POLICE BHAVAN KALABURAGI

POLICE BHAVAN KALABURAGI

31 August 2014

Gulbarga District Reported Crimes

ಅಫಘಾತ ಪ್ರಕರಣ :
ಸಂಚಾರಿ ಠಾಣೆ : ಶ್ರೀ ಶಾಂತಯ್ಯಾ ತಂದೆ ರಾಮಯ್ಯಾ ಕಲಾಲ  ಸಾಃ. ವಿಜಯ ನಗರ ಕಾಲೋನಿ ಗುಲಬರ್ಗಾ ರವರು ತಮ್ಮ  ಮೋಟಾರ ಸೈಕಲ ನಂ. ಕೆ.ಎ 32 ಎಸ್ 1882 ನೇದ್ದನ್ನು ವಿಜಯ ನಗರ ಕಾಲೂನಿ ಕ್ರಾಸ್ ಹತ್ತಿರ ಇರುವ ಎಸ್.ಬಿ.ಐ ಬ್ಯಾಂಕ ಹತ್ತಿರ ರೋಡಿನ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಸ್ಕಿಡ್ ಆಗಿ ತನ್ನಿಂದ ತಾನೆ ಬ್ಯಾಲನ್ಸ ತಪ್ಪಿ ಬಿದ್ದು ತಲೆಗೆ ರಕ್ತಗಾಯ ಮಾಡಿಕೊಂಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಸರಸಂಬಾ ಗ್ರಾಮದ ಸೀಮಾಂತರದಲ್ಲಿ ಸರ್ವೆ ನಂ:196/3 ನೇದ್ದರಲ್ಲಿ ನಿರ್ಮಿಸಿದ ಏರಟೇಲ್ ಟಾವರ RPSAR-01 IN-1096310 ಇದಕ್ಕೆ ಅಳವಡಿಸಿದ ಬ್ಯಾಟ್ರಿ ಬ್ಯಾಂಕಿನ 24 ಬ್ಯಾಟ್ರಿಗಳು ಅ.ಕೀ.24,000=00 ಸಾವಿರದ್ದು ಯಾರೋ ಅಪರಿಚಿತ ಕಳ್ಳರು ದಿನಾಂಕ:22-07-2014 ರಂದು ರಾತ್ರಿ 10;00 ಪಿ.ಎಂ.ದಿಂದ ದಿ:23/07/2014 ರಂದು 05;30 ಎ.ಎಂ ಗಂಟೆಯ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಶ್ರೀ. ಮಲ್ಲಿಕಾರ್ಜುನ. ಎಸ್. ಕಲಬುರ್ಗಿ ಸಾ: ಕಾವೇರಿ ನಗರ ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.