POLICE BHAVAN KALABURAGI

POLICE BHAVAN KALABURAGI

30 September 2014

Gulbarga District Reported Crimes

ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಡಾ||  ವಿರುಪಾಷಯ್ಯ ತಂದೆ ಶಿವಲಿಂಗಯ್ಯ ಸಾ|| ಮನೆ ನಂ 10-934/18 & 19/16  ಶಿವಕೃಪಾ ನಿಲಯ ಮಹಾಲಕ್ಷ್ಮೀ ಲೇಔಟ ಬ್ರಹ್ಮಪೂರ ಗುಲಬರ್ಗಾ ಇವರು ದಿನಾಂಕ|| 07-09-2014 ರಂದು 9.00 ಗಂಟೆಗೆ ನಮ್ಮ ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋಗುವಾಗ ನಮ್ಮ ಮನೆಯಲ್ಲಿ ಹಿಂದಿನ ಕೋಣೆಗಳಲ್ಲಿ ಬಾಡಿಗೆ ಇದ್ದ ಮನೋಹರ ಜೈನ  ಇವರಿಗೆ ನಮ್ಮ ಮನೆ ಕಡೆ ನಿಗಾ ಇಡುವಂತೆ ಹೇಳಿ ನಮ್ಮ  ಮನೆಯ ಸಿಟ್ಟೌಟ್ ನಲ್ಲಿ ಬೋರವೆಲ್  ಸ್ಟಾರ್ಟರ್  ಇರುವದರಿಂದ ಕೀಲಿ ಕೈ ಕೊಟ್ಟು ಹೊಗಿರುತ್ತೆನೆ  ನಾವು ಬೆಂಗಳೂರಿನಲ್ಲಿದ್ದಾಗ ನಮ್ಮ ಮನೆಯಲ್ಲಿ ಬಾಡಿಗೆ ಇದ್ದ ಮನೋಹರ ಜೈ ಇವರು ದಿನಾಂಕ 26-09-2014 ರಂದು ಬೆಳಗ್ಗೆ 6-00 ಗಂಟೆಗೆ  ನನಗೆ ಮೋಬೈಲ್  ಫೋನನಿಂದ ತಿಳಿಸಿದೇನೆಂದರೆ  ನಿನ್ನೆ ದಿನಾಂಕ|| 25-09-2014 ರಂದು ರಾತ್ರಿ  10-30 ಗಂಟೆಗೆ  ಸಿಟ್ಟೌಟ್ ಕೀಲಿ ತೆಗೆದು ಬೋರವೆಲ್ ಚಾಲು ಮಾಡಿ ಅಂದಾಜು 10 ನಿಮಿಷ ದಲ್ಲಿ  ಬಂದು ಮಾಡಿ ಮತ್ತೆ ಬೀಗ್  ಹಾಕಿ  ಹೋಗಿದ್ದು  ಇಂದು ಬೆಳಗ್ಗೆ 06-00 ಗಂಟೆಗೆ ನೋಡಲು ಮುಖ್ಯ ಬಾಗಿಲಕೊಂಡಿ ಮುರಿದಿದ್ದು  ಮತ್ತು ಒಳಗಿನ  ಬಾಗಿಲ  ಕೀಲಿ ಮುರಿದಿದ್ದು  ಕಾಣುತ್ತಿದೆ  ಎಂದು ಕೇಳಿದಾಗ  ನೀವು ಒಳಗೆ ಹೋಗಿ ನೋಡಿರಿ ಎನಾಗಿದೆ ಮತ್ತು ಬಾಗಿಲ  ಕೊಂರಿ ರಿಪೇರಿ ಮಾಡಿಸಿರಿ  ಎಂದು ಹೇಳಿದಾಗ  ಅವರು ತಿಳಿಸಿದೇನೆಂದರೆ ಮನೆಯಲ್ಲಿದ್ದ  ಎಲ್ಲಾ ಅಲ್ಮಾರಿಗಳು ತೆರೆದಿದ್ದು  ಎಲ್ಲಾ ಸಾಮಾನುಗಳು ಚಿಲ್ಲಪಿಲ್ಲಿಯಾಗಿ ಬಿದ್ದಿರುತ್ತದೆ ಅಂತಾ ತಿಳಿಸಿದ್ದಾರೆ  ನಾನು ಮತ್ತು ನನ್ನ ಹೆಂಡತಿ ಬೆಂಗಳೂರಿನಿಂದ  ನಿನ್ನೆ  ದಿನಾಂಕ || 29-09-2014 ರಂದು ಬೆಳಗ್ಗೆ  09-30 ಗಂಟೆಗೆ ಗುಲಬರ್ಗಾಕ್ಕೆ  ಬಂದು ನಮ್ಮ ಮನೆಯನ್ನು  ನೋಡಲು ನಮ್ಮ ಮನೆಯ ಕೀಲಿ ಮುರಿದಿದ್ದು  ಮನೆಯ ಒಳಗಡೆ ಹೋಗಿ ನೋಡಲು ಬೆಡ್ ರೂಮಿನಲ್ಲಿಯ ನಾಲ್ಕು ಅಲ್ಮಾರಿಗಳ ಕೀಲಿ ಮುರಿದಿದ್ದು  ಎಲ್ಲಾ ಸಮಾನುಗಳು ಚಿಲ್ಲಪಿಲ್ಲಿಯಾಗಿದ್ದು ಅಲ್ಮಾರಿದಲ್ಲಿದ್ದ  ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಒಟ್ಟು 810000/- ರೂ. ಬೆಲೆ ಬಾಳುವವನ್ನು ಯಾರೋ ಅಪರಿಚಿತ ಕಳ್ಳರು ದಿನಾಂಕ|| 25-09-2014 ರಂದು ರಾತ್ರಿ 10-30 ಗಂಟೆಯಿಂದ ದಿನಾಂಕ|| 26-09-2014  ರ ಬೆಳಗಿನ ಜಾವ 6 ಗಂಟೆಯ ಅವಧಿಯಲ್ಲಿ ಮನೆಯ ಬಾಗಿಲು ಕೊಂಡಿ ಹಾಗು ಕೀಲಿ ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಅಲ್ಮಾರಗಳ ಕೀಲಿ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟ ನಿರತ ವ್ಯಕ್ತಿಗಳ ಬಂಧನ :
ದೇವಲಗಾಣಗಾಪೂರ ಠಾಣೆ : ದಿನಾಂಕ: 29-09-2014 ರಂದು ಸ್ಥಳಿಯ ದೇವಲಗಾಣಗಾಪೂರ ಗ್ರಾಮದ ಲಾಡ್ಲೇಮಶಾಕ ದರ್ಗಾದ  ಹತ್ತಿರ ನಾಲ್ಕು ಜನರು ದುಂಡಾಗಿ ಕುಳಿತು ಹಣ ಪಟಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಗಾಣಗಾಪೂರ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಇಸ್ಪೇಟ ಜೂಜಾಟ ಆಡುತಿದ್ದವರನ್ನು ಹಿಡಿದುಕೊಂಡು ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1] ಶಾಬುದ್ದೀನ ತಂದೆ ಅಲ್ಲಾಬಾಷಾ ಜೋಗೂರ 2] ಮಹ್ಮದ್ ಹಾಜಿ ತಂದೆ ಹುಸೇನಸಾಬ ಸೌದಾಗಾರ 3] ಕಲ್ಲಪ್ಪ ತಂದೆ ಯಲ್ಲಪ್ಪ ಪೂಜಾರಿ  4] ಅಂಬಾಜಿ ತಂದೆ ತುಕರಾಮ ಯಂಕಂಚಿ, ಸಾ|| ಎಲ್ಲರೂ ದೇವಲಗಾಣಗಾಪೂರ ಗ್ರಾಮ ಅಂತಾ ತಿಳಿಸಿದ್ದು  ಸದರಿಯವರಿಂದ ನಗದು ಹಣ  1220-00 ರೂ ಮತ್ತು 52 ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಮರಳಿ ದೇವಲಗಾಣಗಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಲಕ್ಷ್ಮಣ ತಂದೆ ತುಳಸಿರಾಮ ಚವ್ಹಾಣ ಸಾ|| ಮಾದಾಬಾಳ ತಾಂಡಾ ಇವರು ದಿನಾಂಕ 29-09-2014 ರಂದು ಸಾಯಂಕಾಲ 4:15 ಗಂಟೆ ಸುಮಾರಿಗೆ ನಮ್ಮ ತಾಂಡಾದ ಆನಂದ ತಂದೆ ಲಕ್ಷ್ಮಣ ಚವ್ಹಾಣ ಎಂಬಾತನು ಬಳೂರ್ಗಿ ಕಡೆಯಿಂದ ತನ್ನ ಟಂ ಟಂ ತಗೆದುಕೊಂಡು ಬಂದು ನನಗೆ ತಿಳಿಸಿದ್ದೇನೆಂದರೆ ಅಫಜಲಪೂರ ಬಳೂರ್ಗಿ ರೋಡಿಗೆ ಎಲ್.ಎಸ್. ಜಮಾದಾರ ರವರ ಹಳೆ ಕಂಕರ ಮಶೀನ ಹತ್ತಿರ ನಾನು ನನ್ನ ಟಂ ಟಂ ತಗೆದುಕೊಂಡು ದುಧನಿ ಕಡೆಯಿಂದ ನಮ್ಮ ತಾಂಡಾಕ್ಕೆ ಸಾಯಂಕಾಲ 4:00 ಗಂಟೆಯ ಸುಮಾರಿಗೆ ಬರುತ್ತಿದ್ದೆನು, ನನಗಿಂತ ಸ್ವಲ್ಪ ಮುಂದೆ ನಿಮ್ಮ ತಂದೆ ಕುರಿಗಳನ್ನು ಹೊಡೆದುಕೊಂಡು ತಾಂಡಾದ ಕಡೆಗೆ ಬರುತ್ತಿದ್ದನು. ಅದೆ ಸಮಯಕ್ಕೆ ಅಫಜಲಪೂರದ ಕಡೆಯಿಂದ ಬಳೂರ್ಗಿ ಕಡೆಗೆ ಒಂದು ಹಿರೋ ಪ್ಯಾಶನ ಪ್ರೋ ಮೋಟಾರ ಸೈಕಲ ಬರುತ್ತಿದ್ದು ಸದರಿ ಮೋ/ಸೈ ಸವಾರನು ತನ್ನ ಮೋ/ಸೈ ನ್ನು ಅತಿವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ರೋಡಿನ ಪಕ್ಕದಲ್ಲಿ ಬರುತ್ತಿದ್ದ ನಿಮ್ಮ ತಂದೆಗೆ ಡಿಕ್ಕಿ ಹೊಡೆಸಿ ಅಫಘಾತ ಪಡಿಸಿರುತ್ತಾನೆ. ಆಗ ಮೋ/ಸೈ ಅಫಘಾತ ಸ್ಥಳದಲ್ಲೆ ಬಿದ್ದಿದ್ದು ಅವನು ಮೋ/ಸೈ ಸ್ಥಳದಲ್ಲೆ ಬಿಟ್ಟು ಓಡಿ ಹೊಗಿರುತ್ತಾನೆ. ನಾನು ನನ್ನ ಟಂ ಟಂ ನಿಲ್ಲಿಸಿ ನಿಮ್ಮ ತಂದೆಯು ಬಿದ್ದಲ್ಲಿ ಹೋಗಿ ನೋಡಿದಾಗ ಆತನ ತಲೆಯ ಬಲಭಾಗದಲ್ಲಿ ಬಾರಿ ಒಳಪೆಟ್ಟಾಗಿ ಬಲ ಕಿವಿಯಿಂದ ಮತ್ತು ಮೂಗಿನಿಂದ ರಕ್ತಸ್ರಾವವಾಗಿ ಬಲಗಾಲಿನ ಮೋಳಕಾಲು ಕೇಳಬಾಗದಲ್ಲಿ, ಏಡಗಾಲಿನ ಹೆಬ್ಬರಳಿಗೆ ಮತ್ತು ಬಲ ಮುಂಗೈಗೆ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ  ನಾನು ಮೋ/ಸೈ ನಂಬರ ನೋಡಲು ಎಮ್ ಹೆಚ್-11 ಬಿಪಿ-4727 ಹಿರೋ ಪ್ಯಾಶನ ಪ್ರೋ ಕಂಪನಿಯ ಕೆಂಪು ಬಣ್ಣದ ಮೋ/ಸೈ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂ ಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,   
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಿದ್ರಾಮಪ್ಪಾ ತಂದೆ ಮಲ್ಲಣ್ಣಗೌಡ ಪಾಟೀಲ ಸಾ: ರಾಜೀವ ಗಾಂದಿ ನಗರ ಗುಲಬರ್ಗಾ ಇವರನ್ನು ವಿಚಾರಿಸಲು ಮಾತನಾಡಿ ಹೇಳಿಕೆ ನಿಡುವ ಸ್ಥಿತಿಯಲ್ಲಿ ಇರದ ಕಾರಣ ಅವರ ಜೊತೆಯಲ್ಲಿದ್ದ ಅವರ ತಂಗಿಯಾದ ಶ್ರೀಮತಿ ಅನ್ನಪೂರ್ಣ ಇವರನ್ನು ವಿಚಾರಿಸಲು. ದಿನಾಂಕ 29-09-2014 ರಂದು ಬೆಳಿಗ್ಗೆ 9-45 ಗಂಟೆ ಸುಮಾರಿಗೆ ನನ್ನ ಅಣ್ಣನಾದ ಸಿದ್ರಾಮಪ್ಪಾ ಇತನು ತನ್ನ ಮೋಟಾರ ಸೈಕಲ ನಂಬರ ಕೆಎ-32 ವಾಯಿ-9087 ನೇದ್ದನ್ನು ಚಲಾಯಿಸಿಕೊಂಡು ಜಿ.ಜಿ.ಹೆಚ್ ಸರ್ಕಲ ಕಡೆಯಿಂದ ಆರ್.ಟಿ.ಓ ಕ್ರಾಸ ಕಡೆಗೆ ಹೋಗುವಾಗ ಬಾಳು ಹೋಟಲ ಎದುರಿನ ರೋಡ ಮೇಲೆ ಹಿಂದಿನಿಂದ ಯಾವುದೊ ಒಂದು ಮೋಟಾರ ಸೈಕಲ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಅಣ್ಣನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತಲೆಯ ಹಿಂದುಗಡೆ ಭಾರಿರಕ್ತಗಾಯ, ಮುಗಿನ ಮೇಲೆ ರಕ್ತಗಾಯ, ಬಲಹಣೆಗೆ ತರಚಿದ ಗಾಯಗೊಳಿಸಿ ಮೋ/ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ:
ನಾನು ಜಗತ ಸರ್ಕಲ ಹತ್ತಿರ ಪೆಟ್ರೊಲಿಂಗ ಕರ್ತವ್ಯದ ಮೇಲೆ ಇರುವಾಗ ಠಾಣಾ ಎಸ್,ಹೆಚ್,ಓ ಹೆಚ್,ಸಿ 263 ರವರು ಪೊನ ಮಾಡಿ ವಿವೇಕ ತಂದೆ ಬಮ್ಮನ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಪಿ.ಜಿ. ಶಹಾ ಆಸ್ಪತ್ರೆಗೆ ಬಂದಿರುತ್ತಾರೆ ಅಂತಾ ಆಸ್ಪತ್ರೆಯ ಸಿಬ್ಬಂದಿಯವರು ಪೊನ ಮಾಡಿ ತಿಳಿಸಿದ್ದಾರೆ ಅಂತಾ ನನಗೆ ತಿಳಿಸಲು ನಾನು ನೇರವಾಗಿ ಪಿ.ಜಿ ಶಹಾ ಆಸ್ಪತ್ರೆಗೆ ಭೇಟಿಕೊಟ್ಟು ಗಾಯಾಳು ವಿವೇಕ ವಯಾ: 5 ವರ್ಷ ದವನು ಇದ್ದುದರಿಂದ ಅವರ ಜೊತೆಯಲ್ಲಿದ್ದ ಅವರ ತಾಯಿಯಾದ ತಿರುಪತಾ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆವೆನೆಂದರೆ. ನಾನು ಮತ್ತು ನನ್ನ ಗಂಡನಾದ ಬಮ್ಮನ ಇಬ್ಬರು ಕೂಲಿ ಕೆಲಸಕ್ಕೆ ನನ್ನ ಮಗನಾದ ವಿವೇಕ ಇತನಿಗೆ ಕರೆದುಕೊಂಡು ಹೋಗುವಾಗ ಬಾಬಾಹೌಸ ಸ್ಕ್ಯಾನಿಂಗ ಸೆಂಟರ ಎದುರಿನ ರೊಡ ಮೇಲೆ ಜಿ.ಜಿ.ಹೆಚ್ ಸರ್ಕಲ ಕಡೆಯಿಂದ ಮೋಟಾರ ಸೈಕಲ ನಂಬರ ಕೆಎ-32 ಇಜಿ-6114 ನೇದ್ದರ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ವಿವೇಕ ಇತನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಬಲಗಾಲು ತೊಡೆಗೆ ಭಾರಿಗುಪ್ತಪೆಟ್ಟು, ಬೆನ್ನಿಗೆ ತರಚಿದಗಾಯ ಹಾಗು ಎಡಗಲ್ಲಕ್ಕೆ ತರಚಿದಗಾಯಗೊಳಿಸಿ ಮೋ/ಸೈಕಲ ಸಮೇತ ಓಡಿ ಹೋದವನ ಬಗ್ಗೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇತ್ಯಾದಿ ಫಿರ್ಯಾದಿ ಸಾರಾಂಶ ಅದೆ. 

27 September 2014

Gulbarga District Reported Crimes

ಎಂ.ಬಿ.ನಗರ ಪೊಲೀಸ್ ಠಾಣೆ:

ಫಿರ್ಯಾದಿ ಶ್ರೀ ಶರಣಪ್ಪ ತಂದೆ ಲಕ್ಷ್ಮಣ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಸಲ್ಲಿಸಿದ್ದು ಅದರ ಸಂಕ್ಷೀಪ್ತ ಸಾರಾಂಶವೇನಂದರೆ, ರಾಜೇಂದ್ರ ಕೋಕಟೆ ಇವರು ಮಿಲಟರಿಯಲ್ಲಿ ಇದ್ದು ಸೇವೆಯಲ್ಲಿ ಮೃತ ಪಟ್ಟಿರುತ್ತಾರೆ. ಅವರ ಹೆಂಡತಿ ನಿರ್ಮಲ ಇದ್ದು ಆಕೆಗೆ ಸುಹಾಸಿನಿ ಅಂತಾ ಮಗಳಿದ್ದು ನಿರ್ಮಲ ಇವಳಿಗೆ ನಾನು ಪ್ರೇಮಿಸಿ ರೆಜಿಸ್ಟರ ಮದುವೆಯಾಗಿರುತ್ತೇನೆ. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ರಾಜೇಂದ್ರ ಇವರು ಮೃತ ಪಟ್ಟಿದ್ದರಿಂದ ಸರಕಾರ ದವರು ಬಡೆಪೂರ ವಿದ್ಯಾನಗರ ಏರಿಯಾದಲ್ಲಿ ಮನೆ ಕಟ್ಟಿಸಿಕೊಟ್ಟಿದ್ದು ಇರುತ್ತದೆ. ನಿರ್ಮಲಾ ಇವಳು ತೀರಿಕೊಂಡ ನಂತರ ಆ ಮನೆಯಲ್ಲಿ ನಾನೇ ವಾಸವಾಗಿರುತ್ತೇನೆ. ಸುಹಾಸಿನಿ ಇವಳು ಬೇರೆ ಮನೆ ಮಾಡಿಕೊಂಡು ಇದ್ದು ಮನೆ ಖಾಲಿ ಮಾಡು ಅಂತಾ ಆಗಾಗ ನನ್ನೊಂದಿಗೆ ತಂಟೆ ತರಕಾರು ಮಾಡುತ್ತಿರುತ್ತಾಳೆ. ಹೀಗಿದ್ದು ಮುಂಜಾನೆ ಸುಮಾರಿಗೆ ಸುಹಾಸಿನಿ ಇವಳು ಮನೆಗೆ ಬಂದು ನಿರ್ಮಲಾ ಇವರ ಭಾವಚಿತ್ರ ತೆಗೆಯುತ್ತಿದ್ದಾಗ ನಾವು ಪೂಜಕ್ಕೆ ಇಟ್ಟಿದ್ದೇವೆ ತೆಗೆಯಬೇಡ ಅಂತಾ ಹೇಳಿದರೂ ಕೇಳದೇ ಮನೆಯ ಸಾಮಾನುಗಳು ಚೆಲ್ಲಾಪಿಲ್ಲಿ ಮಾಡಿ ಇದು ನನ್ನ ಮನೆ ಇದೆ ಖಾಲಿ ಮಾಡಿರಿ ನಿಮಗೆ ಬಹಳ ಸೊಕ್ಕು ಬಂದಿದೆ ಅಂತಾ ನನ್ನ ಅಕ್ಕ ತಾಯಮ್ಮಾ, ಮಗಳು ಲತಾಗೆ ಹೊಡೆ ಬಡೆ ಮಾಡಿದ್ದು ಅಲ್ಲದೇ ಮನೆ ಖಾಲಿ ಮಾಡಿರಿ ಇಲ್ಲದಿದ್ದರೇ ನಿಮ್ಮನ್ನು ಮುಗಿಸಿಯೇ ಬಿಡುತ್ತೇನೆ ಅಂತಾ ಬ್ಯಾಗದಲ್ಲಿದ್ದ ಸೀಮೆ ಎಣ್ಣೆ ಬಾಟಲಿ ತೆಗೆದು ನಮ್ಮ ಮೈಮೇಲೆ ಸುರಿದು ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವಾಗ ನಾನು ತಪ್ಪಿಸಿಕೊಂಡು ಹೊರಗೆ ಬಂದಿರುತ್ತೇನೆ. ಇಲ್ಲದಿದ್ದರೇ ನಮಗೆ ಕೊಲೆ ಮಾಡುತ್ತಿದ್ದಳು ಅಂತಾ ವಗೈರೆ ಅರ್ಜಿಯ ಸಾರಂಶದ ಮೇಲಿಂದ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು.

C¥sÀd®¥ÀÆgÀ oÁuÉ:                                                                           ಫಿರ್ಯಾದಿ ಠಾಣೆಗೆ ಹಾಜರಾಗಿ ಲಿಖಿತ ಅರ್ಜಿ ಸಲ್ಲಿಸಿದರ ಸಾರಂಶವೆನೆಂದರೆ ಸುಮಾರಿಗೆ ಫಿರ್ಯಾದಿ ಮಗಳು ಕಾವೇರಿ ||20 ವರ್ಷ  ಹಾಗೂ ಫಿರ್ಯಾದಿ ಅಣ್ಣನ ಮಗಳು ||21 ವರ್ಷ ಇಬ್ಬರು ಘತ್ತರಗಿ ಶ್ರೀ ಭಾಗ್ಯವಂತಿ ದೇವಿ ದರ್ಶನಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋದವರು ಮರಳಿ ಮನೆಗೆ ಬಾರದ ಕಾರಣ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ, ಮಾದಾಬಾಳ ತಾಂಡದ ಹತ್ತಿರ ಜರಮಬನಸಿಂಗ್ ಬಾಯಸ್ ರವರ ಹೊಲದ ಬಾವಿಯಲ್ಲಿ 2 ಹೆಣ್ಣು ಮಕ್ಕಳ ಶವ ತೆಲುತಿವೇ ಅಂತ ಗೊತ್ತಾಗಿ ಫಿರ್ಯಾದಿ ಹೋಗಿ ನೋಡಲಾಗಿ ಫಿರ್ಯಾದಿಯ ಮಗಳು ಕಾವೇರಿ ಹಾಗೂ ಫಿರ್ಯಾದಿ ಅಣ್ಣನ ಮಗಳು ಅನಿತಾ ಇವರ ಶವ  ಇರುತ್ತವೆ ಸದರಿಯವರು ಯಾವುದೋ ಉದ್ದೇಶದಿಂದ ಬಾವಿಯ ನೀರಿನಲ್ಲಿ ಉಸಿರು ಗಟ್ಟಿ ಮೃತಪಟ್ಟಿದ್ದು ಇರುತ್ತದೆ ಯಾರ ಮೇಲು ಯಾವುದೇ ಸಂಶಯ ಇರುವುದಿಲ್ಲಾ ಅಂತ ಫಿರ್ಯಾದಿ ಲಿಖಿತ ಸಾರಂಶದ ಮೇಲಿಂದ ಠಾಣೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡೆನು.


ನಿಂಬರ್ಗಾ ಪೊಲೀಸ:
ಫೀರ್ಯಾದಿಯು ಠಾಣೆಗೆ ಬಂದು ಹೇಳಿಕೆ ಫೀರ್ಯಾದಿ ಸಲ್ಲಿಸಿದ್ದೇನೆಂದರೆ ತನ್ನ ತಂದೆಯಾದ ಭೀಮಶಾ ತಂದೆ ಲಾಲಪ್ಪ ಮಾಂಗ ವಯ: 65 ವರ್ಷ ಜಾ: ಮಾಂಗ ಉ: ಒಕ್ಕಲುತನ ಸಾ: ಭೂಸನೂರ ಇವರು ಜೇವರ್ಗಿ ತಾಲೂಕಿನ ಕೂಡಿ ಬಾಬಾಸಾಹೇಬ ದರ್ಗಾಕ್ಕೆ ಹೋಗಿ ಬರುತ್ತೇನೆ ಅಂತಾ ಹೋಗಿ ನಂತರ ಹಸರಗುಂಡಗಿ ಗ್ರಾಮಕ್ಕೆ ಹೋಗಿ ಮುಕ್ಕಾಮ ಮಾಡಿ ನನ್ನ ಅತ್ತೆಯಾದ ಶ್ರೀಮತಿ ನಾಗಮ್ಮ ಇವಳನ್ನು ಬೇಟಿ ಆಗಲು ದುದನಿಗೆ ಹೋಗುವಾಗ ಮಾಡಿಯಾಳ  ದಿಂದ ಒಂದು ಟಂ-ಟಂ ದಲ್ಲಿ ಕುಳಿತುಕೊಂಡು ಹೊರಟಾಗ ಟಂ-ಟಂ ಚಾಲಕನು ಮಾಡಿಯಾಳ ಗ್ರಾಮ ದಾಟಿ ಒಂದು ಕೀ.ಮೀಟರ ಅಂತರದಲ್ಲಿ ತನ್ನ ಟಂ-ಟಂ ಅನ್ನು ಅ ತೀ ವೇ ಗ  ಹಾಗೂ ನಿ ಸ್ಕಾಳಜಿತನದಿಂದ ನ ಡೆಸುತ್ತಾ  ಹೋಗಿದ್ದರಿಂದ ಹಿಂದೆಕು ಳಿತಂತಹ ನನ್ನ  ತಂದೆಯು  ಡಾಂಬರ  ರೋಡಿನ  ಮೇಲೆ   ಟಂ-ಟಂ ದಿಂದ ಬಿದ್ದು ತಲೆಗೆ ಗಂಭೀರ ರಕ್ತಗಾಯವಾಗಿದ್ದರಿಂದ  ಮೃತಪಟ್ಟಿದ್ದು  ಟಂ-ಟಂ  ಚಾಲಕನು ತ ನ್ನ   ಟಂ-ಟಂ   ಅನ್ನು ನಿಲ್ಲಿಸದೇ ಹೋಗಿರುತ್ತಾನೆ ಸ ದರಿಯವನ ಮೇ ಲೆ ಸೂ ಕ್ತ ಕಾ ನೂನು ಕ್ರ ಮ ಕೈ  ಕೊಳ್ಳಲು  ಕೊಟ್ಟ ಹೇಳಿಕೆ ಫೀರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

26 September 2014

Gulbarga District Reported Crimes

ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ:
ದಿನಾಂಕ ಜಗತ ಸರ್ಕಲ್ ಹತ್ತಿರ ಪೆಟ್ರೊಲಿಂಗ ಕರ್ತವ್ಯದ ಮೇಲೆ ಇರುವಾಗ ಠಾಣಾ ಎಸ್.ಹೆಚ್.ಓ ಹೆಚ್.ಸಿ. 397 ರವರು ಪೊನ ಮಾಡಿ ಫೊನ ಮಾಡಿ ಬಸವೆಶ್ವರ ಆಸ್ಪತ್ರೆಯ ಓ.ಪಿ. ಪಿಸಿ ರವರು ನಿಸ್ತಂತು ,ಮೂಲಕ ಬಸವರಾಜ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಸೇರಿಕೆಯಾಗಿರುತ್ತಾರೆ ಎಮ್.ಎಲ್.ಸಿ. ಇರುತ್ತದೆ ತಾವು ಮುಂದಿನ ಕ್ತಮ ಜರುಗಿಸಬೇಕು ಅಂತಾ ತಿಳಿಸಿದ್ದಾರೆ ಅಂತಾ ನನಗೆ ತಿಳಿಸಲು ನಾನು ನೇರವಾಗಿ ಬಸವೇಶ್ವರ ಆಸ್ಪತ್ರೆಗೆ ಬೇಟಿ ಕೊಟ್ಟು ಗಾಯಾಳು ಬಸವರಾಜ ತಂದೆ ಶರಣಪ್ಪ ಇವರನ್ನು ವಿಚಾರಿಸಿ ಫಿರ್ಯಾದಿ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ ಫಿರ್ಯಾದಿಯು ಎಸ್.ವಿ.ಪಿ.ಸರ್ಕಲ್ ದಿಂದ ನಡೆದುಕೊಂಡು ರೈಲ್ವೆ ಸ್ಟೇಶನ ರೋಡಿಗೆ ಹೋಗುವಾಗ ಆಂದ್ರಾ ಮೆಸ್  ಎದುರು ರೋಡ ಮೇಲೆ ಹಿಂದಿನಿಂದ ಮೋ/ಸೈಕಲ್ ನಂ: ಕೆಎ 32 ಡಬ್ಲೂ 6957 ರ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಗೆ ಎಡ ಭುಜಕ್ಕೆ ಭಾರಿ ಗುಪ್ತ ಪೆಟ್ಟು, ಬಲ ಕಪಾಳದ ಮೇಲೆ ಗುಪ್ತ ಪೆಟ್ಟು ಬಿದ್ದು ಬಾವು ಬಂದಿತ್ತು, ಬಲಗಣ್ಣಿ ಕೆಳಗೆ ಗುಪ್ತ ಪೆಟ್ಟು ಮಾಡಿ ಮೋ/ಸೈಕಲ್ ಸಮೇತ ಸವಾರನು ಓಡಿ ಹೋಗಿದ್ದು ಇರುತ್ತದೆ ಇತ್ಯಾದಿ ಫಿರ್ಯಾದಿ ಸಾರಾಂಶ ಅದೆ.




25 September 2014

Gulbarga District Reported Crimes

ನಿಂಬರ್ಗಾ ಪೊಲೀಸ ಠಾಣೆ:
                                                                                                                  
ಆರೋಪಿ ಪತ್ತೆ ಕರ್ತವ್ಯದಿಂದ ಮರಳಿ ಠಾಣೆಗೆ ಬರುವಾಗ ನಿಂಬರ್ಗಾ ಗ್ರಾಮದಲ್ಲಿ ಇದ್ದಾಗ ಭೂಸನೂರ ಗ್ರಾಮದ ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಡಾಂಬರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಠಾಣೆಯ ಸಿಬ್ಬಂಧಿಯವರಾದ ಶ್ರೀ ರಾಜಕುಮಾರ ಸಿಪಿಸಿ 1145 ಹಾಗೂ ಇಬ್ಬರು ಪಂಚರಾದ 01] ಶ್ರೀ ಬಸವರಾಜ ತಂದೆ ನಾಗಪ್ಪಾ ಕೋರೆ ವ|| 42 ವರ್ಷ, ಜಾ|| ಲಿಂಗಾಯತ,|| ಕೂಲಿಕೆಲಸ, ಸಾ|| ನಿಂಬರ್ಗಾ, 02] ಶ್ರೀ ಈರಯ್ಯ ತಂದೆ ಶರಣಯ್ಯ ಹಿರೇಮಠ ವ|| 39 ವರ್ಷ, ಜಾ|| ಜಂಗಮ,|| ಕೂಲಿಕೆಲಸ, ಸಾ|| ನಿಂಬರ್ಗಾ ಇವರನ್ನು ಬರ ಮಾಡಿಕೊಂಡು ಸದರಿಯವರಿಗೆ ವಿಷಯ ತಿಳಿಸಿದ್ದು ಸದರಿಯವರು ಪಂಚರಾಗಲು ಒಪ್ಪಿಕೊಂಡಿದ್ದು ನಾನು ಮತ್ತು ಸಿಬ್ಬಂಧಿ ಹಾಗೂ ಇಬ್ಬರು ಪಂಚರು ಕೂಡಿ ಠಾಣೆಯ ಜೀಪ್ ನಂ ಕೆ.ಎ 32, ಎಮ 1563 ನೇದ್ದರಲ್ಲಿ ಭೂಸನೂರ ಗ್ರಾಮಕ್ಕೆ ಹೋಗಿ ಬಸವೇಶ್ವರ ಸರ್ಕಲ ಮರೆಯಲ್ಲಿ ನಿಂತು ನೋಡಲಾಗಿ ಡಾಂಬರ ರಸ್ತೆಯ ಮೇಲೆ ಸಾರ್ವಜನಿಕ  ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂಧಿ ಜನರು ಕೂಡಿ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಗೈಬಗಿರಿ ತಂದೆ ಗೊವಿಂದಗಿರಿ ಗೋಸಾಯಿ ವ|| 50 ವರ್ಷ, ಜಾ|| ಮರಾಠಾ,|| ಕೂಲಿಕೆಲಸ, ಸಾ|| ಭೂಸನೂರ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ 01] ನಗದು ಹಣ 320/-, 02] ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, 03] ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ, ಈ ಬಗ್ಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡಿದ್ದು ಇರುತ್ತದೆ ಅಂತ ಕೊಟ್ಟ ವರದಿಯ ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ ಠಾಣೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 


                                                                                                      






24 September 2014

Gulbarga District Reported Crimes

ನಿಂಬರ್ಗಾ ಪೊಲೀಸ ಠಾಣೆ:

ಇಂದು ಫೀರ್ಯಾದಿ ಶ್ರೀ ಸೂರ್ಯಕಾಂತ ಮದಾನೆ ಶಿಕ್ಷಣಾಧೀಕಾರಿಗಳು ಅಕ್ಷರ ದಾಸೊಹ ಯೋಜನೆ ಜಿಲ್ಲಾ ಪಂಚಾಯತ ಗುಲಬರ್ಗಾರವರು ಠಾಣೆಗೆ ಬಂದು ತಾವು ದುತ್ತರಗಾಂವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪಂಚರ ಸಮಕ್ಷಮದಲ್ಲಿ ಜಪ್ತಿಪಡಿಸಿಕೊಂಡ ಮುದ್ದೆಮಾಲು, ಅಸಲು ಜಪ್ತಿ ಪಂಚನಾಮೆ. ಮತ್ತು ಲಿಖಿತ ಫಿರ್ಯಾದಿ ವರದಿಯೊಂದಿಗೆ ಠಾಣೆಗೆ ಬಂದು ಹಾಜರಾಗಿದ್ದು ಸದರಿ ಫಿರ್ಯದಿಯಲ್ಲಿ ತಮಗೆ ಖಚಿತ ಬಾತ್ಮಿ ಬಂದ ಮೇರೆಗೆ ವಾಹನ ನಂ. ಎಮ.ಹೆಚ್ 13. ಆರ್. 6882 ನೇದ್ದನ್ನು ತಪಾಸಿಸಿ ಪಂಚರ ಸಮಕ್ಷಮ ಪಂಚನಾಮೆ ಕೈಕೊಂಡು ಪರಿಶೀಲಿಸಲಾಗಿ ವಾಹನ ನಂ. ಎಮ.ಹೆಚ್ 13. ಆರ್. 6882 ನೇದ್ದರ ಚಾಲಕನ ಕೈಯಿಂದ ಒಟ್ಟು 07 ರಸೀದಿಗಳು ಜಪ್ತಿಪಡಿಸಿಕೊಂಡು ಮತ್ತು ಭೌತಿಕವಾಗಿ ಆಹಾರ ಧಾನ್ಯವನ್ನು ತೂಕ ಮಾಡಲಾಗಿ ಅದರಲ್ಲಿ ರಸೀದಿಯಲ್ಲಿ ನಮೂದಿಸಿದಂತೆ 19 ಕ್ವಿಂಟಲ 50 ಕೆ.ಜಿ ಅಕ್ಕಿ ಇರದೆ, 15 ಕ್ವಿಂಟಲ 14 ಕೆ.ಜಿ ಅಕ್ಕಿ ಇದ್ದು 04 ಕ್ವಿಂಟಲ 36 ಕೆ.ಜಿ ಅಕ್ಕಿ ವ್ಯತ್ಯಾಸ ಬಂದಿದ್ದು ಅಂದಾಜು ಕಿಮ್ಮತ್ತು 2000/- ರೂಪಾಯಿ, ರಸೀದಿಯಲ್ಲಿ ನಮೂದಿಸಿದಂತೆ 1 ಕ್ವಿಂಟಲ ಗೊಧಿಯ ಬದಲಾಗಿ 89 ಕೆ.ಜಿ ಇರುತ್ತದೆ, 11 ಕೆ.ಜಿ ವ್ಯತ್ಯಾಸ ಕಂಡು ಬಂದಿದ್ದು 88/- ರೂಪಾಯಿ, ತೊಗರಿ ಬೇಳೆ ರಸೀದಿಯಲ್ಲಿ ನಮೂದಿಸಿದಂತೆ 375 ಕೆ.ಜಿ ಇದ್ದು ಅದರಲ್ಲಿ ವಾಸ್ತವಿಕವಾಗಿ 324 ಕೆ.ಜಿ ಇದ್ದು 51 ಕೆ.ಜಿಯ 3570/- ರೂಪಾಯಿ ಹೀಗೆ ಒಟ್ಟು 5658/- ರೂಪಾಯಿ ಮೌಲ್ಯದ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡದೆ ಸರ್ಕಾರಕ್ಕೆ ವಂಚನೆ ಮಾಡಿರುತ್ತಾರೆ. ಇದಕ್ಕೆ  ಕಾರಣೀಭೂತರಾದ ಗುರುರಾಯ ಮ್ಯಾನೆಜರ ಕೆ.ಎಫ.ಸಿ.ಎಸ್.ಸಿ ಗೋದಾಮ ಆಳಂದ, ಮ್ಯಾನೇಜರ ಭೋಸಲೆ ಟ್ರಾನ್ಸಪೊರ್ಟ ಆಳಂದ, ವಿಷ್ಣು ತಂದೆ ಶ್ರೀಮಂತ ವಾಹನ ನಂ. ಎಮ.ಹೆಚ್ 13, ಆರ್ 6882 ನೇದ್ದರ ಚಾಲಕ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಕೊಟ್ಟ ಫಿರ್ಯಾದಿಯ  ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.



22 September 2014

Gulbarga District Reported Crimes


C¥sÀd®¥ÀÆgÀ oÁuÉ:
ಫಿರ್ಯಾದಿ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರ ಸಾರಂಶವೆನೆಂದರೆ ನಾನು ಮೇಲೆ ಹೇಳಿದ ವಿಳಾಸದವನಿದ್ದು ಬೆನಕ ಟೈಮಸ್ ಪತ್ರಿಕೆ ಮತ್ತು ಕಲರ್ಬುಗಿ ಕಲರವ ಪತ್ರಿಕೆಯ ಸಂಪಾದಕನಾಗಿ ಕೆಲಸಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೆನೆ. ನನ್ನ ಎರಡನೆ ಹೆಂಡತಿ ಭಾಗಿರತಿ ಇವಳಿಗೆ 4 ಜನ ಮಕ್ಕಳಿದ್ದು, 1] ತ್ರೀಮೂರ್ತಿ, 2] ಸಿದ್ದಮ್ಮ, 3] ಧಾನಮ್ಮ ವಯ; 12 ವರ್ಷ ಒಂದು ತಿಂಗಳ, 4] ಹರ್ಶೀಲ ಅಂತಾ ರುತ್ತಾರೆ. ಧಾನಮ್ಮ ಇವಳು ನಮ್ಮೂರಲ್ಲೇ ಸರಕಾರಿ ಶಾಲೆಯಲ್ಲಿ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುತ್ತಾಳೆ. ನಿನ್ನೆ ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಭಾಗಿರತಿ ಹಾಗು ನಮ್ಮ ಮಕ್ಕಳು ಎಲ್ಲರು ಇದ್ದಾಗ ಅದೇ ಸಮಯಕ್ಕೆ ನನ್ನ ಮಗಳು ಧಾನಮ್ಮ ಇವಳು ಅಡುಗೆ ಮಾಡುವ ಸಲುವಾಗಿ ಮಸಾಲಿ ತರಲು ನಮ್ಮ ಮನೆ ಹತ್ತಿರ ಇರುವ ಕಿರಾಣಿ ಅಂಗಡಿ ಹೋಗಿರುತ್ತಾಳೆ. ನಂತರ ಎಷ್ಟೊತ್ತಾದರು ನಮ್ಮ ಮಗಳು ಮರಳಿ ಮನೆಗೆ ಬರಲಿಲ್ಲ ನಂತರ ನಾನು ಮತ್ತು ನನ್ನ ಹೆಂಡತಿ ಭಾಗಿರತಿ ಕೂಡಿ ನಮ್ಮ ಮನೆ ಹತ್ತಿರ ವಿಚಾರಿಸಿದಾಗ ಗೊತ್ತಾಗಿದ್ದೇನೆಂದರೆ, ನಿಮ್ಮ ಮಗಳು ಧಾನಮ್ಮ ಇವಳು ನಿಮ್ಮ ಮನೆ ಬಾಜು ರಸ್ತೆಯ ಮೇಲೆ ಇದ್ದಾಗ ನಮ್ಮೂರ ಅನೀಲ ತಂದೆ ಅಣ್ಣಪ್ಪ ಶೆಂಡಗೆ ವಯ; 22 ವರ್ಷ, ಇವನು ಒಂದು ಯಾವುದೊ ಟಾಟಾ ಸೂಮೋದಲ್ಲಿ ವತ್ತಾಯಪೂರಕವಾಗಿ ಹಾಕಿ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಅಂತಾ ತಿಳಿಸಿದರು. ನಂತರ ನಾನು ಮತ್ತು ನನ್ನ ಹೆಂಡತಿ ಭಾಗಿರತಿ, ನನ್ನ ಮಗ ತ್ರೀಮೂರ್ತಿ, ನಮ್ಮ ವಾಹನ ಚಾಲಕ ಸೈಪನಸಾಬ ಕರವಲ್ ರವರು ಕೂಡಿಕೊಂಡು ನಮ್ಮೂರಲ್ಲಿ ಮತ್ತು ಕರಜಗಿ, ಮಾಶಾಳ, ಅಫಜಲಪೂರ, ಇಂಡಿ, ಆಲಮೇಲ ಗ್ರಾಮಗಳಲ್ಲಿ ಹುಡಕಾಡಿದರು ನಮ್ಮ ಮಗಳು ಸಿಗಲಿಲ್ಲಾ. ಅಪ್ರಾಪ್ತ ವಯಸ್ಸಿನ ನನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋಗಲು ಮೇಲ್ಕಂಡ ಅನೀಲ ಇವನ ತಾಯಿ ಕಮಲಾಬಾಯಿ ಗಂಡ ಅಣ್ಣಪ್ಪ ಶಂಡಗೆ, ಅವನ ಅಣ್ಣ ರವಿ ತಂದೆ ಅಣ್ಣಪ್ಪ ಶಂಡಗೆ ವಯ; 24 ವರ್ಷ ರವರು ನನ್ನ ಮಗಳನ್ನು ಅಪಹರಣಮಾಡಿಕೊಂಡು ಹೋಗಲು ಅನೀಲ ಈತನಿಗೆ ಚಿತಾವಣಿ ಮಾಡಿರುತ್ತಾರೆ ಅಂತಾ ತಿಳಿದುಬಂದಿರುತ್ತದೆ. ಸದರಿ ನನ್ನ ಮಗಳನ್ನು ಎಲ್ಲಾಕಡೆ ಹುಡಕಾಡಿದರು ಸಕ್ಕಿರುವುದಿಲ್ಲ, ಆದ್ದರಿಂದ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಸಿದ್ದು ಇರುತ್ತದೆ. ಸದರಿ ನನ್ನ ಮಗಳು ಅಪ್ರಾಪ್ತ ವಯಸ್ಸಿನವಳಿದ್ದು, ಮೇಲ್ಕಂಡ  ಕಮಲಾಬಾಯಿ ಶಂಡಗೆ ಮತ್ತು ರವಿ ಶಂಡಗೆ ಇವರು ಚಿತಾವಣಿ ಮಾಡಿದ್ದರಿಂದ ಅನೀಲ ಶಂಡಗೆ ಇವರು ಯಾವುದೊ ದುರೂದ್ದೇಶದಿಂದ ಒತ್ತಾಯಪೂರಕವಾಗಿ ಟಾಟಾ ಸೂಮೋದಲ್ಲಿ ಅಪಹರಣ ಮಾಡಿಕೊಂಡು ಹೊಗಿರುತ್ತಾನೆ. ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಹಾಗೂ ನನ್ನ ಮಗಳನ್ನು ಪತ್ತೆ ಮಾಡಿಕೊಡಬೇಕು ಎಂದು ಹೇಳಿಕೆ ನಿಡಿದ್ದು ನೀಜ ವಿರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು

§æºÀä¥ÀÆgÀ ¥Éưøï oÁuÉ:
PÀ¼ÀªÀÅ ¥ÀæPÀgÀt:
ಶ್ರೀ ಗುಡ್ಡಾ ಪರಮೇಶ್ವರ ತಂದೆ ಅಣ್ಣಪ್ಪಾ ಜಗತ್ ಮೇಲಿನಕೇರಿ ಓಣಿ ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಮಾಡಿದ ಅರ್ಜಿ ಸಲ್ಲಿಸಿದ್ದು ಸಾರಾಂಶವೆನೆಂದರೆ  ಸುಪರ ಮಾರ್ಕೆಟ್  ಸ್ಟೇಟ್ ಬ್ಯಾಂಕ್ ಆಪ್ ಹೈದ್ರಾಬಾದ ಶಾಖೆ ಎದುರುಗಡೆ  ನಿಲ್ಲಿಸಿದ ನನ್ನ ಹಿರೋ ಹೋಡಾ ಸ್ಲೇಂಡರ್ ಪ್ಲಸ್  ನಂ: ಕೆಎ 32 ಎಕ್ಸ-4461 ಅ||ಕಿ|| 41,065/-ನೇದ್ದನ್ನು ಯಾರೋ ಕಳ್ಳರು ಕಳುವು ಮಾಡಿದ್ದು ಎಷ್ಟು ಹುಡಕಾಡಿದರು ಸಿಕ್ಕರುವದಿಲ್ಲಾ. ಅಂತಾ ಇತ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಬ್ರಹ್ಮಪೂರ ಪೊಲೀಸ ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ªÀiÁqÀ§Æ¼À ¥Éưøï oÁuÉ:
ಅರ್ಜಿ ದಾರನಾದ ಶ್ರೀ ಶಿವಾನಂದ ಮಠಪತಿ ಸಾ: ಇವಣಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಅರ್ಜಿ ಸಾರಾಂಶವೆನೆಂದರೆ. ನನಗೆ ಮೂರ ಜನ ಮಕ್ಕಳಿದ್ದು ಅಭಿಷಕ ಈತನು 3 ನೇ ಮಗನಾಗಿದ್ದು ಅಭಿಷಕ ಈತನು 10 ನೇ ಫೈಲ್ ಆಗಿ ಕೂಲಿ ಕೆಲಸ ಮಾಡಿಕೊಂಡು ಇರುತ್ತಿದ್ದು ಇಂದು ತೋನಸಳ್ಳಿ ಗ್ರಾಮಕ್ಕೆ ಸಂಬಂದಿಕರ ಮನೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದು ನಂತರ 3 ಪಿ.ಎಮ್ ಸುಮಾರಿಗೆ ಅಭಿಷಕ ಫೋನ್ ಮಾಡಿ ತಿಳಿಸಿದೆನೆಂದರೆ, ತೋನಸಳ್ಳಿ ಗ್ರಾಮದ ಭೀಮರಾವ ಲಿಂಗದೆ ಇವರ ಹೊಲದ ಹತ್ತಿರ ಟಂ ಟಂ ಪಲ್ಟಿಯಾಗಿ ನನಗೆ ಬಹಳ ಹತ್ತಿರುತ್ತದೆ ಅಂತಾ ಪೋನ್ ಮಾಡಿದ್ದು ನಾನು ಹೋಗಿ ನೋಡಲಾಗಿ ನನ್ನ ಮಗನಿಗೆ ವಿಚಾರಿಸಲಾಗಿ ನನ್ನ ಮಗ ತಿಳಿಸಿದೆನೆಂದರೆ ಮಲಕೂಡ ಗ್ರಾಮದ ಕೇದರನಾಥ ತಂದೆ ನಾಗಣ್ಣಾ ನೀಲಿ ಇವರ ಟಂ ಟಂ ನಂ ಕೆಎ-32 ಬಿ-7066 ನೇದ್ದರಲ್ಲಿ ಬರುತ್ತಿರುವಾಗ ಸದರಿ ವಾಹನ ಚಾಲಕ ಅತಿ ವೇಗ ಹಾಗೂ ನಿಷ್ಕಳಜಿತನದಿಂದ ನಡೆಸುತ್ತಿದ್ದು ಅದಲ್ಲದೆ ಮಳೆ ಕೂಡಾ ಜೋರಾಗಿ ಬರುತ್ತಿದ್ದು ಸವಕಾಶ ನಡೆಸು ಅಂತಾ ಹೇಳಿದರು ಕೂಡಾ ಆತನು ಹಾಗೆ ನಡೆಸುತ್ತಿರುವಾಗ ಎದುರಿನಿಂದ ಒಂದು ವಾಹನ ಬರುತ್ತಿದ್ದನ್ನು ನೋಡಿ ಎಡಕ್ಕೆ ಕಟ್ ಮಾಡಿದರಿಂದ ಟಂ ಟಂ ಪಲ್ಟಿಯಾಗಿ ನನ್ನ ಎದೆಯ ಮೇಲೆ ಬಿದ್ದು ಭಾರಿ ಒಳಪೇಟ ಆಗಿ ಬಾಯಿಗೆ, ಮೂಗಿಗೆ, ಹಣೆಗೆ ತರಚಿದ ಗಾಯವಾಗಿದ್ದು ಸದರಿ ವಾಹನ ಚಾಲಕ ಕೇದರನಾಥ ತನ್ನ ಟಂ ಟಂ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅಂತಾ ತಿಳಿಸಿದ್ದು ನಂತರ ನಾನು ರೂಡಿಗೆ ಹೋಗುತ್ತಿರುವ ಜನರ ಸಹಾಯದಿಂದ ಖಾಸಗಿ ವಾಹನದಲ್ಲಿ ಹಾಕಿಕೊಂಡು ಗುಲಬರ್ಗಾಕ್ಕೆ ಹೋಗುತ್ತಿರುವಾಗ ಮಾರ್ಗಮದ್ಯದಲ್ಲಿ ನನ್ನ ಮಗ ಅಭಿಷಕ ಮೃತ ಪಟ್ಟಿದ್ದು ಅಂತಾ ವಗೈರೆ ಅರ್ಜಿ ಸಾರಾಂಶದ ಮೇಲಿಂದ ಮಾಡಬೂಳ ಪೊಲೀಸ ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕುರಕುಂಟಾ ¥Éưøï oÁuÉ:
ಕುರಕುಂಟಾ ಗ್ರಾಮದಿಂದ ದೂರವಾಣಿ ಮೂಲಕ ರೇವಣಸಿದ್ದಪ್ಪ ಸೀಡಿಲು ಬಿದ್ದು ಮೃತ ಹೊಂದಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಕುರಕುಂಟಾದಲ್ಲಿದ್ದ ಮೃತನ ತಂದೆಯಾದ ಶಾಮರಾಯ ತಂದೆ ಗಾಳಪ್ಪಾ ಗಾರಂಪಳ್ಳಿ ವಃ 55 ವರ್ಷ ಜಾಃ ಕುರುಬ ಉಃ ಒಕ್ಕಲುತನ ಸಾಃ ಕುರಕುಂಟಾ ಇವರ ಫಿರ್ಯಾದಿ ಹೇಳಿಕೆ ಪಡೆದುಕೊಂಡಿದ್ದು  ಫಿರ್ಯಾದಿ ಹೇಳಿಕೆಯ ಸಾರಾಂಶವೆನೆಂದರೆ ನನಗೆ ಎರಡು ಜನ ಗಂಡು ಮತ್ತು ಎರಡು ಜನ ಹೆಣ್ಣು ಮಕ್ಕಳಿದ್ದು ಹಿರಿಯವಳು ನಾಗಮ್ಮ ಅಂತಾ 24 ವರ್ಷಗಳಿದ್ದು ಎರಡನೆಯವ ಶರಣಪ್ಪಾ ಅಂತಾ 21 ವರ್ಷದ ಮಗನಾಗಿದ್ದು ಮೂರನೆದವ ರೇವಣಸಿದ್ದಪ್ಪಾ ಅಂತಾ 19 ವರ್ಷದವನಾಗಿದ್ದು ನನ್ನ ಹೆಂಡತಿ ಮಕ್ಕಳೊಂದಿಗೆ ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ ಹೆಣ್ಣು ಹುಡುಗಿಯರಿಗೆ ಮದುವೆ ಮಾಡಿಕೊಟ್ಟಿದ್ದು ತಮ್ಮತಮ್ಮ ಮನೆಯಲ್ಲಿ ಇರುತ್ತಾರೆ ಗಂಡು ಮಕ್ಕಳಲ್ಲಿ ಶರಣಪ್ಪಾ ಮತ್ತು ರೇವಣಸಿದ್ದಪ್ಪಾ ಇಬ್ಬರು ನಮ್ಮ ಜಮೀನಿನಲ್ಲಿ ಒಕ್ಕಲುತನ ಕೆಲಸ  ಮಾಡಿಕೊಂಡು ಇರುತ್ತಾರೆ ಎರಡು ಮೂರು ದಿವಸದಿಂದ ಸುರಿಯುತ್ತಿರುವ ಮಳೆಯ ಕಾರಣ ಎತ್ತುಗಳಿಗೆ ಮೇವು ವಗೈರೆ ಇಲ್ಲದೇ ಅವುಗಳನ್ನು ಮೆಯಿಸಿಕೊಂಡು ಬರಲು ನನ್ನ ಎರಡನೆ ಮಗನಾದ ರೇವಣಸಿದ್ದಪ್ಪಾ ವಃ 19 ವರ್ಷ ಇವನು ನಮ್ಮ ಎರಡು ಎತ್ತುಗಳನ್ನು ಹೊಡೆದುಕೊಂಡು ಲೇವಲ್ ಕ್ರಾಸಿಂಗ ಆಚೆಗೆ ಇರುವ ನರಸಮ್ಮ ಚಿಂತಪಳ್ಳಿ ಇವರ ಹೊಲದ ಬದುವಿಗೆ ಎತ್ತುಗಳನ್ನು ಮೇಯಿಸುತ್ತಿರುವಾಗ ಮಧ್ಯಾಹ್ನ 3 ಘಂಟೆ ಸುಜಮಾರಿಗೆ ಬಂದಿರುವ ಎಕಾಎಕಿ ಧಾರಕಾರ ಮಳೆಯಲ್ಲಿ ನನ್ನ ಮಗನಿಗೆ ಯಾವುದೇ ದಾರಿ ತೋಚದೆ ಬದುವಿನ ಮೇಲೆ ಬಿದಿದ್ದು ನಮ್ಮ ಎರಡು ಎತ್ತುಗಳು ಸಾಯಂಕಾಲ 6 ಘಂಟೆ ಸುಮಾರಿಗೆ ಮನೆಗೆ ಮರಳಿದಾಗ ನನ್ನ ಮಗನು ಸಹ ಹಿಂದೆ ಬರುತ್ತಿರಬಹುದೆಂದು ಅಂತಾ ಸ್ವಲ್ಪ ಸಮಯ ಕಾದು ನೋಡಿದಾಗ ನನ್ನ ಮಗ ರೇವಣಸಿದ್ದಪ್ಪಾ ಇತನು ಮನೆಗೆ ಬರಲೇ ಇಲ್ಲಾ ನಂತರ ನಾನು ನನ್ನ ಹೆಂಡತಿ ಮತ್ತು ನನ್ನ ಇನ್ನೊಬ್ಬ ಮಗನಾದ ಶರಣಪ್ಪಾ ಕೂಡಿ ಹುಡುಕುತ್ತಾ ಹೋದೆವು ನಂತರ ನನ್ನ ಮಗ ಶರಣಪ್ಪಾ ಇವನು ರೇವಣಸಿದ್ದಪ್ಪನ ಮೋಬೈಲನ ಕರೆ ಮಾಡಿದಾಗ ಸದರಿ ಮೋಬೈಲನ ಮೇಲೆ ರೇವಣಸಿದ್ದಪ್ಪಾ ಮಾತಾಡಿಸದ ಕಾರಣ ರೈಲ್ವೆ ಲೇವಲ ಕ್ರಾಸಿಂಗ್ ದಾಟಿ ರೋಡಿನ ಮೇಲೆ ಕೆಲಸವು ಜನರು ನನ್ನ ಮಗ ಎತ್ತುಗಳನ್ನು ಹೊಡೆದುಕೊಂಡು ಹೋಗಿದ್ದು ನೋಡಿದ್ದು ಇತ್ತು ಅದೇ ಅಂದಾಜಿನ ಮೇಲೆ ಸುತ್ತ ಮುತ್ತಲಿನ ಹೊಲಗಳಲ್ಲಿ ಹುಡುಕಾಡಲಾಗಿ ನನ್ನ ಹೆಂಡತಿ ಜರಣಮ್ಮಾ ಇವಳು ನರಸಪ್ಪಾ ಚಿಂತಪಳ್ಳಿ ಇವರ ಹೊಲದ ಬದುವಿಗೆ ಬಿದುದ್ದನ್ನು ನೋಡಿ ನನ್ನ ಮಗ ಶರಣಪ್ಪಾ ಇವನಿಗೆ ಚೀರಿ ಕರೆದಾಗ ನನ್ನ ಮಗ ನಾನು ಕೂಡಿ ಹೋಗಿ ನೋಡಲಾಗಿ ನನ್ನ ಮಗ ರೇವಣಸಿದ್ದಪ್ಪಾ ಇವನು ಬೋರಳಾಗಿ ಬಿದ್ದಿದ್ದು ಎರಡು ಕಿವಿಯಿಂದ ರಕ್ತ ಬರುತ್ತಿದ್ದು ಮತ್ತು ಮತ್ತು ಎದೆಯ ಮೇಲೆ ಸುಟ್ಟಂತೆ ಕಂಡು ಬರುತ್ತಿದ್ದು ಕಾರಣ ನನ್ನ ಮಗನಿಗೆ ಮಧ್ಯಾಹ್ನ 3 ಘಂಟೆ ವೇಳೆಗೆ ಆಗಿರುವ ಮಳೆಯಲ್ಲಿ ಆಕಸ್ಮಿಕವಾಗಿ ಸಿಡಿಲು ಬಡಿದು ಸತ್ತಿರಬಹುದು ಕಾರಣ ನನ್ನ ಮಗನ ಸಾವಿನ ಕಾರಣ ಪತ್ತೆ ಮಾಡಿ ಸೂಕ್ತ ಪರಿಹಾರ ಕುರಿತು ಕ್ರಮ ಜರುಗಿಸಬೇಕು ಅಂತಾ ವೆಗೈರೆ ಫಿರ್ಯಾದಿ ಹೇಳಿಕೆಯ ಸಾರಾಂಶದ ಮೇಲಿಂದ ಕುರಕುಂಟಾ ಪೊಲೀಸ ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.