಡು ಹೋಗಿರುತ್ತಾರೆ. ಇದರಿಂದ ನನಗೆ ಲಾರಿಯ ಡಿಕ್ಸ ಸಮೇತ  6 ಟೈಯರಗಳ ಒಟ್ಟು ಅ..ಕಿ 1,00,000 ರೂಪಾಯಿಗಳು  ಆಗುತ್ತದೆ. ಅದನ್ನು ಯಾರೋ ಕಳ್ಳರು  ರಾತ್ರಿ ಹೊತ್ತಿನಲ್ಲಿ  ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
ವರದಕ್ಷಣೆ ಕಿರುಕಳ ಪ್ರಕರಣ :
ಚಿತ್ತಾಪೂರ ಠಾಣೆ : ಶ್ರೀಮತಿ ಸಂಗೀತಾ ಗಂಡ ದೇವಿಂದ್ರ ಬಾಬನೂರ ಸಾ: ಕುರಕುಂಟಾ ತಾ: ಸೇಡಂ . ಹಾ.ವ.: ಭವಾನಿ ನಗರ ಕಲಬುರಗಿ ಇವರನ್ನು  ದಿನಾಂಕ 01-05-2013 ರಂದು ಸೇಡಂ ತಾಲ್ಲೂಕಿನ ಕುರಕುಂಟಾ ಗ್ರಾಮ ಹಾ> ವ.: ಭವಾನಿ ನಗರ ಕಲಬುರಗಿಯ ನಿವಾಸಿಯಾದ ದೇವೀಂದ್ರ ತಂದೆ ಬಾಬುರಾವ ಇವನೊಂದಿಗೆ ನಮ್ಮ ತಂದೆ ತಾಯಿ ಒಂದುವರೆ ತೊಲೆ ಬಂಗಾರ , 1500 ರೂ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಮನೆ ಬಳಕೆ ಸಾಮಾನುಗಳು ಇತರೆ ಸೇರಿ 3 ಲಕ್ಷ ರೂ ಗಳು ಖರ್ಚಾಗಿದ್ದು , ಮದುವೆಯಾದ 2 ತಿಂಗಳವರೆಗೆ ನನ್ನ ಗಂಡ ದೇವಿಂದ್ರ ಅತ್ತೆ ಸಿದ್ದಮ್ಮ ಇಬ್ಬರೂ ನನ್ನೊಂದಿಗೆ ಚೆನ್ನಾಗಿದ್ದು ನಂತರ ಇಬ್ಬರೂ ವಿನಾ ಕಾರಣ ಮಾನಸಿಕವಾಗಿ & ದೈಹಿಕವಾಗಿ ನಿನು ಅಡುಗೆ ಚೆನ್ನಾಗಿ ಮಾಡಿಲ್ಲ, ಬಟ್ಟೆ ಸರಿಯಾಗಿ ತೊಳೆದಿಲ್ಲಾ , ನೀನು ನನಗೆ ತಕ್ಕ ಹೆಂಡತಿಯಲ್ಲಾ , ಅಂತ ವಗೈರೆ ಕಿರುಕುಳ ಕೂಡಲು ಪ್ರಾರಂಭಿಸಿದ್ದು , ಈ ವಿಷಯ ನಮ್ಮ ತಂದೆ ತಾಯಿಗೆ ಹೇಳಿದಾಗ ಸಂಬಳಿಸಿಕೊಂಡು ಹೋಗು ಅಂತ ಹೇಳಿದರು. ನನ್ನ ಗಂಡ ಮತ್ತು ಅತ್ತೆ ವರದಕ್ಷಿಣೆ , ಬಂಗಾರ ಕಡಿಮೆ ಕೊಟ್ಟಿದ್ದಾರೆ , ಇನ್ನೂ ನಿಮ್ಮ ತಂದೆ ತಾಯಿಯಿಂದ 5 ತೊಲೆ ಬಂಗಾರ ಎರಡು ಲಕ್ಷ ರೂ ಹಣ ತೆಗೆದುಕೊಂಡು ಬಾ , ಇಲ್ಲಾ ಅಂದರೆ ನೀನು ನಿನ್ನ ತವರು ಮನೆಗೆ ಹೋಗು ಅಂತ ರಾತ್ರಿ ವೇಳೆ ಹೊಡೆ ಬಡೆ ಮಾಡಿದ್ದರಿಂದ ನಮ್ಮ ತಂದೆ ತಾಯಿಯಿಂದ ಅವರಿಗೆ 50.000/- ರೂ ಕೊಡಿಸಿದ್ದು , ಇಷ್ಟು ಸಾಕಾಗುವುದಿಲ್ಲ ಅಂತ ಕಿರುಕುಳ ನೀಡಿದ್ದರಿಂದ , ಕಿರುಕುಳ ತಾಳಲಾರದೆ ನನ್ನ ತವರು ಮನೆಯಲ್ಲಿ ಬಂದು ಉಳಿದುಕೊಂಡಿದ್ದು ದಿನಾಂಕ 26-07-2015 ರಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ನನ್ನ ಗಂಡ ದೇವಿಂದ್ರ , ಅತ್ತೆ ಸಿದ್ದಮ್ಮ , ಇಬ್ಬರೂ ಮರಗೋಳ ಗ್ರಾಮದಲ್ಲಿರುವ ನನ್ನ ತಾಯಿ ಮನೆಗೆ ಬಂದು ನನ್ನ ಗಂಡ ದೇವಿಂದ್ರ ಈತನು ನಾನು ಗಾಡಿ ತೆಗೆದುಕೊಳ್ಳಬೇಕು ಅಂತ ಹಣ ಕೋಡಿಸು ಭೋಸಡಿ , ರಂಡಿ ಅಂತ ಬೈದು ಕೂದಲು ಹಿಡಿದು ಜೊಗ್ಗಾಡಿ ಹೊಡೆದಿದ್ದು , ಅತ್ತೆಯಾದ ಸಿದ್ದಮ್ಮ ಈ ರಂಡಿಗೆ ಎಳೆದುಕೊಂಡು ನಡಿ ಅಲ್ಲಿ ನಮ್ಮ ಮನೆಯಲ್ಲಿ ಮಾಡೋಣ ಅಂತ ಹೊಡೆದಿದ್ದು ,ಬಿಡಿಸಲು ಬಂದ ನನ್ನ ತಾಯಿಗೆ  ನನ್ನ ಗಂಡನಾದ ದೇವಿಂದ್ರ ಈತನು ಎ ರಂಡಿ ನಿನ್ನ ಮಗಳಿಗೆ ಇಲ್ಲೆ ಇಟ್ಟು ಕೊಂಡಿದ್ದಿ ರಂಡಿ ಅಂತ ಅವಳ ಕೂದಲು ಹಿಡಿದು ಜೊಗ್ಗಾಡಿ ಸೀರೆ ಹಿಡಿದು ಎಳೆದಾಡಿ ಗಂಡ ಅತ್ತೆ ಇಬ್ಬರೂ ಅಲ್ಲಿಯಿಂದ ಹೋಗುವಾಗ ಇವತ್ತು ಈ ಗೌಡರು ಬೀಡಿಸ್ಯಾರ ಅಂತ ನೀವು ಉಳಿದಿದ್ದಿರಿ , ನಿಮಗೆ ಒಂದಿಲ್ಲಾ ಒಂದು ದಿವಸ ಖಲಾಸ ಮಾಡಿಯೇ ಬೀಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿ ಹೊರಟು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿತ್ತಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,