POLICE BHAVAN KALABURAGI

POLICE BHAVAN KALABURAGI

15 January 2013

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಸಿದ್ದಲಿಂಗಪ್ಪ ಭೀಮಾಶಂಕರ ಅವಟಿವಯ : 36 ವರ್ಷಉ: ಶಿಕ್ಷಕ ಸಾ:ಹೊಡ್ಡಿಮನಿ  ಬಾಳೆ ಲೇಔಟ ಗುಲಬರ್ಗಾ ರವರು ನಾನು ದಿನಾಂಕ:13-01-2013 ರಂದು ಬೆಳಗ್ಗೆ  7-30 ಗಂಟೆಯ ಸುಮಾರಿಗೆ ಮನೆಗೆ ಬೀಗ ಹಾಕಿ ಹೆಂಡತಿ ಮಕ್ಕಳೊಂದಿಗೆ ಮಹಾರಾಷ್ಟ್ರದ ರಾಜ್ಯದ ಸೋಲ್ಲಾಪೂರದ ಜಾತ್ರೆಗೆ ಹೋಗಿದ್ದು ದಿನಾಂಕ:15-01-2013 ರಂದು ಬೆಳಗ್ಗೆ  7-30 ಗಂಟೆ ಸುಮಾರಿಗೆ ಮರಳಿ ಮನೆಗೆ ಬಂದು ನೋಡಲು ಮನೆಯ ಬಾಗಿಲು ಕೊಂಡಿ ಮುರಿದಿತ್ತು. ಅಲಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು 46 ಗ್ರಾಂ ನೇದ್ದು ಅ||ಕಿ||1,25,000/-  ಹಾಗೂ ಬೆಳ್ಳಿಯ ಆಭರಣಗಳು 66 ತೊಲೆ ಅ||ಕಿ|| 40,000 /- ಮತ್ತು ಒಂದು ಪ್ಯೂಜಿ ಕಂಪನಿಯ ಕ್ಯಾಮರಾ ಅ||ಕಿ|| 6000/- ರೂ.  ಹೀಗೆ ಒಟ್ಟು 1,71,000 /- ರೂ. ಬೆಲೆಬಾಳುವ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಮತ್ತು ಒಂದು ಕ್ಯಾಮರಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:06/2013 ಕಲಂ, 454, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ:ದಿನಾಂಕಃ 15/01/2013 ರಂದು ಮದ್ಯಾಹ್ನ 3-15 ಪಿ.ಎಂ. ಸುಮಾರಿಗೆ ಮಾನ್ಯ ಹೆಚ್. ತಿಮ್ಮಪ್ಪಾ ಡಿ.ಎಸ್.ಪಿ ಗ್ರಾಮಾಂತ ಉಪ ವಿಭಾಗ ಗುಲಬರ್ಗಾ ಹಾಗು ಮಾನ್ಯ ಎಸ್. ಅಸ್ಲಾಂ ಬಾಷ ಸಿ.ಪಿ.ಐ ಎಂ.ಬಿ ನಗರ ವೃತ್ತ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ, ಜಿ.ಡಿ.ಎ ಕಾಲೋನಿಯಲ್ಲಿರುವ 1 ನೇ ಗಾರ್ಡನದಲ್ಲಿ ಸಾರ್ವಜನಿಕರ ಸ್ಥಳದಲ್ಲಿ ಅಂದರ ಬಾಹರ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ  ನಾಗಶೆಟ್ಟಿ ತಂದೆ ಭೀಮರೆಡ್ಡಿ ಹಳ್ಳಿ ವಯಃ 45 ವರ್ಷ ಉಃ ಆಟೋ ಚಾಲಕ ಸಾಃ ಸ್ವರಸ್ವತಿಪೂರ ಕಪನೂರ ರೋಡ್ ಗುಲಬರ್ಗಾ,ಸೋಮಣ್ಣ ತಂದೆ ಬಸವಣ್ಣ ಮೇತ್ರೆ ವಯಃ 29 ವರ್ಷ ಉಃ ಮೆಕ್ಯಾನಿಕ್ ಸಾಃ ಕಮಲವಾಡಿ ಸ್ಟೇಷನ ಬಜಾರ ಏರಿಯಾ ಗುಲಬರ್ಗಾ, ಶಂಬುಲಿಂಗ ತಂದೆ ಮಲ್ಲಯ್ಯ ಮಠಪತಿ ವಯಃ 50 ವರ್ಷ ಉಃ ಒಕ್ಕಲತನ ಸಾಃ ಕುಮಸಿ ತಾಃಜಿಃ ಗುಲಬರ್ಗಾ, ಸುನೀಲ ಕುಮಾರ ತಂದೆ ರೇವಣಸಿದ್ದಯ್ಯ ಮಠಪತಿ ವಯಃ 32 ವರ್ಷ ಉಃ ಖಾಸಗಿ ಕೆಲಸ ಸಾಃ ಜಿ.ಡಿ.ಎ ಕಾಲೋನಿ ಗುಲಬರ್ಗಾ ಇವರುಗಳನ್ನು ವಶಕ್ಕೆ ತೆಗೆದುಕೊಂಡು ನಗದು ಹಣ 15,150/- ರೂ. ಹಾಗು ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಸರ್ಕಾರಿ ತರ್ಪೆಯಾಗಿ ಶ್ರೀ ಶ್ರೀಮಂತ ಇಲ್ಲಾಳ ಪಿ.ಎಸ.ಐ ಎಂ.ಬಿ.ನಗರ ರವರು ಠಾಣೆ ಗುನ್ನೆ ನಂ: 06/2013 ಕಲಂ 87 ಕೆ.ಪಿ. ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ. 

GULBARGA DISTRICT REPORTED CRIME


ಅಪಘಾತ ಪ್ರಕರಣ:
ಮಹಾಗಾಂವ ಪೊಲೀಸ್ ಠಾಣೆ:ಶ್ರೀ ಯಾಕುಬಸಾಬ ತಂದೆ ಇಸ್ಮಾಯಿಲ್ ಬೇಗ ಮಿರ್ಜಾ ಸಾ| ಕಾಶಿಬುಗ್ಗಾ ಸರಸಂಪೇಠ ರೋಡ ವಾರಂಗಲ್ ಆಂದ್ರ ಪ್ರದೇಶ ರವರು ನಾನು ಹಾಗು  ಮೃತ ಶೇಖ ಮಜೀದ ತಂದೆ ಅಬ್ದುಲ್ಲಾಶೇಖ ಸಾ|| ಲಾಲ ಬಹದ್ದೂರ ನಗರ ಸಾ||ವಾರಂಗಲ ಇಬ್ಬರೂ ಎಲಕ್ಟ್ರಿಶಿಯನ ಕೆಲಸ ಮಾಡುವ ಸಲುವಾಗಿ ಕೆ,ವೆಂಕಟರಾವ ಎಂಬುವ ಗುತ್ತೇದಾರನ ಪರಿಚಯದಿಂದ ವಾರಂಗಲದಿಂದ ದಿನಾಂಕ|| 11/01/2013 ರಂದು ಮಹಾಗಾಂವ ಕ್ರಾಸನಲ್ಲಿ ಹೋಸದಾಗಿ ನಿರ್ಮಾಣವಾಗುತ್ತಿದ್ದ  ಐ.ಎನ.ಜಿ ವೈಶ್ಯಾ ಬ್ಯಾಂಕನಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುವ ಕುರಿತು  ಬಂದ್ದಿದ್ದು, ನಿನ್ನೆ ರಾತ್ರಿ ಸುಮಾರು 8.45 ಗಂಟೆಗೆ ಮೃತ ಶೇಖಮಜೀದ ಇತನು ಊಟ ಮಾಡುವ ಕುರಿತು ಹೋಗುತ್ತಿರುವಾಗ ಒಬ್ಬ ತುಫಾನ ಕ್ರೂಸರ ಚಾಲಕನು ತನ್ನ ವಾಹನವನ್ನು ಕಮಲಾಪೂರ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಎ-ಒನ್ ಬ್ರಾಂಡಿ ಶಾಪ ಎದುರುಗಡೆ ಡಿಕ್ಕಿ ಹೋಡೆದನು. ಡಿಕ್ಕಿ ಪಡಿಸಿದ ರಭಸಕ್ಕೆ ಆತನಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು ಕ್ರೂಸರ ಚಾಲಕ ವಾಹನ ಸಮೇತಾ ಓಡಿ ಹೋದನು. ವಾಹನ ನಂಬರ ಗೊತ್ತಾಗಿರುವುದಿಲ್ಲಾ.108 ಅಂಬುಲೆನ್ಸದಲ್ಲಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆ ಮಾಡಿದಾಗ ಉಪಚಾರ ಫಲಕಾರಿಯಾಗದೇ ರಾತ್ರಿ 10.50 ಗಂಟೆಗೆ ಮೃತ ಪಟ್ಟನು. ಅಪಘಾತ ಪಡಿಸಿ ಓಡಿ ಹೋದ ಕ್ರೂಸರ ವಾಹನ ಮತ್ತು ಅದರ ಚಾಲಕನ ಪತ್ತೆ ಹಚ್ಚಿ ಅತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿಕೆ ಸಾರಂಶದ ಮೇಲಿಂದ  ಠಾಣೆ  ಗುನ್ನೆ ನಂ: 05/2013 ಕಲಂ, 279, 304 (ಎ) ಐ.ಪಿ.ಸಿ ಸಂಗಡ 187 ಐ.ಎಮ್.ವಿ. ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.