POLICE BHAVAN KALABURAGI

POLICE BHAVAN KALABURAGI

15 February 2018

KALABURAGI DISTRICT REPORTED CRIMES

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ  :
ಅಫಜಲಪೂರ ಠಾಣೆ : ದಿನಾಂಕ 14-02-2018 ರಂದು  ಸೋನ್ನ  ಗ್ರಾಮದ ಬೀಮಾ ನದಿಯಲ್ಲಿ ಟ್ರಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬಿ ಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಃಆಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸೊನ್ನ ಗ್ರಾಮದ ಹೊಸ ಬಡಾವಣೆ ಹತ್ತಿರ ಇದ್ದಾಗ  ನಮ್ಮ ಎದುರಿನಿಂದ ಟ್ಯಾಕ್ಟರಗಳು ಬರುತ್ತಿದ್ದರು, ಸದರಿ ಟ್ರಾಕ್ಟರ ಚಾಲಕರು ನಮ್ಮ ಪೊಲೀಸ್ ಜೀಪ ನೋಡಿ ತಮ್ಮ ಟ್ರಾಕ್ಟರಗಳನ್ನು  ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದರು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರಗಳ ಹತ್ತಿರ ಹೋಗಿ ನೋಡಲಾಗಿ ಒಟ್ಟು ಐದು ಟ್ರಾಕ್ಟರಗಳಿದ್ದು   ಚೆಕ್ ಮಾಡಿ ನೋಡಲು ಎರಡು ಟ್ಯಾಕ್ಟರ ಟ್ರೈಲಿಗಳಲ್ಲಿ ಮರಳು ತುಂಬಿದ್ದು ಇದ್ದು ಮೂರು ಖಾಲಿ ಟ್ರ್ಯಾಕ್ಟರಗಳಿದ್ದು ಅವುಗಳ ನಂಬರ 1)ಅರ್ಜುನ ಮಹೇಂದ್ರ ಕಂಪನಿಯ ಟ್ರಾಕ್ಟರ ನಂಬರ ಕೆಎ-32 ಟಿಎ-5946 2) ಅರ್ಜುನ ಮಹೇಂದ್ರ ಕಂಪನಿಯ ಟ್ರಾಕ್ಟರ ಇಂಜಿನ ನಂ JU5429 DB 3) ಅರ್ಜುನ ಮಹೇಂದ್ರ ಕಂಪನಿಯ ಟ್ರಾಕ್ಟರ ಇಂಜಿನ ನಂ RJCU2448 ನೇದ್ದರ ಟ್ರೈಲಿಯಲ್ಲಿ ಮರಳು ತುಂಬಿದ್ದು 4) ಅರ್ಜುನ ಮಹೇಂದ್ರ ಕಂಪನಿಯ ಟ್ರಾಕ್ಟರ ಮಾಡೇಲ್ ನಂ NAPU638 D9 5) ಅರ್ಜುನ ಮಹೇಂದ್ರ ಕಂಪನಿಯ ಟ್ರಾಕ್ಟರ ಮಾಡೇಲ್ ನಂ NJCU3835 CB ನೇದ್ದರ ಟ್ರೈಲಿಯಲ್ಲಿ ಮರಳು ತುಂಬಿದ್ದು ರೀತಿ ಇರುತ್ತವೆ. ಸದರಿ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 3,600/- ರೂ ಆಗಬಹುದು. ನಂತರ ಏರಡು ಟ್ರ್ಯಾಕ್ಟರ ಟ್ರೈಲಿಗಳಲ್ಲಿ ಕಳ್ಳತನದಿಂದ ಅಕ್ರಮವಾಗಿ ಮರಳು ತುಂಬಿದ ಹಾಗು ಮೂರು ಖಾಲಿ ಟ್ರ್ಯಾಕ್ಟರಗಳನ್ನು ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 12-02-2018 ರಂದು ಮದ್ಯಾಹ್ನ ನನ್ನ ಮಗ ಪ್ರಕಾಶನು ತನ್ನ ಮಗಳಾದ ಕಾವೇರಿ ಮಗಳಿಗೆ ಮೈಯಲ್ಲಿ ಹುಷಾರ ಇರದ ಕಾರಣ ಚಿಕಿತ್ಸೆಗಾಗಿ ನಮ್ಮ ಮೋಟಾರ್ ಸೈಕಲ್ ನಂಬರ ಕೆಎ-42 -781 ನೇದ್ದರ ಮೇಲೆ ಕರೆದುಕೊಂಡು ಅಫಜಲಪೂರಕ್ಕೆ ಹೋಗುತ್ತೇನೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾನೆ ಮದ್ಯಾಹ್ನ 4.00 ಗಂಟೆ ಸುಮಾರಿಗೆ ನಮ್ಮ ಸಂಭಂದಿಕನಾದ ಅಂಬಣ್ಣ ತಂದೆ ಪುಂಡಲಿಕ ನಾವಿ ಎಂಬಾತನು ಪೋನ ಮಾಡಿ ತಿಳಿಸಿದ್ದೆನೆಂದರೆ ಅಫಜಲಪೂರ ದೇವಣಗಾಂವ ರೋಡಿನ ಮೇಲೆ  ಸೊನ್ನ ಕ್ರಾಸ ದಾಟಿ ಇಟ್ಟಂಗಿ ಬಟ್ಟಿ ಹತ್ತಿರ ಪ್ರಕಾಶನ ಮೋಟಾರ ಸೈಕಲ್ ನಂಬರ ಕೆಎ-42 -781 ನೇದ್ದಕ್ಕೆ ಮತ್ತು ಎದುರುಗಡೆಯಿಂದ ಬರುತಿದ್ದ ಮೋಟಾರ್ ಸೈಕಲ್ ನಂ ಎಮ್ ಹೆಚ್ 12 ಎಸ್-7763 ನೆದ್ದಕ್ಕೆ ಮದ್ಯಾಹ್ನ 3.30 ಗಂಟೆ ಸುಮಾರಿಗೆ ಮುಖಾಮುಖಿ ಡಿಕ್ಕಿ ಹೊಡೆದು ಅಫಘಾತ ಸಂಬವಿಸಿರುತ್ತದೆ ಸದರಿ ಘಟನೆಯಲ್ಲಿ ಪ್ರಕಾಶನಿಗೆ ತಲೆಯ ಬಲಭಾಗಕ್ಕೆ, ಮುಖಕ್ಕೆ, ಭುಜಕ್ಕೆ  ಭಾರಿ ರಕ್ತಗಾಯ ಮತ್ತು ಒಳಪೆಟ್ಟುಗಳು ಸಂಬವಿಸಿರುತ್ತವೆ ಕಾವೇರಿಗೆ ಮುಖಕ್ಕೆ ರಕ್ತಗಾಯವಾಗಿ ಮೈಕೈಗೆ ತರಚಿದ ಗಾಯಗಳು ಆಗಿರುತ್ತವೆ ಮೋಟಾರ್ ಸೈಕಲ್ ನಂ ಎಮ್ ಹೆಚ್ 12 ಎಸ್-7763 ನೆದ್ದರ ಮೇಲೆ ಒಬ್ಬ ಪುರುಷ ಮತ್ತು ಒಬ್ಬಳು ಮಹಿಳೆ ಹಾಗು ಒಂದು ಚಿಕ್ಕ ಹೆಣ್ಣು ಮಗು ಇದ್ದು ಅವರೇಲ್ಲರಿಗು ಭಾರಿ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿದ್ದರಿಂದ ಗಾಯ ಹೊಂದಿದವರೇಲ್ಲರಿಗೂ ನಾನು ಮತ್ತು ನನ್ನ ಗೆಳೆಯ ವಿಠ್ಠಲ ತಂದೆ ಫಕೀರಪ್ಪ ತೇಗೂರ ಇಬ್ಬರು 108 ವಾಹನದಲ್ಲಿ ಚಿಕಿತ್ಸೆಗಾಗಿ ಅಫಜಲಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತೇವೆ ಅಫಜಲಪೂರ ಸರಕಾರಿ ಆಸ್ಪತ್ರೆಯ ವೈದ್ಯರು ಪ್ರಕಾಶನಿಗು ಮತ್ತು ಕಾವೇರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ 108 ವಾಹನದಲ್ಲಿ ಕಲಬುರಗಿಗೆ ಕರೆದುಕೊಂಡು ಹೋಗುತ್ತಿದ್ದೆವೆ ಅಂತ ತಿಳಿಸಿದನು. ನಂತರ ಸಾಯಂಕಾಲ 5.35 ಗಂಟೆ ಸುಮಾರಿಗೆ ಅಂಬಣ್ಣನು ಮತ್ತೆ ಪೊನ ಮಾಡಿ ತಿಳಿಸಿದ್ದೆನೆಂದರೆ ಸಾಯಂಕಾಲ 5.30 ಗಂಟೆಯ ಸುಮಾರಿಗೆ ಕಲಬುರಗಿಯ ಗಂಗಾ ಆಸ್ಪತ್ರೆಗೆ ತಲುಪುತಿದ್ದಂತೆ ಪ್ರಕಾಶನು ಮೃತಪಟ್ಟಿದ್ದು ಕಾವೇರಿಗೆ ಚಿಕಿತ್ಸೆಗಾಗಿ ಗಂಗಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಪ್ರಕಾಶನ ಶವವನ್ನು ಅಫಜಲಪೂರದ ಸರಕಾರಿ ಆಸ್ಪತ್ರೆಗೆ ತಗೆದುಕೊಂಡು ಬರುತಿದ್ದೇವೆ ಅಂತ ತಿಳಿಸಿದನು. ನಂತರ ನಾನು ಮತ್ತು ನಮ್ಮ ಗ್ರಾಮದ ವೀರುಪಾಕ್ಷಿ ಗಂಗನಳ್ಳಿ, ಸುಭಾಷ ಭುಸನೂರ, ಅಂಬಣ್ಣ ನಾವಿ ಮತ್ತಿತರರು ಸಾಯಂಕಾಲ 7.00 ಸುಮಾರಿಗೆ ಅಫಜಲಪೂರ ಸರಕಾರಿ ಆಸ್ಪತ್ರೆಗೆ ಬಂದು ಪ್ರಕಾಶನ ಶವವನ್ನು ಮತ್ತು ಆತನಿಗೆ ಆಗಿರುವ ಗಾಯಗಳನ್ನು ನೋಡಿರುತ್ತೇವೆ. ನನ್ನ ಮಗ ಪ್ರಕಾಶನ ಮೋಟಾರ್ ಸೈಕಲಗೆ ಎದುರಿನಿಂದ ಬಂದು ಡಿಕ್ಕಿ ಹೊಡೆದ ಮೋಟಾರ ಸೈಕಲನ ಸವಾರನ ಹೆಸರು ಮತ್ತು ಆತನ ಹಿಂದಿನ ಶಿಟನಲ್ಲಿ ಕುಳಿತಿದ್ದವಳ ಹೆಸರು ಕೇಳಿ ತಿಳಿದುಕೊಂಡಿದ್ದು ಸಿದ್ದರೂಡ ಸಾ||ಪಡಸಲಗಾ ಮತ್ತು  ಹೆಣ್ಣುಮಗಳ ಹೆಸರು ಸಿದ್ದರೂಡನ ಹೆಂಡತಿ ಗೀತಾ ಅಂತ ಗೊತ್ತಾಗಿರುತ್ತದೆ. ಅಂತಾ ಶ್ರೀ ಚಂದ್ರಕಾಂತ ತಂದೆ ಶರಣಪ್ಪ ನಾವಿ ಸಾ||ದೇವಣಗಾಂವ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.